Tag: Rest

  • ಒಂದು ತಿಂಗಳು ವಿಶ್ರಾಂತಿ ಪಡೆಯಲಿದ್ದಾರೆ ನಟ ದರ್ಶನ್

    ಒಂದು ತಿಂಗಳು ವಿಶ್ರಾಂತಿ ಪಡೆಯಲಿದ್ದಾರೆ ನಟ ದರ್ಶನ್

    ಟ ದರ್ಶನ್ (Darshan) ಅವರಿಗೆ ಡೆವಿಲ್ (Devil Film) ಸಿನಿಮಾದ ಚಿತ್ರೀಕರಣ ವೇಳೆ ಕೈಗೆ ಪೆಟ್ಟಾಗಿತ್ತು. ಮೊನ್ನೆಯಷ್ಟೇ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರ ಕೈಗೆ ಸರ್ಜರಿ (Hand Surgery) ಮಾಡಲಾಗಿತ್ತು. ಚಿಕಿತ್ಸೆಯ ನಂತರ ವೈದ್ಯರು ಅವರಿಗೆ ಒಂದು ತಿಂಗಳ ವಿಶ್ರಾಂತಿಗೆ (Rest) ಸೂಚಿಸಿದ್ದಾರಂತೆ.

    ಶಸ್ತ್ರ ಚಿಕಿತ್ಸೆಯ ನಂತರ ಮತ್ತೆ ಡೆವಿಲ್ ಸಿನಿಮಾದ ಶೂಟಿಂಗ್ ನಲ್ಲಿ ದರ್ಶನ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕಡ್ಡಾಯವಾಗಿ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದರಿಂದ ಅದನ್ನು ಅವರು ಪಾಲಿಸಲೇಬೇಕಿದೆ ಎಂದು ಅವರು ಆಪ್ತರು ತಿಳಿಸಿದ್ದಾರೆ. ಹಾಗಾಗಿ ಡೆವಿಲ್ ಸಿನಿಮಾದ ಶೂಟಿಂಗ್ ಮುಂದಕ್ಕೆ ಹೋಗುವುದು ಅನಿವಾರ್ಯವಾಗಿದೆ.

    ಏ.4ರಂದು ಮಂಡ್ಯದಲ್ಲಿ ನಡೆದ ಸುಮಲತಾ ಅವರ ಬಹಿರಂಗ ಸಭೆಯಲ್ಲಿ ದರ್ಶನ್ ಕೂಡ ಭಾಗಿಯಾಗಿದ್ದರು. ಈ ವೇಳೆ, ದರ್ಶನ್ ಅವರೇ ತಾವು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿದೆ ಎಂದು ಹೇಳಿಕೊಂಡಿದ್ದರು. ಸಹಜವಾಗಿಯೇ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಈಗ ಯಶಸ್ವಿಯಾಗಿ ಆಪರೇಷನ್ ಮುಗಿದಿದೆ.

     

    ‘ಡೆವಿಲ್’ ಸಿನಿಮಾದ ಸಾಹಸ ಸನ್ನಿವೇಶ ಶೂಟಿಂಗ್ ಸಮಯದಲ್ಲಿ ಅವರ ಕೈಗೆ ಏಟು ಬಿದ್ದಿತ್ತು. ಕೈಗೆ ಬೆಲ್ಟ್ ಕಟ್ಟಿಕೊಂಡು ಈವರೆಗೂ ಓಡಾಡುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ದರ್ಶನ್ ಆಪರೇಷನ್‌  ಮಾಡಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ನಟ ವಿಶ್ರಾಂತಿ ಪಡೆಯುತ್ತಿರುವ ವಿಚಾರ ಕೇಳಿ ಅಭಿಮಾನಿಗಳಿಗೂ ಖುಷಿಯಾಗಿದೆ.

  • ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದ ಆತಂಕ

    ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು: ಅಭಿಮಾನಿಗಳಿಗೆ ಹೆಚ್ಚಿದ ಆತಂಕ

    ಭಾರತೀಯ ಸಿನಿಮಾ ರಂಗದ ಹೆಸರಾಂತ ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಚೆನ್ನೈನ ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ದಿನಗಳಿಂದ ಅವರು ತೀರ್ವ ಜ್ವರದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಜ್ವರ ಕಡಿಮೆ ಆಗದ ಕಾರಣಕ್ಕಾಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

    ನೆಚ್ಚಿನ ನಟ ಕಮಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿತ್ತು. ಕಮಲ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಸದ್ಯ ಕಮಲ್ ಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್ ಆಗಬಹುದು ಎನ್ನಲಾಗುತ್ತಿದೆ. ಇದೀಗ ಜ್ವರ ಕೂಡ ಕಡಿಮೆ ಆಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂಬ ಓದಿ:51ನೇ ವಯಸ್ಸಿನಲ್ಲಿ ಮೂರನೇ ಮಗುವಿನ ನಿರೀಕ್ಷೆಯಲ್ಲಿರುವ ಮನೋಜ್ ತಿವಾರಿ

    ದಣಿವರಿಯದ ಕೆಲಸವೇ ಜ್ವರಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದ ಸಿನಿಮಾ, ರಿಯಾಲಿಟಿ ಶೋ ಸೇರಿದಂತೆ ಸಾಕಷ್ಟು ಕೆಲಸಗಳಲ್ಲಿ ಕಮಲ್ ಬ್ಯುಸಿಯಾಗಿದ್ದಾರೆ. ಇಂಡಿಯನ್ 2 ಸಿನಿಮಾದ ಶೂಟಿಂಗ್ ನಲ್ಲಿ ನಿರಂತರವಾಗಿ ಕಮಲ್ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಈಗ ಕಮಲ್ ಅನಿವಾರ್ಯವಾಗಿ ರೆಸ್ಟ್ ತಗೆದುಕೊಳ್ಳಬೇಕಾಗಿದ್ದು, ಸದ್ಯ ವಿಶ್ರಾಂತಿಯಲ್ಲಿದ್ದಾರೆ ಕಮಲ್.

    Live Tv
    [brid partner=56869869 player=32851 video=960834 autoplay=true]

  • ಭಾರತ್ ಜೋಡೋ ಯಾತ್ರೆ – ರಾಹುಲ್ ಗಾಂಧಿ ವಿಶ್ರಾಂತಿಗೆ ವಾಹನದಲ್ಲಿ ಬೆಡ್, ಎಸಿ ವ್ಯವಸ್ಥೆ

    ಭಾರತ್ ಜೋಡೋ ಯಾತ್ರೆ – ರಾಹುಲ್ ಗಾಂಧಿ ವಿಶ್ರಾಂತಿಗೆ ವಾಹನದಲ್ಲಿ ಬೆಡ್, ಎಸಿ ವ್ಯವಸ್ಥೆ

    ನವದೆಹಲಿ: ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯನ್ನು ಈಗಾಗಲೇ ಪ್ರಾರಂಭಿಸಿದೆ. ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿರುವ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೊಂದಿಗೆ ಸುಮಾರು 230 ಜನರು ಪಾಲ್ಗೊಂಡಿದ್ದಾರೆ. ಯಾತ್ರೆಯಲ್ಲಿ ರಾಹುಲ್ ಗಾಂಧಿ ವಿಶ್ರಾಂತಿಯನ್ನು ಎಲ್ಲಿ ತೆಗೆದುಕೊಳ್ಳುತ್ತಾರೆ ಎಂಬ ಮಾಹಿತಿ ಇಲ್ಲಿದೆ.

    ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಗೆ ಸುಮಾರು 60 ಟ್ರಕ್‌ಗಳನ್ನು ಗಣ್ಯರ ವಿಶ್ರಾಂತಿಗಾಗಿಯೇ ಸಜ್ಜುಗೊಳಿಸಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೂ ಕೂಡಾ ಇವುಗಳಲ್ಲೇ ಒಂದು ಟ್ರಕ್‌ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ ಎನ್ನಲಾಗಿದ್ದು, ಅದರಲ್ಲಿ ಎಲ್ಲಾ ರೀತಿಯ ಅನುಕೂಲಕರ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿದುಬಂದಿದೆ.

    ಈ ಬಗ್ಗೆ ಮಾಹಿತಿ ನೀಡಿದ ಪಕ್ಷದ ನಾಯಕ ಜೈರಾಮ್ ರಮೇಶ್, ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗಿನ 3,570 ಕಿ.ಮೀ ಸಂಪೂರ್ಣ ದೂರವನ್ನು ರಾಹುಲ್ ಗಾಂಧಿ ಸೇರಿದಂತೆ 119 ಯಾತ್ರಿಗಳು ಕ್ರಮಿಸಲಿದ್ದಾರೆ. ಈ ವೇಳೆ ವಿಶ್ರಾಂತಿಗಾಗಿ ಅತಿಥಿ ಯಾತ್ರಿಗಳು ಸುಸಜ್ಜಿತ ಕಂಟೈನರ್‌ಗಳಲ್ಲಿ ಉಳಿಯಲಿದ್ದಾರೆ ಎಂದಿದ್ದಾರೆ.

    ನಾವು ನಿನ್ನೆಯಿಂದ ಕಂಟೈನರ್‌ಗಳಲ್ಲಿ ಉಳಿದುಕೊಂಡಿದ್ದೇವೆ. ಒಟ್ಟು 60 ಕಂಟೈನರ್‌ಗಳಿದ್ದು, ಇದರಲ್ಲಿ ಸುಮಾರು 230 ಜನರು ತಂಗುತ್ತಿದ್ದಾರೆ. ಕೆಲವು 1 ಹಾಸಿಗೆ, ಕೆಲವು 2 ಹಾಸಿಗೆಗಳು, ಕೆಲವು 4 ಹಾಸಿಗೆಗಳು ಮತ್ತು ಕೆಲವು 12 ಹಾಸಿಗೆಯ ಕಂಟೈನರ್‌ಗಳು ಇವೆ ಎಂದು ತಿಳಿಸಿದ್ದಾರೆ. ಇದ್ನನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಧರಿಸಿದ್ದ 41 ಸಾವಿರ ರೂ.ನ ಟೀಶರ್ಟ್ ಕುರಿತು ಬಿಜೆಪಿ ವ್ಯಂಗ್ಯ

    ವರದಿಗಳ ಪ್ರಕಾರ ರಾಹುಲ್ ಗಾಂಧಿ ತಮ್ಮ ಯಾತ್ರೆಯಲ್ಲಿ ಖಾಸಗಿ ಬಳಕೆಗೆ ಒಂದು ಟ್ರಕ್ ಅನ್ನು ಹೊಂದಿದ್ದಾರೆ. ಅದರಲ್ಲಿ 2 ಹಾಸಿಗೆಯನ್ನು ಇರಿಸಲಾಗಿದ್ದು, ಹವಾನಿಯಂತ್ರಿತ ವ್ಯವಸ್ಥೆಯೂ ಇದೆ ಎನ್ನಲಾಗಿದೆ.

    ರಾಹುಲ್ ಗಾಂಧಿಯನ್ನು ಹೊರತುಪಡಿಸಿ ಇತರ ನಾಯಕರುಗಳಿಗೆ 6 ಅಥವಾ 12 ಹಾಸಿಗೆಗಳಿರುವ ಟ್ರಕ್‌ಗಳನ್ನು ನೀಡಲಾಗಿದೆ. ಎಲ್ಲಾ ಟ್ರಕ್‌ಗಳಲ್ಲೂ ಹವಾನಿಯಂತ್ರಿತ ವ್ಯವಸ್ಥೆ ಇಲ್ಲ ಎನ್ನಲಾಗಿದ್ದರೂ ಹೆಚ್ಚಿನವುಗಳಲ್ಲಿ ಶೌಚಾಲಯಗಳನ್ನು ಜೋಡಿಸಲಾಗಿದೆ ಎನ್ನಲಾಗಿದೆ.

    ಭಾರತ್ ಜೋಡೋ ಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದ ಕಡೆಗೆ ಸಾಗಲಿದ್ದು, 3,500 ಕಿ.ಮೀ ದೂರವನ್ನು ಕ್ರಮಿಸಲಿದೆ. 150 ದಿನಗಳಲ್ಲಿ ಇದು 12 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳನ್ನು ಹಾದುಹೋಗಲಿದೆ. ಇದ್ನನೂ ಓದಿ: ನಾನೇನು ಮಾಡ್ಬೇಕು ಎಂಬುದನ್ನು ಕ್ಲಿಯರ್ ಆಗಿ ನಿರ್ಧರಿಸಿದ್ದೇನೆ: ರಾಹುಲ್ ಗಾಂಧಿ

    Live Tv
    [brid partner=56869869 player=32851 video=960834 autoplay=true]

  • ಮಾಜಿ ಸಿಎಂಗೆ ಮತ್ತೆ ಕಣ್ಣಿನ ಸೋಂಕು – ಪ್ರವಾಸ ಮೊಟಕುಗೊಳಿಸಿ ಬೆಂಗ್ಳೂರಿಗೆ ವಾಪಸ್

    ಮಾಜಿ ಸಿಎಂಗೆ ಮತ್ತೆ ಕಣ್ಣಿನ ಸೋಂಕು – ಪ್ರವಾಸ ಮೊಟಕುಗೊಳಿಸಿ ಬೆಂಗ್ಳೂರಿಗೆ ವಾಪಸ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಮೂರು ದಿನಗಳಿಂದ ಸ್ವಕ್ಷೇತ್ರ ಬದಾಮಿಯಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಆದರೆ ಅವರ ಕಣ್ಣಿಗೆ ಮತ್ತೆ ಸೋಂಕು ತಗುಲಿ ಪ್ರವಾಸವನ್ನು ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

    ಸಿದ್ದರಾಮಯ್ಯ ಅವರಿಗೆ ಪ್ರವಾಸದ ಹಿನ್ನೆಲೆಯಲ್ಲಿ ಕಣ್ಣಿಗೆ ಸೋಂಕು ತಗುಲಿ ಬದಾಮಿಯಿಂದ ವಾಪಸ್ ಬಂದಿದ್ದಾರೆ. ಬುಧವಾರ ಮಧ್ಯರಾತ್ರಿ 12 ಗಂಟೆಗೆ ವೈದ್ಯರು ಕಣ್ಣು ಪರೀಕ್ಷೆ ಮಾಡಿದ್ದಾರೆ. ಆಗ ಎರಡು ದಿನಗಳ ಕಾಲ ಓಡಾಡದಂತೆ ವೈದ್ಯರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಪ್ರವಾಸವನ್ನು ಸಿದ್ದರಾಮಯ್ಯ ಅವರು ರದ್ದು ಮಾಡಿದ್ದಾರೆ.

    ಬುಧವಾರ ಬದಾಮಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಪ್ರವಾಹದಿಂದ ಅಂದಾಜು 1 ಲಕ್ಷ ಕೋಟಿ ರೂ. ನಷ್ಟವಾಗಿದೆ. ಆದರೆ ಸದ್ಯಕ್ಕೆ ನಾವು ಪ್ರವಾಹ ಪರಿಹಾರಕ್ಕೆ ಐದು ಸಾವಿರ ಕೋಟಿ ಕೊಡಿ ಎಂದು ಕೇಳಿದ್ದೇವೆ. ಆ ಮೇಲೆ ವರದಿ ಆಧಾರದ ಮೇಲೆ ಹೆಚ್ಚಿನ ಪರಿಹಾರ ಕೊಡಲಿ. ಕೇಂದ್ರ ಸರ್ಕಾರ ಕೊಡದಿದ್ದರೆ ರಾಜ್ಯ ಸರ್ಕಾರವಾದರೂ ಕೊಡಲಿ. ಪ್ರಧಾನಿ ಜೊತೆ ಸಿಎಂ ಯಡಿಯೂರಪ್ಪ ಅವರಿಗೆ ಮಾತನಾಡಲು ಧೈರ್ಯವಿಲ್ಲದಿದ್ದರೆ ನಮ್ಮನಾದರೂ ಕರೆದುಕೊಂಡು ಹೋಗಲಿ, ನಾವಾದರೂ ಮಾತನಾಡುತ್ತೇವೆ. ಜನರು ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸದೇ ನಿರ್ಲಕ್ಷ್ಯ ಮಾಡಿದೆ, ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಬಿಜೆಪಿ ಸರ್ಕಾರ ಪ್ರವಾಹ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ದೂರಿದ್ದರು.

  • ವಿಶ್ವಕಪ್‍ಗಾಗಿ ‘ನೋ ರೆಸ್ಟ್’ ಎಂದ ಹಾರ್ದಿಕ್ ಪಾಂಡ್ಯ

    ವಿಶ್ವಕಪ್‍ಗಾಗಿ ‘ನೋ ರೆಸ್ಟ್’ ಎಂದ ಹಾರ್ದಿಕ್ ಪಾಂಡ್ಯ

    ಮುಂಬೈ: ದೇಶದ ಪರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಬೇಕೆಂಬುದು ಪ್ರತಿಯೊಬ್ಬ ಕ್ರಿಕೆಟ್ ಆಟಗಾರರನ ಜೀವನದ ಗುರಿಯಾಗಿರುತ್ತದೆ. ಸದ್ಯ ವಿಶ್ವಕಪ್ ಆಡುವ ಅವಕಾಶವನ್ನು ಪಡೆದಿರುವ ಟೀಂ ಇಂಡಿಯಾ ಆಲೌಂಡರ್ ಹಾರ್ದಿಕ್ ಪಾಂಡ್ಯ ಟೂರ್ನಿ ಇರುವುದರಿಂದ ವಿಶ್ರಾಂತಿ ಪಡೆಯುವುದಿಲ್ಲ ಎಂದಿದ್ದಾರೆ.

    ವಿಶ್ವಕಪ್ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯ ಬಳಿಕ ಆಟಗಾರರಿಗೆ ಯಾವುದೇ ತರಬೇತಿಯನ್ನ ಆರಂಭಿಸದ ಬಿಸಿಸಿಐ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿತ್ತು. ಈ ಹಿನ್ನೆಲೆ ನಾಯಕ ವಿರಾಟ್ ಕೊಹ್ಲಿ, ಉಪ ನಾಯಕ ರೋಹಿತ್ ಶರ್ಮಾ ಕುಟುಂಬದೊಂದಿಗೆ ಸಮಯ ಪ್ರವಾಸವನ್ನ ಕೈಗೊಂಡಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಮಾತ್ರ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಾ ನೋ ರೆಸ್ಟ್ ಎಂದಿದ್ದಾರೆ.

    ತಾವು ವರ್ಕೌಟ್ ಮಾಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಹಾರ್ದಿಕ್ ವಿಶ್ರಾಂತಿ ಪಡೆಯುವುದಕ್ಕಿಂತ ಫಿಟ್ನೆಸ್ ಮುಖ್ಯ ಎಂದಿದ್ದಾರೆ. ಹಾರ್ದಿಕ್ ಪೋಸ್ಟ್‍ಗೆ ನೆಟ್ಟಿಗರು ಫಿದಾ ಆಗಿದ್ದು, ವಿಶ್ವಕಪ್‍ಗೆ ಶುಭಕೋರಿ ಪ್ರತಿಕ್ರಿಯೆ ನೀಡಿದ್ದಾರೆ.

    ಕಾಫಿ ವಿಥ್ ಕರಣ್ ಶೋ ವಿವಾದ ಬಳಿಕ ಹಾರ್ದಿಕ್ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಬಂದಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹಾರ್ದಿಕ್ ಮತ್ತಷ್ಟು ಫಿಟ್ ಆಗಲು ಪ್ರಯತ್ನಿಸುತ್ತಿದ್ದಾರೆ. ಈ ಬಾರಿಯ ವಿಶ್ವಕಪ್ ಗೆಲ್ಲುವ ಫೆವರಿಟ್ ತಂಡವಾಗಿ ಕಣಕ್ಕೆ ಇಳಿಯುತ್ತಿರುವ ಟೀಂ ಇಂಡಿಯಾ ಮೇ 22 ರಂದು ಇಂಗ್ಲೆಂಡ್‍ಗೆ ಪ್ರಯಾಣಿಸುವ ಸಾಧ್ಯತೆ ಇದೆ.

  • ಸಿಎಂ ರೆಸಾರ್ಟ್ ವಾಸ್ತವ್ಯ ಬಗ್ಗೆ ಸಾ.ರಾ ಮಹೇಶ್ ಸ್ಪಷ್ಟನೆ

    ಸಿಎಂ ರೆಸಾರ್ಟ್ ವಾಸ್ತವ್ಯ ಬಗ್ಗೆ ಸಾ.ರಾ ಮಹೇಶ್ ಸ್ಪಷ್ಟನೆ

    ಮಡಿಕೇರಿ: ಭೀಕರ ಬರಗಾಲದ ನಡುವೆಯೇ ಸಿಎಂ ಕುಮಾರಸ್ವಾಮಿ ಮಡಿಕೇರಿಯಲ್ಲಿರುವ ಇಬ್ಬನಿ ರೆಸಾರ್ಟ್ ಗೆ ಹೋಗಿದ್ಯಾಕೆ? ಈ ಬಗ್ಗೆ ಜೆಡಿಎಸ್ ಸಚಿವರು ತಮ್ಮದೇ ವ್ಯಾಖ್ಯಾನ ಕೊಡುತ್ತಿದ್ದಾರೆ.

    ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ಸಾರಾ ಮಹೇಶ್, ಮುಖ್ಯಮಂತ್ರಿ ಇರಬಹುದು, ಸಚಿವರೇ ಇರಬಹುದು. ಎಲ್ಲರಿಗೂ ತಮ್ಮದೇ ಆದ ಖಾಸಗಿ ಜೀವನ ಇರುತ್ತದೆ. ಒಮ್ಮೊಮ್ಮೆ ಯಂತ್ರಗಳು ಕೂಡಾ ಕೆಟ್ಟು ಹೋಗುತ್ತವೆ. ಅವಕ್ಕೂ ರೆಸ್ಟ್ ಬೇಕಾಗುತ್ತದೆ. ಹೀಗಾಗಿ ನಮಗೂ ವಿಶ್ರಾಂತಿ ಬೇಕಾಗುತ್ತದೆ. ಅದಕ್ಕಾಗಿ ಸಿಎಂ ಕುಮಾರಸ್ವಾಮಿ ಇಲ್ಲಿಗೆ ರೆಸ್ಟ್ ಗಾಗಿ ಬಂದಿದ್ದಾರೆ ಅಷ್ಟೆ ಎಂದರು.

    ಅವರ ಸೂಚನೆ ಮೇರೆಗೆ ಇಂದು ಮಡಿಕೇರಿಯಲ್ಲಿ ಸಭೆ ನಡೆಸುತ್ತಿದ್ದೇನೆ. ಮಡಿಕೇರಿ ವಾಸ್ತವ್ಯಕ್ಕೆ ಸುರಕ್ಷಿತ ಅಂತ ರಾಜ್ಯದ ಜನತೆಗೆ ತಿಳಿಸಲು ಮಾಜಿ ಸಿಎಂ ಮತ್ತು ಹಾಲಿ ಸಿಎಂ ಒಂದೇ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಾಳೆಯಿಂದ ಎಂದಿನಂತೆ ಸರ್ಕಾರಿ ಕಾರ್ಯಕ್ರಮಗಳು ಶುರುವಾಗುತ್ತವೆ ಎಂದು ಸಾರಾ ಮಹೇಶ್ ತಿಳಿಸಿದ್ದಾರೆ.

    23ರ ನಂತರ ರಾಜ್ಯದಲ್ಲಿ ಗೇಮ್‍ಪ್ಲಾನ್ ಆಗಲಿದೆ ಎನ್ನೊ ಬಿಎಸ್‍ವೈ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಸರ್ಕಾರ ರಚಿಸಿದ ದಿನದಿಂದಲೂ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಾ ಬರುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಯಾವುದೇ ಬದಲಾವಣೆ ಆಗಲ್ಲ ಎಂದು ಬಿಎಸ್‍ವೈ ಹೇಳಿಕೆಗೆ ತಿರುಗೇಟು ನೀಡಿದರು.

  • ಮಡಿಕೇರಿ ರೆಸಾರ್ಟಿನಲ್ಲಿ ಪುತ್ರನ ಜೊತೆ ಸಿದ್ದರಾಮಯ್ಯ ವಿಶ್ರಾಂತಿ!

    ಮಡಿಕೇರಿ ರೆಸಾರ್ಟಿನಲ್ಲಿ ಪುತ್ರನ ಜೊತೆ ಸಿದ್ದರಾಮಯ್ಯ ವಿಶ್ರಾಂತಿ!

    ಮಡಿಕೇರಿ: ಲೋಕಸಭಾ ಚುನಾವಣೆಯ ಬಳಿಕ ಸಿಎಂ ಉಡುಪಿಯಲ್ಲಿ ವಿಶ್ರಾಂತಿ ಪಡೆದಿದ್ದರೆ ಮಾಜಿ ಸಿಎಂ ಸಿದ್ದರಾಮಯ್ಯ ಮಡಿಕೇರಿ ಸಮೀಪದ ರೆಸಾರ್ಟಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

    ಮಡಿಕೇರಿ ನಗರದಿಂದ ಸ್ವಲ್ಪ ದೂರದಲ್ಲಿ ಮೈಸೂರು ರಸ್ತೆಯಲ್ಲಿರುವ ಇಬ್ಬನಿ ರೆಸಾರ್ಟಿಗೆ ಭಾನುವಾರ ಸಂಜೆ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಜೊತೆ ಆಗಮಿಸಿದ್ದಾರೆ.

    ಭಾನುವಾರ ಸಂಜೆ ಸಂಜೆ 5:30ಕ್ಕೆ ರೆಸಾರ್ಟಿಗೆ ಎಂಟ್ರಿ ಕೊಟ್ಟ ಸಿದ್ದರಾಮಯ್ಯ ಮಂಗಳವಾರದ ಬೆಳಗ್ಗೆಯವರೆಗೂ ರೆಸಾರ್ಟಿನಲ್ಲಿ ಇರಲಿದ್ದಾರೆ. ಇಬ್ಬನಿ ರೆಸಾರ್ಟಿಗೆ ಸಂಬಂಧಿಸಿದವರ ಹೆಸರಿನಲ್ಲಿ ಇಬ್ಬರು ಮಾತ್ರ ಎಂಟ್ರಿ ಎಂದು ದಾಖಲಾಗಿದ್ದರೂ ಎರಡಕ್ಕಿಂತ ಹೆಚ್ಚು ಜನ ಇರುವುದು ತಿಳಿದು ಬಂದಿದೆ.

    ಗೌಪ್ಯವಾಗಿ ಸಿದ್ದರಾಮಯ್ಯ ಹಾಗೂ ಅವರ ಸಂಗಡಿಗರು ರೂಮ್ ಬುಕ್ ಮಾಡಿದ್ದು, ಎಂಟ್ರಿ ಆಗಿರುವ ಮಾಹಿತಿ ಹೊರತು ಪಡಿಸಿದರೆ ಮತ್ತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಸಿದ್ದರಾಮಯ್ಯನವರ ತಂಡ ಚೆಕ್ ಔಟ್ ಆಗಲಿದೆ.

  • ಚುನಾವಣಾ ಪ್ರಚಾರ ಮುಗಿಸಿದ ಸಿಎಂ – ಉಡುಪಿ ಹೆಲ್ತ್ ರೆಸಾರ್ಟಿನಲ್ಲಿ ರಿಲಾಕ್ಸ್

    ಚುನಾವಣಾ ಪ್ರಚಾರ ಮುಗಿಸಿದ ಸಿಎಂ – ಉಡುಪಿ ಹೆಲ್ತ್ ರೆಸಾರ್ಟಿನಲ್ಲಿ ರಿಲಾಕ್ಸ್

    ಉಡುಪಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಸಿಎಂ ಕುಮಾರಸ್ವಾಮಿ ಇಂದು ಅಂತಿಮ ಹಂತದ ಚುನಾವಣಾ ಕಾರ್ಯ ಮುಗಿಸಿ ವಿಶ್ರಾಂತಿ ಪಡೆಯಲು ತೆರಳಿದ್ದಾರೆ.

    ಉಡುಪಿಯ ಹೆಲ್ತ್ ರೆಸಾರ್ಟ್ ಆಗಿರುವ ಕಾಪುವಿನ ಮೂಳೂರುನಲ್ಲಿರುವ ಸಾಯಿರಾಧಾ ರೆಸಾರ್ಟಿನಲ್ಲಿ ಸಿಎಂ ಎಚ್‍ಡಿಕೆ ಮೂರು ದಿನ ವಿಶ್ರಾಂತಿ ಪಡೆಯಲಿದ್ದಾರೆ. ಈ ಅವಧಿಯಲ್ಲಿ ಪಂಚಕರ್ಮ ಚಿಕಿತ್ಸೆ, ಧ್ಯಾನ, ಯೋಗದಲ್ಲಿ ಸಿಎಂ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಎರಡನೇ ಹಂತದ ಮತದಾನ ವೇಳೆ ಮಂಡ್ಯ ಕ್ಷೇತ್ರ ಸೇರಿದಂತೆ ಹಲವು ಅಭ್ಯರ್ಥಿಗಳ ಪರ ಸಿಎಂ ಕುಮಾರಸ್ವಾಮಿ ಅವರು ಪ್ರಚಾರ ನಡೆಸಿದ್ದರು. ಅಲ್ಲದೇ 3ನೇ ಹಂತದ ಮತದಾನ ಏ.23 ರಂದು ನಡೆಯುವುದಿಂದ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಈ ಅವಧಿಯಲ್ಲಿ ಸಿಎಂ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಸೇರಿದಂತೆ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ನಿರಂತರ ಪ್ರಚಾರದಲ್ಲಿ ತೊಡಗಿದ್ದ ಪರಿಣಾಮ ಸಿಎಂ ಸದ್ಯ ವಿಶ್ರಾಂತಿಯ ಮೊರೆ ಹೋಗಿದ್ದಾರೆ.

  • ಪ್ರಚಾರಕ್ಕೆ ಬ್ರೇಕ್- ಗಾಯಾಳು ಸ್ನೇಹಿತನನ್ನು ಭೇಟಿ ಮಾಡಿದ್ರು ದರ್ಶನ್

    ಪ್ರಚಾರಕ್ಕೆ ಬ್ರೇಕ್- ಗಾಯಾಳು ಸ್ನೇಹಿತನನ್ನು ಭೇಟಿ ಮಾಡಿದ್ರು ದರ್ಶನ್

    ಬೆಂಗಳೂರು: ನಟ ದರ್ಶನ್ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಪರ ಬಿರುಸಿನಿಂದ ಪ್ರಚಾರ ಮಾಡುತ್ತಿದ್ದಾರೆ. ಈ ಮಧ್ಯೆ ಪ್ರಚಾರಕ್ಕೆ ಸ್ವಲ್ಪ ಬ್ರೇಕ್ ತೆಗೆದುಕೊಂಡು ತಮ್ಮ ಸ್ನೇಹಿತ ವಿನೋದ್ ಪ್ರಭಾಕರ್ ಅವರನ್ನು ಭೇಟಿ ಮಾಡಿದ್ದಾರೆ.

    ದರ್ಶನ್ ಅವರು ಮೂರು ದಿನಗಳ ಕಾಲ ಮಂಡ್ಯದಲ್ಲಿ ತಮ್ಮ ಪ್ರಚಾರವನ್ನು ರದ್ದು ಮಾಡಿ ಬೆಂಗಳೂರಿಗೆ ಬಂದಿದ್ದಾರೆ. ಸ್ನೇಹಿತ ವಿನೋದ್ ಪ್ರಭಾಕರ್ ಚಿತ್ರೀಕರಣದ ವೇಳೆ ಬಿದ್ದು ಗಾಯಗೊಂಡಿದ್ದರು. ಈ ವಿಚಾರ ತಿಳಿದ ದರ್ಶನ್, ತಕ್ಷಣ ಹೋಗಿ ಗೆಳೆಯನ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ ವೈದ್ಯರ ಸೂಚನೆಯಂತೆ ವಿಶ್ರಾಂತಿ ಪಡೆಯುವಂತೆ ಸಲಹೆ ಕೊಟ್ಟಿದ್ದಾರೆ.

    ನಟ ವಿನೋದ್ ಪ್ರಭಾಕರ್ ಅವರು ‘ವರದ’ ಸಿನಿಮಾದಲ್ಲಿ ಕೆಲವು ಸಾಹಸ ದೃಶ್ಯಗಳ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಓಡಿ ಬಂದು ಜಂಪ್ ಮಾಡುವಾಗ ಬಿದ್ದು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಕಾಲಿನ ಮೂಳೆ ಮುರಿದಿದ್ದರಿಂದ 5 ವಾರಗಳ ಕಾಲ ಬೆಡ್‍ರೆಸ್ಟ್ ನಲ್ಲಿ ಇರುವಂತೆ ಸೂಚಿಸಿದ್ದಾರೆ. ಸದ್ಯಕ್ಕೆ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.

    ವೈದ್ಯರು ವಿಶಾಂತ್ರಿ ಪಡೆಯುವಂತೆ ಸೂಚಿಸಿದ್ದರೂ ತಮ್ಮಿಂದ ಚಿತ್ರತಂಡಕ್ಕೆ ತೊಂದರೆಯಾಗಬಾರದೆಂದು ಆ್ಯಕ್ಷನ್ ಶೂಟಿಂಗ್ ಬಿಟ್ಟು ಮಾತುಕತೆಯ ಚಿತ್ರೀಕರಣಕ್ಕೆ ಭಾಗಿಯಾಗಿದ್ದರು.

  • ರಾಧಿಕಾ ಕೆಜಿಎಫ್ ನೋಡಿಲ್ಲ – ರಾಕಿ ಭಾಯ್ ಸ್ಪಷ್ಟನೆ

    ರಾಧಿಕಾ ಕೆಜಿಎಫ್ ನೋಡಿಲ್ಲ – ರಾಕಿ ಭಾಯ್ ಸ್ಪಷ್ಟನೆ

    ಬೆಂಗಳೂರು: ಭಾರತದಾದ್ಯಂತ ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಸಿನಿಮಾವನ್ನು ನೋಡಿ ಜನರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಆದರೆ ಯಶ್ ಪತ್ನಿ ರಾಧಿಕಾ ಪಂಡಿತ್ ಇನ್ನೂ ಕೆಜೆಎಫ್ ಸಿನಿಮಾವನ್ನು ನೋಡಿಲ್ಲ.

    ಹೌದು.. ನಟಿ ರಾಧಿಕಾ ಪಂಡಿತ್ ಇನ್ನೂ ಕೆಜಿಎಫ್ ಸಿನಿಮಾವನ್ನು ನೋಡಿಲ್ಲ. ಈ ಬಗ್ಗೆ ಯಶ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಕೆಜಿಎಫ್ ಸಿನಿಮಾವನ್ನು ಹೊಸ ಸೌಂಡ್‍ನಲ್ಲಿ ನೋಡುವುದಕ್ಕೆ ಓರಾಯನ್ ಮಾಲ್‍ ಗೆ ಹೋಗಿದ್ದರು. ಈ ವೇಳೆ ಅಭಿಮಾನಿಗಳ ಜೊತೆ ಸಿನಿಮಾ ನೋಡಿದ ಯಶ್, ರಾಧಿಕಾ ಪಂಡಿತ್ ಇನ್ನೂ ಸಿನಿಮಾ ನೋಡಿಲ್ಲಾ ಎಂದು ಹೇಳಿದ್ದಾರೆ. ಇದನ್ನೂ ಓದಿ: 150 ಕೋಟಿಯ ಕ್ಲಬ್ ಸೇರಿ ದಾಖಲೆ ಬರೆದ ಕೆಜಿಎಫ್!

    ರಾಧಿಕಾ ಅವರಿಗೂ ಸಿನಿಮಾ ನೋಡಬೇಕೆಂಬ ಆಸೆ ಇದೆ. ಆದರೆ ನೋಡಲು ಸಾಧ್ಯವಾಗಿಲ್ಲ. ಎಲ್ಲರೂ ಇಷ್ಟೊಂದು ಇಷ್ಟ ಪಡುತ್ತಿದ್ದಾರೆ. ನಾನು ಸಿನಿಮಾ ನೋಡಲೇಬೇಕು ಎಂದು ಪ್ರತಿದಿನ ಕೇಳುತ್ತಿದ್ದಾರೆ. ಆದರೆ ರಾಧಿಕಾ ಇನ್ನೂ ಸ್ವಲ್ಪ ದಿನ ಕಾಯಬೇಕಾಗುತ್ತದೆ. ಯಾಕೆಂದರೆ ವೈದ್ಯರು ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು ಎಂದು ಹೇಳಿದ್ದಾರೆ. ಹಾಗಾಗಿ ಸದ್ಯಕ್ಕೆ ರಾಧಿಕಾ ಸಿನಿಮಾ ನೋಡಲು ಆಗುವುದಿಲ್ಲ ಎಂದು ಯಶ್ ಅಭಿಮಾನಿಗಳ ಬಳಿ ಹೇಳಿದ್ದಾರೆ.

    ರಾಧಿಕಾ ಅವರು ಡಿಸೆಂಬರ್ 2 ಭಾನುವಾರದಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯಕ್ಕೆ ರಾಧಿಕಾ ಅವರು ಮಗಳ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಮಗಳ ಜೊತೆ ಹೊಸ ಜಗತ್ತಿನಲ್ಲಿ ಹೊಸ ಅನುಭವಗಳನ್ನ ಪಡೆಯುತ್ತಿದ್ದಾರೆ.

    ರಾಧಿಕಾಗೆ ಡಾಕ್ಟರ್ ರೆಸ್ಟ್ ಮಾಡಲು ಸೂಚಿಸಿದ್ದಾರೆ. ಆದರೂ ನಾನು ಸಿನಿಮಾ ನೋಡಬೇಕು ಎಂದು ಯಶ್ ಬಳಿ ತುಂಬಾ ಸಾರಿ ಹೇಳಿದ್ದಾರಂತೆ. ಆದರೆ ಡಾಕ್ಟರ್ ಸದ್ಯಕ್ಕೆ ಹೊರಗಡೆ ಹೋಗೋದು ಬೇಡ ಅಂತ ಕೆಜಿಎಫ್ ವೀಕ್ಷಣೆಗೆ ಬ್ರೇಕ್ ಹಾಕಿದ್ದಾರೆ. ಸದ್ಯದಲ್ಲೇ ತಾಯಿ, ಮಗು ಇಬ್ಬರು ಕೆಜಿಎಫ್ ಸಿನಿಮಾವನ್ನು ವೀಕ್ಷಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv