Tag: Renukacharya

  • ಕಾಂಗ್ರೆಸ್‌ ಸೇರಲು ರೇಣುಕಾಚಾರ್ಯ ಮೂರ್ನಾಲ್ಕು ಬಾರಿ ಬಂದಿದ್ದರು: ಎಸ್ ಎಸ್ ಮಲ್ಲಿಕಾರ್ಜುನ್

    ಕಾಂಗ್ರೆಸ್‌ ಸೇರಲು ರೇಣುಕಾಚಾರ್ಯ ಮೂರ್ನಾಲ್ಕು ಬಾರಿ ಬಂದಿದ್ದರು: ಎಸ್ ಎಸ್ ಮಲ್ಲಿಕಾರ್ಜುನ್

    ದಾವಣಗೆರೆ: ಬಿಜೆಪಿಯ (BJP) ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (Renukacharya) ಅವರು ಮೂರು ನಾಲ್ಕು ಬಾರಿ ಭೇಟಿ ಮಾಡಿ ಕಾಂಗ್ರೆಸ್‌ (Congress) ಸೇರ್ಪಡೆಯಾಗುತ್ತೇನೆ ಎಂದು  ಹೇಳಿದ್ದರು ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ (SS Mallikarjun) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‌ ‌ಭೇಟಿ ವೇಳೆ ನಿನ್ನನ್ನು ಯಾರು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂದು ಹೇಳಿ ನಾನೇ ಕಳುಹಿಸಿದ್ದೆ. ವಿಜಯೇಂದ್ರ (Vijayendra) ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ರೇಣುಕಾಚಾರ್ಯ ಇತ್ತ ಸುಳಿಯಲಿಲ್ಲ ಎಂದರು.  ಇದನ್ನೂ ಓದಿ: 8 ದಿನದ ಬಳಿಕ ಕಾಳಿ ನದಿಯಿಂದ ದಡ ಸೇರಿದ ಲಾರಿ – ಹೇಗಿತ್ತು ಕಾರ್ಯಾಚರಣೆ?

    ಮಾಜಿ ಸಂಸದ ಜಿಎಂ ಸಿದ್ದೇಶ್ವರ್ (Siddeshwara) ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಮೇಲೆ‌ ಇಲ್ಲ ಸಲ್ಲದ ಅರೋಪ ಮಾಡುತ್ತಿದ್ದಾರೆ. ಎಸ್ ಎ ರವೀಂದ್ರನಾಥ್ ಮೇಲೆ ಅಪಾರವಾದ ಗೌರವ ಇದೆ. ಅವರು ನಮ್ಮ ಅಣ್ಣ. ಬಿಜೆಪಿ ಪಕ್ಷ ಕಟ್ಟಲು ಹಗಲುರಾತ್ರಿ ಶ್ರಮಿಸಿವಹಿಸಿ ಇಷ್ಟರ ಮಟ್ಟಿಗೆ ತೆಗೆದುಕೊಂಡು ಬಂದಿದ್ದಾರೆ. ಐದಾರು ಜನರು ಸೇರಿ ರಾತ್ರಿಯಿಡಿ ಪ್ಲಾನ್ ಮಾಡಿ ಬೆಳಗ್ಗೆ ಎದ್ದು ಪಕ್ಷ ಸಂಘಟನೆ ಮಾಡಲು ಓಡಾಡಿದವರು. ಅವರ ಬಗ್ಗೆ ಸಿದ್ದೇಶ್ವರ್ ಲಘುವಾಗಿ ಮಾತನಾಡುತ್ತಾರೆ. ಜಿಲ್ಲೆಯಲ್ಲಿ ಅವರ ಅಭಿವೃದ್ದಿ ಕೆಲಸ ಏನ್ ಇದೆ ಎಂದು ಹೇಳಲಿ ಎಂದು ಸಿದ್ದೇಶ್ವರ್ ವಿರುದ್ದ ಮಲ್ಲಿಕಾರ್ಜುನ್ ಅಕ್ರೋಶ ವ್ಯಕ್ತಪಡಿಸಿದರು.

    ಕಳೆದ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಹೊಂದಾಣಿಕೆ ರಾಜಕೀಯ ನಡೆದಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಸಿದ್ದೇಶ್ವರ್‌ ಅವಧಿಯಲ್ಲಿ ಯಾವ ಕೆಲಸ ನಡೆದಿಲ್ಲ. ಬಾಡಿಗಾರ್ಡ್ ಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದರು ಅಷ್ಟೇ. ಅವರ ಕಾಮಗಾರಿಗಳಿಂದ ಜನ ರೋಸಿ ಹೋಗಿದ್ದಾರೆ. ಅದಕ್ಕೆ ಅಶೋಕ ರಸ್ತೆಗೆ ಅವರ ಪ್ರತಿಮೆ ಹಾಕಿಸಬೇಕು. ಬೇಕಾದರೆ ಅದಕ್ಕೆ ಹಣ ನಾನು ಕೊಡುತ್ತೇನೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಗ್ಯಾರಂಟಿಗಳ ಭಾರದಿಂದ ಕಂಗೆಟ್ಟ ಸರ್ಕಾರ – ಶೀ‍ಘ್ರವೇ ಆಪರೇಷನ್ ಬಿಪಿಎಲ್ ಕಾರ್ಡ್‌

    ಅಶೋಕ ರಸ್ತೆ ಅಂಡರ್ ಪಾಸ್ ಸರಿಪಡಿಸಲು ಎಂಪಿ ಜೊತೆಗೆ ಮಾತನಾಡಿ ಪ್ಯಾರಲಲ್ ರಸ್ತೆ ಮಾಡುತ್ತೇವೆ. ಇದರ ಬಗ್ಗೆ ಚರ್ಚೆ ಮಾಡಲಾಗುವುದು. ಮಾಜಿ ಸಂಸದರು ಊರು ಉದ್ದಾರ ಮಾಡುವುದನ್ನು ಬಿಟ್ಟು ವೈಯಕ್ತಿಕ ಅಭಿವೃದ್ಧಿಯಾಗಿದ್ದಾರೆ ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರವೀಂದ್ರನಾಥ ನನಗೆ ಸಹೋದರರು ಮೊದಲಿನಿಂದಲೂ ಆತ್ಮೀಯರು. ಅವರನ್ನು ಮಾತನಾಡಿಸುವುದು ಬಿಜೆಪಿಯವರಿಗೆ ತಪ್ಪಾಗಿ ಕಂಡರೆ ಏನೂ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

     

  • ವ್ಯಕ್ತಿಗತವಾಗಿ ಯಾರ ಬಗ್ಗೆಯೂ ಟೀಕೆ ಬೇಡ- ರೇಣುಕಾಗೆ ವಿಜಯೇಂದ್ರ ತಾಕೀತು

    ವ್ಯಕ್ತಿಗತವಾಗಿ ಯಾರ ಬಗ್ಗೆಯೂ ಟೀಕೆ ಬೇಡ- ರೇಣುಕಾಗೆ ವಿಜಯೇಂದ್ರ ತಾಕೀತು

    ಬೆಂಗಳೂರು: ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ನೀಡಬೇಡಿ. ವ್ಯಕ್ತಿಗತವಾಗಿ ಯಾರ ಬಗ್ಗೆಯೂ ಟೀಕೆ ಬೇಡ ಅಂತಾ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯಗೆ (Renukacharya) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ತಾಕೀತು ಮಾಡಿದ್ದಾರೆ.

    ಇಂದು ವಿಜಯೇಂದ್ರ ಅವರನ್ನು ರೇಣುಕಾಚಾರ್ಯ ಬಿಜೆಪಿ ಕಚೇರಿಯಲ್ಲಿ (BJP Office) ಭೇಟಿ ಮಾಡಿದ್ದರು. ಈ ವೇಳೆ ಮಾಧ್ಯಮಗಳಲ್ಲಿ ಮಾತಾಡಿ ಗೊಂದಲ ಮೂಡಿಸದಂತೆ ಬಿಜೆಪಿ ರಾಜ್ಯಾಧ್ಯಕ್ಷ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಮಾತಾಡದೇ ರೇಣುಕಾಚಾರ್ಯ ಅವರು ಬಿಜೆಪಿ ಕಚೇರಿಯಿಂದ ಹೊರಟಿದ್ದಾರೆ. ಈ ವೇಳೆ ಏನೂ ಮಾತಾಡದಂತೆ ಸೂಚಿಸಿದ್ದಾರೆ ಎಂದು ಹೇಳಿ ಹೋಗಿದ್ದಾರೆ.

    ಈ ಹಿಂದೆ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹಾಗೂ ಮಾಜಿ ಸಚಿವ ವಿ.ಸೋಮಣ್ಣ (V Somanna) ಸೇರಿದಂತೆ ಕೆಲ ನಾಯಕರ ವಿರುದ್ಧ ರೇಣುಕಾಚಾರ್ಯ ಬಹಿರಂಗ ಹೇಳಿಕೆ ನೀಡುತ್ತಿದ್ದರು. ರೇಣುಕಾಚಾರ್ಯ ಹೇಳಿಕೆಗಳಿಂದ ಕೆಲ ಅಸಮಾಧಾನಿತರು ಕೆರಳಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಗೆ ಕರೆದು ಇಂದು ಬಿವೈ ವಿಜಯೇಂದ್ರ ತಿಳಿ ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಹೃದಯಾಘಾತದಿಂದ 7 ತರಗತಿ ವಿದ್ಯಾರ್ಥಿನಿ ಸಾವು

  • ಯತ್ನಾಳ್ ಒಂದು ಹುಚ್ಚು ನಾಯಿ ಇದ್ದಂತೆ: ರೇಣುಕಾಚಾರ್ಯ ವಾಗ್ದಾಳಿ

    ಯತ್ನಾಳ್ ಒಂದು ಹುಚ್ಚು ನಾಯಿ ಇದ್ದಂತೆ: ರೇಣುಕಾಚಾರ್ಯ ವಾಗ್ದಾಳಿ

    ದಾವಣಗೆರೆ: ಯತ್ನಾಳ್‌ ಬಗ್ಗೆ ನಾನು ಮಾತನಾಡುವುದಕ್ಕೂ ಅಸಹ್ಯ ಎನಿಸುತ್ತೆ. ಒಂದು ಹುಚ್ಚು ನಾಯಿ ಇದ್ದಂತೆ ಎಂದು ಸ್ವಪಕ್ಷದ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧವೇ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ (Renukacharya) ವಾಗ್ದಾಳಿ ನಡೆಸಿದರು.

    ಸರ್ವಜ್ಞರ ವಚನ ಹೇಳುವ ಮೂಲಕ ಯತ್ನಾಳ್ (Basanagouda Patil Yatnal) ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ಆನೆ ಬೀದಿಗೆ ಇಳಿದಾಗ ಹುಚ್ಚು ನಾಯಿ ಬೊಗಳುತ್ತೆ. ಅದಕ್ಕೆ ಆನೆಗೆ ಇರುವ ಗೌರವ ಕಡಿಮೆಯಾಗುತ್ತಾ. ನಾಯಿಗೆ ಇರುವ ನಿಯತ್ತು ಆ ಮನುಷ್ಯನಿಗೆ ಇಲ್ಲ. ಜೆಡಿಎಸ್‌ಗೆ ಹೋದವರನ್ನು ಕರೆತಂದಿದ್ದು ಯಡಿಯೂರಪ್ಪ. ಆದರೆ ಆ ಮನುಷ್ಯನಿಗೆ ನಿಯತ್ತು ಅನ್ನೋದೇ ಇಲ್ಲ ಎಂದು ಗರಂ ಆದರು. ಇದನ್ನೂ ಓದಿ: ಕಾಫಿನಾಡ ದತ್ತಜಯಂತಿಗೆ ಅಧಿಕೃತ ಚಾಲನೆ; ಸಿ.ಟಿ.ರವಿ ಮಾಲಾಧಾರಣೆ – ಜಿಲ್ಲಾದ್ಯಂತ ಹೈ ಅಲರ್ಟ್‌

    ವಿಜಯೇಂದ್ರ, ಯಡಿಯೂರಪ್ಪ ಅವರನ್ನು ಟೀಕೆ ಮಾಡಿದ್ರೆ, ಮೋದಿ ಮತ್ತು ಕೇಂದ್ರ ವರಿಷ್ಠರನ್ನು ಟೀಕೆ ಮಾಡಿದಂತೆ‌. ಯಡಿಯೂರಪ್ಪ ಆನೆ ಇದ್ದಂತೆ, ಅವರ ಬಗ್ಗೆ ಮಾತನಾಡುವವರು ಹುಚ್ಚು ನಾಯಿ. ಹುಚ್ಚು ನಾಯಿ ಬಗ್ಗೆ ಮಾತನಾಡುವುದು ಕೂಡ ವೇಸ್ಟ್. ಆ ಹುಚ್ಚು ನಾಯಿ ಬಗ್ಗೆ ಮಾತನಾಡಬಾರದು ಎಂದುಕೊಂಡಿದ್ದೇನೆ ಎಂದು ಟೀಕಾಪ್ರಹಾರ ನಡೆಸಿದರು.

    ಸೋಮಣ್ಣ ಸೋಲಿಗೆ ವಿಜಯೇಂದ್ರ ಕಾರಣ ಎಂದು ಹೇಳುತ್ತಾರೆ. ಸೋಮಣ್ಣ ಸೋಲಲು ವಿಜಯೇಂದ್ರ ಕಾರಣನಾ? ಶಿಕಾರಿಪುರದಲ್ಲಿ ಅವರನ್ನು ಸೋಲಿಸಲು ಕುತಂತ್ರ ಮಾಡಿದವರು ಇಂಥವರೇ. ಗೆದ್ದರೆ ಮಹಾನ್ ನಾಯಕನಾಗುತ್ತಾನೆ ಎಂದು ಸೋಲಿಸಲು ಕುತಂತ್ರ ಮಾಡಿದ್ರು. 2018 ರಲ್ಲಿ ಸಚಿವ ಸ್ಥಾನ ಕೊಡಲಿಲ್ಲ ಎಂದು ಈ ರೀತಿ ಮಾಡ್ತಾ ಇದ್ದಾರೆ. ಯಾವ ಸೀನಿಯಾರಿಟಿ ಇದೆ? ಬೊಗಳೋದೆ ಸೀನಿಯಾರಿಟಿನಾ? ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಬೊಗಳೋಕೆ ಬಿಟ್ಟವರು ಯಾರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಖಾಸಗಿ ದೇವಾಲಯಗಳನ್ನು ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆಗೆ ತೆಗೆದುಕೊಳ್ಳಲ್ಲ: ರಾಮಲಿಂಗಾ ರೆಡ್ಡಿ ಸ್ಪಷ್ಟನೆ

    ಯಾರು ಅವರ ವಿರುದ್ಧ ಬೊಗಳು ಅಂತಾ ಹೇಳಿದ್ದಾರೆ. ಇವರಿಗೆ ಯಾರು ಈ ರೀತಿ ಬೊಗಳು ಅಂತಾ ಹೇಳಿಕೊಟ್ಟಿದ್ದಾರೆ ಅಂತ ಹೇಳಲಿ ಎಂದು ಯತ್ನಾಳ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರಿಗೆ ಟಿಪ್ಪು, ಬಾಬರ್, ಔರಂಗಜೇಬ್, ಘಜ್ನಿ ಮಹಮ್ಮದ್ ಹೆಸರು ಮಾತ್ರ ನೆನಪಿಗೆ ಬರುತ್ತೆ. ಅವರ ಶಾಸಕರು, ಸಚಿವರು ಟಿಪ್ಪುವಿನ ಹೆಸರು ಜಪ ಮಾಡ್ತಾರೆ. ನಿಮ್ಮ ಮನೆಗಳಿಗೆ ಟಿಪ್ಪು ನಿಲಯ, ಘಜ್ನಿ ಔರಂಗಜೇಬನ ನಿಲಯ ಎಂದು ಇಟ್ಟುಕೊಳ್ಳಿ. ಆದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವುದನ್ನು ಖಂಡಿಸುತ್ತೇವೆ ಎಂದು ತಿಳಿಸಿದರು.

    ವೋಟ್‌ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರ ಜಪ ಮಾಡ್ತಾರೆ. ಕುಕ್ಕರ್ ಬ್ಲಾಸ್ಟ್ ಆದಾಗ ಡಿಕೆಶಿ ನಮ್ಮ ಸಹೋದರರು ಅಂತ ಹೇಳ್ತಾರೆ. ಮೈಸೂರು ಮಹರಾಜ, ಸುತ್ತೂರು ಶ್ರೀಗಳು ಸೇರಿದಂತೆ ದಾರ್ಶನಿಕರ ಹೆಸರು ಇಡಿ. ಆದರೆ ವೋಟ್‌ಬ್ಯಾಂಕ್‌ಗಾಗಿ ಈ ರೀತಿ ಮತಾಂಧರ ಹೆಸರು ಜಪ ಮಾಡ್ತಾರೆ. ನಿಮಗೆ ರೈತರ ಬಗ್ಗೆ ಕಾಳಜಿ ಇದ್ದಾರೆ 25 ಸಾವಿರ ರೂಪಾಯಿ ಪರಿಹಾರ ಕೊಡಿ. ನೀವು ಘೋಷಣೆ ಮಾಡಿದ ಭರವಸೆಗಳು ಭರವಸೆಯಾಗಿಯೇ ಉಳಿದಿವೆ. ಈ ಸರ್ಕಾರ ಬಂದಾಗಿನಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಬಿಡುಗಡೆಯಾಗಿಲ್ಲ. ರೈತರು, ನೌಕರರಿಗೆ ನೀವು ನೀಡಿದ ಭರವಸೆ ಈಡೇರಿಲ್ಲ. ಅದ್ದರಿಂದ ನಾವು ಹೊನ್ನಾಳಿಯಲ್ಲಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ – ಪ್ರಿನ್ಸಿಪಾಲ್, ವಾರ್ಡನ್‌, ಡಿ-ಗ್ರೂಪ್‌ ನೌಕರರ ಅಮಾನತಿಗೆ ಸೂಚನೆ

    ಕಾಂಗ್ರೆಸ್ ಔತಣಕೂಟಕ್ಕೆ ಬಿಜೆಪಿ ಶಾಸಕರು ಹೋದ ವಿಚಾರವಾಗಿ ಪ್ರತಿಕ್ರಿಯಿಸಿ, ಡಿಕೆಶಿ ಆಹ್ವಾನ ಮಾಡಿದ್ದಕ್ಕೆ ಔತಣಕೂಟಕ್ಕೆ ಮಾತ್ರ ಹೋಗಿದ್ದಾರೆ. ಔತಣ ಕೂಟಕ್ಕೆ ಹೋಗಿದ್ದಾರೆ ಎಂದರೆ ಪಕ್ಷ ವಿರೋಧಿ ಚಟುವಟಿ ಮಾಡುತ್ತಾರೆ ಎಂದಾ? ಅವರೇ ಹೇಳಿದ್ದಾರಲ್ಲ ಆಹ್ವಾನವಿತ್ತು. ಅದ್ದರಿಂದ ಹೋಗಿ ಬಂದ್ವಿ ಎಂದರಲ್ಲ ಎಂದು ತಿಳಿಸಿದರು.

  • ಮುಸ್ಲಿಮರ ಮೇಲೆ ಅಷ್ಟೊಂದು ಪ್ರೀತಿ ಇದ್ರೆ ನಿಮ್ಮ ಆಸ್ತಿ ಮಾರಿ ಹಣ ಕೊಡಿ: ಸಿಎಂ ವಿರುದ್ಧ ರೇಣುಕಾ ವಾಗ್ದಾಳಿ

    ಮುಸ್ಲಿಮರ ಮೇಲೆ ಅಷ್ಟೊಂದು ಪ್ರೀತಿ ಇದ್ರೆ ನಿಮ್ಮ ಆಸ್ತಿ ಮಾರಿ ಹಣ ಕೊಡಿ: ಸಿಎಂ ವಿರುದ್ಧ ರೇಣುಕಾ ವಾಗ್ದಾಳಿ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ (Siddaramaiah) ನಿಮಗೆ ಮುಸ್ಲಿಮರ ಮೇಲೆ ಅಷ್ಟೊಂದು ಕಾಳಜಿ, ಪ್ರೀತಿ ಇದ್ದಿದ್ದೇ ಆದರೆ ನೀವು ನಿಮ್ಮ ಆಸ್ತಿಯನ್ನು ಮಾರಿ ಅವರಿಗೆ ಹಣ ಕೊಡಿ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (MP Renukacharya) ವಾಗ್ದಾಳಿ ನಡೆಸಿದ್ದಾರೆ.

    ಅಲ್ಪಸಂಖ್ಯಾತರಿಗೆ ಸರ್ಕಾರ 10 ಸಾವಿರ ಕೋಟಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಬಗ್ಗೆ ಬಹಳಷ್ಟು ಗೌರವ ಇದೆ. ಸಿಎಂ ಆದವರು ಎಲ್ಲಾ ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. ನಮಗೆ ಸಂಘರ್ಷದ ಅವಶ್ಯಕತೆ ಇಲ್ಲ. ಆದರೆ ಇಲ್ಲಿ ಸಿದ್ದರಾಮಯ್ಯ ಅವರು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ ಎಂದು ಕಿಡಿಕಾರಿದ್ರು.

    ಸಿದ್ದರಾಮಯ್ಯ ಅವರು ನಾನು ಕುಂಕುಮ ಹಚ್ಚಲ್ಲ, ಕೇಸರಿ ಪೇಟಾ ಹಾಕಲ್ಲ ಅಂತ ಹೇಳುತ್ತಾರೆ. ನಿಮ್ಮ ಹೆಸರಲ್ಲಿ ಸಿದ್ದರಾಮ ಎಂದು ಭಗವಂತನ ಹೆಸರಿಟ್ಟಿದ್ದಾರೆ. ಅಷ್ಟೊಂದು ಕಾಳಜಿ ಪ್ರೀತಿ ಇದ್ರೆ ನಿಮ್ಮ ಮನೆಯಿಂದ ಕೊಡಿ. ನೀವೇನ್ ದೇಶದ ಪ್ರಧಾನ ಮಂತ್ರಿನಾ..?, ಸಿದ್ದರಾಮಯ್ಯ ಇದು ನಿಮ್ಮ ಆಸ್ತಿನಾ..?, ಇಲ್ಲೇನ್ ಪಾಕಿಸ್ತಾನ ಆಡಳಿತ ಮಾಡುತ್ತಾ..?. ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು. ತಕ್ಷಣವೇ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಇದೇ ವೇಳೆ ರೇಣುಕಾಚಾರ್ಯ ಒತ್ತಾಯಿಸಿದರು. ಇದನ್ನೂ ಓದಿ: ನಿಮ್ಗೂ ದೇಶದ ಸಂಪತ್ತಿನಲ್ಲಿ ಪಾಲು ಸಿಗಬೇಕು, ಅನ್ಯಾಯ ಆಗೋಕೆ ಬಿಡಲ್ಲ – ಮುಸ್ಲಿಂ ಸಮಾವೇಶದಲ್ಲಿ ಸಿಎಂ ಅಭಯ

    ಸಿದ್ದರಾಮಯ್ಯ ಅವರೇ ರಾಜ್ಯದಲ್ಲಿ ಭೀಕರ ಬರಗಾಲ ಇದೆ. 30 ಸಾವಿರ ಕೋಟಿ ಹಣ ಬೇಕು. ನೀವು ಎಷ್ಟು ದುಡ್ಡು ಕೊಟ್ರಿ..?. 2 ಸಾವಿರ ಕೊಡ್ತೀರಾ ಅಂತ ಹೇಳಿ 15 ಆಯ್ತು, ಇದೂವರೆಗೆ ಬಿಡುಗಡೆ ಮಾಡಿಲ್ಲ. ಸಿದ್ದರಾಮಯ್ಯ ಅವರೇ ನೀವು ಹಣ ಕೊಡಲೇ ಬೇಕಾದರೇ ನಿಮ್ಮ ಆಸ್ತಿ ಮಾರಿ ಹಣ ಕೊಡಿ. ಇಂದು ಬಹುಸಂಖ್ಯಾತ ಹಿಂದೂಗಳು ನಿಮ್ಮ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ಈ ದೇಶದಲ್ಲಿ ಕೇವಲ ಮೂರು ರಾಜ್ಯದಲ್ಲಿ ಮಾತ್ರವೇ ಅಧಿಕಾರದಲ್ಲಿ ಇದ್ದೀರಿ. ಹೀಗೆ ಮಾಡಿದ್ರೆ ಮುಂದಿನ ಲೋಕಸಭಾ ಚುನಾವಣೆಯ ವೇಳೆ ಜನ ಮತ್ತೆ ನಿಮ್ಮನ್ನು ತಿರಸ್ಕಾರ ಮಾಡ್ತಾರೆ ಎಂದರು.

    ಜಮೀರ್ (Zameer Ahmed Khan) ಅವರು ಸಾಬ್ರಿಗೆ ತಲೆಬಾಗಬೇಕು ಅಂತಾರೆ. ಆದರೆ ಅದು ಪೀಠಕ್ಕೆ ತಲೆ ಬಾಗುವುದಾಗಿದೆ. ಸಿದ್ದರಾಮಯ್ಯ ಅಕ್ಕ-ಪಕ್ಕದಲ್ಲಿ ಭಯೋತ್ಪಾದಕರು ಕುಳಿತುಕೊಳ್ತಾರೆ. ಇದೊಂದು ತಾಜಾ ಉದಾಹರಣೆ. ಭಯೋತ್ಪಾದಕರ ರಾಜ್ಯ ಮಾಡಲು ಯಾವುದೇ ಸಾಧ್ಯವಿಲ್ಲ. ಕರ್ನಾಟಕ ಶಾಂತಿ ಸುವ್ಯವಸ್ಥೆಗೆ ಹೆಸರಾಗಿದೆ. ಹೀಗೆ ಮಾಡಿದ್ರೆ ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಪತನ ಆಗುತ್ತೆ ಎಂದು ರೇಣುಕಾಚಾರ್ಯ ಭವಿಷ್ಯ ನುಡಿದ್ರು.

  • ಯಡಿಯೂರಪ್ಪರನ್ನ ಕಡೆಗಣಿಸಿದ್ದೇ ಬಿಜೆಪಿಗೆ ಶಾಪ: ರೇಣುಕಾಚಾರ್ಯ

    ಯಡಿಯೂರಪ್ಪರನ್ನ ಕಡೆಗಣಿಸಿದ್ದೇ ಬಿಜೆಪಿಗೆ ಶಾಪ: ರೇಣುಕಾಚಾರ್ಯ

    ಬೆಂಗಳೂರು: ಯಡಿಯೂರಪ್ಪ (BS Yediyurappa) ಅವರನ್ನ ಕಡೆಗಣಿಸಿದ್ದೇ ಬಿಜೆಪಿಗೆ ಶಾಪವಾಗಿದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (Renukacharya) ಸ್ವಪಕ್ಷೀಯರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ (BJP Office) ನಡೆಯುತ್ತಿರುವ ಸಭೆಗಳಿಗೆ ಗೈರಾಗುವ ವಿಚಾರಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ನನಗೆ ನೋಟಿಸ್ ಕೊಟ್ಟಿದ್ದಾರೆ, ಅದಕ್ಕೆ ನಾನು ಹೋಗಿಲ್ಲ. ಆ ನೋಟಿಸ್ ವಾಪಸ್ ಪಡೆಯಬೇಕು ಅದಕ್ಕೆ ಸಭೆಗೆ ಹಾಜರಾಗ್ತಿಲ್ಲ. ನಾನು ಏನು ಹೇಳಬೇಕೊ ಅದನ್ನ ಹೇಳಿದ್ದೀನಿ. ಇದರಿಂದ ನನಗೆ ವೈಯಕ್ತಿಕವಾಗಿ ಯಾವುದೇ ಲಾಭ ಇಲ್ಲಾ ನಷ್ಟನೂ ಇಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತರ ಅಪೇಕ್ಷೆಯಂತೆ ಇರುವುದನ್ನ ನೇರವಾಗಿ ಹೇಳಿದ್ದೀನಿ ಎಂದು ಹೇಳಿದ್ದಾರೆ. ಇದನ್ನೂ ಓದಿ: BJP ಸ್ಥಿರ ಸರ್ಕಾರದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ – ತೇಜಸ್ವಿ ಸೂರ್ಯ

    ಯಡಿಯೂರಪ್ಪ ಅವರಂತಹ ನಾಯಕರನ್ನ ಕಡೆಗಣಿಸಿದ್ದಾರೆ, ಇದು ಬಿಜೆಪಿಗೆ ಶಾಪವಾಗಿದೆ. ವರ್ಚಸ್ಸು ಇರುವವರನ್ನ ಬೆಳೆಯೋಕೆ ಬಿಡ್ತಿಲ್ಲ. ವಿಜಯೇಂದ್ರ ಅಂತಹವರನ್ನ ಮೂಲೆಗುಂಪು ಮಾಡ್ತಿದ್ದಾರೆ. ನಾನು ನೇರವಾಗಿಯೇ ಮಾತನಾಡಿದ್ದೇನೆ. ಅದಕ್ಕೆ ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ. ನಾನು ಪಕ್ಷ, ಮೋದಿ, ನಡ್ಡಾ, ಅಮಿತ್ ಶಾ ವಿರುದ್ಧ ಮಾತನಾಡಿಲ್ಲ. ನಾನು ಮಾತಾಡಿರೋದು ಕೆಲ ವ್ಯಕ್ತಿಗಳ ದೌರ್ಬಲ್ಯವನ್ನ ಅಷ್ಟೇ. ಅದನ್ನ ನೇರವಾಗಿ ಖಂಡಿಸಿದ್ದೇನೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಸುಧಾರಿಸಿದ ಹೆಚ್‌ಡಿಕೆ ಆರೋಗ್ಯ – ಐಸಿಯುನಿಂದ ವಾರ್ಡ್‌ಗೆ ಶಿಫ್ಟ್

    ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದೊಂದು ರಾಜಕೀಯ ಪಾರ್ಟಿ ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗಿದೆ. ವಿಪಕ್ಷ ಹಾಗೂ ಅಧ್ಯಕ್ಷ ಸ್ಥಾನ ಆಯ್ಕೆಯಾಗಿಲ್ಲ. ಇದನ್ನ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡಬೇಕು. ಕೆಲವರು ದುರಹಂಕಾರ ಭ್ರಮೆ ಲೋಕದಲ್ಲಿವರಂತೆ ಆಡ್ತಾರೆ. ಅದಕ್ಕೆ ಈ ಪಕ್ಷಕ್ಕೆ ಹಿನ್ನಡೆಯಾಗಿದೆ. ಲೋಕಸಭೆಗೆ ಇದು ಆಗಬಾರದು ಅನ್ನೋದು ನಮ್ಮ ಉದ್ದೇಶ ಎಂದು ಅಭಿಪ್ರಾಯಪಟ್ಟಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಾಸಿಪ್‌ಗಾಗಿಯೇ 4 ಮನೆಗಳಿವೆ – ರೇಣುಕಾಚಾರ್ಯಗೆ ಶಾಸಕ‌ ಯತ್ನಾಳ್‌ ಟಾಂಗ್

    ಗಾಸಿಪ್‌ಗಾಗಿಯೇ 4 ಮನೆಗಳಿವೆ – ರೇಣುಕಾಚಾರ್ಯಗೆ ಶಾಸಕ‌ ಯತ್ನಾಳ್‌ ಟಾಂಗ್

    ಬೆಂಗಳೂರು: ಬಿಜೆಪಿ (BJP) ಕಚೇರಿ ಇರೋದು ಪಕ್ಷ ಸಂಘಟನೆಗೆ ಮಾತ್ರ, ಗಾಸಿಪ್‌ಗಳೆಲ್ಲ ಮನೆಗಳಲ್ಲಿ ಆಗೋದು ಅಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ತಿರುಗೇಟು ನೀಡಿದ್ದಾರೆ.

    ಬಿಜೆಪಿ ಕಚೇರಿ ಗಾಸಿಪ್ ಕೇಂದ್ರ ಎಂಬ ರೇಣುಕಾಚಾರ್ಯ (Renukacharya) ಹೇಳಿಕೆಗೆ ತಿರುಗೇಟು ನೀಡಿದ ಯತ್ನಾಳ್, ಗಾಸಿಪ್‌ಗೆ ಅಂತಾನೇ ನಾಲ್ಕು ಬೇರೆ ಮನೆಗಳಿವೆ. ಅವರ ಮನೆಗಳಲ್ಲಿ ಗಾಸಿಪ್ ಸೃಷ್ಟಿ ಆಗ್ತಾವೆ ಅಲ್ಲ್ಯಾಕೆ ಹೋಗಿ ಗಾಸಿಪ್ ಮಾಡಬೇಕು? ಅಂತ ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಹಲವು ವರ್ಷಗಳ ಹೆತ್ತವರ ಕನಸನ್ನು ಸಾಕಾರಗೊಳಿಸಿದ್ದೀರಿ- ಆನಂದ್ ಮಹೀಂದ್ರಾಗೆ ಪ್ರಜ್ಞಾನಂದ ಥ್ಯಾಂಕ್ಸ್

    ಕೆಲವರು ಪಾರ್ಟಿ ಬಿಡ್ತೀವಿ ಅಂತ ಬೆದರಿಕೆ ಹಾಕೋದು ಸರಿಯಲ್ಲ. ಪಕ್ಷದಿಂದ ಗೆದ್ದಿದ್ದೀವಿ, ಮಂತ್ರಿಗಳಾಗಿದ್ದೀವಿ, ಸೋಲು-ಗೆಲುವು ಸಾಮಾನ್ಯ, ಸೋತಾಗ ಹತಾಶರಾಗೋದು ಬೇಡ. ಏನು ಕರ್ನಾಟಕದಲ್ಲಿ ಬಿಜೆಪಿ ಮುಗಿದೋಯ್ತಾ? ಬಿಜೆಪಿ ಒಳಗೆ ಅಸಮಾಧಾನ ಇರೋದು ನಿಜ. ಆದರೆ ಇಲ್ಲಿದ್ದುಕೊಂಡೇ ಪಕ್ಷದ ಬಗ್ಗೆ ಹೇಳಿಕೆ ಕೊಡೋದು ಸರಿಯಲ್ಲ ಅಂತ ಹೇಳಿದ್ದಾರೆ.

    ಇನ್ನೂ ರೇಣುಕಾಚಾರ್ಯ ಪಕ್ಷ ಬಿಡ್ತಾರೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಅವರು ಪಕ್ಷ ಬಿಡೋದಿಲ್ಲ, ಯಾಕೋ ಅವರ ಮನಸ್ಸಿಗೆ ಬೇಜಾರಾಗಿದೆ. ಹೈಕಮಾಂಡ್ ಎಲ್ಲ ಗಮನಿಸ್ತಿದೆ, ಖಂಡಿತಾ ಒಳ್ಳೆಯ ದಿನ ಬರುತ್ತೆ. ಗಡಿಬಿಡಿ ಯಾಕೆ? ಜನ ರೆಸ್ಟ್ ಕೊಟ್ಟಿದ್ದಾರೆ ಸ್ವಲ್ಪ ದಿನ ರೆಸ್ಟ್ ಮಾಡಲಿ ಅಂತ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: AsiaCup 2023, ವಿಶ್ವಕಪ್‌ ಟೂರ್ನಿಗೆ ಹೊಸ ಜೆರ್ಸಿ ಅನಾವರಣ – ಮಾಸ್‌ ಲುಕ್‌ನಲ್ಲಿ ಪಾಕ್‌ ತಂಡ

    ರೇಣುಕಾಚಾರ್ಯ ಲೋಕಸಭಾ ಟಿಕೆಟ್ ಕೇಳಿದ್ರಲ್ಲಿ ತಪ್ಪಿಲ್ಲ. ದಾವಣಗೆರೆ ಲೋಕಸಭೆಗೆ ಅಲ್ಲಿನ ಎಂಪಿ ನಿಲ್ಲಲ್ಲ ಅಂತಿದ್ದಾರೆ. ಹಾಗಾಗಿ ಟಿಕೆಟ್ ಕೇಳಿದ್ದಾರೆ, ಅದರಲ್ಲಿ ತಪ್ಪೇನಿದೆ? ಅವರಿಗೆ ಟಿಕೆಟ್‌ ಕೇಳುವ ಅಧಿಕಾರ, ಹಕ್ಕೂ ಎರಡೂ ಇದೆ. ಟಿಕೆಟ್‌ ಸಿಗುತ್ತೆ ಅನ್ನೋದಾದ್ರೆ ಹೋರಾಟ ಮಾಡಲಿ ಅಂತಾ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೇಟ್ ಆದ್ರೂ ಲೇಟೆಸ್ಟ್ ಆಗಿ ಒಂದೆರಡು ತಿಂಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ: ರಾಜೂ ಗೌಡ

    ಲೇಟ್ ಆದ್ರೂ ಲೇಟೆಸ್ಟ್ ಆಗಿ ಒಂದೆರಡು ತಿಂಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ: ರಾಜೂ ಗೌಡ

    ಯಾದಗಿರಿ: ಬಿಜೆಪಿ (BJP) ವಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಸಚಿವ ರಾಜೂಗೌಡ (Raju Gowda) ಯಾದಗಿರಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಹೈಕಮಾಂಡ್‍ಗೆ ರಾಜ್ಯ ನಾಯಕರ ಮೇಲೆ ನಂಬಿಕೆಯಿದೆ. ಲೇಟ್ ಆಗಿ ಆದ್ರೂ ಲೇಟೆಸ್ಟ್ ಆಗಿ ಒಳ್ಳೆಯ ನಾಯಕನ ಆಯ್ಕೆಗಾಗಿ ಆಲೋಚನೆ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

    ಒಂದೆರಡು ತಿಂಗಳಲ್ಲಿ ವಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷನ ಆಯ್ಕೆ ಮಾಡ್ತಾರೆ ಎಂದ ರಾಜೂಗೌಡ, ಬಾಂಬೆ ಬಾಯ್ಸ್ ಘರ್ ವಾಪ್ಸಿ ವಿಚಾರಕ್ಕೂ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಚರ್ಚೆ ಮಾಡಿದಾಗ ಪಕ್ಷ ಬಿಟ್ಟು ಹೋಗಲ್ಲ ಎಂದಿದ್ದಾರೆ. ಈಗ ಯಾರು ಹೋಗ್ತಿನಿ ಅಂತ ಹೇಳಂಗಿಲ್ಲ, ಅವರ ಮನಸ್ಸಿನಲ್ಲಿ ಇದ್ದದ್ದನ್ನ ಮಾಡ್ತಾರೆ. ನಾವು ಸ್ನೇಹಿತರಾಗಿ ಕೆಲವು ಸಲಹೆ ಕೊಡ್ತಿವಿ ಅಷ್ಟೇ. ಪಕ್ಷದಲ್ಲಿ ಅಸಮಾಧಾನ ಆಗಿದ್ರಿಂದ ಸ್ವಲ್ಪ ಕೋಪಗೊಂಡಿದ್ದು ನಿಜ ಎಂದಿದ್ದಾರೆ. ನೆಗಡಿ ಆಗೇತಿ ಅಂತ ಮೂಗು ಕೋಯ್ಕಂಡ್ರೆ ತಪ್ಪು. ಕಾದು ನೋಡೋಣ ಯಾರು ಯಾವಾಗ ಹೋಗ್ತಾರೆ. ನಮಗೂ ಅಧಿಕಾರ ಸಿಗುತ್ತೆ ಅಂತ ಬಾಂಬೆ ಟಿಂ ಸೇರಿಸ್ಕೊಂಡಿದ್ದೇವೆ. ಈಗ ಅವರು ಹೋಗ್ತಿದ್ದಾರೆ ಅಂದ್ರೆ ಯಾಕೆ ಹೋಗ್ತಾರೆ ಕೇಳೋಣ ಎಂದರು. ಇದನ್ನೂ ಓದಿ: ಕಾಣೆಯಾಗಿದ್ದ ಹಸ್ಕಿ ತಳಿಯ ಕುರುಡು ಶ್ವಾನ ಪತ್ತೆ ಹಚ್ಚಿದ ಪೊಲೀಸರು – ಸಂತಸ ಹಂಚಿಕೊಂಡ ಕುಟುಂಬ

    ಇನ್ನೂ ರೇಣುಚಾರ್ಯ (Renukacharya) ಕಾಂಗ್ರೆಸ್ ಸೇರ್ಪಡೆ ವದಂತಿ ವಿಚಾರಕ್ಕೆ ವ್ಯಂಗ್ಯವಾಡಿದ ರಾಜೂಗೌಡ, ನಮ್ಮ ರೇಣುಕಾ ಮುತ್ಯಾ ಏನ್ ಕಾಂಗ್ರೆಸ್ (Congress) ಸೇರೋದಿಲ್ಲ. ನಮ್ಮ ಮುತ್ಯಾಗ ಸ್ವಲ್ಪ ಭೇಟಿಯಾಗುವ ಚಾಳಿ ಇದೆ. ಅದಕ್ಕಾಗಿ ಕಾಂಗ್ರೆಸ್ ನಾಯಕರನ್ನ ಭೇಟಿ ಆಗಿದ್ದಾರೆ ಅಷ್ಟೇ. ಇದಕ್ಕಾಗಿ ನಾನು ಇವತ್ತೇ ಹೇಳ್ತಿದ್ದೀನಿ ರೈತರ ಹೊಲಗಳಿಗೆ ನೀರು ಹರಿಸೋ ವಿಚಾರವಾಗಿ ನಾನು ಸಿಎಂ ಹಾಗೂ ಡಿಸಿಎಂ ಭೇಟಿಯಾಗಿ ರೈತರಿಗೆ ನೀರು ಹರಿಸುವ ಬಗ್ಗೆ ಚರ್ಚಿಸ್ತೀನಿ. ಕಾಂಗ್ರೆಸ್ ನಾಯಕರನ್ನ ಭೇಟಿಯಾದ ರಾಜುಗೌಡ ಅಂತಾ ಬ್ರೇಕಿಂಗ್ ಮಾಡ್ಬೇಡಿ ಎಂದು ನಗೆಯಾಡಿದ್ರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೈತಿಕ ಹೊಣೆ ಹೊತ್ತು ಕಟೀಲ್‌ ರಾಜೀನಾಮೆ ನೀಡಬೇಕು: ರೇಣುಕಾಚಾರ್ಯ

    ನೈತಿಕ ಹೊಣೆ ಹೊತ್ತು ಕಟೀಲ್‌ ರಾಜೀನಾಮೆ ನೀಡಬೇಕು: ರೇಣುಕಾಚಾರ್ಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ (Nalin Kumar Kateel) ರಾಜೀನಾಮೆ ನೀಡಬೇಕು ಎಂದು ಮಾಜಿ ಶಾಸಕ ರೇಣುಕಾಚಾರ್ಯ (Renukacharya) ಹೇಳಿದ್ದಾರೆ.

    ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸರಣಿ ಟ್ವೀಟ್‌ ಮಾಡಿರುವ ಅವರು ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಾವೆಲ್ಲ ಪಕ್ಷದ ನಾಯಕರು ಕಾರ್ಯಕರ್ತರನ್ನು ಜೋಡಣೆ ಮಾಡಬೇಕು ಎಂದು ಹೇಳಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?
    ಬಿಜೆಪಿ (BJP) ರಾಜ್ಯದ ಅಧ್ಯಕ್ಷರಿಗೆ ವಿನಂತಿ ಮಾಡುತ್ತೇನೆ ನಿಮ್ಮ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದೆ. ತಾವು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಮೋದಿಜಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಾವೆಲ್ಲ ಪಕ್ಷದ ನಾಯಕರು ಕಾರ್ಯಕರ್ತರನ್ನು ಜೋಡಣೆ ಮಾಡಬೇಕು. ಇದನ್ನೂ ಓದಿ: ಓವರ್‌ಟೇಕ್ ಅಲ್ಲ, ಬೊಲೆರೋ ಟಯರ್ ಸ್ಫೋಟದಿಂದ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ – KSRTC ಸ್ಪಷ್ಟನೆ

    ಬಿಜೆಪಿ ಪಕ್ಷವನ್ನು ಹಗಲು ರಾತ್ರಿ ಕಟ್ಟಿದ ಹಿರಿಯರಾದ ಯಡಿಯೂರಪ್ಪ, ದಿವಂಗತ ಅನಂತ ಕುಮಾರ್, ಜಗದೀಶ್ ಶೆಟ್ಟರ್, ಈಶ್ವರಪ್ಪ ನವರದ್ದು ಬಹುದೊಡ್ಡ ಪಾತ್ರವಿದೆ. ಅಂಥವರನ್ನು ಚುನಾವಣಾ ಸಮಯದಲ್ಲಿ ಕಡೆಗಣಿಸಿದ್ದು. ಬಿಜೆಪಿಗೆ ನಷ್ಟವಾಯಿತು.

     

    ಭಾರತೀಯ ಜನತಾ ಪಕ್ಷ ನನಗೆ ತಾಯಿ ಸಮಾನ. ನನಗೆ ಎಲ್ಲಾ ಸ್ಥಾನ ಮಾನ ನೀಡಿರುವುದು ಬಿಜೆಪಿ. ಪಕ್ಷಕ್ಕೆ ಹೀನಾಯ ಸೋಲಾದಾಗ ನಾವೆಲ್ಲರೂ ಸತ್ಯಸಂಗತಿಗಳ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಲೇಬೇಕು. ಜನತಾ ನ್ಯಾಯಾಲಯದಲ್ಲಿ ಜನರು ತೀರ್ಪು ನೀಡಿದ್ದಾರೆ ಅದಕ್ಕೆ ನಾವು ತೆಲೆಬಾಗಲೇಬೇಕು. ಅದೇ ಜನಸಾಮಾನ್ಯರು ತಿಳಿಸಿದ ಅಭಿಪ್ರಾಯವನ್ನು ನಾನು ತಿಳಿಸುತ್ತಿದ್ದೇನೆ.

  • ರಾಜಕೀಯದಿಂದ ನಿವೃತ್ತಿ ಘೋಷಿಸಿದ ರೇಣುಕಾಚಾರ್ಯ

    ರಾಜಕೀಯದಿಂದ ನಿವೃತ್ತಿ ಘೋಷಿಸಿದ ರೇಣುಕಾಚಾರ್ಯ

    ದಾವಣಗೆರೆ : ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಪರಾಜಿತ ಅಭ್ಯರ್ಥಿ ಎಂ.ಪಿ ರೇಣುಕಾಚಾರ್ಯ (MP Renukacharya) ಘೋಷಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಕೆಲಸ, ಕೋವಿಡ್‍ನಲ್ಲಿ ಜೀವ ಹಂಗು ತೊರೆದರೂ ಜನರು ಸೋಲಿಸಿದರು. ರಾಜಕೀಯದಿಂದ ನಿವೃತ್ತಿ ಪಡೆದು, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಚುನಾವಣೆಗೆ (Election) ಬರುವುದಿಲ್ಲ ಎಂದು ಹೇಳಿದರು.

    ಒಂದು ಸುತ್ತಿನಲ್ಲೂ ಮುನ್ನಡೆ ಸಾಧಿಸದೆ ಇರುವುದಕ್ಕೆ ರೇಣುಕಾಚಾರ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಕ್ಷೇತ್ರದ ಜನರಿಗೆ ಹಗಲಿರುಳು ಕೆಲಸ ಮಾಡಿದೆ. ಆದರೂ ಈ ರೀತಿ ಸೋಲು ಆಯ್ತಲ್ಲ ಅಂತ ನೋವಿನಿಂದ ಕಣ್ಣೀರು ಹಾಕಿದರು. ಇದನ್ನೂ ಓದಿ: ಸಿದ್ಧಾಂತದ ಸೋಲಲ್ಲ, ವೈಯಕ್ತಿಕ ಸೋಲು: ಸಿ.ಟಿ ರವಿ

    ರೇಣುಕಾಚಾರ್ಯ ನಿವಾಸದ ಮುಂದೆ ಜಮಾಯಿಸಿದ ಅಭಿಮಾನಿಗಳು ಜಮಾಯಿಸಿ ರೇಣುಕಾಚಾರ್ಯಗೆ ಧೈರ್ಯವನ್ನು ತುಂಬಿದರು. ಈ ವೇಳೆ ಹರಿಹರದ ಶಾಸಕ ಬಿಪಿ ಹರೀಶ್ ಕೂಡ ಎಂಪಿ ರೇಣುಕಾಚಾರ್ಯಗೆ ಸಮಾಧಾನ ಮಾತುಗಳನ್ನಾಡಿದರು. ಇದನ್ನೂ ಓದಿ: ದಾವಣಗೆರೆಯಲ್ಲಿ 8ರಲ್ಲಿ 6 ಕಾಂಗ್ರೆಸ್ ತೆಕ್ಕೆಗೆ – ಬಿಜೆಪಿಗೆ ಹೀನಾಯ ಸೋಲು

  • ಸಿಎಂ ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ಬಿಜೆಪಿ ಕಚೇರಿ ಮೇಲೆ ದಾಳಿ

    ಸಿಎಂ ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ಬಿಜೆಪಿ ಕಚೇರಿ ಮೇಲೆ ದಾಳಿ

    ಬೆಂಗಳೂರು: ನೀತಿ ಸಂಹಿತೆ ವಿಚಾರವಾಗಿ ರಾಜ್ಯ ಚುನಾವಣಾಧಿಕಾರಿಗಳು (Election Officers) ಬಿಜೆಪಿಗೆ (BJP) ಶಾಕ್ ನೀಡಿದ್ದಾರೆ. ಮಲ್ಲೇಶ್ವರಂನಲ್ಲಿರುವ ಪಕ್ಷದ ಮುಖ್ಯ ಕಚೇರಿಯಲ್ಲಿ ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸುದ್ದಿಗೋಷ್ಠಿ ನಡೆಸುತ್ತಿದ್ದ ಹೊತ್ತಲ್ಲೇ ದಾಳಿ ನಡೆಸಿದ 15 ಅಧಿಕಾರಿಗಳ ತಂಡ ಕೇಸರಿ ತೋರಣಗಳನ್ನು ಕಿತ್ತು ಹಾಕಿದ್ದಾರೆ.

    ಚುನಾವಣೆ (Election) ಹೊತ್ತಲ್ಲಿ ಕೇಸರಿ ತೋರಣ ಕಟ್ಟಿ ಸಂಭ್ರಮಕ್ಕೆ ಮುಂದಾಗಿದ್ದ ಬಿಜೆಪಿ ಮುಖಂಡರಿಗೆ ಅಧಿಕಾರಿಗಳ ದಾಳಿ ಮುಜುಗರ ತಂದಿದೆ. ಮಲ್ಲೇಶ್ವರಂನಲ್ಲಿ (Malleshwaram) ಉದ್ಘಾಟನೆಗೊಂಡಿದ್ದ ಬಿಜೆಪಿಯ ಮಾಧ್ಯಮ ಕೇಂದ್ರದಲ್ಲಿ ಸಚಿವರೊಂದಿಗೆ ಸಿಎಂ ಸುದ್ದಿಗೋಷ್ಠಿಯಲ್ಲಿ ತೊಡಗಿದ್ದ ವೇಳೆಯಲ್ಲೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಚೇರಿಗೆ ಕಟ್ಟಿದ್ದ ಕೇಸರಿ ತೋರಣಗಳನ್ನು ತೆರವುಗೊಳಿಸಿದ್ದಾರೆ. ಇದನ್ನೂ ಓದಿ: ಜಗತ್ತಿಗೆ ಶಾಕ್‌ ಕೊಟ್ಟ OPEC – ಕಚ್ಚಾ ತೈಲ ಬೆಲೆ ದಿಢೀರ್‌ ಭಾರೀ ಏರಿಕೆ

    ಇಷ್ಟೇ ಅಲ್ಲದೇ ಚುನಾವಣಾಧಿಕಾರಿಗಳು ಬಿಜೆಪಿಯ ಕೃಷ್ಣಯ್ಯ ಶೆಟ್ಟಿಯವರ ಮನೆಯಲ್ಲಿ ಸಂಗ್ರಹಿಸಿದ್ದ ಆಹಾರದ ಕಿಟ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಭಾನುವಾರ ಅವಧಿ ಮೀರಿ ಸಭೆ ನಡೆಸಿದ್ದ ರೇಣುಕಾಚಾರ್ಯ (Renukacharya) ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೊಪ್ಪಳದ ಕಾರಟಗಿಯಲ್ಲಿ (Karatagi) ಬಿಜೆಪಿಯಿಂದ ಆಯೋಜಿಸಿದ್ದ ಬಾಡೂಟಕ್ಕೆ ಅಧಿಕಾರಿಗಳು ದಾಳಿ ನಡೆಸಿ ತಡೆದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಮೀಸಲಾತಿ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ – ಕಾರಜೋಳ