Tag: resigned

  • ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ವಿ.ಎಸ್ ಅಭಿಷೇಕ್‌ ನಾಯ್ಡು ರಾಜೀನಾಮೆ

    ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ವಿ.ಎಸ್ ಅಭಿಷೇಕ್‌ ನಾಯ್ಡು ರಾಜೀನಾಮೆ

    ಬೆಂಗಳೂರು: ಮಾಜಿ ಸಚಿವ ಎಂ. ರಘುಪತಿ ಅವರ ಮೊಮ್ಮಗ, ಬಿಜೆಪಿ (BJP) ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವಿ.ಎಸ್ ಅಭಿಷೇಕ್‌ ನಾಯ್ಡು (Abhishek Naidu) ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (J.P. Nadda) ಅವರಿಗೆ ಪತ್ರ ಬರೆದಿರುವ ಅವರು ಪಕ್ಷದ ಇತ್ತೀಚಿನ ಬೆಳವಣಿಗೆಗಳ ಕಾರಣದಿಂದ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.

    ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಇತ್ತೀಚಿಗೆ ಬೆಳವಣಿಗೆಯಿಂದ ಬೇಸರಗೊಂಡು ಬಿಜೆಪಿಯಿಂದ ದೂರ ಉಳಿದಿದ್ದೆ. ಈಗ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಅಮೃತ್ ಪೌಲ್ ಹರಕೆಯ ಕುರಿ – PSI ಹಗರಣದ ನಿಜವಾದ ಕಿಂಗ್‍ಪಿನ್ ಮಾಜಿ ಸಿಎಂ ಮಗ: ದಿನೇಶ್ ಗುಂಡೂರಾವ್

    ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದ ವಿ.ಎಸ್ ಅಭಿಷೇಕ್‌ ನಾಯ್ಡು ಅವರು, ತಮಿಳುನಾಡು ಬಿಜೆಪಿ ಯುವ ಮೋರ್ಚಾದ ಸಹ ಪ್ರಭಾರಿಯಾಗಿದ್ದರು. ತೆಲಂಗಾಣ(Telangana) ಮತ್ತು ಆಂಧ್ರಪ್ರದೇಶ (AndraPradesh) ಚುನಾವಣೆಯಲ್ಲೂ ಪಕ್ಷದ ಪರ ಕೆಲಸ ಮಾಡಿದ್ದರು.  ಇದನ್ನೂ ಓದಿ: ಪುಟಿನ್ ಜೊತೆ ಯಾವುದೇ ಮಾತುಕತೆ ನಡೆಸಲ್ಲ – ಮೋದಿಗೆ ಕರೆ ಮಾಡಿದ ಝೆಲೆನ್ಸ್ಕಿ

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ತೊರೆದ ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್

    ಕಾಂಗ್ರೆಸ್ ತೊರೆದ ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್

    ನವದೆಹಲಿ: 46 ವರ್ಷಗಳ ಸುದೀರ್ಘ ಒಡನಾಟದ ನಂತರ ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್ ಮಂಗಳವಾರ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದಾರೆ.

    ಈ ಕುರಿತಂತೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಸುದೀರ್ಘ ಪತ್ರ ಬರೆದ ಅವರು, ನಾನು 46 ವರ್ಷಗಳ ಸುದೀರ್ಘ ಒಡನಾಟದ ನಂತರ ಪಕ್ಷವನ್ನು ತೊರೆಯುತ್ತಿದ್ದೇನೆ ಎಂದು ಭಾವುಕರಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಚಂದನವನದಲ್ಲಿ ಲವ್ಲಿ ವ್ಯಾಲೆಂಟೈನ್ಸ್ ಡೇ – ಅಭಿಮಾನಿಗಳೊಂದಿಗೆ ಹಂಚಿಕೊಂಡ್ರು ಸ್ಪೆಷಲ್ ಫೋಟೋ!

    ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಲ್ಪಿಸಿದ ಉದಾರ ಪ್ರಜಾಪ್ರಭುತ್ವದ ಭರವಸೆಯ ಆಧಾರದ ಮೇಲೆ ಪರಿವರ್ತಕ ನಾಯಕತ್ವದ ಕಲ್ಪನೆಯಿಂದ ಪ್ರೇರಿತವಾದ ಸಾರ್ವಜನಿಕ ಉದ್ದೇಶಗಳನ್ನು ಪೂರ್ವಭಾವಿಯಾಗಿ ಮುಂದುವರಿಸಲು ನಾನು ಆಶಿಸುತ್ತೇನೆ. ಹೀಗಾಗಿ ನೀವು ಕೂಡಾ ಅದನ್ನು ಅನುಸರಿಸಿ. ಮುಂಬರುವ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ಸಹಾಯವಾಗುತ್ತದೆ ಎಂದು ಹೇಳಿದರು.

  • ನನ್ನನ್ನು ಅವಮಾನ ಮಾಡಲಾಗಿದೆ – ಸಿಎಂ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ

    ನನ್ನನ್ನು ಅವಮಾನ ಮಾಡಲಾಗಿದೆ – ಸಿಎಂ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ

    – ಭವಿಷ್ಯದಲ್ಲಿ ನನ್ನ ಹಾದಿ ನಾನು ಹುಡುಕಿಕೊಳ್ಳುತ್ತೇನೆ

    ಚಂಡೀಗಢ: ಕಾಂಗ್ರೆಸ್ ಪಕ್ಷದಲ್ಲಿ ಹಲವು ದಿನಗಳಿಂದ ಎದ್ದಿದ್ದ ಬಂಡಾಯದಿಂದ ಇದೀಗ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆ.

    ಪಂಬಾಜ್ ಸಿಎಂ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಹಲವು ಬಿಕ್ಕಟ್ಟುಗಳ ನಡುವೆ ಹೈಕಮಾಂಡ್ ಅಮರೀಂದರ್ ಸಿಂಗ್ ಅವರ ರಾಜೀನಾಮೆ ಪಡೆದಿದೆ. ರಾಜ್ಯಪಾಲರನ್ನು ಭೇಟಿಯಾದ ಅಮರೀಂದರ್ ಸಿಂಗ್ ರಾಜೀನಾಮೆ ಪತ್ರ ನೀಡಿದ್ದಾರೆ. ಬಳಿಕ ಮಾತನಾಡಿ, ಕಾಂಗ್ರೆಸ್ ತೊರೆಯುವ ಮುನ್ಸೂಚನೆ ಕೂಡ ನೀಡಿದ್ದಾರೆ.

    ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಅಮರೀಂದರ್ ಸಿಂಗ್, ತಾನು ಅವಮಾನಕ್ಕೆ ಒಳಗಾಗುತ್ತೇನೆ ಎಂದನಿಸಿತು, ಆದ್ದರಿಂದ ನಾನು ರಾಜೀನಾಮೆ ನೀಡಿದೆ ಎಂದು ಹೇಳಿದ್ದಾರೆ. ನಾನು ರಾಜೀನಾಮೆ ನೀಡಲು ಹೋಗುತ್ತಿದ್ದೇನೆ ಎಂದು ಈಗಾಗಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ತಿಳಿಸಿದ್ದೇನೆ. ಇದು ಮೂರನೇ ಬಾರಿ ನಡೆಯುತ್ತಿದೆ. ನಾನು ಅವಮಾನಕ್ಕೆ ಒಳಗಾಗಿದ್ದೇನೆ. ಅವರು ಯಾರನ್ನು ನಂಬಬಲ್ಲರೋ ಅವರನ್ನು ಮುಖ್ಯಮಂತ್ರಿ ಮಾಡಬಹುದು. ಕಾಂಗ್ರೆಸ್ ಅಧ್ಯಕ್ಷೆ ಏನು ನಿರ್ಧಾರ ಮಾಡುತ್ತಾರೋ ಅದು ಸರಿ. ನಾನು ಕಾಂಗ್ರೆಸ್ ಪಕ್ಷದೊಂದಿಗೆ ಇದ್ದೇನೆ, ನನ್ನ ಬೆಂಬಲಿತರನ್ನು ಭೇಟಿಯಾದ ಬಳಿಕ ನಾನು ನನ್ನ ಮುಂದಿನ ಜೀವನದ ರಾಜಕೀಯದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ತನ್ನ ತಂದೆ ರಾಜೀನಾಮೆ ನೀಡುವ ಬಗ್ಗೆ ಪುತ್ರ ರಣೀಂದರ್ ಸಿಂಗ್ ಕೂಡಾ ಮಾಹಿತಿ ನೀಡಿದ್ದಾರೆ. ನನ್ನ ತಂದೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಅವರ ಜೊತೆಯಾಗಲು ನನಗೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 3ನೇ ಸಾಲಿನಲ್ಲಿ ಕೂತಿದ್ದಕ್ಕೆ ವಿಶೇಷ ಅರ್ಥ ಬೇಕಿಲ್ಲ: ಶೆಟ್ಟರ್

    ಅಮರೀಂದರ್ ಸಿಂಗ್‍ರನ್ನು ಬದಲಾಯಿಸುವಂತೆ ಅನೇಕ ಶಾಸಕರು ಹೈಕಮಾಂಡ್‍ಗೆ ಒತ್ತಡ ಹೇರಿರುವ ಪರಿಣಾಮ ಹೈಕಮಾಂಡ್ ರಾಜೀನಾಮೆ ನೀಡಲು ತಿಳಿಸಲಾಗಿತ್ತು. ಪಂಜಾಬ್ ವಿಧಾನಸಬೇ ಚುನಾವಣೆ ಕೇವಲ 4 ತಿಂಗಳು ಬಾಕಿ ಉಳೀದಿದ್ದು, ಅಧಿಕಾ ಹಸ್ತಾಂತರದ ಪ್ರಸಂಗ ಕುತೂಹಲ ಮೂಡಿಸಿದೆ. ಬಿಜೆಪಿ ಹಾದಿಯನ್ನೇ ಕಾಂಗ್ರೆಸ್ ಪಕ್ಷ ಕೂಡ ಹಿಡಿದಂತಿದೆ. ಕೆಲದಿನಗಳ ಹಿಂದೆ ಬಿಜೆಪಿ, ಕರ್ನಾಟಕ, ಗುಜಾರಾತ್ ಸೇರಿದಂತೆ ಕೆಲ ರಾಜ್ಯಗಳ ಮುಖ್ಯಮಂತ್ರಿಗಳ ಬದಲಾವಣೆ ಮಾಡಿದೆ. ಇದನ್ನೂ ಓದಿ: ನಾಯಕತ್ವ ಬದಲಾವಣೆಗೆ ಮುಂದಾದ ಕಾಂಗ್ರೆಸ್- ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ರಾಜೀನಾಮೆ?

    ಪಂಜಾಬ್ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಆಡಳಿತಾರೂಢ ಕಾಂಗ್ರೆಸ್ಸಿನಲ್ಲಿ ಸಿಎಂ ವಿರುದ್ಧ ಹಲವು ಶಾಸಕರು ಹಾಗೂ ಸಚಿವರು ಬಂಡಾಯವೆದ್ದಿದ್ದರು. 2017ರ ವಿಧಾನಸಭೆ ಚುನಾವಣೆ ಮುನ್ನ ಅಮರೀಂದರ್ ಸಿಂಗ್ ನೀಡಿದ್ದ ಭರವಸೆಗಳು ರಾಜ್ಯದಲ್ಲಿ ಈಡೇರದೆ ಇರುವುದೇ ಬಂಡಾಯಕ್ಕೆ ಪ್ರಮುಖ ಕಾರಣವಾಗಿದ್ದು, ಅಮರೀಂದರ್ ನಾಯಕತ್ವದಲ್ಲಿ ತಮಗೆ ವಿಶ್ವಾಸವಿಲ್ಲ ಎಂದು ಸಚಿವರು ಮತ್ತು ಶಾಸಕರು ಹೈಕಮಾಂಡ್‍ಗೆ ದೂರು ನೀಡಿದ್ದರು ಎಂದು ಈ ಹಿಂದೆ ಆರೋಪ ಕೇಳಿ ಬಂದಿತ್ತು. ಇದನ್ನೂ ಓದಿ:  ಸಿಎಂ ಬಸವರಾಜ ಬೊಮ್ಮಾಯಿಗೆ ಕೊಲೆ ಬೆದರಿಕೆ

    ಕೆಲ ತಿಂಗಳ ಹಿಂದೆ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಸಿಎಂ ವಿರುದ್ಧ ಹೈಕಮಾಂಡ್‍ಗೆ ದೂರು ನೀಡಿದ್ದರು. ಈ ಸಂದರ್ಭ ಅಮರೀಂದರ್ ಸಿಂಗ್ ವಿರುದ್ಧ 24ಕ್ಕೂ ಹೆಚ್ಚು ಶಾಸಕರು ಅಸಮಾಧಾನ ಹೊರಹಾಕಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಪಂಜಾಬ್‍ನ ಮುಖ್ಯಮಂತ್ರಿ ಅಮರೀಂದರ್ ರಾಜೀನಾಮೆ ಕೊಟ್ಟಿದ್ದಾರೆ.