Tag: residential college

  • ವಸತಿ ಕಾಲೇಜಿನ ಮೊದಲನೇ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವು

    ವಸತಿ ಕಾಲೇಜಿನ ಮೊದಲನೇ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿ ಸಾವು

    ಚಿಕ್ಕೋಡಿ: ವಸತಿ ಕಾಲೇಜಿನ  (Residential College) ಮೊದಲನೇ ಮಹಡಿಯಿಂದ ಬಿದ್ದು ಪಿಯುಸಿ ವಿದ್ಯಾರ್ಥಿನಿ (PUC Student) ಸಾವನ್ನಪ್ಪಿದ ಘಟನೆ ಬೆಳಗಾವಿ  (Belagavi) ಜಿಲ್ಲೆ ಚಿಕ್ಕೋಡಿ (Chikkodi) ತಾಲೂಕಿನ ಹಿರೇಕೋಡಿ (Hirekodi) ಗ್ರಾಮದಲ್ಲಿ ನಡೆದಿದೆ.

    ಗೋಕಾಕ್ ತಾಲೂಕಿನ ಶಿಂದಿ ಕುರಬೇಟ್ ಗ್ರಾಮದ ವಿದ್ಯಾರ್ಥಿನಿ ಆಫ್ರೀನ್ ಜಮಾದಾರ್ (17) ಮೃತ ದುರ್ದೈವಿ. ಮಂಗಳವಾರ ಪರೀಕ್ಷೆ ಇದ್ದ ಹಿನ್ನೆಲೆ ಸೋಮವಾರ ಮಧ್ಯರಾತ್ರಿ ವಸತಿ ಶಾಲೆಯ ಮೊದಲ ಮಹಡಿಯಲ್ಲಿ ಓದುತ್ತಾ ಕುಳಿತಿದ್ದ ವೇಳೆ ಘಟನೆ ನಡೆದಿದೆ. ಇದನ್ನೂ ಓದಿ: ಬಿರುಗಾಳಿ ಸಹಿತ ಭಾರೀ ಮಳೆಗೆ ಹಾರಿ ಹೋಯ್ತು ಸರ್ಕಾರಿ ಶಾಲಾ ಮೇಲ್ಛಾವಣಿ

    ಆಯ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಷ್ಯಾವನ್ನು ಹಾಡಿ ಹೊಗಳಿ ಪಾಶ್ಚಿಮಾತ್ಯ ದೇಶಗಳಿಗೆ ಮಾತಿನಲ್ಲೇ ತಿವಿದ ಜೈಶಂಕರ್‌

  • ಕಾಂಪೌಂಡ್ ಹತ್ತುವ ವೇಳೆ ಜಾರಿಬಿದ್ದು ವಿದ್ಯಾರ್ಥಿನಿ ಸಾವು

    ಕಾಂಪೌಂಡ್ ಹತ್ತುವ ವೇಳೆ ಜಾರಿಬಿದ್ದು ವಿದ್ಯಾರ್ಥಿನಿ ಸಾವು

    ದಾವಣಗೆರೆ: ಕಾಂಪೌಂಡ್ (Compound) ಹತ್ತುವ ವೇಳೆ ಜಾರಿ ಬಿದ್ದು ವಿದ್ಯಾರ್ಥಿನಿ (Student) ಸಾವನ್ನಪಿದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹರಿಹರ (Harihara) ತಾಲೂಕಿನಲ್ಲಿ ನಡೆದಿದೆ.

    ಹರಿಹರದ ಮಾನ್ಯತಾ ಪಬ್ಲಿಕ್ ವಸತಿ ಕಾಲೇಜ್‌ನಲ್ಲಿ (Residential College) ಘಟನೆ ನಡೆದಿದ್ದು, ಸಿನಿಕ್ಷಾ (16) ಕಾಂಪೌಂಡ್‌ನಿಂದ ಜಾರಿಬಿದ್ದು ಮೃತಪಟ್ಟಿದ್ದಾಳೆ. ವಿಜಯನಗರ (Vijayanagara) ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣದ ಶಶಿಕಾಂತ್ ದಂಪತಿಯ ಪುತ್ರಿಯಾದ ಈಕೆ ಕಳೆದ ನಾಲ್ಕು ದಿನಗಳ ಹಿಂದಷ್ಟೇ ವಸತಿ ಶಾಲೆಗೆ ಸೇರಿದ್ದಳು. ಮಂಗಳವಾರ ರಾತ್ರಿ 11:30ರ ವೇಳೆಗೆ ವಸತಿ ಶಾಲೆಯ ಕಾಂಪೌಂಡ್ ಹತ್ತುವ ಸಂದರ್ಭ ಸಿನಿಕ್ಷಾ ಜಾರಿ ಬಿದ್ದಿದ್ದಾಳೆ. ಇದನ್ನೂ ಓದಿ: ಬೆಂ-ಮೈ ಹೆದ್ದಾರಿಯಲ್ಲಿ ಭೀಕರ ಅಪಘಾತ – ಮೂವರ ಸಾವು, ಓರ್ವನ ಸ್ಥಿತಿ ಗಂಭೀರ

    ಘಟನೆಯಿಂದ ತೀವ್ರ ಗಾಯಗೊಂಡಿದ್ದ ಸಿನಿಕ್ಷಾಳನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗಿನ ಜಾವ ಸಾವನ್ನಪ್ಪಿದ್ದಾಳೆ. ವಿದ್ಯಾರ್ಥಿನಿ ರಾತ್ರಿಯ ವೇಳೆ ಕಾಂಪೌಂಡ್ ಯಾಕೆ ಏರಿದಳು ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಬೈಕ್‌ ಸ್ಕಿಡ್‌ ಆಗಿ ಡಿವೈಡರ್‌ಗೆ ಡಿಕ್ಕಿ – ಕಾನೂನು ವಿದ್ಯಾರ್ಥಿ ದುರ್ಮರಣ

  • ಮದುವೆಯಾಗದವರು ಮಾತ್ರ ವಸತಿ ಕಾಲೇಜಿಗೆ ಅರ್ಜಿ ಸಲ್ಲಿಸಿ: ತೆಲಂಗಾಣ ಸರ್ಕಾರ

    ಮದುವೆಯಾಗದವರು ಮಾತ್ರ ವಸತಿ ಕಾಲೇಜಿಗೆ ಅರ್ಜಿ ಸಲ್ಲಿಸಿ: ತೆಲಂಗಾಣ ಸರ್ಕಾರ

    ಹೈದರಾಬಾದ್: ಮದುವೆಯಾಗದ ಮಹಿಳೆಯರು ಮಾತ್ರ ಇಲ್ಲಿನ ಸಮಾಜ ಕಲ್ಯಾಣ ವಸತಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಅರ್ಜಿ ಸಲ್ಲಿಸಬಹುದು ಎಂದು ತೆಲಂಗಾಣ ಸರ್ಕಾರ ಹೇಳಿದೆ.

    ವಸತಿ ಕಾಲೇಜುಗಳಲ್ಲಿ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿರುವ ತೆಲಂಗಾಣ ಸಮಾಜ ಕಲ್ಯಾಣ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಮದುವೆಯಾಗದ ಮಹಿಳಾ ಅಭ್ಯರ್ಥಿಗಳು 2017-18ನೇ ಸಾಲಿನ ಪದವಿ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.

    ಈ ಬಗ್ಗೆ ಅಧಿಕಾರಿಗಳು ಹೇಳಿಕೆ ನೀಡಿದ್ದು, ಮದುವೆಯಾದ ಮಹಿಳೆಯರ ಗಂಡಂದಿರು ವಾರಕೊಮ್ಮೆ ಅಥವಾ 15 ದಿನಗಳಿಗೊಮ್ಮೆ ಬಂದು ಅವರನ್ನು ಭೇಟಿಯಗುವ ಸಾಧ್ಯತೆಯಿರುತ್ತದೆ. ಇದರಿಂದಾಗಿ ವಸತಿ ಕಾಲೇಜುಗಳಲ್ಲಿರುವ ಇತರೆ ವಿದ್ಯಾರ್ಥಿನಿಯರ ಗಮನ ಬೇರೆಡೆ ಹರಿಯಬಹುದು. ಈ ಕಾರಣಕ್ಕಾಗಿ ಮದುವೆಯಾಗದ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದಿದ್ದಾರೆ.

    ಸಂಘದ ಕಾರ್ಯದರ್ಶಿ ಡಾ. ಆರ್ ಎಸ್ ಪ್ರವೀಣ್ ಕುಮಾರ್ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ನಾವು ವಿವಾಹಿತ ಮಹಿಳೆಯರನ್ನು ಪ್ರೋತ್ಸಾಹಿಸುವುದಿಲ್ಲ ಹಾಗೆ ಅವರು ಪ್ರವೇಶಾತಿ ಬಯಸಿ ಬಂದರೆ ಅದನ್ನು ತಡೆಯುವುದಿಲ್ಲ. ಅವರನ್ನು ನಿರಾಕರಿಸುವುದಾಗಲೀ ಅವರಿಗೆ ನೋವುಂಟುಮಾಡುವುದಾಗಲೀ ನಮ್ಮ ಉದ್ದೇಶವಲ್ಲ ಎಂದಿದ್ದಾರೆ.

    ಆದ್ರೆ ಇದಕ್ಕೆ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದು. ಕೂಡಲೇ ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.