Tag: Resort Political

  • ‘ದೋಸ್ತಿ’ ಸರ್ಕಾರದ ಕಾವಲಿಗೆ ನಿಂತ ‘ಕನಕಪುರದ ಬಂಡೆ’ಗೆ ಮತ್ತೆ ಸಂಕಷ್ಟ?

    ‘ದೋಸ್ತಿ’ ಸರ್ಕಾರದ ಕಾವಲಿಗೆ ನಿಂತ ‘ಕನಕಪುರದ ಬಂಡೆ’ಗೆ ಮತ್ತೆ ಸಂಕಷ್ಟ?

    ಬೆಂಗಳೂರು: ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ಕೈ ನಾಯಕರು ಸಚಿವ ಡಿ.ಕೆ.ಶಿವಕುಮಾರ್ ಭದ್ರಕೋಟೆ ಎಂದು ಕರೆಸಿಕೊಳ್ಳುವ ಈಗಲಟನ್ ರೆಸಾರ್ಟ್ ಸೇರಿಕೊಂಡಿದ್ದಾರೆ. ಕೈ ನಾಯಕರ ಉಸ್ತುವಾರಿಯನ್ನು ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ನೀಡಿದ್ದರಿಂದ ಸರ್ಕಾರ ಉಳಿಸುವ ಪ್ರಯತ್ನದಲ್ಲಿ ಟ್ರಬಲ್ ಶೂಟರ್ ಇದ್ದಾರೆ. ಇತ್ತ ಗುರುಗ್ರಾಮದ ರೆಸಾರ್ಟ್ ಸೇರಿದ್ದ ಕಮಲ ನಾಯಕರು ತಮ್ಮ ಸ್ವಕ್ಷೇತ್ರಗಳತ್ತ ತೆರಳಿದ್ದಾರೆ. ಇದೀಗ ಸರ್ಕಾರ ರಕ್ಷಣೆಗೆ ಮುಂದಾಗಿರುವ ಡಿಕೆ ಶಿವಕುಮಾರ್ ಅವರ ಮೇಲೆ ಮತ್ತೆ ಐಟಿ ದಾಳಿ ನಡೆಯುತ್ತಾ ಎಂಬ ಚರ್ಚೆಗಳು ಆರಂಭವಾಗಿವೆ.

    ಈ ಹಿಂದೆ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಡಿಕೆ ಶಿವಕುಮಾರ್ ಅವರ ಸಾರಥ್ಯದಲ್ಲಿ ಈಗಲ್‍ಟನ್ ರೆಸಾರ್ಟ್ ನಲ್ಲಿ ಇರಿಸಿದ್ದಾಗ, ಐಟಿ ದಾಳಿ ನಡೆದಿತ್ತು. ರೆಸಾರ್ಟ್ ಗೆ ಬಂದಿದ್ದ ಐಟಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಕರೆದುಕೊಂಡು ಹೋಗಿದ್ದರು. ಇದೊಂದು ರಾಜಕೀಯ ಷಡ್ಯಂತ್ರ ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿತ್ತು. ಇದೀಗ ಕಾಂಗ್ರೆಸ್ ಶಾಸಕರ ರೆಸಾರ್ಟ್ ವಾಸ್ತವ್ಯದ ಬೆನ್ನಲ್ಲೇ ಮತ್ತೊಮ್ಮೆ ಐಟಿ ದಾಳಿ ನಡೆಯುತ್ತಾ ಎಂಬ ಸುದ್ದಿ ಹರಿದಾಡುತ್ತಿದೆ.

    ಆಪರೇಷನ್ ಕಮಲಕ್ಕೆ ರಿವರ್ಸ್ ಆಪರೇಷನ್ ಮಾಡಲು ಕಾಂಗ್ರೆಸ್ ಮುಂದಾಗಿದ್ದು, ಬಿಜೆಪಿಯ 7 ಮಂದಿ ಶಾಸಕರನ್ನು ಸೆಳೆಯುವ ತಂತ್ರದಲ್ಲಿ ಇದೆಯಂತೆ. ಸಿಎಂ ಆಗಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಡೆಸಿದ್ದ ಆಪರೇಷನ್ ಕಮಲ ಅವರಿಗೆ ಮುಳ್ಳಾಗಿದೆಯಂತೆ. ಮುಯ್ಯಿಗೆ ಮುಯ್ಯಿ ರಾಜಕೀಯದಲ್ಲಿ ‘104’ ಸಂಖ್ಯೆಯ ಬಿಜೆಪಿ ಎರಡಂಕಿಗೆ ಕುಸಿಯುತ್ತಾ ಎಂಬ ಹೊಸ ಚರ್ಚೆಯೊಂದು ರಾಜಕೀಯ ಅಂಗಳದಲ್ಲಿ ಶುರುವಾಗಿದೆ.

    ಗುರುಗ್ರಾಮದಿಂದ ಬೆಂಗಳೂರಿಗೆ ಬಂದಿರುವ ಬಿಜೆಪಿ ಶಾಸಕರು ಸೋಮವಾರದಿಂದ ತಮ್ಮ ಕ್ಷೇತ್ರಗಳ ಬರ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಇಂದು ಮಧ್ಯಾಹ್ನದವರೆಗೂ ಕೈ ಶಾಸಕರು ರೆಸಾರ್ಟ್ ನಲ್ಲಿರಲಿದ್ದಾರೆ. ಮಧ್ಯಾಹ್ನ ಅಥವಾ ಸಾಯಂಕಾಲದ ವೇಳೆ ಕೈ ಶಾಸಕರು ಈಗಲ್‍ಟನ್ ರೆಸಾರ್ಟ್ ಖಾಲಿ ಮಾಡುವ ಸಾಧ್ಯತೆಗಳಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಮುಂದಾದ ಡಿಕೆಶಿ

    ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಮುಂದಾದ ಡಿಕೆಶಿ

    ಬೆಂಗಳೂರು: ಟ್ರಬಲ್ ಶೂಟರ್, ದಿ ಪವರ್ ಮಿನಿಸ್ಟರ್, ಕನಕಪುರದ ಬಂಡೆ ಅಂತಾನೆ ಕರೆಸಿಕೊಳ್ಳುವ ಸಚಿವ ಡಿಕೆ ಶಿವಕುಮಾರ್ ಈಗ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರ ರೂಪಿಸಿದ್ದಾರಂತೆ. ಸಚಿವ ಸ್ಥಾನ ಸಿಗದೆ ಇರೋದಕ್ಕೆ ಅತೃಪ್ತರ ಸಂಖ್ಯೆ ಕಾಂಗ್ರೆಸ್‍ನಲ್ಲಿ ಹೆಚ್ಚಾಗಿದೆ. ಅದರಲ್ಲೂ ಬಳ್ಳಾರಿಯ ಅತೃಪ್ತ ಶಾಸಕರಿಂದಲೇ ಕಂಗಾಲಾಗಿರೋ ಕಾಂಗ್ರೆಸ್ ರೆಸಾರ್ಟ್ ರಾಜಕೀಯದ ಮೊರೆ ಹೋಗಿದೆ. ಹಾಗಾಗಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಈಗ ಹೊಸ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಅದೇ, ಕಾಂಚಾಣಮ್ಮ ಕಾರ್ಯ ಸಿದ್ದಿ ಮಂತ್ರ ಜಪಿಸೋದು.

    ಬಳ್ಳಾರಿಯ ಅತೃಪ್ತ ಶಾಸಕರನ್ನ ಸಮಾಧಾನ ಮಾಡೋದು ಜೊತೆಗೆ ಬಂಡಾಯ ಏಳದಂತೆ ನೋಡಿಕೊಳ್ಳೋ ಜವಾಬ್ದಾರಿ ಈಗ ಡಿಕೆ ಶಿವಕುಮಾರ್ ಅವರ ಹೆಗಲ ಮೇಲಿದೆ. ಹಾಗಾಗಿ ಸಚಿವ ಸ್ಥಾನ ಸಿಗದೇ ಇರೋರಿಗೆ ಅವರ ಕ್ಷೇತ್ರಕ್ಕೆ ವಿವಿಧ ನಿಧಿಗಳಿಂದ ಹಣ ಬಿಡುಗಡೆ ಮಾಡಿ ಸಮಾಧಾನ ಮಾಡುವ ತಂತ್ರಕ್ಕೆ ಮುಂದಾಗಿದ್ದಾರಂತೆ. ಅದಕ್ಕಾಗಿ ಶನಿವಾರ ವಿಧಾನಸೌಧದಲ್ಲಿ ಬಳ್ಳಾರಿಯ ಎಲ್ಲ ಶಾಸಕರ ಜೊತೆ ಸುದೀರ್ಘವಾಗಿ ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಬಳ್ಳಾರಿಗೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ಹಣ ಬಿಡುಗಡೆ ಮಾಡುವ ಉತ್ಸಾಹದಲ್ಲಿ ಡಿಕೆ ಶಿವಕುಮಾರ್ ಇದ್ದಂಗೆ ಕಾಣಿಸುವಂತಿದೆ.

    ಹಣ ಬಿಡುಗಡೆಯ ಪ್ಲ್ಯಾನ್ ಹೇಗಿದೆ..?
    * ಡಿಎಂಎಫ್ – 275 ಕೋಟಿ
    * ಕೆಎಂಇಆರ್ ಸಿ – 13,378 ಕೋಟಿ (ಮೊದಲ ಹಂತದಲ್ಲಿ 900 ಕೋಟಿ)
    * ಹೆಚ್‍ಕೆಡಿಬಿ ಫಂಡ್ ಇಂತಿಷ್ಟೇ ಅಂತ ಇಲ್ಲ
    * 2 ನಗರಸಭೆ, 1 ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ವಿಶೇಷ ಪ್ಯಾಕೇಜ್
    * 3 ಹೊಸ ತಾಲೂಕುಗಳ ಅಭಿವೃದ್ಧೀಗೆ ಫಂಡ್ ಬಿಡುಗಡೆ (ಕೊಟ್ಟೂರು, ಕುರಗೋಡ್, ಕಂಪ್ಲಿ)
    * ಟಿಬಿ ಬೋರ್ಡ್‍ನಿಂದ ಕಾಲುವೆಗಳ ಅಭಿವೃದ್ಧಿಗೆ ಹಣ ಬಿಡುಗಡೆ
    * ಕೇಂದ್ರದಿಂದ ನೀರಾವರಿ ಯೋಜನೆಗಳ ಅಡಿ ಹಣ ಬಿಡುಗಡೆ.

    ಇವೆಲ್ಲ ಮೂಲಗಳಿಂದ ಡಿಕೆ ಶಿವಕುಮಾರ್ ಹಣ ಬಿಡುಗಡೆ ಮಾಡಿಸಿ ಅತೃಪ್ತ ಶಾಸಕರನ್ನ ಸಮಾಧಾನ ಮಾಡೋ ತಂತ್ರಗಾರಿಕೆ ಹೆಣೆದಿದ್ದಾರೆ. ಇದೇ ತಿಂಗಳ ಕೊನೆಯ ವಾರದಲ್ಲಿ ಮಹಾನಗರ ಪಾಲಿಕೆ, ನಗರ ಸಭೆ ಚುನಾವಣೆಯ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ. ಜೊತೆಗೆ ಲೋಕಸಭೆ ಚುನಾವಣೆಯೂ ಹತ್ತಿರದಲ್ಲೆ ಇರುವುದರಿಂದ ಎಷ್ಟಾಗುತ್ತೋ ಅಷ್ಟು ಹಣ ಬಿಡುಗಡೆಯ ತಯಾರಿಯಲ್ಲಿ ನಿರತರಾಗಿದ್ದಾರಂತೆ. ಇದು ಕ್ಷೇತ್ರದ ಬಗ್ಗೆ ಹುಟ್ಟಿರೋ ವಿಶೇಷ ಪ್ರೀತಿಯೇನು ಅಲ್ಲ, ಚುನಾವಣೆ ಹತ್ತಿರ ಬರ್ತಿರೋದ್ರಿಂದ ಎಷ್ಟಾಗುತ್ತೋ ಫಂಡ್ ಕಲೆಕ್ಷನ್ ಕಾಮಗಾರಿ ಎಂದು ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv