Tag: Reporter

  • ಬೆಳಗಾವಿ, ವಿಜಯಪುರ ಮೈಸೂರಿನ ಪಬ್ಲಿಕ್ ಟಿವಿ ವರದಿಗಾರರಿಗೆ ರಾಜ್ಯೋತ್ಸವ ಪ್ರಶಸ್ತಿ

    ಬೆಳಗಾವಿ, ವಿಜಯಪುರ ಮೈಸೂರಿನ ಪಬ್ಲಿಕ್ ಟಿವಿ ವರದಿಗಾರರಿಗೆ ರಾಜ್ಯೋತ್ಸವ ಪ್ರಶಸ್ತಿ

    ಮೈಸೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಬೆಳಗಾವಿಯ ದಿಲೀಪ್ ಕುರಂದವಾಡೆ, ವಿಜಯಪುರದ ಪುರುಷೋತ್ತಮ ಮತ್ತು ಮೈಸೂರಿನ ಕೆ.ಪಿ.ನಾಗರಾಜ್ ಪಬ್ಲಿಕ್ ಟಿವಿಯ ವರದಿಗಾರರು ಆಯ್ಕೆಯಾಗಿದ್ದಾರೆ.

    ಮೂವರು ವರದಿಗಾರರಿಗೆ ನಾಳೆ  ನಡೆಯುವ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮೈಸೂರು ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಮಂದಿಗೆ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಬಾರಿ ಮಾಧ್ಯಮ ಕ್ಷೇತ್ರದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಮೈಸೂರು ಜಿಲ್ಲಾಡಳಿತ ಕೆ.ಪಿ.ನಾಗರಾಜ್ ಅವರನ್ನು ಆಯ್ಕೆ ಮಾಡಿದೆ. ಪಬ್ಲಿಕ್ ಟಿವಿಯ ಮೈಸೂರು ಜಿಲ್ಲೆಯ ವರದಿಗಾರರಾಗಿ ಕೆಪಿ ನಾಗರಾಜ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

    ಇವರಲ್ಲದೆ ಸಾಹಿತ್ಯ ಕ್ಷೇತ್ರದಿಂದ ಡಾ.ಗುಬ್ಬಿಗೂಡು ರಮೇಶ್, ಸಮಾಜ ಸೇವಾ ಕ್ಷೇತ್ರದಿಂದ ಕೆ.ಜೆ.ಶಂಕರ ನಾರಾಯಣ ಶಾಸ್ತ್ರಿ, ಜಾನಪದ ಕ್ಷೇತ್ರದಿಂದ ಭಾಗ್ಯಮ್ಮ ಅವರನ್ನು ಆಯ್ಕೆ ಮಾಡಲಾಗಿದೆ. ಜೊತೆಗೆ ಸಂಗೀತ ಕ್ಷೇತ್ರದಿಂದ ರೇವಣ್ಣ, ಪರಿಸರ ಕ್ಷೇತ್ರದಿಂದ ನಾಗಭೂಷಣ್ ರಾವ್, ಕನ್ನಡ ಹೋರಾಟಗಾರ ವರ್ಗದಿಂದ ಸಿದ್ದರಾಜು, ಡಿ.ಆರ್.ಕರೀಗೌಡ, ಡಿ.ಎಂ.ಬಸವಣ್ಣ ಮತ್ತು ಡಾ.ಎಂ.ಬಿ.ಮಂಚೇಗೌಡ ಅವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲಾಡಳಿತ ಆಯ್ಕೆ ಮಾಡಿದೆ.

    ನಾಳೆ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಇವರೆಲ್ಲರಿಗೂ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

  • ರೋಚಕ ಸ್ಟೋರಿಗಳನ್ನೇ ವರದಿ ಮಾಡ್ತಿದ್ದ ರಿಪೋರ್ಟರ್ ಅಪಘಾತದಲ್ಲಿ ಸಾವು

    ರೋಚಕ ಸ್ಟೋರಿಗಳನ್ನೇ ವರದಿ ಮಾಡ್ತಿದ್ದ ರಿಪೋರ್ಟರ್ ಅಪಘಾತದಲ್ಲಿ ಸಾವು

    – ಭಾರತ ಮೂಲದ ವರದಿಗಾರ್ತಿ

    ಆಲ್ಬನಿ: ಅಮೆರಿಕದ ಪ್ರಖ್ಯಾತ ಟಿವಿಯಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಭಾರತ ಮೂಲದ ಯುವತಿ ನ್ಯೂಯಾರ್ಕ್‌ನಲ್ಲಿ ಮೃತಪಟ್ಟಿದ್ದಾರೆ.

    ನೀನಾ ಕಪೂರ್ (26) ಮೃತ ವರದಿಗಾರ್ತಿ. ನೀನಾ ಕಪೂರ್ ಅಮೆರಿಕದ ಸಿಬಿಎಸ್ ಚಾನೆಲ್‍ನಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಬಾಡಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ನೀನಾ ಕಪೂರ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ನೀನಾ ಕಪೂರ್ ಶೇರಿಂಗ್ ಆಧಾರದ ಮೇರೆಗೆ ಸ್ಕೂಟರ್ ಅನ್ನು ಬಾಡಿಗೆ ತೆಗೆದುಕೊಂಡಿದ್ದರು. ಬೇರೊಬ್ಬ ವ್ಯಕ್ತಿ ಸ್ಕೂಟರ್ ಓಡಿಸುತ್ತಿದ್ದನು. ಸ್ಕೂಟರ್ ಹಿಂದೆ ನೀನಾ ಕಪೂರ್ ಕುಳಿತಿದ್ದರು. ಈ ವೇಳೆ ರಸ್ತೆ ಅಪಘಾತ ಸಂಭವಿಸಿದೆ. ತಕ್ಷಣ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೀನಾ ಕಪೂರ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸ್ಕೂಟರ್ ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನ್ಯೂಯಾರ್ಕ್‌ನ ಬ್ರೂಕ್ಲಿನ್ ಪ್ರಾಂತ್ಯದ ಬಳಿ ಅಪಘಾತ ಸಂಭವಿಸಿದೆ. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ತಲೆಗೆ ತೀವ್ರವಾಗಿ ಪೆಟ್ಟಾಗಿ ನೀನಾ ಕಪೂರ್ ಮೃತಪಟ್ಟಿದ್ದಾರೆ. ಸದ್ಯಕ್ಕೆ ಈ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

    ಪೆನ್ಸಿಲ್ವೇನಿಯಾದ ನ್ಯೂಟೌನ್ ನಿವಾಸಿಯಾಗಿದ್ದ ನೀನಾ ಕಪೂರ್ ತಾಯಿ ಮೋನಿಕಾ, ತಂದೆ ಅನುಪ್ ಮತ್ತು ಸಹೋದರ ಅಜಯ್ ವಾಸಿಸುತ್ತಿದ್ದರು. ವರದಿಗಾರ್ತಿ ನೀನಾ ಕಪೂರ್ 2019 ಜೂನ್‍ನಲ್ಲಿ ಸಿಬಿಎಸ್ ಚಾನೆಲ್‍ಗೆ ಸೇರಿಕೊಂಡಿದ್ದರು. ಅದಕ್ಕೂ ಮೊದಲು ಚಾನೆಲ್ ನ್ಯೂಸ್ 12ರಲ್ಲಿ ಕೆಲಸ ಮಾಡುತ್ತಿದ್ದರು.

    ನೀನಾ ಕಪೂರ್ ಸದಾ ನಗುತ್ತಲೇ ಸ್ಟೋರಿಗಳನ್ನು ವರದಿ ಮಾಡುತ್ತಿದ್ದಳು. ಎಲ್ಲರೊಟ್ಟಿಗೆ ಖುಷಿಯಿಂದ ಕೆಲಸ ಮಾಡುತ್ತಿದ್ದಳು. ನೀನಾ ಕಪೂರ್ ಹೆಚ್ಚಾಗಿ ರೋಚಕ ಸ್ಟೋರಿಗಳನ್ನು ಮಾಡುತ್ತಿದ್ದಳು. ಆದರೆ ಅವಳ ಅಗಲಿಕೆಯಿಂದ ನಮಗೆ ತುಂಬಾ ನೋವಾಗಿದೆ ಎಂದು ಸಹೋದ್ಯೋಗಿಗಳು ನೀನಾ ಬಗ್ಗೆ ಹೇಳಿದ್ದಾರೆ.

  • ಹನುಮಂತು ಕುಟುಂಬಕ್ಕೆ ಪಬ್ಲಿಕ್ ಟಿವಿಯಿಂದ 14.25 ಲಕ್ಷ ರೂ. ಪರಿಹಾರ

    ಹನುಮಂತು ಕುಟುಂಬಕ್ಕೆ ಪಬ್ಲಿಕ್ ಟಿವಿಯಿಂದ 14.25 ಲಕ್ಷ ರೂ. ಪರಿಹಾರ

    ರಾಮನಗರ: ರಸ್ತೆ ಅಪಘಾತದಲ್ಲಿ ಮೃತಪಟ್ಟ ನಮ್ಮ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಕುಟುಂಬಕ್ಕೆ ಪಬ್ಲಿಕ್ ಟಿವಿ ವತಿಯಿಂದ ಪರಿಹಾರ ಚೆಕ್ ನೀಡಲಾಯ್ತು. 14 ಲಕ್ಷದ 25 ಸಾವಿರ ರೂಪಾಯಿಯ ಪರಿಹಾರ ಚೆಕ್ ಹನುಮಂತು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

    ಪಬ್ಲಿಕ್ ಟಿವಿ ಆಡಳಿತ ಮಂಡಳಿಯು ಈ ಹಿಂದೆ ಘೋಷಿಸಿದಂತೆ 10 ಲಕ್ಷ ರೂಪಾಯಿ ಹಾಗೂ ಪಬ್ಲಿಕ್ ಟಿವಿ ಸಿಬ್ಬಂದಿಯ ಒಂದು ದಿನದ ಸಂಬಳ ರೂಪದಲ್ಲಿ ಸಂಗ್ರಹವಾಗಿದ್ದ 4 ಲಕ್ಷದ 25 ಸಾವಿರ ರೂಪಾಯಿ ಸೇರಿ ಒಟ್ಟು 14 ಲಕ್ಷದ 25 ಸಾವಿರ ರೂಪಾಯಿ ಆಗಿತ್ತು.

    ಹನುಮಂತು ಅವರ ಪತ್ನಿಗೆ 11 ಲಕ್ಷದ 25 ಸಾವಿರ ರೂಪಾಯಿ ಚೆಕ್ ಹಾಗೂ ಹನುಮಂತು ಅವರ ತಾಯಿಗೆ 3 ಲಕ್ಷ ರೂಪಾಯಿ ಮೌಲ್ಯದ ಚೆಕ್ ಹಸ್ತಾಂತರಿಸಲಾಯ್ತು. ಪಬ್ಲಿಕ್ ಟಿವಿ ಸಿಇಓ ಅರುಣ್ ಕುಮಾರ್, ಸಿಒಒ ಹರೀಶ್, ಕಾರ್ಯಕಾರಿ ಸಂಪಾದಕ ದಿವಾಕರ್ ಹಾಗೂ ಹೆಚ್.ಆರ್. ವಿಭಾಗದ ಮುಖ್ಯಸ್ಥರಾದ ಶಂಕರ್ ಈ ಸಂದರ್ಭದಲ್ಲಿ ಹಾಜರಿದ್ದರು.

    ಏಪ್ರಿಲ್ 21 ರಂದು ರಾಮನಗರ ಜಿಲ್ಲಾ ಕಾರಾಗೃಹದ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಹನುಮಂತು ವಿಧಿವಶರಾಗಿದ್ದರು.

  • ಲೈವ್‍ನಲ್ಲಿ ಅರೆನಗ್ನವಾಗಿ ಬಂದ ಯುವತಿ – ವರದಿಗಾರನ ಅನೈತಿಕ ಸಂಬಂಧ ಬಯಲು

    ಲೈವ್‍ನಲ್ಲಿ ಅರೆನಗ್ನವಾಗಿ ಬಂದ ಯುವತಿ – ವರದಿಗಾರನ ಅನೈತಿಕ ಸಂಬಂಧ ಬಯಲು

    ಮ್ಯಾಡ್ರಿಡ್: ಇತ್ತೀಚೆಗೆ ಮಹಿಳಾ ವರದಿಗಾರ್ತಿ ಮನೆಯಿಂದಲೇ ವರದಿ ನೀಡುತ್ತಿದ್ದಾಗ ಆಕೆಯ ತಂದೆ ಟಿ-ಶರ್ಟ್ ಹಾಕಿಕೊಂಡು ಎಂಟ್ರಿಕೊಟ್ಟಿದ್ದರು. ಇದೀಗ ವರದಿಗಾರನೊಬ್ಬ ಲೈವ್ ವರದಿ ನೀಡುತ್ತಿದ್ದಾಗ ಅರೆನಗ್ನವಾಗಿ ಯುವತಿಯೊಬ್ಬಳು ಹೋಗಿದ್ದಾಳೆ. ಈ ಮೂಲಕ ಆತನೇ ತನ್ನ ಅನೈತಿಕ ಸಂಬಂಧವನ್ನು ಸಾರ್ವಜನಿಕವಾಗಿ ಬಯಲು ಮಾಡಿಕೊಂಡಿದ್ದಾನೆ.

    ಕೊರೊನಾದಿಂದ ಇಡೀ ಸ್ಪೇನ್ ಲಾಕ್‍ಡೌನ್ ಆಗಿದೆ. ಹೀಗಾಗಿ ಅನೇಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಸ್ಪ್ಯಾನಿಶ್ ಪತ್ರಕರ್ತನೊಬ್ಬ ಲೈವ್ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದಾಗ ಅರೆನಗ್ನವಾಗಿ ಯುವತಿಯೊಬ್ಬಳು ಕೊಠಡಿಯಿಂದ ಹೊರ ಬಂದಿದ್ದಾಳೆ. ಇದನ್ನೂ ಓದಿ: ವರ್ಕ್ ಫ್ರಂ ಹೋಂ ಎಫೆಕ್ಟ್- ಮಗಳು ಲೈವ್ ಮಾಡ್ತಿದ್ದಾಗ ಬಟ್ಟೆ ಹಾಕ್ತಾ ಅಪ್ಪನ ಎಂಟ್ರಿ

    ಅಲ್ಫೊನ್ಸೊ ಮೆರ್ಲೋಸ್ ಸ್ಥಳೀಯ ಸ್ಪೇನ್‍ನಲ್ಲಿ ಪತ್ರಕರ್ತನಾಗಿದ್ದು, ಮಾಡೆಲ್ ಮತ್ತು ಪ್ರಸಿದ್ಧ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದಾನೆ. ಮೆರ್ಲೋಸ್ ಯೂಟ್ಯೂಬ್ ಚಾನೆಲ್‍ನಲ್ಲಿ ಅತಿಥಿಯಾಗಿ ಲೈವ್ ಸಂದರ್ಶನದಲ್ಲಿ ಮಾತನಾಡುತ್ತಿದ್ದ. ಆಗ ಅರೆಬೆತ್ತಲೆ ಯುವತಿ ಆಕಸ್ಮಿಕವಾಗಿ ಹೋಗಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲಿರುವ ಯುವತಿ ಮೆರ್ಲೋಸ್‍ನ ಗೆಳತಿ ಮಾರ್ಟ್ ಲೋಪೆಜ್ ಅಲ್ಲ. ಆದರೆ ಆಕೆಯನ್ನು ಅಲೆಕ್ಸಿಯಾ ರಿವಾಸ್ ಎಂದು ಗುರುತಿಸಲಾಗಿದೆ. ಆಕೆಯೂ ಕೂಡ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವರದಿಗಾರ ಬಹಿರಂಗವಾಗಿ ಕ್ಷಮೆ ಕೇಳಿದ್ದಾನೆ.

    https://www.instagram.com/p/B_NT6uFIB8d/

    ಲೋಪೆಜ್ ಈ ಬಗ್ಗೆ ಪ್ರತಿಕ್ರಿಯಿಸಿ, ಅಲೆಕ್ಸಿಯಾ ರಿವಾಸ್ ತನ್ನ ಗೆಳೆಯನೊಂದಿಗೆ ಬ್ರೇಕ್ ಮಾಡಿಕೊಂಡ ನೋವಿನಲ್ಲಿದ್ದಳು. ಆದರೆ ಮೆರ್ಲೋಸ್ ನೊಂದಿಗಿನ ನಾಚಿಕೆಗೇಡು ಕೆಲಸ ಮಾಡಿದ್ದಾಳೆ ಎಂದು ಹೇಳಿದ್ದಾರೆ. ಮೆರ್ಲೋಸ್, ಲೋಪೆಜ್‍ಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾನೆ.

    ಇತ್ತೀಚೆಗೆ ಫ್ಲೋರಿಡಾದ ಜೆಸ್ಸಿಕಾ ಲ್ಯಾಂಗ್ ಎಂಬಾಕೆ ಅಡುಗೆ ಮನೆಯಿಂದ ಲೈವ್ ಬಂದಿದ್ದಳು. ಹೀಗೆ ಕೊರೊನಾ ವೈರಸ್ ಬಗ್ಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ತಂದೆ ಟಿ-ಶರ್ಟ್ ಹಾಕಿಕೊಂಡು ಒಳಗಡೆಯಿಂದ ಎಂಟ್ರಿ ಕೊಟ್ಟಿದ್ದರು. ಕೂಡಲೇ ಎಚ್ಚೆತ್ತು ಒಳಗಡೆ ತೆರಳಿದ್ದರು. ಈ ವಿಚಾರ ಮಗಳಿಗೂ ಗೊತ್ತಾಗಿ ಅಯ್ಯೋ ಡ್ಯಾಡಿ ಎಂದು ಒಂದು ಕ್ಷಣ ದಂಗಾಗಿದ್ದಳು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

    https://twitter.com/kr3at0r/status/1253644846751002624

     

  • ಪಬ್ಲಿಕ್ ಟಿವಿ ವರದಿಗಾರ ಹನುಮಂತು ನಿಧನಕ್ಕೆ ಸಿಎಂ ಸಂತಾಪ

    ಪಬ್ಲಿಕ್ ಟಿವಿ ವರದಿಗಾರ ಹನುಮಂತು ನಿಧನಕ್ಕೆ ಸಿಎಂ ಸಂತಾಪ

    – ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಡಿಕೆಶಿ, ಅಶ್ವತ್ಥನಾರಾಯಣ, ಎಚ್‌ಡಿಕೆ

    ಬೆಂಗಳೂರು: ರಸ್ತೆ ಅಪಘಾತದಲ್ಲಿ ಇಂದು ಮೃತಪಟ್ಟ ಪಬ್ಲಿಕ್ ಟಿವಿಯ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

    ಟ್ವೀಟ್ ಮಾಡಿರುವ ಸಿಎಂ ಯಡಿಯೂರಪ್ಪ ಅವರು, ಭಗವಂತನು ಹನುಮಂತು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಅಕಾಲಿಕ ನಿಧನದ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    ಸಂಸದ ಡಿ.ಕೆ.ಸುರೇಶ್ ಟ್ವೀಟ್ ಮಾಡಿ, ಪಬ್ಲಿಕ್ ಟಿವಿಯ ರಾಮನಗರ ಜಿಲ್ಲಾ ವರದಿಗಾರ ಹನುಮಂತು ಅವರ ನಿಧನಕ್ಕೆ ಎಲ್ಲೆಡೆಯಿಂದ ತೀವ್ರ ಸಂತಾಪ ವ್ಯಕ್ತವಾಗಿದೆ. ಅದರಂತೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಹನುಮಂತು ಅವರ ನಿಧನಕ್ಕೆ ಸಂತಾಪ ಸೂಚಿಸಿ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ಹೇಳಿದ್ದಾರೆ.

    ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಟ್ವೀಟ್ ಮಾಡಿ, ಹನುಮಂತು ಅವರ ಅಕಾಲಿಕ ಮರಣ ದುಃಖ ತಂದಿದೆ. ಸದಾ ಕ್ರಿಯಾಶೀಲ, ಉತ್ಸಾಹಿ, ದಿಟ್ಟ ಪತ್ರಕರ್ತರಾಗಿದ್ದ ಅವರು ಪ್ರಾಮಾಣಿತೆಯನ್ನು ನಂಬಿದ್ದರು. ಅಗಲಿಕೆಯ ದುಃಖ ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ. ಕುಟುಂಬಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡುತ್ತೇನೆ ಎಂದು ತಿಳಿಸಿದ್ದಾರೆ.

    ತಮ್ಮ ಪ್ರಾಮಾಣಿಕತೆಯಿಂದಲೇ ಗುರುತಿಸಿಕೊಂಡಿದ್ದ ಹನುಮಂತು, ರಾಮನಗರದಲ್ಲಿ ಚಿರಪರಿಚಿತರು. ತಮ್ಮ ವರದಿಗಳಿಂದಲೇ ಮಾಧ್ಯಮ ಲೋಕದಲ್ಲಿ ಹನುಮಂತು ಗುರುತಿಸಿಕೊಂಡಿದ್ದರು. ಹನುಮಂತು ಕಳೆದುಕೊಂಡು ಪಬ್ಲಿಕ್ ಟಿವಿ ಕುಟುಂಬ ಬಡವಾಗಿದೆ. ಇನ್ನು ಹನುಮಂತು ನಿಧನಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಸಹ ಸಂತಾಪ ಸೂಚಿಸಿ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

  • ವರ್ಕ್ ಫ್ರಂ ಹೋಂ ಎಫೆಕ್ಟ್- ಮಗಳು ಲೈವ್ ಮಾಡ್ತಿದ್ದಾಗ ಬಟ್ಟೆ ಹಾಕ್ತಾ ಅಪ್ಪನ ಎಂಟ್ರಿ

    ವರ್ಕ್ ಫ್ರಂ ಹೋಂ ಎಫೆಕ್ಟ್- ಮಗಳು ಲೈವ್ ಮಾಡ್ತಿದ್ದಾಗ ಬಟ್ಟೆ ಹಾಕ್ತಾ ಅಪ್ಪನ ಎಂಟ್ರಿ

    ತಲ್ಲಹಸ್ಸಿ(ಫ್ಲೋರಿಡಾ): ಕೊರೊನಾ ವೈರಸ್ ಭೀತಿಯಿಂದಾಗಿ ದೇಶ ಮಾತ್ರವಲ್ಲದೆ ವಿದೇಶದಲ್ಲೂ ಲಾಕ್ ಡೌನ್ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಹಲವಾರು ಕಂಪನಿಗಳ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮುಖ್ಯವಾಗಿ ಸುದ್ದಿವಾಹಿನಿಗಳ ಸಿಬ್ಬಂದಿ ಕೂಡ ಮನೆಯಿಂದಲೇ ಜನರಿಗೆ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ. ಹೀಗೆ ಮಹಿಳಾ ವರದಿಗಾರರೊಬ್ಬರು ಮನೆಯಿಂದ್ಲೇ ವರದಿ ನೀಡುತ್ತಿದ್ದಾಗ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಫ್ಲೋರಿಡಾದ ಜೆಸ್ಸಿಕಾ ಲ್ಯಾಂಗ್ ಎಂಬಾಕೆ ಅಡುಗೆ ಮನೆಯಿಂದ ಲೈವ್ ಬಂದಿದ್ದರು. ಹೀಗೆ ಕೊರೊನಾ ವೈರಸ್ ಬಗ್ಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಆಕೆಯ ತಂದೆ ಟೀ-ಶರ್ಟ್ ಹಾಕಿಕೊಂಡು ಒಳಗಡೆಯಿಂದ ಎಂಟ್ರಿ ಕೊಟ್ಟಿದ್ದಾರೆ. ಕೂಡಲೇ ಎಚ್ಚೆತ್ತು ಒಳಗಡೆ ತೆರಳಿದ್ದಾರೆ. ಈ ವಿಚಾರ ಮಗಳಿಗೂ ಗೊತ್ತಾಗಿ ಅಯ್ಯೋ ಡ್ಯಾಡಿ ಎಂದು ಒಂದು ಕ್ಷಣ ದಂಗಾಗಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಾಕಷ್ಟು ಕಮೆಂಟ್ ಗಳು ಬರುತ್ತಿವೆ.

    ಕಳೆದ ಗುರುವಾರ ಮಗಳು ವರದಿ ಮಾಡುತ್ತಿದ್ದರೆ, ಆಕೆಯ ತಾಯಿಯೇ ವಿಡಿಯೋ ಮಾಡುತ್ತಿದ್ದ ಸಂದರ್ಭದಲ್ಲಿ ತಂದೆ ಕೊಟ್ಟಿದ್ದಾರೆ ಎಂಬುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಈ ವಿಡಿಯೋವನ್ನು ಸ್ವತಃ ಜೆಸ್ಸಿಕಾ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಜೆಸ್ಸಿಕಾ ಅವರು ಭಾನುವಾರ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, 7 ಲಕ್ಷಕ್ಕಿಂತಲೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, 12 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೆ ಸಾವಿರಾರು ಕಮೆಂಟ್ ಗಳು ಬರುತ್ತಿವೆ.

  • ಕುತ್ತಿಗೆವರೆಗೂ ನೀರಿನಲ್ಲಿ ಮುಳುಗಿ ವರದಿ- ಪಾಕ್ ಪತ್ರಕರ್ತ ಫುಲ್ ಟ್ರೋಲ್

    ಕುತ್ತಿಗೆವರೆಗೂ ನೀರಿನಲ್ಲಿ ಮುಳುಗಿ ವರದಿ- ಪಾಕ್ ಪತ್ರಕರ್ತ ಫುಲ್ ಟ್ರೋಲ್

    ಇಸ್ಲಾಮಾಬಾದ್: ಸಾಮಾನ್ಯವಾಗಿ ಯಾವುದಾರೂ ಹಬ್ಬ, ಸಮಾರಂಭ ಮುಂತಾದ ಪ್ರಮುಖ ಕಾರ್ಯಕ್ರಮಗಳಲ್ಲಿ ವರದಿಗಾರರು ವಿಡಿಯೋ ಮಾಡಲು, ಲೈವ್ ರಿಪೋರ್ಟ್ ಮಾಡಲು ಸಾಕಷ್ಟು ಕಸರತ್ತು ಮಾಡುತ್ತಾರೆ. ಆದರೆ ಪಾಕ್ ವರದಿಗಾರನೊಬ್ಬ ಪ್ರವಾಹದ ನೀರಿನ ನಡುವೆ ನಿಂತು ವರದಿ ಮಾಡಿ ಇದೀಗ ಸಾಕಷ್ಟು ಟ್ರೋಲ್‍ಗೆ ಒಳಗಾಗಿದ್ದಾನೆ.

    ಪ್ರವಾಹದ ನೀರಿನ ಮಧ್ಯೆ ನಿಂತು ವರದಿ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವರದಿಗಾರ ಟ್ರೋಲ್ ಆಗಿದ್ದಾನೆ. ವರದಿಗಾರನನ್ನು ಆಜಾದರ್ ಹುಸೇನ್ ಎಂದು ಗುರುತಿಸಲಾಗಿದೆ. ಈತ ಕುತ್ತಿಗೆವರಗೂ ನೀರು ಬರುವಷ್ಟು ಪ್ರವಾಹದ ನೀರಿನಲ್ಲಿ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲಿಂದನೇ ತನ್ನ ವಾಹಿನಿಗೆ ಲೈವ್ ರಿಪೋರ್ಟ್ ಕೊಟ್ಟಿದ್ದಾನೆ.

    ವರದಿಗಾರ ಪ್ರವಾಹದ ನೀರಿನ ಮಧ್ಯೆ ನಿಂತು ವರದಿ ಮಾಡಿರುವ ವಿಡಿಯೋವನ್ನು ಚಾನೆಲ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಆ ವಿಡಿಯೋಗೆ “ಪಾಕಿಸ್ತಾನಿ ವರದಿಗಾರ ಪ್ರವಾಹದ ನೀರಿನಲ್ಲಿ ನಿಂತು ವರದಿ ಮಾಡುವ ಮೂಲಕ ತನ್ನ ಕರ್ತವ್ಯವನ್ನು ನಿರ್ವಹಿಸಲು ತನ್ನ ಪ್ರಾಣವನ್ನೇ ಅಪಾಯದಲ್ಲಿರಿಸಿಕೊಂಡಿದ್ದಾನೆ” ಎಂದು ಬರೆದಿದೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುವ ಮೂಲಕ ವರದಿಗಾರನನ್ನು ಟ್ರೋಲ್ ಮಾಡಿದ್ದಾರೆ. ಕೆಲವರು ವಿಡಿಯೋವನ್ನು ನೋಡಿ ಕಾಮಿಡಿಯಾಗಿ ಟ್ವೀಟ್ ಮಾಡಿದ್ದರೆ, ಇನ್ನೂ ಕೆಲವರು ವರದಿಗಾರನ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಅನೇಕರು ವರದಿಗಾರನಿಗೆ ಪುಲ್ಟಿಜರ್ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.

  • ಸುದ್ದಿಗೋಷ್ಠಿಯಲ್ಲಿ ಕಂಗನಾ, ಪತ್ರಕರ್ತ ನಡುವೆ ಫೈಟ್: ವಿಡಿಯೋ ನೋಡಿ

    ಸುದ್ದಿಗೋಷ್ಠಿಯಲ್ಲಿ ಕಂಗನಾ, ಪತ್ರಕರ್ತ ನಡುವೆ ಫೈಟ್: ವಿಡಿಯೋ ನೋಡಿ

    ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತನ ಜೊತೆ ಜಗಳವಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇತ್ತೀಚೆಗೆ ನಟಿ ಕಂಗನಾ, ನಟ ರಾಜ್‍ಕುಮಾರ್ ರಾವ್, ನಿರ್ಮಾಪಕಿ ಏಕ್ತಾ ಕಪೂರ್ ಜೊತೆ ಮುಂಬರುವ ‘ಜಡ್ಜ್ ಮೆಂಟಲ್ ಹೇ ಕ್ಯಾ’ ಚಿತ್ರದ ಹಾಡಿನ ಪ್ರಮೋಶನ್ ಮಾಡಲು ಸುದ್ದಿಗೋಷ್ಠಿಯನ್ನು ಕರೆದಿದ್ದರು. ಈ ವೇಳೆ ಪತ್ರಕರ್ತರಾದ ಜಸ್ಟಿನ್ ರಾವ್ ತಮ್ಮ ಹೆಸರನ್ನು ಹೇಳಿ ಪ್ರಶ್ನೆ ಕೇಳಲು ಆರಂಭಿಸಿದರು. ಜಸ್ಟಿನ್ ಹೆಸರು ಕೇಳುತ್ತಿದ್ದಂತೆ ಈ ಹಿಂದೆ ನಡೆದ ಒಂದು ಸಂದರ್ಶನ ಪ್ರಸ್ತಾಪಿಸಿ ಕಂಗನಾ ಗರಂ ಆಗಿದ್ದಾರೆ.

    ‘ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಪತ್ರಕರ್ತ ಜಸ್ಟಿನ್ ಕಂಗನಾ ವಿರುದ್ಧವಾಗಿ ಸುದ್ದಿ ಪ್ರಕಟಿಸಿದ್ದರು. ಈ ವಿಷಯ ನೆನಪಾಗಿ ಕಂಗನಾ, ನಾನು ಈ ಸಿನಿಮಾ ಮಾಡಿ ಏನಾದರೂ ತಪ್ಪು ಮಾಡಿದ್ದೀನಾ? ನಾನು ರಾಷ್ಟ್ರೀಯತೆ ಸಿನಿಮಾ ಮಾಡಿದ್ದಕ್ಕೆ ನನ್ನ ನಡವಳಿಕೆ ಬಗ್ಗೆ ಮಾತನಾಡಿದ್ದೀರಾ ಎಂದು ಪತ್ರಕರ್ತ ಜಸ್ಟಿನ್ ಜೊತೆ ಜಗಳವಾಡಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಜಸ್ಟಿನ್ ಕೇಳಿದ ಪ್ರಶ್ನೆಗೆ ಉತ್ತರಿಸದೇ ಕಂಗನಾ ಅವರ ಮೇಲೆ ಸಾಕಷ್ಟು ಆರೋಪಗಳನ್ನು ಹೊರಿಸಿದ್ದಾರೆ. ಮಣಿಕರ್ಣಿಕಾ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ತನ್ನ ವಿರುದ್ಧ ಸುದ್ದಿ ಮಾಡಿ ಉದ್ದೇಶಪೂರ್ವಕವಾಗಿ ಸಿನಿಮಾ ಕೆಟ್ಟದಾಗಿದೆ ಎಂದು ವಿಮರ್ಷೆ ಮಾಡಿದ್ದೀರಿ. ಹಾಗೂ ಕೆಲಸಕ್ಕೆ ಬಾರದ ಟ್ವೀಟ್‍ಗಳನ್ನು ಮಾಡಿದ್ದೀರಿ ಎಂದು ನೇರವಾಗಿಯೇ ಹೇಳಿದ್ದಾರೆ.

    ನಟಿ ಕಂಗನಾ ಆರೋಪ ಮಾಡುತ್ತಿದ್ದಂತೆ ಪತ್ರಕರ್ತ ಜಸ್ಟಿನ್ ನೀವು ಈ ರೀತಿ ನನ್ನ ಮೇಲೆ ಆರೋಪ ಮಾಡಬಾರದು. ಏಕೆಂದರೆ ನಾವು ಏನೂ ಬರೆಯುತ್ತೇವೋ ಸತ್ಯವನ್ನೇ ಬರೆಯುತ್ತೇವೆ. ನಾನು ನಿಮ್ಮ ಬಗ್ಗೆ ಕೆಟ್ಟದಾಗಿ ಏನೂ ಸುದ್ದಿ ಪ್ರಕಟಿಸಿಲ್ಲ ಎಂದು ಜಸ್ಟಿನ್ ಸ್ಪಷ್ಟನೆ ಕೊಟ್ಟರೂ ಸಹ ಕಂಗನಾ ಸುಮ್ಮನಾಗಲಿಲ್ಲ. ಅಲ್ಲದೆ ಅಲ್ಲಿದ್ದ ಬೇರೆ ಪತ್ರಕರ್ತರು ಸಹ ಚಿತ್ರದ ವಿರುದ್ಧ ಹಾಗೂ ನಿಮ್ಮ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದರು.

    ಬಳಿಕ ಕಂಗನಾ, ಮಣಿಕರ್ಣಿಕಾ ಸಂದರ್ಶನದ ಸಮಯದಲ್ಲಿ ನೀವು 3 ಗಂಟೆ ನನ್ನ ವ್ಯಾನ್‍ನಲ್ಲಿ ಇದ್ದು ನನ್ನ ಜೊತೆ ಊಟ ಮಾಡಿದ್ದೀರಿ. ಈ ವೇಳೆ ನಾನು ಸಂದರ್ಶನ ನೀಡಿದ್ದೆ. ಆದರು ನೀವು ಉದ್ದೇಶಪೂರ್ವಕವಾಗಿ ನನ್ನ ಬಗ್ಗೆ ಕೆಟ್ಟದ್ದಾಗಿ ಬರೆದಿದ್ದೀರಾ. ನೀವು ನನಗೆ ವೈಯಕ್ತಿಕವಾಗಿ ಮೆಸೇಜ್ ಕೂಡ ಮಾಡಲು ಶುರು ಮಾಡಿದ್ದೀರಿ ಎಂದು ಪತ್ರಕರ್ತನ ವಿರುದ್ಧ ಆರೋಪಿಸಿದ್ದರು. ಈ ವೇಳೆ ಪತ್ರಕರ್ತ ಜಸ್ಟಿನ್ ನಾನು ನಿಮ್ಮ ವಿರುದ್ಧ ಕೆಟ್ಟದಾಗಿ ಸುದ್ದಿ ಮಾಡಿಲ್ಲ. ಅಲ್ಲದೆ ನಾನು ನಿಮ್ಮ ವ್ಯಾನಿನಲ್ಲಿ ಇದ್ದು, ನಿಮ್ಮ ಜೊತೆ ನಾನು ಊಟ ಕೂಡ ಮಾಡಿಲ್ಲ ಎಂದರೂ ಸಹ ಕಂಗನಾ ಅವರ ಮಾತನ್ನು ಕೇಳಲು ಒಪ್ಪಲಿಲ್ಲ.

    ಪತ್ರಕರ್ತ ಜಸ್ಟಿನ್ ಮಾತನಾಡಿ, ನಾನು ನಿಮ್ಮ ಜೊತೆ ಮೆಸೇಜ್ ಮಾಡಿದ್ದರೆ, ಆ ಟ್ವೀಟ್‍ಗಳು ಹಾಗೂ ಮೆಸೇಜ್‍ಗಳ ಸ್ಕ್ರೀನ್‍ಶಾಟ್ ತೋರಿಸಿ, ಆಗ ನಾನು ನಿಮ್ಮ ಆರೋಪಗಳನ್ನು ಒಪ್ಪುತ್ತೇನೆ ಎಂದರು. ಆಗ ಕಂಗನಾ ನಾನು ಸ್ಕ್ರೀನ್‍ಶಾಟ್‍ಗಳನ್ನು ತೋರಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದರು. ಇದಾದ ಬಳಿಕ ಕಂಗನಾ ಪತ್ರಕರ್ತ ಜಸ್ಟಿನ್‍ಗೆ ಕೆಟ್ಟ ಅಲೋಚನೆಯ ವ್ಯಕ್ತಿ ಎಂದು ಹೇಳಿ ಜಗಳ ಮಾಡಿದ್ದಾರೆ.

    ಕಂಗನಾ ಹಾಗೂ ಪತ್ರಕರ್ತನ ಜಗಳ ಜೋರಾಗುತ್ತಿದ್ದಂತೆ ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್, ನಟ ರಾಜ್‍ಕುಮಾರ್ ರಾವ್ ಹಾಗೂ ವೇದಿಕೆಯಲ್ಲಿ ಇದ್ದ ಎಲ್ಲರೂ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಆದರೆ ಕಂಗನಾ ಹಾಗೂ ಪತ್ರಕರ್ತ ಶಾಂತರಾಗಲು ಒಪ್ಪಲಿಲ್ಲ. ಇಬ್ಬರ ಜಗಳ ಜೋರಾಗಿ ನಡೆದಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

     

    View this post on Instagram

     

    A post shared by Viral Bhayani (@viralbhayani) on

  • ಪಬ್ಲಿಕ್ ಟಿವಿಯ ಸಾಮಾಜಿಕ ಕಳಕಳಿ ವರದಿಗೆ ಪ್ರಶಸ್ತಿ

    ಪಬ್ಲಿಕ್ ಟಿವಿಯ ಸಾಮಾಜಿಕ ಕಳಕಳಿ ವರದಿಗೆ ಪ್ರಶಸ್ತಿ

    ಬೆಂಗಳೂರು: ಪಬ್ಲಿಕ್ ಟಿವಿಯಲ್ಲಿ ಮೈಸೂರು ವಿಭಾಗದಿಂದ ಪ್ರಸಾರವಾದ ಸಾಮಾಜಿಕ ಕಳಕಳಿಯುಳ್ಳ ವರದಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಉತ್ತಮ ವರದಿಗಾಗಿ ನೀಡುವ ವಾರ್ಷಿಕ ಪ್ರಶಸ್ತಿ ಲಭ್ಯವಾಗಿದೆ.

    ‘ಮನೆಯವರನ್ನು ಸಾಲದ ಸುಳಿಗೆ ಸಿಲುಕಿಸುವ ಸಾವು’ ಎಂಬ ಶೀರ್ಷಿಕೆ ಅಡಿ ಇದೇ ವರ್ಷದ ಜನವರಿ 7 ರಂದು ಪಬ್ಲಿಕ್ ಟಿವಿಯಲ್ಲಿ ವಿಶೇಷ ವರದಿ ಪ್ರಸಾರವಾಗಿತ್ತು. ಪಬ್ಲಿಕ್ ಟಿವಿ ಮೈಸೂರು ವರದಿಗಾರ ಕೆ.ಪಿ.ನಾಗರಾಜ್ ಮತ್ತು ಕ್ಯಾಮರಾಮೆನ್ ಕಾರ್ತಿಕ್ ಈ ವರದಿ ಮಾಡಿದ್ದರು. ಇದನ್ನೂ ಓದಿ:  ಸತ್ತರೆ ಇಲ್ಲಿ ಸಾಲ ಕಟ್ಟಿಟ್ಟ ಬುತ್ತಿ – ಬಡವರು ಸತ್ತರೂ ಕಷ್ಟ

     

    ಮೈಸೂರು ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ಇರುವ ಕ್ರೈಸ್ತ ಸಮುದಾಯದ ಪ್ರಾಟೆಸ್ಟೆಂಟ್ ಗುಂಪಿಗೆ ಸ್ಮಶಾನದ ವ್ಯವಸ್ಥೆ ಇಲ್ಲ. ಈ ಸಮುದಾಯದ ಶವ ಹೂಳಲು ಇದೇ ಧರ್ಮದ ಇನ್ನೊಂದು ಪಂಗಡದ ಸ್ಮಶಾನದಲ್ಲಿ ಅವಕಾಶ ಇಲ್ಲ ಮತ್ತು ಹಿಂದೂ ಧರ್ಮದ ಸ್ಮಶಾನದಲ್ಲೂ ಅವರಿಗೆ ಪ್ರವೇಶವಿಲ್ಲ. ಹೀಗಾಗಿ ಈ ಸಮುದಾಯದ ಜನರು ಶವವನ್ನು ಮೈಸೂರಿನಲ್ಲಿನ ತಮ್ಮ ಸಮುದಾಯದ ಸ್ಮಶಾನದಲ್ಲಿ ಹೂಳಬೇಕಾಗಿದೆ.

    ಮೈಸೂರಿಗೆ ಶವ ಸಾಗಿಸಲು ಹಾಗೂ ಅಂತ್ಯಸಂಸ್ಕಾರಕ್ಕೆ ಸಂಬಂಧಿಕರನ್ನು ಇಲ್ಲಿಗೆ ಕರೆ ತರಲು ವಾಹನಗಳ ವ್ಯವಸ್ಥೆ ಮಾಡಬೇಕಿತ್ತು. ಅಷ್ಟೇ ಅಲ್ಲದೆ ಸ್ಮಶಾನದ ಜಾಗಕ್ಕೂ ಹಣ ಕಟ್ಟಬೇಕು. ಇದಕ್ಕೆಲ್ಲ 50 ರಿಂದ 70 ಸಾವಿರ ರೂ. ವೆಚ್ಚವಾಗುತ್ತದೆ. ಹೇಳಿ ಕೇಳಿ ಕಡು ಬಡತನದಲ್ಲಿರುವ ಈ ಸಮುದಾಯದ ಕುಟುಂಬಗಳು ಹಣಕ್ಕಾಗಿ ಬಡ್ಡಿಗಾಗಿ ಸಾಲ ಪಡೆಯುತ್ತಿದ್ದರು. ಅಲ್ಲಿಗೆ ಈ ಸಾಲದ ಹಣ ತೀರಿಸುವಷ್ಟತ್ತಿಗೆ ಅವರ ಸ್ಥಿತಿ ದೇವರಿಗೆ ಮಾತ್ರ ಪ್ರೀತಿ.

    ಈ ಸಮಸ್ಯೆದ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪಬ್ಲಿಕ್ ಟಿವಿ ಸಾಮಾಜಿಕ ಕಳಕಳಿಯಿಂದ ಈ ವರದಿ ಪ್ರಸಾರ ಮಾಡಿತ್ತು. ಈ ವರದಿ ಪರಿಣಾಮ ಜಿಲ್ಲಾಡಳಿತ ಈ ಸಮುದಾಯಕ್ಕೆ ಸ್ಮಶಾನದ ಜಾಗ ನೀಡಲು ಜಾಗದ ಸರ್ವೇ ಕಾರ್ಯ ಕೂಡ ನಡೆಸಿದೆ.

    https://www.youtube.com/watch?v=kQGSTCALyto&feature=youtu.be

  • ಕಲಬುರಗಿಯಲ್ಲಿ ನಿಂಬೆಹಣ್ಣು ಕೊಟ್ಟ ಸಿದ್ದರಾಮಯ್ಯ

    ಕಲಬುರಗಿಯಲ್ಲಿ ನಿಂಬೆಹಣ್ಣು ಕೊಟ್ಟ ಸಿದ್ದರಾಮಯ್ಯ

    ಕಲಬುರಗಿ: ಕೈಯಲ್ಲಿ ನಿಂಬೆ ಹಣ್ಣು ಹಿಡಿದುಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಏನ್ ಸರ್ ನಿಂಬೆಹಣ್ಣು ಅಂತ ಕೇಳಿದ್ದಕ್ಕೆ, ಪತ್ರಕರ್ತರೊಬ್ಬರಿಗೆ ಕೈಯಲ್ಲಿದ್ದ ನಿಂಬೆಹಣ್ಣನ್ನು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದಾಗ ಸಿದ್ದರಾಮಯ್ಯ ಅವರು ಕೈಯಲ್ಲಿ ನಿಂಬೆಹಣ್ಣು ಹಿಡಿದುಕೊಂಡಿದ್ದರು. ಇದನ್ನು ನೋಡಿ ಪರ್ತಕರ್ತರು, ಏನ್ ಸರ್ ಕೈಯಲ್ಲಿ ನಿಂಬೆಹಣ್ಣು ಎಂದು ಪ್ರಶ್ನಿಸಿದಾಗ, ವಿಮಾನ ನಿಲ್ದಾಣದಲ್ಲಿ ಯಾರೋ ಕೊಟ್ರು. ಹಿಡ್ಕೊಂಡಿದ್ದೆ ಅಷ್ಟೇ. ಇದ್ರಲ್ಲಿ ನಂಗೆ ನಂಬಿಕೆಯಿಲ್ಲ. ನಿಂಗೆ ಒಳ್ಳೆಯದಾದರೆ ಆಗ್ಲಿ ಅಂತ ಹೇಳಿ ಪಕ್ಕದಲ್ಲಿದ್ದ ಪತ್ರಕರ್ತರ ಜೇಬಿಗೆ ನಿಂಬೆಹಣ್ಣು ಹಾಕಿದ್ದಾರೆ.

    ಜಿಲ್ಲೆಯಲ್ಲಿ ಕುರುಬ ಮತಗಳನ್ನ ಸೆಳೆಯಲು ಕೈ ಪಡೆ ರಣತಂತ್ರ ಮಾಡಿದ್ದು, ಕಲಬುರಗಿ ಕ್ಷೇತ್ರದ ಅಫಜಲಪುರ ಜೇವರ್ಗಿಯಲ್ಲಿ ಸಿದ್ದರಾಮಯ್ಯ ಇಂದು ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ.