Tag: renukaswamy

  • ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ: ದರ್ಶನ್ ಪರ ವಕೀಲ ಸುನೀಲ್

    ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ: ದರ್ಶನ್ ಪರ ವಕೀಲ ಸುನೀಲ್

    ಬೆಂಗಳೂರು: ನಟ ದರ್ಶನ್‌ಗೆ (Darshan) ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡಿಲ್ಲ ಅಂತಾ ಆರೋಪಿಸಿ ದರ್ಶನ್ ಪರ ವಕೀಲರು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ರು. ಕಳೆದ ಎರಡೂವರೆ ತಿಂಗಳಿನಿಂದ ವಾದ ಪ್ರತಿವಾದ ಅಲಿಸಿದ್ದ ಕೋರ್ಟ್, ದರ್ಶನ್ ಗೆ ಜೈಲಿನ ಮ್ಯಾನ್ಯುಯಲ್ (Jail Manual) ಪ್ರಕಾರ ಕನಿಷ್ಠ ಸೌಲಭ್ಯ ನೀಡುವಂತೆ ಸೂಚಿಸಿತ್ತು. ಇಂದು ಈ ಸಂಬಂಧ ಅದೇಶ ನೀಡಿದ್ದು, ದರ್ಶನ್‌ಗೆ ಮ್ಯಾನ್ಯುಯಲ್ ಪ್ರಕಾರ ಸೌಲಭ್ಯ ನೀಡಿಕೆಗೆ ಸೂಚನೆ ನೀಡಿದೆ.

    ತಿಂಗಳಿಗೆ ಒಂದು ಸಾರಿ ಹೊಸ ಕಂಬಳಿ ನೀಡುವಂತೆ ಸೂಚಿಸಿ ಇದೇ 31 ರಂದು ಚಾರ್ಜಸ್‌ಫ್ರೇಮ್‌ ಮಾಡೋದಾಗಿ ಸೂಚಿಸಿದೆ. ಇದೇ ವೇಳೆ ಮಾತಾಡಿದ ದರ್ಶನ್ ಪರ ವಕೀಲ ಸುನೀಲ್, ಇದು ಬರೇ ಹಾಸಿಗೆ ತಲೆ ದಿಂಬು ವಿಚಾರ ಅಲ್ಲ. ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡಬೇಕು ಅಂತಾ ಕೋರ್ಟ್ ಅದೇಶ ನೀಡಿತ್ತು. ಆದರೆ ಜೈಲು ಅಧಿಕಾರಿಗಳು ಅದೇಶ ಉಲ್ಲಂಘನೆ ಮಾಡಿದ್ರು. ಹಾಗಾಗಿ ಕೋರ್ಟ್ ಇವತ್ತು ಜೈಲು ಅಧಿಕಾರಿಗಳಿಗೆ ಛೀಮಾರಿ ಹಾಕಿದೆ ಅಂತ ತಿಳಿಸಿದ್ರು. ಇದನ್ನೂ ಓದಿ: ಏರ್‌ ಇಂಡಿಯಾ 4,000 ಕೋಟಿ ನಷ್ಟ ಅನುಭವಿಸಲು ಪಾಕಿಸ್ತಾನ ಕಾರಣ – ಸಿಇಒ ಸ್ಪೋಟಕ ಮಾಹಿತಿ

    ಜೈಲು ಮ್ಯಾನ್ಯುಯಲ್ ಫಾಲೋ ಮಾಡಿ, ಕನಿಷ್ಠ ಸೌಲಭ್ಯ ನೀಡಿ ಅಂತಾ ಆದೇಶ ನೀಡಿದೆ. ದರ್ಶನ್‌ಗೆ ಹಳೇ ಚಾದರ್ ನೀಡಲಾಗಿದೆ. ತಿಂಗಳಿಗೆ ಒಮ್ಮೆ ಅದನ್ನು ಬದಲಾವಣೆ ಮಾಡಿ ಅಂತಾ ಹೇಳಿದೆ ಎಂದರು.

    ಇನ್ನೂ ಸರ್ಕಾರಿ ಪರ ವಕೀಲರು, ಟ್ರಯಲ್ ತಡ ಮಾಡ್ತಿದ್ದಾರೆ ಅಂತಾ ಆರೋಪ ಮಾಡಿದ್ರು. ಇದು ಸತ್ಯಕ್ಕೆ ದೂರವಾದ ವಿಚಾರ, ಸುಪ್ರೀಂ ಕೋರ್ಟ್ ಅದಷ್ಟು ಬೇಗ ಟ್ರಯಲ್ ಶುರು ಮಾಡಿ ಅಂತಾ ಹೇಳಿದೆ. ಹೊರತುಪಡಿಸಿ, ಇಷ್ಟೇ ದಿನದಲ್ಲಿ ಟ್ರಯಲ್ ಮಾಡಿ ಅಂತಾ ಹೇಳಿಲ್ಲ ಅಂತ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ 3 ಸಾವಿರ ಕೋಟಿ ದೇಣಿಗೆ; 1500 ಕೋಟಿ ರೂ. ಖರ್ಚು

  • ದರ್ಶನ್ ಬಳ್ಳಾರಿ ಜರ್ನಿ – ಆ.30ರಂದು ಅರ್ಜಿ ವಿಚಾರಣೆ

    ದರ್ಶನ್ ಬಳ್ಳಾರಿ ಜರ್ನಿ – ಆ.30ರಂದು ಅರ್ಜಿ ವಿಚಾರಣೆ

    ರೇಣುಕಾಸ್ವಾಮಿ (Renukaswamy) ಕೊಲೆ ಆರೋಪಿ ದರ್ಶನ್ (Darshan) ಸದ್ಯಕ್ಕೆ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿದ್ದಾರೆ. ಸೆಕ್ಯೂರಿಟಿ ಕಾರಣದಿಂದ ಅವರನ್ನ ಬಳ್ಳಾರಿ ಜೈಲಿಗೆ (Ballari Jail) ಕಳುಹಿಸಲು ಈಗಾಗಲೇ ನ್ಯಾಯಾಲಯಕ್ಕೆ ಜೈಲಧಿಕಾರಿಗಳು ಮನವಿ ಮಾಡಿಕೊಂಡಿದ್ದರು.

    ಶನಿವಾರ (ಆಗಸ್ಟ್ 23) ವಿಚಾರಣೆ ನಡೆದಿದ್ದು ಆಕ್ಷೇಪಣೆ ಅರ್ಜಿ ಸಲ್ಲಿಸೋದಕ್ಕೂ ಆರೋಪಿ ಪರ ವಕೀಲರಿಗೆ ಕೋರ್ಟ್ ಅವಕಾಶ ನೀಡಿತ್ತು. ಇದೀಗ ಶನಿವಾರ ನಡೆದ ವಿಚಾರಣೆಯಲ್ಲಿ ಬೇರೆ ಜೈಲಿಗೆ ದರ್ಶನ್ ವರ್ಗಾವಣೆ ವಿಚಾರವನ್ನು ನ್ಯಾಯಾಲಯವು ಮುಂದೂಡಿಕೆ ಮಾಡಿದೆ. ದರ್ಶನ್ ಪರ ವಕೀಲರು ಸಮಯಾವಕಾಶ ಕೇಳಿದ್ದು ಇದೇ ಆಗಸ್ಟ್ 30ಕ್ಕೆ ವರ್ಗಾವಣೆ ಕುರಿತ ವಿಚಾರಣೆ ನಡೆಯಲಿದೆ.

    ಕೊಲೆ ಆರೋಪಿಗಳಾದ ದರ್ಶನ್, ಪವಿತ್ರಾ ಹಾಗೂ ಒಟ್ಟೂ ಏಳು ಆರೋಪಿಗಳನ್ನು 57ನೇ ಸೆಷನ್ಸ್ ಕೋರ್ಟ್‌ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜೈಲಿನಿಂದಲೇ ಹಾಜರಾಗಿದ್ದರು.

     

    ಕೋರ್ಟ್ ಹಾಲ್ ನಂ 64ರ ನ್ಯಾಯಾಧೀಶರ ಮುಂದೆ ಆರೋಪಿಗಳನ್ನ ಹಾಜರುಪಡಿಸಲಾಗಿತ್ತು. ಪ್ರದೂಷ್ ಪರ ವಕೀಲರಿಂದ ಮಾತ್ರ ವರ್ಗಾವಣೆಗೆ ಆಕ್ಷೇಪಣಾ ಅರ್ಜಿ ಸಲ್ಲಿಕೆಯಾಗಿದೆ. ಇನ್ನುಳಿದ ಆರೋಪಿಗಳ ಪರವಾಗಿ ಆಗಸ್ಟ್ 30ರ ವರೆಗೆ ವಕೀಲರು ಸಮಯಾವಕಾಶ ಕೇಳಿಕೊಂಡಿದ್ದರು. ಹೀಗಾಗಿ ಅಲ್ಲಿಯವರೆಗೂ ಆರೋಪಿಗಳು ಪರಪ್ಪನ ಅಗ್ರಹಾರದಲ್ಲೇ ಇರ್ತಾರೆ. ಜೊತೆಗೆ ಆರೋಪಿಗಳ ನ್ಯಾಯಾಂಗ ಬಂಧನವೂ ಸಪ್ಟೆಂಬರ್ 9ರ ತನಕವೂ ವಿಸ್ತರಣೆ ಆಗಿದೆ. ಇದನ್ನೂ ಓದಿ: ಯಶ್ ತಾಯಿ ಪುಷ್ಪಗೆ ದೀಪಿಕಾ ದಾಸ್ ತಿರುಗೇಟು: ಪುಷ್ಪಮ್ಮ ಹೇಳಿದ್ದೇನು?

    ಪವಿತ್ರಾ ಗೌಡ ಪರ ವಕೀಲರಿಂದ ಸ್ಯಾಟುಚರಿ(ಶಾಸನ ಬದ್ಧ) ಜಾಮೀನು ಕೋರಿ ಅರ್ಜಿ ಸಲ್ಲಿಕೆಯಾಗಿದೆ. ಚಾರ್ಜ್ಶೀಟ್ ಸಿಆರ್‌ಪಿಸಿ ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ. ಬಿಎನ್‌ಎಸ್‌ಎಸ್ ಅಡಿಯಲ್ಲಿ ಮಾಡಬೇಕಿತ್ತು. ಹೀಗಾಗಿ ಜಾಮೀನು ಮಂಜೂರು ಮಾಡುವಂತೆ ಪವಿತ್ರಾ ಪರ ವಕೀಲ ಬಾಲನ್ ಮನವಿ ಮಾಡಿದ್ದಾರೆ.

    ಈ ವಿಚಾರಣೆಯನ್ನೂ ಆಗಸ್ಟ್ 30ಕ್ಕೆ ನ್ಯಾಯಾಲಯ ಮುಂದೂಡಿಕೆ ಮಾಡಿದೆ. ಸಪ್ಟೆಂಬರ್ ಸೆಪ್ಟೆಂಬರ್ 9 ರಂದು ಎಲ್ಲಾ ಆರೋಪಿಗಳನ್ನ ಮತ್ತೆ ಹಾಜರು ಪಡಿಸಲು ಕೋರ್ಟ್ ಸೂಚಿಸಿದೆ. ಹೀಗೆ ಆಗಸ್ಟ್ 30ರವರೆಗೂ ದರ್ಶನ್ ಹಾಗೂ ಇತರೆ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಲ್ಲೇ ಇರಲಿದ್ದಾರೆ.

  • ದರ್ಶನ್‌ ಶಿಫ್ಟ್‌ಗೆ ಹೆಚ್ಚಿದ ಒತ್ತಡ – ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಳ್ಳಲು ವಕೀಲರ ಹರಸಾಹಸ

    ದರ್ಶನ್‌ ಶಿಫ್ಟ್‌ಗೆ ಹೆಚ್ಚಿದ ಒತ್ತಡ – ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಳ್ಳಲು ವಕೀಲರ ಹರಸಾಹಸ

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಜೈಲು ಸೇರಿರುವ ನಟ ದರ್ಶನ್‍ರನ್ನು (Darshan) ಪರಪ್ಪನ ಅಗ್ರಹಾರ ಜೈಲಿಂದ ಶಿಫ್ಟ್ ಮಾಡಲು ಜೈಲಾಧಿಕಾರಿಗಳಿಂದ ಒತ್ತಡ ಬರುತ್ತಿದೆ. ಹೀಗಾಗಿಯೇ ಕೋರ್ಟ್ ಮೊರೆ ಹೋಗಲು ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ದರ್ಶನ್‍ರನ್ನು ಪರಪ್ಪನ ಅಗ್ರಹಾರದಲ್ಲೇ ಉಳಿಸಲು ವಕೀಲರು ಪ್ರಯತ್ನ ಮಾಡುತ್ತಿದ್ದಾರೆ. ದರ್ಶನ್ ಅರೆಸ್ಟ್ ಆದ ದಿನವೇ ವಕೀಲರು ದರ್ಶನ್ ಪರಪ್ಪನ ಅಗ್ರಹಾರ ಜೈಲಿಂದ ಬೇರೆ ಕಡೆ ಶಿಫ್ಟ್ ಮಾಡಬಾರದು ಎಂದು ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.

    ಟ್ರಯಲ್ ಶುರುವಾದರೆ ಬೇರೆ ಜಿಲ್ಲೆಗಳಿಂದ ಕರೆದುಕೊಂಡು ಬರುವುದು ಕಷ್ಟವಾಗಲಿದೆ. ಹೀಗಾಗಿ ಬೇರೆ ಜೈಲಿಗೆ ಶಿಫ್ಟ್ ಮಾಡಬಾರದು ಎಂದು ಕೋರ್ಟ್‍ಗೆ ವಕೀಲ ಸುನೀಲ್ ಅರ್ಜಿ ಸಲ್ಲಿಸಿದ್ದಾರೆ. ಇಂದು ಎಸ್‍ಪಿಪಿ ಮುಖಾಂತರ ಜೈಲಾಧಿಕಾರಿಗಳು ಅರ್ಜಿ ಸಲ್ಲಿಕೆ ಮಾಡ್ತಾರಾ ವಕೀಲರು ಕಾದು ನೋಡಬೇಕಿದೆ. ಹಾಗೇನಾದ್ರೂ ಅರ್ಜಿ ಸಲ್ಲಿಕೆ ಮಾಡಿದ್ರೆ ನಮ್ಮ ವಾದವನ್ನು ಪರಿಗಣಿಸಿ ಅಂತಾ ಮನವಿ ಮಾಡುವ ಸಾಧ್ಯತೆ ಇದೆ. ಬೇರೆ ಜೈಲಿಗೆ ಶಿಫ್ಟ್ ಮಾಡಿದ್ರೆ ಓಡಾಟ ಕಷ್ಟವಾಗುತ್ತೆ. ಟ್ರಯಲ್ ಇದ್ದಾಗೆಲ್ಲಾ ಕರೆತರೋದು ಕಷ್ಟವಾಗುತ್ತೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲಲ್ಲೇ ಉಳಿಸುವಂತೆ ವಾದ ಮಂಡನೆ ಸಾಧ್ಯತೆ ಇದೆ. ಇದನ್ನೂ ಓದಿ: ಮತ್ತೆ `ಕುಂಟು’ನೆಪ – ದರ್ಶನ್ ಬೆನ್ನುನೋವಿಗೆ ಜೈಲಿನ ಆಸ್ಪತ್ರೆಯಲ್ಲೇ ಚಿಕಿತ್ಸೆ!

    ಪರಪ್ಪನ ಅಗ್ರಹಾರ ಜೈಲಿಗೆ ಇಂದು (ಆ.18) ಜೈಲು ಎಡಿಜಿಪಿ ಬಿ.ದಯಾನಂದ್ ಭೇಟಿ ನೀಡಲಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್‍ನಲ್ಲಿ ಎರಡನೇ ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಪವಿತ್ರಗೌಡ ಹೋದ ಮೇಲೆ ಮೊದಲ ಬಾರಿಗೆ ದಯಾನಂದ್ ಭೇಟಿ ನೀಡುತ್ತಿದ್ದಾರೆ.

    ಈ ಹಿಂದೆ ದರ್ಶನ್ ಜೈಲಿನಲ್ಲಿರುವ ರೌಡಿಗಳ ಜೊತೆ ಸಂಪರ್ಕ ಪಡೆದು ರಾಜನಂತೆ ಇದ್ದ ವಿಡಿಯೋ ವೈರಲ್ ಆಗಿತ್ತು. ಮಾದ್ಯಮಗಳಲ್ಲಿ ದರ್ಶನ್‍ಗೆ ಜೈಲಿನಲ್ಲಿ ರಾಜಾಥಿತ್ಯ ನೀಡುತ್ತಿದ್ದ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಬಳಿಕ ದರ್ಶನ್‍ರನ್ನು ಬಳ್ಳಾರಿ ಜೈಲಿಗೆ ಕಳಿಸಲಾಗಿತ್ತು. ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್ ಜಾಮೀನು ಪಡೆದು ಹೊರಗಡೆ ಬಂದಿದ್ದರು. ಸುಪ್ರೀಕೋರ್ಟ್‍ನಲ್ಲಿ ಆರೋಪಿಗಳ ಬೇಲ್ ಕ್ಯಾನ್ಸಲ್ ಆದ ಕಾರಣ ಮತ್ತೆ ಏಳು ಜನರನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆ. ಮತ್ತೆ ಜೈಲಿನಲ್ಲಿ ದರ್ಶನ್ ತನ್ನ ಪ್ರಭಾವ ಬಳಸಿ ತನಗೆ ಬೇಕಾಗುವ ರೀತಿ ವ್ಯವಸ್ಥೆ ಮಾಡಿಕೊಳ್ಳ ಬಹುದೆಂದು ದಯಾನಂದ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ಮಾಡಿ ಖಡಕ್ ಎಚ್ಚರಿಕೆ ನೀಡಲಿದ್ದಾರೆಂದು ತಿಳಿದು ಬಂದಿದೆ.

    ರಾಜಾತಿಥ್ಯದ ವಿಚಾರವಾಗಿ ಸುಪ್ರೀಂಕೋರ್ಟ್ ಚಾಟಿ ಬೀಸಿರುವುದರಿಂದ ಜೈಲು ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ದರ್ಶನ್ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಜೈಲಿನಲ್ಲಿ ಅವರಿಗೆ ಯಾವುದೇ ವಿಐಪಿ ಟ್ರೀಟ್‍ಮೆಂಟ್ ಸಿಗುತ್ತಿಲ್ಲ. ದರ್ಶನ್ ಮಾತ್ರವಲ್ಲದೇ ಅವರ ಪೂರ್ತಿ ಗ್ಯಾಂಗ್ ಮೇಲೆ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ಹದ್ದಿನ ಕಣ್ಣು ಇಟ್ಟಿದ್ದಾರೆ. ದಿನದ 24 ಗಂಟೆ ಕೂಡ ನಾಲ್ಕು ಗೋಡೆ ಮಧ್ಯೆಯೇ ಕಾಲ ಕಳೆಯಬೇಕಿದೆ. ಕಾರಿಡಾರ್‍ನಲ್ಲಿ ವಾಕ್ ಮಾಡಲು ಕೂಡ ಅನುಮತಿ ಇಲ್ಲ. ದರ್ಶನ್ ಇರುವ ಕೊಠಡಿಗೆ ಸಿಬ್ಬಂದಿ ಊಟ, ತಿಂಡಿ ಪೂರೈಸುತ್ತಿದ್ದಾರೆ. ದರ್ಶನ್ ಇರುವ ಕೋಣೆಯಲ್ಲಿ ಟಿವಿ ಕೂಡ ಇಲ್ಲ. ಖಾಲಿ ಕೂರಬೇಕು, ಇಲ್ಲವೇ ಪುಸ್ತಕ ಓದಲು ಮಾತ್ರ ಅವಕಾಶ ಇದೆ. ಜೊತೆಗೆ ಕರ್ತವ್ಯ ನಿರತ ಸಿಬ್ಬಂದಿಗೆ ಬಾಡಿ ವೋರ್ನ್ ಕ್ಯಾಮೆರಾ ಹಾಕಿಕೊಳ್ಳಲು ಸೂಚನೆ ನೀಡಲಾಗಿದೆ. ಸಿಬ್ಬಂದಿ ಕೂಡ ದರ್ಶನ್ ಬಳಿ ಮಾತಾಡುವ ಹಾಗಿಲ್ಲ. ಜೈಲಿನಲ್ಲಿ ದರ್ಶನ್‍ಗೆ ಯಾರ ಭೇಟಿಗೂ ಅವಕಾಶ ನೀಡುತ್ತಿಲ್ಲ. ಇದನ್ನೂ ಓದಿ: ದರ್ಶನ ಪರ ಅಖಾಡಕ್ಕಿಳಿದ ಪತ್ನಿ ವಿಜಯಲಕ್ಷ್ಮಿ – ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು?

  • ರೇಣುಕಾ ಕೊಲೆ ಹಠಾತ್‌ ಪ್ರಚೋದನೆಯಿಂದಾಗಿಲ್ಲ, ಪೂರ್ವಯೋಜಿತ – ದರ್ಶನ್‌ ಪಾತ್ರದ ಬಗ್ಗೆ ಸುಪ್ರೀಂ ಅಭಿಪ್ರಾಯ

    ರೇಣುಕಾ ಕೊಲೆ ಹಠಾತ್‌ ಪ್ರಚೋದನೆಯಿಂದಾಗಿಲ್ಲ, ಪೂರ್ವಯೋಜಿತ – ದರ್ಶನ್‌ ಪಾತ್ರದ ಬಗ್ಗೆ ಸುಪ್ರೀಂ ಅಭಿಪ್ರಾಯ

    – ಮೆಡಿಕಲ್‌ ಕಂಡಿಷನ್ ಬೇಲ್‌ ಪಡೆದು ಸರ್ಜರಿಯನ್ನೇ ಮಾಡಿಸಲಿಲ್ಲ
    – ಜಾಮೀನಿನ ಸ್ವಾತಂತ್ರ್ಯ ದುರುಪಯೋಗ; ಕೋರ್ಟ್‌ ತೀವ್ರ ಆಕ್ಷೇಪ

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಎ-2 ದರ್ಶನ್, ಎ-1 ಪವಿತ್ರಾಗೌಡ (Darshan And Pavithra Gowda) ಸೇರಿದಂತೆ, 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಕೊಟ್ಟಿದ್ದ ಜಾಮೀನನ್ನ ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಎಲ್ಲಾ ಆರೋಪಿಗಳನ್ನು ತಕ್ಷಣವೇ ವಶಕ್ಕೆ ಪಡೆಯಬೇಕು ಅಂತ ಸುಪ್ರೀಂ ಕೋರ್ಟ್ (Supreme Court) ಸೂಚನೆ ನೀಡಿದ್ದರಿಂದ ಪೊಲೀಸರು ಬಂಧಿಸಿದ್ದಾರೆ.

    ಐವರು ಆರೋಪಿಗಳಿಗೆ ಠಾಣೆಯಲ್ಲೇ ವೈದ್ಯಕೀಯ ಪರೀಕ್ಷೆ (Medical test) ನಡೆಸಿದರು. ಈ ವೇಳೆ, ಬೆನ್ನು ನೋವಿದೆ ಅಂತ ದರ್ಶನ್ ಹೇಳಿದ್ರು, ಒತ್ತಡದಿಂದ ಬಿಪಿ ಹೆಚ್ಚಾಗಿದೆ ಅಂತ ಡಾಕ್ಟರ್ ಹೇಳಿದರು ಅಂತ ತಿಳಿದುಬಂದಿದೆ. ವೈದ್ಯಕೀಯ ತಪಾಸಣೆ ಬಳಿಕ ಡಿಗ್ಯಾಂಗ್‌ನ ಐವರು ಆರೋಪಿಗಳನ್ನು ಕೋರಮಂಗಲದಲ್ಲಿರುವ ಜಡ್ಜ್‌ ನಿವಾಸದ ಎದುರು ಹಾಜರುಪಡಿಸಿ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಗಿದೆ.

    ಇನ್ನೂ ಮುಖ್ಯವಾಗಿ ನೋಡೊದಾದ್ರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರದ ಬಗ್ಗೆಯೂ ಸುಪ್ರೀಂ ಕೋರ್ಟ್ ಉಲ್ಲೇಖ ಮಾಡಿದೆ. ಕೊಲೆ ಕೇಸಲ್ಲಿ ದರ್ಶನ್ ಪಾತ್ರವೇನು? ಅಂತ ವಿವರವಾಗಿ ಹೇಳಿದೆ. ಇದನ್ನೂ ಓದಿ: ಜಾಮೀನು ರದ್ದು – ಪತ್ನಿ ಮನೆಯಲ್ಲಿದ್ದ ದರ್ಶನ್‌ ಅರೆಸ್ಟ್‌

    ದರ್ಶನ್‌ ಪಾತ್ರದ ಬಗ್ಗೆ ಕೋರ್ಟ್‌ ಹೇಳಿದ್ದೇನು?
    ಈ ಕೊಲೆ ಹಠಾತ್ ಪ್ರಚೋದನೆ ಅಥವಾ ಭಾವನೆಗಳು ಸ್ಫೋಟಗೊಂಡು ಮಾಡಿರುವ ಪ್ರಕರಣ ಅಲ್ಲ. ಪುರಾವೆಗಳನ್ನ ನೋಡಿದಾಗ ಇದು, ಪೂರ್ವಯೋಜಿತ, ಸಂಘಟಿತ ಅಪರಾಧವನ್ನ ಸೂಚಿಸುತ್ತೆ. ಈ ಪ್ರಕರಣದಲ್ಲಿ ದರ್ಶನ್ ನೇರವಾಗಿ ಭಾಗಿಯಾಗಿಲ್ಲ ಎಂದು ಹೇಳಿದರೂ ಸಿಸಿಟಿವಿ ದೃಶ್ಯ ನಾಶವಾಗಿದೆ. ಅಲ್ಲದೇ ಇನ್ನಿತರ ಆರೋಪಿಗಳನ್ನ ಶರಣಾಗಲು ಹೇಳಿ ತನಿಖಾ ಹಾದಿ ತಪ್ಪಿಸಲು ಪ್ರಭಾವ ಬಳಸಿದ್ದಾರೆ.

    ಇದಕ್ಕೆ ದರ್ಶನ್‌ ಪರ ವಕೀಲರು ಜಾಮೀನು ದುರುಪಯೋಗ ಪಡೆಸಿಕೊಂಡಿಲ್ಲ ಅಂದಿದ್ದಾರೆ ಹೇಳಿದ್ದಕ್ಕೆ ಗರಂ ಆದ ನ್ಯಾಯಪೀಠ, ದರ್ಶನ್ ತನಿಖೆಯ ಹಾದಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಪ್ರಕರಣ ಬೆಳಕಿಗೆ ಬಾರದಂತೆ ದರ್ಶನ್ ಎ10 – ಎ14ಗೆ ಶರಣಾಗುವಂತೆ ಹೇಳಿದ್ದಾರೆ. ಇದಕ್ಕಾಗಿ ದರ್ಶನ್ ಹಣ ಪಾವತಿ ಮಾಡಿದ್ದಾರೆ. ಜಾಮೀನು ಪಡೆದ ಬಳಿಕ ಸಾಕ್ಷಿಧಾರರ ಜೊತೆ ಬಹಿರಂಗವಾಗಿ ವೇದಿಕೆ ಹಂಚಿಕೊಂಡಿದ್ದಾರೆ, ಪವಿತ್ರಾಗೌಡ ಮನೆಯ ಸಿಸಿಟಿವಿ ದೃಶ್ಯಗಳನ್ನು ಡಿಲಿಟ್ ಮಾಡಲಾಗಿದೆ ಎಂದು ಕೋರ್ಟ್‌ ದರ್ಶನ್‌ ಪಾತ್ರದ ಬಗ್ಗ ಹೇಳಿದೆ. ಇದನ್ನೂ ಓದಿ: 3ನೇ ಬಾರಿಗೆ ಪರಪ್ಪನ ಅಗ್ರಹಾರ ಸೇರಿದ ದರ್ಶನ್‌

    ಅಲ್ಲದೇ ದರ್ಶನ್ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದುಗೊಳಿಸಿರೋ ಸುಪ್ರೀಂ ಕೋರ್ಟ್ 4 ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಆದೇಶ ನೀಡಿದೆ. ವೈದ್ಯಕೀಯ ಆಧಾರದಡಿ ಕೊಟ್ಟಿರೋ ಜಾಮೀನಿಗೂ ಆಕ್ಷೇಪ ಎತ್ತಿದೆ. ಸುಪ್ರೀಂ ಕೋರ್ಟ್ ಯಾವ್ಯಾವ ಅಂಶಗಳನ್ನ ಪ್ರಮುಖವಾಗಿ ಪರಿಗಣಿಸಿದೆ. ಅವುಗಳನ್ನ ನೋಡೊದಾದ್ರೆ. ಇದನ್ನೂ ಓದಿ: ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ

    ಯಾವ್ಯಾವ ಆಯಾಮದಲ್ಲಿ ಸುಪ್ರೀಂ ಆದೇಶ?
    1. ಪ್ರಕರಣದ ಸ್ವರೂಪ ಮತ್ತು ತೀವ್ರತೆ
    2. ಸಾಕ್ಷ್ಯನಾಶ & ಸಾಕ್ಷಿಗಳ ಮೇಲೆ ಪ್ರಭಾವ ಸಾಧ್ಯತೆ
    3. ಸುಳ್ಳು ವೈದ್ಯಕೀಯ ಕಾರಣಗಳನ್ನ ನೀಡಿ ಪಡೆದ ಜಾಮೀನು
    4. ವಸ್ತುನಿಷ್ಠ ವಿಚಾರಗಳನ್ನ ಪರಿಗಣಿಸದೇ ಹೈಕೋರ್ಟ್ ನೀಡಿದ ಜಾಮೀನು ಆದೇಶ

    ವೈದ್ಯಕೀಯ ಕಾರಣದಡಿ ಕೊಟ್ಟ ಜಾಮೀನಿಗೆ ಆಕ್ಷೇಪ ಏನು..?
    * ಡಿ.13ಕ್ಕೆ ಹೈಕೋರ್ಟ್ ನೀಡಿದ ಆದೇಶದಲ್ಲಿ ಮೆಡಿಕಲ್ ಕಂಡಿಷನ್ ಎಂದು ಹೇಳಿತ್ತು.
    * ಜಾಮೀನು ಪಡೆದ ನಂತರದ ದರ್ಶನ್ ನಡವಳಿಕೆ ದಾರಿತಪ್ಪಿಸುವ, ಉತ್ರ್ಪೇಕ್ಷಿತ ರೀತಿಯಲ್ಲಿತ್ತು.
    * ಡಿಸ್ಚಾರ್ಜ್ ರಿಪೋರ್ಟ್‌ನಲ್ಲಿ ಡಯಾಬಿಟಿಸ್, ಬಿಪಿ, ಹೃದ್ರೋಗ ಸಮಸ್ಯೆ & ಭವಿಷ್ಯದಲ್ಲಿ ಸರ್ಜರಿ ಬೇಕಾಗಬಹುದು ಎಂದಿತ್ತು.
    * ಆದರೆ, ಇದರಲ್ಲಿ ಎಲ್ಲೂ ಸರ್ಜರಿ ತಕ್ಷಣ ಅಗತ್ಯವಿದೆ, ಜೀವಕ್ಕೆ ಕುತ್ತಾಗಲಿದೆ ಎಂದು ಹೇಳಿರಲಿಲ್ಲ
    * ಹೀಗಾಗಿ, ಮೆಡಿಕಲ್ ಗ್ರೌಂಡಲ್ಲಿ ಜಾಮೀನು ಅಗತ್ಯವಿರಲಿಲ್ಲ.
    * ಹೈಕೋರ್ಟ್‌ನಲ್ಲಿ ಹೇಳಿದ್ದಕ್ಕೆ ವಿರುದ್ಧವಾಗಿ ದರ್ಶನ್ ಹಲವು ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡರು.
    * ಹೈಪ್ರೊಫೈಲ್ ಸೋಷಿಯಲ್ ಇವೆಂಟ್‌ಗಳಲ್ಲಿ ಪೂರ್ಣ ಆರೋಗ್ಯಯುತರಾಗಿರುವಂತೆ ಭಾಗಿಯಾದ್ರು.
    * ಜೈಲ್‌ನಿಂದ ಬಿಡುಗಡೆ ಬಳಿಕ ಸರ್ಜರಿಯೂ ಮಾಡಿಸಲಿಲ್ಲ.
    * ಸುಳ್ಳು ಮೆಡಿಕಲ್ ಕಾರಣಗಳನ್ನ ನೀಡಿ ದರ್ಶನ್ ಜಾಮೀನಿನ ಸ್ವಾತಂತ್ರ್ಯ ದುರುಪಯೋಗ ಪಡಿಸಿಕೊಂಡರು ಎಂದು ಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

  • 3ನೇ ಬಾರಿಗೆ ಪರಪ್ಪನ ಅಗ್ರಹಾರ ಸೇರಿದ ದರ್ಶನ್‌

    3ನೇ ಬಾರಿಗೆ ಪರಪ್ಪನ ಅಗ್ರಹಾರ ಸೇರಿದ ದರ್ಶನ್‌

    ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ಆರೋಪಿಗಳ ಜಾಮೀನು ರದ್ದಾಗುತ್ತಿದ್ದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಿ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.

    ನಟ ದರ್ಶನ್, ಪವಿತ್ರಗೌಡ ,ಪ್ರದೂಷ್, ನಾಗರಾಜ್ ಹಾಗೂ ಲಕ್ಷ್ಮಣನನ್ನು ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ ಕರೆತಂದರು. ಅಲ್ಲಿ ಆರೋಗ್ಯ ತಪಾಸಣೆ ಮಾಡಿಸಿ, ಕೋರಮಂಗಲದಲ್ಲಿರುವ 64ನೇ ಸಿಸಿಹೆಚ್ ಕೋರ್ಟ್‌ನ ನ್ಯಾಯಾಧೀಶರ ಮನೆಗೆ ಕರೆದೊಯ್ದು, ಜಡ್ಜ್ ಮುಂದೆ ಹಾಜರುಪಡಿಸಿದರು. ಈ ವೇಳೆ ಸುಪ್ರೀಂ ಕೋರ್ಟ್ ಜಾಮೀನು ರದ್ದು ಪಡಿಸಿದ ಆದೇಶ ಪ್ರತಿ ನ್ಯಾಯಾಧೀಶರಿಗೆ ಪೊಲೀಸರು ಸಲ್ಲಿಸಿ, ಆದೇಶ ಪಾಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಬಳಿಕ ಆರೋಪಿಗಳ ಸರ್ಕಾರಿ ದಾಖಲೆಯನ್ನು ಜಡ್ಜ್ ಕೇಳಿ, ಪರಿಶೀಲಿಸಿದರು. ಈ ಪ್ರಕ್ರಿಯೆ ಮುಗಿದ ಬಳಿಕ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದರು. ಇದನ್ನೂ ಓದಿ: ದರ್ಶನ್‌ ಜಾಮೀನು ರದ್ದು | ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶ ಸಾರಿದ ಸುಪ್ರೀಂ: ವಕೀಲ ಚಿದಾನಂದ್

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Darshan), ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ಇಂದು ಬೆಳಗ್ಗೆ (ಆ.14) ಸುಪ್ರೀಂ ಕೋರ್ಟ್‌ (Supreme Court) ರದ್ದುಗೊಳಿಸಿತ್ತು. ಜಾಮೀನು ರದ್ದು ಮಾಡುವಾಗ ನ್ಯಾಯಾಲಯ, ಎಲ್ಲರೂ ಸರೆಂಡರ್ ಆಗಬೇಕು. ಆರೋಪಿ ಎಷ್ಟೇ ದೊಡ್ಡವನಾಗಿದ್ದರೂ, ಅವನು ಅಥವಾ ಅವಳು ಕಾನೂನಿಗಿಂತ ಮೇಲಲ್ಲ ಎಂಬ ಸಂದೇಶ ರವಾನಿಸಿತ್ತು. ಇನ್ನೂ ಆರೋಪಿಗಳ ಪರ ವಕೀಲರು ಸಮಯ ಕೇಳದ ಕಾರಣ ಇಂದೇ ಆರೋಪಿಗಳು ಶರಣಾಗ ಬೇಕಿತ್ತು.

    2011ರಲ್ಲಿ ದರ್ಶನ್ ಜೈಲು ಪಾಲು
    ಈ ಹಿಂದೆ ಸಹ ದರ್ಶನ್‌ ಎರಡು ಬಾರಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಮೊದಲನೆ ಬಾರಿ 2011ರಲ್ಲಿ ತಮ್ಮ ಪತ್ನಿ ವಿಜಯಲಕ್ಷ್ಮಿಯವರ ಮೇಲೆ ಹಲ್ಲೆ ಮಾಡಿ ದರ್ಶನ್‌ ಸ್ವಲ್ಪ ದಿನಗಳ ಕಾಲ ಜೈಲುಪಾಲಾಗಿದ್ದರು. ಬಲ್ಲ ಮೂಲಗಳ ಪ್ರಕಾರ, ಅಂದು ಹಿರಿಯ ನಟ ಅಂಬರೀಶ್ ಮಧ್ಯಪ್ರವೇಶಿಸಿ ದರ್ಶನ್ ಹಾಗೂ ವಿಜಯಲಕ್ಷ್ಮೀ ಮಧ್ಯೆ ರಾಜಿ ಮಾಡಿಸಿದ್ದರು ಎನ್ನಲಾಗಿತ್ತು.

    ಇನ್ನೂ ಎರಡನೇ ಬಾರಿ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಮೊದಲು ಬಂಧನವಾದ ಬಳಿಕ ಪರಪ್ಪನ ಅಗ್ರಹಾರದಲ್ಲಿ ಇರಿಸಲಾಗಿತ್ತು. ಈ ಜೈಲಿನಲ್ಲಿ ರಾಜಾತಿಥ್ಯದ ಆರೋಪ ಕೇಳಿ ಬಂದ ಬೆನ್ನಲ್ಲೇ ಅವರನ್ನು ಬಳ್ಳಾರಿ ಜೈಲಿಗೆ ರವಾನಿಸಲಾಗಿತ್ತು. ಬಳಿಕ ಅವರು ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊಗೆ ಬಂದಿದ್ದರು. ಇದೀಗ ಜಾಮೀನು ರದ್ದಾದ ಬೆನ್ನಲ್ಲೇ ಮೂರನೇ ಬಾರಿಗೆ ದರ್ಶನ್‌ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದನ್ನೂ ಓದಿ: ಕೊಲೆ ಕೇಸಲ್ಲಿ ಜಾಮೀನು ರದ್ದು – ಮತ್ತೆ ಜೈಲಿಗೆ ದರ್ಶನ್

  • ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ ದರ್ಶನ್?

    ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ ದರ್ಶನ್?

    ಬಳ್ಳಾರಿ: ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Actor Darshan) ಜಾಮೀನು ರದ್ದಾದ ಬೆನ್ನಲ್ಲೇ ನ್ಯಾಯಾಲಯಕ್ಕೆ ಇಂದು (ಆ.14) ಸಂಜೆ ಶರಣಾಗುವ ಸಾಧ್ಯತೆ ಇದೆ. ನ್ಯಾಯಾಲಯಕ್ಕೆ ಶರಣಾದರೆ ಮತ್ತೆ ದರ್ಶನ್ ಬಳ್ಳಾರಿ ಜೈಲಿಗೆ  (Ballari Jail) ಶಿಫ್ಟ್ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಬಳ್ಳಾರಿ ಜೈಲಿನಲ್ಲಿ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

    ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‍ಗೆ ರಾಜಾತಿಥ್ಯ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದಾದ ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಜಾಮೀನು ಮಂಜೂರಾಗುವ ತನಕ 63 ದಿನಗಳ ಕಾಲ ಬಳ್ಳಾರಿ ಜೈಲಿನಲ್ಲಿ ಕಳೆದಿದ್ದರು. ಅಕ್ಟೋಬರ್ 30 ರಂದು ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದರು. ಇದೀಗ ಮತ್ತೆ ಅದೇ ಜೈಲಿಗೆ ಅವರು ಶಿಫ್ಟ್ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ರಾಜ್ಯ ತೊರೆದಿದ್ದಾರಾ ಕೊಲೆ ಆರೋಪಿ ದರ್ಶನ್‌?

    ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾಗ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ದರ್ಶನ್‍ಗೆ ವಿಮ್ಸ್ ಆಸ್ಪತ್ರೆಯಲ್ಲಿ ಸ್ಕ್ಯಾನ್ ಸಹ ಮಾಡಿಸಲಾಗಿತ್ತು. ಸ್ಕ್ಯಾನ್ ಬಳಿಕ ತುರ್ತು ಸರ್ಜರಿಗೆ ಸೂಚಿಸಲಾಗಿತ್ತು. ಅದೇ ಆಧಾರದ ಮೇಲೆ ಜಾಮೀನು ದರ್ಶನ್ ಪಡೆದಿದ್ದರು. ಜಾಮೀನು ಪಡೆದ ಬಳಿಕ ದರ್ಶನ್ ಶಸ್ತ್ರಚಿಕಿತ್ಸೆ ಮಾಡಿಸಿರಲಿಲ್ಲ.

    ಇನ್ನೂ ಬಳ್ಳಾರಿ ಜೈಲಿನಲ್ಲಿ ದರ್ಶನ್‍ಗೆ ಯಾವುದೇ ವಿಶೇಷ ಸೌಲಭ್ಯ ಕೊಟ್ಟಿರಲಿಲ್ಲ. ಸಾಮಾನ್ಯ ಖೈದಿಯಂತೆ ನೋಡಿಕೊಳ್ಳಲಾಗಿತ್ತು. ಇದೀಗ ಜಾಮೀನು ರದ್ದಾಗಿರುವುದರಿಂದ ಮತ್ತೇ ಬಳ್ಳಾರಿ ಜೈಲಿಗೆ ಕರೆತರುವ ಸಾಧ್ಯತೆ ಇದೆ. ಇದನ್ನೂ ಓದಿ: ದರ್ಶನ್ ಜಾಮೀನು ರದ್ದು; ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ: ರೇಣುಕಾಸ್ವಾಮಿ ಪತ್ನಿ

  • ರಾಜ್ಯ ತೊರೆದಿದ್ದಾರಾ ಕೊಲೆ ಆರೋಪಿ ದರ್ಶನ್‌?

    ರಾಜ್ಯ ತೊರೆದಿದ್ದಾರಾ ಕೊಲೆ ಆರೋಪಿ ದರ್ಶನ್‌?

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್‌ (Actor Darshan) ಜಾಮೀನು ರದ್ದಾಗಿದ್ದು, ಇಂದೇ ಪೊಲೀಸರಿಗೆ ಅವರು ಶರಣಾಗಬೇಕಿದೆ. ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

    ಬೆಂಗಳೂರು (Bengaluru) ಹಾಗೂ ಮೈಸೂರಿನಲ್ಲಿ (Mysuru) ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಬೆಂಗಳೂರಿನ ಆರ್‌ಆರ್‌ ನಗರದಲ್ಲಿ ದರ್ಶನ್‌ ಇಲ್ಲ ಎನ್ನಲಾಗುತ್ತಿದೆ. ಇನ್ನೂ ಮೈಸೂರಿನ ಫಾರ್ಮ್‌ ಹೌಸ್‌ ಬಳಿಯೂ ಪೊಲೀಸರು ತೆರಳಿದ್ದು, ಹುಡುಕಾಟ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ದರ್ಶನ್‌ ಕರ್ನಾಟಕದಲ್ಲಿಲ್ಲ, ರಾಜ್ಯ ತೊರೆದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ದರ್ಶನ್ ಜಾಮೀನು ರದ್ದು; ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ: ರೇಣುಕಾಸ್ವಾಮಿ ಪತ್ನಿ

    ನಟ ದರ್ಶನ್‌ ಸೇರಿದಂತೆ 7 ಆರೋಪಿಗಳ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

    ಕೂಡಲೇ ಎಲ್ಲರೂ ಸರೆಂಡರ್ ಆಗಬೇಕು. ಆರೋಪಿ ಎಷ್ಟೇ ದೊಡ್ಡವನಾಗಿದ್ದರೂ, ಅವನು ಅಥವಾ ಅವಳು ಕಾನೂನಿಗಿಂತ ಮೇಲಲ್ಲ ಎಂಬ ಸಂದೇಶವನ್ನು ಇದು ನೀಡುತ್ತದೆ. ಯಾವುದೇ ಮಟ್ಟದಲ್ಲಿ ನ್ಯಾಯ ವಿತರಣಾ ವ್ಯವಸ್ಥೆಯು ಯಾವುದೇ ಬೆಲೆ ತೆತ್ತಾದರೂ ಕಾನೂನಿನ ನಿಯಮವನ್ನು ಕಾಪಾಡಿಕೊಳ್ಳಬೇಕು ಎಂಬ ಬಲವಾದ ಸಂದೇಶವನ್ನು ಇದು ಒಳಗೊಂಡಿದೆ. ಯಾವುದೇ ವ್ಯಕ್ತಿ ಕಾನೂನಿಗಿಂತ ಮೇಲಲ್ಲ ಅಥವಾ ಅದಕ್ಕಿಂತ ಕೆಳಗಿಲ್ಲ. ನಾವು ಅದನ್ನು ಪಾಲಿಸುವಾಗ ಯಾರ ಅನುಮತಿಯನ್ನೂ ಕೇಳುವುದಿಲ್ಲ. ಎಲ್ಲಾ ಸಮಯದಲ್ಲೂ ಕಾನೂನಿನ ನಿಯಮವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಆದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನ್ಯಾಯಾಂಗ, ಸರ್ಕಾರದ ಬಗ್ಗೆ ವಿಶ್ವಾಸ ಮೂಡಿದೆ: ಸುಪ್ರೀಂ ತೀರ್ಪಿಗೆ ರೇಣುಕಾಸ್ವಾಮಿ ತಂದೆ ಸಂತಸ

  • ಗುರುವಾರ ದರ್ಶನ್‌ ಪಾಲಿಗೆ ಬಿಗ್‌ ಡೇ – ಸುಪ್ರೀಂ ತೀರ್ಪಿನತ್ತ ಚಿತ್ತ, ಮತ್ತೆ ಜೈಲುಪಾಲಾಗ್ತಾರಾ ನಟ?

    ಗುರುವಾರ ದರ್ಶನ್‌ ಪಾಲಿಗೆ ಬಿಗ್‌ ಡೇ – ಸುಪ್ರೀಂ ತೀರ್ಪಿನತ್ತ ಚಿತ್ತ, ಮತ್ತೆ ಜೈಲುಪಾಲಾಗ್ತಾರಾ ನಟ?

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ(Renukaswamy Murder Case) ಆರೋಪಿಗಳಾದ ನಟ ದರ್ಶನ್‌ (Darshan), ಪವಿತ್ರಾಗೌಡ ಸೇರಿ ಇತರ ಆರೋಪಿಗಳಿಗೆ ಹೈಕೋರ್ಟ್ (High Court) ನೀಡಿರುವ ಜಾಮೀನು ರದ್ದಾಗುತ್ತಾ ಅಥವಾ ಮುಂದುವರೆಯುತ್ತಾ ಎಂಬುದು ಗುರುವಾರ ತೀರ್ಮಾನವಾಗಲಿದೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್, ಪವಿತ್ರಾಗೌಡ (Pavithra Gowda) ಹಾಗೂ ಇತರೆ ಆರೋಪಿಗಳ ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾ.ಜೆ ಬಿ ಪಾರ್ದಿವಾಲಾ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ನಡೆದಿತ್ತು. ವಾದ, ಪ್ರತಿವಾದ ಆಲಿಸಿದ್ದ ಪೀಠ ಆದೇಶವನ್ನು ಕಾಯ್ದಿರಿಸಿತ್ತು. ಇದನ್ನೂ ಓದಿ: ಅಪಹರಣಕ್ಕೆ ಸೂಚನೆ ನೀಡಿಲ್ಲ, ಯಾವುದೇ ಪುರಾವೆ ಇಲ್ಲ ಜಾಮೀನು ರದ್ದು ಮಾಡ್ಬೇಡಿ: ದರ್ಶನ್‌ ವಾದ ಏನು?

    ಜುಲೈ 24 ರಂದು ನಡೆದ ಕೊನೆಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ, ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ಪೀಠ ನಿಮ್ಮ ವಾದ-ಪ್ರತಿವಾದವನ್ನು ಮೂರು ಪುಟಗಳಲ್ಲಿ ಸಂಕ್ಷಿಪ್ತವಾಗಿ ಒಂದು ವಾರದಲ್ಲಿ ತಿಳಿಸಿ ಎಂದು ಸೂಚಿಸಿದ್ದರು. ಅದರಂತೆ ಪವಿತ್ರಾ ಗೌಡ, ದರ್ಶನ್‌ ಮತ್ತು ಬೆಂಗಳೂರು ಪೊಲೀಸರ ಪರ ವಕೀಲರು ಲಿಖಿತ ರೂಪದಲ್ಲಿ ವಾದವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದನ್ನೂ ಓದಿ: ಮಗಳಿದ್ದಾಳೆ, ಜಾಮೀನು ರದ್ದು ಮಾಡಬೇಡಿ: ಸುಪ್ರೀಂಗೆ ಪವಿತ್ರಾ ಗೌಡ ಮನವಿ

    ಕಳೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿತ್ತು. ರಾಜ್ಯ ಸರ್ಕಾರ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಹೈಕೋರ್ಟ್ ಆದೇಶದಲ್ಲಿ ಚಡಪಡಿಕೆ ಎದ್ದು ಕಾಣುತ್ತಿದೆ. ಜಾಮೀನು ನೀಡಲು ಹೇಗಾದ್ರೂ ಒಂದು ಅಂಶ ಸಿಗಲಿ ಎನ್ನುವ ಚಡಪಡಿಕೆ ಕಾಣುತ್ತಿದೆ.  ಹೈಕೋರ್ಟ್‌ ಸೂಕ್ತವಾಗಿ ತನ್ನ ವಿವೇಚನೆ ಬಳಸಿಲ್ಲ ಎಂದು ನ್ಯಾ.ಪಾರ್ದಿವಾಲ ಅಭಿಪ್ರಾಯಪಟ್ಟಿದ್ದರು.

  • `ಡಿ ಬಾಸ್‌’ ಮೇಲೆ ಗೌರವ ಇರೋರು ಯಾವುದಕ್ಕೂ ರಿಯಾಕ್ಟ್‌ ಮಾಡಬೇಡಿ: ಸೆಲೆಬ್ರಿಟಿಗಳಿಗೆ ಫ್ಯಾನ್ಸ್‌ ಪೇಜ್‌ನಲ್ಲಿ ಮನವಿ

    `ಡಿ ಬಾಸ್‌’ ಮೇಲೆ ಗೌರವ ಇರೋರು ಯಾವುದಕ್ಕೂ ರಿಯಾಕ್ಟ್‌ ಮಾಡಬೇಡಿ: ಸೆಲೆಬ್ರಿಟಿಗಳಿಗೆ ಫ್ಯಾನ್ಸ್‌ ಪೇಜ್‌ನಲ್ಲಿ ಮನವಿ

    ಬೆಂಗಳೂರು: ಕೊಲೆ ಆರೋಪಿ ದರ್ಶನ್ ಫ್ಯಾನ್ಸ್ ವಿರುದ್ಧ ಗರಂ ಆಗಿರುವ ನಟಿ ರಮ್ಯಾ (Actress Ramya) ದೂರು ಕೊಡೋದಕ್ಕೂ ಮುಂದಾಗಿದ್ದಾರೆ. ಕೊಲೆಯಾಗಿರುವ ರೇಣುಕಾಸ್ವಾಮಿ (Renukaswamy) ಕುಟುಂಬದ ಪರ ರಮ್ಯಾ ನಿಂತಿರುವುದು ದರ್ಶನ್ ಫ್ಯಾನ್ಸ್ ಕೋಪಕ್ಕೆ ಕಾರಣವಾಗಿದೆ. ಈ ವಿವಾದ ಈಗ ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ನಡುವೆ ದರ್ಶನ್‌ ಅಭಿಮಾನಿಗಳಿಗಾಗಿಯೇ ತೆರೆಯಲಾಗಿರುವ ಅಫಿಶಿಯಲ್‌ ಫ್ಯಾನ್ಸ್‌ ಪೇಜ್‌ ʻಡಿ ಕಂಪನಿʼ (DCompany) ಯಾರೊಬ್ಬರೂ ಯಾವುದಕ್ಕೂ ರಿಯಾಕ್ಟ್‌ ಮಾಡದಂತೆ ಮನವಿ ಮಾಡಲಾಗಿದೆ.

    ಡಿ ಕಂಪನಿ ಪೋಸ್ಟ್‌ನಲ್ಲಿ ಏನಿದೆ?
    ಡಿ-ಸೆಲಬ್ರೆಟಿಸ್‌ಗಳಿಗಾಗಿಯೇ ತೆರೆಯಲಾದ ಅಫಿಶಿಯಲ್ ಫ್ಯಾನ್ಸ್‌ ಪೇಜ್‌ನಲ್ಲಿ, ಡಿ ಬಾಸ್‌ ಮೇಲೆ ಗೌರವವಿರುವ ಯಾವೊಬ್ಬ ಅಭಿಮಾನಿ ಕೂಡ ಯಾವುದೇ ವಿವಾದಕ್ಕೆ ಕಿವಿಗೊಡಬೇಡಿ. ಯಾವುದಕ್ಕೂ ರಿಯಾಕ್ಟ್‌ ಮಾಡಬೇಡಿ. ಯಾರಿಗೂ ಮೆಸೇಜ್‌ ಮಾಡಬೇಡಿ. ಮಪ್ರಚಾರಕ್ಕೆ ಆಗಲಿ, ಹುನ್ನಾರ ಮಾಡಲಿ, ಯಾರು ಏನೇ ಅಂದರೂ ತಲೆ ಕೆಡಸಿಕೊಳ್ಳಬೇಡಿ. ದರ್ಶನ್ ಫ್ಯಾನ್ಸ್ ಏನೆಂದು, ಮಾಡಿರುವ ಸಮಾಜಮುಖಿ ಕಾರ್ಯಗಳು ಸಾಕ್ಷಿ. ಅವಮಾನಗಳು ಇನ್ನಷ್ಟು ಕೆಲಸ ಮಾಡಲು ಮೆಟ್ಟಿಲು ಆಗಲಿ ಎಂದು ಡಿ ಕಂಪನಿ ಅಭಿಮಾನಿಗಳಿಗೆ ಮನವಿ ಮಾಡಿದೆ. ಅಲ್ಲದೇ ʻಕಾಲಯ ತಸ್ಮೈ ನಮಃʼ ಅಂತ ಬರೆದು ಡೆವಿಲ್‌ ಸಿನಿಮಾದ ಪೋಸ್ಟರ್‌ವೊಂದನ್ನು ಹಂಚಿಕೊಂಡಿದೆ. ಇದನ್ನೂ ಓದಿ: `I Stand With Ramya’ – ಸ್ಯಾಂಡಲ್‌ವುಡ್ ಕ್ವೀನ್ ಬೆಂಬಲಕ್ಕೆ ನಿಂತ ಒಳ್ಳೆ ಹುಡ್ಗ ಪ್ರಥಮ್

    ಏನಿದು ವಿವಾದ?
    ಕೊಲೆಯಾಗಿರುವ ರೇಣುಕಾಸ್ವಾಮಿ ಕುಟುಂಬದ ಪರ ರಮ್ಯಾ ನಿಂತಿರುವುದು ದರ್ಶನ್ ಫ್ಯಾನ್ಸ್ ಕೋಪಕ್ಕೆ ಕಾರಣವಾಗಿದೆ. ಹಾಗಾಗಿ ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮಸೇಜ್ ಕಳುಹಿಸುತ್ತಿದ್ದಾರೆ ದರ್ಶನ್ ಅಭಿಮಾನಿಗಳು. ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ಕಳುಹಿಸುತ್ತಿರುವ ಅಶ್ಲೀಲ ಮಸೇಜ್‌ಗಳನ್ನು ತಮ್ಮದೇ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ ರಮ್ಯಾ. ಇದನ್ನೂ ಓದಿ: ʻಡಿʼ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ಸ್‌ – ರಮ್ಯಾ ದೂರು ಕೊಟ್ಟರೆ ಕಾನೂನು ಕ್ರಮ: ಪರಮೇಶ್ವರ್‌

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ ಪರವಾಗಿ ನಿಂತ ಕಾರಣಕ್ಕೆ ಪದೇ ಪದೇ ದರ್ಶನ್ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ ನಟಿ ರಮ್ಯಾ. ಈ ಆಕ್ರೋಶ ಅತಿರೇಕಕ್ಕೆ ಹೋದ ಕಾರಣದಿಂದಾಗಿ ನಟಿ ರಮ್ಯಾ ಕೂಡ ದರ್ಶನ್ ಫ್ಯಾನ್ಸ್ನ ಮುಖವಾಡ ಕಳಚುತ್ತಿದ್ದಾರೆ. ತಮಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿರುವ ದರ್ಶನ್ ಫ್ಯಾನ್ಸ್ ಹೆಸರಿನ ಸೋಷಿಯಲ್ ಮೀಡಿಯಾ ಅಕೌಂಟ್‌ಗಳ ಸ್ಕಿçÃನ್ ಶಾಟ್ ತೆಗೆದು, ಅಪ್‌ಲೋಡ್ ಮಾಡುತ್ತಿದ್ದಾರೆ. ಇದನ್ನೂ ಓದಿ: `ದಯೆಯಿಂದಿರಿ’ ಡಿ-ಬಾಸ್ ಫ್ಯಾನ್ಸ್‌ಗೆ ರಕ್ಷಿತಾ ಕಿವಿಮಾತು – ಸ್ಯಾಂಡಲ್‌ವುಡ್ ಕ್ವೀನ್‌ಗೆ ಟಾಂಗ್ ಕೊಟ್ರಾ ಕ್ರೇಜಿ ಕ್ವೀನ್?

    ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಹೆಸರು ಕೇಳಿ ಬಂದಾಗ, ಅವತ್ತು ಕೂಡ ರಮ್ಯಾ ಮಾತಾಡಿದ್ದರು. ದರ್ಶನ್‌ರಿಂದ ತಪ್ಪಾಗಿದ್ದರೆ ಕಠಿಣ ಶಿಕ್ಷೆಯೇ ಆಗಬೇಕು ಅಂತ ಪ್ರತಿಕ್ರಿಯೆ ನೀಡಿದ್ದರು. ಜಾಮೀನು ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದಾಗಲೂ ದರ್ಶನ್ ವಿರುದ್ಧವೇ ಪೋಸ್ಟ್ ಮಾಡಿದ್ದರು. ಹಾಗಾಗಿ ದರ್ಶನ್ ಫ್ಯಾನ್ಸ್ ರಮ್ಯಾ ವಿರುದ್ಧ ತಿರುಗಿ ಬಿದ್ದಿದ್ದರು. ಈಗೀಗ ತೀರಾ ವೈಯಕ್ತಿಕವಾಗಿ ರಮ್ಯಾಗೆ ಟೀಕೆ ಮಾಡುತ್ತಿದ್ದಾರೆ. ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ. ಆ ಎಲ್ಲಾ ಸ್ಕ್ರೀನ್‌ ಶಾಟ್‌ ಅನ್ನು ರಮ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ದರ್ಶನ್ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಕೆಂಡಾಮಂಡಲರಾಗಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿರೋ ಮೋಹಕತಾರೆ, ಕಾನೂನು ಹೋರಾಟ ಮಾಡೋದಾಗಿ ತಿಳಿಸಿದ್ದಾರೆ. ಎಲ್ಲಾ ಮೆಸೇಜ್‌ಗಳೊಂದಿಗೆ ದೂರು ಕೊಡೋದಾಗಿ ತಿಳಿಸಿದ್ದಾರೆ. ಸುದೀಪ್, ಯಶ್ ಅಲ್ಲ, ಅವರ ಹೆಂಡತಿ ಮಕ್ಕಳನ್ನೂ ಬಿಟ್ಟಿಲ್ಲ. ಚಿಕ್ಕಚಿಕ್ಕ ಮಕ್ಕಳ ಬಗ್ಗೆ ಕೆಟ್ಟಕೆಟ್ಟ ಪದ ಬಳಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಅಶ್ಲೀಲ ಕಮೆಂಟ್ ಅಕೌಂಟ್‌ಗಳನ್ನು ಬಹಿರಂಗ ಪಡಿಸಿದ ರಮ್ಯಾ, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. `ರೇಣುಕಾಸ್ವಾಮಿ ಹಾಗೂ ಡಿಬಾಸ್ ಫ್ಯಾನ್ಸ್ ಸಂದೇಶಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಇವರೆಲ್ಲಾ ಸ್ತ್ರೀದ್ವೇಷಿ ಮನೋಭಾವದವರು. ಇಂಥವರಿಂದಲೇ ಹೆಣ್ಣು ಮಕ್ಕಳು ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ’ ಅಂತ ಡಿ ಬಾಸ್ ಫ್ಯಾನ್ಸ್ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ ರಮ್ಯಾ. `ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಏಕೆ ಬೇಕು ಎಂಬುದಕ್ಕೆ ನಿಮ್ಮ ಕಾಮೆಂಟ್‌ಗಳು ಸಾಕ್ಷಿ. ನಿಮ್ಮ ಮಸೇಜ್‌ಗಳಿಂದ ನಿಮ್ಮ ಯೋಗ್ಯತೆ ಇಷ್ಟರಲ್ಲೇ ಗೊತ್ತಾಗುತ್ತೆ’ ಎಂದು ತೀಕ್ಷ್ಣವಾಗಿ ತಿವಿದಿದ್ದಾರೆ.