Tag: Republican Festival

  • ರಾಮಮಂದಿರ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ

    ರಾಮಮಂದಿರ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ

    ಲಕ್ನೊ: ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳಲ್ಲಿ ರಾಮಮಂದಿರಕ್ಕೆ ಮೊದಲ ಬಹುಮಾನ ದೊರೆತಿದೆ. ಈ ವಿಚಾರವನ್ನು ಉತ್ತರ ಪ್ರೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.

    ಗಣರಾಜ್ಯೋತ್ಸವದಂದು ರಾಜ್‍ಪಥ್‍ನಲ್ಲಿ ಉತ್ತರ ಪ್ರದೇಶದಿಂದ ಪ್ರದರ್ಶಿಸಲಾದ ರಾಮಮಂದಿರ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ ಬಂದಿದೆ. ಉತ್ತರ ಪ್ರದೇಶದ ಜನರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಗಣರಾಜ್ಯೋತ್ಸವದಲ್ಲಿ ಮೊದಲ ಸ್ಥಾನಗಳಿಸಿದ ಸ್ತಬ್ಧಚಿತ್ರಕ್ಕೆ ಯೋಗಿ ಆದಿತ್ಯನಾಥ್ ಅವರಿಗೆ ಪ್ರಶಸ್ತಿಯನ್ನು ಕೊಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ.

    ಗಣರಾಜ್ಯೋತ್ಸವದ ದಿನ ಸ್ತಬ್ಧಚಿತ್ರ ಮೆರವಣೆಗೆಯಲ್ಲಿ ಉತ್ತರಪ್ರದೇಶದಿಂದ ಭಾಗವಹಿಸಿದ್ದ ಸ್ತಬ್ಧಚಿತ್ರದಲ್ಲಿ ಮುಂಭಾಗದಲ್ಲಿ ರಾಮಾಯಾಣ ಕೃತಿ ರಚಿಸಿದ ಮಹರ್ಷಿ ವಾಲ್ಮೀಕಿಯವರನ್ನು ಹಾಗೂ ನಿರ್ಮಾಣ ಕಾರ್ಯದಲ್ಲಿರುವ ರಾಮಮಂದಿರ ಮಾದರಿಯನ್ನು ಇರಿಸಲಾಗಿತ್ತು. ಈ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ ಸಿಕ್ಕಿದೆ.

    ಕಳೆದ ವರ್ಷ ಉತ್ತರಪ್ರದೇಶ ಸ್ತಬ್ಧಚಿತ್ರಕ್ಕೆ 2ನೇ ಅತ್ಯುತ್ತಮ ಪ್ರಶಸ್ತಿ ಲಭಿಸಿತ್ತು. ಈ ಭಾರೀ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ತ್ರಿಪುರಕ್ಕೆ 2ನೇ ಅತ್ಯುತ್ತಮ ಪ್ರಶಸ್ತಿ ಹಾಗೂ ಉತ್ತರಾಖಂಡ್ ಮೂರನೇ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದುಕೊಂಡಿದೆ.

  • ಮಕ್ಕಳೊಂದಿಗೆ ಗಣರಾಜ್ಯೋತ್ಸವ ಆಚರಿಸಿ ಕಿವಿಮಾತು ಹೇಳಿದ ಧನಂಜಯ್

    ಮಕ್ಕಳೊಂದಿಗೆ ಗಣರಾಜ್ಯೋತ್ಸವ ಆಚರಿಸಿ ಕಿವಿಮಾತು ಹೇಳಿದ ಧನಂಜಯ್

    ಬೆಂಗಳೂರು: ಬಹುಭಾಷೆಯ ಬೇಡಿಕೆ ನಟ ಡಾಲಿ ಧನಂಜಯ್ ಹಳ್ಳಿ ಮಕ್ಕಳೊಂದಿಗೆ ಗಣರಾಜ್ಯೋತ್ಸವನ್ನು ಆಚರಿಸಿ ಮಕ್ಕಳಿಗೆ ಸ್ವಾತಂತ್ರ್ಯದ ಪಾಠವನ್ನು ಹೇಳಿಕೊಟ್ಟಿದ್ದಾರೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.

    ನಿಮ್ಮ ಜೊತೆ ಗಣರಾಜ್ಯೋತ್ಸವ ಆಚರಿಸಿದ್ದು ತುಂಬ ಖುಷಿ ಆಯ್ತು. ನಾವು ಈ ದಿನವನ್ನು ಯಾಕೆ ಆಚರಿಸುತ್ತೇವೆ? ಸಂವಿಧಾನ ಎಂದರೆ ಏನು ಗೊತ್ತಾ? ಎನ್ನತ್ತಾ ಮಕ್ಕಳಿಗೆ ಸರಳವಾಗಿ ಸಂವಿಧಾನದ ಕುರಿತಾಗಿ ಹೇಳಿದ್ದಾರೆ. ಸಿಂಪಲ್ ಆಗಿ ಹೇಳಬೇಕೆಂದರೆ ಈ ಶಾಲೆ ನಡೆಸಲು ಒಂದು ರೀತಿ-ನೀತಿ ಇರುತ್ತಲ್ವಾ? ಶಾಲೆಗೆ ಬಂದರೆ ಎಲ್ಲರೂ ಸಮಾನರು. ಎಲ್ಲರಿಗೂ ಸಮಾನವಾದ ಹಕ್ಕಿದೆ. ನಿಮ್ಮ ಶಿಕ್ಷಕರಿಗೆ ನೀವು ಪ್ರಶ್ನೆ ಕೇಳಬಹುದು. ಶಾಲೆ ನಡೆಸಲು ಇರುವ ಈ ರೀತಿ-ನೀತಿಗಳ ಹಾಗೆಯೇ ದೇಶವನ್ನು ನಡೆಸಲು ಒಂದು ರೀತಿ-ನೀತಿ ಇರಬೇಕಲ್ಲವೇ ಎಂದು ಮಕ್ಕಳಿಗೆ ಪ್ರಶ್ನಿಸಿದ್ದಾರೆ.

    ನೀವೆಲ್ಲ ಮಕ್ಕಳು. ಏನಾದರೂ ಹೇಳಿದರೆ ತುಂಬ ಚೆನ್ನಾಗಿ ಕೇಳುತ್ತೀರಿ. ಸರಿ-ತಪ್ಪು ಯಾವುದು ಎಂದು ಹೇಳಿದರೆ ನಿಮಗೆ ಅರ್ಥ ಆಗುತ್ತದೆ. ಆದರೆ ಮನುಷ್ಯ ಬೆಳೆಯುತ್ತಾ ಬೆಳೆಯುತ್ತಾ ಭ್ರಷ್ಟನಾಗುತ್ತಾನೆ. ನಾನು ಅಷ್ಟೇ ಎಂದು ಸ್ವಾರ್ಥಿಯಾಗಿ ಬಿಡುತ್ತಾನೆ. ಹೀಗಾಗಿ ದೇಶ ನಡೆಸಲು ಕಷ್ಟ ಆಗುತ್ತದೆ. ಅದಕ್ಕೆ ಅಂಬೇಡ್ಕರ್ ರೀತಿಯ ಹಿರಿಯರು ಸೇರಿಕೊಂಡು ದೇಶ ನಡೆಸೋಕೆ ಅಂತಾನೇ ಒಂದು ಅದ್ಭುತವಾದ ಗ್ರಂಥ ರಚಿಸಿದ್ದಾರೆ. ಎಲ್ಲರಿಗೂ ಒಳ್ಳೆದಾಗಬೇಕು, ಸಮಾನ ಮನೋಭಾವ ಜೀವನ ನಡೆಸಬೇಕು ಎಂದು ಸಂವಿಧಾನವನ್ನು ರಚನೆ ಮಾಡಿದ್ದಾರೆ. ಅದನ್ನು ನಾವೆಲ್ಲರೂ ಒಪ್ಪಿಕೊಂಡಂತಹ ದಿನವಿದು. ಅದಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು. ಅದನ್ನು ಇಟ್ಟುಕೊಂಡೇ ದೇಶವನ್ನು ನಡೆಸಬೇಕು ಎಂದು ಸಂವಿಧಾನದ ಬಗ್ಗೆ ಮಕ್ಕಳಿಗೆ ಧನಂಜಯ ವಿವರವಾಗಿ ತಿಳಿ ಹೇಳಿದ್ದಾರೆ.

    ನೀವೆಲ್ಲರೂ ಈಗ ಹೈಸ್ಕೂಲ್‍ನಲ್ಲಿ ಓದುತ್ತಿದ್ದೀರಿ. ಮುಂದಿನ ಕೆಲವೇ ವರ್ಷಗಳಲ್ಲಿ ವೋಟ್ ಹಾಕುತ್ತೀರಿ. ಅದಕ್ಕಾಗಿ ನಿಮಗೆ ಪ್ರಜಾಪ್ರಭುತ್ವದ ಬಗ್ಗೆ ಗೊತ್ತಿರಬೇಕು. ಒಂದು ವೋಟಿಗೆ ಇಂತಿಷ್ಟು ದುಡ್ಡು ಅಂತ ನೀಡಿ ರಾಜಕಾರಣಿಗಳು ಪ್ರಜೆಗಳ ಅಧಿಕಾರವನ್ನು ಕಸಿದುಕೊಳ್ಳುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ಉಳಿದಂತೆ ಆಗುವುದಿಲ್ಲ. ಮುಂದೆ ನೀವು ವೋಟ್ ಹಾಕುವಾಗ ಯಾವುದೇ ಕಾರಣಕ್ಕೂ ದುಡ್ಡು ತೆಗೆದುಕೊಳ್ಳುವುದಿಲ್ಲ ಅಂತ ನೀವೆಲ್ಲ ಶಪಥ ಮಾಡಬೇಕು. ಆಗ ದೇಶ ಚೆನ್ನಾಗಿರುತ್ತದೆ. ದೇಶ ಅಂದ್ರೆ ಜಾಗವಲ್ಲ ಜನ. ಕೂಡಿ ಆಟ ಪಾಠವನ್ನು ಕೇಳಿ ಒಟ್ಟಾಗಿರಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದ್ದಾರೆ.

    ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಡಾಲಿ ಧನಂಜಯ್ ರತ್ನನ್ ಪ್ರಪಂಚ ಸಿನಿಮಾದ ಶೂಟಿಂಗ್‍ನಲ್ಲಿದ್ದಾರೆ. ಸಿನಿಮಾ ತಂಡದ ಜೊತೆಯಲ್ಲಿ ಹಳ್ಳಿಯೊಂದರಲ್ಲಿ ಬೀಡು ಬಿಟ್ಟಿದ್ದಾರೆ. ಈ ವೇಳೆ ಅಲ್ಲಿನ ಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ಬೆರೆತು ಗಣರಾಜ್ಯೋತ್ಸವ ಆಚರಿಸಿದ್ದಾರೆ. ಆ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

  • ಮಂಗಳವಾರ ಬೆಂಗಳೂರು ರಸ್ತೆಗೆ ಇಳಿಯುವ ಮುನ್ನ ಯೋಚಿಸಿ

    ಮಂಗಳವಾರ ಬೆಂಗಳೂರು ರಸ್ತೆಗೆ ಇಳಿಯುವ ಮುನ್ನ ಯೋಚಿಸಿ

    – ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಪರೇಡ್
    – ಜನವರಿ 26ರಂದು ಬೆಂಗಳೂರು ಲಾಕ್
    – 25 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್ ಪರೇಡ್

    ಬೆಂಗಳೂರು: ಗಣರಾಜ್ಯೋತ್ಸವ ರಜೆ ಅಂತಾ ಹೊರಹೋಗುವ ಮುನ್ನ ಜಾಗೃಕತರಾಗಿರಿ. ಕೇಂದ್ರದ ಕೃಷಿ ಮಸೂದೆಯ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ನೇತೃತ್ವದಲ್ಲಿ ಟ್ರ್ಯಾಕ್ಟರ್ ಪರೇಡ್ ಮೂಲಕ ಬೆಂಗಳೂರಿನಲ್ಲಿ ರೈತರ ಮಹಾ ರ‍್ಯಾಲಿ ನಡೆಯಲಿದೆ.

    ಜನವರಿ 26ರಂದು ಮಂಗಳವಾರ ಬೆಂಗಳೂರಲ್ಲಿ ಓಡಾಡೋರು ಎಚ್ಚರವಾಗಿದ್ದರೆ ಒಳಿತು. ಕೇಂದ್ರದ ಕೃಷಿ ಮಸೂದೆಯ ವಿರೋಧಿಸಿ ಅನ್ನದಾತರ ಅಷ್ಟದಿಗ್ಬಂಧನ ಮಾಡಲಿದ್ದಾರೆ. ರಾಜ್ಯದ ಸಾವಿರಾರು ರೈತರು ಟ್ರ್ಯಾಕ್ಟರ್ ಪರೇಡ್ ಮೂಲಕ ಬೆಂಗಳೂರಿನಲ್ಲಿ ರೈತರು ಮಹಾ ರ‍್ಯಾಲಿ ಮಾಡಲಿದ್ದಾರೆ.

    ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ನೇತೃತ್ವದಲ್ಲಿ ನಡೆಯುತ್ತಿರುವ ಪೆರೇಡ್‍ನಲ್ಲಿ 25 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್, ವಾಹನಗಳಲ್ಲಿ ರೈತರು ರ‍್ಯಾಲಿ ಮಾಡಲಿದ್ದಾರೆ. ನೈಸ್ ರೋಡ್ ಜಂಕ್ಷನ್‍ನಿಂದ ಫ್ರೀಡಂ ಪಾರ್ಕ್‍ವರೆಗೆ ರ‍್ಯಾಲಿ ನಡೆಸಲು ಸಿದ್ಧತೆ ನಡೆದಿದೆ. ಪೊಲೀಸರು ತಡೆದರೆ ಹೋರಾಟ ಕ್ರಾಂತಿಯ ರೂಪ ಪಡೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ ಗಣರಾಜ್ಯೋತ್ಸವದ ದಿನ ಅನ್ನದಾತರು ನಡೆಸಲಿರುವ ಟ್ರ್ಯಾಕ್ಟರ್ ರ‍್ಯಾಲಿಗೆ ಪೊಲೀಸ್ ಪರ್ಮಿಷನ್ ಸಿಗುವುದು ಅನುಮಾನವಾಗಿದೆ. ಗಣರಾಜ್ಯೋತ್ಸವದ ದಿನ ಪೆರೇಡ್‍ನಲ್ಲಿ ಸಾವಿರಾರು ಪೊಲೀಸರು ಭಾಗಿಯಾಗಿರುತ್ತಾರೆ. ಈ ಹಿನ್ನೆಲೆ ಟ್ರ್ಯಾಕ್ಟರ್ ರ‍್ಯಾಲಿಗೆ ಅನುಮತಿ ನೀಡದಿರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.

    ದೆಹಲಿಯಲ್ಲೂ ಪ್ರತಿಭಟನೆ: ಜ.26ರಂದು ಗಣರಾಜ್ಯೋತ್ಸವ ಪರೇಡ್‍ಗೆ ಧಕ್ಕೆ ಮಾಡದಂತೆ ಷರತ್ತುಬದ್ಧ ನಿಯಮದ ಮೇಲೆ ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ಪೊಲೀಸರ ಒಪ್ಪಿಗೆ ನೀಡಿದ್ದಾರೆ. ಪಂಜಾಬ್‍ನಿಂದ ಮನೆಗೊಂದರಂತೆ ಟ್ರ್ಯಾಕ್ಟರ್ ತರಲು ಕರೆ ನೀಡಲಾಗಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶದಿಂದ ಬರುತ್ತಿರುವ ಹೆಚ್ಚುವರಿ ಟ್ರ್ಯಾಕ್ಟರ್ ರ‍್ಯಾಲಿಗೆ ನಿಗಧಿತ ಮಾರ್ಗ ಸೂಚಿಸಲಿರುವ ಪೊಲೀಸರು ನಿಗಧಿತ ಮಾರ್ಗದಲ್ಲಿ ಶಾಂತಿಯುತ ಪ್ರತಿಭಟನಾ ನಡೆಸಲು ತೀರ್ಮಾನ ಮಾಡಲಾಗಿದೆ. ಭಾರತೀಯ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ಬೃಹತ್ ರ‍್ಯಾಲಿ ನಡೆಯಲಿದೆ.