Tag: renukaswamy murder

  • ಕೊಲೆ ಆರೋಪಿ ದರ್ಶನ್‌ಗೆ ಮಾಸ್ಟರ್ ಸ್ಟ್ರೋಕ್‌; ಫಂಗಸ್ ನಾಟಕಕ್ಕೂ ಕಾನೂನು ಪ್ರಾಧಿಕಾರ ವರದಿಯಲ್ಲಿ ಉತ್ತರ

    ಕೊಲೆ ಆರೋಪಿ ದರ್ಶನ್‌ಗೆ ಮಾಸ್ಟರ್ ಸ್ಟ್ರೋಕ್‌; ಫಂಗಸ್ ನಾಟಕಕ್ಕೂ ಕಾನೂನು ಪ್ರಾಧಿಕಾರ ವರದಿಯಲ್ಲಿ ಉತ್ತರ

    – ದರ್ಶನ್‌ಗೆ ಕಾಲಿನಲ್ಲಿ ಫಂಗಸ್ ಆಗಿಲ್ಲ, ಚರ್ಮ ಒಡೆದಿದೆ ಅಷ್ಟೇ
    – ಎಲ್ಲಾ ಖೈದಿಗಳಿಗೆ ಟಿವಿ ಕೊಡೋಕಾಗಲ್ಲ; ಸೊಳ್ಳೆಬತ್ತಿ, ಬಾಚಣಿಗೆಯೂ ಕೊಡುವಂತಿಲ್ಲ

    ಬೆಂಗಳೂರು: ಹಾಸಿಗೆ, ದಿಂಬು ಸೇರಿದಂತೆ ಜೈಲಿನಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಕೇಳಿಕೊಂಡಿದ್ದ ಕೊಲೆ ಆರೋಪಿ, ನಟ ದರ್ಶನ್‌ಗೆ ಕಾನೂನು ಸೇವಾ ಪ್ರಾಧಿಕಾರದ (Legal Services Authority) ವರದಿ ಮಾಸ್ಟರ್‌ ಸ್ಟ್ರೋಕ್‌ ಕೊಟ್ಟಿದೆ. ದರ್ಶನ್‌ಗೆ ಬಿಸಿಲು ಹೊರತುಪಡಿಸಿದ್ರೆ ಜೈಲು ಮ್ಯಾನ್ಯುವಲ್‌ ಪ್ರಕಾರ, ಉಳಿದೆಲ್ಲ ಸೌಲಭ್ಯಗಳು ಸಿಗುತ್ತಿವೆ ಎಂದು ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ದರ್ಶನ್‌ (Darshan) ಫಂಗಸ್‌ ನಾಟಕಕ್ಕೂ ವರದಿಯಲ್ಲಿ ಉತ್ತರ ಕೊಡಲಾಗಿದೆ.

    ಪ್ರಾಧಿಕಾರದ ವರದಿಯಲ್ಲಿ ಏನಿದೆ…? ದರ್ಶನ್‌ಗೆ ಏನು ಸೌಲಭ್ಯ ಸಿಕ್ಕಿದೆ…?
    ದರ್ಶನ್ ಇರುವ ಬ್ಯಾರಕ್‌ನಲ್ಲಿ 1 ಇಂಡಿಯನ್‌ ಟಾಯ್ಲೆಟ್‌, 2 ವೆಸ್ಟ್ರನ್ ಟಾಯ್ಲೆಟ್ ಇದೆ. ದರ್ಶನ್ 2 ಬಾತ್ ರೂಂಗಳು (ಸ್ನಾನಗೃಹ) ಇವೆ. ದರ್ಶನ್ ಬ್ಯಾರಕ್‌ನಲ್ಲಿ ಸಿಬ್ಬಂದಿಯ ಬಾಡಿ ಓರ್ನ್ ಕ್ಯಾಮೆರಾ ಕೂಡ ಪರಿಶೀಲಿಸಲಾಗಿದೆ. ದರ್ಶನ್ ಇರುವ ಬ್ಯಾರಕ್‌ನಲ್ಲಿ ಅಗತ್ಯ ಬೆಳಕಿನ ವ್ಯವಸ್ಥೆ ಇದೆ ಎಂದು ಹೇಳಿದೆ.

    ಇನ್ನೂ ಇಡೀ ರಾತ್ರಿ ಲೈಟ್ ಇರೋದ್ರಿಂದ ನಿದ್ರೆಗೆ ಸಮಸ್ಯೆಯಾಗ್ತಿದೆ. ಸಂಜೆ 6 ಗಂಟೆಗೆ ಲೈಟ್ ಹಾಕೋದ್ರಿಂದ ನಿದ್ರೆ ಮಾಡೋದಕ್ಕೆ ಆಗ್ತಿಲ್ಲ ಅನ್ನೋದು ದರ್ಶನ್‌ ಆರೋಪ. ಆದ್ರೆ ಕೈದಿಗಳ (Prisoners) ಭದ್ರತೆಯ ಕಾರಣಕ್ಕೆ ಇಡೀ ರಾತ್ರಿ ಲೈಟ್ ಹಾಕಲಾಗುತ್ತೆ.

    ದರ್ಶನ್‌ ದಿಂಬು ಹಾಸಿಗೆ ಕೇಳಿದ್ದಾರೆ. ಶಿಕ್ಷಿತ ಅಪರಾಧಿಗಳಿಗೆ (ಸಜಾ ಖೈದಿ) ಮಾತ್ರ ಹಾಸಿಗೆ, ದಿಂಬು ಹೊದಿಕೆ ನೀಡಲು ಅವಕಾಶ ಇದೆ. ವಿಚಾರಾಣಾಧೀನ ಕೈದಿಗೆ ಹಾಸಿಗೆ, ದಿಂಬು ನೀಡಲು ಜೈಲ್‌ ಮ್ಯಾನುವಲ್‌ನಲ್ಲಿ ಅವಕಾಶ ಇಲ್ಲ. ಅಲ್ಲದೇ ದರ್ಶನ್ ಸೆಲೆಬ್ರಿಟಿ ಆಗಿರೋದ್ರಿಂದ ಕಾರಿಡಾರ್‌ನಲ್ಲಿ ವಾಕಿಂಗ್ ಮಾಡುವಾಗ ಇತರೆ ಕೈದಿಗಳು ಕಿರುಚುತ್ತಾರೆ. ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ಗಳಿಂದ ದರ್ಶನ್ ಫೋಟೋ ತೆಗೆಯುವ ಸಾಧ್ಯತೆ ಇದೆ. ಆದ್ದರಿಂದ ಜೈಲು ಮ್ಯಾನುವಲ್ ಪ್ರಕಾರ 1 ಗಂಟೆಗೆ ವಾಕಿಂಗ್‌ಗೆ, ಆಟಕ್ಕೆ ಅವಕಾಶ ಕೊಡಲಾಗಿದೆ. ಎಲ್ಲ ಸೌಲಭ್ಯಗಳನ್ನ ನೀಡಲಾಗಿದೆ. ಅಗತ್ಯಬಿದ್ದರೆ ಜೈಲಿನಲ್ಲಿ ಶಿಸ್ತುಪಾಲನೆ, ನಿರ್ವಹಣೆಗಾಗಿ ವಾಕಿಂಗ್/ಆಟಕ್ಕೂ ನಿರ್ಬಂಧ ಏರಬಹುದು ಎಂದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಟಿವಿ, ಕನ್ನಡಿ, ಬಾಚಣಿಗೆ ಕೊಡೋಕಾಗಲ್ಲ
    ದರ್ಶನ್ ಟಿವಿ ಕೇಳಿದ್ದಾನೆ, ಆದ್ರೆ ಎಲ್ಲಾ ಖೈದಿಗಳಿಗೂ ಟಿವಿ ನೀಡಲು ಅವಕಾಶ ಇಲ್ಲ. ಎಲ್ಲಾ ಬ್ಯಾರಕ್ ಅಲ್ಲಿ ಕೂಡ ಟಿವಿ ಸೌಲಭ್ಯ ಮಾಡಲು ಸಾಧ್ಯವಿಲ್ಲ. ಫೋನ್‌ನಲ್ಲಿ ಮಾತಾಡುವಾಗ ಸ್ಪೀಕರ್ ಆನ್ ಮಾಡ್ತಾರೆ ಎಂಬ ಆರೋಪವನ್ನು ದರ್ಶನ್‌ ಮಾಡಿದ್ದಾರೆ. ಆರೋಪಿಗಳ ಸುರಕ್ಷತೆ ದೃಷ್ಟಿಯಿಂದ ಸ್ಪೀಕರ್ ಆನ್ ಮಾಡುವುದು ನಿಯಮ. ಏಕೆಂದ್ರೆ ಖೈದಿಗಳಿಗೆ ಹೇಳಿ ಫೋನ್‌ಕಾಲ್‌ ರೆಕಾರ್ಡ್ ಮಾಡುವ ಅವಕಾಶ ಇದೆ.

    ಫಂಗಸ್‌ ನಾಟಕಕ್ಕೂ ಉತ್ತರ
    ಇನ್ನೂ ದರ್ಶನ್‌ ಕಾಲಿನಲ್ಲಿ ಫಂಗಸ್‌ ಬಂದಿದೆ ಅಂತ ದರ್ಶನ್‌ ಆರೋಪ ಮಾಡಿದ್ದಾರೆ. ಆದ್ರೆ ಅದು ಫಂಗಸ್ ಅಲ್ಲ, ಚರ್ಮ ಒಡೆದಿರೋದು (ಕಾಲಿನಲ್ಲಿ ಆಗಿರೋ ಬಿರುಕು) ಅಷ್ಟೇ. ಚರ್ಮರೋಗ ತಜ್ಞೆ ಡಾ.ಜ್ಯೋತಿ ಬಾಯ್ ಅವರಿಂದ ದರ್ಶನ್‌ಗೆ ಚಿಕಿತ್ಸೆ ಕೊಡಿಸಲಾಗಿದೆ. ಜೊತೆಗೆ ಜೈಲಿನ ವೈದ್ಯರಿಂದ ಫಿಸಿಯೋ ತೆರಪಿ ಕೂಡ ಮಾಡಿಸಲಾಗಿದೆ. ಸೊಳ್ಳೆಬತ್ತಿ, ಕನ್ನಡಿ ಮತ್ತು ಬಾಚಣಿಗೆ ನೀಡಿಲ್ಲ ಎಂಬುದು ದರ್ಶನ್‌ ಆರೋಪ, ಶಿಕ್ಷಿತ ಅಪರಾಧಿಗೆ ಮಾತ್ರ ಇದೆಲ್ಲ ನೀಡಲು ಅವಕಾಶ ಇದೆ. ವಿಚಾರಾಣಾಧೀನ ಖೈದಿಗಳಿಗೆ ನೀಡಲು ಅವಕಾಶ ಇಲ್ಲ. ಅಲ್ಲದೇ ಕನ್ನಡಿ ಬಾಚಣಿಗೆ ನೀಡಿದ್ರೆ ಅನಾಹುತ ಆಗುವ ಸಾಧ್ಯತೆ ಇದೆ. ಹಾಗಾಗಿ ಹೆಚ್ಚುವರಿ ಸೌಲಭ್ಯ ನೀಡೋಕಾಗೋದಿಲ್ಲ ಎಂದು ಕಾನೂನು ಸೇವಾ ಪ್ರಾಧಿಕಾರ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

  • ಸುಪ್ರೀಂನಲ್ಲಿ ದರ್ಶನ್‌ ಪರ ಕಪಿಲ್‌ ಸಿಬಲ್‌ ವಾದ?

    ಸುಪ್ರೀಂನಲ್ಲಿ ದರ್ಶನ್‌ ಪರ ಕಪಿಲ್‌ ಸಿಬಲ್‌ ವಾದ?

    ಬೆಂಗಳೂರು: ಸುಪ್ರೀಂ ಕೋರ್ಟ್‌ನಲ್ಲಿ (Supreme Court) ದರ್ಶನ್‌ ಪರ ಹಿರಿಯ ವಕೀಲ ಕಪಿಲ್‌ ಸಿಬಲ್‌ (Kapil Sibal) ವಾದ ಮಂಡನೆ ಮಾಡುವ ಸಾಧ್ಯತೆಯಿದೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ದರ್ಶನ್‌ ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಮಾರ್ಚ್‌ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ದರ್ಶನ್‌ ಅವರ ಕಾನೂನು ತಂಡ ಕಪಿಲ್‌ ಸಿಬಲ್‌ ಅವರನ್ನು ಸಂಪರ್ಕಿಸಿದೆ.

    ಈಗಾಗಲೇ ಕಪಿಲ್ ಸಿಬಲ್‌ರನ್ನು ಭೇಟಿಯಾಗಿ ಹೈಕೋರ್ಟ್‌ನ ವಾದ ಪ್ರತಿವಾದ, ಕೇಸ್ ಹಿಸ್ಟರಿಯನ್ನು ನೀಡಲಾಗಿದೆ. ಕೋರ್ಟ್‌ ಶುಲ್ಕದ ಬಗ್ಗೆಯೂ ಚರ್ಚೆ ನಡೆದಿದೆ. ದರ್ಶನ್‌ ಪರ ವಾದಕ್ಕೆ ಒಪ್ಪಿಗೆ ನೀಡಿದರೆ ಮಾ.18 ರಂದು ಕಪಿಲ್‌ ಸಿಬಲ್‌ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆಯಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ದರ್ಶನ್‌ ಪರ ಹಿರಿಯ ವಕೀಲ ಸಿವಿ ನಾಗೇಶ್‌ ವಾದ ಮಂಡಿಸಿದ್ದರು.

    ನಟ ದರ್ಶನ್‌, ಅವರ ಆಪ್ತೆ ಪವಿತ್ರಾ ಗೌಡ ಮತ್ತು ಇತರೆ ಆರೋಪಿಗಳಿಗೆ ಡಿಸೆಂಬರ್ 13 ರಂದು ಪೂರ್ಣಾವಧಿಗೆ ಜಾಮೀನು ಮಂಜೂರಾಗಿತ್ತು. ಹೈಕೋರ್ಟ್‌ ತೀರ್ಪನ್ನು ಪ್ರಶ್ನೆ ಮಾಡಿ ಡಿಸೆಂಬರ್‌ ಅಂತ್ಯದಲ್ಲಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ. ವಕೀಲ ಅನಿಲ್ ನಿಶಾನಿ ಮುಖಾಂತರ ಮೇಲ್ಮನವಿ ಸಲ್ಲಿಸಿರುವ ಸರ್ಕಾರ ಬರೋಬ್ಬರಿ 1,492 ಪುಟಗಳ ಕಡತಗಳನ್ನು ಸಲ್ಲಿಕೆ ಮಾಡಿತ್ತು.

    ಕಡತದಲ್ಲಿ ಏನಿದೆ?
    ಹೈಕೋರ್ಟ್ ಜಾಮೀನು ಆದೇಶ, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಮತ್ತು ದೂರಿನ ಪ್ರತಿ, ಮರಣೋತ್ತರ ಪರೀಕ್ಷೆಯ ವರದಿ, ಆರೋಪಿಗಳ ಗ್ರೌಂಡ್ಸ್ ಆಫ್ ಅರೆಸ್ಟ್, ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂತಿಮ ವರದಿಯ ತರ್ಜುಮೆ ಪ್ರತಿ.

    ಪ್ರತ್ಯಕ್ಷ ದರ್ಶಿಗಳ ಹೇಳಿಕೆಯ ತರ್ಜುಮೆ ಕಾಪಿ, ಮರಣೋತ್ತರ ಪರೀಕ್ಷೆಯ ವರದಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಸಿಡಿಆರ್, ಪಂಚನಾಮೆ ವರದಿ, ಆರೋಪಿಗಳ ಬಳಿ ವಶಪಡಿಸಿಕೊಂಡ ಡಿಜಿಟಲ್ ವಸ್ತುಗಳ ವಿಶ್ಲೇಷಣೆ ವರದಿ.

    ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಜಾ ಆದೇಶ ಪ್ರತಿ, ದರ್ಶನ್‌ಗೆ ನೀಡಿದ್ದ ಮಧ್ಯಂತರ ಜಾಮೀನು ಅದೇಶ ಪ್ರತಿ, ಜೈಲಿನಿಂದ ದರ್ಶನ್ ಬಗ್ಗೆ ಸಲ್ಲಿಕೆಯಾದ ವೈದ್ಯಕೀಯ ವರದಿ, ಬಿಜಿಎಸ್ ಆಸ್ಪತ್ರೆ ವೈದ್ಯರ ವರದಿ ಸೇರಿದಂತೆ ಒಟ್ಟು 15 ಅಂಶಗಳಿಗೆ ಸಂಬಂಧಿಸಿ ಒಟ್ಟು 1492 ಪುಟಗಳ ಕಡತವನ್ನು ಕೋರ್ಟ್‌ಗೆ ನೀಡಿದೆ.

    ಯಾರೆಲ್ಲಾ ಜಾಮೀನು ರದ್ದಿಗೆ ಅರ್ಜಿ ಸಲ್ಲಿಕೆಯಾಗಿದೆ?
    ಪವಿತ್ರಾ ಗೌಡ (ಎ 1)
    ದರ್ಶನ್‌ (ಎ 2)
    ಜಗದೀಶ್‌ ಜಗ್ಗ ಅಲಿಯಾಸ್‌ ಜಗ್ಗ (ಎ 6)
    ಅನುಕುಮಾರ್‌ ಅಲಿಯಾಸ್‌ ಅನು (ಎ 7)
    ಆರ್‌ ನಾಗರಾಜು (ಎ 11)
    ಎಂ ಲಕ್ಷ್ಮಣ್‌ (ಎ 12)
    ಪ್ರದೋಶ್‌  (ಎ 14)

  • ದರ್ಶನ್‌ ಸೂಚನೆ ಮೇರೆಗೆ ಕಿಡ್ನಾಪ್‌ – ಕೊಲೆಯಲ್ಲಿ ಪವಿತ್ರಾ ಪಾತ್ರವಿಲ್ಲ: ವಕೀಲರ ವಾದ

    ದರ್ಶನ್‌ ಸೂಚನೆ ಮೇರೆಗೆ ಕಿಡ್ನಾಪ್‌ – ಕೊಲೆಯಲ್ಲಿ ಪವಿತ್ರಾ ಪಾತ್ರವಿಲ್ಲ: ವಕೀಲರ ವಾದ

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Murder Case) ಮತ್ತೊಂದು ರೋಚಕ ತಿರುವು ಪಡೆದಿದೆ. ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ (Pavithra Gowda) ಅವರ ಪಾತ್ರವೇ ಇಲ್ಲ ಎಂದು ವಕೀಲರು ವಾದ ಮಂಡಿಸಿದ್ದಾರೆ.

    ಪವಿತ್ರಾ ಗೌಡ ಹೈಕೋರ್ಟ್‌ನಲ್ಲಿ (High Court) ವಾದ ಮಂಡಿಸಿದ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್, ಪವಿತ್ರಗೌಡ- ದರ್ಶನ್ ಲೀವ್‌ ಇನ್‌  ರಿಲೇಷನ್‌ಶಿಪ್‌ನಲ್ಲಿದ್ದರು. ಪವಿತ್ರಾಗೌಡ ಮನೆಯಲ್ಲಿ ಪವನ್ ಕೆಲಸಕ್ಕೆ ಇದ್ದ. ದರ್ಶನ್ ಸೂಚನೆಯ ಮೇರೆಗೆ ಪವನ್ ಕಿಡ್ನಾಪ್ ಮಾಡಿದ್ದಾನೆ ಎಂದು ವಾದಿಸಿದ್ದಾರೆ.

     

    ರೇಣುಕಾಸ್ವಾಮಿ ಬರುವ ತನಕ ಶೆಡ್‌ನಲ್ಲಿ ಪವನ್ ಕಾದಿದ್ದ. ದರ್ಶನ್ (Darshan) ಶೆಡ್‌ಗೆ ಹೋಗುವಾಗ ಪವಿತ್ರ ಗೌಡಳನ್ನು ಕರೆದುಕೊಂಡು ಹೋಗಿದ್ದಾರೆ. ಪವಿತ್ರಾಗೌಡ ಶೆಡ್‌ಗೆ ಹೋಗಿ ರೇಣುಕಾಸ್ವಾಮಿಗೆ ಬೈಯ್ದು ವಾಪಸ್ ಮನೆಗೆ ಬಂದಿದ್ದಾರೆ. ಆದರೆ ಪಟ್ಟಣಗೆರೆ ಶೆಡ್‌ನಲ್ಲಿ ಹಲ್ಲೆ ಮಾಡಿದಾಗ ರೇಣುಕಾಸ್ವಾಮಿ ಸಾವು ಸಂಭವಿಸಿರಬಹುದು ಎಂದು ಹೇಳಿದರು. ಇದನ್ನೂ ಓದಿ: BBK 11: ಬಿಗ್ ಬಾಸ್‌ನಿಂದ ಹೊರಬಂದ ಚೈತ್ರಾ ಕುಂದಾಪುರ

    ಪವಿತ್ರಾಗೌಡ ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ. ಆದರೆ ಚಪ್ಪಲಿಯಿಂದ ಹೊಡೆದಿರುವುದು ರೇಣುಕಾಸ್ವಾಮಿ ಸಾವಿಗೆ ಕಾರಣ ಅಲ್ಲ. ನನ್ನ ಕಕ್ಷಿದಾರರಿಗೆ ಅಪ್ರಾಪ್ತ ಮಗಳಿದ್ದಾಳೆ. ಇದನ್ನೆಲ್ಲಾ ಪರಿಗಣಿಸಿ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

    ಜಾಮೀನು ಅರ್ಜಿಯ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿಕೆಯಾಗಿದ್ದು ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಪ್ರತಿವಾದ ಮಂಡಿಸಲಿದ್ದಾರೆ.

     

  • ದರ್ಶನ್ ಜೊತೆ ಕುಳಿತ ನಟೋರಿಯಸ್ ರೌಡಿಶೀಟರ್‌ಗಳು ಯಾರು?

    ದರ್ಶನ್ ಜೊತೆ ಕುಳಿತ ನಟೋರಿಯಸ್ ರೌಡಿಶೀಟರ್‌ಗಳು ಯಾರು?

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಸಿಲುಕಿರುವ ನಟ ದರ್ಶನ್ (Darshan) ಕಳೆದ ಎರಡೂವರೆ ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇನ್ನೇನು ಈ ಪ್ರಕರಣ ಸಂಬಂಧ ಚಾರ್ಜ್‌ಶೀಟ್‌ ಸಲ್ಲಿಕೆಗೆ ಪೊಲೀಸರು ತಯಾರಿ ನಡೆಸುತ್ತಿರುವ ಹೊತ್ತಿನಲ್ಲಿ ನಟ ದರ್ಶನ್‌ ರೌಡಿಶೀಟರ್‌ಗಳ ಜೊತೆ ಕುಳಿತಿರುವ ಫೋಟೋವೊಂದು ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ.

    ಜೈಲಲ್ಲಿ ನಟ ದರ್ಶನ್ ಐಶಾರಾಮಿ ಜೀವನ ನಡೆಸ್ತಿದ್ದಾರಾ? ರಾಜಾತಿಥ್ಯ ಪಡೆಯುತ್ತಿದ್ದಾರಾ? ಎಂಬ ಅನುಮಾನಗಳಿಗೆ ಕಾರಣವಾಗಿದೆ. ನಟ ದರ್ಶನ್ ಜೈಲಿನ ಆವರಣದ ಹುಲ್ಲು ಹಾಸಿನ ಮೇಲೆ ಚೇರಲ್ಲಿ ಮೂವರ ಜೊತೆ ಕುಳಿತು, ಒಂದು ಕೈಯಲ್ಲಿ ಸಿಗರೇಟ್ ಹಿಡಿದು ಮತ್ತೊಂದು ಕೈಯಲ್ಲಿ ಏನನ್ನೋ ಕುಡಿಯಲು ಮಗ್ ಹಿಡಿದ ಫೋಟೋ ಜೈಲಿನಿಂದಲೇ  ಬಹಿರಂಗವಾಗಿದೆ.

    ನಟೋರಿಯಸ್ ರೌಡಿಶೀಟರ್‌ಗಳಾದ ವಿಲ್ಸನ್‌ ಗಾರ್ಡನ್ ನಾಗ (Wilson Garden Naga), ಕುಳ್ಳ ಸೀನಾ (Kulla Seena) ಹಾಗೂ ತನ್ನ ಮ್ಯಾನೇಜರ್ ನಾಗರಾಜ್ (Nagaraj) ಜೊತೆ ನಟ ದರ್ಶನ್ ಕುಳಿತಿದ್ದಾರೆ. ಈ ಫೋಟೋ ಇದೀಗ ವೈರಲ್ ಆಗಿದ್ದು, ಜೈಲು ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಂತಾಗಿದೆ.  ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ – ಇಬ್ಬರು ಐಜಿಪಿಗಳ ನೇತೃತ್ವದಲ್ಲಿ ತನಿಖಾ ತಂಡ ರಚನೆ

    ವಿಲ್ಸನ್ ಗಾರ್ಡನ್ ನಾಗ ಯಾರು?
    ಬೆಂಗಳೂರಿನ ಭೂಗತ ಲೋಕದಲ್ಲಿ ಸುದ್ದಿ ಮಾಡಿರುವ ಈತ ಸಿದ್ದಾಪುರ ಮಹೇಶನ ಮರ್ಡರ್ ಕೇಸಲ್ಲಿ ಜೈಲು ಸೇರಿದ್ದಾನೆ. ಕೋರ್ಟ್ ಮುಂದೆ ಶರಣಾಗಿ ಜೈಲು ಸೇರಿದ್ದ ಈತನ ಮೇಲೆ ಪೊಲೀಸರು ಕೋಕಾ ಕಾಯ್ದೆ ಹಾಕಿದ್ದಾರೆ.

    ಈ ಕುಳ್ಳ ಸೀನ ಯಾರು?
    ದೊಡ್ಡಕಲ್ಲಸಂದ್ರದ ಕುಳ್ಳ ಸೀನ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ರೌಡಿಶೀಟರ್ ಆಗಿದ್ದಾನೆ. ಕಾರ್ಪೊರೇಟರ್ ಕೊಲೆ ಪ್ರಕರಣದಲ್ಲಿ ಸಜಾ ಕೈದಿಯಾಗಿರುವ ಈತನ ಮೇಲೆ ಕೋಣನಕುಂಟೆ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

     

  • ದರ್ಶನ್‌ ವಿರುದ್ಧ ಆಗಸ್ಟ್‌ನಲ್ಲೇ ಚಾರ್ಜ್‌ಶೀಟ್‌ ಸಲ್ಲಿಕೆ ಸಾಧ್ಯತೆ – ಯಾವೆಲ್ಲ ವರದಿ ಬರಬೇಕಿದೆ?

    ದರ್ಶನ್‌ ವಿರುದ್ಧ ಆಗಸ್ಟ್‌ನಲ್ಲೇ ಚಾರ್ಜ್‌ಶೀಟ್‌ ಸಲ್ಲಿಕೆ ಸಾಧ್ಯತೆ – ಯಾವೆಲ್ಲ ವರದಿ ಬರಬೇಕಿದೆ?

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ನಟ ದರ್ಶನ್ (Darshan) ಹಾಗೂ 17 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ (Charge Sheet) ಸಲ್ಲಿಕೆಗೆ ವಿಶೇಷ ತನಿಖಾ ತಂಡದ (SIT) ಪೊಲೀಸರು ತಯಾರಿ ನಡೆಸಿದ್ದಾರೆ.

    ಬಹುತೇಕ ಆಗಸ್ಟ್ ತಿಂಗಳಿನಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಕ್ರೋಢೀಕರಣದಲ್ಲಿ ತೊಡಗಿದ್ದಾರೆ.

    ಮೂಲಗಳ ಪ್ರಕಾರ ಪೊಲೀಸರ ಕೈಗೆ ಯಾವುದೇ ವರದಿ ಸೇರಿಲ್ಲ. ಸಿಸಿಟಿವಿ ದೃಶ್ಯ, ಬಟ್ಟೆ, ಸ್ಥಳದಲ್ಲಿ ಸಂಗ್ರಹಿಸಿದ ಸ್ಯಾಂಪಲ್‌ಗಳ ರಿಪೋರ್ಟ್, ಮರಣೋತ್ತರ ಪರೀಕ್ಷೆ, ಮೊಬೈಲ್‌ ಕರೆ ಮತ್ತು ದತ್ತಾಂಶ ಸಂಗ್ರಹ ಸೇರಿ ವಿಧಿ ವಿಜ್ಞಾನ ಪ್ರಯೋಗಾಲಯದ ಅಂತಿಮ ವರದಿಗೆ ಕಾಯುತ್ತಿದ್ದಾರೆ.  ಇದನ್ನೂ ಓದಿ: ಮುಸ್ಲಿಮರ ಓಲೈಕೆಗೆ ರಾಮನಗರ ಹೆಸರು ಬದಲಾವಣೆ: ಈಶ್ವರಪ್ಪ

    ಶೀಘ್ರವೇ ವರದಿ ನೀಡುವಂತೆ ಎಫ್‌ಎಸ್‌ಎಲ್ ಹಾಗೂ ಸಿಐಡಿ ಟೆಕ್ನಿಕಲ್ ಸೆಲ್‌ಗೆ ಮನವಿ ಮಾಡಿದ್ದು ಇನ್ನೂ ಕೆಲವು ವರದಿಗಳು ಹೈದರಾಬಾದ್ ಎಫ್‌ಎಸ್‌ಎಲ್‌ನಿಂದ ಬರಬೇಕಿದೆ. ಇದನ್ನೂ ಓದಿ: IPL 2025: ಮುಂದಿನ ಐಪಿಎಲ್‌ನಲ್ಲೂ ಮಹಿ ಕಣಕ್ಕಿಳಿಯೋದು ಫಿಕ್ಸ್‌?

    ಇನ್ನೊಂದೆಡೆ ಪ್ರಕರಣ ಸಂಬಂಧ ಹಲವಾರು ಮಂದಿಯ ವಿಚಾರಣೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಪ್ರತ್ಯಕ್ಷ, ಪರೋಕ್ಷ ಸಾಕ್ಷಿಗಳ ವಿಚಾರಣೆ ನಡೆಸಿದ್ದಾರೆ. ಈಗಾಗಲೇ ಪ್ರಕರಣ ದಾಖಲಾಗಿ ಒಂದೂವರೆ ತಿಂಗಳಿಗೂ ಅಧಿಕ ಕಾಲವಾಗಿದೆ. ಸೆಪ್ಟೆಂಬರ್ 8ರೊಳಗೆ ಆರೋಪ ಪಟ್ಟಿ ಸಲ್ಲಿಕೆ ಮಾಡಬೇಕು. ಹೀಗಾಗಿ ಕೊನೆಯವರೆಗೆ ಕಾಯದೇ ಆದಷ್ಟು ಬೇಗ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ನಿರ್ಧಾರ ಮಾಡಿದ್ದಾರೆ.

  • ದರ್ಶನ್ ಪ್ರಕರಣವನ್ನು ವಿಧಿಯಾಟ ಅಂತೀನಿ, ಸತ್ತವನಂತೂ ಒಳ್ಳೆಯವನಲ್ಲ: ವಿ.ಮನೋಹರ್

    ದರ್ಶನ್ ಪ್ರಕರಣವನ್ನು ವಿಧಿಯಾಟ ಅಂತೀನಿ, ಸತ್ತವನಂತೂ ಒಳ್ಳೆಯವನಲ್ಲ: ವಿ.ಮನೋಹರ್

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy Murder Case) ನಟ ದರ್ಶನ್ (Actor Darshan) ಅರೆಸ್ಟ್ ಆಗಿದ್ದಾರೆ. ಇದೀಗ ದರ್ಶನ್ ಜೊತೆ ‘ಲಾಲಿಹಾಡು’ (Laali Haadu) ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ವಿ.ಮನೋಹರ್ ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣವನ್ನ ವಿಧಿಯಾಟ ಎನ್ನುತ್ತೇನೆ. ಸತ್ತವನಂತೂ ಖಂಡಿತ ಒಳ್ಳೆಯವನಲ್ಲ ಎಂದು ಪಬ್ಲಿಕ್‌ ಟಿವಿಗೆ ವಿ. ಮನೋಹರ್ ಮಾತನಾಡಿದ್ದಾರೆ.

    ದರ್ಶನ್ ಪ್ರಕರಣವನ್ನು ವಿಧಿಯಾಟ ಅಂತೀನಿ. ಆಕಸ್ಮಿಕವಾಗಿ ಇದು ನಡೆದುಹೋಗಿದೆ. ಸತ್ತವನಂತೂ ಖಂಡಿತ ಒಳ್ಳೆಯವನಲ್ಲ. ಸಾವಿರಾರು ಹೆಣ್ಣು ಮಕ್ಕಳಿಗೆ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡಿರುವ ವಿಕೃತಕಾಮಿ ಎಂದು ಗುಡುಗಿದ್ದಾರೆ. ಅವನ ಪಾಪದ ಕೊಡ ತುಂಬಿದೆ ಅದಕ್ಕೆ ತಕ್ಕ ಶಿಕ್ಷೆ ಆಗಿದೆ. ಆದರೆ ಇದು ಪೊಲೀಸ್‌ನವರಿಂದ ಆಗಬೇಕಿತ್ತು. ಆದರೆ ದರ್ಶನ್ ಸರ್ ಬ್ಯಾಡ್ ಟೈಂ ಆಗಿರಬಹುದು. ಅವರು ಆ ಕಳಂಕದಿಂದ ಹೊರಬಂದು ಮೊದಲಿನಂತೆ ಸಿನಿಮಾದಲ್ಲಿ ಆಕ್ಟ್ ಮಾಡಲಿ ಎಂದು ವಿ. ಮನೋಹರ್ (Music Director V. Manohar) ಮಾತನಾಡಿದ್ದಾರೆ. ಇದನ್ನೂ ಓದಿ:ಕುವೆಂಪು ಕೃತಿಯಿಂದ ಪ್ರೇರಣೆ- ಯುವ ನಟನಿಗೆ ಸಿಂಪಲ್ ಸುನಿ ಆ್ಯಕ್ಷನ್ ಕಟ್

    ದರ್ಶನ್ ಹೀರೋ ಆಗುವ ಮೊದಲೇನೇ ‘ಜನುಮದ ಜೋಡಿ’ ಚಿತ್ರಕ್ಕೆ ಕ್ಯಾಮೆರಾ ಅಸಿಸ್ಟೆಂಟ್ ಆಗಿದ್ರಲ್ವಾ ಆವಾಗಲೇ ಪರಿಚಯ ಇತ್ತು. ಆಗಾಗ ಮುಹೂರ್ತ ಕಾರ್ಯಕ್ರಮಗಳಲ್ಲಿ ಸಿಗುತ್ತಾ ಇದ್ವಿ. ದರ್ಶನ್ ಬಹಳ ಸಹೃದಯಿ ಮನುಷ್ಯ. ಅನೇಕರಿಗೆ ಕಷ್ಟದಲ್ಲಿ ಸಹಾಯ ಮಾಡಿದ್ದಾರೆ. ‘ಲಾಲಿಹಾಡು’ ಸಿನಿಮಾ ಸಮಯದಲ್ಲಿ ನನಗೂ ಸಹಾಯ ಮಾಡಿದ್ದರು. ಕೆಲಸ ಮಾಡುವಾಗ ನನಗೆ ಡಯಟ್ ಮಾಡೋದು ಹೇಗೆ? ಯಾವ ವ್ಯಾಯಾಮ ಮಾಡಬೇಕು ಎಲ್ಲಾ ಹೇಳ್ತಿದ್ದರು. ಅದಾದ್ಮೇಲೆ ಮಧ್ಯೆ ಗ್ಯಾಪ್ ಆಯ್ತು ಎಂದು ವಿ.ಮನೋಹರ್ ಮಾತನಾಡಿದ್ದಾರೆ.

    ಇತ್ತೀಚೆಗೆ ಈ ಘಟನೆ ಆಗೋ ಮೂರು ದಿನದ ಮುಂಚೆ ನಾನು ಫೋನ್ ಮಾಡಿ ಕೇಳಿದೆ, ದರ್ಶನ್ ಸರ್ ‘ಲಾಲಿಹಾಡು’ ಆದ್ಮೇಲೆ ನಾವು ಮತ್ತೆ ಮಾಡಿಲ್ಲ ಅಂತ. ಖಂಡಿತ ಜೊತೆಯಲಿ ಕೆಲಸ ಮಾಡೋಣ ಎಂದರು. ಅದಾದ್ಮೇಲೆ ಮೂರು ದಿನದಲ್ಲಿ ಈ ಪ್ರಕರಣ ಆಯ್ತು. ಈ ಕಳಂಕದಿಂದ ಅವರು ಹೊರ ಬರಲಿ ಮತ್ತೆ ಸಿನಿಮಾಗಳಲ್ಲಿ ಮಾಡಲಿ. ಇಂಥಹ ದುರ್ಘಟನೆಗಳು ಯಾವತ್ತೂ ಆಗದೆ ಇರಲಿ ಎಂದು ಆಶಿಸುತ್ತೇನೆ ಎಂದು ದರ್ಶನ್ ಪ್ರಕರಣ ಕುರಿತು ಮನೋಹರ್ ಮಾತನಾಡಿದರು.