Tag: resigns

  • UPSC ಅಧ್ಯಕ್ಷ ಸ್ಥಾನಕ್ಕೆ ಮನೋಜ್‌ ಸೋನಿ ರಾಜೀನಾಮೆ

    UPSC ಅಧ್ಯಕ್ಷ ಸ್ಥಾನಕ್ಕೆ ಮನೋಜ್‌ ಸೋನಿ ರಾಜೀನಾಮೆ

    ನವದೆಹಲಿ: ಯುಪಿಎಸ್‌ಸಿ ಅಧ್ಯಕ್ಷ ಮನೋಜ್‌ ಸೋನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

    ಮನೋಜ್ ಸೋನಿ ಅವರ ಅಧಿಕಾರವಧಿ 2029ರ ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ. ಅವಧಿಗೂ ಮುನ್ನ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ. ಆದರೆ ಅವರ ರಾಜೀನಾಮೆಯನ್ನು ಈವರೆಗೂ ಅಂಗೀಕರಿಸಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

    ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿಷಯ ಮುನ್ನೆಲೆಗೆ ಬಂದ ನಂತರ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಸುತ್ತ ವಿವಾದಗಳು ಎದ್ದಿವೆ. ಈ ಪ್ರಕರಣಕ್ಕೂ ಸೋನಿ ಅವರ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ ಎನ್ನಲಾಗಿದೆ.

    ಪ್ರಖ್ಯಾತ ಶಿಕ್ಷಣ ತಜ್ಞ ಸೋನಿ ಅವರು 2017 ರ ಜೂನ್ 28 ರಂದು ಆಯೋಗದ ಸದಸ್ಯರಾಗಿ ಅಧಿಕಾರ ವಹಿಸಿಕೊಂಡಿದ್ದರು. 2023 ರ ಮೇ 16 ರಂದು UPSC ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

    ಸೋನಿ ಅವರು ಯುಪಿಎಸ್‌ಸಿ ಅಧ್ಯಕ್ಷರಾಗಿ ಮುಂದುವರಿಯಲು ಉತ್ಸುಕರಾಗಿಲ್ಲ. ಸಾಮಾಜಿಕ-ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಸಮಯ ವಿನಿಯೋಗಿಸಲು ಬಯಸಿದ್ದಾರೆ.

  • ಪೋರ್ಚುಗಲ್‌ ಪ್ರಧಾನಿ ಸ್ಥಾನಕ್ಕೆ ಆಂಟೋನಿಯೊ ಕೋಸ್ಟಾ ರಾಜೀನಾಮೆ

    ಪೋರ್ಚುಗಲ್‌ ಪ್ರಧಾನಿ ಸ್ಥಾನಕ್ಕೆ ಆಂಟೋನಿಯೊ ಕೋಸ್ಟಾ ರಾಜೀನಾಮೆ

    ಲಿಸ್ಬನ್: ಪೋರ್ಚುಗಲ್ ಪ್ರಧಾನಿ ಆಂಟೋನಿಯೊ ಕೋಸ್ಟಾ ಮಂಗಳವಾರ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ್ದಾರೆ. ಕೋಸ್ಟಾ ಅವರು 2015 ರಿಂದ ಅಧಿಕಾರದಲ್ಲಿದ್ದರು.

    ಭ್ರಷ್ಟಾಚಾರ ಮತ್ತು ಪ್ರಭಾವದ ದಂಧೆಯ ವಿಚಾರಣೆಯ ಭಾಗವಾಗಿ ಪೊಲೀಸರು, ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ನಡೆಸಿ ಕೋಸ್ಟಾ ಅವರ ಮುಖ್ಯ ಸಿಬ್ಬಂದಿಗೆ ಬಂಧನ ವಾರೆಂಟ್ ಹೊರಡಿಸಿದ ಬೆನ್ನಲ್ಲೇ ಪ್ರಧಾನಿ ರಾಜೀನಾಮೆ ನೀಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಇದನ್ನೂ ಓದಿ: ಜನಸಂಖ್ಯೆ ನಿಯಂತ್ರಣ ಕುರಿತು ವಿಲಕ್ಷಣ ಹೇಳಿಕೆ – ನಿತೀಶ್‌ ಕುಮಾರ್‌ ಅಸಭ್ಯ ನಾಯಕ ಎಂದ BJP

    ಕೋಸ್ಟಾ ಅವರ ಮುಖ್ಯ ಸಿಬ್ಬಂದಿಯ ಕಚೇರಿ, ಪರಿಸರ ಸಚಿವಾಲಯ, ಮೂಲಸೌಕರ್ಯ ಸಚಿವಾಲಯ, ಸೈನ್ಸ್ ಪಟ್ಟಣದಲ್ಲಿರುವ ಸಿಟಿ ಕೌನ್ಸಿಲ್ ಕಚೇರಿ ಮತ್ತು ಹಲವಾರು ಖಾಸಗಿ ಮನೆಗಳನ್ನು ಒಳಗೊಂಡಂತೆ 37 ಸ್ಥಳಗಳಲ್ಲಿ ಪರಿಶೀಲನೆ ನಡೆಸಲು ನ್ಯಾಯಾಧೀಶರು ಪೊಲೀಸರಿಗೆ ಸೂಚಿಸಿದ್ದಾರೆ.

    ಕೋಸ್ಟಾ ಅವರನ್ನು ಹೆಸರಿಸದಿದ್ದರೂ, ಪ್ರಧಾನ ಮಂತ್ರಿ ಕಚೇರಿಯ ಮುಖ್ಯಸ್ಥರಿಗೆ ಬಂಧನ ವಾರೆಂಟ್‌ ಹೊರಡಿಸಲಾಗಿದೆ. ಪೋರ್ಚುಗಲ್‌ನ ಮೂಲಸೌಕರ್ಯ ಸಚಿವರು ಮತ್ತು ಪೋರ್ಚುಗಲ್‌ನ ಪರಿಸರ ಸಂಸ್ಥೆಯ ಮುಖ್ಯಸ್ಥರ ಹೆಸರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಶಂಕಿತರೆಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಕೆನಡಾ ಸಂಸತ್‍ನಲ್ಲಿ ಹಿಂದೂಧ್ವಜ ಹಾರಿಸಿದ ಕನ್ನಡಿಗ

  • ಜಾತಿ, ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ: ಮಂತ್ರಿ ಸ್ಥಾನಕ್ಕೆ ದಲಿತ ನಾಯಕಿ ರಾಜೀನಾಮೆ

    ಜಾತಿ, ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ: ಮಂತ್ರಿ ಸ್ಥಾನಕ್ಕೆ ದಲಿತ ನಾಯಕಿ ರಾಜೀನಾಮೆ

    ಪುದುಚೇರಿ: ಪುದುಚೇರಿ ಸಾರಿಗೆ (Puducherry Transport Minister) ಸಚಿವೆ ಚಂದ್ರ ಪ್ರಿಯಾಂಕಾ (Chandra Priyanka) ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದಲಿತ ಸಮುದಾಯದ ಮಹಿಳಾ ನಾಯಕಿಯಾಗಿ ಅನುಭವಿಸಿದ ಸಮಸ್ಯೆಗಳು ಸೇರಿದಂತೆ ಅನೇಕ ವಿಷಯಗಳನ್ನು ಮುಂದಿಟ್ಟು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

    ಚಂದ್ರ ಪ್ರಿಯಾಂಕಾ ( ಅವರು ಅಖಿಲ ಭಾರತ NR ಕಾಂಗ್ರೆಸ್‌ನಿಂದ ಸಚಿವರಾಗಿದ್ದರು. ಅವರು ಕೇಂದ್ರಾಡಳಿತ ಪ್ರದೇಶದ 41 ವರ್ಷಗಳ ಇತಿಹಾಸದಲ್ಲಿ ಎರಡನೇ ಮಹಿಳಾ ಸಚಿವರಾಗಿದ್ದರು. ಪ್ರಬಲ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸಿ ಸಚಿವೆಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ಚಂದ್ರ ಪ್ರಿಯಾಂಕಾ ಕಾರೈಕಲ್‌ನ ಮೊದಲ ಮಹಿಳಾ ಸಚಿವೆ. ಇವರು ಪುದುಚೇರಿಯ ಮಾಜಿ ಸಚಿವ ಚಂದ್ರಕಾಸು ಅವರ ಪುತ್ರಿ. ಸಿಎಂಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ, ಜನರ ಬೆಂಬಲವಿದ್ದರೂ ವಿಧಾನಸಭೆಯಲ್ಲಿ ಪ್ರಚಲಿತದಲ್ಲಿರುವ ವಂಚನೆಯ ರಾಜಕಾರಣ ಮತ್ತು ಸಂಪತ್ತಿನ ಅಸಾಧಾರಣ ಹಿಡಿತವನ್ನು ಎದುರಿಸುವುದು ಸವಾಲಿನ ಸಂಗತಿ ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ನಾನು ಆಗಾಗ್ಗೆ ಜಾತಿ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.

    2016 ರಲ್ಲಿ ನೆಡುಂಗಾಡು ಕ್ಷೇತ್ರದಿಂದ ಪುದುಚೇರಿ ಅಸೆಂಬ್ಲಿಯ ಸದಸ್ಯರಾಗಿ ಆಯ್ಕೆಯಾಗಿದ್ದರು. 2021 ರ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಅವರು ಅದೇ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಎ ಮಾರಿಮುತ್ತು ಅವರನ್ನು ಸೋಲಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಧಿಕಾರಕ್ಕೆ ಬಂದ ಕೆಲವೇ ವಾರಗಳಲ್ಲಿ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಲಿಜ್‌ ಟ್ರಸ್‌ ರಾಜೀನಾಮೆ

    ಅಧಿಕಾರಕ್ಕೆ ಬಂದ ಕೆಲವೇ ವಾರಗಳಲ್ಲಿ ಬ್ರಿಟನ್‌ ಪ್ರಧಾನಿ ಸ್ಥಾನಕ್ಕೆ ಲಿಜ್‌ ಟ್ರಸ್‌ ರಾಜೀನಾಮೆ

    ಲಂಡನ್:‌ ಬ್ರಿಟನ್‌ನಲ್ಲಿ (United Kingdom) ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಪ್ರಧಾನಿ ಲಿಜ್‌ ಟ್ರಸ್‌ (Liz Truss) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ವಾರಗಳಲ್ಲಿ ಅವರು ರಾಜೀನಾಮೆ ಘೋಷಿಸಿದ್ದಾರೆ.

    ಆರ್ಥಿಕ ಮತ್ತು ಅಂತಾರಾಷ್ಟ್ರೀಯ ಅಸ್ಥಿರತೆಯ ಸಮಯದಲ್ಲಿ ತಾನು ಅಧಿಕಾರಕ್ಕೆ ಬಂದಿದ್ದೆ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಉತ್ತರಾಧಿಕಾರಿ ಆಯ್ಕೆಯಾಗುವವರೆಗೂ ನಾನು ಪ್ರಧಾನಿಯಾಗಿಯೇ ಮುಂದುವರಿಯುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಿಷಿ ಸುನಾಕ್‌ಗೆ ಸಿಗುತ್ತಾ ಬ್ರಿಟನ್ ಪ್ರಧಾನಿ ಹುದ್ದೆ?

    ಬ್ರಿಟನ್‌ ಪ್ರಧಾನಿ ಲಿಜ್‌ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅವರ ಸರ್ಕಾರದಿಂದ ಒಬ್ಬೊಬ್ಬರೇ ಅಧಿಕಾರದಿಂದ ಹೊರ ನಡೆದರು. ಈಚೆಗಷ್ಟೇ ಹಣಕಾಸು ಸಚಿವ ಸ್ಥಾನಕ್ಕೆ ಕ್ವಾಸಿ ಕ್ವಾರ್ಟೆಂಗ್‌ ರಾಜೀನಾಮೆ ನೀಡಿದ್ದರು. ಬುಧವಾರ ಕೂಡ ಗೃಹ ಸಚಿವೆ, ಭಾರತೀಯ ಮೂಲದ ಸುಯೆಲ್ಲಾ ಬ್ರೇವರ್‌ಮನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

    ಬಲಪಂಥೀಯ ಆರ್ಥಿಕತೆಯ ಕಾರ್ಯಸೂಚಿಯಿಂದ ಪ್ರಧಾನಿ ಟ್ರಸ್‌ ಹಿಂದೆ ಸರಿಯುತ್ತಿದ್ದಂತೆಯೇ ಅವರು ಕೂಡ ಅಧಿಕಾರದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಲಾಗಿತ್ತು. ಅದರಂತೆಯೇ ಟ್ರಸ್‌ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ಅಗ್ನಿ ಅವಘಡದಿಂದ ಕುಸಿದ ಮಸೀದಿಯ ಗುಮ್ಮಟ- ವೀಡಿಯೋ ವೈರಲ್

    ಪ್ರಧಾನಿ ಸ್ಥಾನಕ್ಕೆ ಬೋರಿಸ್‌ ಜಾನ್ಸನ್‌ ರಾಜೀನಾಮೆ ನೀಡಿದ ಬಳಿಕ ನಡೆದ ಚುನಾವಣೆಯಲ್ಲಿ ಲಿಜ್‌ ಟ್ರಸ್‌ ಮತ್ತು ಭಾರತ ಮೂಲದ ರಿಷಿ ಸುನಾಕ್‌ ನಡುವೆ ಪಟ್ಟಕ್ಕಾಗಿ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೆ ಸುನಕ್‌ ಮಣಿಸಿ ಟ್ರಸ್‌ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ನಮ್ಮ ಇಲಾಖೆಯಲ್ಲಿರುವ ಕಳ್ಳ ಅಧಿಕಾರಿಗಳಿಗೆ ನಾನೇ ಬಾಸ್‌ ಎಂದಿದ್ದ ಕೃಷಿ ಸಚಿವ ರಾಜೀನಾಮೆ

    ನಮ್ಮ ಇಲಾಖೆಯಲ್ಲಿರುವ ಕಳ್ಳ ಅಧಿಕಾರಿಗಳಿಗೆ ನಾನೇ ಬಾಸ್‌ ಎಂದಿದ್ದ ಕೃಷಿ ಸಚಿವ ರಾಜೀನಾಮೆ

    ಪಾಟ್ನಾ: ನಮ್ಮ ಇಲಾಖೆಯಲ್ಲಿರುವ ಅಧಿಕಾರಿಗಳು, ನೌಕರರು ಕಳ್ಳರು. ಈ ಕಳ್ಳರಿಗೆ ನಾನೇ ಸರ್ದಾರ (ಮುಖ್ಯಸ್ಥ) ಎಂದು ಹೇಳಿಕೆ ನೀಡಿ ಚರ್ಚೆಗೆ ಗ್ರಾಸವಾಗಿದ್ದ ಬಿಹಾರದ ಕೃಷಿ ಸಚಿವ ಸುಧಾಕರ್‌ ಸಿಂಗ್‌ (Sudhakar Singh) ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ಅವರು ಸಿಂಗ್‌ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ರಾಜ್ಯಪಾಲ ಫಾಗು ಚೌಹಾಣ್ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ (CMO) ಹೇಳಿಕೆಯಲ್ಲಿ ತಿಳಿಸಿದೆ. ಪ್ರವಾಸೋದ್ಯಮ ಸಚಿವ ಕುಮಾರ್ ಸರ್ವಜೀತ್ ಅವರನ್ನು ರಾಜ್ಯದ ನೂತನ ಕೃಷಿ ಸಚಿವರನ್ನಾಗಿ ನೇಮಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ನಿರ್ವಹಿಸಲಿದ್ದಾರೆ. ಇದನ್ನೂ ಓದಿ: ದುರ್ಗಾ ಪೂಜೆ ವೇಳೆ ಪೆಂಡಾಲ್‍ಗೆ ಬೆಂಕಿ – ಮಕ್ಕಳು ಸೇರಿದಂತೆ ಐವರು ಸಾವು, 66 ಮಂದಿಗೆ ಗಾಯ

    ಜೆಡಿಯು ಸಂಸದೀಯ ಮಂಡಳಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಮಾತನಾಡಿ, ಈ ಬೆಳವಣಿಗೆಯು ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ. ಲಾಲು ಪ್ರಸಾದ್ ಮತ್ತು ತೇಜಸ್ವಿ ಅವರು ರಾಜೀನಾಮೆ ಕೇಳಿದರೆ ನೀಡುತ್ತೇನೆ ಎಂದು ಸುಧಾಕರ್ ಸಿಂಗ್ ಈ ಹಿಂದೆಯೇ ಹೇಳಿದ್ದರು. ಬಹುಶಃ ಅವರಿಗೆ ರಾಜೀನಾಮೆ ನೀಡುವಂತೆ ಕೇಳಿರಬಹುದು ಎಂದು ತಿಳಿಸಿದ್ದಾರೆ.

    ಈಚೆಗೆ ಸುಧಾಕರ್‌ ಸಿಂಗ್‌ ಅವರು ರೈತರ ಸಮಾವೇಶವೊಂದರಲ್ಲಿ ಮಾತನಾಡುವಾಗ, ನನ್ನ ಇಲಾಖೆಯಲ್ಲಿ ಅನೇಕ ಕಳ್ಳರಿದ್ದು, ಹಣವನ್ನು ದೋಚುತ್ತಿದ್ದಾರೆ. ನಾನು ಇಲಾಖೆಗೆ ಪ್ರಭಾರಿಯಾಗಿರುವುದರಿಂದ ಅವರಿಗೆ ಮುಖ್ಯಸ್ಥನಾಗುತ್ತೇನೆ. ನನಗಿಂತ ಮೇಲಿರುವ ಅನೇಕ ಮುಖ್ಯಸ್ಥರಿದ್ದಾರೆ. ಈ ಸರ್ಕಾರವು ಹಳೆಯದು. ಅದರ ಕಾರ್ಯಶೈಲಿಯೂ ಹಳೆಯದು. ಸರ್ಕಾರವನ್ನು ಎಚ್ಚರಿಸುವುದು ಸಾಮಾನ್ಯ ಜನರ ಕರ್ತವ್ಯ ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಐಸಿಯುನಲ್ಲಿ ಮುಲಾಯಂ ಸಿಂಗ್ – ಅಖಿಲೇಶ್‍ಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಮೋದಿ

    Live Tv
    [brid partner=56869869 player=32851 video=960834 autoplay=true]

  • ಬಿಹಾರ ಸ್ಪೀಕರ್‌ ಸ್ಥಾನಕ್ಕೆ ವಿಜಯ್‌ ಕುಮಾರ್‌ ಸಿನ್ಹಾ ರಾಜೀನಾಮೆ

    ಬಿಹಾರ ಸ್ಪೀಕರ್‌ ಸ್ಥಾನಕ್ಕೆ ವಿಜಯ್‌ ಕುಮಾರ್‌ ಸಿನ್ಹಾ ರಾಜೀನಾಮೆ

    ಪಾಟ್ನಾ: ಬಿಹಾರ ವಿಧಾನಸಭೆಯಲ್ಲಿ ʼಮಹಾಘಟಬಂಧನʼ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚಿಸುವುದಕ್ಕೂ ಮುನ್ನ ಸ್ಪೀಕರ್‌ ವಿಜಯ್‌ ಕುಮಾರ್‌ ಸಿನ್ಹಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮಹಾಘಟಬಂಧನ ಮೈತ್ರಿಕೂಟ ತಮ್ಮ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯದ ಬಗ್ಗೆ ದುಃಖ ವ್ಯಕ್ತಪಡಿಸಿದರು.

    ಸಿನ್ಹಾ ಅವರು ಅಸೆಂಬ್ಲಿಯಿಂದ ತರಾತುರಿಯಿಂದ ನಿರ್ಗಮಿಸಿದರು. ಬಿಜೆಪಿಯ ಬಹುತೇಕ ಶಾಸಕರು ಕೇಸರಿ ಸ್ಕಾರ್ಫ್ ಧರಿಸಿ ‘ಭಾರತ್ ಮಾತಾ ಕಿ ಜೈ’ ಮತ್ತು ‘ಜೈ ಶ್ರೀರಾಮ್’ ಎಂದು ಘೋಷಣೆಗಳನ್ನು ಕೂಗಿದರು. ಇದನ್ನೂ ಓದಿ: ಬಹುಮತ ಸಾಬೀತಿಗೆ ಮುಂದಾದ ನಿತೀಶ್‌ ಕುಮಾರ್ – RJD ಪಕ್ಷದ ಇಬ್ಬರು ಹಿರಿಯ ನಾಯಕರ ಮನೆ ಮೇಲೆ CBI ದಾಳಿ

    ಇದಕ್ಕೂ ಮುನ್ನ ಆಡಳಿತಾರೂಢ ಮೈತ್ರಿಕೂಟವು ಸಿನ್ಹಾ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಲು ಮನವಿ ಸಲ್ಲಿಸಿತ್ತು. ಇದಕ್ಕೆ ಉತ್ತರಿಸಿದ ಸಿನ್ಹಾ, ಅವಿಶ್ವಾಸ ನಿಲುವಳಿ ಸ್ಪಷ್ಟವಾಗಿಲ್ಲ. ಅವಿಶ್ವಾಸ ನಿಲುವಳಿ ಮಂಡನೆಗಾಗಿ 9 ಮಂದಿ ಬರೆದ ಪತ್ರಗಳ ಪೈಕಿ 8 ಪತ್ರಗಳು ನಿಯಮಕ್ಕೆ ಅನುಗುಣವಾಗಿಲ್ಲ ಎಂದು ಹೇಳಿದರು. ನಂತರ ಭಾಷಣ ಮಾಡಿದ ಅವರು ರಾಜೀನಾಮೆ ನಿರ್ಧಾರ ಪ್ರಕಟಿಸಿದರು.

    ಈಚೆಗೆ ಬಿಜೆಪಿ ಜತೆಗಿನ ಮೈತ್ರಿಯಿಂದ ಜೆಡಿ(ಯು) ಹೊರಬಂದಿತು. ನಂತರ ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ), ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಜತೆ ಸೇರಿ ಮಹಾ ಮೈತ್ರಿಕೂಟ ಸರ್ಕಾರ ರಚಿಸಿತ್ತು. ಇದನ್ನೂ ಓದಿ: ನಾಪತ್ತೆ ಆಗಿದ್ದ ಬಿಜೆಪಿ ಮುಖಂಡ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    Live Tv
    [brid partner=56869869 player=32851 video=960834 autoplay=true]

  • ಪಂಜಾಬ್ ಕಾಂಗ್ರೆಸ್‍ಗೆ ನಡುಕ- ಸಿಧು ಬೆನ್ನಲ್ಲೇ ನಾಲ್ವರು ರಾಜೀನಾಮೆ

    ಪಂಜಾಬ್ ಕಾಂಗ್ರೆಸ್‍ಗೆ ನಡುಕ- ಸಿಧು ಬೆನ್ನಲ್ಲೇ ನಾಲ್ವರು ರಾಜೀನಾಮೆ

    ಚಂಡೀಗಢ: 2022ರ ಚುನಾಣೆ ಹತ್ತಿರವಾದ ಬೆನ್ನಲ್ಲೇ ಪಂಜಾಬ್ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗುತ್ತಿದೆ. ಇಂದು ಪಂಜಾಬ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಇದೀಗ ಮತ್ತೆ ನಾಲ್ವರು ನಾಯಕರು ರಾಜೀನಾಮೆ ನೀಡಿದ್ದಾರೆ.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ರಜಿಯಾ ಸುಲ್ತಾನಾ, ಶಾಸಕ ಪರಗಟ ಸಿಂಗ್, ಪಂಜಾಬ್ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಗೌತಮ್ ಸೇಠ್ (ತರಬೇತಿ ಮೇಲ್ವಿಚಾರಣೆ), ಕಜಾಂಚಿ ಗುಲ್ಜರ್ ಇಂದರ್ ಚಾಹಲ್ ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಿಧು ಅವರೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇದನ್ನೂ ಓದಿ:  ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ

    ಸಿಧು ಅವರ ರಾಜೀನಾಮೆಯನ್ನು ಕಾಂಗ್ರೆಸ್ ವರಿಷ್ಠರು ಸ್ವೀಕರಿಸಿಲ್ಲ. ರಾಜ್ಯದ ಮಟ್ಟದಲ್ಲಿಯೇ ವಿಚಾರ ಬಗೆಹರಿಸಿಕೊಳ್ಳುವಂತೆ ವರಿಷ್ಠರು ಪಕ್ಷದ ಮುಖಂಡರಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ ಎಂದು ಎಎನ್‍ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

    ನವಜೋತ್ ಸಿಂಗ್ ರಾಜೀನಾಮೆ ನೀಡುತ್ತಿದ್ದಂತೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಪಂಜಾಬ್ ಕಾಂಗ್ರೆಸ್‍ನಲ್ಲಿ ನಡುಕ ಶುರುವಾಗಿದೆ.

  • ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿಗೆ ಟ್ವೀಟ್ ಮಾಡಿದ್ದ ರಾಜಸ್ಥಾನ ಸಿಎಂ ಒಎಸ್‍ಡಿ ರಾಜೀನಾಮೆ!

    ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿಗೆ ಟ್ವೀಟ್ ಮಾಡಿದ್ದ ರಾಜಸ್ಥಾನ ಸಿಎಂ ಒಎಸ್‍ಡಿ ರಾಜೀನಾಮೆ!

    ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಒಎಸ್‍ಡಿ (Officer on Special Duty) ಲೋಕೇಶ್ ಶರ್ಮಾ ಅವರು ನಿನ್ನೆ ರಾತ್ರಿ ರಾಜೀನಾಮೆ ಸಲ್ಲಿಸಿದ್ದಾರೆ.

    ಪಂಜಾಬ್‍ನಲ್ಲಿ ನಾಯಕತ್ವದ ಬದಲಾವಣೆಗೆ ಕಾಂಗ್ರೆಸ್ ವಿರುದ್ಧ ಪರೋಕ್ಷ ಟೀಕೆ ಮಾಡಿದ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಶರ್ಮಾ ರಾಜೀನಾಮೆ ನೀಡಿದ್ದಾರೆ. ಬಲಿಷ್ಠ ವ್ಯಕ್ತಿಯನ್ನು ಅಸಹಾಯಕರನ್ನಾಗಿಸಿ, ಸಾಧಾರಣ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಏರಿಸಲಾಗಿದೆ ಎಂದು ಶರ್ಮಾ ಟ್ವೀಟ್ ಮಾಡಿದ್ದರು. ಈ ಟ್ವೀಟ್‍ಗೆ ಕ್ಷಮೆಯಾಚಿಸಿ ರಾಜಸ್ಥಾನ ಮುಖ್ಯಮಂತ್ರಿಗೆ ವಿಶೇಷ ಕರ್ತವ್ಯದಲ್ಲಿರುವ ಅಧಿಕಾರಿ ಶನಿವಾರ ರಾತ್ರಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಇದನ್ನೂ ಓದಿ:  ಬಿಜೆಪಿಗರನ್ನು ಕಾಂಗ್ರೆಸ್ ಸಂಪರ್ಕಿಸುತ್ತಿರುವುದು ನಿಜ: ಯಡಿಯೂರಪ್ಪ

    ಅವರು ಪ್ರಬಲರನ್ನು ದುರ್ಬಲರನ್ನಾಗಿಸುತ್ತಾರೆ, ಅವರು ಜನರನ್ನು ಬಲವಂತವಾಗಿ ಒತ್ತಾಯಿಸುತ್ತಾರೆ, ಅಂತಿಮವಾಗಿ ಬೇಲಿಯು ಹೊಲವನ್ನು ಮೇಯುತ್ತದೆ, ಆ ಬೆಳೆಯನ್ನು ಉಳಿಸಲು ಯಾರ ಕೈಲಿ ಸಾಧ್ಯ ಎಂದು ಶರ್ಮಾ ಟ್ವೀಟ್ ಮಾಡಿದ್ದರು. ಇದನ್ನೂ ಓದಿ:  ಶ್ವಾನಕ್ಕಾಗಿ ವಿಮಾನದ ಸಂಪೂರ್ಣ ಬ್ಯುಸಿನೆಸ್ ಕ್ಲಾಸಿ ಕ್ಯಾಬಿನ್ ಬುಕ್ ಮಾಡಿದ ಮಾಲೀಕ

    ರಾಜೀನಾಮೆ ಪತ್ರದಲ್ಲಿ ಶರ್ಮಾ ಅವರು, ನಾನು 2010 ರಿಂದ ಟ್ವಿಟ್ಟರ್‌ನಲ್ಲಿ ಸಕ್ರಿಯನಾಗಿದ್ದೇನೆ. ಆದರೆ ಪಕ್ಷದ ವ್ಯಾಪ್ತಿಯನ್ನು ಮೀರಿ ಟ್ವೀಟ್ ಮಾಡಿಲ್ಲ ಎಂದು ಹೇಳಿದ್ದಾರೆ.


    ರಾಜಸ್ಥಾನ ಸಿಎಂ ಅವರ ಒಎಸ್‍ಡಿ ಆಗಿ ನೇಮಕವಾದ ಬಳಿಕ ಯಾವುದೇ ರಾಜಕೀಯ ಟ್ವೀಟ್ ಪೋಸ್ಟ್ ಮಾಡಿಲ್ಲ. ಆದರೆ ನನ್ನ ಟ್ವೀಟ್ ನಿಂದ ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ಸರ್ಕಾರಕ್ಕೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದ್ದರು.