Tag: Resignation letter

  • ರಾಜೀನಾಮೆ ಕೊಡಬೇಕು ಅನ್ನೋ ನಿರ್ಧಾರ ಮಾಡಿದ್ದು ನಿಜ: ಬಸವರಾಜ್ ಹೊರಟ್ಟಿ

    ರಾಜೀನಾಮೆ ಕೊಡಬೇಕು ಅನ್ನೋ ನಿರ್ಧಾರ ಮಾಡಿದ್ದು ನಿಜ: ಬಸವರಾಜ್ ಹೊರಟ್ಟಿ

    – ಕಳೆದ ಮೂರು ವರ್ಷಗಳಿಂದ ಅಸಮಾಧಾನ ಇದೆ ಎಂದ ಸಭಾಪತಿ

    ಹುಬ್ಬಳ್ಳಿ: ರಾಜೀನಾಮೆ ( Resignation) ಕೊಡಬೇಕು ಎಂಬ ನಿರ್ಧಾರ ಮಾಡಿದ್ದು ನಿಜ. ಆದರೆ ಇದೀಗ ಬಹಳ ಜನ ನನಗೆ ಕಾಲ್ ಮಾಡಿ ಬೇಡ ಅನ್ನುತ್ತಿದ್ದಾರೆ ಎಂದು ರಾಜೀನಾಮೆ ವಿಚಾರವಾಗಿ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ಸ್ಪಷ್ಟನೆ ನೀಡಿದ್ದಾರೆ.

    ಸಭಾಪತಿ ಬಸವರಾಜ್ ಹೊರಟ್ಟಿ ರಾಜೀನಾಮೆ ಪತ್ರ ವೈರಲ್ ಆಗುತ್ತಿರುವ ವಿಚಾರದ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಹಿ ಮಾಡಿದ ಪತ್ರ ಇನ್ನೂ ಲಾಕರ್‌ನಲ್ಲಿದೆ. ವೈರಲ್ ಆಗಿರುವುದು ಸಹಿ ಮಾಡದ ಪತ್ರ. ನನ್ನ ಪಿ.ಎ ಆ ಪತ್ರವನ್ನು ವೈರಲ್ ಮಾಡಿದ್ದಾರೆ. ದಿನಾಂಕ 21 ಎಂದು ಹಾಕಿದ್ದೆ. ಈ ಪತ್ರ ಬಹಳ ಜನರ ಹತ್ತಿರ ಹೋಗಿದೆ. ಸಚಿವರು, ಪರಿಷತ್ ಸದಸ್ಯರು ಕಾಲ್ ಮಾಡುತ್ತಿದ್ದಾರೆ. ದುಡುಕಿನ ನಿರ್ಧಾರ ಬೇಡ ಎನ್ನುತ್ತಿದ್ದಾರೆ. ಕೆಲವು ಸಲ ಹಿತೈಷಿಗಳ ಮಾತು ಕೇಳಬೇಕಾಗುತ್ತದೆ ಎಂದರು. ಇದನ್ನೂ ಓದಿ: ಬಿಗ್‌ ಬಾಸ್‌ ಮಾಜಿ ಸ್ವರ್ಧಿಗಳಾದ ರಜತ್, ವಿನಯ್ ಗೌಡ ವಿರುದ್ಧ ಎಫ್‌ಐಆರ್

    ರಾಜೀನಾಮೆ ಕುರಿತು ವಿಚಾರ ಮಾಡುತ್ತೇನೆ. ಮಾನಸಿಕವಾಗಿ ಬೇಸರವಾಗಿದ್ದು ನಿಜ. ಹೀಗಾಗಿ ನಾನು ರಾಜೀನಾಮೆ ಕೊಡುವ ನಿರ್ಧಾರ ಮಾಡಿದ್ದೆ. ಕೆಲವರ ನಡುವಳಿಕೆ ನನ್ನ ಮನಸಿಗೆ ಸಮಾಧಾನವಾಗಿಲ್ಲ. ಕಳೆದ ಮೂರು ವರ್ಷಗಳಿಂದ ಅಸಮಾಧಾನವಾಗಿದೆ. ರಾಜ್ಯದ ಎಲ್ಲಾ ಕಡೆಯಿಂದ ಕರೆ ಬಂದಿದೆ, ಮಾನಸಿಕ ನೆಮ್ಮದಿ ಹಾಳಗಿದೆ. ನಾಳೆ ಒಂದು ದಿನ ಕುಳಿತು ವಿಚಾರ ಮಾಡುತ್ತೇನೆ. ಆತ್ಮೀಯರ ಮಾತು ಕೇಳಿಕೊಂಡು ನಿರ್ಧಾರ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಹಾಲಿನ ದರ ಏರಿಕೆ – ಇಂದು ಸಿಎಂ ಸಭೆಯಲ್ಲಿ ನಿರ್ಧಾರ ಸಾಧ್ಯತೆ!

    ಈ ಮೊದಲು ಮಾತನಾಡಿದ್ದ ಹೊರಟ್ಟಿ, ನಾನು ಸಭಾಪತಿ ಹುದ್ದೆಗೆ ರಾಜೀನಾಮೆ ಕೊಡುತ್ತೇನೆ. ಸಾಕಾಗಿದೆ, ಇನ್ನೂ ಸ್ವಲ್ಪ ಟೆಕ್ನಿಕಲ್ ಸಮಸ್ಯೆ ಇದೆ. ಜನರಿಗೆ ಮೋಸ ಮಾಡೋ ಟ್ರೆಂಡ್ ಬಂದಿದೆ. ಇದೀಗ ವಿಧಾನ ಮಂಡಲಕ್ಕೆ ಬಂದಿದೆ. ರಾಜಕಾರಣ ಬಹಳ ಕಲುಷಿತ ಆಗಿದೆ. ಕಾಲ ಕೆಟ್ಟಿದೆ, ಸದನದ ಗೌರವ ಹೋಗಿ ಬಹಳ ದಿನ ಆಗಿದೆ. ಚುನಾವಣೆಯಲ್ಲಿ ಸೋಲಿಸೋಕೆ ಆಗಿದಿದ್ರೆ ಈ ತರಹ ಟಾರ್ಗೆಟ್ ಮಾಡೋದು ಸರಿಯಲ್ಲ. ಇದೆಲ್ಲ ದುರ್ದೈವ. ಇತ್ತಿಚೆಗೆ ಸದನದಲ್ಲಿ ನಡೆದ ಬೆಳವಣಿಗೆ ನನ್ನ ಮನಸಿಗೆ ಬೇಸರ ತರಿಸಿದೆ. ಈ ಸಭಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದು ಸೂಕ್ತವಲ್ಲ ಎಂಬ ಭಾವನೆ ಬಂದಿದೆ. ಸದನದಲ್ಲಿ ನಡೆದ ಬೆಳವಣಿಗೆ ನಿಯಂತ್ರಿಸುವಲ್ಲಿ ನಾನು ವಿಫಲವಾಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ತುಮಕೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಶೀತಲ ಸಮರ; ಡಾ.ರಂಗನಾಥ್-ರಾಜಣ್ಣ ಕುಟುಂಬ ನಡುವೆ ವಾರ್

    ಮೇಲೆಮನೆ ಚಿಂತಕರ ಛವಾಡಿ ಎಂದು ಕರೆಯುತ್ತೇವೆ. ಆದರೆ ಸದನದಲ್ಲಿ ಪ್ಲೇಕಾರ್ಡ್ ಹಿಡಿದು ಬಂದ್ರು, ಘೋಷಣೆ ಕೂಗಿದರು. ಗದ್ದಲದಲ್ಲಿ ಕೆಲ ಬಿಲ್‌ಗಳು ಪಾಸ್ ಆಗಿವೆ. ಏನೂ ಚರ್ಚೆಯೇ ಆಗದೆ ಬಿಲ್ ಪಾಸ್ ಆಗುತ್ತಿವೆ. ಮುಸ್ಲಿಂ ಮೀಸಲಾತಿ ವಿಚಾರದ ಬಗ್ಗೆ ಸಣ್ಣದೊಂದು ಚರ್ಚೆ ಆಗಿದ್ದು ಬಿಟ್ಟರೆ, ಯಾವುದೇ ಬಿಲ್ ಬಗ್ಗೆ ಚರ್ಚೆಯೇ ಆಗಲಿಲ್ಲ. ಇನ್ನೂ ನಾನು ಸದನದಲ್ಲಿ ಇದ್ದು ಏನು ಪ್ರಯೋಜನ? ಹುದ್ದೆಗೆ ಘನತೆ ಗೌರವ ಇಲ್ಲದಿದ್ದ ಮೇಲೆ ಅಲ್ಲಿ ಇರಬಾರದು ಎಂದು ತೀರ್ಮಾನಕ್ಕೆ ಬಂದಿದ್ದೇನೆ ಎಂದು ಅತ್ಯಂತ ಭಾವುಕರಾಗಿ ಮಾತನಾಡಿದ್ದರು. ಇದನ್ನೂ ಓದಿ: ಶಿರಸಿ: ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಕಸ್ಮಿಕ ಬೆಂಕಿ – ತಪ್ಪಿದ ಭಾರಿ ಅನಾಹುತ

    ಸಭಾಪತಿ ಹುದ್ದೆಗೆ ಬಸವರಾಜ ಹೊರಟ್ಟಿ ರಾಜೀನಾಮೆ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಫೇಕ್ ರಾಜೀನಾಮೆ ಪತ್ರ ವೈರಲ್ ಆಗಿದೆ. ಬಸವರಾಜ ಹೊರಟ್ಟಿ ಲೆಟರ್ ಹೆಡ್‌ನಲ್ಲಿ ರಾಜೀನಾಮೆಯ ನಕಲಿ ಪತ್ರ ವೈರಲ್ ಆಗಿತ್ತು. ಆದರೆ ಇದು ಸುಳ್ಳು ಎಂದು ಹೊರಟ್ಟಿ ಕಚೇರಿಯ ಸಿಬ್ಬಂದಿ ವರ್ಗ ‘ಪಬ್ಲಿಕ್ ಟಿವಿ’ಗೆ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: IPL 2025: ಗಾಯಕ್ವಾಡ್‌, ರಚಿನ್‌ ಫಿಫ್ಟಿ ಆಟ – ಮುಂಬೈ ವಿರುದ್ಧ ಚೆನ್ನೈಗೆ 4 ವಿಕೆಟ್‌ಗಳ ಜಯ

  • ಮಣಿಪುರ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ಪತ್ರವನ್ನು ಹರಿದು ಹಾಕಿದ ಮಹಿಳೆ

    ಮಣಿಪುರ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ಪತ್ರವನ್ನು ಹರಿದು ಹಾಕಿದ ಮಹಿಳೆ

    ಇಂಫಾಲ: ಕಳೆದ 2 ತಿಂಗಳಿನಿಂದ ಮಣಿಪುರದಲ್ಲಿ (Manipur) ನಡೆಯುತ್ತಿರುವ ಹಿಂಸಾಚಾರವನ್ನು ನಿಭಾಯಿಸುವಲ್ಲಿ ವಿಫಲವಾಗಿ ತೀವ್ರ ಟೀಕೆಗೆ ಗುರಿಯಾಗಿರುವ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ (N Biren Singh) ಅವರು ಶುಕ್ರವಾರ ರಾಜೀನಾಮೆ ನೀಡಲು ಮುಂದಾಗಿದ್ದರು. ಈ ವೇಳೆ ರಾಜೀನಾಮೆಯನ್ನು ವಿರೋಧಿಸಿದ ಮಹಿಳೆಯೊಬ್ಬರು ಅವರ ಪತ್ರವನ್ನು (Resignation Letter) ಹರಿದು ಹಾಕಿರುವ ಘಟನೆ ನಡೆದಿದೆ.

    ಬಿರೇನ್ ಸಿಂಗ್ ತಮ್ಮ ರಾಜೀನಾಮೆ ಪತ್ರವನ್ನು ಹಿಡಿದು ರಾಜ್ಯಪಾಲರ ಭವನಕ್ಕೆ ಹೊರಟಿದ್ದರು. ಆದರೆ ಇಂಫಾಲದಲ್ಲಿರುವ ಸಿಎಂ ನಿವಾಸದ ಹೊರಗಡೆ ಅವರ ಬೆಂಬಲಿಗರು ಜಮಾಯಿಸಿ ರಾಜೀನಾಮೆಯನ್ನು ವಿರೋಧಿಸಿದ್ದಾರೆ. ಇಬ್ಬರು ಸಚಿವರು ನಿವಾಸದಿಂದ ಹೊರಗೆ ಬಂದಾಗ ಅವರ ರಾಜೀನಾಮೆ ಪತ್ರವನ್ನು ಮಹಿಳೆಯೊಬ್ಬರು ಕಸಿದುಕೊಂಡು ಅದನ್ನು ಹರಿದು ಹಾಕಿದ್ದಾರೆ.

    ಇದೀಗ ರಾಜೀನಾಮೆ ಅಂಚಿನಲ್ಲಿದ್ದ ಬಿರೇನ್ ಸಿಂಗ್ ಸಾರ್ವಜನಿಕರ ಒತ್ತಡಕ್ಕೆ ಮಣಿದು ತಮ್ಮ ಮನಸ್ಸನ್ನು ಬದಲಾಯಿಸಿದ್ದಾರೆ ಎಂದು ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: 3 ವಲಯ, 3 ಪ್ರತ್ಯೇಕ ಸಭೆ – ಲೋಕಸಭಾ ಚುನಾವಣೆಗೆ ತಯಾರಾದ ಬಿಜೆಪಿ

    ಕಳೆದ 2 ತಿಂಗಳಿನಿಂದ ಮಣಿಪುರದಲ್ಲಿ ಎಸ್‌ಟಿ ಮೀಸಲಾತಿ ವಿಚಾರವಾಗಿ ಮೇಟಿ ಹಾಗೂ ಕುಕಿ ಸಮುದಾಯಗಳ ನಡುವೆ ಹಿಂಸಾಚಾರ ನಡೆಯುತ್ತಿದೆ. ಎರಡು ಸಮುದಾಯಗಳ ಜನಾಂಗೀಯ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 100ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಶಕ್ತಿ ಯೋಜನೆ ರದ್ದು ಮಾಡಿ- ಸಿಎಂಗೆ ಆಟೋ ಚಾಲಕರ ಮನವಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಯ್, ಬಾಯ್ ಸರ್ ಅಂತ ಕಂಪನಿಗೆ ರಾಜೀನಾಮೆ ಪತ್ರ ಬರೆದ – ಎಂಪ್ಲಾಯ್ ರಾಕ್ ಬಾಸ್ ಶಾಕ್

    ಬಾಯ್, ಬಾಯ್ ಸರ್ ಅಂತ ಕಂಪನಿಗೆ ರಾಜೀನಾಮೆ ಪತ್ರ ಬರೆದ – ಎಂಪ್ಲಾಯ್ ರಾಕ್ ಬಾಸ್ ಶಾಕ್

    ದ್ಯೋಗಿಯೊಬ್ಬರು ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ಕಂಪನಿಯ ಮುಖ್ಯಸ್ಥರಿಗೆ ಬರೆದಿರುವ ಮೂರು ಪದಗಳ ರಾಜೀನಾಮೆ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ರಾಜೀನಾಮೆ ಪತ್ರದ ಸ್ಕ್ರೀನ್ ಶಾಟ್‍ಗಳನ್ನು ತಮ್ಮ ಖಾತೆಗಳಲ್ಲಿ ಹಾಕಿಕೊಂಡು ಕಾಮೆಂಟ್ ಮಾಡುತ್ತಿದ್ದಾರೆ. ಈ ರಾಜೀನಾಮೆ ಪತ್ರದಲ್ಲಿ ಮೊದಲು ಡಿಯರ್ ಸರ್ ಎಂದು ಆರಂಭವಾಗಿ ನಂತರ ವಿಷಯ ರಾಜೀನಾಮೆ ಪತ್ರ ಬಾಯ್ ಬಾಯ್ ಸರ್ ನಿಮ್ಮ ವಿಶ್ವಾಸಿ ಎಂದು ಬರೆದುಕೊಂಡು ಸಹಿ ಹಾಕಿರುವುದು ಕಂಡು ಬಂದಿದೆ. ಇದನ್ನೂ ಓದಿ: ದಂತ ವೈದ್ಯರ ಎಡವಟ್ಟು – ಚಿಕಿತ್ಸೆ ಪಡೆದ ನಟಿಯ ಮುಖ ಸಂಪೂರ್ಣ ಚೇಂಚ್

    ಇದೀಗ ನೆಟ್ಟಿಗರು ಮೂರು ಪದಗಳಲ್ಲಿ ರಾಜೀನಾಮೆ ಪತ್ರ ನೋಡಿ ಖುಷಿ ಪಡುತ್ತಿದ್ದಾರೆ. ಕೆಲವರು ಬಾಯ್ ಬಾಯ್ ಸರ್ ಕೇವಲ ಮೂರು ಪದಗಳ ಮೂಲಕ ರಾಜೀನಾಮೆ ಸಲ್ಲಿಸಬಹುದು ಎಂಬುದನ್ನು ಕಲಿತಂತಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲ ಉದ್ಯೋಗಿಗಳು ತಾವು ಈ ಹಿಂದೆ ಈ ರೀತಿ ಹಲವು ಕಾರ್ಯಗಳನ್ನು ಮಾಡಿದ್ದೇವೆ ಎಂದು ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರು ತೊರೆದ ಪುನೀತ್ ರಾಜ್ ಕುಮಾರ್ ಗನ್ ಮ್ಯಾನ್ ಚಲಪತಿ

    Live Tv

  • ಬಿಎಂಟಿಸಿ ಮೇಲಾಧಿಕಾರಿಗಳಿಂದ ಕಿರುಕುಳ -ಚಾಲಕ ಕಮ್ ನಿರ್ವಾಹಕ ರಾಜೀನಾಮೆಗೆ ನಿರ್ಧಾರ

    ಬಿಎಂಟಿಸಿ ಮೇಲಾಧಿಕಾರಿಗಳಿಂದ ಕಿರುಕುಳ -ಚಾಲಕ ಕಮ್ ನಿರ್ವಾಹಕ ರಾಜೀನಾಮೆಗೆ ನಿರ್ಧಾರ

    ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಚಾಲಕ- ನಿರ್ವಾಹಕರಿಗೆ ಕಿರುಕುಳ ಹೆಚ್ಚಾಗಿದೆ ಎನ್ನುವುದಕ್ಕೆ ಘಟನೆಯೊಂದು ಬೆಳಕಿಗೆ ಬಂದಿದೆ.

    ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಡ್ರೈವರ್ ಕಮ್ ಕಂಡೆಕ್ಟರ್ ಆಗಿರುವ ಪುಂಡಲಿಕ ಹನುಮಂತ ಉಮರಾಣಿ ಸ್ವ-ಇಚ್ಛೆಯಿಂದ ರಾಜೀನಾಮೆಗೆ ಮುಂದಾಗಿದ್ದಾರೆ. ಡಿಪೋ 32ರಲ್ಲಿ ಬಿಎಂಟಿಸಿಯ ಚಾಲಕ ಹಾಗೂ ನಿರ್ವಾಹಕರಾಗಿರುವ ಪುಂಡಲಿಕ ಹನುಮಂತ ಉಮರಾಣಿ, ಇದೇ ತಿಂಗಳ 15ರಂದು ಬನಶಂಕರಿ- ಅತ್ತಿಬೆಲೆ ಮಾರ್ಗದಲ್ಲಿ ಕಂಡೆಕ್ಟರ್ ಆಗಿ ಕರ್ತವ್ಯದಲ್ಲಿ ಇದ್ದರು.

    ಕರ್ತವ್ಯದಲ್ಲಿ ಇದ್ದಾಗ, ಟಿಕೆಟ್ ತನಿಖಾಧಿಕಾರಿ ಗಂಗಮ್ಮ ತಲವಾರ್ ಎಂಬುವವರು ಕೇಸ್ ಹಾಕಿದ್ದರು ಎನ್ನಲಾಗಿದೆ. ನನ್ನ ಮೇಲೆ ಕೇಸ್ ಹಾಕಿದ್ದಕ್ಕೆ ಡಿಪೋದಲ್ಲಿ ಅಧಿಕಾರಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ನಾನು ಕರ್ತವ್ಯದಲ್ಲಿ ಇದ್ದಾಗ ಕಳ್ಳನ ಹಾಗೇ ನೋಡಿ ಅವಮಾನ ಮಾಡಿದ್ದಾರೆ. ಈ ಅವಮಾನಕ್ಕೆ ಆತ್ಮಹತ್ಯೆ ಮಾಡಿಕೊಳ್ಳೋದಾ ಎಂದು ಒಮ್ಮೊಮ್ಮೆ ಎನಿಸುತ್ತೆ ಎಂದು ನಿರ್ವಾಹಕ ಭಾವುಕರಾಗಿ ಮಾತನಾಡಿದರು.

    ಇಂದು ಫ್ರೀಡಂಪಾರ್ಕ್ ರಸ್ತೆಯಲ್ಲಿ ಸಾರಿಗೆ ನೌಕರರ ಪ್ರತಿಭಟನೆಗೆ ಬಂದಿದ್ದ ನಿರ್ವಾಹಕ ಪುಂಡಲೀಕ ಹನುಮಂತ ನೇರವಾಗಿ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರಿಗೆ ರಾಜೀನಾಮೆ ಪತ್ರವನ್ನು ನೀಡಲಿದ್ದಾರೆ.

  • ಮುನಿರತ್ನ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ರಾ ಡಿಕೆಶಿ?

    ಮುನಿರತ್ನ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ರಾ ಡಿಕೆಶಿ?

    ಬೆಂಗಳೂರು: ರಾಜರಾಜೇಶ್ವರಿ ಶಾಸಕ ಮುನಿರತ್ನ ಅವರ ರಾಜೀನಾಮೆ ಪತ್ರವನ್ನು ಸಚಿವ ಡಿ.ಕೆ.ಶಿವಕುಮಾರ್ ಹರಿದು ಹಾಕಿದ್ದಾರಾ ಎಂಬ ಪ್ರಶ್ನೆ ಭಾರೀ ಚರ್ಚೆಯಾಗುತ್ತಿದೆ.

    ಸ್ಪೀಕರ್ ರಮೇಶ್ ಕುಮಾರ್ ಅವರ ಕಚೇರಿಗೆ ಒಟ್ಟು 12 ಜನ ಅತೃಪ್ತ ಶಾಸಕರು ರಾಜೀನಾಮೆ ನೀಡಲು ತೆರಳಿದ್ದರು. ರಾಜೀನಾಮೆ ನೀಡುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸ್ಪೀಕರ್ ಕಚೇರಿಯನ್ನು ಡಿಕೆ ಶಿವಕುಮಾರ್ ಪ್ರವೇಶಿಸಿದ್ದಾರೆ. ಈ ವೇಳೆ ಮುನಿರತ್ನ ಅವರ ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ದಾರೆ ಎನ್ನಲಾಗಿದೆ.

    ಶಾಸಕರು ರಾಜೀನಾಮೆ ನೀಡಿದ ಬಳಿಕ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಕಾರಿನಲ್ಲಿ ಶಾಸಕರಾದ ಮುನಿರತ್ನ, ಭೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಹಾಗೂ ರಾಮಲಿಂಗಾ ರೆಡ್ಡಿ ಅವರನ್ನು ನಿವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಈಗಾಗಲೇ ಮುನಿರತ್ನ ಅವರ ರಾಜೀನಾಮೆಯನ್ನು ತಪ್ಪಿಸಿರುವ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರು, ಉಳಿದ ಮೂವರು ಶಾಸಕರ ಮನವೊಲಿಸಿ ರಾಜೀನಾಮೆಯನ್ನು ಹಿಂಪಡೆಯುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

    ರಾಜೀನಾಮೆ ನೀಡಿದವರು ಯಾರ‍್ಯಾರು?:
    ಗೋಕಾಕ್‍ನ ಶಾಸಕ ರಮೇಶ್ ಜಾರಕಿಹೊಳಿ, ಹೀರೆಕೆರೂರಿನ ಬಿ.ಸಿ.ಪಾಟೀಲ್, ಮಸ್ಕಿಯ ಪ್ರತಾಪ್‍ಗೌಡ ಪಾಟೀಲ್, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಅಥಣಿಯ ಮಹೇಶ್ ಕುಮಕಟಳ್ಳಿ, ಕೆ.ಆರ್.ಪೇಟೆಯ ನಾರಾಯಣಗೌಡ, ಜೆಡಿಎಸ್‍ನ ಗೋಪಾಲಯ್ಯ, ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ, ಯಶವಂತಪುರದ ಎಸ್.ಟಿ.ಸೋಮಶೇಖರ್ ಹಾಗೂ ಭೈರತಿ ಬಸವರಾಜು ರಾಜೀನಾಮೆ ನೀಡಿದ್ದಾರೆ. ಜೆಡಿಎಸ್ ಮಾಜಿ ಅಧ್ಯಕ್ಷ ಹುಣಸೂರು ಶಾಸಕ ವಿಶ್ವನಾಥ್, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ ರಾಜೀನಾಮೆ ನೀಡಿದ್ದಾರೆ.