Tag: Retention

  • 2025ರ ಐಪಿಎಲ್‌ನಲ್ಲೂ ಮಹಿ ಆಡೋದು ಫಿಕ್ಸ್‌ – ಅ.31ಕ್ಕೆ ರಿಟೇನ್‌ ಆಟಗಾರರ ಭವಿಷ್ಯ!

    2025ರ ಐಪಿಎಲ್‌ನಲ್ಲೂ ಮಹಿ ಆಡೋದು ಫಿಕ್ಸ್‌ – ಅ.31ಕ್ಕೆ ರಿಟೇನ್‌ ಆಟಗಾರರ ಭವಿಷ್ಯ!

    ಮುಂಬೈ: 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೆಗಾ ಹರಾಜಿಗೂ (IPL Mega Auction 2025) ಮುನ್ನವೇ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಲೆಜೆಂಡ್‌ ಕ್ರಿಕೆಟಿಗ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಜೀವಾಳ ಎಂ.ಎಸ್‌ ಧೋನಿ (MS Dhoni) 2025ರ ಐಪಿಎಲ್‌ ಆವೃತ್ತಿಯಲ್ಲೂ ಕಣಕ್ಕಿಳಿಯೋದು ಫಿಕ್ಸ್‌ ಆಗಿದೆ.

    ಈಗಾಗಲೇ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ಫ್ರಾಂಚೈಸಿ ಮಾಲೀಕರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. 2025ರ ಐಪಿಎಲ್‌ನಲ್ಲೂ ಮಹಿ ಆಡುತ್ತಾರೆ ಎಂದು ಫ್ರಾಂಚೈಸಿ ಮಾಲೀಕ ಎನ್‌. ಶ್ರೀನಿವಾಸನ್‌ ತಿಳಿಸಿರುವುದಾಗಿ ವರದಿಯಾಗಿದೆ. ಆದ್ರೆ ಮಹಿ ತಂಡದಲ್ಲಿ ಮೊದಲ ರಿಟೇನ್‌ ಆಟಗಾರನಾಗಿ ಉಳಿಯುತ್ತಾರಾ? ಅಥವಾ ಅನ್‌ಕ್ಯಾಪ್ಡ್‌ ಪ್ಲೇಯರ್‌ (ಹೊಸಬರು) ಆಗಿ ತಂಡದಲ್ಲಿರುತ್ತಾರಾ? ಎಂಬುದು ಪಟ್ಟಿ ಬಿಡುಗಡೆ ಮಾಡಿದ ಬಳಿಕ ತಿಳಿಯಲಿದೆ. ಇದನ್ನೂ ಓದಿ: IPLನಲ್ಲಿ ಡೆಲ್ಲಿ ಟೀಂ ಬಿಟ್ಟು ಬೇರೆ ತಂಡದ ಕ್ಯಾಪ್ಟನ್ ಆಗ್ತಾರಾ ರಿಷಬ್ ಪಂತ್?

    ಅ.31ಕ್ಕೆ ಆಟಗಾರರ ಭವಿಷ್ಯ:
    2025 ಐಪಿಎಲ್‌ ಮೆಗಾ ಹರಾಜು ಹಿನ್ನೆಲೆಯಲ್ಲಿ ಇದೇ ಅಕ್ಟೋಬರ್‌ 31ರಂದು ಸಂಜೆ 4:30ರ ವೇಳೆಗೆ ಎಲ್ಲಾ ಫ್ರಾಂಚೈಸಿಗಳು ತಂಡದ ರಿಟೇನ್‌ ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಲಿವೆ. ಜಿಯೋ ಸಿನಿಮಾದಲ್ಲಿ (Jio Cinema) ಇದರ ನೇರ ಪ್ರಸಾರ ನಡೆಯಲಿದೆ. ಇದನ್ನೂ ಓದಿ: ಒಂದೇ ದಿನ 14 ವಿಕೆಟ್‌ ಉಡೀಸ್‌ – ಭಾರತದ ವಿರುದ್ಧ ಕಿವೀಸ್‌ಗೆ 301 ರನ್‌ಗಳ ಭರ್ಜರಿ ಮುನ್ನಡೆ

    ಮಹಿ ನಂ.1 ರಿಟೇನ್‌ ಆಟಗಾರ?
    ಮೂಲಗಳ ಪ್ರಕಾರ, ಮಹಿ ಮುಂದಿನ ಆವೃತ್ತಿಯಲ್ಲಿ ಚೆನ್ನೈ ತಂಡದಲ್ಲಿ ಆಡಲಿದ್ದು, ಫ್ರಾಂಚೈಸಿ ಅವರನ್ನು ನಂ.1 ರಿಟೇನರ್‌ ಮಾಡಿಕೊಂಡಿದೆ. ಇನ್ನುಳಿದಂತೆ ನಾಯಕ ಋತುರಾಜ್‌ ಗಾಯಕ್ವಾಡ್‌ ನಂ.2, ಆಲ್‌ರೌಂಡರ್‌ ರವೀಂದ್ರ ಜಡೇಜಾ ನಂ.3 ಆಟಗಾರನಾಗಿ ತಂಡದಲ್ಲಿ ಉಳಿಯಲಿದ್ದಾರೆ. ಇದರೊಂದಿಗೆ ಶಿವಂ ದುಬೆ, ಡೆವೊನ್ ಕಾನ್ವೆ, ಮತೀಶ ಪತಿರಣ ಮತ್ತು ರಮೀಜ್‌ ರಿಜ್ವಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದ್ರೆ ಕೆಲವು ವರದಿಗಳು ಧೋನಿ ಅನ್‌ಕ್ಯಾಪ್ಡ್‌ ಪ್ಲೇಯರ್‌ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಅ.31ರಂದು ಫ್ರಾಂಚೈಸಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿ ಬಿಡುಗಡೆಗೊಳಿಸಿದ ಬಳಿಕ ಯಾರ ಭವಿಷ್ಯ ಹೇಗೆ? ಎಂಬುದು ಗೊತ್ತಾಗಲಿದೆ. ಇದನ್ನೂ ಓದಿ: ಜಾರ್ಖಂಡ್ ವಿಧಾನಸಭಾ ಚುನಾವಣೆ ರಾಯಭಾರಿಯಾಗಿ ಲೆಜೆಂಡ್ ಕ್ರಿಕೆಟಿಗ ಎಂ.ಎಸ್ ಧೋನಿ ನೇಮಕ

    ರಿಟೇನ್‌ ಆಟಗಾರರಿಗೆ ಮೊತ್ತ ಎಷ್ಟು?
    ಈ ಬಾರಿ ಐಪಿಎಲ್‌ನಲ್ಲಿ ಮಹತ್ವದ ಬದಲಾವಣೆ ತಂದಿರುವ ಬಿಸಿಸಿಐ 5 ಆಟಗಾರರನ್ನು ರಿಟೇನ್‌ ಮಾಡಿಕೊಳ್ಳಲು ಹಾಗೂ 1 ಆರ್‌ಟಿಎಂ ಕಾರ್ಡ್‌ (RTM Card) ಬಳಕೆಗೆ ಅನುಮತಿ ನೀಡಿದೆ. ಈ ಪೈಕಿ ಇಬ್ಬರು ಆಟಗಾರರ (ಮೊದಲು ಮತ್ತು 4ನೇ ರಿಟೇನ್‌ ಆಟಗಾರ) ತಲಾ 18 ಕೋಟಿ ರೂ. ಪಡೆಯಲಿದ್ದಾರೆ. 2 ಮತ್ತು 5ನೇ ಆಟಗಾರ ತಲಾ 14 ಕೋಟಿ ರೂ. ಹಾಗೂ 3ನೇ ರಿಟೇನ್‌ ಆಟಗಾರ 11 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಆದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ 5 ವರ್ಷ ಪೂರೈಸಿದ ಆಟಗಾರರನ್ನು ಅನ್‌ಕ್ಯಾಪ್ಡ್‌ ಪ್ಲೇಯರ್‌ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಅವರು ನಿಯಮದಂತೆ 4 ಕೋಟಿ ರೂ. ಮಾತ್ರವೇ ಸಂಭಾವನೆ ಪಡೆಯಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.

  • IPL 2025: ಮೆಗಾ ಹರಾಜು ಪ್ರಕ್ರಿಯೆ ಶುರು; ರಿಟೇನ್‌ ಆಟಗಾರರ ವಿಚಾರದಲ್ಲಿ ಫ್ರಾಂಚೈಸಿಗಳ ನಡುವೆ ಭಿನ್ನಾಭಿಪ್ರಾಯ!

    IPL 2025: ಮೆಗಾ ಹರಾಜು ಪ್ರಕ್ರಿಯೆ ಶುರು; ರಿಟೇನ್‌ ಆಟಗಾರರ ವಿಚಾರದಲ್ಲಿ ಫ್ರಾಂಚೈಸಿಗಳ ನಡುವೆ ಭಿನ್ನಾಭಿಪ್ರಾಯ!

    – ಹೆಚ್ಚು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶಕ್ಕೆ ಬಿಸಿಸಿಐಗೆ ಮನವಿ

    ಬೆಂಗಳೂರು: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ, ಬಿಸಿಸಿಐ ಆಟಗಾರರನ್ನು ಉಳಿಸಿಕೊಳ್ಳುವ ನಿಯಮವನ್ನು ಪ್ರಕಟಿಸಿಲ್ಲ. ಆದಾಗ್ಯೂ, ಈಗಾಗಲೇ ಉಳಿಸಿಕೊಳ್ಳುವ (IPL Retentions) ಆಟಗಾರರ ನೀತಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಿದೆ. ಜುಲೈ ತಿಂಗಳ ಕೊನೆಯಲ್ಲೇ ಫ್ರಾಂಚೈಸಿ ಮಾಲೀಕರ ಸಭೆಯಲ್ಲಿ ಈ ವಿಷಯದ ಬಗ್ಗೆ ಬಿಸಿಸಿಐ (BCCI) ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭೀಕರ ಚಂಡಮಾರುತ – ಬಾರ್ಬಡೋಸ್‌ನಲ್ಲೇ ಬೀಡುಬಿಟ್ಟ ಟೀಂ ಇಂಡಿಯಾ!

    ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿಗಳು (IPL Franchises) ಮುಂದಿನ 3 ಋತುಗಳಿಗೆ ತಂಡದಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ಸಂಖ್ಯೆ ಹೆಚ್ಚಿಸುವಂತೆ ಬಿಸಿಸಿಐಗೆ ವಿನಂತಿಸಿವೆ. ಮುಂಬರುವ ಐಪಿಎಲ್​ಗೆ ಮೆಗಾ ಹರಾಜು ನಡೆಯಲಿದ್ದು, ಫ್ರಾಂಚೈಸಿಗಳು ಹೆಚ್ಚಿನ ಆಟಗಾರರನ್ನು ಬಿಡುಗಡೆ ಮಾಡಬೇಕಾಗುತ್ತದೆ. 2022ರ ಮೆಗಾ ಹರಾಜಿನಲ್ಲಿ 8 ಫ್ರಾಂಚೈಸಿಗಳಿಗೆ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಕ್ಯಾಪ್ಡ್ ಅಥವಾ ಅನ್​ಕ್ಯಾಪ್ಡ್ ​ಸೇರಿದಂತೆ ಗರಿಷ್ಠ 3 ಭಾರತೀಯ ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳಿಗೆ ಅವಕಾಶ ನೀಡಲಾಗಿತ್ತು. ಎರಡಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳದಂತೆ ಷರತ್ತು ವಿಧಿಸಲಾಗಿತ್ತು. ಏಕೆಂದರೆ ಕಳೆದ ಮೆಗಾ ಹರಾಜಿನಲ್ಲಿ ಗುಜರಾತ್‌ ಟೈಟಾನ್ಸ್‌ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ಎಂಬ ಎರಡು ಹೊಸ ತಂಡಗಳ ಸೇರ್ಪಡೆಯಿಂದಾಗಿ ಬಿಸಿಸಿಐ ಆಟಗಾರರನ್ನು ಉಳಿಸಿಕೊಳ್ಳುವ ಸಂಖ್ಯೆ ಕಡಿಮೆ ಮಾಡಿತ್ತು. ಹರಾಜಿನ ಸಮಯದಲ್ಲಿ ರೈಟ್ ಟು ಮ್ಯಾಚ್ (RTM) ಕಾರ್ಡ್​​ಗಳ ಬಳಕೆಯ ಮೂಲಕ 5 ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಹೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡುವಂತೆ ಫ್ರಾಂಚೈಸಿಗಳು ಮನವಿ ಮಾಡಿರುವುದಾಗಿ ತಿಳಿದುಬಂದಿದೆ.

    ಫ್ರಾಂಚೈಸಿಗಳ ಮನವಿ ಏನು?
    ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಮೂವರು ಭಾರತೀಯ ಹಾಗೂ ಇಬ್ಬರು ವಿದೇಶಿ ಆಟಗಾರರನ್ನ ಉಳಿಸಿಕೊಳ್ಳಲು ಷರತ್ತು ವಿಧಿಸಿದೆ. ಆದ್ರೆ ಹೆಚ್ಚಿನ ಫ್ರಾಂಚೈಸಿಗಳು 5 ರಿಂದ 7 ಆಟಗಾರರು, ಕೆಲವರು 8 ಆಟಗಾರರನ್ನು ಉಳಿಸಿಕೊಳ್ಳಲು ವಿನಂತಿ ಮಾಡಿವೆ. ಅದೇ ಸಮಯದಲ್ಲಿ, ಕೆಲ ಫ್ರಾಂಚೈಸಿಗಳು ಉಳಿಸಿಕೊಳ್ಳುವ ನಿಯಮವೇ ಇರಬಾರದೆಂದು. ಕೆಲ ಫ್ರಾಂಚೈಸಿಗಳು ಆರ್​ಟಿಎಂ ಕಾರ್ಡ್‌ ಮಾತ್ರ ಹೊಂದಲು ವಿನಂತಿಸಿರುವುದಾಗಿ ಮೂಲಗಳು ತಿಳಿಸಿವೆ. ಫ್ರಾಂಚೈಸಿ ಮಾಲೀಕರೊಂದಿಗೆ ಮಾತನಾಡಿದ ಬಳಿಕ ಅಂತಿಮ ನಿರ್ಧಾರ ಬಿಸಿಸಿಐ ಪ್ರಕಟಿಸಲಿದೆ. ಜೊತೆಗೆ ಪ್ರಮುಖ ಆಟಗಾರರ ಆಕ್ಷೇಪದ ಹೊರತಾಗಿಯೂ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಉಳಿಸಿಕೊಳ್ಳಲು ಮುಂದಾಗಿದೆ ಎಂದೂ ತಿಳಿದುಬಂದಿದೆ. ಇದನ್ನೂ ಓದಿ: ಐಸಿಸಿ ಕನಸಿನ ತಂಡ ಪ್ರಕಟ – ಕೊಹ್ಲಿಗಿಲ್ಲ ಸ್ಥಾನ, ಪಟ್ಟಿಯಲ್ಲಿದ್ದಾರೆ 6 ಟೀಂ ಇಂಡಿಯಾ ಆಟಗಾರರು

    ಮೌಲ್ಯದ ಮಿತಿ ಹೆಚ್ಚಳಕ್ಕೆ ಮನವಿ:
    ಇನ್ನೂ ಪ್ರತಿ ಫ್ರಾಂಚೈಸಿಗೂ ಐಪಿಎಲ್‌ನಲ್ಲಿ 100 ಕೋಟಿ ರೂ. ಮಿತಿ ನಿಗದಿಪಡಿಸಲಾಗಿದೆ. ಇದರ ಮಿತಿಯನ್ನು 20 ಕೋಟಿ ರೂ. ಹೆಚ್ಚಿಸುವಂತೆ ಫ್ರಾಂಚೈಸಿಗಳು ಮನವಿ ಮಾಡಿದ್ದು, ಈ ಬಗ್ಗೆ ಸಮಾಲೋಚನೆ ನಡೆಸುವುದಾಗಿ ಐಪಿಎಲ್‌ ಮಂಡಳಿ ಸಿಇಒ ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಬಾರ್ಬಡೋಸ್‌ನಲ್ಲೇ ಸಿಲುಕಿದ ಟೀಂ ಇಂಡಿಯಾ – ಜಿಂಬಾಬ್ವೆ ಸರಣಿಗೆ ಸುದರ್ಶನ್‌, ರಾಣಾ, ಜಿತೇಶ್‌ ಆಯ್ಕೆ!