Tag: restorent

  • ಬಿರಿಯಾನಿ ಕೊಡಲು ತಡಮಾಡಿದ ರೆಸ್ಟೋರೆಂಟ್ ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ

    ಬಿರಿಯಾನಿ ಕೊಡಲು ತಡಮಾಡಿದ ರೆಸ್ಟೋರೆಂಟ್ ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ

    ಲಕ್ನೋ: ಬಿರಿಯಾನಿ (Biriyani) ಕೊಡಲು ರೆಸ್ಟೋರೆಂಟ್ ಸಿಬ್ಬಂದಿ ತಡ ಮಾಡಿದ್ದಕ್ಕೆ ಸಿಟ್ಟಿಗೆದ್ದು ಮೂವರು ವ್ಯಕ್ತಿಗಳು ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶ (Uttarpradesh) ದಲ್ಲಿ ನಡೆದಿದೆ.

    ಗ್ರೇಟರ್ ನೋಯ್ಡಾದ ಅನ್ಸಲ್ ಪ್ಲಾಜಾ ಮಾಲ್‍ನಲ್ಲಿರುವ ಝೌಕ್ ರೆಸ್ಟೋರೆಂಟ್‍ನಲ್ಲಿ ಬುಧವಾರ ರಾತ್ರಿ 10: 30 ರ ಸುಮಾರಿಗೆ ಈ ಘಟನೆ ನಡೆದಿದೆ. ಬಂಧಿತರನ್ನು ಮನೋಜ್, ರರವೇಶ್ ಮತ್ತು ಕ್ರಿಶ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ದಾದ್ರಿ ನಿವಾಸಿಗಳು.

    ಸಿಬ್ಬಂದಿಗೆ ತಲಿಸುತ್ತಿರುವ ದೃಶ್ಯವು ರೆಸ್ಟೋರೆಂಟ್ (Restorent) ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ರೆಸ್ಟೋರೆಂಟ್ ನ ಟೇಬಲ್ ನಲ್ಲಿ ಮೂವರು ಯುವಕರು ಕುಳಿತಿರುವುದನ್ನು ಕಾಣಬಹುದಾಗಿದೆ. ಸ್ವಲ್ಪ ಹೊತ್ತಿನವರೆಗೆ ಕುಳಿತಿದ್ದ ಅವರಲ್ಲಿ ಓರ್ವ ಇದ್ದಕ್ಕಿದ್ದಂತೆ ಎದ್ದು, ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿದ್ದ ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ.

    ನಂತರ ಆತನ ಕುತ್ತಿಗೆಯನ್ನು ಹಿಡಿದು ಎಳೆದುಕೊಂಡು ಬಂದು ಚೆನ್ನಾಗಿ ಥಳಿಸಿದ್ದಾನೆ. ಇಷ್ಟು ಮಾತ್ರವಲ್ಲದೆ ಸಿಬ್ಬಂದಿಯನ್ನು ರೆಸ್ಟೋರೆಂಟ್‍ನಿಂದ ಹೊರಗೆಳೆದುಕೊಂಡು ಬಂದು ಮೂವರು ಒದ್ದು, ಥಳಿಸಿದ್ದಾರೆ.

    ಬುಧವಾರ ರಾತ್ರಿ ಮೂವರು ಯುವಕರು ಊಟಕ್ಕೆಂದು ರೆಸ್ಟೋರೆಂಟ್‍ಗೆ ತೆರಳಿ ಚಿಕನ್ ಬಿರಿಯಾನಿ (Chicken Biriyani) ಆರ್ಡರ್ ಮಾಡಿದ್ದರು. ಸ್ವಲ್ಪ ಸಮಯದ ನಂತರ, ಅಲ್ತಾಫ್ ಎಂಬ ಸಿಬ್ಬಂದಿ ಬಿರಿಯಾನಿ ಮುಗಿದಿದೆ ಎಂದು ಹೇಳಿದರು. ಈ ವೇಳೆ ಆರೋಪಿಗಳಲ್ಲಿ ಒಬ್ಬನು ತನ್ನ ತಾಳ್ಮೆ ಕಳೆದುಕೊಂಡನು. ನಂತರ ಸಿಬ್ಬಂದಿ ಕಾಲರ್ ಅನ್ನು ಹಿಡಿದನು ಎಂದು ಗ್ರೇಟರ್ ನೋಯ್ಡಾದ ಎಸಿಪಿ ಮಹೇಂದ್ರ ದೇವ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಈ ಸಂಬಂಧ ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ್ದಕ್ಕಾಗಿ ಶಿಕ್ಷೆ) ಮತ್ತು 147 (ಗಲಭೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹೋಟೆಲ್, ರೆಸ್ಟೋರೆಂಟ್‍ಗಳು ಸೇವಾ ಶುಲ್ಕ ವಿಧಿಸಬಹುದು: ದೆಹಲಿ ಹೈಕೋರ್ಟ್

    ಹೋಟೆಲ್, ರೆಸ್ಟೋರೆಂಟ್‍ಗಳು ಸೇವಾ ಶುಲ್ಕ ವಿಧಿಸಬಹುದು: ದೆಹಲಿ ಹೈಕೋರ್ಟ್

    ನವದೆಹಲಿ: ಮುಂದಿನ ವಿಚಾರಣೆವರೆಗೂ ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳು ಸೇವಾ ಶುಲ್ಕ ವಿಧಿಸುವುದನ್ನು ಮುಂದುವರಿಸಬಹುದು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರೆಸ್ಟೋರೆಂಟ್ ಸಂಸ್ಥೆಗಳಿಗೆ ನೋಟಿಸ್ ನೀಡಿ ಈ ಮಹತ್ವದ ಸೂಚನೆ ನೀಡಿದೆ.

    ಕಳೆದ ಜೂನ್‍ನಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯವು, ಬಿಲ್‍ಗಳಲ್ಲಿ ಸೇವಾ ಶುಲ್ಕವನ್ನು ಕಡ್ಡಾಯವಾಗಿ ವಿಧಿಸುವುದನ್ನು ನಿಲ್ಲಿಸುವಂತೆ ಹೋಟೆಲ್, ರೆಸ್ಟೋರೆಂಟ್ ಸಂಘಗಳಿಗೆ ಸೂಚಿಸಿತ್ತು. ಇದು ಕಾನೂನುಬಾಹಿರ ಚಟುವಟಿಕೆ ಎಂದಿದ್ದ ಇಲಾಖೆ ಈ ಪದ್ಧತಿಯನ್ನು ಕೊನೆಗೊಳಿಸಲು ಕಾನೂನು ಚೌಕಟ್ಟನ್ನು ಹೊರತರುವುದಾಗಿಯೂ ಹೇಳಿತ್ತು. ಇದನ್ನೂ ಓದಿ: ಸುಳ್ಳು ಮತ್ತು ದೇಶದ್ರೋಹ ಸುದ್ದಿಗಳ ಪ್ರಕಟ – 8 ಯೂಟ್ಯೂಬ್ ಚಾನಲ್‍ಗಳು ನಿಷೇಧ

    ಈ ಆದೇಶವನ್ನು ಪ್ರಶ್ನೆ ಮಾಡಿ, ರೆಸ್ಟೋರೆಂಟ್ ಮತ್ತು ಹೋಟೆಲ್ ಮಾಲೀಕರು ದೆಹಲಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಸರ್ಕಾರ ನಿರ್ಧಾರವನ್ನು ತಡೆ ಹಿಡಿದಿತ್ತು. ಸದ್ಯ ಈ ಆದೇಶವನ್ನು ಪ್ರಶ್ನೆ ಮಾಡಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು (CCPA) ಮೇಲ್ಮನವಿ ಅರ್ಜಿ ಸಲ್ಲಿಸಿದೆ.

    ನ್ಯಾಯಾಲಯವು ಮುಂದಿನ 10 ದಿನಗಳಲ್ಲಿ ಪ್ರಕರಣದ ವಿಚಾರಣೆ ನಡೆಸಲಿದ್ದು, ಈ ಸಂಬಂಧ ಹೋಟೆಲ್ ರೆಸ್ಟೋರೆಂಟ್ ಸಂಘಗಳಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲಿವರೆಗೂ ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಸೇವಾ ಶುಲ್ಕ ವಿಧಿಸಬಹುದು ಎಂದು ಕೋರ್ಟ್ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ದಾವಣಗೆರೆ ಸರ್ಕಾರಿ ಕಚೇರಿಯಲ್ಲಿ ಬ್ಯಾಂಕ್ ಅಧ್ಯಕ್ಷರಿಂದ್ಲೇ ಗುಂಡು-ತುಂಡು ಪಾರ್ಟಿ!

    ದಾವಣಗೆರೆ ಸರ್ಕಾರಿ ಕಚೇರಿಯಲ್ಲಿ ಬ್ಯಾಂಕ್ ಅಧ್ಯಕ್ಷರಿಂದ್ಲೇ ಗುಂಡು-ತುಂಡು ಪಾರ್ಟಿ!

    ದಾವಣಗೆರೆ: ಸರ್ಕಾರಿ ಅಧಿಕಾರಿಗಳಿಗೆ ಕಚೇರಿಗಳೇ ಬಾರ್ ಅಂಡ್ ರೆಸ್ಟೋರೆಂಟ್ ಆಗಿದೆ. ಅಧಿಕಾರಿಗಳು ಸರ್ಕಾರಿ ಕಚೇರಿಯಲ್ಲಿಯೇ ತಡರಾತ್ರಿ ಗುಂಡು ತುಂಡು ಪಾರ್ಟಿ ಮಾಡಿದ್ದು, ಪ್ರಶ್ನಿಸಿದ ಮಾಧ್ಯಮದವರಿಗೇ ಅವಾಜ್ ಹಾಕಿದ್ದಾರೆ.


    ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರ ಕಚೇರಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ನೇತೃತ್ವದಲ್ಲಿ ಗುಂಡು ತುಂಡು ಪಾರ್ಟಿ ಬಡೆದಿದೆ. ಈ ಪಾರ್ಟಿಯಲ್ಲಿ  ಡಿಸಿಸಿ ಬ್ಯಾಂಕ್ ಅಧಿಕಾರಿಗಳು, ಆಹಾರ ಇಲಾಖೆ ಸಿಬ್ಬಂದಿ ಸೇರಿ ಇತರ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ. ಆದ್ರೆ ಈ ಬಗ್ಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್ ಅವರನ್ನು ಕೇಳಿದ್ರೆ ಇದಕ್ಕೂ ನನಗೆ ಸಂಬಂಧವೇ ಇಲ್ಲ ಅಂತ ಹಾರಿಕೆಯ ಉತ್ತರ ನೀಡಿದ್ದಾರೆ.

    ಅಲ್ಲದೇ ಆಷಾಢ ಹಾಗಾಗಿ ಇಲ್ಲಿ ಬಂದು ಅಧಿಕಾರಿಗಳು ಗುಂಡು ತುಂಡು ಸೇವಿಸುತ್ತಾರೆ ಅಂತ ಹೇಳಿದ್ದಾರೆ. ಕ್ಯಾಮೆರಾ ಕಂಡ ತಕ್ಷಣ ಸ್ಥಳದಿಂದ ಹೊರಟ್ರು. ಇದೇ ವೇಳೆ ಸಿಬ್ಬಂದಿ ಸರ್ಕಾರಿ ಕಚೇರಿಯಲ್ಲಿ ಗುಂಡು ತುಂಡು ತಿನ್ನಬಾರದಾ ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳಲ್ಲಿದ್ದ ಅಧ್ಯಕ್ಷರ ಆಪ್ತನೊಬ್ಬ ಕ್ಯಾಮರಾ ಆಫ್ ಮಾಡುವಂತೆ ತಾಕೀತು ಮಾಡಿದ್ದಾನೆ.

  • ಬಿಗ್ ಬಾಸ್ ಸೆಲಬ್ರಿಟಿ ಸುನಾಮಿ ಕಿಟ್ಟಿ ಕಿಡ್ನಾಪ್ ಕೇಸ್‍ಗೆ ಬಿಗ್ ಟ್ವಿಸ್ಟ್

    ಬಿಗ್ ಬಾಸ್ ಸೆಲಬ್ರಿಟಿ ಸುನಾಮಿ ಕಿಟ್ಟಿ ಕಿಡ್ನಾಪ್ ಕೇಸ್‍ಗೆ ಬಿಗ್ ಟ್ವಿಸ್ಟ್

    ಬೆಂಗಳೂರು: ಬಿಗ್‍ಬಾಸ್ ಸೆಲೆಬ್ರಿಟಿ, ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಸುನಾಮಿ ಕಿಟ್ಟಿ ಮತ್ತು ತಂಡದಿಂದ ಬಾರ್ ಸಪ್ಲೈಯರ್ ನ ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟಿಸ್ಟ್ ಸಿಕ್ಕಿದೆ.

    ಪ್ರಕರಣ ಸಂಬಂಧ ಇದೀಗ ಸಪ್ಲೈಯರ್ ವಿರುದ್ಧವೇ ಆರೋಪ ಕೇಳಿಬಂದಿದೆ. ಸುನಾಮಿ ಕಿಟ್ಟಿ ತನ್ನ ಸ್ನೇಹಿತನ ಹೆಂಡತಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಿಯಾ ಅಂತ ಸಪ್ಲೈಯರ್ ಮತ್ತು ತೌಶಿಕ್ ಅಪಹರಣ ಮಾಡಿದ್ರು. ಆದ್ರೆ, ಸುನೀಲ್ ಪತ್ನಿ ಈಗ ತನ್ನ ಸ್ನೇಹಿತನ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುನೀಲ್ ಪತ್ನಿ, ತೌಶಿಕ್ ಹಾಗೂ ನನ್ನ ನಡುವೆ ಯಾವ ಸಂಬಂಧನೂ ಇಲ್ಲ. ಏನೂ ಇಲ್ಲ. ಜಸ್ಟ್ ಫ್ರೆಂಡ್ಸ್ ಆಗಿದ್ವಿ ಅಷ್ಟೇ. ಅವರು ನನ್ನ ಮೊಬೈಲ್ ನನ್ನು ಮಿಸ್ ಯೂಸ್ ಮಾಡಿಕೊಂಡಿದ್ದಾರೆ. ನನ್ನ ಪತಿಗೆ ಕಳುಹಿಸಿದ ಮೆಸೇಜ್ ಗಳನ್ನು ತೌಶಿಕ್ ಪಾರ್ವರ್ಡ್ ಮಾಡಿಕೊಂಡು ನನ್ನ ಬ್ಲಾಕ್ ಮೇಲ್ ಮಾಡುತ್ತಿದ್ದರು. ಅದಕ್ಕೆ ಗಿರೀಶ್, ಬ್ಯಾಗ್ರೌಂಡ್ ಚೆನ್ನಾಗಿದೆ. ಹೀಗಾಗಿ ಆಕೆಯನ್ನು ಪ್ರೀತಿ ಮಾಡು ಅಂತ ಸಪೋರ್ಟ್ ಮಾಡುತ್ತಿದ್ದರು. ಕೊನೆಗೆ ನಾನು ನನ್ನ ಪತಿ ಸುನೀಲ್ ಅವರಿಗೆ ಈ ವಿಷಯವನ್ನೆಲ್ಲಾ ಹೇಳಿದೆ. ಬಳಿಕ ಸುನೀಲ್, ತೌಶಿಕ್ ಮತ್ತು ಗಿರೀಶ್ ನನ್ನು ಕರೆಸಿ ನನ್ನ ಮುಂದೆಯೇ ಅವರಿಗೆ ಎರಡೇಟು ಹೊಡೆದ್ರು ಅಂತ ಅವರು ಹೇಳಿದ್ರು. ಇದನ್ನೂ ಓದಿ: ಬಿಗ್ ಬಾಸ್ ಸೆಲಬ್ರಿಟಿ, ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಸುನಾಮಿ ಕಿಟ್ಟಿ ಅರೆಸ್ಟ್!

    ನಾವು ಫ್ರೆಂಡ್ಸ್ ಎಲ್ಲರೂ ಆವಾಗವಾಗ ಸಿಗ್ತಾ ಇದ್ವಿ. ಈ ವೇಳೆ ಒಂದಿನ ನಾನು ಪರ್ಸ್, ಮೊಬೈಲ್ ಎಲ್ಲವನ್ನು ಟೇಬಲ್ ಮೇಲಿಟ್ಟು ರೆಸ್ಟ್ ರೂಮ್ ಗೆ ಹೋಗಿದ್ದೆ. ಆ ಸಮಯದಲ್ಲಿ ನನ್ನ ಮೊಬೈಲ್ ನಲ್ಲಿದ್ದ ಮೆಸೇಜ್ ಗಳನ್ನು ಪಾರ್ವರ್ಡ್ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಒಳ್ಳೆ ದುಡ್ಡಿದೆ. ಕಾರ್ ಇದೆ ಅಂತ ಬ್ಯಾಗ್ರೌಂಡ್ ನೋಡ್ಕೊಂಡು ದುಡ್ಡು ಮಾಡಕ್ಕೋಗಿ ಈ ತರ ಆಗಿದೆ ಅಂತ ಅಂದ್ರು.

    ಗಿರೀಶ್ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಗೆಳೆಯನಾಗಿದ್ದ ತೌಶಿಕ್ 20 ದಿವಸಕ್ಕೊಂದು ಬಾರಿ ನನಗೆ ಸಿಗುತ್ತಿದ್ದ. ಈ ವೇಳೆ ಇಬ್ಬರೂ ಅಲ್ಲಿ ಊಟಕ್ಕೆ ಹೋಗ್ತಾ ಇದ್ವಿ. ಅಲ್ಲಿ ತೌಶಿಕ್ ಗೆ ಗಿರೀಶ್ ಪರಿಚಯವಾಗಿದ್ರು. ಹೀಗಾಗಿ ಅವರು ನಮ್ಮಿಬ್ಬರ ಜೊತೆ ಕ್ಲೋಸ್ ಇದ್ರು. ಅಲ್ಲದೇ ನಮ್ಮ ಹುಡುಗನ ಲವ್ ಮಾಡು ಅಂತ ತೊಂದರೆ ಕೊಡುತ್ತಿದ್ದರು. ಇದರಿಂದ ಬೇಸತ್ತ ನಾನು ಈ ಇಬ್ಬರು ಸೇರಿ ನನ್ನ ಜೊತೆ ಅಸಹ್ಯವಾಗಿ ನಡೆದುಕೊಳ್ಳುತ್ತಿದ್ದಾರೆಂದು ನನ್ನ ಪತಿಗೆ ಹೇಳಿದೆ ಅಂತ ಅವರು ವಿವರಿಸಿದ್ರು.

    https://www.youtube.com/watch?v=Yv1-SHePrLw

  • ರೆಸ್ಟೋರೆಂಟ್‍ ನ 2ನೇ ಮಹಡಿಯಿಂದ ಬಿದ್ದು ಮಾಜಿ ಸಚಿವರ ಪುತ್ರ ದುರ್ಮರಣ

    ರೆಸ್ಟೋರೆಂಟ್‍ ನ 2ನೇ ಮಹಡಿಯಿಂದ ಬಿದ್ದು ಮಾಜಿ ಸಚಿವರ ಪುತ್ರ ದುರ್ಮರಣ

    ನವದೆಹಲಿ: ಮಣಿಪುರದ ಮಾಜಿ ಸಚಿವರೊಬ್ಬರ 19 ವರ್ಷದ ಪುತ್ರ ರೆಸ್ಟೋರೆಂಟ್ ನ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ನಡೆದಿದ್ದು, ಮಣಿಪುರದ ಮಾಜಿ ಶಿಕ್ಷಣ ಸಚಿವ ಎಂ ಒಕೆಂಡ್ರು ಅವರ ಪುತ್ರ ಸಿದ್ಧಾರ್ಥ್ ಮೃತಪಟ್ಟ ಯುವಕ. ಈತ ವಿದ್ಯಾಭ್ಯಾಸಕ್ಕಾಗಿ ದೆಹಲಿಗೆ ಬಂದಿದ್ದು, ತನ್ನ ಸಹೋದರರ ಜೊತೆ ನೆಲೆಸಿದ್ದನು.

    ಶನಿವಾರ ಸಂಜೆ ಸುಮಾರು 4.10ರ ಸುಮಾರಿಗೆ ರೆಸ್ಟೋರೆಂಟ್ ಮಹಡಿಯಿಂದ ವ್ಯಕ್ತಿಯೊಬ್ಬ ಬಿದ್ದಿದ್ದು, ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಂತ ಹಿರಿಯ ಪೊಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದ್ರೆ ಇದೊಂದು ಕೊಲೆ ಅಂತ ಸಿದ್ದಾರ್ಥ್ ಸಹೋದರಿ ಆರೋಪ ಮಾಡುತ್ತಿದ್ದಾರೆ.

    ಸಿದ್ದಾರ್ಥ್ ನ ಡ್ರೈವರ್ ಆತನನ್ನು ಕಾರಿನಲ್ಲಿ ರೆಸ್ಟೋರೆಂಟ್ ಬಳಿ ಬಿಟ್ಟು ಬಳಿಕ ಡ್ರೈವರ್ ತೆರಳಿರುವುದನ್ನು ಪೊಲೀಸರು ನೋಡಿದ್ದಾರೆ ಆ ಬಳಿಕ ಈ ಘಟನೆ ನಡೆದಿದೆ.

    ಘಟನೆಯ ದಿನ ಸಿದ್ದಾರ್ಥ್ ಮದ್ಯ ಸೇವಿಸಿದ್ದು, ರೆಸ್ಟೋರೆಂಟ್ ಮಹಡಿಗೆ ತೆರಳಿ ಗೋಡೆ ಮೇಲೆ ಹತ್ತಿ ಅಲ್ಲಿಂದ ಹಾರಲು ಪ್ರಯತ್ನಿಸಿದ್ದಾನೆ. ಇದನ್ನು ಗಮನಿಸಿದ ರೆಸ್ಟೋರೆಂಟ್ ವೈಟರ್ ಕೂಡಲೇ ಸಿದ್ದಾರ್ಥ್‍ಗೆ ಇಳಿಯುವಂತೆ ತಿಳಿಸಿದ್ದಾರೆ. ಅಂತೆಯೇ ಗೋಡೆಯಿಂದ ಇಳಿದ ಆತ ಸಂಧಿಯಲ್ಲಿದ ಕಂಬಿಯಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಪರಿಣಾಮ ಆತನ ತಲೆಗೆ ಗಂಭಿರ ಗಾಯಗಳಾಗಿತ್ತು. ಕೂಡಲೇ ಸ್ಥಳೀಯರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಅದಾಗಲೇ ಆತ ಮೃತಪಟ್ಟಿದ್ದಾನೆ ಅಂತ ವೈದ್ಯರು ತಿಳಿಸಿರುವುದಾಗಿ ಹೇಳಿದ್ರು.

    ಸದ್ಯ ಘಟನೆಯ ಬಗ್ಗೆ ತನಿಖೆ ನಡೆಸುತ್ತಿರೋ ಪೊಲೀಸರು ರೆಸ್ಟೋರೆಂಟ್ ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದಾರೆ. ಈತ ರೆಸ್ಟೋರೆಂಟ್ ಗೆ ಒಬ್ಬನೇ ಬಂದಿದ್ದನು ಅಂತ ಅವರು ಹೇಳಿದ್ದಾರೆ.

     

  • ಹೋಟೆಲ್, ರೆಸ್ಟೋರೆಂಟ್‍ನಲ್ಲಿ ಸೇವಾ ಶುಲ್ಕ ರದ್ದು: ಮುಂದಿನ ವಾರ ಸಭೆ

    ಹೋಟೆಲ್, ರೆಸ್ಟೋರೆಂಟ್‍ನಲ್ಲಿ ಸೇವಾ ಶುಲ್ಕ ರದ್ದು: ಮುಂದಿನ ವಾರ ಸಭೆ

    ಬೆಂಗಳೂರು: ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಸೇವಾ ಶುಲ್ಕ ರದ್ದುಪಡಿಸುವ ಸಂಬಂಧ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ, ಕೇಂದ್ರದ ಆದೇಶ ರಾಜ್ಯ ಸರ್ಕಾರದ ಕೈಸೇರಿದ್ದು, ಈ ನಿಟ್ಟಿನಲ್ಲಿ ಮುಂದಿನವಾರ ಹೋಟೆಲ್, ರೆಸ್ಟೋರೆಂಟ್ ಮಾಲೀಕರ ಜೊತೆ ಸಭೆ ಮಾಡಿ, ಸೇವಾಶುಲ್ಕ ರದ್ದು ಮಾಡಲಾಗುವುದು ಎಂದು ಆಹಾರ ನಾಗರೀಕ ಪೂರೈಕೆ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.

    ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಸೇವಾ ಶುಲ್ಕ ರದ್ದುಪಡಿಸಬೇಕೆಂದು ಕೇಂದ್ರ ಆದೇಶಿಸಿದೆ. ಅದರಂತೆ ಹೋಟೆಲ್, ರೆಸ್ಟೋರೆಂಟ್ ಮಾಲೀಕರ ಸಭೆ ಮಾಡಿ ಸೇವಾ ಶುಲ್ಕ ರದ್ದು ಮಾಡುತ್ತೇವೆ. ಆದೇಶ ಜಾರಿ ಬಳಿಕವೂ ಶುಲ್ಕ ವಸೂಲಿ ಮಾಡಿದರೆ ಕೇಂದ್ರ ಸರ್ಕಾರದ ಆದೇಶದಂತೆ ದಂಡ ವಿಧಿಸಿಲಾಗುವುದು. ಅಲ್ಲದೆ ಗ್ರಾಹಕರು ಕೂಡ ನೇರವಾಗಿ ಗ್ರಾಹಕರ ಕೋರ್ಟ್‍ಗೆ ದೂರು ನೀಡಬಹುದು ಎಂದ್ರು.

    ಸಮಾರಂಭಗಳಲ್ಲಿ ಅನಗತ್ಯವಾಗಿ ಆಹಾರ ವ್ಯರ್ಥವಾಗುತ್ತಿದೆ. ಈ ನಿಟ್ಟಿನಲ್ಲಿ ಎನ್‍ಜಿಓಗಳ ಜೊತೆ ಚರ್ಚೆ ನಡೆಸಲಾಗುತ್ತಿದೆ. ಸಭೆ ಸಮಾರಂಭಗಳಲ್ಲಿ ವ್ಯರ್ಥವಾಗುತ್ತಿರುವ ಆಹಾರವನ್ನು ತಡೆಯಲು ನಿಯಮ ರೂಪಿಸಿ, ಸರ್ಕಾರೇತರ ಸಂಸ್ಥೆಗಳ ಮೂಲಕ ಹಸಿದವರಿಗೆ ವ್ಯರ್ಥ ಆಹಾರವನ್ನು ಪೂರೈಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿಯಮವನ್ನು ತರಲು ಮುಂದಾಗಿದೆ ಅಂತಾ ಸಚಿವರು ಹೇಳಿದ್ರು.