Tag: repair work

  • ಅರ್ಧ ಬೆಂಗಳೂರಿಗೆ ಇಂದು ನೀರಿನ ಪೂರೈಕೆಯಲ್ಲಿ ವ್ಯತ್ಯಯ

    ಅರ್ಧ ಬೆಂಗಳೂರಿಗೆ ಇಂದು ನೀರಿನ ಪೂರೈಕೆಯಲ್ಲಿ ವ್ಯತ್ಯಯ

    ಬೆಂಗಳೂರು: ನಗರದ ಚಂದ್ರಾ ಬಡಾವಣೆಯ ಜಲಗಾರಕ, ನೀರು ಪೂರೈಕೆಯ (Water Supply) ಮಾರ್ಗದ ಪೈಪ್ ವಾಲ್ಟ್ ದುರಸ್ತಿ ಕಾಮಗಾರಿ (Repair Work) ಹಿನ್ನೆಲೆ ಸಿಲಿಕಾನ್ ಸಿಟಿಯ (Silicon City) ಹಲವೆಡೆ ಇಂದು (ಬುಧವಾರ) ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

    ಕಾವೇರಿ 4ನೇ ಹಂತದ 1ನೇ ಫೇಸ್‌ನ ಮೂರು ಪಂಪ್‌ಗಳನ್ನು ಸ್ಥಗಿತಗೊಳಿಸಿ ದುರಸ್ತಿ ಕೆಲಸ ಮಾಡುವುದರಿಂದ ಬೆಂಗಳೂರು (Bengaluru) ನಗರದ ಬಹುತೇಕ ಕಡೆ ಇಂದು ನೀರು ಇರುವುದಿಲ್ಲ. ಇದನ್ನೂ ಓದಿ: ಇನ್ಮುಂದೆ ಚುನಾವಣಾ ಸಿಬ್ಬಂದಿಗೆ ಬೂತಲ್ಲೇ ಅಂಚೆ ಮತದಾನ ಕಡ್ಡಾಯ

    ಮಹಾಲಕ್ಷ್ಮಿ ಲೇಔಟ್ ಸುತ್ತಮುತ್ತ, ರಾಜಾಜಿನಗರ ಸುತ್ತ, ಜೆ.ಸಿ ನಗರ ಸುತ್ತಮುತ್ತ, ಡಾ.ರಾಜ್‌ಕುಮಾರ್ ರೋಡ್, ಯಶವಂತಪುರ, ಎಪಿಎಂಸಿ, ಆರ್‌ಎಂಸಿ ಯಾರ್ಡ್, ಗೊರಗುಂಟೆಪಾಳ್ಯ, ನಂಜಪ್ಪ ಲೇಔಟ್, ದಾಸರಹಳ್ಳಿ ಸೇರಿದಂತೆ ಅರ್ಧ ಬೆಂಗಳೂರಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಇದನ್ನೂ ಓದಿ: ತಮಿಳುನಾಡಿಗೆ ನೀರು – ಇಂದು ಸರ್ವಪಕ್ಷ ಸಭೆ ಕರೆದ ಸರ್ಕಾರ

    ದುರಸ್ತಿ ಕಾಮಗಾರಿಯಿಂದ ನೀರು ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಜಲಮಂಡಳಿಯಿಂದ (Water Board) ಮನವಿ ಮಾಡಿದೆ. ಇದನ್ನೂ ಓದಿ: ದೊಡ್ಡಗೌಡರ ಕಾಲಿಗೆ ಮಂಡಿಯೂರಿ ನಮಸ್ಕರಿಸಿದ ಸಂಸದ ಪ್ರತಾಪ್‌ಸಿಂಹ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 12 ಮೇಲ್ಸೇತುವೆಗಳಿಗೆ ಕಾಯಕಲ್ಪ ನೀಡಲಿರುವ ಬಿಬಿಎಂಪಿ

    12 ಮೇಲ್ಸೇತುವೆಗಳಿಗೆ ಕಾಯಕಲ್ಪ ನೀಡಲಿರುವ ಬಿಬಿಎಂಪಿ

    ಬೆಂಗಳೂರು: ಸಿರ್ಸಿ ಫ್ಲೈಓವರ್ ಡಾಂಬರೀಕರಣ ಮಾದರಿಯಲ್ಲಿ ನಗರದ 12 ಮೇಲ್ಸೇತುವೆಗಳನ್ನ ಹಂತ ಹಂತವಾಗಿ ದುರಸ್ತಿ ಮಾಡಲು ಬಿಬಿಎಂಪಿ ಮುಂದಾಗಿದೆ.

    ಟಿಕ್ಕಿಟಾರ್ ಶೀಟ್ ಬಳಸಿ ಡಾಂಬರೀಕರಣಕ್ಕೆ ಬಿಬಿಎಂಪಿ ಯೋಜನೆಯನ್ನ ಸಿದ್ಧಪಡಿಸಿಕೊಂಡಿದೆ. ನಗರದ ಐಟಿಸಿ, ಆನಂದ್ ರಾವ್ ವೃತ್ತ, ಡೈರಿ ಸರ್ಕಲ್ ಫ್ಲೈಓವರ್, ರಿಚ್ಮಂಡ್ ಸರ್ಕಲ್ ಫ್ಲೈಓವರ್ ಸೇರಿದಂತೆ ಒಟ್ಟು 12 ಮೆಲ್ಸೇತುವೆಗಳಿಗೆ ಕಾಯಕಲ್ಪ ನೀಡಲು ಪಾಲಿಕೆ ಮುಂದಾಗಿದೆ.

    ಮೆಲ್ಸೇತುವೆಗಳ ನಿರ್ವಹಣೆ ಸರಿಯಾಗಿ ಆಗದೆ ಹಲವು ದೋಷಗಳು ಕಂಡು ಬಂದಿವೆ ಎಂದು ಸಂಚಾರಿ ತಜ್ಞರು ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ. ಆದ್ದರಿಂದ ನಗರದಲ್ಲಿ ಎಲ್ಲಾ ಮೆಲ್ಸೇತುವೆಗಳ ನಿರ್ವಾಹಣೆ ಮತ್ತು ದುರಸ್ತಿ ಕಾರ್ಯಕ್ಕೆ ಬಿಬಿಎಂಪಿ ಸಿದ್ಧವಾಗಿದೆ. ನಗರದ ಹಲವು ಮೇಲ್ಸೇತುವೆ ಮಾರ್ಗದಲ್ಲಿ ಸಾಕಷ್ಟು ಗುಂಡಿಗಳು ಬಿದ್ದಿವೆ. ಈ ಹಿಂದೆ ಸುಮ್ಮನಹಳ್ಳಿ ಫ್ಲೈಓವರ್, ಹೆಬ್ಬಾಳ ಫ್ಲೈಓವರ್‍ನಲ್ಲಿ ಗುಂಡಿ ಬಿದ್ದಿದ್ದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿತ್ತು. ಇದರಿಂದ ವಾಹನ ಸವಾರರು ಪಾಲಿಕೆಯ ಮೇಲೆ ಕಿಡಿಕಾರಿದ್ದರು. ಪಾಲಿಕೆಯ ಮೇಲೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ಮೇಲ್ಸೇತುವೆಗಳ ಮರು ಡಾಂಬರೀಕರಣ ಮಾಡಲು ನಿರ್ಧರಿಸಿದೆ.

    ದುರಸ್ಥಿಯಾಗುವ 12 ಮೇಲ್ಸೇತುವೆಗಳ ಪಟ್ಟಿ:
    01) ಐಟಿಸಿ ಮೇಲ್ಸೇತುವೆ
    02) ಬೆಳ್ಳಂದೂರು ಮೇಲ್ಸೇತುವೆ
    03) ಆರ್ ಎಂಪಿ ಮೇಲ್ಸೇತುವೆ
    04) ಡೈರಿ ಸರ್ಕಲ್ ಮೇಲ್ಸೇತುವೆ
    05) ಲಿಂಗರಾಜಪುರ ಮೇಲ್ಸೇತುವೆ
    06) ನಾಗನಪಾಳ್ಯ ಮೇಲ್ಸೇತುವೆ


    07) ರಾಮಸ್ವಾಮಿ ಮೇಲ್ಸೇತುವೆ
    08) ರಿಚ್ಮಂಡ್ ಸರ್ಕಲ್ ಮೇಲ್ಸೇತುವೆ
    09) ನಾಯಂಡನಹಳ್ಳಿ ಮೇಲ್ಸೇತುವೆ
    10) ಸಿಲ್ಕ್ ಬೋರ್ಡ್ ಮೇಲ್ಸೇತುವೆ
    11) ಯಶವಂತಪುರ- ಮತ್ತಿಕೆರೆ ಮೇಲ್ಸೇತುವೆ
    12) ಎಚ್ ಎಸ್ ಆರ್ ಲೇಔಟ್
    13) ಆನಂದ್ ರಾವ್ ಸರ್ಕಲ್

  • ಮಳೆರಾಯನ ಆರ್ಭಟಕ್ಕೆ 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ- ಜೆಸ್ಕಾಂ ನಿರ್ಲಕ್ಷ್ಯಕ್ಕೆ ಜನ ಗರಂ

    ಮಳೆರಾಯನ ಆರ್ಭಟಕ್ಕೆ 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ- ಜೆಸ್ಕಾಂ ನಿರ್ಲಕ್ಷ್ಯಕ್ಕೆ ಜನ ಗರಂ

    ಬಳ್ಳಾರಿ: ಕಳೆದ ಎರಡು ದಿನಗಳ ಹಿಂದೆ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಬಳ್ಳಾರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.

    ತಾಲೂಕಿನ ತಿರುಮಲನಗರ ಕ್ಯಾಂಪ್, ಧನಲಕ್ಷ್ಮಿ ಕ್ಯಾಂಪ್, ವಿಘ್ನೇಶ್ವರ ಕ್ಯಾಂಪ್, ಕಮ್ಮರಚೇಡು, ಶಂಕರಬಂಡೆ, ರೂಪನಗುಡಿ ಸೇರಿದಂತೆ ಹಲವೆಡೆ ಸರಿಸುಮಾರು 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹೀಗಾಗಿ ತಾಲೂಕಿನ ಈ ಎಲ್ಲ ಗ್ರಾಮಗಳಲ್ಲಿ ವಿದ್ಯುತ್ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

    ವಿದ್ಯುತ್ ಸಂಪರ್ಕವಿಲ್ಲದೆ, ಜನರು ಪರದಾಡುತ್ತಿದ್ದಾರೆ. ಆದರೆ ಜೆಸ್ಕಾಂ ಅಧಿಕಾರಿಗಳು ಮಾತ್ರ ಈವೆರೆಗೂ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯವನ್ನ ಪ್ರಾರಂಭಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.