Tag: Renuka Acharya

  • ದಿಂಗಾಲೇಶ್ವರ ಶ್ರೀಗಳಿಗೆ ತಲೆ ಸರಿ ಇಲ್ಲ: ರೇಣುಕಾಚಾರ್ಯ ವ್ಯಂಗ್ಯ

    ದಿಂಗಾಲೇಶ್ವರ ಶ್ರೀಗಳಿಗೆ ತಲೆ ಸರಿ ಇಲ್ಲ: ರೇಣುಕಾಚಾರ್ಯ ವ್ಯಂಗ್ಯ

    ಬೆಂಗಳೂರು: ದಿಂಗಾಲೇಶ್ವರ ಶ್ರೀಗಳಿಗೆ ತಲೆ ಸರಿ ಇಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ

    ದಿಂಗಾಲೇಶ್ವರ ಶ್ರೀಗಳ 40% ಕಮಿಷನ್ ಆರೋಪಕ್ಕೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಠಾಧೀಶರ ಬಗ್ಗೆ ಅಪಾರ ಗೌರವ ಇದೆ. ದಿಂಗಾಲೇಶ್ವರ ಶ್ರೀಗಳಿಗೆ ತಲೆ ಸರಿ ಇಲ್ಲ. ಕಾಂಗ್ರೆಸ್ ಏಜೆಂಟ್ ಅಂತಾ ಹೇಳಿಕೆ ಕೊಟ್ಟಿದ್ದಾರೆ. ಖಾವಿ ಹಾಕಿದ ಮೇಲೆ ಧರ್ಮದ ಬೋಧನೆ ಮಾಡಬೇಕು. ಮಾನವ ಧರ್ಮಕ್ಕೆ ಜಯವಾಗಬೇಕು ಎನ್ನಬೇಕು ಎಂದು ಹೇಳಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ – ಮಸೀದಿ ಮೇಲೆ `ಜೈಶ್ರೀರಾಮ್’ ಲೇಸರ್ ಲೈಟ್ ಹಾಕಿದ್ದ ಹಾಕಿದ್ದ ಕಿಡಿಗೇಡಿಗಳು

    ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಯನ್ನ ಅನೇಕ ಸ್ವಾಮೀಜಿಗಳು ಖಂಡಿಸಿದ್ದಾರೆ. ಇಂತಹ ವಿಚಾರ ಇದ್ದರೆ ಸಿಎಂ ಜೊತೆ ಚರ್ಚೆ ಮಾಡಬೇಕಿತ್ತು. ಹೀಗೆ ಮಾತನಾಡುವವರು ಕಾಂಗ್ರೆಸ್ ಪಾರ್ಟಿ ಸೇರಿಕೊಳ್ಳಿ. ಕೆಲವು ಗುತ್ತಿಗೆದಾರರು ಕಾಂಗ್ರೆಸ್ ಹೇಳಿದಂತೆ ಕೇಳುತ್ತಾ ಇದ್ದಾರೆ. 40 ಪಸೆರ್ಂಟ್ ಅಂತ ಡ್ರಾಫ್ಟ್ ಹಾಕಿಸಿದ್ದಾರೆ ಎಂದರು.

    ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತಾಗುತ್ತಿದೆ. ಭ್ರಷ್ಟಾಚಾರ ಹುಟ್ಟಿದ್ದೇ ಕಾಂಗ್ರೆಸ್ ಅವರಿಂದ. 40% ದಾಖಲೆ ಇದ್ದರೆ ಕೆಂಪಣ್ಣ ಬಿಡುಗಡೆ ಮಾಡಲಿ. ಹಾವು ಬಿಡ್ತೀವಿ ಹಾವು ಬಿಡ್ತೀವಿ ಅಂದ್ರೆ ಹೇಗೆ? ನಮ್ಮ ಸರ್ಕಾರಕ್ಕೆ ಯಾರನ್ನು ಕೇಳಿ ತನಿಖೆ ಮಾಡಬೇಕು ಅನ್ನೋದು ಗೊತ್ತು. ಲೋಕಸಭೆಯಲ್ಲಿ ನಿಮಗೆ ಅಡ್ರೆಸ್ ಇದೇಯಾ ನಿಮಗೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಹತ್ಯೆಗೆ ಸಂಚು- ಅಟ್ಟಾಡಿಸಿ ಕೊಲ್ಲಲು ಮುಂದಾಗಿದ್ದ ಗಲಭೆಕೋರರು

    ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ನಮ್ಮ ಕ್ಷೇತ್ರದ ವಿಚಾರವಾಗಿ ದೆಹಲಿಗೆ ಹೋಗಿದ್ದೆ. ನಾನು ಸಚಿವ ಆಕಾಂಕ್ಷಿಯಲ್ಲ. ಪಕ್ಷ ಏನು ತೀರ್ಮಾನ ಮಾಡುತ್ತೋ ಅದಕ್ಕೆ ನಾನು ಬದ್ದ ಎಂದು ಸಚಿವ ಸ್ಥಾನ ಬೇಡ ಎಂದರು.

    ಈಶ್ವರಪ್ಪ ಮೇಲೆ ಆರೋಪ ವಿಚಾರವಾಗಿ ಮಾತನಾಡಿ, ಮಾಜಿ ಅಧ್ಯಕ್ಷ ಲೇಟರ್ ಕೊಟ್ಟರೆ, ಈಶ್ವರಪ್ಪ ಅವರಿಗೂ ಅದಕ್ಕೂ ಏನೂ ಸಂಬಂಧ? ಟೆಂಡರ್ ಆಗಬೇಕು, ವರ್ಕ್ ಆರ್ಡರ್ ಬರಬೇಕು. ಸುಮ್ಮನೆ 4 ಕೋಟಿ ಬಿಡುಗಡೆ ಮಾಡಲು ಆಗುತ್ತಾ? ಕೆಲಸ ಆಗದೆ ಹಣ ಬಿಡುಗಡೆ ಮಾಡಲು ಆಗುತ್ತಾ? ನಮ್ಮ ಸರ್ಕಾರದಿಂದ ಪಾರದರ್ಶಕವಾಗಿ ತನಿಖೆಯಾಗುತ್ತಿದೆ. ಯಾರು ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಅವರಿಗೆ ಶಿಕ್ಷೆಯಾಗುತ್ತೆ ಎಂದರು.

    ಮಹಾ ನಾಯಕರ ಹೆಸರು ಅತೀ ಶೀಘ್ರದಲ್ಲೇ ಬರುತ್ತೆ. ಅತೀ ಶೀಘ್ರದಲ್ಲೇ ತನಿಖೆಯಿಂದ ಕಾಂಗ್ರೆಸ್‍ನ ಮಹಾ ನಾಯಕರ ಹೆಸರು ಹೊರ ಬರುತ್ತೆ ಎಂದರು.

  • ಕೊಟ್ಟ ಮಾತಿನಂತೆ ನಡೆದುಕೊಂಡ ರೇಣುಕಾಚಾರ್ಯ – ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಸಹಾಯ

    ಕೊಟ್ಟ ಮಾತಿನಂತೆ ನಡೆದುಕೊಂಡ ರೇಣುಕಾಚಾರ್ಯ – ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಸಹಾಯ

    ದಾವಣಗೆರೆ: ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಮೊಬೈಲ್ ನೀಡಿ ವಿದ್ಯಾಭ್ಯಾಸಕ್ಕೆ ಆಸರೆಯಾಗಿದ್ದಾರೆ.

    ಶಾಸಕ ರೇಣುಕಾಚಾರ್ಯ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದು, ಬಡ ವಿದ್ಯಾರ್ಥಿಗಳಿಗೆ ಮೊಬೈಲ್ ನೀಡಿ ಮಾನವೀಯತೆ ಮೆರೆದಿದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಟಿ.ಗೋಪಗೊಂಡನಹಳ್ಳಿ ಗ್ರಾಮದ ಬಿಂದು, ಸುಂಕದಕಟ್ಟೆ ಗ್ರಾಮದ ನರ್ಮದಗೆ ಮೊಬೈಲ್ ನೀಡಿ ವಿದ್ಯಾರ್ಥಿನಿಯರ ಸಂತಸದಲ್ಲಿ ಭಾಗಿಯಾದರು. ಇದನ್ನೂ ಓದಿ: RSS ಬಗ್ಗೆ ಮಾತನಾಡೋದು ಬೆಂಕಿ ಜೊತೆ ಸರಸವಿದ್ದಂತೆ: ಈಶ್ವರಪ್ಪ

    Renukacharya

    ಬಿಂದು ಹಾಗೂ ನರ್ಮದ ಮನೆಯಲ್ಲಿ ಕಡು ಬಡತನ ಇರುವುದರಿಂದ ಸ್ಮಾರ್ಟ್ ಫೋನ್ ಇಲ್ಲದೇ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ರೇಣುಕಾಚಾರ್ಯ ಅವರ ಬಳಿ ವಿದ್ಯಾರ್ಥಿನಿಯರು ಅಳಲನ್ನು ತೋಡಿಕೊಂಡು ಮೊಬೈಲ್ ನೀಡುವಂತೆ ಮನವಿ ಮಾಡಿದ್ದರು. ಇದನ್ನೂ ಓದಿ: ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡ ಸಚಿವ ಯಶಪಾಲ್ ಆರ್ಯ, ಶಾಸಕ ಸಂಜೀವ್ ಆರ್ಯ

    Renukacharya

    ಮನವಿ ಸ್ವೀಕರಿಸಿದ ರೇಣುಕಾಚಾರ್ಯ ಅವರು ವಿದ್ಯಾರ್ಥಿನಿಯರಿಗೆ ಮೊಬೈಲ್ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಕೊಟ್ಟ ಮಾತಿನಂತೆ ಇಂದು ರೇಣುಕಾಚಾರ್ಯ ಮೊಬೈಲ್ ನೀಡಿ ತಮ್ಮ ಮಾತು ಉಳಿಸಿಕೊಂಡಿದ್ದಾರೆ. ಮೊಬೈಲ್ ಪಡೆದು ರೇಣುಕಾಚಾರ್ಯ ಕಾರ್ಯಕ್ಕೆ ವಿದ್ಯಾರ್ಥಿನಿಯರು ಮೆಚ್ಚುಗೆ ವ್ಯಕ್ತಪಡಿಸಿದರು.

  • ಆರೋಪಗಳು ನಿಜವಾದರೇ ಬಹಿರಂಗವಾಗಿ ನೇಣು ಹಾಕಿಕೊಳ್ಳುತ್ತೇನೆ – ಸಿಎಂಗೆ ರೇಣುಕಾಚಾರ್ಯ ಸವಾಲು

    ಆರೋಪಗಳು ನಿಜವಾದರೇ ಬಹಿರಂಗವಾಗಿ ನೇಣು ಹಾಕಿಕೊಳ್ಳುತ್ತೇನೆ – ಸಿಎಂಗೆ ರೇಣುಕಾಚಾರ್ಯ ಸವಾಲು

    ಬೆಂಗಳೂರು: ವಿಧಾನಸಭಾ ಕಲಾಪದಲ್ಲಿ ಮೌನ ವಹಿಸಿದ್ದ ಬಿಜೆಪಿ ಶಾಸಕ ರೇಣುಕಾಚಾರ್ಯ ಅವರು ಇಂದು ಸಿಎಂ ಕುಮಾರಸ್ವಾಮಿ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ಸದನದಲ್ಲಿ ಸಿಎಂ ಹೇಳಿರುವ ಮಾತಿಗೆ ಟಾಂಗ್ ನೀಡಿ ಅಣೆ ಪ್ರಮಾಣದ ಸವಾಲು ಎಸೆದಿದ್ದಾರೆ.

    ಸದನದಲ್ಲಿ ನನ್ನ ಹೆಸರನ್ನು ಮುರ್ನಾಲ್ಕು ಬಾರಿ ಪ್ರಸ್ತಾಪ ಮಾಡಿದ್ದಾರೆ. ಆದರೆ ನಾನು ಅವರಿಗೆ ಸವಾಲು ಹಾಕುತ್ತಿದ್ದೇನೆ. ಅಂದು ನಾನು ಗೋವಾಕ್ಕೆ ಹೋಗಿದ್ದು ನಿಜ. ಆದರೆ ನಾನು ಅವರಿಂದ ಸಚಿವನಾಗಲಿಲ್ಲ. ಅಂದು ಸರ್ಕಾರ ರಚಿಸಲು ಪ್ರಸ್ತಾಪ ಮಾಡಿದ್ದ ಅವರೇ ನಮ್ಮನ್ನ ಗೋವಾ ಹಾಗೂ ಹೈದರಾಬಾದ್ ಗೆ ಬಂದು ಮಧ್ಯರಾತ್ರಿ ಭೇಟಿ ಮಾಡಿದ್ರು. ತಮಗೆ ಬೆಂಬಲ ನೀಡಲು ಮನವಿ ಮಾಡಿದ್ದರು. ಆದರೆ ನಾನು ಅಂದು ಅವರೊಂದಿಗೆ ಜಗಳ ಮಾಡಿ ಬಿಎಸ್ ಯಡಿಯೂರಪ್ಪ ಅವರಿಗೆ ಮೋಸ ಮಾಡಲು ಒಪ್ಪಿರಲಿಲ್ಲ ಎಂದರು.

    ಬಿಎಸ್‍ವೈ ಅವರಿಗೆ ಮೋಸ ಮಾಡಿದರೆ ಹೆತ್ತ ತಾಯಿಗೆ ಮೋಸ ಮಾಡಿದಂತೆ ಎಂದು ನಾನು ಸಿಎಂ ಅವರಿಗೆ ಹೇಳಿದ್ದೆ. ನಿನ್ನೆ ವಿಧಾನ ಸೌಧದಲ್ಲಿ ಮೌನ ವಹಿಸಲು ಒಂದು ಅರ್ಥ ಇದೆ. ಈಗ ಬಹಿರಂಗವಾಗಿ ಪ್ರಮಾಣ ಮಾಡಿ ಅಥವಾ ಬಹಿರಂಗ ಚರ್ಚೆ ಬನ್ನಿ ಎಂದರು. ಅಲ್ಲದೇ ನೀವು ಹೇಳಿದ್ದೆಲ್ಲಾ ಸಾಬೀತು ಆದರೆ ಬಹಿರಂಗವಾಗಿ ನೇಣಿಗೆ ಶರಣಾಗುತ್ತೇನೆ. ಸಿಎಂ ಅವರು ನಂಬಿರುವ ಶೃಂಗೇರಿ ಮತ್ತು ಮಂಜುನಾಥ ಸನ್ನಿಧಿಗೆ ಬನ್ನಿ ಪ್ರಮಾಣ ಮಾಡಿ ಎಂದು ಸವಾಲು ಎಸೆದರು.

    ದೇವೇಗೌಡರ ಕುಟುಂಬ ಸುಳ್ಳು ಹೇಳುವುದಲ್ಲಿ ನಿಸ್ಸೀಮರು, ನಾನು ನಿಮ್ಮ ಸಹಾಯದಿಂದ ಸಚಿವನಾಗಲಿಲ್ಲ, ನಮ್ಮನ್ನು ಉದ್ವೇಗಗೊಳಿಸುವ ಉದ್ದೇಶದಿಂದಲೇ ಸಿಎಂ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಬಹುಮತವಿಲ್ಲದ ಸಿಎಂ ಅವರು ಮೊದಲು ರಾಜೀನಾಮೆ ನೀಡಬೇಕು. ಮುಂದಿನ ಅಧಿವೇಶನದಲ್ಲಿ ನಿಮ್ಮ ಆರೋಪಗಳಿಗೆ ತಕ್ಕ ಉತ್ತರ ನೀಡುತ್ತೇನೆ ಎಂದರು.