Tag: residence

  • ಪ್ರಧಾನಿ ಮೋದಿ ನಿವಾಸದ ಮೇಲೆ ಡ್ರೋನ್ ಹಾರಾಟ – ಪೊಲೀಸರಿಂದ ತೀವ್ರ ತನಿಖೆ

    ಪ್ರಧಾನಿ ಮೋದಿ ನಿವಾಸದ ಮೇಲೆ ಡ್ರೋನ್ ಹಾರಾಟ – ಪೊಲೀಸರಿಂದ ತೀವ್ರ ತನಿಖೆ

    ನವದೆಹಲಿ: ಪ್ರಧಾನಿ ನರೆಂದ್ರ ಮೋದಿ (Narendra Modi) ಅವರ ನಿವಾಸದ (Residence) ಮೇಲೆ ಡ್ರೋನ್ (Drone) ಒಂದು ಅನುಮಾನಾಸ್ಪದವಾಗಿ ಹಾರಾಟ ನಡೆಸಿದ್ದಾಗಿ ವರದಿಯಾಗಿದೆ. ಈ ಬಗ್ಗೆ ದೆಹಲಿ ಪೊಲೀಸರು (Delhi Police) ತನಿಖೆ ಆರಂಭಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸ ರೆಡ್ ನೋ ಫ್ಲೈ ಝೋನ್ ಅಥವಾ ನೋ ಡ್ರೋನ್ ಝೋನ್ ಅಡಿಯಲ್ಲಿ ಬರುತ್ತದೆ. ಸೋಮವಾರ ಬೆಳಗ್ಗೆ ಸುಮಾರು 5 ಗಂಟೆ ವೇಳೆಗೆ ಮೋದಿ ನಿವಾಸದ ಮೇಲೆ ಡ್ರೋನ್ ಸುಳಿದಾಡಿದೆ ಎನ್ನಲಾಗಿದೆ. ಇದನ್ನೂ ಓದಿ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟು – ಇಂದು BJP ಕೇಂದ್ರ ನಾಯಕರು ಬೆಂಗ್ಳೂರಿಗೆ

    ಘಟನೆ ಬೆಳಕಿಗೆ ಬರುತ್ತಲೇ ಅಧಿಕಾರಿಗಳು ಎಚ್ಚೆತ್ತು ಈ ಬಗ್ಗೆ ತೀವ್ರ ತನಿಖೆ ಪ್ರಾರಂಭಿಸಿದ್ದಾರೆ. ಮೋದಿಯವರ ಸುರಕ್ಷತೆಯನ್ನು ಖಾತ್ರಿಪಡಿಸುವ ಕಾರ್ಯವನ್ನು ನಿರ್ವಹಿಸುವ ವಿಶೇಷ ರಕ್ಷಣಾ ತಂಡ ದೆಹಲಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದೆ. ಇದನ್ನೂ ಓದಿ: ಇಂದಿನಿಂದ ವಿಧಾನಮಂಡಲ ಅಧಿವೇಶನ- ಕುತೂಹಲ ಮೂಡಿಸಿದ ರಾಜ್ಯಪಾಲರ ಭಾಷಣ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಸಾವಿರಾರು ಜನ – ಪೂಲ್‌ನಲ್ಲಿ ಪ್ರತಿಭಟನಾಕಾರರು, ರಾಜಪಕ್ಸೆ ಪರಾರಿ

    ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಸಾವಿರಾರು ಜನ – ಪೂಲ್‌ನಲ್ಲಿ ಪ್ರತಿಭಟನಾಕಾರರು, ರಾಜಪಕ್ಸೆ ಪರಾರಿ

    ಕೊಲಂಬೋ: ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ನಡುವೆ ಅಲ್ಲಿನ ಜನರು ತಮ್ಮ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಶನಿವಾರ ಸಾವಿರಾರು ಪ್ರತಿಭಟನಾಕಾರರು ರಾಜಪಕ್ಸೆಯವರ ನಿವಾಸಕ್ಕೆ ಮುತ್ತಿಗೆ ಹಾಕಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಿದ್ದಾರೆ.

    ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಇಂದು ಸಾವಿರಾರು ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿ, ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಪ್ರತಿಭಟನಾಕಾರರು ಶ್ರೀಲಂಕಾದ ಧ್ವಜ, ಹೆಲ್ಮೆಟ್‌ಗಳನ್ನು ಹಿಡಿದುಕೊಂಡು ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ್ದಾರೆ. ಇದನ್ನೂ ಓದಿ: ಆಪರೇಷನ್ ಅಮರನಾಥ ಚಾಲೆಂಜ್ ಆಗಿದೆ: ಕರ್ನಲ್ ವಿ.ಎಂ. ನಾಯಕ್

    ರಾಜಪಕ್ಸೆ ವಿರುದ್ಧ ಘೋಷಣೆ ಕೂಗಿರುವ ಜನರು ಅವರ ನಿವಾಸದಲ್ಲಿ ದಾಂಧಲೆ ನಡೆಸಿದ್ದಾರೆ. ಸ್ವಿಮ್ಮಿಂಗ್ ಪೂಲ್‌ಗೆ ಇಳಿದು ಈಜಾಡಿದ್ದಾರೆ. ಸೋಫಾ, ಬೆಡ್‌ಗಳ ಮೇಲೆ ಕುಣಿದಾಡಿದ್ದಾರೆ. ಅಡುಗೆ ಮನೆಗೂ ನುಗ್ಗಿ, ಹಸಿವನ್ನು ನೀಗಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೇ ಸಾಮಾಜಿಕ ಮಾಧ್ಯಮಗಳಲ್ಲಿ ಲೈವ್ ಸ್ಟ್ರೀಮ್‌ಗಳನ್ನು ಮಾಡಿ ಆನಂದಿಸಿದ್ದಾರೆ.

    ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರನ್ನು ಶುಕ್ರವಾರ ತಮ್ಮ ಸುರಕ್ಷತೆಗಾಗಿ ನಿವಾಸದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಇಂದಿನ ಪ್ರತಿಭಟನೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಕನಿಷ್ಠ 21 ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಬೈಕ್ ಜಪ್ತಿ ಮಾಡಿ ವಿಮೆ ಮಾಡಿಸಿದ ಪೊಲೀಸರು – ಕಣ್ಣೀರಿಟ್ಟ ಸವಾರ

    ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಿಂಹಳದಲ್ಲಿ 2.2 ಕೋಟಿ ಜನರು ಹೋರಾಡುತ್ತಿದ್ದಾರೆ. ಇಂಧನ, ಆಹಾರ, ಔಷಧಿಗಳಂತಹ ಅಗತ್ಯ ವಸ್ತುಗಳ ಕೊರತೆ ಉಂಟಾಗಿದ್ದು, ಜನರು ಸಾವು ಬದುಕಿನ ನಡುವೆ ಹೆಣಗಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೈಡನ್ ನಿವಾಸದ ಮೇಲೆ ವಿಮಾನ ಹಾರಾಟ – ದಾಳಿ ಭೀತಿಯಿಂದ ಸ್ಥಳಾಂತರ

    ಬೈಡನ್ ನಿವಾಸದ ಮೇಲೆ ವಿಮಾನ ಹಾರಾಟ – ದಾಳಿ ಭೀತಿಯಿಂದ ಸ್ಥಳಾಂತರ

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ನಿವಾಸದ ಮೇಲೆ ವಿಮಾನವೊಂದು ಹಾರಾಟ ನಡೆಸಿದ್ದು, ದಾಳಿಯ ಭೀತಿಗೆ ಅವರನ್ನು ಹಾಗೂ ಅವರ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಶ್ವೇತಭವನ ತಿಳಿಸಿದೆ.

    ಬೈಡನ್ ಅವರ ರೆಹೋಬೋತ್ ಬೀಚ್ ಬಳಿಯ ನಿವಾಸದ ಮೇಲೆ ನಿರ್ಬಂಧಿತ ವಾಯು ಪ್ರದೇಶದಲ್ಲಿ ಸಣ್ಣ ಖಾಸಗಿ ವಿಮಾನವೊಂದು ಹಾರಾಟ ನಡೆಸಿರುವುದು ಕಂಡುಬಂದಿದೆ. ಈ ಹಿನ್ನೆಲೆ ದಾಳಿ ಭೀತಿಯಿಂದ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಪರಮಾಣು ಪರೀಕ್ಷೆ ಆತಂಕದ ನಡುವೆಯೇ ಇನ್ನೊಂದು ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ

    joe biden

    ಅಮೆರಿಕ ಅಧ್ಯಕ್ಷ ಹಾಗೂ ಪ್ರಥಮ ಮಹಿಳೆ ಜಿಲ್ ಬೈಡನ್ ಸುರಕ್ಷಿತವಾಗಿದ್ದಾರೆ. ಸದ್ಯ ಯಾವುದೇ ದಾಳಿ ನಡೆದಿಲ್ಲ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಇಮ್ರಾನ್ ಖಾನ್ ಹತ್ಯೆಗೆ ಸಂಚು- ಬಿಗಿ ಭದ್ರತೆ

    ಖಾಸಗಿ ವಿಮಾನ ತಪ್ಪಿ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿತು. ಬಳಿಕ ಅದನ್ನು ತಕ್ಷಣವೇ ಬೇರೆಡೆಗೆ ಕೊಂಡೊಯ್ಯಲಾಯಿತು. ವಿಮಾನ ಚಲಾಯಿಸುತ್ತಿದ್ದ ಪೈಲಟ್‌ಗೆ ರೇಡಿಯೋ ಚಾನೆಲ್‌ನಲ್ಲಿ ದೋಷವಿದ್ದು, ಮಾರ್ಗದರ್ಶನವನ್ನು ಅನುಸರಿಸಲು ಸಾಧ್ಯವಾಗಿಲ್ಲ ಎಂದು ರಹಸ್ಯ ಸೇವೆಯ ವಕ್ತಾರ ಅಂಥೋನಿ ಗುಗ್ಲಿಲ್ಮಿ ತಿಳಿಸಿದ್ದಾರೆ.

  • ಜಯಲಲಿತಾ ನಿವಾಸ ಸ್ವಾಧೀನ- ತಮಿಳುನಾಡು ಸರ್ಕಾರದ ನಿಲುವಿಗೆ ಹೈಕೋರ್ಟ್ ತಡೆ

    ಜಯಲಲಿತಾ ನಿವಾಸ ಸ್ವಾಧೀನ- ತಮಿಳುನಾಡು ಸರ್ಕಾರದ ನಿಲುವಿಗೆ ಹೈಕೋರ್ಟ್ ತಡೆ

    ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ “ಪೋಯಸ್ ಗಾರ್ಡನ್” ನಿವಾಸವನ್ನು ತಮಿಳುನಾಡು ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.

    ಜಯಲಲಿತಾ ಅವರ ನಿವಾಸವನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ಸೊಸೆ ದೀಪಾ ಮತ್ತು ಸೋದರಳಿಯ ಜೆ.ದೀಪಕ್ ಅವರು ಪ್ರಶ್ನಿಸಿದ್ದರು. ಇದನ್ನೂ ಓದಿ: ಸಿಂಹಕ್ಕೆ ಆಹಾರವಾಗುತ್ತಿದ್ದ ಯುವಕ: ತಪ್ಪಿತು ಭಾರೀ ದುರಂತ

    ಜಯಲಲಿತಾ ಅವರ ವೇದ ನಿಲಯಂ ಅನ್ನು ಸ್ಮಾರಕವಾಗಿ ರೂಪಿಸುವ ಪ್ರಸ್ತಾವನೆಯನ್ನು ಎಐಎಡಿಎಂಕೆ ಸರ್ಕಾರವು ಈ ಹಿಂದೆ ಮಂಡಿಸಿತ್ತು. ಇದು ತಮಿಳುನಾಡಿನ ಜನತೆ ಹಾಗೂ ಎಐಎಡಿಎಂ ಪಕ್ಷದ ಕಾರ್ಯಕರ್ತರೂ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಬಿಂಬಿಸಲಾಗಿದೆ. ಇದನ್ನೂ ಓದಿ: ಮುರುಡೇಶ್ವರಕ್ಕೆ ಐಸಿಸ್ ಕಣ್ಣು- ದೇವಾಲಯಕ್ಕೆ ವಿಶೇಷ ಪೊಲೀಸ್ ಭದ್ರತೆ ವ್ಯವಸ್ಥೆ

    ಕಳೆದ ವರ್ಷ ತಮಿಳುನಾಡು ಸರ್ಕಾರವು 0.55 ವಿಸ್ತಾರದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು 67.09 ಕೋಟಿ ರೂ. ಅನ್ನು ಠೇವಣಿ ಇಟ್ಟಿತ್ತು. ಇದರ ವಿರುದ್ಧ ಜಯಲಲಿತಾ ಕುಟುಂಬಸ್ಥರು ಕಾನೂನು ಹೋರಾಟ ಆರಂಭಿಸಿದ್ದರು.

  • ಹುಟ್ಟುಹಬ್ಬದಂದು ನಿವಾಸದ ಮುಂದೆ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ ಬಿಗ್‍ಬಿ

    ಹುಟ್ಟುಹಬ್ಬದಂದು ನಿವಾಸದ ಮುಂದೆ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ ಬಿಗ್‍ಬಿ

    ಮುಂಬೈ: ಬಾಲಿವುಡ್ ನಟ ಬಿಗ್ ಬಿ ಅಮಿತಾಭ್ ಬಚ್ಚನ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 79ನೇ ವಸಂತಕ್ಕೆ ಕಾಲಿಟ್ಟಿರುವ ಅಮಿತಾಭ್ ಬಚ್ಚನ್‍ಗೆ ಗಣ್ಯಾತಿ ಗಣ್ಯರು ಶುಭಾಶಯ ಕೋರುತ್ತಿದ್ದಾರೆ.

    Amitabh bachchan

    ಈ ವಿಶೇಷ ದಿನದಂದು ಅಮಿತಾಭ್ ಬಚ್ಚನ್ ತಮ್ಮ ಮುಂಬೈ ನಿವಾಸದ ಬಳಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಮೆಗಾ ಸ್ಟಾರ್‌ಗೆ  ಶುಭಾಶಯ ತಿಳಿಸಲು ಇಂದು ಅವರ ನಿವಾಸದ ಮುಂದೆ ಹಲವಾರು ಅಭಿಮಾನಿಗಳು ಆಗಮಿಸಿದ್ದರು. ದನ್ನೂ ಓದಿ:  ಪ್ರತಿ ವಲಯದಲ್ಲೂ ಸಂಶೋಧನೆ ಅಭಿವೃದ್ಧಿಗೆ ಆದ್ಯತೆ: ಬೊಮ್ಮಾಯಿ

    Amitabh bachchan

    ಈ ವೇಳೆ ಮನೆಯಿಂದ ಹೊರಬಂದ ಅಮಿತಾಭ್ ಬಚ್ಚನ್ ವೈಟ್ ಆ್ಯಂಡ್ ವೈಟ್ ಪೈಜಾಮ ತೊಟ್ಟು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ ಮತ್ತು ಮನೆಯ ಮುಂದೆ ಸೇರಿದ್ದ ಅಭಿಮಾನಿಗಳಿಗೆ ತಮ್ಮ ಎರಡು ಕೈಗಳಿಂದ ನಮಸ್ಕಾರ ಮಾಡಿದರು.

    Amitabh bachchan

    ಈ ವೇಳೆ ಬಾಡಿಗಾರ್ಡ್‍ಗಳು ಮನೆಯ ಗೇಟ್ ಬಳಿ ನಿಂತು ಬಿಗ್‍ಬಿಗೆ ರಕ್ಷಣೆ ನೀಡುತ್ತಿದ್ದರು. ಇದೇ ವೇಳೆ ಅಮಿತಾಭ್ ಅಭಿಮಾನಿಗಳತ್ತ ಕೈ ಬೀಸಿ ಹಾಯ್ ಮಾಡುತ್ತಾ, ಧನ್ಯವಾದ ತಿಳಿಸಿ ಒಳ ನಡೆದರು. ನಂತರ ಕಾವಲುಗಾರರು ಗೇಟ್ ಕ್ಲೋಸ್ ಮಾಡಿದರು. ದನ್ನೂ ಓದಿ: ತಿರುಗುವ ಮನೆ ನಿರ್ಮಿಸಿ ಪತ್ನಿಗೆ ಗಿಫ್ಟ್ ಕೊಟ್ಟ 72ರ ಪತಿ

    ವಿಶೇಷವೆಂದರೆ ಅಮಿತಾಭ್ ಮನೆಯ ಮುಂದೆ ಜ್ಯೂನಿಯರ್ ಅಮಿತಾಭ್ ಬಚ್ಚನ್ ಕಾಣಿಸಿಕೊಂಡಿದ್ದು, ಹಲವಾರು ಮಂದಿ ಜ್ಯೂನಿಯರ್ ಅಮಿತಾಭ್ ಬಚ್ಚನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು. ಮತ್ತಿಬ್ಬರು ಅಭಿಮಾನಿ ಅಮಿತಾಭ್ ಬಚ್ಚನ್ ಭಾವಚಿತ್ರವಿರುವ ಟೀ ಶರ್ಟ್ ಧರಿಸಿಗೆ ಫೋಟೋಗೆ ಸ್ಮೈಲ್ ಮಾಡಿದರು.

  • ದೂಡಾದಲ್ಲಿ ಅರ್ಜಿ ಹಾಕೋಕೆ 4ರಿಂದ 5 ಸಾವಿರ ಕೊಡ್ಬೇಕಂತೆ..!

    ದೂಡಾದಲ್ಲಿ ಅರ್ಜಿ ಹಾಕೋಕೆ 4ರಿಂದ 5 ಸಾವಿರ ಕೊಡ್ಬೇಕಂತೆ..!

    ದಾವಣಗೆರೆ: ಹರಿಹರ ನಗಾರಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಬೇಡಿಕೆ ಸಮೀಕ್ಷೆ ಮಾಡುವ ಹಿನ್ನೆಲೆಯಲ್ಲಿ ಅರ್ಜಿ ಆಹ್ವಾನಿಸಿದೆ. ಸೂರಿಗಾಗಿ ಆಸೆ ಪಡುತ್ತಿರುವ ಬಡ ಜನರ ಆಸೆಯನ್ನು ಬಂಡವಾಳ ಮಾಡಿಕೊಂಡಿರುವ ಕೆಲ ದಲ್ಲಾಳಿಗಳು ಒಂದು ಅರ್ಜಿ ಹಾಕಲು ನಾಲ್ಕೈದು ಸಾವಿರ ರೂಪಾಯಿ ಕೀಳುವ ದಂಧೆಗಿಳಿದಿದ್ದಾರೆ. ಇದೀಗ ದಲ್ಲಾಳಿಗಳು ದೂರವಾಣಿ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿರುವ ಆಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಈಗಾಗಲೇ ದೂಡಾ ನಿವೇಶನಗಳ ಬೇಡಿಕೆ ಸಮೀಕ್ಷೆ ನಡೆಸುತ್ತಿದ್ದು, ನಿವೇಶನಕ್ಕಾಗಿ ಅರ್ಜಿ ಕರೆಯಲಾಗಿದೆ. ಹಾಗಾಗಿ ಅರ್ಜಿ ಹಾಕೋಕೆ ಜನ ಮುಗಿ ಬಿದ್ದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ದಲ್ಲಾಳಿಗಳು, ಸರದಿ ಸಾಲಲ್ಲಿ ನಿಲ್ಲದೇ ಅರ್ಜಿ ಹಾಕಲು ನಾಲ್ಕರಿಂದ ಐದು ಸಾವಿರ ರೂಪಾಯಿ ತನಕ ಹಣವನ್ನು ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂಬ ಅಂಶ ಬಯಲಾಗಿದೆ. ಇದನ್ನೂ ಓದಿ:ಮಗನಿಗೆ ರಾಯನ್ ಹೆಸರಿಟ್ಟಿದ್ದಕ್ಕೆ ಮೇಘನಾ ಸ್ಪಷ್ಟನೆ

    ಅರ್ಜಿದಾರರು ಬಾರದಿದ್ದರೂ ದಾಖಲೆ ನೀಡಿ ಹಣ ಕೊಟ್ಟರೆ, ಅವರ ಹೆಸರಿನಲ್ಲಿ ದಲ್ಲಾಳಿಗಳು ಹಾಗೂ ಅಲ್ಲಿನ ಅಧಿಕಾರಿಗಳ ಅಡ್ಜಸ್ಟ್‍ಮೆಂಟ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ಈ ದಲ್ಲಾಳಿಗಳು ಅಧಿಕಾರಿಗಳನ್ನು ಒಳಗೆ ಹಾಕಿಕೊಂಡು, ಸರದಿ ಸಾಲಿನಲ್ಲಿ ನಿಲ್ಲದೆ ಎಲ್ಲಾ ಅರ್ಜಿಗಳನ್ನು ತೆಗೆದುಕೊಂಡು ನೇರವಾಗಿ ದೂಡಾ ಕಚೇರಿಯ ಕೌಂಟರ್ ಗೆ ತೆರಳಿ ಹಣ ನೀಡಿ ಅರ್ಜಿ ಹಾಕಿ ವ್ಯವಹಾರ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಬಾಗಲಕೋಟೆಯಲ್ಲಿ ಭೂ ಕಂಪನದ ಅನುಭವ – ಜನರಲ್ಲಿ ಆತಂಕ

    ದಾವಣಗೆರೆ ನಗರದ ಕುಂದಾವಾಡ ರಸ್ತೆಯ ಬಳಿ ಇರುವ ಜೈನ್ ಕಾಲೋನಿ ಬಳಿ ಈ ವ್ಯವಹಾರ ನಡೆಯುತ್ತಿದೆ. ಅರ್ಜಿ ಹಾಕಲು ಬಯಸುವ ಜನ ಜೈನ್ ಕಾಲೋನಿ ಬಳಿ ಬಂದು ದುಡ್ಡು ಕೊಟ್ಟು ಸಂಜೆಯೊಳಗೆ ಸ್ವೀಕೃತಿ ಪತ್ರ ತೆಗೆದುಕೊಂಡು ಹೋಗಬಹುದು. ಇದು ದೂಡಾದಲ್ಲಿ ನಡೆಯುತ್ತಿರುವ ಡೈರೆಕ್ಟ್ ದಂಧೆ ಎಂಬ ಅನುಮಾನ ಕಾಡುತ್ತಿದೆ.

    20*30 ಅಳತೆಯ ನಿವೇಶನಕ್ಕೆ ಅರ್ಜಿ ಹಾಕಲು 3,000, 30*40 ನಿವೇಶನಕ್ಕೆ 3,500, 30*50 ನಿವೇಶನಕ್ಕೆ 4,300, 40*50 ನಿವೇಶನಕ್ಕೆ 4,800, 50*80 ನಿವೇಶನಕ್ಕೆ ಅರ್ಜಿ ಹಾಕಲು 5,000 ಹಣವನ್ನು ನಿಗದಿ ಮಾಡಲಾಗಿದ್ದು, ಅಮಾಯಕರಿಂದ ದಲ್ಲಾಳಿಗಳು ಹಣ ಪೀಕುತ್ತಿದ್ದಾರೆ. ಇದರಲ್ಲಿ ಬಹು ಪಾಲು ಹಣ ದೂಡಾದ ಕೆಲ ಸಿಬ್ಬಂದಿಗೆ ಹೋಗುತ್ತದೆ ಎಂಬ ಮಾಹಿತಿಯೂ ಆಡಿಯೋದಲ್ಲಿದೆ. ಇದನ್ನೂ ಓದಿ:ಮೈಸೂರಿನ ದರೋಡೆ, ಶೂಟ್‍ಔಟ್ ಪ್ರಕರಣ- ಖತರ್ನಾಕ್ ಬಾಂಬೆ ಬುಡ್ಡಾ ಅಂದರ್

  • ಎಸಿಬಿ ದಾಳಿಗೆ ಭಯಗೊಂಡು ಮನೆಯಲ್ಲೇ 15 ಲಕ್ಷ ಹಣ ಸುಟ್ಟ ತಹಶೀಲ್ದಾರ್

    ಎಸಿಬಿ ದಾಳಿಗೆ ಭಯಗೊಂಡು ಮನೆಯಲ್ಲೇ 15 ಲಕ್ಷ ಹಣ ಸುಟ್ಟ ತಹಶೀಲ್ದಾರ್

    ಜೈಪುರ: ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ದಾಳಿಗೆ ಹೆದರಿ ತಹಶೀಲ್ದಾರ್ ಒಬ್ಬರು 15 ಲಕ್ಷ ರೂ.ಗಳನ್ನು ಸುಟ್ಟ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ಎಸಿಬಿ ಸಿರೋಹಿ ತಹಶೀಲ್ದಾರ್‍ರ ಮನೆ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಗಾಬರಿಗೊಂಡ ತಹಶೀಲ್ದಾರ್ ಮನೆಯೊಳಗಡೆಯೇ 15 ರಿಂದ 20 ಲಕ್ಷ ರೂ.ಗಳನ್ನು ಸುಟ್ಟು ಹಾಕಿದ್ದಾರೆ.

    ತಹಶೀಲ್ದಾರ್ ಕಲ್ಪೇಶ್ ಕುಮಾರ್ ಜೈನ್ ಮನೆಯೊಳಗೆ ಬೀಗ ಹಾಕಿಕೊಂಡು ಸುಮಾರು 15-20 ಲಕ್ಷದ ಹಣದ ನೋಟನ್ನು ಬೆಂಕಿ ಹಾಕಿ ಸುಟ್ಟಿದ್ದಾರೆ. ಆರೋಪಿ ತಹಶೀಲ್ದಾರ್ 1 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂಬ ಮಾಹಿತಿ ಮೇರೆಗೆ ಎಸಿಬಿ ತಂಡ ದಾಳಿ ನಡೆಸಿತ್ತು.

    ಪಾಲಿ ಎಸಿಬಿ ತಂಡವು ಭಾವ್ರಿ ಭೂಮಿ ದಾಖಲೆ ಇನ್ಸ್‍ಪೆಕ್ಟರ್ ಪರ್ವತ್ ಸಿಂಗ್ 1 ಲಕ್ಷ ರೂ ಲಂಚ ಪಡೆಯುತ್ತಿದ್ದಾಗ ಪತ್ತೆ ಹಚ್ಚಿತ್ತು. ಕಲ್ಪೇಶ್ ಕುಮಾರ್ ಜೈನ್ ಬೇಡಿಕೆಯ ಹಿನ್ನೆಲೆಯಲ್ಲಿ ಲಂಚ ನೀಡಲಾಗಿತ್ತು ಎಂದು ಎಸಿಬಿ ತಿಳಿಸಿದೆ.

  • ‘ಕಾವೇರಿ’ ಆಸೆ ಬಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

    ‘ಕಾವೇರಿ’ ಆಸೆ ಬಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸ ಗೊಂದಲ ಇನ್ನೂ ಮುಗಿದಿಲ್ಲ. ವಾಸ್ತವ್ಯ ಇರುವ ಕಾವೇರಿ ನಿವಾಸ ತಮಗೆ ಸಿಗಲ್ಲ ಎಂಬ ಸಂಗತಿ ಅರಿವಾದ ಬಳಿಕ ಮಾಜಿ ಸಿಎಂ ತಮ್ಮ ವರಸೆ ಬದಲಿಸಿಕೊಂಡಿದ್ದಾರೆ.

    ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ವಾಸವಿದ್ದ ಗಾಂಧಿಭವನ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಯನ್ನು ನೀಡಲು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಸಂಬಂಧ ಸಿಎಂ ಯಡಿಯೂರಪ್ಪ ಅವರಿಗೆ ಹೊಸ ಪತ್ರವನ್ನು ಸಿದ್ದರಾಮಯ್ಯ ಬರೆದಿದ್ದು, ಮೈತ್ರಿ ಸರ್ಕಾರದ ಅವಧಿಯಲ್ಲಿ ಗಾಂಧಿಭವನ ರಸ್ತೆಯಲ್ಲಿರುವ ನಿವಾಸದಲ್ಲಿ ಮಾಜಿ ಸಚಿವ ಎಚ್‍ಡಿ ರೇವಣ್ಣ ವಾಸವಿದ್ದರು. ಈ ನಿವಾಸವನ್ನು ತಮಗೆ ಹಂಚಿಕೆ ಮಾಡಿ ಕೊಡಿ ಎಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಸರ್ಕಾರ ಹಂಚಿಕೆ ಮಾಡಿರುವ ರೇಸ್ ವ್ಯೂ ಕಾಟೇಜ್ ಬೇಡ ಎಂದೂ ಪತ್ರದಲ್ಲಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರು ಹೊಸ ನಿವಾಸ ಪಡೆಯುವುದರಿಂದ ಮತ್ತೆ ಅದೃಷ್ಟದ ಬಾಗಿಲು ತೆರೆಯುತ್ತಾ ಎಂಬ ಲೆಕ್ಕಾಚಾರಗಳು ನಡೆದಿದೆ. 2013 ರ ವೇಳೆಗೆ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಇದೇ ನಿವಾಸದಲ್ಲಿ ವಾಸವಿದ್ರು. ಸದ್ಯ ಮತ್ತೆ ಇದೇ ನಿವಾಸವನ್ನು ಸಿದ್ದರಾಮಯ್ಯ ಅವರು ನೀಡಲು ಮನವಿ ಮಾಡಿರುವುದರಿಂದ ಮತ್ತೆ ಸಿಎಂ ಆಗುವ ಅದೃಷ್ಟ ಬರುವ ನಿರೀಕ್ಷೆ ಇದೆ ಎನ್ನಲಾಗಿದೆ.

    ಸದ್ಯ ಗಾಂಧಿಭವನದ ರಸ್ತೆಯಲ್ಲಿರುವ ಈ ನಿವಾಸವನ್ನು ಸ್ಪೀಕರ್ ಕಾಗೇರಿಗೆ ಹಂಚಿಕೆ ಮಾಡಲಾಗಿದೆ. ಆದರೆ ಕಾಗೇರಿ ಅವರು ಇನ್ನೂ ಈ ನಿವಾಸದಲ್ಲಿ ವಾಸ್ತವ್ಯ ಆರಂಭಿಸಿಲ್ಲ. ಹೀಗಾಗಿ ಸಿದ್ದರಾಮಯ್ಯರ ಹೊಸ ಮನವಿಗೆ ಸಿಎಂ ಅವರು ಸ್ಪಂದಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

  • ಲಕ್ಕಿ ನಿವಾಸದಲ್ಲೇ ವಾಸ್ತವ್ಯ ಹೂಡಲು ಸಿಎಂ ಚಿಂತನೆ

    ಲಕ್ಕಿ ನಿವಾಸದಲ್ಲೇ ವಾಸ್ತವ್ಯ ಹೂಡಲು ಸಿಎಂ ಚಿಂತನೆ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮತ್ತದೇ ತಮ್ಮ ಹಳೆ ಸರ್ಕಾರಿ ನಿವಾಸಕ್ಕೆ ಮರಳಲು ನಿರ್ಧರಿಸಿದ್ದು, ನಾಲ್ಕನೇ ಬಾರಿ ಮುಖ್ಯಮಂತ್ರಿಯಾದರೂ ಸಹ ಆ ಮನೆಯನ್ನು ಬಿಡುವುದಿಲ್ಲ ಎಂಬ ನಿರ್ಧಾರವನ್ನು ತಳೆದಿದ್ದಾರೆ.

    ಬಿ.ಎಸ್.ಯಡಿಯೂರಪ್ಪನವರು, ಮುಖ್ಯಮಂತ್ರಿಯಾದರೂ ಗೃಹ ಕಚೇರಿ ಕೃಷ್ಣಾದಲ್ಲಿ ನೆಲೆಸದೆ, ತಮ್ಮ ಹಳೇ ರೇಸ್ ಕೋರ್ಸ್ ನಿವಾಸಕ್ಕೇ ಮರಳಲು ನಿರ್ಧರಿಸಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ‘ರೇಸ್ ವ್ಯೂ ಕಾಟೇಜ್’ ನಲ್ಲಿ ವಾಸ್ತವ್ಯ ಹೂಡುವ ಸಾಧ್ಯತೆ ಇದೆ.

    ಈ ಹಿಂದೆಯೂ ಸಿಎಂ ಆಗಿದ್ದಾಗ ಯಡಿಯೂರಪ್ಪನವರು ಅದೇ ನಿವಾಸದಲ್ಲಿದ್ದರು. ಅಲ್ಲದೆ, 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಇದೇ ನಿವಾಸದಲ್ಲಿ ವಾಸವಾಗಿದ್ದರು. ಇದೇ ಮನೆಯಲ್ಲಿಯೇ ಇದ್ದಾಗ ಬಿಎಸ್‍ವೈ ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಗದ್ದುಗೆಯನ್ನು ಏರಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪರಿಗೆ `ರೇಸ್ ವ್ಯೂ ಕಾಟೇಜ್’ ಅದೃಷ್ಟ ಮನೆ ಎಂದು ಹೇಳಲಾಗುತ್ತಿದೆ.

    ಈ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಲ್ಲ ನಾಯಕರಿಗೆ ಸರ್ಕಾರಿ ನಿವಾಸಗಳನ್ನು ಹಂಚಿಕೆ ಮಾಡಿ, ಬಿ.ಎಸ್.ಯಡಿಯೂರಪ್ಪ ಅವರಿಗೆ ರೇಸ್ ಕೋರ್ಸ್ ರಸ್ತೆಯ ನಂಬರ್ 4 ನಿವಾಸವನ್ನು ಹಂಚಿಕೆ ಮಾಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಬಿಎಸ್‍ವೈ, ನಾನು ಕೇಳಿರುವ ನಿವಾಸ ಬಿಟ್ಟು ಬೇರೆ ಬಂಗಲೆಯನ್ನು ನೀಡಲಾಗಿದೆ. ನನಗೆ ಯಾವುದೇ ಸರ್ಕಾರಿ ಬಂಗಲೆ ಬೇಡ ನನ್ನ ಸ್ವಂತ ಮನೆ ಡಾಲರ್ಸ್ ಕಾಲೋನಿಯ ಧವಳಗಿರಿಯಲ್ಲಿಯೇ ವಾಸವಾಗುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    ಮೈತ್ರಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪನವರು ರೇಸ್ ಕೋರ್ಸ್‍ನ ನಂಬರ್ 2 ನಿವಾಸವನ್ನು ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದರು. ಆದರೆ ಸರ್ಕಾರ ನಂಬರ್ 2 ನಿವಾಸವನ್ನು ಸಚಿವ ಸಾ.ರಾ.ಮಹೇಶ್‍ಗೆ ನೀಡಿ, ಯಡಿಯೂರಪ್ಪನವರಿಗೆ ನಂಬರ್ 4 ನಿವಾಸ ನೀಡಿತ್ತು.

    ಲಕ್ಕಿ ಬಂಗಲೆ: ನಂಬರ್ 2 ನಿವಾಸ ಬಿಎಸ್‍ವೈ ಪಾಲಿಗೆ ಲಕ್ಕಿ ಬಂಗಲೆಯಾಗಿದ್ದು, ಈ ಹಿಂದೆ 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಯಡಿಯೂರಪ್ಪ ಇದೇ ನಿವಾಸದಲ್ಲಿ ವಾಸವಾಗಿದ್ದರು. ನಂತರ ಇದೇ ಮನೆಯಲ್ಲಿಯೇ ಇದ್ದಾಗ ಉಪ ಮುಖ್ಯಮಂತ್ರಿ ಮತ್ತು ಸಿಎಂ ಸ್ಥಾನಕ್ಕೆ ಏರಿದ್ದರು. ಈ ಹಿನ್ನೆಲೆಯಲ್ಲಿ ನಂಬರ್ 2 ನಿವಾಸ ರೇಸ್‍ವ್ಯೂವ್ ಕಾಟೇಜ್-2 ಅಂತನೇ ಕರೆಸಿಕೊಳ್ಳುತ್ತದೆ.

    ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಾಜಿ ಸಚಿವ ರಮಾನಾಥ್ ರೈ ವಾಸವಾಗಿದ್ದರು. ಸಮ್ಮಿಶ್ರ ಸರ್ಕಾರದ ನಾಯಕರು ಪ್ರತಿಯೊಂದಕ್ಕೂ ಜೋತಿಷ್ಯವನ್ನು ಅವಲಂಭಿಸಿದ್ದ ಕಾರಣ ಸಹಜವಾಗಿಯೇ ಯಡಿಯೂರಪ್ಪನವರಿಗೆ ಈ ಅದೃಷ್ಟದ ಮನೆ ನೀಡಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.

  • ಮಾಜಿ ಸಂಸದೆ ರಮ್ಯಾ ನಿವಾಸಕ್ಕೆ ಪೊಲೀಸ್ ಭದ್ರತೆ

    ಮಾಜಿ ಸಂಸದೆ ರಮ್ಯಾ ನಿವಾಸಕ್ಕೆ ಪೊಲೀಸ್ ಭದ್ರತೆ

    ಮಂಡ್ಯ: ದಿವಂಗತ ಹಿರಿಯ ನಟ ಅಂಬರೀಶ್ ಅವರ ಅಂತ್ಯಸಂಸ್ಕಾರದಲ್ಲಿ ಮಾಜಿ ಸಂಸದೆ ರಮ್ಯಾ ಪಾಲ್ಗೊಳ್ಳಲಿಲ್ಲ. ಆದ್ದರಿಂದ ರಮ್ಯಾ ವಿರುದ್ಧ ಅಂಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ರಮ್ಯಾ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

    ಮಂಡ್ಯದ ವಿದ್ಯಾನಗರದಲ್ಲಿರುವ ರಮ್ಯಾ ನಿವಾಸದ ಮುಂಭಾಗ ಪೇದೆಗಳನ್ನು ನಿಯೋಜನೆ ಮಾಡಲಾಗಿದೆ. ಅಭಿಮಾನಿಗಳಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ರಮ್ಯಾಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಮಂಡ್ಯ ಜನತೆ

    ಸಂಸದೆ ರಮ್ಯಾ ಅಂಬರೀಶ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳದ್ದಕ್ಕೆ ರಮ್ಯಾ ವಿರುದ್ಧ ಅಂಬಿ ಅಭಿಮಾನಿಗಳು ಕಿಡಿಕಾರಿದ್ದರು. ಅಲ್ಲದೇ ರಮ್ಯಾ ಫೋಟೋದೊಂದಿಗೆ ಶ್ರದ್ಧಾಂಜಲಿ ಎಂದು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು. ರಮ್ಯಾ ಇಂದು ಮಂಡ್ಯ ಜನತೆಯ ಪಾಲಿಗೆ ನಿಧನರಾಗಿದ್ದಾರೆ ಎಂಬ ಸಾಲುಗಳನ್ನು ಕೂಡ ಬರೆದುಕೊಂಡಿದ್ದರು. ಇದನ್ನೂ ಓದಿ: ಅಂಬಿ ಅಂತಿಮ ದರ್ಶನಕ್ಕೆ ಬಾರದ ರಮ್ಯಾ ಅಸಲಿ ಕಾರಣ ಇಲ್ಲಿದೆ

    ಅಂತ್ಯಸಂಸ್ಕಾರಕ್ಕೆ ಬಾರದಿರಲು ಕಾರಣವೇನು?
    ಮಾಜಿ ಸಂಸದೆ ರಮ್ಯಾ ಅವರು ಆಸ್ಟಿಯೋಕ್ಲ್ಯಾಟೋಮಾ(Osteoclastoma) ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಸ್ಟಿಯೋಕ್ಲ್ಯಾಟೋಮಾ ಎನ್ನುವುದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದ್ದು, ರಮ್ಯಾ ಅವರ ಕಾಲಿನ ಎಲುಬುಗಳ ನಡುವೆ ಉಂಟಾಗಿರುವ ಸಮಸ್ಯೆ ಇದಾಗಿದೆ. ಕೊಂಚ ನಿರ್ಲಕ್ಷ್ಯ ವಹಿಸಿದರು ಮಾರಕ ಕಾಯಿಲೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದರಂತೆ. ಹೀಗಾಗಿ ಅವರು ಚಿಕಿತ್ಸೆ ಪಡೆದು ಅಕ್ಟೊಬರ್ ನಿಂದ ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಈ ಕುರಿತು ಸ್ವತಃ ರಮ್ಯಾ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಕಾಲಿನ ಚಿತ್ರ ಹಾಕಿ ಬರೆದುಕೊಂಡಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಸಚಿವ ಡಿಕೆಶಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ರಮ್ಯಾ ಕಾಲು ಜಾರಿ ಬಿದ್ದಿರುವುದಾಗಿ ನನಗೆ ತಿಳಿಸಿದ್ದರು. ಹೀಗಾಗಿ ರಮ್ಯಾ ಆರೋಗ್ಯದ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.

    https://www.youtube.com/watch?v=Mjhjp0vXrLY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv