Tag: restaurants

  • ಅಸ್ಸಾಂನಲ್ಲಿ ಹೋಟೆಲ್‌, ರೆಸ್ಟೋರೆಂಟ್‌, ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟ, ಸೇವನೆ ನಿಷೇಧ!

    ಅಸ್ಸಾಂನಲ್ಲಿ ಹೋಟೆಲ್‌, ರೆಸ್ಟೋರೆಂಟ್‌, ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟ, ಸೇವನೆ ನಿಷೇಧ!

    ಗುವಾಹಟಿ: ಅಸ್ಸಾಂನಲ್ಲಿ ಹೋಟೆಲ್‌ (Hotels), ರೆಸ್ಟೋರೆಂಟ್‌ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸುವುದಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಘೋಷಿಸಿದ್ದಾರೆ.

    ಗೋಮಾಂಸ (Beef )ಸೇವನೆಯ ಬಗ್ಗೆ ಅಸ್ತಿತ್ವದಲ್ಲಿರುವ ಕಾನೂನಿಗೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಮಸೂದೆಯ ನಿಬಂಧನೆಗಳನ್ನು ಉಲ್ಲಂಘಿಸಿದರೆ 3 ರಿಂದ 8 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ. 5 ಲಕ್ಷ ರೂ. ವರೆಗೆ ದಂಡ ವಿಧಿಸಬಹುದು. ಸರ್ಕಾರದ ನಿರ್ಣಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷಗಳು ವಿಸ್ತೃತ ಚರ್ಚೆಗಾಗಿ ಕಾನೂನನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕೆಂದು ಆಗ್ರಹಿಸಿ ಕಲಾಪ ಬಹಿಷ್ಕರಿಸಿದವು. ಇದನ್ನೂ ಓದಿ: ವಿಜಯೇಂದ್ರ ಗುಂಪುಗಾರಿಕೆ ಮಾಡುತ್ತಿದ್ದಾರೆ, ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿದ್ದೇನೆ: ಯತ್ನಾಳ್‌ ಚಾರ್ಜ್‌

    ಸಂಪುಟದ ನಿರ್ಣಯ ಸಮರ್ಥಿಸಿಕೊಂಡ ಸಿಎಂ ಶರ್ಮಾ, ಅಸ್ಸಾಂನಲ್ಲಿ ಗೋಮಾಂಸ ಸೇವನೆಯು ಕಾನೂನುಬಾಹಿರವಲ್ಲ. ಆದ್ರೆ 2021ರ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆಯು ರಾಜ್ಯದಲ್ಲಿ ಎಲ್ಲಾ ಜಾನುವಾರುಗಳ ಸಾಗಣೆ, ಹತ್ಯೆ, ಗೋಮಾಂಸ ಮತ್ತು ಗೋಮಾಂಸ ಉತ್ಪನ್ನಗಳ ಮಾರಾಟವನ್ನು ನಿಯಂತ್ರಿಸುತ್ತದೆ. ನಾವು ಈ ಹಿಂದೆ ಅಸ್ಸಾಂನಲ್ಲಿ ಗೋವುಗಳನ್ನು ರಕ್ಷಿಸುವ ಮಸೂದೆ ಪರಿಚಯಿಸಿದ್ದೇವೆ, ಅದರಲ್ಲಿ ಯಶಸ್ವಿಯೂ ಆಗಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: Ballari | ಐವಿ ದ್ರಾವಣ ಪೂರೈಕೆ ಮಾಡಿದ ಕಂಪನಿ ವಿರುದ್ಧ ಕೇಸ್ ದಾಖಲಿಸಲು ತಾಕೀತು

    ಮುಂದೆ ರಾಜ್ಯದ ಯಾವುದೇ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಗೋಮಾಂಸ ನೀಡದಂತೆ ನೋಡಿಕೊಳ್ಳಲು ನಾವು ನಿರ್ಧರಿಸಿದ್ದೇವೆ. ಅಲ್ಲದೇ ಸಾರ್ವಜನಿಕ ಸಮಾರಂಭಗಳಲ್ಲೂ ದನದ ಮಾಂಸ ಕೊಡಬಾರದು. ಜೊತೆಗೆ 2021ರ ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆಯ ಅನ್ವಯ ಹಿಂದೂಗಳು, ಜೈನರು ಮತ್ತು ಸಿಖ್ಖರು ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ಮತ್ತು ದೇವಸ್ಥಾನ ಅಥವಾ ಸತ್ರ (ವೈಷ್ಣವ ಮಠ)ದ 5 ಕಿಲೋಮೀಟರ್ ವ್ಯಾಪ್ತಿಯೊಳಗೆ ಗೋಹತ್ಯೆ ಮತ್ತು ಗೋಮಾಂಸ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.

    ಸರ್ಕಾರದ ಈ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಪ್ರತಿಪಕ್ಷ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಇದು ಪ್ರಮುಖ ವಿಷಯಗಳಿಂದ ರಾಜ್ಯದ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ ಎಂದು ಕಿಡಿ ಕಾರಿತು. ಇದನ್ನೂ ಓದಿ: ಮುಡಾದಲ್ಲಿ ನಡೆದಿರೋದು 4-5 ಸಾವಿರ ಕೋಟಿ ಹಗರಣ: ಆರ್‌. ಅಶೋಕ್‌ ಬಾಂಬ್‌

    ರಾಜ್ಯ ಸರ್ಕಾರವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಲ್ಲಿ, ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ಆದ್ರೆ ಈ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಎಐಯುಡಿಎಫ್ ಶಾಸಕ ಅಮಿನುಲ್ ಇಸ್ಲಾಂ ಹೇಳಿದ್ದಾರೆ.

  • ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಆಹಾರ ಬಿಲ್‌ನಲ್ಲಿ ಸೇವಾ ಶುಲ್ಕ ಸೇರಿಸುವಂತಿಲ್ಲ – ಸೇರಿಸಿದ್ರೆ ಗ್ರಾಹಕರೇ ದೂರು ಕೊಡ್ಬೋದು

    ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಆಹಾರ ಬಿಲ್‌ನಲ್ಲಿ ಸೇವಾ ಶುಲ್ಕ ಸೇರಿಸುವಂತಿಲ್ಲ – ಸೇರಿಸಿದ್ರೆ ಗ್ರಾಹಕರೇ ದೂರು ಕೊಡ್ಬೋದು

    ನವದೆಹಲಿ: ಹೋಟೆಲ್, ರೆಸ್ಟೋರೆಂಟ್‌ಗಳು ಆಹಾರ ಬಿಲ್‌ನಲ್ಲಿ ಸ್ವಯಂಚಾಲಿತವಾಗಿ ಇಲ್ಲವೇ ಪೂರ್ವನಿಯೋಜಿತವಾಗಿ ಸೇವಾ ಶುಲ್ಕ ಸೇರಿಸುವಂತಿಲ್ಲ ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಆದೇಶಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

    ಅನ್ಯಾಯ ವ್ಯಾಪಾರ ವಿಧಾನ ಹಾಗೂ ಗ್ರಾಹಕ ಹಕ್ಕುಗಳ ಉಲ್ಲಂಘನೆ ತಡೆಗಟ್ಟುವ ಸಲುವಾಗಿ ಹೊರಡಿಸಲಾದ ಸಿಸಿಪಿಎ ಮಾರ್ಗಸೂಚಿಯಲ್ಲಿ ದೂರುಗಳನ್ನು ಸಲ್ಲಿಸಲು ಅನುವಾಗುವಂತೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಎನ್‌ಸಿಎಚ್) ಸಂಖ್ಯೆಯನ್ನು ಕೂಡ ಒದಗಿಸಿದೆ. 1915 ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ಇ- ದಾಖಿಲ್‌ ಜಾಲತಾಣ: www.e-daakhil.nic.in. ಮತ್ತು ಸಿಸಿಪಿಎ ಇಮೇಲ್‌ ವಿಳಾಸ: com-ccpa@nic.in.ಕ್ಕೆ ದೂರು ಸಲ್ಲಿಸುವ ಮೂಲಕ ನ್ಯಾಯ ಪಡೆದುಕೊಳ್ಳಬಹುದು ಎಂದು ಹೇಳಿದೆ.

    ಮಾರ್ಗಸೂಚಿಯಲ್ಲಿ ಏನಿದೆ?

    • ಹೋಟೆಲ್, ರೆಸ್ಟೋರೆಂಟ್‌ಗಳು, ಆಹಾರ ಬಿಲ್‌ನಲ್ಲಿ ಸ್ವಯಂಚಾಲಿತವಾಗಿ ಇಲ್ಲವೇ ಪೂರ್ವನಿಯೋಜಿತವಾಗಿ ಸೇವಾ ಶುಲ್ಕ ಸೇರಿಸುವಂತಿಲ್ಲ.
    • ಯಾವುದೇ ಇತರೆ ಹೆಸರಿನಿಂದಲೂ ಸೇವಾ ಶುಲ್ಕ ಸಂಗ್ರಹಿಸಬಾರದು.
    • ಗ್ರಾಹಕರು ಸೇವಾ ಶುಲ್ಕ ಪಾವತಿಸಬೇಕು ಎಂದು ಹೋಟೆಲ್ ಅಥವಾ ರೆಸ್ಟೋರೆಂಟ್ ಒತ್ತಾಯಿಸುವಂತಿಲ್ಲ.
    • ಸೇವಾ ಶುಲ್ಕ ಎಂಬುದು ಸ್ವಯಂಪ್ರೇರಿತ, ಐಚ್ಛಿಕ ಹಾಗೂ ಗ್ರಾಹಕರ ವಿವೇಚನೆಗೆ ಬಿಟ್ಟಿರುತ್ತದೆ ಎಂಬ ವಿಚಾರವನ್ನು ಸ್ಪಷ್ಟವಾಗಿ ಗ್ರಾಹಕರಿಗೆ ತಿಳಿಸಿಬೇಕು.
    • ಸೇವಾ ಶುಲ್ಕ ಸಂಗ್ರಹ ಆಧರಿಸಿ ಪ್ರವೇಶ ನಿರ್ಬಂಧ ಇಲ್ಲವೇ ಸೇವೆಗಳನ್ನು ಆಧರಿಸಿ ನಿಯಮಗಳನ್ನು ಗ್ರಾಹಕರ ಮೇಲೆ ವಿಧಿಸುವಂತಿಲ್ಲ.
    • ಸೇವಾ ಶುಲ್ಕ ಆಹಾರದ ಬಿಲ್‌ನೊಂದಿಗೇ ಸೇರಿಸಿ ಒಟ್ಟು ಮೊತ್ತದ ಮೇಲೆ ಜಿಎಸ್‌ಟಿ ವಿಧಿಸುವ ಮೂಲಕ ಸಂಗ್ರಹಿಸುವಂತಿಲ್ಲ.

    Live Tv
    [brid partner=56869869 player=32851 video=960834 autoplay=true]

  • ನಾಳೆ ಅನ್‍ಲಾಕ್-ಹೋಟೆಲ್, ರೆಸ್ಟೋರೆಂಟ್, ಜಿಮ್ ಓಪನ್

    ನಾಳೆ ಅನ್‍ಲಾಕ್-ಹೋಟೆಲ್, ರೆಸ್ಟೋರೆಂಟ್, ಜಿಮ್ ಓಪನ್

    ಯಾದಗಿರಿ: ನಾಳೆಯಿಂದ ಹೋಟೆಲ್, ರೆಸ್ಟೋರೆಂಟ್‍ಗಳಿಗೆ ಶೇ50 ರಷ್ಟು ಅವಕಾಶ ನೀಡಿರುವ ಹಿನ್ನೆಲೆ ಯಾದಗಿರಿ ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ನಾಳೆ ತೆರೆಯಲು ಭರ್ಜರಿ ತಯಾರಿ ನಡೆದಿದೆ.

    ನಗರದ ಪ್ರಮುಖ ರೆಸ್ಟೋರೆಂಟ್ ಗಳಲ್ಲಿ ಸ್ವಚ್ಚತೆ ಕಾರ್ಯ ಆರಂಭವಾಗಿದ್ದು, ಕೋವಿಡ್ ಮಾರ್ಗಸೂಚಿಗಳ ಪ್ರಕಾರ, ಸ್ಯಾನಿಟೈಸಿಂಗ್, ಜಾಗೃತಿ ಮೂಡಿಸುವ ಬೋರ್ಡ್‍ಗಳನ್ನು ಅಳವಡಿಸಲಾಗುತ್ತಿದೆ. ಸಾಮಾಜಿಕ ಅಂತರ ಪಾಲನೆ ಮಾಡುವ ನಿಟ್ಟಿನಲ್ಲಿ ಒಂದು ಟೇಬಲ್‍ಗೆ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಕಾಶ್ಮೀರದ ನಾಯಕರ ಜೊತೆ ಮೋದಿ ಸಭೆಗೆ ಪಾಕ್ ಕಿರಿಕ್

    ಜಿಮ್  ಓಪನ್‍ಗೆ ಅವಕಾಶ ನೀಡಿರುವ ಹಿನ್ನೆಲೆ ಜಿಮ್ ಕೇಂದ್ರಗಳಲ್ಲಿ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ನಾಳೆಯಿಂದ ಜಿಮ್ ಓಪನ್ ಹಿನ್ನೆಲೆ, ಯಾದಗಿರಿ ಜಿಮ್ಗಳಲ್ಲಿ ತಯಾರಿ ನಡೆಯುತ್ತಿದೆ. ವ್ಯಾಯಾಮ ಶಾಲೆಗಳಲ್ಲಿ ಶೇ50 ರಷ್ಟು ಅವಕಾಶ ನೀಡಿದ ಹಿನ್ನೆಲೆ, ಸಿಫ್ಟ್ ಮಾದರಿಯಲ್ಲಿ ಜಿಮ್ ನಡೆಸಲು ಮಾಲೀಕರು ತಯಾರಿ ನಡೆಸಿದ್ದಾರೆ. ಸದ್ಯ ಜಿಮ್ ಗಳಲ್ಲಿ ಕ್ಲಿನಿಂಗ್, ಸ್ಯಾನಿಟೈಸಿಂಗ್ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳ ಅನುಗುಣವಾಗಿ ಸಿದ್ಧತೆ ನಡೆದಿದೆ .

    ಆದರೆ ಸಂಜೆ 5 ಗಂಟೆಯ ನಂತರ ನೈಟ್ ಕಫ್ರ್ಯೂ ಜಾರಿ ಹಿನ್ನಲೆ, ಸಂಜೆ ಟೈಮ್‍ನಲ್ಲಿ ಜಿಮ್ ಬರುವವರಿಗೆ ತೊಂದರೆಯಾಗುತ್ತದೆ. ಹೀಗಾಗಿ ಜಿಮ್‍ಗಳಿಗೆ ಈ ನಿಯಮ ಸಡಲಿಕೆ ಮಾಡಬೇಕು ಅಂತ ಜೀಮ್ ಮಾಲೀಕರು ಒತ್ತಾಯ ಮಾಡಿದ್ದಾರೆ.

  • ರೆಸ್ಟೋರೆಂಟ್‍ನಲ್ಲಿ ಗೆಳೆಯನೊಂದಿಗೆ ಏಕಾಂತದಲ್ಲಿದ್ದಾಗ ಎಂಟ್ರಿ ಕೊಟ್ಟ ಅಣ್ಣ!

    ರೆಸ್ಟೋರೆಂಟ್‍ನಲ್ಲಿ ಗೆಳೆಯನೊಂದಿಗೆ ಏಕಾಂತದಲ್ಲಿದ್ದಾಗ ಎಂಟ್ರಿ ಕೊಟ್ಟ ಅಣ್ಣ!

    – ನೋಡ ನೋಡ್ತಿದ್ದಂತೆ ಹೈವೇವರೆಗೂ ಬಂತು ಹಂಗಾಮ
    – 10 ನಿಮಿಷದಲ್ಲಿ ಬಂದ ಪೊಲೀಸರಿಗೂ ಏನು ಸಿಗಲಿಲ್ಲ

    ಚಂಡೀಗಢ: ಯುವತಿಯೊಬ್ಬಳು ತನ್ನ ಗೆಳೆಯನೊಂದಿಗೆ ರೆಸ್ಟೋರೆಂಟ್‍ನಲ್ಲಿ ಆರಾಮವಾಗಿ ಫಾಸ್ಟ್ ಫುಡ್ ಸೇವಿಸುತ್ತಿದ್ದಳು. ಈ ವೇಳೆ ಬೈಕಿನಲ್ಲಿ ಬಂದ ಯುವಕರನ್ನು ನೋಡಿದ ಯುವತಿ ಒಂದು ಕ್ಷಣ ಆಶ್ಚರ್ಯಚಕಿತಳಾಗಿದ್ದಳು.

    ಯುವತಿಯ ಸೋದರನೇ ಬೈಕ್‍ನಲ್ಲಿ ಬಂದ ಯುವಕ. ಹುಡುಗನೊಂದಿಗೆ ತನ್ನ ಸೋದರಿಯನ್ನು ನೋಡಿದ ಸೋದರ, ಅಲ್ಲಿಯೇ ಆಕೆಯೆ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆ ಹರಿಯಾಣದ ಫತ್ಹೇಬಾದ್ ನಗರದ ಮಾರ್ಲಾ ಕಾಲೋನಿಯ ಜಿಟಿ ರಸ್ತೆಯಲ್ಲಿರುವ ರೆಸ್ಟೋರೆಂಟ್ ನಲ್ಲಿ ನಡೆದಿದೆ. ಗೆಳತಿಯ ಪೋಷಕರನ್ನು ನೋಡುತ್ತಲೇ ಆಕೆಯ ಜೊತೆಗಿದ್ದ ಯುವಕ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ.

    ಇತ್ತ ಸೋದರಿಯ ಮೇಲೆ ಹಲ್ಲೆ ನಡೆಸುತ್ತಾ ಬಂದ ಅಣ್ಣ ಆಕೆಯನ್ನು ರೆಸ್ಟೋರೆಂಟ್ ನಿಂದ ಹೊರ ಎಳೆದು ತಂದಿದ್ದಾನೆ. ಹಲ್ಲೆ ನಡೆಸುತ್ತಾ ರಾಷ್ಟ್ರೀಯ ಹೆದ್ದಾರಿವರೆಗೂ ಬಂದಿದ್ದು, ಸ್ಥಳದಲ್ಲಿ ಜನರು ಸೇರಿದ್ದರಿಂದ ಕೆಲ ಕಾಲ ಟ್ರಾಫಿಕ್ ಉಂಟಾಗಿತ್ತು. ತಾಯಿ ವಿರೋಧ ವ್ಯಕ್ತಪಡಿಸಿದರೂ, ಸೋದರ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.

    ಸ್ಥಳದಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸುವಷ್ಟರಲ್ಲಿ ಯುವಕ ತನ್ನ ಸೋದರಿ ಮತ್ತು ತಾಯಿಯನ್ನು ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

    ಗಲಾಟೆಗೆ ನಡೆಯುತ್ತಿದ್ದ ಮಾಹಿತಿ ತಿಳಿಯುತ್ತಿದ್ದಂತೆ ಅಲ್ಲಿಗೆ ಹೋದಾಗ ಯಾರು ಇರಲಿಲ್ಲ. ಸ್ಥಳೀಯರಿಗೂ ಹಲ್ಲೆ ನಡೆಸಿದ, ಹಲ್ಲೆಗೊಳಗಾದ ಯುವತಿಯ ಪರಿಚಯ ಇಲ್ಲ ಅಂತಾ ಹೇಳಿದ್ದು, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೋಟೆಲ್‍ಗಳಲ್ಲಿ MRPಗಿಂತ ಹೆಚ್ಚಿನ ಬೆಲೆಗೆ ನೀರಿನ ಬಾಟಲಿ ಮಾರಲು ಸುಪ್ರೀಂ ಅನುಮತಿ

    ಹೋಟೆಲ್‍ಗಳಲ್ಲಿ MRPಗಿಂತ ಹೆಚ್ಚಿನ ಬೆಲೆಗೆ ನೀರಿನ ಬಾಟಲಿ ಮಾರಲು ಸುಪ್ರೀಂ ಅನುಮತಿ

    ನವದೆಹಲಿ: ರೆಸ್ಟೊರೆಂಟ್ ಮತ್ತು ಹೋಟೆಲ್ ಗಳು ಎಂಆರ್ ಪಿ ಗಿಂತ ಹೆಚ್ಚಿನ ಬೆಲೆಗೆ ಪ್ಯಾಕೇಜ್ಡ್ ನೀರಿನ ಬಾಟಲಿಗಳನ್ನು ಮಾರಾಟ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

    ಫೆಡರೇಷನ್ ಆಫ್ ಹೋಟೆಲ್ ಅಂಡ್ ರೆಸ್ಟೊರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ(FHRAI) ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹೋಟೆಲ್ ಮತ್ತು ರೆಸ್ಟೊರೆಂಟ್ ಗಳು ಲೀಗಲ್ ಮೆಟ್ರೋಲಜಿ ಕಾಯ್ದೆಯ ವ್ಯಾಪ್ತಿಯ ಅಡಿಯಲ್ಲಿ ಬಾರದೇ ಇದ್ದ ಕಾರಣ ನೀರಿನ ಬಾಟಲಿಗಳನ್ನು ಎಂಆರ್ ಪಿ  ಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಲು ಅವಕಾಶವಿದೆ ಎಂದು ಹೇಳಿದೆ.

    ಕೇಂದ್ರದ ವಾದವನ್ನು ತಿರಸ್ಕರಿಸಿ ನ್ಯಾ. ಎಫ್ ನಾರಿಮನ್ ಪೀಠ, ಹೋಟೆಲ್, ರೆಸ್ಟೊರೆಂಟ್ ಗೆ ಯಾರೂ ಕುಡಿಯವ ಸಲುವಾಗಿ ನೀರನ್ನು ಖರೀದಿಸಲು ಹೋಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

    ಈ ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ, ಎಂಆರ್ ಪಿ ಗಿಂತ ಹೆಚ್ಚಿನ ಬೆಲೆಯಲ್ಲಿ ಯಾರೇ ನೀರಿನ ಬಾಟಲಿಗಳನ್ನು ಮಾರಾಟ ಮಾಡಿದರೆ ಅವರು ದಂಡ ತೆರಬೇಕಾಗುತ್ತದೆ ಅಥವಾ ಜೈಲು ಶಿಕ್ಷೆ ಎದುರಿಸಬೇಕು ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿತ್ತು. ಎಂಆರ್ ಪಿ ಗಿಂತ ಹೆಚ್ಚಿನ ಬೆಲೆಗೆ ಪ್ಯಾಕೇಜ್ಡ್ ನೀರಿನ ಬಾಟಲಿ ಮಾರಾಟ ಮಾಡುವುದು ತೆರಿಗೆ ವಂಚನೆಗೆ ಎಡೆ ಮಾಡಿಕೊಡುತ್ತದೆ ಎಂದು ವಾದಿಸಿತ್ತು.

    ಹೋಟೆಲ್‍ನವರು ನಿರ್ದಿಷ್ಟ ದರಕ್ಕೆ ನೀರಿನ ಬಾಟಲಿ ಖರೀದಿಸಿರುತ್ತಾರೆ. ಅದನ್ನ ಎಂಆರ್ ಪಿ ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ರೆ ಸೇವಾ ತೆರಿಗೆ, ಅಬಕಾರಿ ಸುಂಕ ರೂಪದಲ್ಲಿ ಸರ್ಕಾರಕ್ಕೆ ಬರಬೇಕಾದ ಹೆಚ್ಚುವರಿ ಆದಾಯಕ್ಕೆ ನಷ್ಟ ಉಂಟಾಗುತ್ತದೆ ಎಂದು ಸರ್ಕಾರ ಕೋರ್ಟ್‍ಗೆ ತಿಳಿಸಿತ್ತು.

    2009ರ ಕಾಯ್ದೆಯಡಿ ನೀರಿನ ಬಾಟಲಿಗಳನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡೋ ರೆಸ್ಟೊರೆಂಟ್ ಹಾಗೂ ಹೋಟೆಲ್ ವಿರುದ್ಧ ಕ್ರಮ ಕೈಗೊಳ್ಳುವ ಸರ್ಕಾರದ ಅಧಿಕಾರವನ್ನು ದೆಹಲಿ ಹೈ ಕೋರ್ಟ್ 2015ರ ಆಗಸ್ಟ್ ನಲ್ಲಿ ಎತ್ತಿ ಹಿಡಿದಿತ್ತು. ಈ ಆದೇಶಕ್ಕೆ ಪ್ರಶ್ನಿಸಿ ಎಫ್‍ಹೆಚ್‍ಆರ್ ಎಐ ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಆದ್ರೆ ಅದು ತಿರಸ್ಕೃತವಾದ  ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು.

    ಲಿಗಲ್ ಮೆಟ್ರೋಲಜಿ ಕಾಯ್ದೆ ಏನು ಹೇಳುತ್ತೆ?
    ಪ್ಯಾಕೇಜ್ಡ್ ಉತ್ಪನ್ನಗಳನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಲೀಗಲ್ ಮೆಟ್ರೋಲಜಿ ಕಾಯ್ದೆ ಪ್ರಕಾರ ಅಪರಾಧ. ಯಾವುದೇ ವಸ್ತುವನ್ನು ಪೇಪರ್ ನಲ್ಲಿ  ಪ್ಯಾಕ್ ಮಾಡಿದ್ದರೂ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತದೆ. ಕಡ್ಡಾಯವಾಗಿ ಪೊಟ್ಟಣ ಸಾಮಗ್ರಿ ನಿಯಮಾವಳಿಗಳನ್ನು ಪಾಲಿಸಿರಬೇಕು. ವಸ್ತುಗಳ ದರ ಹಾಗೂ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಇದನ್ನು ಉಲ್ಲಂಘಿಸಿದರೆ ಮಾರಾಟಗಾರರ ಮೇಲೆ ಸ್ಥಳದಲ್ಲೇ ದಂಡ ವಿಧಿಸಲು ಅವಕಾಶವಿದೆ. ಕಾನೂನು ಮಾಪನಶಾಸ್ತ್ರ ಇಲಾಖೆ ವ್ಯಾಪ್ತಿಗೆ ಎಲ್ಲ ಅಂಗಡಿಗಳು, ಪೆಟ್ರೋಲ್ ಬಂಕ್, ಸೀಮೆಎಣ್ಣೆ ಮಾರಾಟಗಾರರು, ಬಟ್ಟೆ ಅಂಗಡಿಗಳು, ಪೊಟ್ಟಣ ತಯಾರಿಕಾ ಉದ್ಯಮಗಳು ಒಳಪಡುತ್ತದೆ.

    ದಂಡ ಎಷ್ಟು?
    ಯಾವುದೇ ಪ್ರೀ ಪ್ಯಾಕೇಜ್ಡ್ ಉತ್ಪನ್ನದ ಮೇಲೆ ನಮೂದಿಸಿರುವುದಕ್ಕೆ ಬದ್ಧವಾಗಿರದೆ ಅದನ್ನ ಮಾರಾಟ, ವಿತರಣೆ ಅಥವಾ ಡೆಲಿವರಿ ಮಾಡುವಾಗ ಸಿಕ್ಕಿಬಿದ್ದರೆ ಮೊದಲನೇ ಅಪರಾಧಕ್ಕಾಗಿ 25 ಸಾವಿರ ರೂ. ದಂಡ ಹಾಕುವ ಮೂಲಕ ಶಿಕ್ಷಿಸಲಾಗುತ್ತದೆ ಎಂದು ಲೀಗಲ್ ಮೆಟ್ರೊಲಜಿ ಕಾಯ್ದೆಯ ಸೆಕ್ಷನ್ 36 ಹೇಳುತ್ತದೆ. ಎರಡನೇ ಅಪರಾಧಕ್ಕೆ 50 ಸಾವಿರ ರೂ. ಹಾಗೂ ನಂತರದ ಅಪರಾಧಗಳಿಗೆ 1 ಲಕ್ಷ ರೂ ದಂಡ ಅಥವಾ 1 ವರ್ಷ ಜೈಲು ಶಿಕ್ಷೆ ಅಥವಾ ಎರಡೂ ಶಿಕ್ಷೆ ವಿಧಿಸಲಾಗುತ್ತದೆ.

    ಮಲ್ಟಿಪ್ಲೆಕ್ಸ್ ಹಾಗೂ ವಿಮಾನ ನಿಲ್ದಾಣ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಪ್ಯಾಕೇಜ್ಡ್ ನೀರಿನ ಬಾಟಲಿ ಹಾಗೂ ತಂಪು ಪಾನೀಯವನ್ನು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕಳೆದ ವರ್ಷ ಅಕ್ಟೋಬರ್ ನಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಈ ಹಿಂದೆ ಟ್ವೀಟ್ ಮಾಡಿದ್ದರು.