Tag: Respect

  • ಭಾರತದ ಮೊದಲ ಮಹಿಳಾ ಶಾಸಕಿ ಡಾ. ಮುತ್ತುಲಕ್ಷ್ಮಿ ರೆಡ್ಡಿಗೆ ಗೂಗಲ್ ಡೂಡಲ್ ಗೌರವ

    ಭಾರತದ ಮೊದಲ ಮಹಿಳಾ ಶಾಸಕಿ ಡಾ. ಮುತ್ತುಲಕ್ಷ್ಮಿ ರೆಡ್ಡಿಗೆ ಗೂಗಲ್ ಡೂಡಲ್ ಗೌರವ

    ನವದೆಹಲಿ: ಇಂದು ಭಾರತದ ಮೊದಲ ಮಹಿಳಾ ಶಾಸಕಿ ಡಾ. ಮುತ್ತುಲಕ್ಷ್ಮಿ ರೆಡ್ಡಿ ಅವರ 133ರ ಹುಟ್ಟುಹಬ್ಬ. ಈ ಹಿನ್ನೆಲೆ ಗೂಗಲ್ ತನ್ನ ಡೂಡಲ್‍ನಲ್ಲಿ ಗೌರವ ಸಲ್ಲಿಸಿದೆ.

    ಭಾರತೀಯ ವೈದ್ಯೆ, ಪತ್ರಕರ್ತೆ, ಸಾಮಾಜಿಕ ಸುಧಾರಕಿ, ಪದ್ಮಭೂಷಣ ಪ್ರಶಸ್ತಿ ವಿಜೇತೆ, ಹಾಗೂ ಭಾರತದ ಮೊಟ್ಟ ಮೊದಲ ಮಹಿಳಾ ಶಾಸಕಿ ಎಂಬ ಕೀರ್ತಿಗೆ ಡಾ. ಮುತ್ತುಲಕ್ಷ್ಮಿ ರೆಡ್ಡಿ ಭಾಜನರಾಗಿದ್ದಾರೆ. ಇಂದು ಈ ಸಾಧಕಿಯ ಜನ್ಮದಿನವಾಗಿದೆ.

    ಮುತ್ತುಲಕ್ಷ್ಮಿ ಅವರು, 1886ರ ಜುಲೈ 30ರಂದು ತಮಿಳುನಾಡಿನ ಪುದುಕೋಟೆಯ ರಾಜವಂಶದ ಕುಟುಂಬದಲ್ಲಿ ಜನಿಸಿದ್ದರು. ಮುತ್ತುಲಕ್ಷ್ಮಿ ಅವರ ತಂದೆ ಎಸ್.ನಾರಾಯಣಸ್ವಾಮಿ ಹಾಗೂ ತಾಯಿ ಹೆಸರು ಚಂದ್ರಮಳಲ್. ಮಹಿಳಾ ಶಿಕ್ಷಣಕ್ಕೆ ಭಾರಿ ವಿರೋಧವಿದ್ದ ಕಾಲದಲ್ಲೇ ಮುತ್ತುಲಕ್ಷ್ಮಿ ಅವರು ಉನ್ನತ ಶಿಕ್ಷಣ ಪಡೆದಿದ್ದರು. 1912ನಲ್ಲಿ ಪದವಿ ಮುಗಿಸಿದ ಮುತ್ತುಲಕ್ಷ್ಮಿ ಅವರು ಭಾರತದಲ್ಲಿ ವೈದ್ಯಕೀಯ ಪದವಿ ಪಡೆದು ಮೊದಲ ಮಹಿಳಾ ವೈದ್ಯರಾದರು.

    1914ರಲ್ಲಿ ಡಾ. ಸುಂದರ ರೆಡ್ಡಿ ಅವರನ್ನು ಮುತ್ತುಲಕ್ಷ್ಮಿ ಅವರು ವಿವಾಹವಾದರು. 1927ರಲ್ಲಿ ಇವರು ಮದ್ರಾಸ್ ಶಾಸಕಾಂಗ ಸಭೆಗೆ ನೇಮಕಗೊಂಡರು. ಈ ಮೂಲಕ ಬ್ರಿಟಿಷ್ ಇಂಡಿಯಾದ ಮೊದಲ ಮಹಿಳಾ ಶಾಸಕಿಯಾಗಿ ಹೊರಹೊಮ್ಮಿದರು. ದೇವದಾಸಿ ಪದ್ಧತಿಯನ್ನು ನಿಷೇಧಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.

    1930ರಲ್ಲಿ ಅವರು ಮದ್ರಾಸ್ ಶಾಸನ ಸಭೆಗೆ ರಾಜೀನಾಮೆ ನೀಡಿದರು. ಬಳಿಕ ಮಹಿಳಾ ಸಂಘದ ಸಂಸ್ಥಾಪಕ-ಅಧ್ಯಕ್ಷರಾಗಿದ್ದರು ಮತ್ತು ಮದ್ರಾಸ್ ಕಾರ್ಪೊರೇಶನ್ ನ ಮೊದಲ ಆಲ್ಡರ್ ವುಮನ್ ಆಗಿ ನೇಮಕವಾದರು. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮುತ್ತುಲಕ್ಷ್ಮಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಮಹಾತ್ಮ ಗಾಂಧಿಜೀ ಅವರೊಂದಿಗೆ ಸೇರಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಉಪ್ಪಿನ ಸತ್ಯಾಗ್ರಹದಲ್ಲಿ ಕೂಡ ಮುತ್ತುಲಕ್ಷ್ಮಿ ಅವರು ಭಾಗವಹಿಸಿದ್ದರು.

    ಕ್ಯಾನ್ಸರ್‍ನಿಂದ ತಮ್ಮ ಸಹೋದರಿ ತೀರಿಹೋದ ಬಳಿಕ ಮುತ್ತುಲಕ್ಷ್ಮಿ ಅವರು 1954ರಲ್ಲಿ ಚೆನ್ನೈನಲ್ಲಿ ಅಡ್ಯಾರ್ ಕ್ಯಾನ್ಸರ್ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯೂ ವಿಶ್ವದ ಅತ್ಯಂತ ಗೌರವಾನ್ವಿತ ಅಂಕಾಲಾಜಿ ಕೇಂದ್ರಗಳಲ್ಲಿ ಒಂದಾಗಿದ್ದು, ಪ್ರತಿವರ್ಷ 80 ಸಾವಿರಕ್ಕೂ ಹೆಚ್ಚು ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮುತ್ತುಲಕ್ಷ್ಮಿ ಅವರು ದೇಶಕ್ಕೆ ನೀಡಿರುವ ಅತ್ಯುತ್ತಮ ಕೊಡುಗೆಗಾಗಿ ಭಾರತ ಸರ್ಕಾರ 1956ರಲ್ಲಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. 1968ರ ಜುಲೈ 22ರಂದು ಚೆನ್ನೈನಲ್ಲಿ ಮುತ್ತುಲಕ್ಷ್ಮಿ ಅವರು ನಿಧನರಾದರು.

  • ಗೂಗಲ್ ಸರ್ಚ್ ನಲ್ಲಿ ಕುವೆಂಪು ಫೋಟೋ ಬಂದಿದ್ದು ಹೇಗೆ? ಇಲ್ಲಿದೆ ಡೂಡಲ್ ಸೃಷ್ಟಿಕರ್ತನ ಕತೆ

    ಗೂಗಲ್ ಸರ್ಚ್ ನಲ್ಲಿ ಕುವೆಂಪು ಫೋಟೋ ಬಂದಿದ್ದು ಹೇಗೆ? ಇಲ್ಲಿದೆ ಡೂಡಲ್ ಸೃಷ್ಟಿಕರ್ತನ ಕತೆ

    ಬೆಂಗಳೂರು: ಇಂದು ರಾಷ್ಟ್ರಕವಿ ಕುಪ್ಪಳಿ ವೆಂಕಟಪ್ಪ ಪುಟಪ್ಪ ಅವರ 113 ಜನ್ಮ ವಾರ್ಷಿಕೋತ್ಸವ. ಕುವೆಂಪು ಅವರ ಜನ್ಮದಿನದಂದು ಗೂಗಲ್ ಡೂಡಲ್‍ನಲ್ಲಿ ಅವರ ಚಿತ್ರವನ್ನು ಪ್ರಕಟಿಸಿ ಅವರಿಗೆ ವಿಶೇಷ ಗೌರವ ಸಲ್ಲಿಸಿದೆ.

    ಡೂಡಲ್ ನಲ್ಲಿ ಕುವೆಂಪು ಚಿತ್ರ ಮೂಡಿ ಬರಲು ಕಾರಣರಾದ ವ್ಯಕ್ತಿ ಉಪಮನ್ಯು ಭಟ್ಟಚಾರ್ಯ. ಕೋಲ್ಕತ್ತಾ ಮೂಲದ ಆನಿಮೇಟರ್ ಆಗಿರುವ ಉಪಮನ್ಯು ಈಗ ಕ್ಯಾಲಿಫೋರ್ನಿಯಾದಲ್ಲಿದ್ದೇನೆ ಎಂದು ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಗೂಗಲ್ ನಲ್ಲಿ ಕನ್ನಡ ಪದವನ್ನು ಬರೆಯಲು ಇವರಿಗೆ ಹೇಳಿಕೊಟ್ಟವರು ಸ್ವಾತಿ ಶೇಲರ್.

    ಕುವೆಂಪು ಅವರ ಜನ್ಮದಿನಕ್ಕೆ ಡೂಡಲ್ ಮಾಡಿಕೊಡಿ ಎಂದು ಗೂಗಲ್ ಅವರು ಕೇಳೀಕೊಂಡಾಗ ನನಗೆ ಇದನ್ನು ನಂಬಲಿಕ್ಕೆ ಸಾಧ್ಯವಿಲ್ಲ. ಈ ಡೂಡಲ್ ನಾನು ಮಾಡಿದ್ದು, ಇದಕ್ಕೆ ಕನ್ನಡ ಪದವನ್ನು ಹಾಕಲು ಸ್ವಾತಿ ಶೇಲರ್ ಸಹಾಯ ಮಾಡಿದ್ದಾರೆ ಹಾಗೂ ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಗೂಗಲ್ ಎಂದು ಬರೆಯಲಾಗಿದೆ ಎಂದು ಉಪಮನ್ಯೂ ಭಟ್ಟಚಾರ್ಯ ಬರೆದು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೊಸ್ಟ್ ಮಾಡಿದ್ದಾರೆ.

    ಕವಿಶೈಲದ ಪ್ರಕೃತಿಯ ಮಡಲಲ್ಲಿ ಬಂಡೆಯ ಮೇಲೆ ಕುಳಿತು ಕುವೆಂಪು ಸಾಹಿತ್ಯ ಸೃಷ್ಟಿಸುತ್ತಿರುವ ಚಿತ್ರವನ್ನು ಡೂಡಲ್‍ ಗೆ ಬಳಸಿಕೊಳ್ಳಲಾಗಿದೆ. ಮತ್ತೊಂದು ವಿಶಿಷ್ಟವೇನೆಂದರೆ ಕುವೆಂಪು ಚಿತ್ರದ ಹಿಂಭಾಗದಲ್ಲಿ ಗೂಗಲ್ ಎಂದು ಕನ್ನಡದಲ್ಲಿ ಬರೆಯಲಾಗಿದೆ. ಇದನ್ನು ಉಪಮನ್ಯೂ ಭಟ್ಟಚಾರ್ಯ ಬರೆದಿದ್ದು, ಸ್ವಾತಿ ಶೇಲರ್ ಕನ್ನಡ ಪದ ಬರೆಯಲು ಸಹಾಯ ಮಾಡಿದ್ದಾರೆ.

    ಯಾವಾಗಲ್ಲೂ ಪ್ರಕೃತಿ ಸೌಂದರ್ಯವನ್ನು ಇಷ್ಟಪಡುತ್ತಿದ್ದ ಕುವೆಂಪು ಅವರಿಗೆ ‘ಪೂವು’ ಎಂಬ ಡೂಡಲ್ ಬಳಸಿಕೊಳ್ಳಲಾಗಿದೆ. ಕುವೆಂಪು ಅವರು ತಮ್ಮ ಕವಿತೆಗಳಲ್ಲಿ ತಮ್ಮ ಸುತ್ತಮುತ್ತಲಿರುವ ಪ್ರಪಂಚದ ಸರಳ ಅದ್ಭುತವನ್ನು, ವಿಶೇಷವಾದ ಹೂವುಗಳಗೆ ಪ್ರತಿಬಿಂಬಿಸಿ ಪ್ರೀತಿಸುತ್ತಿದ್ದರು.

    ಕುವೆಂಪು ಅವರು 1904ರ ಡಿಸೆಂಬರ್ 29ರಂದು ಜನಿಸಿದ್ದು, ರಾಮಾಯಣ ದರ್ಶನಂ ಮೂಲಕ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದ್ದರು. ನವೆಂಬರ್ 11, 1994ರಲ್ಲಿ ಕುವೆಂಪು ವಿಧಿವಶರಾದ್ರು.

    ಉಪಮನ್ಯು ಭಟ್ಟಚಾರ್ಯ ಅವರು ಅನಿಮೇಷನ್ ಮೂಲಕ ಬೇರೆ ಬೇರೆ ಫೋಟೋಗಳನ್ನು ರಚಿಸಿದ್ದು ಅವುಗಳನ್ನು ಇಲ್ಲಿ ನೀಡಲಾಗಿದೆ.

  • ರಾಷ್ಟ್ರಕವಿ ಕುವೆಂಪು ಜನ್ಮದಿನಕ್ಕೆ ಗೂಗಲ್‍ನಿಂದ ವಿಶೇಷ ಗೌರವ

    ರಾಷ್ಟ್ರಕವಿ ಕುವೆಂಪು ಜನ್ಮದಿನಕ್ಕೆ ಗೂಗಲ್‍ನಿಂದ ವಿಶೇಷ ಗೌರವ

    ಬೆಂಗಳೂರು: ಇಂದು ರಾಷ್ಟ್ರಕವಿ, ವಿಶ್ವಮಾನವ ಸಂದೇಶ ಸಾರಿದ ನಮ್ಮ ಹೆಮ್ಮೆಯ ಕುವೆಂಪು ಅವರ 113ನೇ ಜನ್ಮದಿನ. ಈ ವಿಶಿಷ್ಟ ದಿನದಂದು ಗೂಗಲ್ ಡೂಡಲ್ ಮೂಲಕ ಕುವೆಂಪು ಅವರಿಗೆ ವಿಶೇಷ ಗೌರವ ಸಲ್ಲಿಸಿದೆ.

    ಕವಿಶೈಲದ ಪ್ರಕೃತಿಯ ಮಡಲಲ್ಲಿ ಬಂಡೆಯ ಮೇಲೆ ಕುಳಿತು ಕುವೆಂಪು ಸಾಹಿತ್ಯ ಸೃಷ್ಟಿಸುತ್ತಿರುವ ಚಿತ್ರವನ್ನು ಡೂಡಲ್‍ಗೆ ಬಳಸಿಕೊಳ್ಳಲಾಗಿದೆ. ಮತ್ತೊಂದು ವಿಶಿಷ್ಟವೇನೆಂದರೆ ಕುವೆಂಪು ಚಿತ್ರದ ಹಿಂಭಾಗದಲ್ಲಿ ಗೂಗಲ್ ಎಂದು ಕನ್ನಡದಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲದೆ ಕುವೆಂಪು ಅವರಿಗೆ ಇಷ್ಟವಾದ ಬಂಡೆ, ಕಾಜಾಣ ಹಕ್ಕಿಯನ್ನು ಚಿತ್ರಿಸಿದ್ದು, ಇದ್ದಕ್ಕೆ ಕನ್ನಡಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಕುವೆಂಪು ಅವರು 1904ರ ಡಿಸೆಂಬರ್ 29ರಂದು ಜನಿಸಿದ್ದು, ರಾಮಾಯಣ ದರ್ಶನಂ ಮೂಲಕ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದ್ದರು. ನವೆಂಬರ್ 11, 1994ರಲ್ಲಿ ಕುವೆಂಪು ವಿಧಿವಶರಾದ್ರು.

  • ಸರ್ಕಾರಿ ಕಚೇರಿಗಳ ಮುಂದೆ ಹೋಗಿ ಇದ್ದಕ್ಕಿದ್ದಂತೆ ರಾಷ್ಟ್ರಗೀತೆ ಹಾಡಿದ್ರು!

    ಸರ್ಕಾರಿ ಕಚೇರಿಗಳ ಮುಂದೆ ಹೋಗಿ ಇದ್ದಕ್ಕಿದ್ದಂತೆ ರಾಷ್ಟ್ರಗೀತೆ ಹಾಡಿದ್ರು!

    ಬೆಂಗಳೂರು: ರಾಷ್ಟ್ರಕ್ಕೆ, ರಾಷ್ಟ್ರಗೀತೆಗೆ, ರಾಷ್ಟ್ರಧ್ವಜಕ್ಕೆ ಎಲ್ಲರೂ ಗೌರವ ಕೊಡಬೇಕು. ಅದು ನಮ್ಮೆಲ್ಲರ ಕರ್ತವ್ಯ. ಅದು ಎಲ್ಲಿ ಇಲ್ಲವೋ ಆಗ ಎಲ್ಲಾ ಭಾರತಿಯರೂ ಅದನ್ನು ಪ್ರಶ್ನಿಸಬೇಕು, ಸರಿ ಮಾಡಬೇಕು. ಅದರೆ ಬೆಂಗಳೂರಿನಲ್ಲಿ ಆ್ಯಂಟಿ ಕರಪ್ಷನ್ ಕೌನ್ಸಿಲ್ ಆಫ್ ಇಂಡಿಯಾ ಅನ್ನೊ ಒಂದು ಸಂಘಟನೆ ಇದ್ದಕ್ಕಿದ್ದ ಹಾಗೇ ರಾಷ್ಟ್ರಗೀತೆಯ ಬಗ್ಗೆ ಅರಿವನ್ನು ಮೂಡಿಸುತ್ತೇವೆ ಎಂದು ಮುಂದೆ ಬಂದಿದ್ದಾರೆ.

    ಬೆಂಗಳೂರಿನ ಪೊಲೀಸ್ ಕಚೇರಿಗಳು, ಸರ್ಕಾರಿ ಕಚೇರಿಗಳಿಗೆ ಹೋಗಿ ರಾಷ್ಟ್ರಗೀತೆ ಹಾಡೋಣ ಬನ್ನಿ, ಇಲ್ಲ ನಿಮ್ಮ ಕಚೇರಿ ಮುಂದೆ ನಾವು ಹಾಡ್ತೀವಿ ಅಂತ ಇದ್ದಕ್ಕಿದ್ದ ಹಾಗೇ ಹಾಡೋಕೆ ಶುರು ಮಾಡುತ್ತಾರೆ. ಯಾಕೆ ಈ ರೀತಿ ಅಂದರೆ ನಮ್ಮ ಹಾಗೇ ಎಲ್ಲರೂ ಗೌರವ ಕೊಡಬೇಕು ಎಂದು ಹೇಳುತ್ತಾರೆ.

    ರಾಷ್ಟ್ರಗೀತೆ ಹಾಡಿ ಅನ್ನೋ ಒತ್ತಾಯವನ್ನು ಯಾರೂ ಮಾಡುವಂತಿಲ್ಲ ಹಾಗೂ ಮನವಿ ಕೇಳುವಂತಿಲ್ಲ ಎಂದು ಎಮ್‍ಎಸ್ ಬಿಲ್ಡಿಂಗ್ ಬಳಿಯ ಹ್ಯೂಮನ್ ರೈಟ್ಸ್ ಕಚೇರಿ ಹೊರಗೆ ನಿಂತು ಈ ಸಂಘಟನೆಯ ಕಾರ್ಯಕರ್ತರು ರಾಷ್ಟ್ರಗೀತೆಯನ್ನು ಹಾಡೋಕೆ ಶುರು ಮಾಡಿದರು. ಅಲ್ಲಿ ಸುತ್ತ ಇದ್ದವರಿಗೆ ಒಮ್ಮೆಲೆ ಶಾಕ್. ಈ ಟೈಮಲ್ಲಿ ಯಾರಪ್ಪ ರಾಷ್ಟ್ರಗೀತೆ ಹಾಡುತ್ತಿದ್ದಾರೆ ಎಂದು. ಎಲ್ಲರಿಗೂ ರಾಷ್ಟ್ರಗೀತೆ ಬಗ್ಗೆ ಅರಿವು ಮೂಡಿಸಬೇಕು ಎಂದು ಹಾಡಲು ಶುರು ಮಾಡಿದವರು ಸರಿಯಾಗಿ ಹಾಡುತ್ತಾರೆ ಅಂದುಕೊಂಡರೆ ಬರೀ ತಪ್ಪು ತಪ್ಪು ಹಾಡಿದ್ರು. ಇದನ್ನ ಪ್ರಶ್ನೆ ಮಾಡಿದ್ರೆ ಅದಕ್ಕೂ ಸಮಜಾಯಿಷಿ ಕೊಟ್ರು.

    ರಾಷ್ಟ್ರಗೀತೆ ಎಲ್ಲಾ ಸ್ಕೂಲ್ ಮತ್ತು ಕಾಲೇಜುಗಳಲ್ಲಿ ಹಾಡಬೇಕು. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ರಾಷ್ಟ್ರಗೀತೆ ಹಾಡಬೇಕು. ಇದನ್ನು ನಾವು ಮಾಡ್ತೀವಿ ಮತ್ತು ಮಾಡಿ ತೋರಿಸುತ್ತೀವಿ. ತಪ್ಪು ಮಾಡುವವರಿಗೆ ಜಾಗೃತಿ ಮೂಡಿಸುತ್ತೇವೆ. ಸಂವಿಧಾನದಲ್ಲಿ ನಮಗೆ ಕೊಟ್ಟ ಅಧಿಕಾರವನ್ನು ನಾವು ರಕ್ಷಣೆ ಮಾಡಿ ಶಾಲಾ-ಕಾಲೇಜು ಮತ್ತು ದೈನಂದಿನ ದಿನಗಳಲ್ಲಿ ರಾಷ್ಟ್ರಗೀತೆಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತೇವೆ ಎಂದು ಆ್ಯಂಟಿ ಕರಪ್ಷನ್ ಅಧಿಕಾರಿಗಳು ಹೇಳಿದ್ರು

    ರಾಷ್ಟ್ರಗೀತೆಯನ್ನು 52 ಸೆಕೆಂಡ್‍ಗಳಲ್ಲಿ ಹಾಡಿ ಮುಗಿಸಬೇಕು ಹಾಗೂ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಬೇಕು, ಅದು ನಮ್ಮ ಕರ್ತವ್ಯ. ಆದರೆ ರಾಷ್ಟ್ರಗೀತೆ ಹಾಡುವುದಕ್ಕೆ ಒಂದು ನಿರ್ದಿಷ್ಟ ಸ್ಥಳ, ಟೈಮ್ ಇರುತ್ತದೆ. ಶಾಲೆ ಪ್ರಾರಂಭಕ್ಕೂ ಮುನ್ನ ಹಾಗೂ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಶುರುವಾಗುವ ಮುನ್ನ ರಾಷ್ಟ್ರಗೀತೆ ಹಾಡಬೇಕು. ಸಿನಿಮಾದ ಮಧ್ಯೆ ಗೀತೆ ಹಾಡುವುದು ಅಪಮಾನ. ಅದೇ ರೀತಿ ಎಲ್ಲೆಂದರಲ್ಲಿ ತಮ್ಮನ್ನ ಹಾಗೂ ಸಂಘಟನೆಯನ್ನ ಗುರುತಿಸಿಕೊಳ್ಳೋಕೆ ಈ ರೀತಿ ಮಾಡೊದು ಎಷ್ಟು ಸರಿ ಅನ್ನೊದು ಸಾರ್ವಜನಿಕರ ಪ್ರಶ್ನೆ.