Tag: restriction

  • ಪ್ರಮೋದ್ ಮುತಾಲಿಕ್ ಶಿವಮೊಗ್ಗ ಪ್ರವೇಶಕ್ಕೆ ಒಂದು ತಿಂಗಳ ಕಾಲ ನಿರ್ಬಂಧ

    ಪ್ರಮೋದ್ ಮುತಾಲಿಕ್ ಶಿವಮೊಗ್ಗ ಪ್ರವೇಶಕ್ಕೆ ಒಂದು ತಿಂಗಳ ಕಾಲ ನಿರ್ಬಂಧ

    – ಶಿವಮೊಗ್ಗ ಪ್ರವೇಶಿಸದಂತೆ ಜಿಲ್ಲಾಡಳಿತದಿಂದ ನೋಟಿಸ್

    ಶಿವಮೊಗ್ಗ: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಬುಧವಾರ ಶಿವಮೊಗ್ಗದ (Shivamogga) ರಾಗಿಗುಡ್ಡ (Ragigudda) ಗಲಭೆಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಪ್ರಮೋದ್ ಮುತಾಲಿಕ್ ಅವರ ಭೇಟಿಗೆ ಜಿಲ್ಲಾಡಳಿತ ಅವಕಾಶ ನೀಡದೇ ನಿರ್ಬಂಧ ವಿಧಿಸಿದೆ.

    ಪೊಲೀಸ್ ಇಲಾಖೆಯ ಕೋರಿಕೆ ಮೇರೆಗೆ ಅಕ್ಟೋಬರ್ 17 ರಿಂದ 30 ದಿನಗಳ ಕಾಲ ಜಿಲ್ಲೆಗೆ ಭೇಟಿ ನೀಡದಂತೆ ಮುತಾಲಿಕ್‌ಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಆದೇಶಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಿಂದ ಒಂದು ಸಾವಿರ ಕೋಟಿ ಲಂಚ ಸಂಗ್ರಹ: ಎನ್.ರವಿಕುಮಾರ್

    ಅ.1 ರಂದು ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಹಾನಿಯಾದ ಮನೆಗಳಿಗೆ ಇಂದು ಮುತಾಲಿಕ್ ಭೇಟಿ ನೀಡಿ ಸಾಂತ್ವನ ಹೇಳುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೆ ಮಂಗಳೂರಿನಿಂದ ಶಿವಮೊಗ್ಗಕ್ಕೆ ಮಂಗಳವಾರ ರಾತ್ರಿ ಬಸ್‌ನಲ್ಲಿ ಬರುತ್ತಿದ್ದ ವೇಳೆ ತಡರಾತ್ರಿ 2 ಗಂಟೆಗೆ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಬಳಿ ಬಸ್ ತಡೆದ ಪೊಲೀಸರು, ಮುತಾಲಿಕ್ ಅವರನ್ನು ವಶಕ್ಕೆ ಪಡೆದು ನಿರ್ಬಂಧದ ಆದೇಶ ಪ್ರತಿ ನೀಡಿದರು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ, ನನ್ನ ನಡುವೆ ಏನೂ ಇಲ್ಲ: ಡಿಕೆಶಿ

    ಆ ನಂತರ ಪೊಲೀಸ್ ಬೆಂಗಾವಲು ವಾಹನದೊಂದಿಗೆ ಪ್ರತ್ಯೇಕ ಕಾರಿನಲ್ಲಿ ಪ್ರಮೋದ್ ಮುತಾಲಿಕ್ ಅವರನ್ನು ದಾವಣಗೆರೆಗೆ ಪೊಲೀಸರು ಕಳುಹಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ: ITದಾಳಿ ಜಟಾಪಟಿ; ಕಲೆಕ್ಷನ್ ಟಾಸ್ಕ್ ಸ್ಲೇಟ್ ಹಿಡಿದ ಸಚಿವರ ಪೋಸ್ಟರ್ ಹಾಕಿ ಬಿಜೆಪಿ ಟಾಂಗ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಕ್ಕರೆ ರಫ್ತಿನ ಮೇಲಿನ ನಿರ್ಬಂಧ ಇನ್ನೊಂದು ವರ್ಷ ವಿಸ್ತರಣೆ

    ಸಕ್ಕರೆ ರಫ್ತಿನ ಮೇಲಿನ ನಿರ್ಬಂಧ ಇನ್ನೊಂದು ವರ್ಷ ವಿಸ್ತರಣೆ

    ನವದೆಹಲಿ: ಭಾರತವು (India) ಸಕ್ಕರೆ (Sugar) ರಫ್ತಿನ (Exports) ಮೇಲಿನ ನಿರ್ಬಂಧಗಳನ್ನು (Restriction) 2023ರ ಅ.31 ರವರೆಗೆ ವಿಸ್ತರಿಸಿದೆ ಎಂದು ಡೈರಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್‍ ಅಧಿಸೂಚನೆ ನೀಡಿದೆ.

    ಆರಂಭದಲ್ಲಿ, ಈ ವರ್ಷದ ಜೂನ್ 1 ರಿಂದ ಅಕ್ಟೋಬರ್ 31 ರವರೆಗೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಆದರೆ ಸಿಎಕ್ಸ್‌ಎಲ್ ಹಾಗೂ ಟಿಆರ್‌ಕ್ಯೂ ಕೋಟಾದ ಅಡಿಯಲ್ಲಿ ಯುರೋಪಿಯನ್ ಯೂನಿಯನ್‌ಗೆ ಸಕ್ಕರೆಯ ಈ ನಿರ್ಬಂಧವು ಅನ್ವಯಿಸುವುದಿಲ್ಲ ಎಂದು ಡಿಜಿಎಫ್‍ಟಿ ಸೂಚಿಸಿದೆ.

    ಇನ್ನೆರಡೂ ದಿನಗಳಲ್ಲಿ ರಫ್ತು ನಿರ್ಬಂಧ ಮುಗಿಯುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಮತ್ತೆ ತೆಗೆದುಕೊಂಡಿರುವ ಸರ್ಕಾರ ರಫ್ತಿಗೆ ಸಂಬಂಧಿಸಿದ ಇಲಾಖೆಯಿಂದ ಕಡ್ಡಾಯ ಅನುಮತಿಯಂತಹ ಇತರ ಷರತ್ತುಗಳು ಬದಲಾಗದೇ ಉಳಿಯುತ್ತವೆ ಎಂದು ತಿಳಿಸಿದೆ. ಇದನ್ನೂ ಓದಿ: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಖಚಿತ – ಬಿಜೆಪಿಯಿಂದಲ್ಲ: ಮುತಾಲಿಕ್

    ನಿರ್ಬಂಧವನ್ನು ವಿಧಿಸುವಾಗ ಭಾರತದಲ್ಲಿ ಸಾಕಷ್ಟು ಸಕ್ಕರೆ ದಾಸ್ತಾನು ಲಭ್ಯತೆಯಿದೆಯೇ ಎಂಬುದರ ಕುರಿತಾಗಿ ಖಚಿತಪಡಿಸಿಕೊಳ್ಳಲು ಸರ್ಕಾರ ಬಯಸಿದೆ ಮತ್ತು ದೇಶೀಯ ಪೂರೈಕೆಯ ಹಿತಾಸಕ್ತಿಗಳನ್ನು ಕಾಪಾಡಲು ರಫ್ತು ನಿರ್ಬಂಧವನ್ನು ಸಂಪೂರ್ಣವಾಗಿ ವಿಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: `ಆಪರೇಷನ್ ಕಮಲ’ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಿ- ಸುಪ್ರೀಂಗೆ ಡಿಕೆಶಿ ಮನವಿ

    Live Tv
    [brid partner=56869869 player=32851 video=960834 autoplay=true]

  • ಲವ್ ಜಿಹಾದ್ ಆರೋಪ – ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಹಿಂದೂಯೇತರರ ವಾಹನ ಪ್ರವೇಶಕ್ಕೆ ನಿರ್ಬಂಧ

    ಲವ್ ಜಿಹಾದ್ ಆರೋಪ – ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಹಿಂದೂಯೇತರರ ವಾಹನ ಪ್ರವೇಶಕ್ಕೆ ನಿರ್ಬಂಧ

    ಮಂಗಳೂರು: ಇತಿಹಾಸ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಬೆಳ್ತಂಗಡಿ ತಾಲೂಕಿನ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಹಿಂದೂಯೇತರರ ಆಟೋ, ಟ್ಯಾಕ್ಸಿ ಮತ್ತು ವಾಹನ ಪ್ರವೇಶಿಸದಂತೆ ನಿರ್ಬಂಧ ವಿಧಿಸಿರುವ ನಾಮಫಲಕ ಅಳವಡಿಸಿರುವುದು ಕಂಡುಬಂದಿದೆ.

    ಹಿಂದುಗಳ ಶ್ರದ್ಧಾ ಕೇಂದ್ರವಾದ ಸೌತಡ್ಕದಲ್ಲಿ ಅನ್ಯ ಕೋಮಿನವರು ಪ್ರವೇಶ ಮಾಡಿ ಭಕ್ತಾದಿಗಳನ್ನು ಲವ್ ಜಿಹಾದ್ ಹಾಗೂ ದುಷ್ಕೃತ್ಯ ನಡೆಸಿರುವುದು ಕಂಡು ಬಂದಿರುವುದರಿಂದ ಹಿಂದುಯೇತರರ, ಆಟೋ, ಟ್ಯಾಕ್ಸಿ ಇನ್ನಿತರ ಯಾವುದೇ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ದೇವಸ್ಥಾನದ ಪ್ರವೇಶ ದ್ವಾರದ ಬಳಿಯೇ ವಿಶ್ವ ಹಿಂದೂಪರಿಷತ್ ಬಜರಂಗದಳದ ಹೆಸರಿನಲ್ಲಿ ನಾಮಫಲಕ ಅಳವಡಿಸಲಾಗಿದೆ. ಇದನ್ನೂ ಓದಿ: ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕಬೇಕಿಲ್ಲ, ಇನ್ಮುಂದೆ ಮಂದಿರ ಹೋರಾಟದಲ್ಲಿ ನಾವಿಲ್ಲ: ಮೋಹನ್‌ ಭಾಗವತ್‌

    ಕೆಲ ದಿನಗಳ ಹಿಂದೆ ಇಲ್ಲಿನ ಮುಸ್ಲಿಂ ಆಟೋ ಚಾಲಕ ಲವ್ ಜಿಹಾದ್ ಎಸಗಿದ ಆರೋಪ ಕೇಳಿ ಬಂದಿತ್ತು. ಆ ಬಳಿಕ ಇದೀಗ ಅನ್ಯ ಕೋಮಿನವರ ವಾಹನ ಪ್ರವೇಶಕ್ಕೆ ನಿರ್ಬಂಧ ಹೇರಿರುವ ನಾಮಫಲಕ ಕಂಡು ಬಂದಿದೆ. ಸೌತಡ್ಕ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನವಾಗಿದ್ದು, ದೇವಸ್ಥಾನದ ವತಿಯಿಂದ ಯಾವುದೇ ನಿರ್ಬಂಧ ಫಲಕ ಹಾಕಿಲ್ಲ ಎಂಬ ಸ್ಪಷ್ಟನೆ ಆಡಳಿತ ಮಂಡಳಿ ನೀಡಿದೆ. ಇದನ್ನೂ ಓದಿ: ಸುಧಾರಣೆ, ಸಾಧನೆ ಮತ್ತು ರೂಪಾಂತರ ಮಂತ್ರದ ಮೇಲೆ ಭಾರತ ಪ್ರಗತಿ ಸಾಧಿಸಿದೆ: ಮೋದಿ

  • ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ನಿರ್ಬಂಧ ಖಂಡಿಸಿದ G7

    ಮಹಿಳೆಯರ ಮೇಲೆ ತಾಲಿಬಾನ್ ವಿಧಿಸುತ್ತಿರುವ ನಿರ್ಬಂಧ ಖಂಡಿಸಿದ G7

    ಬರ್ಲಿನ್: ತಾಲಿಬಾನ್ ಸರ್ಕಾರ ಅಫ್ಘಾನ್‍ನಲ್ಲಿರುವ ಮಹಿಳೆಯರ ಮೇಲೆ ನಿರ್ಬಂಧಗಳನ್ನು ಹೆಚ್ಚು ವಿಧಿಸುತ್ತಿರುವುದನ್ನು ಏಳು ಕೈಗಾರಿಕೀಕರಣಗೊಂಡ ರಾಷ್ಟ್ರಗಳು(G7) ಖಂಡಿಸಿದೆ.

    ಮಹಿಳೆಯರು ಮತ್ತು ಹುಡುಗಿಯರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ತುರ್ತಾಗಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ತಾಲಿಬಾನ್‍ಗೆ ಕರೆ ನೀಡುತ್ತೇವೆ ಎಂದು ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಬ್ರಿಟನ್ ಮತ್ತು ಯುನೈಟೆಡ್ ಸ್ಟೇಟ್ಸ್‍ನ ವಿದೇಶಾಂಗ ಮಂತ್ರಿಗಳು ಗುರುವಾರ ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮಿರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಮುಂದುವರಿಯುತ್ತಿದೆ: ಒಮರ್ ಅಬ್ದುಲ್ಲಾ 

    ಸಮಾಜದಲ್ಲಿ ಸಂಪೂರ್ಣವಾಗಿ, ಸಮಾನವಾಗಿ ಭಾಗವಹಿಸಲು ಎಲ್ಲರಿಗೂ ಅವಕಾಶವಿದೆ. ಆ ಹಕ್ಕು ಮತ್ತು ಸಾಮರ್ಥ್ಯವನ್ನು ತೀವ್ರವಾಗಿ ಮಿತಿಗೊಳಿಸುವುದು ಮತ್ತು ನಿರ್ಬಂಧಿತ ಕ್ರಮಗಳನ್ನು ಹೇರುವುದನ್ನು ನಾವು ಖಂಡಿಸುತ್ತೇವೆ. ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳನ್ನು ನಿರ್ಬಂಧಿಸುವ ಮೂಲಕ, ತಾಲಿಬಾನ್ ಅಂತರರಾಷ್ಟ್ರೀಯ ಸಮುದಾಯದಿಂದ ತಮ್ಮನ್ನು ಮತ್ತಷ್ಟು ಪ್ರತ್ಯೇಕಿಸಿಕೊಳ್ಳುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದರು.

    G7 Condemns Taliban Over Growing Restrictions On Afghan Women

    1996 ರಿಂದ 2001 ರ ಸಮಯದಲ್ಲಿ ತಾಲಿಬಾನ್ ಮಾನವ ಹಕ್ಕುಗಳನ್ನು ಉಲ್ಲಂಘಿಸಿ ಹಲವು ಕೃತ್ಯಗಳನ್ನು ಮಾಡಿತ್ತು. ಆದರೆ ಕಳೆದ ವರ್ಷ ತಾಲಿಬಾನ್ ಮತ್ತೆ ಅಧಿಕಾರವನ್ನು ವಶಪಡಿಸಿಕೊಳ್ಳಬೇಕಾದರೆ ನಾವು ಮಾನವ ಹಕ್ಕುಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸುವುದಿಲ್ಲ. ಶಾಂತಿಯಿಂದ ಆಡಳಿತ ನಡೆಸುತ್ತೇವೆ ಎಂದು ಭರವಸೆಯನ್ನು ಕೊಟ್ಟಿತ್ತು. ಇದನ್ನೂ ಓದಿ: ನಡು ರಸ್ತೆಯಲ್ಲಿ ಉಪನ್ಯಾಸಕನ ಬರ್ಬರ ಹತ್ಯೆ

    ಆದರೂ ಸಹ ತಾಲಿಬಾನ್ ಅಫ್ಘನ್ ಪ್ರಜೆಗಳ ಹಕ್ಕುಗಳನ್ನು ಹೆಚ್ಚು ನಿರ್ಬಂಧಿಸಿದೆ. ಅದರಲ್ಲಿಯೂ ವಿಶೇಷವಾಗಿ ಹುಡುಗಿಯರು ಮತ್ತು ಮಹಿಳೆಯರು ಮಾಧ್ಯಮಿಕ ಶಾಲೆಗಳಿಗೆ ಮತ್ತು ಅನೇಕ ಸರ್ಕಾರಿ ಉದ್ಯೋಗಗಳಿಗೆ ಬರುವುದನ್ನು ತಡೆಯಲಾಗಿದೆ. ಈ ಹಿನ್ನೆಲೆ G7 ರಾಷ್ಟ್ರ ತಾಲಿಬಾನ್ ಸರ್ಕಾರದ ನಡವಳಿಕೆಯನ್ನು ತೀವ್ರವಾಗಿ ಖಂಡಿಸುತ್ತಿದೆ.

  • ಮುಳ್ಳಯ್ಯನಗಿರಿಗೆ ಲಿಮಿಟೆಡ್ ಟೂರಿಸ್ಟ್- ದಿನಕ್ಕೆ 300 ಗಾಡಿ, 1,200 ಪ್ರವಾಸಿಗರಿಗಷ್ಟೇ ಅವಕಾಶ

    ಮುಳ್ಳಯ್ಯನಗಿರಿಗೆ ಲಿಮಿಟೆಡ್ ಟೂರಿಸ್ಟ್- ದಿನಕ್ಕೆ 300 ಗಾಡಿ, 1,200 ಪ್ರವಾಸಿಗರಿಗಷ್ಟೇ ಅವಕಾಶ

    ಚಿಕ್ಕಮಗಳೂರು: ಕಾಫಿನಾಡ ಮುಳ್ಳಯ್ಯನಗಿರಿ ಭಾಗಕ್ಕೆ ಬರುವ ಪ್ರವಾಸಿಗರು ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಬರಬೇಕು. ಇಲ್ಲವಾದರೆ, ತಾಲೂಕಿನ ಕೈಮರ ಚೆಕ್‍ಪೋಸ್ಟ್ ಬಳಿ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಬೆಳ್ಳಂಬೆಳಗ್ಗೆ ಮೊದಲು ಬರುವ 150 ಗಾಡಿ, 600 ಪ್ರವಾಸಿಗರಷ್ಟೆ ಪಾಸ್ ಆಗುತ್ತಾರೆ. ಲೇಟಾಗಿ ಬಂದವರು ಚೆಕ್‍ಪೋಸ್ಟ್ ಬಳಿ ಲಾಕ್ ಆಗಬೇಕಾಗುತ್ತೆ. ಯಾಕೆಂದರೆ, ತಾಲೂಕಿನ ಮುಳ್ಳಯ್ಯನಗಿರಿ ಭಾಗಕ್ಕೆ ದಿನಕ್ಕೆ 300 ವಾಹನಗಳು ಹಾಗೂ 1,200 ಪ್ರವಾಸಿಗರನ್ನಷ್ಟೆ ಬಿಡಬೇಕೆಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

    ಇಂದಿನಿಂದಲೇ ಈ ಆದೇಶ ಜಾರಿಗೆ ಬಂದಿದ್ದು, ಪ್ರವಾಸಿಗರು ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಬರಬೇಕಾಗಿದೆ. ಬೆಳಗ್ಗೆ 6-9 ಗಂಟೆವರೆಗೆ 150 ಗಾಡಿಗಳು, 600 ಜನ. ಮಧ್ಯಾಹ್ನ 2-4 ಗಂಟೆಯವರೆಗೆ 150 ಗಾಡಿ, 600 ಪ್ರವಾಸಿಗರಿಗೆ ಮಾತ್ರ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಎರಡು ಬೈಕ್‍ಗಳನ್ನು ಒಂದು ಕಾರು ಎಂದು ಪರಿಗಣಿಸಿ ದಿನಕ್ಕೆ 300 ವಾಹನ, 1,200 ಪ್ರವಾಸಿಗರನ್ನು ಮಾತ್ರ ಬಿಡಬೇಕು ಎಂದು ಚೆಕ್‍ಪೋಸ್ಟ್ ಸಿಬ್ಬಂದಿಗೆ ಸೂಚಿಸಿದೆ.

    ಇಂದು ಕೂಡ ತಡವಾಗಿ ಬಂದ ಪ್ರವಾಸಿಗರನ್ನ ರಸ್ತೆ ಮಧ್ಯೆಯೇ ಅಡ್ಡಗಟ್ಟಿದ ಪೊಲೀಸರು, ಮಧ್ಯಾಹ್ನ ಬನ್ನಿ ಎಂದು ತಡೆದು ವಾಪಸ್ ಕಳಿಸಿದರು. ಆದ್ದರಿಂದ ಮುಳ್ಳಯ್ಯನಗಿರಿ ಮಾರ್ಗದ ಕೈಮರ ಚೆಕ್‍ಪೋಸ್ಟ್ ಬಳಿ ತಡವಾಗಿ ಬಂದ ಪ್ರವಾಸಿ ವಾಹನಗಳು ಅಲ್ಲಲ್ಲೇ ನಿಂತು ಮಧ್ಯಾಹ್ನವಾಗೋದನ್ನೇ ಕಾಯುತ್ತಿದ್ದರು. ತಡವಾಗಿ ಬಂದ ಪ್ರವಾಸಿಗರು ದೂರದಿಂದ ಬಂದಿದ್ದೇವೆ. ಮಧ್ಯಾಹ್ನದವರೆಗೂ ಸುಮ್ಮನೆ ಕಾಯುವುದು ಹೇಗೆಂದು ಜಿಲ್ಲಾಡಳಿತದ ತಕ್ಷಣದ ನಿರ್ಧಾರದ ವಿರುದ್ಧ ಅಸಮಾಧಾನವನ್ನೂ ಹೊರಹಾಕಿದರು.

    ಕೆಲವರು ಮಧ್ಯಾಹ್ನದವರೆಗೆ ಇಲ್ಲಿ ನಿಂತು ಏನು ಮಾಡುವುದು ಎಂದು ಕಲ್ಲತ್ತಿಗರಿ, ಕೆಮ್ಮಣ್ಣುಗುಂಡಿ, ಅಯ್ಯನಕೆರೆ ಸೇರಿದಂತೆ ಸುತ್ತಮುತ್ತಲಿನ ಬೇರೆ ಪ್ರವಾಸಿ ತಾಣಗಳತ್ತ ಮುಖಮಾಡಿದರು. ಆದರೆ ಕೆಲವರು ನಾವು ಬೇರೆ ಕಡೆ ಹೋಗಿ ಬರುವುದು ಸ್ವಲ್ಪ ತಡವಾದರೂ ಮಧ್ಯಾಹ್ನ ಕೂಡ ಹೋಗಲಾಗುವುದಿಲ್ಲ. ಹಾಗಾಗಿ ಎಲ್ಲೂ ಹೋಗುವುದು ಬೇಡವೆಂದು ನಿಂತಲ್ಲೇ ನಿಂತು ಮಧ್ಯಾಹ್ನವಾಗೋದನ್ನ ಕಾಯುತ್ತಿದ್ದರು.

    ಕೇವಲ ಮುಳ್ಳಯ್ಯನಗಿರಿಗಷ್ಟೇ ಅಲ್ಲದೆ ಜಿಲ್ಲೆಯ ಇತರೆ ಪ್ರವಾಸಿ ತಾಣಗಳಿಗೂ ಪ್ರವಾಸಿ ತಾಣದ ವಿಸ್ತೀರ್ಣದ ಆಧಾರದ ಮೇಲೆ ಪ್ರವಾಸಿಗರನ್ನ ನಿರ್ಬಂಧಿಸಲಾಗಿದೆ. ರಾಜ್ಯಾದ್ಯಂತ ಕೊರೊನಾ ಎರಡನೇ ಅಲೆ ಕಡಿಮೆಯಾದರೂ ಜಿಲ್ಲೆಯಲ್ಲಿ ಆಗಿರಲಿಲ್ಲ. ಕಳೆದ ಎರಡು ತಿಂಗಳಿಂದ ಜಿಲ್ಲೆಯಲ್ಲಿ ಪ್ರತಿ ದಿನ ನೂರರ ಸಮೀಪವೇ ಕೇಸ್‍ಗಳು ಪತ್ತೆಯಾಗುತ್ತಿದ್ದವು. ಈ ಮಧ್ಯೆ ಜಿಲ್ಲೆಗೆ ಬರುವ ಪ್ರವಾಸಿಗರನ್ನು ಕಂಡ ಜಿಲ್ಲೆಯ ಜನ ಕೂಡ ಆತಂಕಕ್ಕೀಡಾಗಿದ್ದರು. ಮಳೆ, ಶೀತದ ವಾತಾವರಣ. ಪ್ರವಾಸಿಗರಿಂದ ಕೊರೊನಾ ಹೆಚ್ಚಾದರೆ ಮತ್ತಷ್ಟು ಸಮಸ್ಯೆಯಾಗುತ್ತೆ. ಹಾಗಾಗಿ, ಕೂಡಲೇ ಜಿಲ್ಲೆಗೆ ಪ್ರವಾಸಿಗರನ್ನ ನಿಷೇಧಿಸಬೇಕೆಂದು ಜಿಲ್ಲಾದ್ಯಂತ ಜನ ಕೂಡ ಒತ್ತಾಯಿಸಿದ್ದರು. ಈಗ ಜಿಲ್ಲಾಡಳಿತದ ಪ್ರವಾಸಿಗರ ಮೇಲೆ ಹೇರಿರುವ ನಿರ್ಬಂಧವನ್ನ ಜಿಲ್ಲೆಯ ಜನ ಕೂಡ ಸ್ವಾಗಿತಿಸಿದ್ದಾರೆ.

  • ವೀಕೆಂಡ್‍ನಲ್ಲಿ ನಂದಿಬೆಟ್ಟಕ್ಕೆ ಹೋದ ಪ್ರವಾಸಿಗರಿಗೆ ನಿರಾಸೆ

    ವೀಕೆಂಡ್‍ನಲ್ಲಿ ನಂದಿಬೆಟ್ಟಕ್ಕೆ ಹೋದ ಪ್ರವಾಸಿಗರಿಗೆ ನಿರಾಸೆ

    ಚಿಕ್ಕಬಳ್ಳಾಪುರ: ವೀಕೆಂಡ್ ಇದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ನಂದಿಬೆಟ್ಟಕ್ಕೆ ಇಂದು ಪ್ರವಾಸಿಗರ ದಂಡೇ ಹರಿದು ಬಂದಿದೆ.

    ಇಂದು ಭಾನುವಾರ ರಜೆ ದಿನ ಇರುವ ಕಾರಣ ಮತ್ತು ಲಾಕ್‍ಡೌನ್ ಸಡಿಲಿಕೆಯಾದ ಹಿನ್ನೆಲೆ ಪ್ರವಾಸಿಗರು ಜಗದ್ವಿಖ್ಯಾತ ನಂದಿಗಿರಿಧಾಮಕ್ಕೆ ಬೆಳ್ಳಂ ಬೆಳಿಗ್ಗೆ ಆಗಮಿಸಿದ್ದಾರೆ. ಆದರೆ ಹಾಗೇ ಬಂದ ಪ್ರವಾಸಿಗರಿಗೆ ನಿರಾಸೆಯಾಗಿದ್ದು, ಪೊಲೀಸರು ಅವರನ್ನು ಅಡ್ಡಗಟ್ಟಿ ವಾಪಸ್ ಕಳುಹಿಸಿದ್ದಾರೆ.

    ಜೂನ್ 31ರವರೆಗೆ ಕೊರೊನಾ ಲಾಕ್‍ಡೌನ್ ಇದ್ದರೂ, ನಿಯಮಗಳನ್ನು ಸರ್ಕಾರ ಸಡಿಲ ಮಾಡಿದೆ. ಈ ಕಾರಣದಿಂದ ಕೆಲ ಪ್ರವಾಸಿ ತಾಣಗಳು ಓಪನ್ ಆಗಿವೆ. ಆದರೆ ಕೊರೊನಾ ಎಫೆಕ್ಟ್ ನಿಂದಾಗಿ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ. ನಿಷೇಧವಿದ್ದರೂ ಕೆಲವರು ನಂದಿ ಬೆಟ್ಟಕ್ಕೆ ಹೋಗಿದ್ದಾರೆ. ಹೀಗಾಗಿ ಪೊಲೀಸರು ಬೆಟ್ಟಕ್ಕೆ ಹೊರಟ್ಟಿದ್ದ ಪ್ರವಾಸಿಗರನ್ನು ಮಾರ್ಗ ಮಧ್ಯದಲ್ಲೇ ತಡೆದು ವಾಪಸ್ ಕಳುಹಿಸಿದ್ದಾರೆ. ಬೆಟ್ಟ ನೋಡಲು ಬಂದ ಪ್ರವಾಸಿಗರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ತೆರಳಿದ್ದಾರೆ.

  • ದಲಿತ ಸಂಸದರನ್ನು ನಿರ್ಬಂಧ ಮಾಡಿದ ಕ್ರಮ ಸರಿಯಲ್ಲ: ಸಿದ್ದಲಿಂಗ ಸ್ವಾಮೀಜಿ

    ದಲಿತ ಸಂಸದರನ್ನು ನಿರ್ಬಂಧ ಮಾಡಿದ ಕ್ರಮ ಸರಿಯಲ್ಲ: ಸಿದ್ದಲಿಂಗ ಸ್ವಾಮೀಜಿ

    ತುಮಕೂರು: ಸಂಸದ ನಾರಾಯಣಸ್ವಾಮಿ ಅವರನ್ನು ಗೊಲ್ಲರಹಟ್ಟಿಗೆ ನಿರ್ಬಂಧ ಮಾಡಿದ ಕ್ರಮ ಸರಿಯಲ್ಲ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ.

    ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ದಲಿತ ಸಂಸದರನ್ನು ಗೊಲ್ಲರಹಟ್ಟಿಗೆ ನಿಷೇಧ ಮಾಡಿದ್ದು, ಶೋಚನೀಯ ಹಾಗೂ ದುಃಖನೀಯ ಸಂಗತಿ ಎಂದು ಹೇಳಿದ್ದಾರೆ. ಇಂತಹ ಆಧುನಿಕ ಕಾಲದಲ್ಲೂ ಇಂತಹ ಅನಿಷ್ಟ ಪದ್ಧತಿ ಜೀವಂತವಾಗಿ ಇರುವುದು ಖಂಡನೀಯ. ಇದನ್ನು ಹೋಗಲಾಡಿಸುವ ಚಿಂತನೆ ಮಾಡಬೇಕಿದೆ ಎಂದರು.

    ಗಾಂಧಿಜೀಯ ಕನಸಿನ ಭಾರತ ಹಾಗೂ ಬಸವಣ್ಣ ಅವರ ಸಮಾಜದ ಆದರ್ಶ ನಮ್ಮಲ್ಲಿರಬೇಕು. ಒಬ್ಬ ಸಂಸದರಿಗೆ ಈ ಸ್ಥಿತಿ ಬಂದರೆ ಜನ ಸಾಮಾನ್ಯರ ಸ್ಥಿತಿ ಹೇಗಿರಬೇಡ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಘಟನೆ ವೇಳೆ ಸಂಸದರು ನಡೆದುಕೊಂಡ ರೀತಿ ಉತ್ತಮ. ನಾರಾಯಸ್ವಾಮಿ ಅವರ ಹೃದಯ ಶ್ರೀಮಂತಿಕೆ ಮೆಚ್ಚುವಂತದ್ದು, ಮುಂದಿನ ದಿನಗಳಲ್ಲಿ ಗೊಲ್ಲರಹಟ್ಟಿಯ ಜನರ ಮನಪರಿವರ್ತನೆಗೆ, ಅಭಿವೃದ್ಧಿಗೆ ಪಣತೊಡುತ್ತೇನೆ ಅಂದ ನಾರಾಯಣಸ್ವಾಮಿ ಅವರ ಕಾಳಜಿ ಮೆಚ್ಚುವಂತಹದ್ದು ಎಂದು ಶ್ಲಾಘಿಸಿದ್ದಾರೆ. ಇದನ್ನು ಓದಿ: ದಲಿತ ಸಂಸದರಿಗೆ ಗ್ರಾಮಕ್ಕೆ ಬರದಂತೆ ತಡೆದ ಗ್ರಾಮಸ್ಥರು

    ಮಠ-ಮಾನ್ಯಗಳು ಹಾಗೂ ಸಂಘ ಸಂಸ್ಥೆಗಳು ಕೂಡ ಮುಂದೆ ಬಂದು ಈ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ. ಇದೇ ವೇಳೆ ಯಾವುದೇ ನಾಯಕರು ಆರೋಪದ ಮೇಲೆ ಬಂಧನವಾದಾಗ ಆಯಾ ಸಮುದಾಯಗಳ ಪರ ನಿಂತು ಪ್ರತಿಭಟನೆ ನಡೆಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ದೇಶದ ಪ್ರತಿಯೊಬ್ಬ ಪ್ರಜೆನೂ ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಹಾಗೂ ಸಂವಿಧಾನವನ್ನು ಗೌರವಿಸಬೇಕು. ಕಾನೂನು ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದು ಕಾನೂನು ಇಲ್ಲ. ಎಲ್ಲರೂ ಕಾನೂನಿಗೆ ತಲೆ ಬಾಗಬೇಕು ಎಂದು ಪ್ರತಿಕ್ರಿಯಿಸಿದರು.

  • ಯೂಟರ್ನ್ ಸಿಎಂ: ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ!

    ಯೂಟರ್ನ್ ಸಿಎಂ: ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ!

    ಬೆಂಗಳೂರು: ವಿಧಾನಸೌಧದ ಸುತ್ತಲಿನ ಗೇಟ್‍ಗಳನ್ನ ತೆಗಿಸಿಬಿಡ್ತೀನಿ. ನನ್ನ ಶರ್ಟ್ ಹಿಡಿದು ಯಾರು ಬೇಕಾದರೂ ಪ್ರಶ್ನಿಸಬಹುದು ಎಂದು ಹೇಳಿದ್ದ ಎಚ್‍ಡಿ ಕುಮಾರಸ್ವಾಮಿ ಅವರು ಈಗ ಅಧಿಕಾರ ಸಿಕ್ಕ ತಕ್ಷಣ ವರಸೆ ಬದಲಿಸಿದ್ದಾರೆ.

    ಹೋದಲ್ಲಿ, ಬಂದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಅಂತ ಕರೆಸಿಕೊಂಡಿರುವ ಮಾಧ್ಯಮಗಳ ಪದೇ ಪದೇ ವಾಗ್ದಾಳಿ ನಡೆಸ್ತಿದ್ದ ಮುಖ್ಯಮಂತ್ರಿಗಳು ಈಗ ಮಾಧ್ಯಮವನ್ನ ಶಕ್ತಿ ಕೇಂದ್ರದಿಂದ ದೂರ ಇಡಲು ಮುಂದಾಗಿದ್ದಾರೆ. ವಿಧಾನಸೌಧಕ್ಕೆ ಮಾಧ್ಯಮ ಪ್ರವೇಶವನ್ನ ನಿರ್ಬಂಧಿಸಿ ಮೌಖಿಕ ಆದೇಶ ಹೊರಡಿಸಿದ್ದಾರೆ.

    ಈ ಆದೇಶವನ್ನು ಶಿರಸಾ ಪಾಲಿಸುತ್ತಿರುವ ಪೊಲೀಸರು ಪಾಸ್ ಇರುವ ಮಾಧ್ಯಮದವರ ವಾಹನಗಳನ್ನ ವಿಧಾನಸೌಧದ ಗೇಟ್‍ನಲ್ಲೇ ತಡೆಯುತ್ತಿದ್ದಾರೆ. ಗೇಟ್ ಬಳಿ ತಮ್ಮ ವಾಹನ ನಿಲ್ಲಿಸಬೇಕಿರುವ ಮಾಧ್ಯಮದವರು ಅಲ್ಲಿಂದ ನಡೆದುಕೊಂಡು ಹೋಗಬೇಕಿದೆ. ಈ ಆದೇಶ ಕೇವಲ ಮಾಧ್ಯಮದವರಿಗೆ ಮಾತ್ರ ಅನ್ವಯವಾಗಿದ್ದು, ವಕೀಲರು ಮತ್ತು ಸರ್ಕಾರಿ ವಾಹನಗಳಿಗೆ ವಿಧಾನಸೌಧ ಆವರಣಕ್ಕೆ ತಪಾಸಣೆ ಇಲ್ಲದೆ ಪ್ರವೇಶ ನೀಡಲಾಗಿದೆ.

    ಇಷ್ಟೇ ಅಲ್ಲದೇ ಮಾಧ್ಯಮದವರು ವಿಧಾನಸೌಧದ ಒಳಗೆ ಏಕಾಏಕಿ ಓಡಾಡುವಂತಿಲ್ಲ. ನಿಮಗೆ ಪ್ರತ್ಯೇಕ ಸ್ಥಳ ನಿಗದಿ ಪಡಿಸಲಾಗಿದೆ. ಈ ಸ್ಥಳದಲ್ಲೇ ಪ್ರತಿಕ್ರಿಯೆ ಪಡೆಯಬೇಕು ಅಂತಲೂ ಸೂಚಿಸಿದ್ದಾರೆ. ತಮ್ಮ ಸರ್ಕಾರದ ವಿರುದ್ಧದ ವರದಿಗಳ ಹಿನ್ನೆಲೆಯಲ್ಲಿ ಮಾಧ್ಯಮಗಳನ್ನು ಹತ್ತಿಕ್ಕುವ ಪರೋಕ್ಷ ಯತ್ನವೇ ಇದು ಅಂತ ಚರ್ಚೆಗೆ ಗ್ರಾಸವಾಗಿದೆ.

    ಹಿಂದೆ ಹೇಳಿದ್ದು ಏನು?
    ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಈ ವರ್ಷದ ಜನವರಿ 3 ರಂದು ಹಿರಿಯ ನಾಗರಿಕರ ಜೊತೆಗಿನ ಸಂವಾದದಲ್ಲಿ ಮಾತನಾಡಿದ್ದ ಅವರು, ರಾಜ್ಯದ ಮುಖ್ಯಮಂತ್ರಿ ಸ್ಥಾನ ನನ್ನಪ್ಪನ ಆಸ್ತಿ ಅಲ್ಲ. ಅವಕಾಶ ಕೊಟ್ಟರೆ ದಿನದ 20 ಗಂಟೆ ನಿಮಗಾಗಿ ಚಾಕರಿ ಮಾಡುತ್ತೇನೆ. ಅವಕಾಶ ಕೊಡದಿದ್ದರೆ ಮನೆಯಲ್ಲಿ ಕುಳಿತುಕೊಳ್ಳುವೆ. ಇದರಲ್ಲಿ ನನ್ನ ಆಸ್ತಿ ಏನು ಹೋಗಲ್ಲ. 113 ಸ್ಥಾನವನ್ನು ಗೆಲ್ಲಲು ನಾನು ಹೊರಟಿದ್ದೇನೆ. ಸ್ವತಂತ್ರವಾಗಿ ಯಾರ ಹಂಗಿಲ್ಲದೇ ಅಧಿಕಾರ ನಡೆಸುವಂತಾಗಬೇಕು. ನಾನು ಅಧಿಕಾರಕ್ಕೆ ಬಂದರೆ 24 ತಾಸು ವಿಧಾನಸೌಧ ತೆರೆಯುತ್ತೇನೆ. ವಿಧಾನಸೌಧದ ಸುತ್ತ ಇರುವ ಬ್ಯಾರಿಕೇಡ್ ತಗೆಯುತ್ತೇನೆ. ನಾನು ಮುಖ್ಯಮಂತ್ರಿಯಾದ್ರೆ ಯಾರೂ ಬೇಕಾದ್ರೂ ಸಿಎಂ ಶರ್ಟ್ ಎಳೆದು ಪ್ರಶ್ನೆ ಮಾಡಬಹುದು ಎಂದು ಭರವಸೆ ನೀಡಿದ್ದರು.

  • ರೇಪಿಸ್ಟ್ ಬಾಬಾನಿಗೆ ಈಗ ದಿನಕ್ಕೆ 20 ರೂ. ಕೂಲಿ!

    ರೇಪಿಸ್ಟ್ ಬಾಬಾನಿಗೆ ಈಗ ದಿನಕ್ಕೆ 20 ರೂ. ಕೂಲಿ!

    ಪಂಚಕುಲ: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಒಳಪಟ್ಟಿರುವ ಡೇರಾ ಸಚ್ಚಾ ಸೌದ ಮುಖ್ಯಸ್ಥ ಬಾಬಾ ರಾಮ್ ರಹೀಮ್‍ನ ದಿನ ಕೂಲಿ ಕೇವಲ 20 ರೂ. ಮಾತ್ರ.

    ಅಪರಾಧಿ ಬಾಬಾ ಆಶ್ರಮದಲ್ಲಿದ್ದಾಗ ಐಷರಾಮಿ ಜೀವನವನ್ನು ಕಳೆಯುತ್ತಿದ್ದ. ಆದರೆ ಈಗ ಜೈಲಿನಲ್ಲಿ ತೋಟಗಾರಿಕೆ ಕೆಲಸವನ್ನು ಮಾಡುತ್ತಿದ್ದು, ಪ್ರತಿದಿನ ಈ ಕೆಲಸಕ್ಕೆ 20 ರೂ. ದಿನ ಕೂಲಿಯನ್ನು ಪಡೆಯುತ್ತಿದ್ದಾನೆ.

    ಹರಿಯಾಣ ಜೈಲಿನಲ್ಲಿ ಕೌಶಲ್ಯವಿಲ್ಲದ ಉದ್ಯೋಗವನ್ನು ಮಾಡುವವರಿಗೆ ನಿಗಧಿಯಾದ ಕೂಲಿ ಇದಾಗಿದೆ. ಇದಕ್ಕಿಂತ ಹೆಚ್ಚಿನ ಕೂಲಿ ನೀಡುವುದಿಲ್ಲ ಎಂದು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಜಿಪಿ) ಕೆ.ಪಿ. ಸಿಂಗ್ ತಿಳಿಸಿದ್ದಾರೆ.

    ಬಾಬಾ ಉತ್ತಮ ಉದ್ಯೋಗ ಕೌಶಲ್ಯವನ್ನು ಹೊಂದಿದ್ದಾನೆ. ಆದರೆ ಜೈಲಿನಲ್ಲಿ ಇರುವಾಗ ಅಲ್ಲಿನ ನಿರ್ಬಂಧಗಳನ್ನು ಪಾಲಿಸಬೇಕಾಗುತ್ತದೆ. ಆದ್ದರಿಂದ ಬ್ಯಾರಕ್‍ನ ಬಳಿ ಸಣ್ಣ ಪ್ರದೇಶದ ಭೂಮಿಯಲ್ಲಿ ಪ್ರತಿದಿನ 4 ರಿಂದ 5 ಗಂಟೆ ಕಾಲ ಕಷ್ಟಪಟ್ಟು ಕೆಲಸ ಮಾಡುತ್ತಾನೆ ಎಂದು ಹೇಳಿದರು.

    ಪತ್ರಿಕೆ, ಟಿವಿ ಇಲ್ಲ: ದೂರದರ್ಶನ ಮತ್ತು ಪತ್ರಿಕೆ ಮೂಲಕ ದಿನನಿತ್ಯದ ಸುದ್ದಿಗಳಿಂದ ದೂರವಿಡಲಾಗಿದೆ. ಟಿವಿ, ಪತ್ರಿಕೆ ಪ್ರವೇಶಕ್ಕೆ ಅವಕಾಶವಿರುವ ಸ್ಥಳಗಳಲ್ಲಿ ಬ್ಯಾರಕ್‍ಗಳಿವೆ. ಆದರೆ ಬಾಬಾ ಬ್ಯಾರಕ್‍ಗೆ ಹೋಗಲು ಅನುಮತಿ ಇಲ್ಲ. ಅಷ್ಟೇ ಅಲ್ಲದೆ ಭದ್ರತಾ ಕಾಳಜಿಯ ಮೇರೆಗೆ ಯಾವುದೇ ಫೋನ್ ಕರೆಗಳನ್ನು ಮಾಡಲು ಅನುಮತಿ ನೀಡಿಲ್ಲ.

    ಬ್ಯಾರಕ್‍ಗೆ ಅನುಮತಿ ಇಲ್ಲ: ಆರಂಭದಲ್ಲಿ ಮಾಧ್ಯಮಗಳು ಬಾಬಾನನ್ನು ಏಕಾಂಗಿಯಾಗಿ ಬಂಧಿಸಿದ್ದಾರೆ ಎಂದು ವರದಿ ಮಾಡಿದ್ದರು. ಆದರೆ ಅದನ್ನು ಡಿಜಿಪಿ ಅವರು ನಿರಾಕರಿಸಿ, ಬಾಬಾ ಜೈಲಿನಲ್ಲಿ ಮೂರು ಮಂದಿ ಅಪರಾಧಿಗಳ ಜೊತೆ ಇದ್ದಾನೆ. ಸಾಮಾಜಿಕ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಅವನ ಜೊತೆ ಇರುವ ಕೈದಿಗಳಿಗೆ ಡೇರಾ ಆಶ್ರಮದ ಜೊತೆ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಖಚಿತ ಪಡಿಸಿಕೊಳ್ಳಲಾಗಿದೆ. ಮೂವರು ಕೈದಿಗಳು ಈಗಾಗಲೇ 10 ವರ್ಷಗಳಿಗಿಂತ ಹೆಚ್ಚಿನ ಕಾಲ ಜೈನಲ್ಲಿದ್ದಾರೆ. ಇದರಲ್ಲಿ 70 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಇದ್ದಾರೆ ಎಂದು ಹೇಳಿದ್ದಾರೆ.

    ಊಟ: ಜೈಲಿನ ಎಲ್ಲ ಕೈದಿಗಳಿಗೆ ನೀಡುವಂತೆ ದಿನಕ್ಕೆ ಗರಿಷ್ಠ 3,175 ಕ್ಯಾಲೋರಿ ಇರುವ ಆಹಾರವನ್ನು ನೀಡಲಾಗುತ್ತದೆ. ಬೆಳಗಿನ ತಿಂಡಿಗೆ ಎರಡು ಬ್ರೆಡ್ ಮತ್ತು 250 ಗ್ರಾಂ ಹಾಲು, ನಂತರ ಟೀ, ಮಧ್ಯಾಹ್ನ ಊಟಕ್ಕೆ 7 ಚಪಾತಿ ಮತ್ತು ತರಕಾರಿ, ಸಂಜೆ ಟೀ ಮತ್ತೆ ರಾತ್ರಿ ಊಟ ನೀಡಲಾಗುತ್ತದೆ.

    ಜೈಲಿನ ಕ್ಯಾಂಟೀನ್‍ನಿಂದ ಹಣ್ಣುಗಳು ಹಾಗೂ ಇತರ ತಿನ್ನುವ ವಸ್ತುಗಳನ್ನು ಹಣ ನೀಡಿ ಖರೀದಿಸಬಹುದು. ಆದರೆ ಕೈಯಲ್ಲಿ ಗರಿಷ್ಟ 5 ಸಾವಿರ ರೂ. ಹಣವನ್ನು ಇಟ್ಟುಕೊಳ್ಳಲು ಮಾತ್ರ ಅವಕಾಶವಿದೆ.

    ಬಾಬಾನನ್ನು ಜೈಲಿನಲ್ಲಿ ಭಗವದ್ಗೀತೆ ಪುಸ್ತಕವನ್ನು ಓದುತ್ತಿದ್ದಾನೆ. ಅವನ ತಾಯಿ ಭೇಟಿಯಾಗಲು ಬಂದಾಗ ಬಹುಶಃ 2 ಪುಸ್ತಕವನ್ನು ನೀಡಿದ್ದಾರೆ. ಅವುಗಳನ್ನು ಪ್ರತಿದಿನ ಓದುತ್ತಾನೆ ಎಂದು ಅಧಿಕಾರಿ ತಿಳಿಸಿದರು.

    ಜೈಲಿಗೆ ಹೊಸದಾಗಿ ಆಗಮಿಸಿದ ಕೈದಿಗಳು ಕಿರುಚಾಡಿ, ಕೂಗಾಡಿ ಅಳುತ್ತಾರೆ. ಆದರೆ ಬಾಬಾ ಇಲ್ಲಿಯವರೆಗೆ ಕೋಪಗೊಳ್ಳದೇ ಜೈಲಿನ ನಿಯಮ ನಿರ್ಬಂಧಗಳಿಗೆ ಅನುಸಾರವಾಗಿ ವರ್ತಿಸುತ್ತಿದ್ದಾನೆ. ಜೈಲಿನಲ್ಲಿ ಕುರ್ತಾ ಪೈಜಾಮ್ ಬಿಟ್ಟು ಬೇರೆ ಯಾವ ಉಡುಪನ್ನು ಧರಿಸುವಂತಿಲ್ಲ. ಕೈದಿ ಬಾಬಾ ನಂಬರ್ 8647 ಎಂದು ಸಿಂಗ್ ಹೇಳಿದರು.