Tag: Reshma Padekanur

  • ಕೈ ನಾಯಕಿ ಹತ್ಯೆಗೆ ರೋಚಕ ಟ್ವಿಸ್ಟ್ – ರೇಷ್ಮಾಳ ಮತ್ತೊಂದು ಮುಖವಾಡ ಬಯಲು

    ಕೈ ನಾಯಕಿ ಹತ್ಯೆಗೆ ರೋಚಕ ಟ್ವಿಸ್ಟ್ – ರೇಷ್ಮಾಳ ಮತ್ತೊಂದು ಮುಖವಾಡ ಬಯಲು

    ವಿಜಯಪುರ: ವಿಜಯಪುರ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಬಂಧಿತರಿಂದ ರೇಷ್ಮಾಳ ಮತ್ತೊಂದು ಮುಖವಾಡ ಹೊರಬಿದ್ದಿದೆ.

    ರೇಷ್ಮಾ ಪಡೇಕನೂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಆರೋಪಿ ಮಹಾರಾಷ್ಟ್ರದ ಎಂಐಎಂ ಮುಖಂಡ, ಸೊಲ್ಲಾಪುರ ಮಹಾನಗರ ಪಾಲಿಕೆ ಕಾರ್ಪೊರೇಟರ್ ತೌಫಿಕ್ ಶೇಖ್ ಹಾಗೂ ಮತ್ತೋರ್ವ ಆರೋಪಿ ಆತನ ಕಾರು ಚಾಲಕ ಇಜಾಜ್ ಬಿರಾದಾರನನ್ನ ಬಂಧಿಸಿದ್ದರು.

    ಮೃತ ರೇಷ್ಮಾ ಪಡೇಕನೂರ ಎಂಐಎಂ ಮುಖಂಡ ತೌಫಿಕ್‍ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಅಷ್ಟೇ ಅಲ್ಲದೇ ಹಣ ಹಾಗೂ ಆಸ್ತಿಗಾಗಿ ತೌಫಿಕ್‍ನನ್ನು ಬ್ಲಾಕ್‍ಮೇಲ್ ಮಾಡುತ್ತಿದ್ದು, ತೌಫಿಕ್‍ನ ಎಂಟು ಎಕರೆ ಆಸ್ತಿ ತನ್ನ ಹೆಸರಿಗೆ ಬರೆಯುವಂತೆ ಬ್ಲಾಕ್‍ಮೇಲ್ ಮಾಡಿದ್ದಳು ಎಂದು ಬಂಧಿತರು ಬಾಯಿಟ್ಟಿದ್ದಾರೆ.

    ಹಣ ಕೊಡುವಂತೆ ಪೀಡಿಸುತ್ತಿದ್ದಳಂತೆ. ಇದರಿಂದ ಬೇಸತ್ತು ಪ್ಲಾನ್ ಮಾಡಿ ಕೊಲೆ ಮಾಡಿದ್ದಾಗಿ ತೌಫಿಕ್ ಶೇಖ್ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆಂದು ವಿಜಯಪುರ ಎಸ್‍ಪಿ ಪ್ರಕಾಶ್ ನಿಕಮ್ ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿದ್ದಾರೆ.

    ಏನಿದು ಪ್ರಕರಣ?
    ಜೆಡಿಎಸ್‍ನ ಮಾಜಿ ಜಿಲ್ಲಾಧ್ಯಕ್ಷೆ ಹಾಗೂ ಹಾಲಿ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ ಶವ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕೋಲ್ಹಾರ ಬಳಿಯ ಕೃಷ್ಣಾ ನದಿಯಲ್ಲಿ ಮೇ 17 ರಂದು ಪತ್ತೆಯಾಗಿತ್ತು. ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ನಿಂದ ದೇವರಹಿಪ್ಪರಗಿ ಮತಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅಲ್ಲದೆ 2013ರಲ್ಲಿ ದೇವರ ಹಿಪ್ಪರಗಿ ಕ್ಷೇತ್ರದಿಂದ ಜೆಡಿಎಸ್ ನಿಂದ ರೇಷ್ಮಾ ಪಡೇಕನೂರ ಸ್ಪರ್ಧಿಸಿ ಸೋಲು ಕಂಡಿದ್ದರು. ಕೋಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

  • ರೇಷ್ಮಾ ಪಡೇಕನೂರ ಕೊಲೆ ಪ್ರಕರಣ- ಆರೋಪಿ ಬಂಧನ

    ರೇಷ್ಮಾ ಪಡೇಕನೂರ ಕೊಲೆ ಪ್ರಕರಣ- ಆರೋಪಿ ಬಂಧನ

    ವಿಜಯಪುರ: ಜೆಡಿಎಸ್‍ನ ವಿಜಯಪುರ ಮಾಜಿ ಜಿಲ್ಲಾಧ್ಯಕ್ಷೆ, ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ ಹತ್ಯೆಯ ಆರೋಪಿ ಕೊನೆಗೂ ಪೊಲೀಸರ ಬಲೆ ಬಿದ್ದಿದ್ದಾನೆ.

    ತೌಫಿಕ್ ಶೇಕ್ ಅಲಿಯಾಸ್ ಪೈಲ್ವಾನ್ ಬಂಧಿತ ಆರೋಪಿ. ಈತನನ್ನು ಪೊಲೀಸರು ಧೂಳಖೇಡ ಗ್ರಾಮದ ಬಳಿ ಬಂಧಿಸಿದ್ದಾರೆ. ಸೊಲ್ಲಾಪುರದ ಎಂಐಎಂ ಮುಖಂಡ ತೌಫಿಕ್ ಶೇಕ್ ಮೇ 17 ರಂದು ರೇಷ್ಮಾ ಪಡೇಕನೂರನ್ನು ವಿಜಯಪುರದ ಕೋಲ್ಹಾರ ಸೇತುವೆ ಕೆಳಗೆ ಹತ್ಯೆ ಮಾಡಿದ್ದಾನೆ ಆರೋಪ ಕೇಳಿ ಬಂದಿದೆ.

    ಬಸವನಬಾಗೇವಾಡಿ ಸಿಪಿಐ ಮಹದೇವ ಶಿರಹಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

    ರೇಷ್ಮಾ ಪತಿ ಖಾಜಾ ಬಂದೇ ನವಾಜ್ ಸೊಲ್ಲಾಪುರದ ಎಂಐಎಂ ಮುಖಂಡ ತೌಫಿಕ್ ಶೇಖ್ ಊರ್ಫ್ ಪೈಲ್ವಾನ್ ವಿರುದ್ಧ ದೂರು ದಾಖಲಿಸಿದ್ದರು. ಪೊಲೀಸರು ತೌಫಿಕ್ ವಿರುದ್ಧ ಐಪಿಸಿ ಸೆಕ್ಷನ್ 302, 201 ಅಡಿಯಲ್ಲಿ ಕೇಸ್ ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಡಿವೈಎಸ್‍ಪಿ ಮಟ್ಟದಲ್ಲಿ ಬಸವನ ಬಾಗೇವಾಡಿ ಡಿಎಸ್‍ಪಿ ಮಹೇಶ್ವರಗೌಡ ಹಾಗೂ ವಿಜಯಪುರ ಡಿಎಸ್‍ಪಿ ಅಶೋಕ್ ನೇತೃತ್ವದಲ್ಲಿ ಎರಡು ತಂಡಗಳ ರಚನೆ ಮಾಡಲಾಗಿತ್ತು.

    ಕೆಲವು ದಿನ ಹಿಂದೆ ಕೊಲೆಗೂ ಮುನ್ನ ರೇಷ್ಮಾ ಅವರು ಆಪ್ತ ಸಮೀವುಲ್ಲಾ ಜೊತೆಗೆ ಪೈಲ್ವಾನ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಫುಲ್ ವೈರಲ್ ಆಗಿತ್ತು. ಆಡಿಯೋದಲ್ಲಿ ತೌಫಿಕ್ ಪೈಲ್ವಾನ್ ಜೊತೆಗಿನ ಹಣದ ವ್ಯವಹಾರದ ಕುರಿತು ರೇಷ್ಮಾ ಹಾಗೂ ಸಮೀವುಲ್ಲಾ ಮಾತನಾಡಿದ್ದರು. ‘ತೌಫಿಕ ಪೈಲ್ವಾನ್ ಸಾವು ಬದುಕಿನ ನಡುವೆ ಜೀವನ ಮಾಡಬೇಕು. ಸಾಯಲು ಬಾರದು, ಜೀವಂತವಾಗಿನೂ ಇರಬಾರದು ಎಂದು ರೇಷ್ಮಾ ಬಿಡುಗಡೆಯಾದ ಆಡಿಯೋದಲ್ಲಿ ಹೇಳಿದ್ದರು.

    ಎಂಐಎಂ ಮುಖಂಡ ತೌಫಿಕ್ ಪೈಲ್ವಾನ್ ಹೇಡಿ. ಇಂದಿಗೂ ಒಂದು ಮರ್ಡರ್ ಆಗಲಿ, ಹಾಫ್ ಮರ್ಡರ್ ಆಗಲಿ ಮಾಡಿಲ್ಲ. ಅವನೊಬ್ಬ ರಾಜಕೀಯ ವ್ಯಕ್ತಿಯೆಂದು ಸುಮ್ಮನೆ ಇದ್ದೇನೆ ಎಂದು ರೇಷ್ಮಾ ಹೇಳಿರುವುದು ಆಡಿಯೋದಲ್ಲಿ ರೆಕಾರ್ಡ್ ಆಗಿತ್ತು. ಹೀಗಾಗಿ ತೌಫಿಕ್ ಸೇರಿ ಒಟ್ಟು ಆರು ಜನ ಕೊಲೆ ಮಾಡಿದ್ದರು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿತ್ತು.