Tag: Renuka Swamy

  • ದರ್ಶನ್ ಜಾಮೀನು ಅರ್ಜಿ: ಇವತ್ತಾದರೂ ಸಿಗತ್ತಾ ಬೇಲ್?

    ದರ್ಶನ್ ಜಾಮೀನು ಅರ್ಜಿ: ಇವತ್ತಾದರೂ ಸಿಗತ್ತಾ ಬೇಲ್?

    ಳ್ಳಾರಿ ಜೈಲಿನಲ್ಲಿ ಇದ್ದುಕೊಂಡು ಜಾಮೀನಿಗಾಗಿ ಕಾಯುತ್ತಿರುವ ದರ್ಶನ್ (Darshan) ಜಾಮೀನು (Bail) ಅರ್ಜಿ ವಿಚಾರಣೆ ಇಂದು ಮುಂದುವರೆಯಲಿದೆ. ಇಂದೂ ಸಹ ವಾದ ಮುಂದುವರೆಸಲಿದ್ದಾರೆ ದರ್ಶನ್ ಪರ ಹಿರಿಯ ವಕೀಲ ಸಿವಿ ನಾಗೇಶ್. ನಿನ್ನೆ ಚಾರ್ಜ್ ಶೀಟ್ ನಲ್ಲಿನ ಲೋಪದೋಷಗಳ ಬಗ್ಗೆ ಬೆಳಕು ಚೆಲ್ಲಿದ್ದರು ಸಿವಿ ನಾಗೇಶ್, ಸ್ವ ಇಚ್ಚಾ ಹೇಳಿಕೆ , ಸ್ಪಾಟ್ ಮಹಜರ್, ಸೀಜ್ ಮಾಡಿದ ಐಟಮ್ ಗಳಿಗೆ ಸಾಮ್ಯತೆಯಿಲ್ಲ ಅಂತ ಕೋರ್ಟ್ ಗಮನಕ್ಕೆ ತಂದಿದ್ದರು. ತನಿಖಾಧಿಕಾರಿ ಸಾಕ್ಷಿಗಳನ್ನ ಸೃಷ್ಟಿಸಿದ್ದಾರೆ. ಇದೊಂದು ವರ್ಸ್ಟ್ ಚಾರ್ಜ್ ಶೀಟ್ ಅಂತಾ ವಾದಿಸಿದ್ದ ಸಿವಿ ನಾಗೇಶ್ ಅವರು, ಇಂದು ವಾದ ಕಂಟಿನ್ಯೂ ಮಾಡೋದಾಗಿ ಹೇಳಿದ್ದರು. ಹೀಗಾಗಿ ಇಂದು ಮದ್ಯಾಹ್ನ ೧೨.೩೦ ಕ್ಕೆ ತಮ್ಮ ವಾದ ಮುಂದುವರೆಸಲಿದ್ದಾರೆ ದರ್ಶನ್ ಪರ ವಕೀಲರು. ಸಿವಿ ನಾಗೇಶ್ ರ ವಾದ ಮುಗಿದ ಬಳಿಕ ತಮ್ಮ ವಾದ ಮಂಡಿಸಲಿದ್ದಾರೆ ಎಸ್ ಪಿಪಿ ಪ್ರಸನ್ನಕುಮಾರ್.

    ಕೋರ್ಟಿನಲ್ಲಿ ನಿನ್ನೆ ನಡೆದದ್ದು ಏನು?

    ವೇಳೆ ಪ್ರಕರಣದ ತನಿಖೆ (Investigation) ತುಂಬಾ ಕೆಟ್ಟದ್ದಾಗಿ ನಡೆದಿದೆ. ಸುಪ್ರೀಂ ಕೋರ್ಟ್ 2 ತೀರ್ಪು ಉಲ್ಲೇಖಿಸಿ, ಇಡೀ ಪ್ರಕರಣ ಕಪೋಲಕಲ್ಪಿತ ಕಥೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ತನಿಖಾಧಿಕಾರಿಯೇ ಸೃಷ್ಟಿಸಿದ್ದಾರೆ ಎಂದು ಪ್ರಬಲ ವಾದ ಮಂಡಿಸಿದರು. ವಾದ ಆರಂಭಿಸುತ್ತಿದ್ದಂತೆ ಮೊದಲು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು. ವಿಚಾರಣೆ ಸಂದರ್ಭದಲ್ಲಿ ಮಾಧ್ಯಮಗಳು ಟ್ರಯಲ್ ಮಾಡಿದ್ದಾವೆ. ಸ್ವಇಚ್ಚಾ ಹೇಳಿಕೆ, ಫೋಸ್ಟ್ ಮಾರ್ಟ್ಂ ರಿಪೋರ್ಟ್, ವಿಟ್ನೆಸ್ ಅನ್ನು ಬಿತ್ತರ ಮಾಡಿವೆ. ತನಿಖೆಯ ಪ್ರತೀ ಹಂತದಲ್ಲೂ ಕೂಡ ಟ್ರಯಲ್ ಮಾಡಿದ್ದಾವೆ. ಜೀವಾವಧಿ ಅಥವಾ ಸಮನಾಂತರ ಶಿಕ್ಷೆ ಹೊಂದಿರೋ ಪ್ರಕರಣ ಇದು ಇದನ್ನು ವಿಧಿಸೋದು ಬಾಕಿ ಇದೆ. ಇನ್ನೂ ಕೋರ್ಟ್ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ಹೇಳಿದರು.

    ಎಸ್ಪಿಪಿ (SPP) ಅತ್ಯುತ್ತಮ ತನಿಖೆ ಅಂತ ಕೋರ್ಟ್ಗೆ ಹೇಳಿದ್ದಾರೆ. ಆದರೆ ಇದು ನನ್ನ ಪ್ರಕಾರ ತುಂಬಾ ಕೆಟ್ಟದಾದ ತನಿಖೆ ಎನ್ನುತ್ತಾ ಸುಪ್ರೀಂ ಕೋರ್ಟ್ನ ಎರಡು ತೀರ್ಪುಗಳ ಉಲ್ಲೇಖಿಸಿ ವಾದ ಮಂಡಿಸಿದರು. ವೇಳೆ ತೀರ್ಪಿನ ಪ್ರತಿಯನ್ನು ಎಸ್ಪಿಪಿ ಕೇಳಿದರು. ಅದಕ್ಕೆ ಗರಂ ಆದ ಸಿ.ವಿ ನಾಗೇಶ್, ನಾನು ಕೆಲಸ ಮಾಡಿ ತಂದಿರೋ ತೀರ್ಪು ಇದು. ನಾನು ನಿಮಗೆ ಪ್ರತಿ ಕೊಡೋಲ್ಲ, ಪ್ರಸನ್ನ ನೀವೇ ಹುಡುಕಿ ಎಂದರು.

    ರೇಣುಕಾ ಮುಖ ನಾಯಿ ಕಚ್ಚಿ ತಿಂದಿದೆ.
    ಮೀಡಿಯಾದಲ್ಲಿ ದಿನಾ ಟ್ರಯಲ್ ಮಾಡಿ ಪ್ರಚಾರ ನೀಡುತ್ತಾ ಇದ್ದಾರೆ. ಮೀಡಿಯಾದಲ್ಲಿ ಆರೋಪಿಗಳ ಸ್ವ ಇಚ್ಛಾ ಹೇಳಿಕೆ ಬಂದಿದೆ. ಅಲ್ಲದೇ ಮೃತ ದೇಹದ ಫೋಟೋ ತೋರಿಸಿದ್ದಾರೆ. ಆತನ ಮುಖವನ್ನು ನಾಯಿ ತಿಂದಿದೆ, ಅಂತ ವೈದ್ಯರು ಸ್ಪಷ್ಟ ಪಡಿಸಿದ್ದಾರೆ. ಆದರೆ ಮಾಧ್ಯಮದಲ್ಲಿ ಇದನ್ನೇ ಕ್ರೌರ್ಯ ಅಂತ ಹೇಳಿದ್ರು. ಹಲ್ಲೆ ಎಂದು ಬಿಂಬಿಸಿ ಸುದ್ದಿ ಸಹ ಮಾಡಿವೆ. ನಾಯಿ ಕಚ್ಚಿ ಅವನ ಮುಖ ತಿಂದಿದೆ. ಇದೆನ್ನೆಲ್ಲಾ ಪರಿಗಣಿಸಿ ಕೋರ್ಟ್ ತನಿಖಾಧಿಕಾರಿಗೆ ತರಾಟೆ ತೆಗೆದುಕೊಳ್ಳಬೇಕು ಎಂದು ವಾದಿಸಿದರು.

    ನೀರಿನ ಬಾಟಲ್ ಅನ್ನು ಸಾಕ್ಷಿ ಅಂದಿದ್ದಾರೆ:
    ಪ್ರಕರಣದಲ್ಲಿ ಎಲ್ಲಾ ರಿಕವರಿ ಸುಳ್ಳು ರಿಕವರಿ ಆಗಿದೆ. ಎಲ್ಲಾ ಸಾಕ್ಷ್ಯಗಳನ್ನು ತನಿಖಾಧಿಕಾರಿಯೇ ಸೃಷ್ಟಿ ಮಾಡಿದ್ದಾರೆ. ಮರದ ಕೊಂಬೆಗಳು, ಹಗ್ಗದ ತುಂಡುಗಳನ್ನು ರಿಕವರಿ ಎಂದು ತೋರಿಸಿದ್ದಾರೆ. ನೀರಿನ ಬಾಟಲ್ ಅನ್ನು ಸಾಕ್ಷಿ ಅಂದಿದ್ದಾರೆ. 12-6 ರಲ್ಲಿ ಇದೆಲ್ಲವನ್ನೂ ತಮ್ಮ ವಶಕ್ಕೆ ಪಡೆದಿದ್ದಾರೆ. ಆದರೆ 9 ಜೂನ್ ಅಲ್ಲಿಯೇ ಪೊಲೀಸರ ವಶದಲ್ಲಿ ಇತ್ತು. ವಸ್ತುಗಳನ್ನು ವಶಕ್ಕೆ ಪಡೆದಿರೋದಾಗಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಹೇಳಿದ್ದಾರೆ. ಇಲ್ಲಿ ದಿನಾಂಕಗಳ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಿದರು.

     

    ಸ್ವಇಚ್ಚಾ ಹೇಳಿಕೆಯಲ್ಲಿ ಚಪ್ಪಲಿ, ಪೊಲೀಸರಿಗೆ ಸಿಕ್ಕಿದ್ದು ಶೂ:
    ಅಲ್ಲದೇ ದರ್ಶನ್ ಸ್ವಇಚ್ಚಾ ಹೇಳಿಕೆಯಲ್ಲಿ ಚಪ್ಪಲಿ ಅಂತ ಇದೆ. ಅದರೆ ಪೊಲೀಸರು ವಶಕ್ಕೆ ಪಡೆದಿರೋದು ಶೂ. ಸ್ವಇಚ್ಛಾ ಹೇಳಿಕೆಯನ್ನ ಬದಲಾಯಿಸಲಾಗಿದೆ. ದರ್ಶನ್ ಘಟನೆ ವೇಳೆ ಧರಿಸಿದ್ದ ಬಟ್ಟೆ, ಚಪ್ಪಲಿಗಳನ್ನ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದು, ಮನೆಗೆ ಬಂದರೆ ತೋರಿಸುವುದಾಗಿ ಹೇಳಿದ್ದಾರೆ. ಆದ್ರೆ, ಮನೆಯಲ್ಲಿ ಶೂಗಳು ಹೇಗಾದವು? ಇಷ್ಟೇಲ್ಲಾ ಆದ್ಮೇಲೆ ಹೇಳಿಕೆ ಬದಲಿಸಿದ್ದಾರೆ. ಮೊದಲು ಹೇಳಿಕೆ ಕೊಟ್ಟಾಗ ಚಪ್ಪಲಿ ಚಪ್ಪಲಿ ಅಂದಿದ್ದಾರೆ. ಕೊನೆಗೆ ಅದನ್ನೇ ಶೂ ಎಂದು ಹೇಳಿಕೆ ಬದಲಿಸಿದ್ದಾರೆ ಎಂದು ವಾದ ಮಂಡನೆ ಮಾಡಿದರು.

     

    ರಕ್ತದ ಕಲೆ ಬಿಟ್ಟು ಉಳಿದೆಲ್ಲ ಕಡೆ ತೊಳೆದಿದ್ದರಂತೆ:
    ಪೊಲೀಸರು ಮೊದಲ ಬಾರಿಗೆ ಹೋದಾಗ ರಕ್ತದ ಕಲೆ ಇತ್ತು ಎನ್ನಲಾದ ಬಟ್ಟೆ ಸಿಕ್ಕಿಲ್ಲ. ಆಮೇಲೆ ಅದೇ ಬಟ್ಟೆಯನ್ನು ಶರ್ಫ್ ಹಾಕಿ ತೊಳೆದಿದ್ದಾರೆ ಎಂದು ಹೇಳಿಕೆ ದಾಖಲಿಸಲಾಗಿದೆ. ರಕ್ತದ ಕಲೆ ಇರೋ ಜಾಗ ಬಿಟ್ಟು, ಇನ್ನೆಲ್ಲಾ ಕಡೆ ಬಟ್ಟೆ ತೊಳೆದಿದ್ದರು ಅನ್ಸುತ್ತೆ. ಅದಕ್ಕೆ ರಕ್ತದ ಕಲೆ ಸಿಕ್ಕಿದೆ ಎಂದು ವ್ಯಂಗ್ಯವಾಡಿದರು. ಟೀ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಶರ್ಫ್ ಹಾಕಿ ತೊಳೆದು ಒಣಗಿಸಲಾಗಿತ್ತು. ಶನಿವಾರ ಕೊಲೆ ಆಗಿದೆಭಾನುವಾರ ಬಟ್ಟೆ ಇಟ್ಟಿದ್ದಾರೆ. ಸೋಮವಾರ ಸುಶೀಲಮ್ಮ ತೊಳೆದು ಒಣಗಿ ಹಾಕಿದ್ದಾರೆ. ಇಷ್ಟೇಲ್ಲಾ ಉತ್ತಮವಾಗಿ ತೊಳೆದ್ರೂ ಕೂಡ ರಕ್ತದ ಕಲೆ ಸಿಕ್ಕಿದೆ ಅಂತೆ ಎಂದು ಹಾಸ್ಯಮಾಡಿದರು.

  • ರೇಣುಕಾ ಹತ್ಯೆ ಕೇಸ್‌ – ಮೂವರಿಗೆ ಜಾಮೀನು ಮಂಜೂರು

    ರೇಣುಕಾ ಹತ್ಯೆ ಕೇಸ್‌ – ಮೂವರಿಗೆ ಜಾಮೀನು ಮಂಜೂರು

    ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ  (Renukaswamy Murder Case)  ಮೂವರು ಆರೋಪಿಗಳಿಗೆ ಜಾಮೀನು (Bail) ಮಂಜೂರು ಆಗಿದೆ. ಕೇಶವಮೂರ್ತಿಗೆ ಹೈಕೋರ್ಟ್‌ನಿಂದ  ಕಾರ್ತಿಕ್‌, ನಿಖಿಲ್‌ ನಾಯಕ್‌ಗೆ 57ನೇ ಸಿಸಿಹೆಚ್ ಕೋರ್ಟ್ ನಿಂದ ಜಾಮೀನು ಸಿಕ್ಕಿದೆ.

    ಈ ಪ್ರಕರಣದಲ್ಲಿ ಕಾರ್ತಿಕ್‌, ಕೇಶವ್‌ಮೂರ್ತಿ, ನಿಖಿಲ್‌ ನಾಯಕ್‌ ಕ್ರಮವಾಗಿ ಎ 15, ಎ16, ಎ17 ಆರೋಪಿಗಳಾಗಿದ್ದರು.

    ಈ ಮೂವರು ರೇಣುಕಾಸ್ವಾಮಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ತನಿಖೆ ವೇಳೆ ಆರೋಪಿಗಳು ನೇರವಾಗಿ  ಕೊಲೆಯಲ್ಲಿ ಭಾಗಿಯಾಗಿಲ್ಲ. ಸಾಕ್ಷಿನಾಶ ಮಾಡಲು ಮುಂದಾಗಿದ್ದ ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ ಪೊಲೀಸರು ಸಾಕ್ಷ್ಯನಾಶ ಆಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕೊಲೆಯಲ್ಲಿ ನೇರವಾಗಿ ಭಾಗಿಯಾಗದ ಕಾರಣ ಮೂವರಿಗೆ ಇಂದು ಜಾಮೀನು ಸಿಕ್ಕಿದೆ.

  • ಸರ್‌, ನನ್ನ ಟೈಂ, ನನ್ನ ಗ್ರಹಚಾರ ಸರಿಯಿಲ್ಲ ಅಷ್ಟೇ- ದರ್ಶನ್‌

    ಸರ್‌, ನನ್ನ ಟೈಂ, ನನ್ನ ಗ್ರಹಚಾರ ಸರಿಯಿಲ್ಲ ಅಷ್ಟೇ- ದರ್ಶನ್‌

    ಬೆಂಗಳೂರು: “ ಸರ್‌, ನನ್ನ ಟೈಂ, ನನ್ನ ಗ್ರಹಚಾರ ಸರಿಯಿಲ್ಲ ಅಷ್ಟೇ” ಇದು ನಟ ದರ್ಶನ್‌ (Darshan) ಆಡಿರುವ ಪಶ್ಚಾತ್ತಾಪದ ಮಾತು.

    ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ವ್ಯಾನ್‌ನಲ್ಲಿ ಬಳ್ಳಾರಿಗೆ ತೆರಳುವ  ಐದು ಗಂಟೆಗಳ ಪ್ರಯಾಣದಲ್ಲಿ ತನ್ನ ಸಿನಿಮಾ ಜರ್ನಿ ಬಗ್ಗೆ ಪೊಲೀಸರ ಜೊತೆ ದರ್ಶನ್‌ ಮಾತನಾಡಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣ ನಂತರದ ಬೆಳವಣಿಗೆಯ ಬಗ್ಗೆ ಮಾತನಾಡುವ ವೇಳೆ ದರ್ಶನ್‌ ಭಾವುಕರಾಗಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ದರ್ಶನ್‌ಗೆ ರಾಜಾತಿಥ್ಯ – ಪ್ರಭಾವಿ ಸಚಿವನಿಗೆ ಸಿಎಂ ಕ್ಲಾಸ್‌

    ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ, ಈಗ ಏನು ಹೇಳಿದ್ರೂ ತಪ್ಪಾಗುತ್ತದೆ. ಕಾನೂನಿನ ಮೂಲಕ ಎಲ್ಲವನ್ನು ಎದುರಿಸುತ್ತೇನೆ ಎಂಬುದಾಗಿ ದರ್ಶನ್‌ ಮಾತನಾಡಿದ್ದಾರೆ.

    ಐದು ಗಂಟೆ ಗಳ ಪ್ರಯಾಣದಲ್ಲಿ ಕೆಲ ವಿಚಾರಗಳನ್ನು ಹೊರತುಪಡಿಸಿ ಹೆಚ್ಚಿನ ಸಮಯದಲ್ಲಿ ದರ್ಶನ್‌ ಮೌನವಾಗಿಯೇ ಕುಳಿತಿದ್ದರು. ಇದನ್ನೂ ಓದಿ: ಇಂದು ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಿಂದ ನಾಗಸಂದ್ರದವರೆಗೂ ಮೆಟ್ರೋ ಸೇವೆ ಸ್ಥಗಿತ

  • ರೇಣುಕಾಸ್ವಾಮಿ ಕೊಲೆ ಪ್ರಕರಣ – ದರ್ಶನ್‌ಗೆ ಜಾಮೀನು ಸಿಗೋದು ಅನುಮಾನ

    ರೇಣುಕಾಸ್ವಾಮಿ ಕೊಲೆ ಪ್ರಕರಣ – ದರ್ಶನ್‌ಗೆ ಜಾಮೀನು ಸಿಗೋದು ಅನುಮಾನ

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನಟ ದರ್ಶನ್‌ಗೆ (Darshan) ಸದ್ಯಕ್ಕೆ ಜಾಮೀನು (Bail) ಸಿಗುವುದು ಬಹುತೇಕ ಅನುಮಾನ.

    ಈಗಾಗಲೇ ಪೊಲೀಸರು ಪ್ರಬಲ ಸಾಕ್ಷ್ಯವನ್ನು ಕಲೆ ಹಾಕಿದ್ದಾರೆ. ಒಂದೊಮ್ಮೆ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿದರೆ ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿ ತಯಾರಿ ನಡೆಸಿದ್ದಾರೆ. ಕಳೆದ ಆರು ದಿನದಿಂದ ಜೈಲಲ್ಲಿರುವ ನಟ ದರ್ಶನ್‌ಗೆ, ನಿಮ್ಮ ವಿರುದ್ಧ ರೌಡಿಶೀಟರ್‌ ಪಟ್ಟಿಯನ್ನು ಯಾಕೆ ತೆರೆಯಬಾರದು ಎನ್ನುತ್ತಾ ನೊಟೀಸ್ ಕಳುಹಿಸಲು ಪೊಲೀಸರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

     

    ಇಂದು ಕೂಡ ಜೈಲಿನಲ್ಲಿ (Jail) ಯಾರನ್ನೂ ನಟ ದರ್ಶನ್ ಭೇಟಿಯಾಗಿಲ್ಲ. ತಮ್ಮ ಭೇಟಿಗೆ ಯಾರಿಗೂ ಅವಕಾಶ ಕೊಡಬಾರದು ಅಂತ ಜೈಲಾಧಿಕಾರಿಗಳಿಗೆ ದರ್ಶನ್ ಕೋರಿದ್ದಾರೆ.  ಇದನ್ನೂ ಓದಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಕೇಸ್ – ಆರೋಪಿ ಅರುಣ್ ಚೌಗಲೆ ಜಾಮೀನು ಅರ್ಜಿ ವಜಾ

    ಈ ಮಧ್ಯೆ, ಪೊಲೀಸ್ ಕಸ್ಟಡಿಯಲ್ಲಿ ಇದ್ದಾಗಲೂ ನಟ ದರ್ಶನ್ ಆಪ್ತೆ ಪವಿತ್ರಾಗೌಡ (Pavithra Gowda) ಮೇಕಪ್‌ಗೆ ಅತಿಯಾದ ಆದ್ಯತೆ ನೀಡ್ತಿದ್ದ ವಿಚಾರ ಬೆಳಕಿಗೆ ಬಂದಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ರಾಜ್ಯದ ಸಂಸದರ ಜೊತೆ ಸಿಎಂ-ಡಿಸಿಎಂ ಸಭೆ

     

  • ದರ್ಶನ್‌ ಪೊಲೀಸ್‌ ಕಸ್ಟಡಿಗೆ,  ಪವಿತ್ರಾ ಗೌಡ ಜೈಲಿಗೆ

    ದರ್ಶನ್‌ ಪೊಲೀಸ್‌ ಕಸ್ಟಡಿಗೆ, ಪವಿತ್ರಾ ಗೌಡ ಜೈಲಿಗೆ

    ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renuka Swamy Murder Case) ದರ್ಶನ್‌ (Darshan) ಸೇರಿದಂತೆ  ನಾಲ್ವರು ಆರೋಪಿಗಳನ್ನು ಕೋರ್ಟ್‌ ಮೂರನೇ ಬಾರಿಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದರೆ, ಪವಿತ್ರಾ ಗೌಡ  (Pavithra Gowda) ಮತ್ತು ಇತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿತು.

    ಇಂದು ಕಸ್ಟಡಿ (Police Custody) ಅಂತ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ದರ್ಶನ್‌ ಮತ್ತು ಗ್ಯಾಂಗ್‌ ಸದಸ್ಯರು ಎಸಿಎಂಎಂ ಕೋರ್ಟ್‌ಗೆ (ACMM) ಹಾಜರು ಪಡಿಸಿದರು.

    ಹತ್ಯೆ ಪ್ರಕರಣದಲ್ಲಿ ಸ್ಥಳ ಮಹಜರು, ಸಾಕ್ಷ್ಯ ಸಂಗ್ರಹ ಪ್ರಕ್ರಿಯೆಗಳು ಈ ವಾರ ಮತ್ತು ಕಳೆದ ವಾರ ನಡೆದಿತ್ತು. ಬಹುತೇಕ ಪ್ರಕ್ರಿಯೆಗಳು ಮುಕ್ತಾಯವಾದರೂ ದರ್ಶನ್‌ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕೆಂದು ಎಸ್‌ಪಿಪಿ ವಾದ ಮಂಡಿಸಿದರು. ಈ ವಾದವನ್ನು ಪುರಸ್ಕರಿಸಿದ ಕೋರ್ಟ್‌ ಮತ್ತೆ ಶನಿವಾರದವರೆಗೆ ದರ್ಶನ್‌ ಮತ್ತು ಉಳಿದ ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಿತು.

    ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಹಿನ್ನೆಲೆಯಲ್ಲಿ ಇಂದೇ ಪವಿತ್ರಾ ಗೌಡ ಮತ್ತು ಇತರ ಆರೋಪಿಗಳು ಪರಪ್ಪನ ಅಗ್ರಹಾರ ಸೇರಲಿದ್ದಾರೆ.

  • 30 ನಿಮಿಷದ ಹಲ್ಲೆ ವಿಡಿಯೋ ಆಧಾರಿಸಿಯೇ ದರ್ಶನ್‌ ಅರೆಸ್ಟ್‌

    30 ನಿಮಿಷದ ಹಲ್ಲೆ ವಿಡಿಯೋ ಆಧಾರಿಸಿಯೇ ದರ್ಶನ್‌ ಅರೆಸ್ಟ್‌

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renuka Swamy) ದರ್ಶನ್‌ (Darshan) ಮತ್ತು ಪವಿತ್ರಾ ಗೌಡರನ್ನು (Pavithra Gowda) ಪೊಲೀಸರು ವಿಡಿಯೋವನ್ನು ಆಧಾರಿಸಿ ಬಂಧನ ಮಾಡಿದ್ದಾರೆ.

    ಹೌದು, ಚಿತ್ರದುರ್ಗದಿಂದ ಅಪಹರಣ ಮಾಡಿದ ಬಳಿಕ ರೇಣುಕಾಸ್ವಾಮಿಯನ್ನು ಆರ್‌ಆರ್‌ ನಗರದಲ್ಲಿರುವ ಪಟ್ಟಣಗೆರೆ ಶೆಡ್‌ಗೆ ಕರೆ ತಂದಿದ್ದರು. ಈ ಶೆಡ್‌ನಲ್ಲಿ ದರ್ಶನ್‌ ಗ್ಯಾಂಗ್‌ (Darshan Gang) ಹಲ್ಲೆ ನಡೆಸಿ ಹತ್ಯೆ ನಡೆಸಿತ್ತು.

    ದರ್ಶನ್‌ ಗ್ಯಾಂಗ್‌ ಹಲ್ಲೆ ನಡೆಸುತ್ತಿರುವ ದೃಶ್ಯ ಶೆಡ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ (CCTV) ಸೆರೆಯಾಗಿತ್ತು. ದರ್ಶನ್‌ ಮತ್ತು ಪವಿತ್ರಾ ಗೌಡ ಇಬ್ಬರು ಸೇರಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ- ಚಿಕ್ಕಣ್ಣ ಬಳಿಕ ಮತ್ತೊಬ್ಬ ನಟನಿಗೆ ವಿಚಾರಣೆ ಭೀತಿ!

     

    ಪ್ರಕರಣ ಬೆಳಕಿಗೆ ಬಂದಾಗ ಆರೋಪಿಗಳ ಹೇಳಿಕೆ ನೀಡಿ ಪೊಲೀಸರು ದರ್ಶನ್‌ ಅವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಪೊಲೀಸರು ಸಿಸಿಟಿವಿ ದೃಶ್ಯವನ್ನು ಆಧಾರಿಸಿ ಬಂಧಿಸಿದ್ದಾರೆ ಎಂಬ ವಿಚಾರ ಈಗ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

    ದರ್ಶನ್, ಪವಿತ್ರಗೌಡ ಇಬ್ಬರೂ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಇಬ್ಬರೂ ಒಟ್ಟೊಟ್ಟಿಗೆ ಬಂದು ಹೋಗಿರುವ ದೃಶ್ಯಗಳು ಸೆರೆಯಾಗಿದೆ. ಸದ್ಯ ಪೊಲೀಸರ ಬಳಿಕ 30 ನಿಮಿಷದ ವಿಡಿಯೋವಿದ್ದು ಇದೇ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಲಿದೆ. ಸಿಸಿಟಿವಿ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದ ಬಳಿಕ ದರ್ಶನ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹಲ್ಲೆಯ ತೀವ್ರತೆಗೆ ಪ್ರಜ್ಞೆ ತಪ್ಪಿದ್ದ ರೇಣುಕಾಸ್ವಾಮಿ ಕೈ, ಕಿವಿ, ಹೊಟ್ಟೆಗೆ ಕರೆಂಟ್ ಶಾಕ್

    ಕೆಲ ದಿನಗಳ ಹಿಂದೆ ಪೊಲೀಸ್‌ ಅಧಿಕಾರಿಯೊಬ್ಬರು ಸ್ನೇಹಿತನ ಜೊತೆ ಮಾತನಾಡಿದ್ದರು. ಮಾತುಕತೆಯ ವೇಳೆ ಅಧಿಕಾರಿ ದರ್ಶನ್‌ ಮತ್ತು ಗ್ಯಾಂಗ್‌ (Darshan Gang) ಬರೆ ಹಾಕಿಸಿ ಸಿಕ್ಕಾಪಟ್ಟೆ ಟಾರ್ಚರ್‌ ನೀಡಿದ್ದಾರೆ. ಎಲೆಕ್ಟ್ರಿಕ್‌ ಶಾಕ್‌ ನೀಡಿ ಕೋಳಿ ಎಸೆದಂತೆ ಎಸೆದು ಮಿನಿ ಟ್ರಕ್‌ಗೆ ಗುದ್ದಿ ಹತ್ಯೆ ಮಾಡಿದ್ದಾರೆ ಎಂದು ವಿವರಿಸಿದ್ದರು.

    ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದರೆ ದರ್ಶನ್‌ ಎರಡನೇ ಆರೋಪಿಯಾಗಿದ್ದಾರೆ.

     

  • ನಾನು ಶೆಡ್‌ನಿಂದ ಬಂದ ಮೇಲೆ ಇವ್ರೆಲ್ಲಾ ಸೇರಿ ಹಿಂಗೆ ಮಾಡಿ ನನ್‌ ತಲೆಗೆ ತಂದಿದ್ದಾರೆ: ದರ್ಶನ್‌ ಅಳಲು

    ನಾನು ಶೆಡ್‌ನಿಂದ ಬಂದ ಮೇಲೆ ಇವ್ರೆಲ್ಲಾ ಸೇರಿ ಹಿಂಗೆ ಮಾಡಿ ನನ್‌ ತಲೆಗೆ ತಂದಿದ್ದಾರೆ: ದರ್ಶನ್‌ ಅಳಲು

    ಬೆಂಗಳೂರು: ನಾನು ಶೆಡ್‌ನಿಂದ ಬಂದ ಮೇಲೆ ಇವ್ರೆಲ್ಲಾ ಸೇರಿ ಹೀಗೆ ಮಾಡಿ ನನ್ನ ತಲೆಗೆ ತಂದಿದ್ದಾರೆ ಎಂದು ದರ್ಶನ್‌ (Darshan) ಅಳಲು ತೋಡಿಕೊಂಡಿದ್ದಾರೆ.

    ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ (Renuka Swamy Murder Case) ಸಂಬಂಧಿಸಿದಂತೆ ದರ್ಶನ್‌ ಮತ್ತು ಗ್ಯಾಂಗ್‌ ಸದಸ್ಯರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ, ಸರ್ ನನಗೇನು ಗೊತ್ತಿಲ್ಲ ಅವನನ್ನ ಕರ್ಕೊಂಡ್ ಬಂದಿರೋದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ ಎಂಬ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

    ದರ್ಶನ್‌ ಹೇಳಿದ್ದು ಏನು?
    ರೇಣುಕಾಸ್ವಾಮಿಯನ್ನು ಕರ್ಕೊಂಡ್ ಬಂದಿದ್ದ ದಿನ ನಾನು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿದ್ದೆ. ಹುಡುಗರ ಜೊತೆ ಮದ್ಯ ಹಾಕುತ್ತಿದ್ದಾಗ ಪವನ ಅಲ್ಲಿಗೆ ಬಂದಿದ್ದ. ನನ್ನ ಕಿವಿಯಲ್ಲಿ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದಿರುವುದಾಗಿ ಹೇಳಿದ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್‌: ಕಣ್ಣೆದುರೇ ಮಗ ಅರೆಸ್ಟ್‌ – ಮನನೊಂದ ತಂದೆ ಹೃದಯಾಘಾತದಿಂದ ಸಾವು!

    ನಾನು ಸೀದಾ ಅಲ್ಲಿಂದ ಮನೆಗೆ ಹೋಗಿ ಪವಿತ್ರಾಳನ್ನು ಕರೆದುಕೊಂಡು ಶೆಡ್‌ಗೆ ಹೋದೆ. ಅವನನ್ನು ಕೊಲೆ ಮಾಡಬೇಕು ಎಂಬ ಉದ್ದೇಶ ನನಗೆ ಇರಲಿಲ್ಲ.  ಅವನಿಗೆ ಹೊಡೆದು ಆತನ ಕೈಯಿಂದಲೇ ಕ್ಷಮೆ ಕೇಳಿಸಬೇಕು ಅಂತ ಇದ್ದೆ.

    ನನ್ನ ಪವಿತ್ರಾಳನ್ನು ನೋಡುತ್ತಿದ್ದಂತೆ ಅವನು ತಪ್ಪಾಯ್ತು ಅಂತ ಕೇಳಿಕೊಂಡ. ಆಮೇಲೆ ನಾನು ಅವನಿಗೆ ಅವನಿಗೆ ಊಟಕ್ಕೆ ದುಡ್ಡು ಕೊಟ್ಟು ಊಟ ಮಾಡಿಕೊಂಡು ಊರಿಗೆ ಹೋಗು ಅಂತ ಹೇಳಿ ಬಂದೆ. ನಾನು ಶೆಡ್‌ನಿಂದ ಬಂದ ಮೇಲೆ ಇವ್ರೆಲ್ಲಾ ಸೇರಿ ಹೀಗೆ ಮಾಡಿ ನನ್ನ ತಲೆಗೆ ತಂದಿದ್ದಾರೆ. ಅಷ್ಟೇ ಸರ್‌ ವಿಷಯ. ನನಗೆ ಬೇರೆ ಏನು ಗೊತ್ತಿಲ್ಲ.

     

  • ಕೋಳಿ ಎಸೆದಂತೆ ಎಸೆದು ಟ್ರಕ್‌ಗೆ ಗುದ್ದಿ, ಸಿಕ್ಕ ಸಿಕ್ಕ ವಸ್ತುಗಳಲ್ಲಿ ಹೊಡೆದು ಹತ್ಯೆ

    ಕೋಳಿ ಎಸೆದಂತೆ ಎಸೆದು ಟ್ರಕ್‌ಗೆ ಗುದ್ದಿ, ಸಿಕ್ಕ ಸಿಕ್ಕ ವಸ್ತುಗಳಲ್ಲಿ ಹೊಡೆದು ಹತ್ಯೆ

    – ಆರ್‌ಆರ್‌ನಗರದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ
    – ಪೊಲೀಸ್‌ ಅಧಿಕಾರಿ ತನ್ನ ಸ್ನೇಹಿತನ ಜೊತೆ ಮಾತನಾಡಿದ್ದ ಆಡಿಯೋ ವೈರಲ್‌

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renuka Swamy) ಅವರನ್ನು ದರ್ಶನ್‌ ಮತ್ತು ಗ್ಯಾಂಗ್‌ (Darshan Gang) ಬರೆ ಹಾಕಿಸಿ, ಕೋಳಿ ಎಸೆದಂತೆ ಎಸೆದು ಮಿನಿ ಟ್ರಕ್‌ಗೆ ಗುದ್ದಿ ಹತ್ಯೆ ಮಾಡಿದ್ದಾರೆ.

    ಹೌದು. ರೇಣುಕಾಸ್ವಾಮಿ ಅವರನ್ನು ಹತ್ಯೆ ಮಾಡಿದ ಬಗ್ಗೆ ಪೊಲೀಸ್‌ ಅಧಿಕಾರಿಯೊಬ್ಬರು ಸ್ನೇಹಿತನ ಜೊತೆ ಮಾತನಾಡಿರುವ ಆಡಿಯೋ ಈಗ ವೈರಲ್‌ ಆಗಿದೆ. ಈ ಆಡಿಯೋದಲ್ಲಿ ಕೊಲೆಯನ್ನು ಹೇಗೆ ಮಾಡಲಾಗಿದೆ ಎಂಬುದರ ಬಗ್ಗೆ ಪೊಲೀಸ್‌ ಅಧಿಕಾರಿ ವಿವರಿಸಿದ್ದಾರೆ. ಇದನ್ನೂ ಓದಿ: ದರ್ಶನ್ ಇರೋ ಠಾಣೆಗೆ ಶಾಮಿಯಾನ ಹಾಕಿದ್ದರ ಹಿಂದಿನ ಸೀಕ್ರೆಟ್ ರಿವೀಲ್

    ಆಡಿಯೋದಲ್ಲಿ ಏನಿದೆ?
    ಪೊಲೀಸ್ ಅಧಿಕಾರಿ: ಅಷ್ಟೊಂದು ಎವಿಡೆನ್ಸ್ ಇದೆ. 302 ಎಫ್‌ಐಆರ್‌ಗೆ ಹೆಸರು ತರಬೇಕು ಅಂದರೆ ಸುಮ್ಮಸುಮ್ಮನೆ ತರಲ್ಲ. ಈಗ ಲೈಫ್ ಅಲ್ವಾ? ಸುಮ್ಮನೆ ಒಂದು ವಾರ್ನಿಂಗ್ ಮಾಡಿ ಬಿಟ್ಟಿದ್ದರೆ ಆಗ್ತಿತ್ತು.

    ಸ್ನೇಹಿತ: ಹುಡುಗರು ಮಾಡಿದ್ದಾರೆ ಅಂತಾರೆ ನಿಜನಾ?

    ಪೊಲೀಸ್ ಅಧಿಕಾರಿ: ಎಲ್ಲರೂ ಸೇರಿ ಹೊಡೆದಿದ್ದಾರೆ. ಬರೆ ಎಲ್ಲಾ ಹಾಕಿದ್ದಾರಲ್ಲ. ಕಬ್ಬಿಣ ಕಾಯಿಸಿ ಬರೆ ಹಾಕಿ, ಲಾರಿಗೆ ತಲೆ ಹೊಡೆದು, ಎಲ್ಲಾ ಮಾಡಿದ್ದಾರೆ.  ಶೆಡ್‌ನಲ್ಲಿ ಸೀಜ್‌ ಮಾಡಿದ ಗಾಡಿಗಳಿರುತ್ತೆ. ಲಾರಿ, ಬಸ್, ಆಟೋಗಳು ಎಲ್ಲಾ. ಆ ಚಿಕ್ಕ ಹುಡುಗನಿಗೆ ಕೋಳಿ ಎಸೆದಂಗೆ ದರ್ಶನ್ ಎಸಿದಿದ್ದಾನೆ.

    ಸ್ನೇಹಿತ: ವಿಡಿಯೋ ಇದ್ಯಾ?

    ಪೊಲೀಸ್ ಅಧಿಕಾರಿ: ಹಾ. ಎಲ್ಲಾ ಇದೆ. ಸಿಸಿಟಿವಿ ದೃಶ್ಯಗಳಿವೆ. ಸಿಕ್ಕಾಪಟ್ಟೆ ಟಾರ್ಚರ್ ಮಾಡಿದ್ದಾರೆ ಸಾರ್. ಬೌನ್ಸರ್‌ಗಳು ಹೊಡೆಯೋ ಏಟು ತಡೆಯೋಕೆ ಆಗುತ್ತಾ? ಆ ಚಿಕ್ಕ ಹುಡುಗ. ಎಲ್ಲಾ ಕುಡಿದು ಬಂದು ಹೊಡೀಯೋದು.ಸುಮ್ಮನೆ ವಾರ್ನ್ ಮಾಡಿದ್ದರೆ ಆಗ್ತಿತ್ತು. ಇಲ್ಲಾ ಒಂದು ದೂರು ಕೊಟ್ಟಿದ್ದರೆ ಆಗ್ತಿತ್ತು. ಎಷ್ಟು ಭೀಕರ ಹತ್ಯೆ ಗೊತ್ತಾ ಇದು. ತುಂಬಾ ಹೀನಾಯವಾಗಿ ಹೊಡೆದಿದ್ದಾರೆ.

    ಸ್ನೇಹಿತ: ಹೌದಾ

     
    ಪೊಲೀಸ್ ಅಧಿಕಾರಿ: ಪವಿತ್ರಾ ಗೌಡಗೂ ಹೊಡೆದಿದ್ದಾನೆ. ಅವಳು ಹೋಗಿ ಆರ್.ಆರ್.ನಗರ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು. ಸೋಮವಾರ ಡಿಸ್ಚಾರ್ಜ್ ಆಗಿ ಬಂದಿದ್ದಾಳೆ.

    ಸ್ನೇಹಿತ: ಹೌದಾ

    ಪೊಲೀಸ್ ಅಧಿಕಾರಿ: ನಾಲ್ವರು ಬಂದು ಕಾಮಾಕ್ಷಿಪಾಳ್ಯ ಠಾಣೆಗೆ ಬಂದು ಶರಣಾಗಿ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿ ತಗ್ಲಾಕೊಂಡ್ರು.ಹೌದಾ

  • ರೇಣುಕಾಸ್ವಾಮಿ ಹತ್ಯೆ ಪ್ರಕರಣ – ನಟ ದರ್ಶನ್ ಸೇರಿ 13 ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ

    ರೇಣುಕಾಸ್ವಾಮಿ ಹತ್ಯೆ ಪ್ರಕರಣ – ನಟ ದರ್ಶನ್ ಸೇರಿ 13 ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ

    ಬೆಂಗಳೂರು: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ (Renuka Swamy) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟ ದರ್ಶನ್ (Darshan) ಹಾಗೂ ಪವಿತ್ರಾ ಗೌಡ (Pavithra Gowda) ಸೇರಿದಂತೆ ಎಲ್ಲಾ  13 ಆರೊಪಿಗಳನ್ನು ಕೋರಮಂಗಲದ 24ನೇ ಎಸಿಎಂಎಂ ಕೋರ್ಟ್‌ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

    ವಿಚಾರಣೆ ವೇಳೆ ಪೊಲೀಸರು 14 ದಿನಗಳ ಕಾಲ ಕಸ್ಟಡಿಗೆ ಕೇಳಿದ್ದರು. ನ್ಯಾಯಾಲಯ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ವಿಚಾರಣೆ ವೇಳೆ ನ್ಯಾಯಾಲಯ (Court) ದರ್ಶನ್‍ಗೆ ಯಾವುದಾದರೂ ತೊಂದರೆ ಆಗಿದೆಯೆ ಎಂದು ಕೇಳಿದ ಪ್ರಶ್ನೆಗೆ, ಇಲ್ಲ ಎಂದು ದರ್ಶನ್ ಪ್ರತಿಕ್ರಿಯಿಸಿದರು. ವಕೀಲರ ನೇಮಕ ಮಾಡಿಕೊಳ್ಳುತ್ತೀರಾ? ಎಂಬ ಪ್ರಶ್ನೆಗೆ, ಹೌದು ಎಂದರು. ಬಳಿಕ ಮನೆಯವರಿಗೆ ಬಂಧನದ ಮಾಹಿತಿ ನೀಡಿದ್ದೇನೆ ಎಂದು ನ್ಯಾಯಾಲಯಕ್ಕೆ ದರ್ಶನ್ ತಿಳಿಸಿದ್ದಾರೆ. ಇದನ್ನೂ ಓದಿ: ದರ್ಶನ್‌ ಟೀಂ ರೌದ್ರವತಾರಕ್ಕೆ ನರಳಿ ನರಳಿ ಪ್ರಾಣಬಿಟ್ಟ ರೇಣುಕಾಸ್ವಾಮಿ!

    ಈ ವೇಳೆ ದರ್ಶನ್ ಪರ ವಕೀಲ ನಾರಾಯಣಸ್ವಾಮಿ, ದರ್ಶನ್ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ರೇಣುಕಾಸ್ವಾಮಿ ಶವ ಕೂಡ ಪತ್ತೆಯಾಗಿದೆ. ಇಷ್ಟೇ ಅಲ್ಲದೇ ದರ್ಶನ್ ವಿರುದ್ಧ ಯಾವುದೇ ಆರೋಪಗಳಿಲ್ಲ. ಅವರು ಎಲ್ಲೂ ತಪ್ಪಿಸಿಕೊಂಡಿಲ್ಲ. ತನಿಖೆಗೆ ಸಹಕಾರ ನೀಡುತ್ತಿದ್ದಾರೆ. ಹೀಗಾಗಿ ಪೊಲೀಸ್ ಕಸ್ಟಡಿ ಅಗತ್ಯವಿಲ್ಲ ಎಂದು ವಾದಿಸಿದರು.

    ವಿಚಾರಣೆ ಬಳಿಕ 6ನೇ ಎಸಿಎಂಎಂ ನ್ಯಾಯಾಧೀಶ ವಿಶ್ವನಾಥ್ ಗೌಡರ್, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ. ವಿಚಾರಣೆ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ನಾಯಾಧೀಶರ ಮುಂದೆ ಕಣ್ಣೀರು ಹಾಕಿದ್ದಾರೆ.

    ಏನಿದು ಪ್ರಕರಣ?: ನಟ ದರ್ಶನ್ ಹಾಗೂ ಆರೋಪಿಗಳು ಮೆಡಿಕಲ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿಯನ್ನು ಶನಿವಾರ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆ ತಂದು 24 ಗಂಟೆ ನಿರಂತರ ಚಿತ್ರ ಹಿಂಸೆ ನೀಡಿದ್ದಾರೆ. ತನ್ನ ಸ್ನೇಹಿತ ಉದ್ಯಮಿ, ವಿನಯ್‍ಗೆ ಸೇರಿದ ಆರ್‍ಆರ್ ನಗರದದ ಪಟ್ಟಣಗೆರೆ ಗೋಡೌನ್‍ಗೆ ರೇಣುಕಾಸ್ವಾಮಿಯನ್ನು ಕರೆ ತಂದು ಅಲ್ಲಿ ಮಾರಾಣಾಂತಿಕ ಹಲ್ಲೆ ನಡೆಸಿದ್ದರು.

    ಪವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಜೊತೆ ಸಂಪರ್ಕ ಸಾಧಿಸಲು ಹುಡುಗಿ ಹೆಸರಿನಲ್ಲಿ ಫೇಕ್ ಖಾತೆಯನ್ನು ದರ್ಶನ್ ತಂಡ ತೆರೆದಿತ್ತು. ಈ ಖಾತೆಯ ಮೂಲಕ ರೇಣುಕಾಸ್ವಾಮಿಯ ಜೊತೆ ಸಂವಹನ ಮಾಡಲಾಗುತ್ತಿತ್ತು.

    ಶನಿವಾರ ಮಾತನಾಡಲು ಮನೆಯಿಂದ ಹೊರಗಡೆ ಬಾ ಎಂದು ಖಾತೆಯಿಂದ ಮಸೇಜ್ ಕಳುಹಿಸಲಾಗಿತ್ತು. ಈ ಮಸೇಜ್‍ಗೆ ಒಪ್ಪಿ ಆತನ ಮನೆಯಿಂದ ಹೊರಗೆ ಬಂದಿದ್ದ. ಚಿತ್ರದುರ್ಗದಲ್ಲಿರುವ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಸೇನಾ ಅಧ್ಯಕ್ಷ ರಘು ದರ್ಶನ್ ನೇತೃತ್ವದಲ್ಲಿ ಅಪಹರಣ ಮಾಡಿ ಬೆಂಗಳೂರಿಗೆ ಕರೆ ತರಲಾಗಿತ್ತು.

    ಹಲ್ಲೆ ನಡೆಸುವ ಸಂದರ್ಭದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಸ್ಥಳದಲ್ಲಿ ಇದ್ದರು. ದರ್ಶನ್ ಹೊಡೆದ ಬಳಿಕ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ ಎಂದು ಉಳಿದ ಆರೋಪಿಗಳು ತಪ್ಪೊಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಈಗ ಮೈಸೂರಿನಲ್ಲಿದ್ದ ದರ್ಶನ್ ಅವರನ್ನು ಬಂಧಿಸಿ ಕರೆ ತಂದಿದ್ದರು. ಇದನ್ನೂ ಓದಿ: ಮೂಗು, ಬಾಯಿ, ದವಡೆ ಕತ್ತರಿಸಿ ವಿಕೃತಿ ಮೆರೆದು ಶವವನ್ನು ಮೋರಿಗೆ ಎಸೆದಿದ್ದ ದರ್ಶನ್‌ ಟೀಂ