Tag: Republic of Bharat

  • ಭಾರತದ ಭವಿಷ್ಯ ಬದಲಾಯಿಸಿ ಅಂದ್ರೆ, ಹೆಸರು ಬದಲಾಯಿಸಲು ಬಿಜೆಪಿ ಹೊರಟಿದೆ – ಪ್ರಿಯಾಂಕ್ ಖರ್ಗೆ ಕಿಡಿ

    ಭಾರತದ ಭವಿಷ್ಯ ಬದಲಾಯಿಸಿ ಅಂದ್ರೆ, ಹೆಸರು ಬದಲಾಯಿಸಲು ಬಿಜೆಪಿ ಹೊರಟಿದೆ – ಪ್ರಿಯಾಂಕ್ ಖರ್ಗೆ ಕಿಡಿ

    ಬೆಂಗಳೂರು: ಭಾರತದ‌ ಭವಿಷ್ಯ ಬದಲಾವಣೆ ಮಾಡಿ ಅಂದರೆ ಭಾರತದ ಹೆಸರು ಬದಲಾವಣೆ ಮಾಡಲು ಬಿಜೆಪಿ ಹೊರಟಿದೆ ಅಂತ ಬಿಜೆಪಿ‌ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ.

    ʻಇಂಡಿಯಾʼ (INDIA) ಹೆಸರು ಭಾರತ್ (ರಿಪಬ್ಲಿಕ್‌ ಆಫ್‌ ಭಾರತ್‌) (Republic Of Bharat) ಎಂದು ಬದಲಾವಣೆ ಮಾಡ್ತಿರೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದೊಂದು ವಾಟ್ಸಪ್‌ ವಿವಿಯಲ್ಲಿ ಬೆಳೆದು ಬಂದಿದ್ದು. ಇವರು ಇತಿಹಾಸ ತಿಳಿದುಕೊಂಡು ಬಂದಿಲ್ಲ. ಇಂಡಿಯಾ ಹೇಗೆ ಬಂತು ಅಂತ ಮೊದಲು ಇವರು ಇತಿಹಾಸ ತಿಳಿದುಕೊಳ್ಳಲಿ ಅಂತ ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ. ‌ಇದನ್ನೂ ಓದಿ: ದಿಲ್ಲಿಯಲ್ಲಿ ಜಿ20 ಶೃಂಗಸಭೆ: ಯಾವ ನಾಯಕರು ಬರ್ತಾರೆ, ಯಾರು ಬರಲ್ಲ? – ಹಿಂದಿನ ಸಭೆಗಳಲ್ಲಿ ಏನೇನಾಗಿತ್ತು?


    ಬಿಜೆಪಿಯವರು (BJP Leaders) ಮೊದಲು ರಸ್ತೆಗಳನ್ನ ಹೆಸರು ಚೇಂಜ್ ಮಾಡ್ತಿದ್ರು, ಈಗ ದೇಶದ ಹೆಸರು ಚೇಂಜ್ ಮಾಡ್ತಿದ್ದಾರೆ. ಮೊದಲು ದೇಶದ ಹಣೆಬರಹ ಚೇಂಜ್ ಮಾಡಿ. ಹಸಿವಿನಿಂದ ಎಷ್ಟು ಜ‌ನ ಸಾಯ್ತಿದ್ದಾರೆ? ಅದನ್ನ ಬದಲಾವಣೆ ಮಾಡಿ. ನಿಮ್ಮ ವರದಿಯಲ್ಲಿ ಕೋಟ್ಯಂತರ ಜನರು ಹಸಿವಿನಿಂದ ಸಾಯ್ತಿದ್ದಾರೆ. ಇದಕ್ಕೆ ಮೊದಲು ಪರಿಹಾರ ಕೊಡಿ ಅಂತ ಆಗ್ರಹಿಸಿದ್ದಾರೆ.

    ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ (Digital India) ಅಂತ ಹೇಳ್ತಿದ್ರು ಈಗ ಅದೆಲ್ಲ ಏನಾಯ್ತು? ದೇಶದ ಆರ್ಥಿಕ ಪರಿಸ್ಥಿತಿ ಏನಾಗಿದೆ? ಇವುಗಳ‌ ಬಗ್ಗೆ ಮೊದಲು ಮಾತಾಡಿ. ಇವೆಲ್ಲದರ ಕುರಿತು ಮೊದಲು‌ ಶ್ವೇತ ಪತ್ರ ಹೊರಡಿಸಲಿ ಅಂತ ಸವಾಲು ಹಾಕಿದ್ದಾರೆ. ‌ಇದನ್ನೂ ಓದಿ: ಬದಲಾಗುತ್ತಾ ದೇಶದ ಹೆಸರು – ‘ಇಂಡಿಯಾ’ ಬದಲಿಗೆ ‘ರಿಪಬ್ಲಿಕ್‌ ಆಫ್‌ ಭಾರತ್‌’ ಅಂತ ಮರುನಾಮಕರಣ?

    ಕಾಂಗ್ರೆಸ್‌ನವರು 70 ವರ್ಷ ಏನು ಮಾಡಿಲ್ಲ ಅಂತ ಹೇಳಿ ಕೊಂಡು ಬಂದ್ರು. 9 ವರ್ಷದಲ್ಲಿ ಎಲ್ಲಾ ಚೇಂಜ್ ಮಾಡ್ತೀವಿ ಅಂದ್ರು. ದೇಶದ ಹೆಸರು ಬಿಟ್ಟು ದೇಶದ ಪರಿಸ್ಥಿತಿ ಬದಲಾವಣೆ ಆಗಿಲ್ಲ. ಈಗ ಹೆಸರು ಬದಲಾವಣೆ ‌ಮಾಡ್ತಿದ್ದಾರೆ. ಅವರ ಕೈಯಲ್ಲಿ ಅಧಿಕಾರ ಇದೆ ಮಾಡಲಿ ಅಂತ ಭಾರತ್ ಹೆಸರಿಗೆ ಪ್ರಿಯಾಂಕ್ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘INDIA’ ಬಗ್ಗೆ ಭಯ ಬಂದು ಹೆಸರು ಬದಲಾವಣೆ: ಡಿಕೆಶಿ ಲೇವಡಿ

    ‘INDIA’ ಬಗ್ಗೆ ಭಯ ಬಂದು ಹೆಸರು ಬದಲಾವಣೆ: ಡಿಕೆಶಿ ಲೇವಡಿ

    ರಾಮನಗರ: ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ಗೆ (INDIA) ಹೆದರಿ ಕೇಂದ್ರ ಸರ್ಕಾರ ರಿಪಬ್ಲಿಕ್ ಆಫ್ ಇಂಡಿಯಾ ಅನ್ನು ರಿಪಬ್ಲಿಕ್ ಆಫ್ ಭಾರತ (Republic of Bharat) ಮಾಡಲು ಹೊರಟಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಲೇವಡಿ ಮಾಡಿದ್ದಾರೆ.

    ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ಹಾಗೂ ಕೇಂದ್ರ ಸರ್ಕಾರ ಮುಂದಿನ ಚುನಾವಣೆಯಲ್ಲಿ ಸೋಲನ್ನು ನೋಡುತ್ತಿರುವುದನ್ನು ಈ ಸಮಯದಲ್ಲಿ ಗಮನಿಸಬಹುದು. ನಮ್ಮ ದೇಶದ ನೋಟಿನ ಮೇಲೆ ಇಂಡಿಯಾ ಅಂತ ಇದೆ. ಇದನ್ನು ಬದಲಿಸಲು ಹೊರಟಿದ್ದಾರೆ. ನಾವೆಲ್ಲರೂ ಭಾರತೀಯರೇ ಆದರೆ ಸೋಲಿಗೆ ಹೆದರಿ ಈ ರೀತಿ ಮಾಡುತ್ತಿರುವುದು ಸರಿಯಲ್ಲ ಎಂದರು. ಇದನ್ನೂ ಓದಿ: ಭಾರತ್‌ ಹೆಸರು ಅವಶ್ಯಕತೆ ಇಲ್ಲ: ಸಿದ್ದರಾಮಯ್ಯ

    ಅವರ ಆಲೋಚನೆಗಳು ಇನ್ನೂ ಬಹಳ ಇದಾವೆ. ಅವುಗಳನ್ನು ಈಗ ಹೇಳಿದರೆ ಎಲ್ಲರೂ ಶಾಕ್ ಆಗುತ್ತಾರೆ. ಅವುಗಳನ್ನು ಬೇರೆ ಸಮಯದಲ್ಲಿ ಮಾತನಾಡುತ್ತೇನೆ. ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ ಈ ಪ್ರಸ್ತಾವನೆಯನ್ನು ವಿರೋಧಿಸುತ್ತೇನೆ. ಇಂತಹ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ. ನೀವು ಹೆಚ್ಚು ದಿನ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ. ಇದನ್ನು ಮಾಡಬೇಡಿ ಎಂದು ಹೇಳಿದರು. ಇದನ್ನೂ ಓದಿ: ರಿಪಬ್ಲಿಕ್ ಆಫ್ ಭಾರತ್‌ ಮರುನಾಮಕರಣ ಸ್ವಾಗತಿಸಿದ ಶ್ರೀರಾಮ ಸೇನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]