Tag: Renukacharaya

  • ಕಾಂಗ್ರೆಸ್‍ಗೆ ನಾಚಿಕೆಯಾಗಬೇಕು ಪಕ್ಷದ ಅಧ್ಯಕ್ಷ ಗೂಂಡಾಗಿರಿ ಮಾಡುತ್ತಿದ್ದಾರೆ: ರೇಣುಕಾಚಾರ್ಯ

    ಕಾಂಗ್ರೆಸ್‍ಗೆ ನಾಚಿಕೆಯಾಗಬೇಕು ಪಕ್ಷದ ಅಧ್ಯಕ್ಷ ಗೂಂಡಾಗಿರಿ ಮಾಡುತ್ತಿದ್ದಾರೆ: ರೇಣುಕಾಚಾರ್ಯ

    ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು. ಅವರ ಪಕ್ಷದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಸದನದಲ್ಲಿ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಆಡಳಿತ ಪಕ್ಷಕ್ಕೆ ಕಾಂಗ್ರೆಸ್ ಸಲಹೆ ಕೊಡಬಹುದಿತ್ತು. ರಾಜ್ಯಗಳ ಸಮಸ್ಯೆಗಳ ಬಗ್ಗೆ ಸಿಎಂಗೆ ಸಲಹೆ ಕೊಡಲು ಕಾಂಗ್ರೆಸ್‍ಗೆ ಅವಕಾಶವಿತ್ತು. ಆದರೆ ನಿನ್ನೆಯಿಂದ ಸದನ ಕಲಾಪವನ್ನು ಬಲಿ ತೆಗೆದುಕೊಂಡಿದ್ದಾರೆ. ಇದನ್ನೆಲ್ಲಾ ರಾಜ್ಯದ ಜನ ನೋಡುತ್ತಿದ್ದಾರೆ ಮುಂದೆ ತಕ್ಕ ಪಾಠ ಕಲಿಸುತ್ತಾರೆ. ಡಿಕೆಶಿ ನಿನ್ನೆ ಸದನದಲ್ಲಿ ಗೂಂಡಾಗಿರಿ ಮಾಡಿದ್ದಾರೆ. ರಾಜ್ಯದ ಜನ ನಿಮ್ಮನ್ನು ಮುಂದೆ ಸಿಎಂ ಮಾಡಿದ್ರೆ, ಮತ್ತೆ ನೀವು ಗೂಂಡಾಗಿರಿ ಮಾಡ್ತೀರಾ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಇಡೀ ದೇಶದಲ್ಲಿ ರಾಷ್ಟ್ರ ಧ್ವಜ ಹಾರಿಸಬೇಕು ಅಂತ ಹೊರಟ ನಮ್ಮ ಪಕ್ಷ ಇವತ್ತು ಬುದ್ಧಿ ಹೇಳಿಸಿಕೊಳ್ಳಬೇಕಾಗಿದೆ: ಮಾಧುಸ್ವಾಮಿ

    ಏಕಾಏಕಿ ಈಶ್ವರಪ್ಪ ವಿರುದ್ಧ ಡಿಕೆಶಿ ಗೂಂಡಾಗಿರಿ ಮಾಡಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಗೂಂಡಾಗಿರಿ ಮಾಡಿದರೆ ಹೇಗೆ? ಈ ಹಿಂದೆ ಕಾಂಗ್ರೆಸ್ ಭಾರತ್ ಮಾತಾ ಕಿ ಜೈ ಎನ್ನುತ್ತಿರಲಿಲ್ಲ. ನಮ್ಮ ಮೇಲೆ ಗುಂಡು ಹಾರಿಸ್ತಾಯಿದ್ರು. ಹುಬ್ಬಳ್ಳಿಯಲ್ಲಿ ಹಿಂದೂಗಳ ಮೇಲೆ ಗುಂಡು ಹಾರಿಸಿದ್ದರು. ಈಶ್ವರಪ್ಪ ಮೊನ್ನೆ ಕೊಟ್ಟಂತಹ ಹೇಳಿಕೆಯನ್ನು ಕಾಂಗ್ರೆಸ್‍ನವರು ತಿರುಚಿದ್ದಾರೆ. ಇದು ನಿಮಗೆ ಶೋಭೆ ತರಲ್ಲ. ಗೂಂಡಾಗಿರಿ ಮಾಡಿದರೆ ದೇಶದಲ್ಲಿ ನೆಲೆ ಸಿಗುವುದಿಲ್ಲ. 2023ಕ್ಕೆ ಸಂಪೂರ್ಣವಾಗಿ ಜನ ಕಾಂಗ್ರೆಸ್‍ನ್ನು ತಿರಸ್ಕಾರ ಮಾಡುತ್ತಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ನಮಗೆ ಆಜಾದಿ ಬೇಕು ಅಂತಾ ಘೋಷಣೆ ಕೂಗ್ತಿಯಾ? ನಿನ್ನನ್ನು ಅಟ್ಟಾಡಿಸಿ ಹೊಡೀತಿವಿ: ಸೀಮಾ ಇನಾಂದಾರ್‌ಗೆ ಜೀವ ಬೆದರಿಕೆ

  • ಹಿಜಬ್ – ಕೇಸರಿ ಸಂಘರ್ಷದ ಬದಲು ಸಾಮರಸ್ಯ ಕಾಪಾಡಿಕೊಳ್ಳಿ: ರೇಣುಕಾಚಾರ್ಯ

    ಹಿಜಬ್ – ಕೇಸರಿ ಸಂಘರ್ಷದ ಬದಲು ಸಾಮರಸ್ಯ ಕಾಪಾಡಿಕೊಳ್ಳಿ: ರೇಣುಕಾಚಾರ್ಯ

    ನವದೆಹಲಿ: ಕರ್ನಾಟಕ ಶಾಂತಿಗೆ ಹೆಸರಾದ ರಾಜ್ಯ. ರಾಜ್ಯದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಲಾಗುತ್ತಿದೆ ಹೊನ್ನಾಳಿಯಲ್ಲೂ ಇಂತಹ ಕಹಿ ಘಟನೆ ನಡೆದಿದೆ. ನಾನು ಮಧ್ಯಪ್ರವೇಶ ಮಾಡಿ ಶಾಂತಿ ಕಾಪಡಲು ಮನವಿ ಮಾಡಿದೆ. ಹಿಜಬ್-ಕೇಸರಿ ಸಂಘರ್ಷದ ಬದಲು ಸಾಮರಸ್ಯ ಕಾಪಾಡಿಕೊಳ್ಳಲು ಮನವಿ ಮಾಡಿದ್ದೇನೆ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.

    ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮವಸ್ತ್ರ ಧರಿಸಲು ಹಿಂದೆ ಕೇರಳ ಹೈಕೋರ್ಟ್ ಹೇಳಿದೆ. ನಮ್ಮ ಸರ್ಕಾರ ಕೂಡಾ ಹೇಳಿದೆ. ಆ ಆದೇಶಗಳನ್ನು ನಾವು ಪಾಲಿಸಬೇಕು. ಹೈಕೋರ್ಟ್ ಹೇಳುವುದನ್ನು ನಾವು ಕೇಳಬೇಕು. ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರ ಅಸ್ಥಿರ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: Karnataka Hijab Row: ಹೈಸ್ಕೂಲ್‌, ಕಾಲೇಜುಗಳಿಗೆ 3 ದಿನ ರಜೆ

    ಒಟ್ಟಾಗಿ ಎಲ್ಲರೂ ಹೋಗೊಣ. ಅಲ್ಪ ಅಸಂಖ್ಯಾತ ಮುಖಂಡರು ಇಂತಹ ವಿಚಾರಗಳಿಗೆ ಪ್ರಚೋದನೆ ನೀಡಬಾರದು. ಕಾಲೇಜು ಆವರಣದಲ್ಲಿ ಧಾರ್ಮಿಕ ಸಮವಸ್ತ್ರ ಬೇಡ. ಹೀಗಾಗಿ ಎರಡು ಸಮುದಾಯದ ವಿದ್ಯಾರ್ಥಿಗಳು ನ್ಯಾಯಾಲಯ ಮತ್ತು ಸರ್ಕಾರ ಆದೇಶ ಪಾಲಿಸಬೇಕು ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಶಿವಮೊಗ್ಗ ಕಾಲೇಜಿನಲ್ಲಿ ಕೇಸರಿ ಧ್ವಜ ಹಾರಾಟ, ಕಲ್ಲು ತೂರಾಟ – ನಿಷೇಧಾಜ್ಞೆ ಜಾರಿ

    ಮಂತ್ರಿಗಳಾದ ಸುನಿಲ್ ಕುಮಾರ್, ಈಶ್ವರಪ್ಪ ಈ ಬಗ್ಗೆ ಯಾವುದೇ ಪ್ರಚೋದನೆ ನೀಡಿಲ್ಲ. ಸರ್ಕಾರದ ನಿಯಮ ಪಾಲಿಸಲು ಹೇಳಿದ್ದಾರೆ. ಆದರೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರು ಮೂಲಭೂತ ಹಕ್ಕುಗಳು ಎಂದು ಪ್ರಚೋದನೆ ನೀಡುತ್ತಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣ ಕಾಂಗ್ರೆಸ್ ಮಾಡುತ್ತಿದೆ. ಹೀಗೆ ಮಾಡಿ ಕಾಂಗ್ರೆಸ್ ನಶಿಸಿ ಹೋಗಿದೆ. ಕರ್ನಾಟಕದಲ್ಲೂ ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ರೆ ಕಾಂಗ್ರೆಸ್ ಅಡ್ರೇಸ್ ಇಲ್ಲದ ಹಾಗೇ ಹೋಗುತ್ತದೆ ಎಂದು ಗುಡುಗಿದರು.