Tag: Restricted

  • ಚಾಮುಂಡಿ ಬೆಟ್ಟದಲ್ಲಿ ಜನಸ್ತೋಮ – ಇಂದು ಸೇರಿದಂತೆ 3 ದಿನ ಭಕ್ತರ ಪ್ರವೇಶಕ್ಕೆ ನಿರ್ಬಂಧ

    ಚಾಮುಂಡಿ ಬೆಟ್ಟದಲ್ಲಿ ಜನಸ್ತೋಮ – ಇಂದು ಸೇರಿದಂತೆ 3 ದಿನ ಭಕ್ತರ ಪ್ರವೇಶಕ್ಕೆ ನಿರ್ಬಂಧ

    ಮೈಸೂರು: ಶ್ರಾವಣ ಮಾಸದ ಎರಡನೇ ಶುಕ್ರವಾರ ದಿನವಾದ ಇಂದು ವರಮಹಾಲಕ್ಷ್ಮೀ ಹಬ್ಬವನ್ನು ರಾಜ್ಯದೆಲ್ಲೆಡೆ ಬಹಳ ಸಡಗರದಿಂದ ಜನರು ಆಚರಿಸುತ್ತಿದ್ದಾರೆ. ಹಬ್ಬದ ವಿಶೇಷ ದಿನವಾದ ಇಂದು ಮೈಸೂರು ಜಿಲ್ಲೆಯ ಚಾಮುಂಡಿ ಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬರುತ್ತಿರುವುದರಿಂದ ಮೂರು ದಿನ ಚಾಮುಂಡಿ ಬೆಟ್ಟಕ್ಕೆ ಪ್ರವೇಶವನ್ನು ನಿಷೇಧಿಸಲಾಗಿದೆ.

    ವರಮಹಾಲಕ್ಷ್ಮೀ ಹಬ್ಬದ ದಿನ ಸಾಮಾನ್ಯವಾಗಿ ದೇವಿಯ ದರ್ಶನಕ್ಕಾಗಿ ಹೆಚ್ಚಾಗಿ ಭಕ್ತರು ಮುಗಿಬೀಳುತ್ತಾರೆ. ಈ ವಿಶೇಷ ದಿನದಂದು ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಕಾರಣ ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು ಜಿಲ್ಲಾಡಳಿತ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಿದೆ. ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ ಶಿವಣ್ಣ

    ಈಗಾಗಲೇ ಕೊರೊನಾದಿಂದ ವೀಕೆಂಡ್ ಕರ್ಫ್ಯೂ ಹಾಗೂ ಭಾನುವಾರ ಬೆಟ್ಟಕ್ಕೆ ನಿರ್ಬಂಧ ಹೇರಲಾಗಿದೆ. ಜೊತೆಗೆ ಶ್ರಾವಣ ಶನಿವಾರ ಹಿನ್ನಲೆ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿಯಾಗಿರುವ ವಿವಿಪುರಂನ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೂ ಪ್ರವೇಶವನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ:ಚಾಮುಂಡಿ ಬೆಟ್ಟಕ್ಕೆ ಡಿ ಬಾಸ್ ಭೇಟಿ- ಮುಗಿಬಿದ್ದ ಅಭಿಮಾನಿಗಳು

  • ಇಂದಿನಿಂದಲೇ ವಿಧಾನಸೌಧದೊಳಗೆ ಮಾಧ್ಯಮಗಳ ವಾಹನಗಳಿಗೆ ನಿರ್ಬಂಧ

    ಇಂದಿನಿಂದಲೇ ವಿಧಾನಸೌಧದೊಳಗೆ ಮಾಧ್ಯಮಗಳ ವಾಹನಗಳಿಗೆ ನಿರ್ಬಂಧ

    ಬೆಂಗಳೂರು: ವಿಧಾನಸೌಧಕ್ಕೆ ಖಾಸಗಿ ಮತ್ತು ಮಾಧ್ಯಮಗಳ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.

    ವಿಧಾನಸೌಧದಲ್ಲಿ ಪೊಲೀಸರು ಇಂದಿನಿಂದಲೇ ಖಾಸಗಿ ವಾಹನಗಳ ಪ್ರವೇಶವನ್ನು ತಡೆಹಿಡಿದಿದ್ದು, ಪಾಸ್ ಇದ್ದ ಮಾಧ್ಯಮಗಳಿಗೂ ವಿಧಾನಸೌಧದ ಗೇಟ್ ವರೆಗೆ ಮಾತ್ರ ಪ್ರವೇಶ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೇ ಗೇಟ್ ಬಳಿ ಕಾರ್ ನಿಲ್ಲಿಸಿ, ವಿಧಾನಸೌಧದ ಒಳಗೆ ಮಾಧ್ಯಮಗಳು ಬರಬೇಕು ಎಂದು  ಪೊಲೀಸರು ತಿಳಿಸುತ್ತಿದ್ದಾರೆ.

    ಖುದ್ದು ಡಿಸಿಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ವಿಧಾನಸೌಧಗಳಲ್ಲಿರುವ ಖಾಸಗಿ ವಾಹನಗಳನ್ನ ಖಾಲಿ ಮಾಡಿಸುತ್ತಿದ್ದಾರೆ. ಕೇವಲ ವಕೀಲರು ಹಾಗೂ ಸರ್ಕಾರಿ ವಾಹನಗಳಿಗೆ ಮಾತ್ರ ವಿಧಾನಸೌಧದ ಒಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಮೂಲಕ ಮಾಧ್ಯಮಗಳ ಮೇಲಿನ ನಿಯಂತ್ರಣದ ಮೊದಲ ಹೆಜ್ಜೆಯನ್ನು ಸಿಎಂ ಕುಮಾರಸ್ವಾಮಿ ಇಟ್ಟಿದ್ದಾರೆ.

    ವಿಧಾನಸೌಧದ ಗೇಟ್‍ವರೆಗೆ ಮಾತ್ರ ಮಾಧ್ಯಮ ವಾಹನಗಳಿಗೆ ಅವಕಾಶ ನೀಡಿದ್ದು, ವರದಿಗಾರರು ಹಾಗೂ ಕ್ಯಾಮೆರಾಮನ್‍ಗಳು ಗೇಟ್ ಬಳಿ ತಮ್ಮ ವಾಹನ ನಿಲ್ಲಿಸಿ ವಿಧಾನಸೌಧದ ಒಳಗೆ ಪ್ರವೇಶ ಮಾಡಬಹುದಾಗಿದೆ. ಅಲ್ಲದೇ ಪಾಸ್ ಹೊಂದಿರುವ ಮಾಧ್ಯಮಗಳ ವಾಹನಗಳನ್ನು ಪಾರ್ಕಿಂಗ್ ವರೆಗೆ ಬಿಡಲು ಅವಕಾಶ ಕಲ್ಪಿಸಿದ್ದು, ವಾಹನಗಳನ್ನು ಪಾರ್ಕಿಂಗ್ ನಲ್ಲಿ ನಿಲ್ಲಿಸಿ ವಿಧಾನಸೌಧಕ್ಕೆ ನಡೆದುಕೊಂಡು ಬರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಾಧ್ಯಮಗಳಿಗೆ ವಿಧಾನಸೌಧಕ್ಕೆ ನಿರ್ಬಂಧ ಹಾಕಿರುವ ವಿಚಾರವನ್ನು ಮಾಧ್ಯಮಗಳು ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದಾಗ, ಅವರು ಯಾವುದೇ ಹೇಳಿಕೆಯನ್ನು ನೀಡಿಲ್ಲ. ಅಲ್ಲದೇ ಈ ಬಗ್ಗೆ ನನಗೆ ಗೊತ್ತಿಲ್ಲ, ನೋ ಕಾಮೆಂಟ್ ಎಂದು ಹೇಳಿದ್ದಾರೆ.