Tag: Reporter

  • ವರದಿ ಮಾಡಲು ಹೋಗಿ ಕತ್ತೆ ಮೇಲಿನಿಂದ ಬಿದ್ದ ಪತ್ರಕರ್ತ!

    ವರದಿ ಮಾಡಲು ಹೋಗಿ ಕತ್ತೆ ಮೇಲಿನಿಂದ ಬಿದ್ದ ಪತ್ರಕರ್ತ!

    ಇಸ್ಲಾಮಾಬಾದ್: ಪಾಕಿಸ್ತಾನದ ಪತ್ರಕರ್ತರೊಬ್ಬರು ಕತ್ತೆ ಮೇಲೆ ಕುಳಿತು ವರದಿ ಮಾಡಲು ಹೋಗಿ ಕೆಳಗೆ ಬಿದ್ದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಕತ್ತೆಗಳ ಸಾಕಾಣಿಕೆ ಮತ್ತು ಮಾರಾಟದ ಕುರಿತು ಕತ್ತೆ ಮೇಲೆಯೇ ಕುಳಿತು ವರದಿ ಮಾಡಲು ಹೋಗಿ ಉರ್ದು ಭಾಷೆಯ ಜಿಯೋ ಟಿವಿ ವರದಿಗಾರ ಅಮಿನ್ ಹಫೀಜ್ ಕೆಳಗೆ ಬಿದ್ದಿದ್ದಾರೆ.

    ಅಮೀನ್ ಹಫೀಜ್ ಹೀಗೆ ನಗೆಪಾಟಲಿಗೆ ಈಡಾಗುವುದು ಮೊದಲ ಬಾರಿ ಅಲ್ಲ. ಹಿಂದೆ ಕೂಡ ಎಮ್ಮೆ, ಕುರಿಗಳಿಗೆ ಅವರು ಸಂದರ್ಶನ ಮಾಡಿರುವ ವಿಡಿಯೋ ಕೂಡ ವೈರಲ್ ಆಗಿತ್ತು.

    ಯಾಕೆ ನೀವು ಹೀಗೆ ಮಾಡ್ತೀರ ಅಂತ ಅಮೀನ್ ಅವರನ್ನು ಕೇಳಿದ್ರೆ, ಐ ಲವ್ ಮೈ ಜಾಬ್. ನನಗೆ ಈ ರೀತಿ ವರದಿ ಮಾಡಲು ಇಷ್ಟವಾಗುತ್ತೆ. ನಾನು ಸೀರಿಯಸ್ ವಿಷಯದ ಕುರಿತು ವರದಿ ಮಾಡಲ್ಲ ಎಂದು ನಗುಮುಖದಿಂದ ಉತ್ತರಿಸುತ್ತಾರೆ. ಅಮೀನ್ ಅವರ ಡಿಫರೆಂಟ್ ವರದಿಗಾರಿಕೆ ಶೈಲಿಯಿಂದಲೇ ಪಾಕಿಸ್ತಾನದಲ್ಲಿ ಅವರು ಹೆಸರುವಾಸಿಯಾಗಿದ್ದಾರೆ.

    https://www.youtube.com/watch?time_continue=15&v=NeAYCPK_-To

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಧ್ಯಮಗಳ ವಿರುದ್ಧ ದುನಿಯಾ ವಿಜಿ ಗರಂ

    ಮಾಧ್ಯಮಗಳ ವಿರುದ್ಧ ದುನಿಯಾ ವಿಜಿ ಗರಂ

    ಬೆಂಗಳೂರು: ಸೋಮವಾರ ತಾನೇ ಜಾಮೀನಿನ ಮೇಲೆ ನಟ ದುನಿಯಾ ವಿಜಯ್ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಿದ್ದಾರೆ. ಆದ್ರೆ ಇಂದು ವಿಜಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

    `ನೀವು ಸೆಲೆಬ್ರಿಟಿ, ಇನ್ನು ಮುಂದೆ ಬುದ್ಧಿ ಕಲಿತು ಸರಿಯಾಗಿರಿ ಎಂದು ದುನಿಯಾ ವಿಜಿಗೆ ಜಡ್ಜ್ ಹೇಳಿ ಬೇಲ್ ಕೊಟ್ಟಿದ್ದರು. ಆದರೆ ಜಡ್ಜ್ ಹೇಳಿದ್ದರೂ ಇಂದು ದುನಿಯಾ ವಿಜಯ್ ಬುದ್ಧಿ ಕಲಿಯಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂದು ಗಿರಿನಗರ ಪೊಲೀಸ್ ಠಾಣೆಗೆ ಹೋಗುತ್ತಿದ್ದರು. ಈ ವೇಳೆ ವರದಿಗಾರರು ಅವರನ್ನು ಮಾತನಾಡಿಸಲು ಮುಂದಾಗಿದ್ದಾರೆ. ಇದರಿಂದ ಸಿಟ್ಟುಗೊಂಡ ವಿಜಿ, ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

    ಮೊದಲನೇ ಪತ್ನಿಯಿಂದ ಕಂಗೆಟ್ಟು ಗಿರಿನಗರ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಿದ್ದೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಿಜಯ್, ಇದು ನಮ್ಮ ಕುಟುಂಬದ ವಿಚಾರ, ನಾನು ಯಾರ ಮೇಲೂ ದೂರು ಕೊಡಲು ಬಂದಿಲ್ಲ. ನಮ್ಮ ಕುಟುಂಬ ಸಮಸ್ಯೆಯನ್ನ ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಸಿಡಿಮಿಡಿಗೊಂಡಿದ್ದಾರೆ.

    ಇದಕ್ಕೆ ಮತ್ತೆ ಯಾಕೆ ಪೊಲೀಸ್ ಠಾಣೆಗೆ ಬಂದಿದ್ದೀರಾ ಎಂದು ಮರು ಪ್ರಶ್ನೆ ಮಾಡಿದ್ದಕ್ಕೆ, ನನ್ನ ಕೆಲಸಕ್ಕೆ ನಾನು ಬಂದಿದ್ದೇನೆ. ನನಗೆ ಸಾವಿರಾರು ಕೆಲಸಗಳಿವೆ. ಎಲ್ಲವನ್ನೂ ನಿಮಗೆ ಹೇಳುವ ಅವಶ್ಯಕತೆ ಇಲ್ಲ ಎಂದು ವರದಿಗಾರರಿಗೆ ಧಮ್ಕಿ ಹಾಕಿ ಪೊಲೀಸ್ ಠಾಣೆಯ ಒಳಗೆ ಹೋಗಿದ್ದಾರೆ.

    ಈಗಾಗಲೇ ದುನಿಯಾ ವಿಜಯ್ ವಿರುದ್ಧ ಪುತ್ರಿ ಮೋನಿಕಾ ಅಸಮಾಧಾನ ಹೊರ ಹಾಕಿದ್ದು, ತಂದೆಯೊಂದಿಗೆ ಜಗಳ ಮಾಡಿದ್ದಾರೆ. ಬಳಿಕ ವಿಜಯ್ ಅವರ ಬಳಿ ಅಮ್ಮನ ಮನೆಗೆ ತೆರಳುವುದಾಗಿ ಪುತ್ರಿ ಹಠ ಹಿಡಿದಿದ್ದರು. ಸ್ವಲ್ಪ ಸಮಯದ ಬಳಿಕ ವಿಜಯ್ ಅವರು ಮಗಳಿಗೆ ಬ್ಯಾಗ್ ನೀಡಿ ಮನೆ ಹಿಂಬಾಗಿಲಿನಿಂದ ಪುತ್ರಿಯನ್ನು ಕಳುಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದೇ ವೇಳೆ ವಿಜಯ್ ಅವರ ತಾಯಿಯೂ ನಾಗರತ್ನ ಅವರ ಪರವೇ ಮಾತನಾಡಿದ್ದು, ಕೀರ್ತಿಯಿಂದಲೇ ಇಷ್ಟೆಲ್ಲ ನಡೆಯಿತು ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=ocxlKBxASJc

  • ನನ್ನ ಹೆಂಡ್ತಿ ನನಗೆ ಬೈತಾಳೆ, ಸಿಎಂ ಮಾಡಿದ್ದು ಅನ್ಯಾಯ, ಮೈಸೂರು, ರಾಮನಗರಗಳಿಗೆ ಮಾತ್ರ ಸೀರೆ ಯಾಕೆ?

    ನನ್ನ ಹೆಂಡ್ತಿ ನನಗೆ ಬೈತಾಳೆ, ಸಿಎಂ ಮಾಡಿದ್ದು ಅನ್ಯಾಯ, ಮೈಸೂರು, ರಾಮನಗರಗಳಿಗೆ ಮಾತ್ರ ಸೀರೆ ಯಾಕೆ?

    ಚಿಕ್ಕಬಳ್ಳಾಪುರ: “ಸರ್ ಗೌರಿ ಗಣೇಶ ಹಬ್ಬಕ್ಕೆ ಕಡಿಮೆ ರೇಟ್‍ಗೆ ರೇಷ್ಮೆ ಸೀರೆ ಕೊಡ್ತಾರಲ್ಲ. ಚಿಕ್ಕಬಳ್ಳಾಪುರದಲ್ಲಿ ಎಲ್ಲಿ ಕೊಡ್ತಾರೆ ಸರ್? ನನ್ನ ಹೆಂಡತಿ ಬಿಡ್ತಾ ಇಲ್ಲ ಸರ್ ಸೀರೆ ಬೇಕೇ ಬೇಕು ಅಂತ ತಲೆ ತಿಂತಾವಳೆ. ಕಡಿಮೆ ಬೆಲೆಗೆ ರೇಷ್ಮೆ ಸೀರೆ ನಮ್ಮ ಜಿಲ್ಲೆಗೂ ನೀಡಿದ್ದರೇ ಕುಮಾರಸ್ವಾಮಿ ಅವರಿಗೆ ಏನಾಗುತ್ತಿತ್ತು. ಇದು ಅನ್ಯಾಯ ಸರ್. ಮೈಸೂರಿಗೆ ಮಾತ್ರ ನೀಡಿ, ಚಿಕ್ಕಬಳ್ಳಾಪುರಕ್ಕೆ ನೀಡುತ್ತಿಲ್ಲ. ಇದರಿಂದ ಮನೆಯಲ್ಲಿ ರೇಷ್ಮೆ ಸೀರೆಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ನನ್ನ ಹೆಂಡತಿ ನನಗೆ ಬೈತಾಳೆ” – ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಪಬ್ಲಿಕ್ ಟಿವಿ ಪ್ರತಿನಿಧಿಗೆ ಬಂದ ಕರೆಯ ಸಂಭಾಷಣೆ.

    ಗೌರಿ ಹಬ್ಬದ ಅಂಗವಾಗಿ ರಾಜ್ಯ ಸರ್ಕಾರ ಕರ್ನಾಟಕ ಸಿಲ್ಕ್ ಇಂಡಸ್ಟ್ರಿಸ್ ಕಾರ್ಪೋರೇಷನ್ ಲಿಮಿಟೆಡ್ (ಕೆಎಸ್‍ಐಸಿ) ಮಹಿಳೆಯರಿಗೆ ಕಡಿಮೆ ರೇಷ್ಮೆ ಸೀರೆ ನೀಡುವ ಆಫರ್ ಪ್ರಕಟಿಸಿದೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಸೀರೆ ನೀಡದ್ದಕ್ಕೆ ಮಹಿಳೆಯರು ಆಕ್ರೋಶಗೊಂಡಿದ್ದಾರೆ. ಮೈಸೂರು ಸೇರಿದಂತೆ ಕೆಲ ಜಿಲ್ಲೆಗಳ ಬಹುತೇಕ ಮಹಿಳೆಯರು ಬೆಲೆಬಾಳುವ ಸೀರೆಯನ್ನು ಕಡಿಮೆ ಬೆಲೆಗೆ ಲಕ್ಕಿ ಕೂಪನ್ ಮೂಲಕ ಪಡೆಯುತ್ತಿರುವುದು ಬಯಲು ಸೀಮೆ ಜಿಲ್ಲೆಯ ಮಹಿಳೆಯರಿಗೆ ಸಹಿಸಲಾಗುತ್ತಿಲ್ಲ.

    ಏನಿದು ಆಫರ್?
    ಗೌರಿ ಹಬ್ಬದ ಅಂಗವಾಗಿ ರಾಜ್ಯ ಸರ್ಕಾರ ಕರ್ನಾಟಕ ಸಿಲ್ಕ್ ಇಂಡಸ್ಟ್ರಿಸ್ ಕಾರ್ಪೋರೇಷನ್ ಲಿಮಿಟೆಡ್ (ಕೆಎಸ್‍ಐಸಿ) ವತಿಯಿಂದ ರಾಜ್ಯಾದ್ಯಂತ 14 ಸಾವಿರ ರೂ. ಬೆಲೆ ಬಾಳುವ 5 ಸಾವಿರ ಮೈಸೂರು ಸಿಲ್ಕ್ ಸೀರೆಗಳನ್ನು 4,725 ರೂ.ಗಳ ಬಂಪರ್ ರಿಯಾಯಿತಿ ದರದಲ್ಲಿ ನೀಡಿದೆ. ಲಕ್ಕಿ ಡಿಪ್ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಿದೆ. ಸೀರೆ ಅಗತ್ಯವಿರುವವರಿಂದ ಆಧಾರ್ ಕಾರ್ಡ್ ಪಡೆದು ಅವರ ಹೆಸರಿನ ಚೀಟಿಗಳನ್ನು ಲಕ್ಕಿ ಡಿಪ್ ಮುಖಾಂತರ ಆಯ್ಕೆ ಮಾಡಿದೆ. ಅಂತೆಯೇ ರಾಜ್ಯದ ಐದು ಕೇಂದ್ರಗಳಲ್ಲಿ ಸೀರೆ ಕೊಳ್ಳುವ ಮಹಿಳೆಯರಿಂದ ಆಧಾರ್ ಪಡೆದು ನೋಂದಣಿ ಕಾರ್ಯ ಆರಂಭಿಸಿ, ಸೀರೆ ವಿತರಿಸಲಾಗಿದೆ. ಆದರೆ ಈ ಕೇಂದ್ರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಲ್ಲ.

    ಇಲಾಖಾಧಿಕಾರಿಗಳ ಮಾಹಿತಿ ಪ್ರಕಾರ ಬೆಂಗಳೂರು ಮತ್ತು ಮೈಸೂರು ಕೇಂದ್ರಗಳಲ್ಲಿ 3,000, ಚನ್ನಪಟ್ಟಣದಲ್ಲಿ 1,000, ದಾವಣಗೆರೆಯಲ್ಲಿ 500, ಬೆಳಗಾವಿಯಲ್ಲಿ 500 ಸೀರೆಗಳು ಸೇರಿ ಒಟ್ಟು 5 ಸಾವಿರ ಸೀರೆಗಳನ್ನು 5,000 ಮಂದಿ ಮಹಿಳೆಯರಿಗೆ ವಿತರಿಸಿದೆ. ಸೀರೆ ನಿಗದಿತ ಮೊತ್ತ 14 ಸಾವಿರ ರೂ. ಇದ್ದು, ಸರ್ಕಾರ ಅದನ್ನು 4,725 ರೂ.ಗೆ ರಿಯಾಯಿತಿಯಲ್ಲಿ ವಿತರಿಸಿದೆ. ಈ ಸೌಲಭ್ಯ ಹಲವು ಜಿಲ್ಲೆಗಳಿಗೆ ಸಿಗದಿರುವುದು ಪತಿರಾಯರ ಕಣ್ಣೀರ ಕತೆಗೆ ಕಾರಣವಾಗಿದೆ ಎಂದರೇ ನೀವು ನಂಬಲೇ ಬೇಕು.

    ಇನ್ನೂ 5 ಜಿಲ್ಲೆಗಳಲ್ಲ ಗೌರಿ ಹಬ್ಬದ ಕೊಡುಗೆಯಾಗಿ ಬೆಲೆ ಬಾಳುವ ಸೀರೆಯನ್ನು ಕಡಿಮೆ ಬೆಲೆಗೆ ಪಡೆದುಕೊಂಡಿರುವ ನಾರಿಮಣಿಯರ ಸುದ್ದಿ ಮೀಡಿಯಾಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾದ ಬಳಿಕ ಜಿಲ್ಲೆಯಲ್ಲಿನ ಮಹಿಳೆಯರ ಕಣ್ಣು ಕೆಂಪಾಗಿದೆ. ನನಗೆ 10 ಸಾವಿರದ ರೇಷ್ಮೆ ಸೀರೆಯೇ ಬೇಕು ಎಂದು ತಮ್ಮ ಗಂಡದಿರ ಜೀವ ಹಿಂಡುತ್ತಿದ್ದಾರೆ. ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರುವ ಪತಿರಾಯರು, ಸರ್ಕಾರ ಮೋಸ ಮಾಡುತ್ತಿದೆ. ನಮ್ಮನ್ನು ನಮ್ಮ ಹೆಂಡತಿ ಮೂಲಕ ಗೋಳು ಹೂಯ್ದುಕೊಳ್ಳುತ್ತಿದೆ. ಸರ್ಕಾರ ಸುಮ್ಮನಿರಬೇಕಿತ್ತು. ಎಲ್ಲ ಜಿಲ್ಲೆಗಳಲ್ಲಿಯೂ ಸೀರೆ ನೀಡಬೇಕಿತ್ತು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಹಬ್ಬ-ಹರಿದಿನಗಳಲ್ಲಿ ಜೇಬು ಖಾಲಿ ಮಾಡಿಕೊಳ್ಳುತ್ತಿದ್ದ ಪುರುಷರು, ಇದೀಗ ತಮ್ಮ ಪತ್ನಿಯರಿಗೆ ಸೀರೆ ಕೊಡಿಸಲು ಸಾಲ ಮಾಡುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರದಿಗಾರನ ಮೇಲೆ ಹಲ್ಲೆಗೆ ಮುಂದಾದ ಮಾಜಿ ಶಾಸಕ ಸತೀಶ್ ಸೈಲ್ ಬೆಂಬಲಿಗರು!

    ವರದಿಗಾರನ ಮೇಲೆ ಹಲ್ಲೆಗೆ ಮುಂದಾದ ಮಾಜಿ ಶಾಸಕ ಸತೀಶ್ ಸೈಲ್ ಬೆಂಬಲಿಗರು!

    ಕಾರವಾರ: ಕಾಂಗ್ರೆಸ್ ನ ಮಾಜಿ ಶಾಸಕ ಸತೀಶ್ ಸೈಲ್ ಅವರ ಬೆಂಬಲಿಗರು ಪಬ್ಲಿಕ್ ಟಿವಿ ವರದಿಗಾರನಿಗೆ ಬೆದರಿಕೆ ಹಾಗೂ ಹಲ್ಲೆಗೆ ಮುಂದಾದ ಘಟನೆ ನಡೆದಿದೆ.

    ಎರಡು ದಿನಗಳ ಹಿಂದೆಯಷ್ಟೇ ಪಬ್ಲಿಕ್ ಟಿವಿಯಲ್ಲಿ ಕಾಂಗ್ರೆಸ್ ನ ಮಾಜಿ ಶಾಸಕ ಸತೀಶ್ ಸೈಲ್ ಅವರು ಹಾಲಿ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಸರ್ಕಾರಿ ಕಚೇರಿಯನ್ನು ಬಿಟ್ಟು ಕೊಡಬೇಕಿತ್ತು. ಹೀಗಾಗಿ ಖಾಲಿ ಮಾಡುವ ವೇಳೆ ಮಾಜಿ ಶಾಸಕ ಕಚೇರಿಯಲ್ಲಿದ್ದ ವಸ್ತುಗಳನ್ನು ಕೊಂಡೊಯ್ದ ಕುರಿತು ವರದಿ ಮಾಡಲಾಗಿತ್ತು. ಇದರಿಂದ ಸಿಟ್ಟುಗೊಂಡ ಮಾಜಿ ಶಾಸಕ ತಮ್ಮ ಬೆಂಬಲಿಗರ ಮೂಲಕ ಹಲ್ಲೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಸೋತ ಬಳಿಕ ಕಚೇರಿ ಖಾಲಿ ಮಾಡೋವಾಗ ಟಾಯ್ಲೆಟ್‍ನ್ನು ಕಿತ್ಕೊಂಡು ಹೋದ ಮಾಜಿ ಶಾಸಕ

    ಹಲ್ಲೆಗೆ ವಿಫಲಯತ್ನ:
    ಹಾಲಿ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ರವರಿಗೆ ನಿಗದಿಯಾಗಿದ್ದ ಸರ್ಕಾರಿ ಕಚೇರಿಯನ್ನು ಬಿಟ್ಟುಕೊಡುವ ಸಂದರ್ಭದಲ್ಲಿ ಟಾಯ್ಲೆಟ್ ಸೇರಿದಂತೆ ಕಚೇರಿಯಲ್ಲಿ ಅಳವಡಿಸಿದ್ದ ಪೈಪ್ ಬಲ್ಬ್ ಸೇರಿದಂತೆ ವಸ್ತುಗಳನ್ನು ಮಾಜಿ ಶಾಸಕ ಕೊಂಡೊಯ್ದರ ಕುರಿತು ವರದಿ ಪ್ರಸಾರ ಮಾಡಲಾಗಿತ್ತು. ಇದರಿಂದ ಕೆರಳಿದ ಮಾಜಿ ಶಾಸಕ ತಮ್ಮ ಕುಪಿತಗೊಂಡ ಮಾಜಿ ಶಾಸಕರು ಕಾರವಾರದ ನಗರಸಭಾ ಸದಸ್ಯ ವಿಠಲ್ ಸಾವಂತ್, ತನ್ನ ಬಲಗೈ ಬಂಟ ರಾಹುಲ್ ಬರ್ಕರ್ ಹಾಗೂ ಕೆಲವು ಮಹಿಳೆಯರನ್ನು ಜಿಲ್ಲಾ ಪತ್ರಿಕಾ ಭವನಕ್ಕೆ ಕರೆತಂದು, ವರದಿಗಾರ ನವೀನ್ ಸಾಗರ್ ಗೆ ಕರೆ ಮಾಡಿ ಪತ್ರಿಕಾಗೋಷ್ಠಿ ಇರುವುದಾಗಿ ಸುಳ್ಳು ಹೇಳುವ ಮೂಲಕ ಹಲ್ಲೆಗೆ ಮುಂದಾಗಿದ್ದರು. ಆದ್ರೆ ಸುದ್ದಿ ಸಂಬಂಧ ಬೇರೆಡೆ ತೆರಳಿದ್ದರಿಂದ ಭವನದಲ್ಲಿ ಶಾಸಕರ ಬೆಂಬಲಿಗರು ಗಲಾಟೆ ಮಾಡಿ ಹಲ್ಲೆ ಮಾಡುವ ಬೆದರಿಕೆಯೊಡ್ಡಿ ತೆರಳಿದ್ದಾರೆ.

    ಇನ್ನು ಈ ಕುರಿತು ಪತ್ರಿಕಾ ಭವನ ಹಾಗೂ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಟಿ.ಬಿ ಹರಿಕಾಂತ್ ರವರು ಪ್ರತಿಕ್ರಿಯಿಸಿದ್ದು, ಭವನಕ್ಕೆ ಬಂದು ಗಲಾಟೆ ಮಾಡಿರುವುದನ್ನು ಖಂಡಿಸಿದ್ದು ಒಂದು ಮೇಳೆ ಇದೇ ವರ್ತನೆ ಮುಂದುವರೆದರೆ ಪತ್ರಕರ್ತರು ಖಂಡಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ಸುದ್ದಿಗಳು ಬಂದಾಗ ಆ ಕುರಿತು ಸ್ಪಷ್ಟನೇ ನೀಡಬೇಕೇ ಹೊರತು ಈ ರೀತಿ ಹಲ್ಲೆಗೆ ಮುಂದಾಗುವುದು ಸರಿಯಲ್ಲ ಎಂದಿದ್ದಾರೆ.

    https://www.youtube.com/watch?v=17a1EEoYLBo

  • ಒಬ್ಬೊಬ್ಬರಂತೆ ಬಂದು ಲೈವ್ ರಿಪೋರ್ಟರ್ ಗೆ ಯುವತಿಯರಿಂದ ಕಿಸ್ – ವಿಡಿಯೋ

    ಒಬ್ಬೊಬ್ಬರಂತೆ ಬಂದು ಲೈವ್ ರಿಪೋರ್ಟರ್ ಗೆ ಯುವತಿಯರಿಂದ ಕಿಸ್ – ವಿಡಿಯೋ

    ಮಾಸ್ಕೋ: ಇತ್ತೀಚೆಗೆ ಲೈವ್ ಟಿಲಿಕಾಸ್ಟ್ ಮಾಡುತ್ತಿದ್ದಾಗ ಮಹಿಳಾ ರಿಪೋರ್ಟರ್ ಗೆ ಯುವಕನೊಬ್ಬ ಕಿಸ್ ಕೊಡಲು ಮುಂದಾಗಿದ್ದ ಘಟನೆ ನಡೆದಿದ್ದು, ಇದೀಗ ವರದಿಗಾರನೊಬ್ಬ ಲೈವ್ ಕೊಡುತ್ತಿದ್ದಾಗ ಇಬ್ಬರು ಯುವತಿಯರು ಬಂದು ಕಿಸ್ ಕೊಟ್ಟು ಹೋಗಿದ್ದಾರೆ.

    ಈ ಘಟನೆ ರಷ್ಯಾದಲ್ಲಿ ನಡೆದಿದ್ದು, ದಕ್ಷಿಣ ಕೊರಿಯಾದ ವರದಿಗಾರ ಕ್ವಾನ್ ಕ್ವಾಲ್ ಯೇಲ್ ಅವರು ರಷ್ಯಾದಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯನ್ನು ಲೈವ್ ಟೆಲಿಕಾಸ್ಟ್ ಮಾಡುತ್ತಿದ್ದರು. ಈ ವೇಳೆ ಇಬ್ಬರು ಯುವತಿಯರು ಬಂದು ರಿಪೋರ್ಟರ್ ಗೆ ಮುತ್ತು ಕೊಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:  ಲೈವ್ ಟೆಲಿಕಾಸ್ಟ್ ಮಾಡ್ತಿರುವಾಗ್ಲೇ ರಿಪೋರ್ಟರ್ ಗೆ ಕಿಸ್!- ವಿಡಿಯೋ ವೈರಲ್

    ವಿಡಿಯೋದಲ್ಲಿ ಏನಿದೆ?:
    ಪತ್ರಕರ್ತ ವಿಶ್ವಕಪ್ ನಡೆಯುತ್ತಿದ್ದ ರಸ್ತೆಯಲ್ಲಿ ನೇರ ಪ್ರಸಾರ ಮಾಡುತ್ತಿದ್ದರು. ಈ ವೇಳೆ ರಷ್ಯಾ ಯುವತಿಯೊಬ್ಬಳು ಬಂದು ಆತನ ಕೆನ್ನೆಗೆ ಮುತ್ತು ಕೊಟ್ಟು ಹೋಗುತ್ತಾಳೆ. ಬಳಿಕ ಮೊತ್ತೊಬ್ಬ ಯುವತಿ ಬಂದು ವರದಿಗಾರರನ್ನು ತಬ್ಬಿಕೊಂಡು ಮುತ್ತು ಕೊಟ್ಟು ಹೋಗುತ್ತಾಳೆ.

    ಇಬ್ಬರು ಯುವತಿಯರು ಮುತ್ತುಕೊಟ್ಟು ಹೋಗುವರೆಗೂ ವರದಿಗಾರ ಸುಮ್ಮನೆ ನಿಂತಿರುತ್ತಾರೆ. ಆದರೆ ಬಳಿಕ ನಕ್ಕು ಸುಮ್ಮನಾಗುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಹಿಂದೆ ವಿಶ್ವಕಪ್ ಆರಂಭದಲ್ಲಿ ಮಹಿಳಾ ಪತ್ರಕರ್ತೆ ಸುದ್ದಿಯಲ್ಲಿದ್ದಳು. ಆಗ ಪತ್ರಕರ್ತೆ ಲೈವ್ ಸುದ್ದಿ ಮಾಡುವಾಗ ಅಭಿಮಾನಿಯೊಬ್ಬ ಮುತ್ತು ಕೊಡಲು ಮುಂದಾಗಿದ್ದನು. ಆಗ ಆ ವ್ಯಕ್ತಿಗೆ ರಿಪೋರ್ಟರ್ ಬೈದಿದ್ದರು.

    https://www.youtube.com/watch?v=G5VrMmdvAnU

  • ಲೈವ್ ಟೆಲಿಕಾಸ್ಟ್ ಮಾಡ್ತಿರುವಾಗ್ಲೇ ರಿಪೋರ್ಟರ್ ಗೆ ಕಿಸ್!- ವಿಡಿಯೋ ವೈರಲ್

    ಲೈವ್ ಟೆಲಿಕಾಸ್ಟ್ ಮಾಡ್ತಿರುವಾಗ್ಲೇ ರಿಪೋರ್ಟರ್ ಗೆ ಕಿಸ್!- ವಿಡಿಯೋ ವೈರಲ್

    ಮಾಸ್ಕೋ: ಲೈವ್ ಟೆಲಿಕಾಸ್ಟ್ ಮಾಡುವಾಗಲೇ ಮಹಿಳಾ ರಿಪೋರ್ಟರ್ ಗೆ ವ್ಯಕ್ತಿಯೊಬ್ಬ ಕಿಸ್ ಕೊಡಲು ಮುಂದಾಗಿದ್ದ ಘಟನೆ ರಷ್ಯಾದಲ್ಲಿ ನಡೆದಿದೆ.

    ಕಿಸ್ ಕೊಡಲು ಮುಂದಾಗಿದ್ದ ವ್ಯಕ್ತಿಯನ್ನು ರಷ್ಯಾ ಫುಟ್‍ ಬಾಲ್ ಅಭಿಮಾನಿ ಎಂದು ಗುರುತಿಸಲಾಗಿದೆ. ಆತ ಕೊಲಂಬಿಯಾದ ಪತ್ರಕರ್ತೆಗೆ ಮುತ್ತು ಕೊಡಲು ಮುಂದಾಗಿದ್ದನು. ಕೆಲವು ದಿನಗಳ ನಂತರ ಆತ ತನ್ನ ವರ್ತನೆಯ ಬಗ್ಗೆ ಅರಿತುಕೊಂಡು ಪತ್ರಕರ್ತೆ ಬಳಿ ಕ್ಷಮೆಯಾಚಿಸಿದ್ದಾನೆ.

    ನಡೆದಿದ್ದೇನು?:
    ಭಾನುವಾರ ಬ್ರೆಜಿಲಿಯನ್ ಪತ್ರಕರ್ತೆ ಜುಲಿಯಾ ಗಿಮಾರಾಸ್ ಅವರು ಮತ್ತೊಬ್ಬ ಮಹಿಳಾ ವರದಿಗಾರರೊಂದಿಗೆ ರಷ್ಯಾದ ಯೆಕಟೇನ್ಬರ್ಗ್ ಅರೆನಾದ ಹೊರಗೆ ನೇರ ಪ್ರಸಾರ ಮಾಡುತ್ತಿದ್ದರು.

    ಈ ವೇಳೆ ಒಬ್ಬ ವ್ಯಕ್ತಿ ಬಂದು ಜುಲಿಯಾ ಅವರಿಗೆ ಕಿಸ್ ಮಾಡಲು ಪ್ರಯತ್ನಿಸಿದ್ದಾನೆ. ಆಗ ಜುಲಿಯಾ ಆತನನ್ನು ತಳ್ಳಿ ಬೈಯುತ್ತಾರೆ. “ಇದನ್ನು ಮಾಡಬೇಡಿ!. ಇದಕ್ಕೆ ನಾನು ಅನುಮತಿಸುವುದಿಲ್ಲ, ಎಂದಿಗೂ ಇಂತಹ ಘಟನೆ ಸರಿ ಇಲ್ಲ. ನನಗೆ ಈ ರೀತಿಯ ವರ್ತನೆ ಇಷ್ಟ ಆಗಲ್ಲ” ಎಂದು ಹೇಳಿದ್ದಾರೆ. ಈ ವೇಳೆ ಆತ ತಕ್ಷಣ ಕ್ಷಮಿಸಿ ಎಂದು ರಿಪೋರ್ಟರ್ ಬಳಿ ಕ್ಷಮೆಯಾಚಿಸಿದ್ದಾನೆ.

    ಇದೊಂದು ಅವಮಾನಕರವಾದ ಘಟನೆ. ಅದೃಷ್ಟವಶಾತ್ ಇದು ಬ್ರೆಜಿಲ್ ನಲ್ಲಿ ಎಂದಿಗೂ ನಡೆದಿರಲಿಲ್ಲ. ರಷ್ಯಾದಲ್ಲಿ ಈ ತರಹದ ಘಟನೆ ಎರಡು ಬಾರಿ ಸಂಭವಿಸಿದೆ. ಇದು ಅವಮಾನಕರ ಎಂದು ರಿಪೋರ್ಟರ್ ಜುಲಿಯಾ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ಕೊಲಂಬಿಯಾದ ಪತ್ರಕರ್ತೆ ಜೂಲಿಯೆತ್ ಗೊನ್ಜಾಲೆಜ್ ಥೇರನ್ ಅವರು ನೇರ ಪ್ರಸಾರ ಮಾಡುತ್ತಿದ್ದಾಗ ಫುಟ್ಬಾಲ್ ಅಭಿಮಾನಿಯೋರ್ವ ಕಿಸ್ ಮಾಡಿದ್ದನು. ಅಂದು ಆ ಘಟನೆಯನ್ನು ಅನೇಕ ಜನರು ಲೈಂಗಿಕ ಕಿರುಕುಳ ಎಂದು ಆಪಾದನೆ ಮಾಡಿದ್ದರು.