Tag: rescues

  • ನಾಗಾಲ್ಯಾಂಡ್‍ಗೆ ಸಾಗಾಟವಾಗುತ್ತಿದ್ದ 24 ಶ್ವಾನಗಳ ರಕ್ಷಣೆ

    ನಾಗಾಲ್ಯಾಂಡ್‍ಗೆ ಸಾಗಾಟವಾಗುತ್ತಿದ್ದ 24 ಶ್ವಾನಗಳ ರಕ್ಷಣೆ

    ದಿಸ್ಪುರ್: ಅಕ್ರಮವಾಗಿ ನಾಗಾಲ್ಯಾಂಡ್‍ಗೆ ಸಾಗಾಟ ಮಾಡುತ್ತಿದ್ದ 24 ನಾಯಿಗಳನ್ನು ಪುಲಿಬೋರ್ ಪೊಲೀಸರು ರಕ್ಷಿಸಿದ್ದಾರೆ.

    ಡಿಸೆಂಬರ್ 15 ರಂದು ಪುಲಿಬೋರ್ ಪೊಲೀಸರು, ಮಾಮೋನಿ ಹಜಾರಿಕಾ ಅವರ ನೇತೃತ್ವದಲ್ಲಿ ಶ್ವಾನಗಳ ರಕ್ಷಣೆ ಮಾಡಿದ್ದಾರೆ. ಅಸ್ಸಾಂನ ಜೋರ್ಹತ್ ನಗರದ 24 ಸ್ಥಳೀಯ ನಾಯಿಗಳನ್ನು ಅಕ್ರಮವಾಗಿ ನಾಗಾಲ್ಯಾಂಡ್‍ಗೆ ಕಳ್ಳಸಾಗಣೆಯಿಂದ ರಕ್ಷಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಾಯಿಗಳಿಗೆ ಹಗ್ಗ ಮತ್ತು ಗೋಣಿಚೀಲಗಳಿಂದ ಕಟ್ಟಲಾಗಿತ್ತು. ನಾಯಿಗಳಿಗೆ ಪ್ರಜ್ಞೆ ತಪ್ಪಿಸಲು ಔಷಧಗಳನ್ನು ಚುಚ್ಚಲಾಗಿತ್ತು. ಕಳ್ಳಸಾಗಣೆದಾರರು ಬಹಳ ದಿನಗಳಿಂದ ಆ ಪ್ರದೇಶಗಳಿಗೆ ನಾಯಿಗಳನ್ನು ಸಾಗಾಟ ಮಾಡುತ್ತಿದ್ದು, ಪ್ರತಿ ನಾಯಿಯನ್ನು 2,500 ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಇದನ್ನೂ ಓದಿ: ಬಿಳಿಕೂದಲಿನಲ್ಲಿಯೇ ಹಸೆಮಣೆಯೇರಿದ ನಟನ ಮಗಳು

    ಪುಲಿಬೋರ್ ಪೊಲೀಸರು ಡಿಸೆಂಬರ್ 15 ರಂದು ಸಂಜೆ 6.30ರ ಸುಮಾರಿಗೆ 24 ನಾಯಿಗಳನ್ನು ರಕ್ಷಿಸಿ ಮತ್ತು ದೋಕುರ್ ಡೋಲಿ ಎಂಬ ಕಳ್ಳಸಾಗಣೆದಾರನನ್ನು ಬಂಧಿಸಲಾಗಿದೆ. ರಕ್ಷಿಸಲಾದ ನಾಯಿಗಳು ಈಗ ಆರೋಗ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.