Tag: rent

  • ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸಿಕ್ತು ಹೊಸ ಬಾಡಿಗೆ ಮನೆ!

    ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸಿಕ್ತು ಹೊಸ ಬಾಡಿಗೆ ಮನೆ!

    ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಸಂಭಾವ್ಯ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಮಂಡ್ಯದಲ್ಲೇ ಮನೆ ಮಾಡಲು ಯೋಚಿಸಿರುವ ಅವರು, ಜಿಲ್ಲೆಯ ಮರೀಗೌಡ ಬಡಾವನೆಯಲ್ಲಿ ಬಂಗಲೆಯೊಂದನ್ನು ಬಾಡಿಗೆಗೆ ಪಡೆಯಲು ನಿರ್ಧರಿಸಿದ್ದಾರೆ.

    ಮಂಡ್ಯ ಕ್ಷೇತ್ರದಿಂದ ನಿಖಿಲ್ ಅವರೇ ಜೆಡಿಎಸ್‍ನಿಂದ ಚುನಾವಣಾ ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ. ಆದರಿಂದ ಜಿಲ್ಲೆಯ ಪ್ರತಿಷ್ಠಿತ ಬಡಾವಣೆಗಳಾದ ಬಂದೀಗೌಡ ಬಡಾವಣೆ, ಚಾಮುಂಡೇಶ್ವರಿ ನಗರ, ಮರೀಗೌಡ ಬಡಾವಣೆ ಹಾಗೂ ಅಶೋಕ ನಗರದಲ್ಲಿ ನಿಖಿಲ್ ಮನೆ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಮರೀಗೌಡ ಬಡಾವಣೆಯಲ್ಲಿ ಪ್ರತಿಷ್ಠಿತ ಬಂಗಲೆಯೊಂದು ಬಾಡಿಗೆಗೆ ಪಡೆಯಲು ನಿಖಿಲ್ ನಿರ್ಧರಿಸಿದ್ದಾರೆ. ಮಂಡ್ಯ ನಗರಸಭೆ ಮಾಜಿ ಉಪಾಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಚಿಕ್ಕಣ್ಣ ಎಂಬುವವರಿಗೆ ಸೇರಿದ ಮನೆಯನ್ನು ಸದ್ಯಕ್ಕೆ ಬಾಡಿಗೆ ಪಡೆಯಲು ನಿಖಿಲ್ ಚಿಂತಿಸಿದ್ದಾರೆ. ಇದನ್ನೂ ಓದಿ:ಅಂಬಿ ಅದೃಷ್ಟದ ಮನೆಗೆ ಶೀಘ್ರವೇ ಸುಮಲತಾ ಶಿಫ್ಟ್!

    ನಾಲ್ಕು ಬೆಡ್ ರೂಂ, ವಿಶಾಲವಾದ ದೇವರಮನೆ ಹಾಗೂ ವಾಸ್ತು ಪ್ರಕಾರ ಮನೆ ನಿರ್ಮಾಣವಾಗಿದ್ದು, ನಿಖಿಲ್ ರಾಜಕೀಯ ಚುಟುವಟಿಕೆಗೆ ಅನುಕೂಲವಾಗಲೆಂದು ಮನೆ ಬಾಡಿಗೆ ಪಡೆಯಲು ನಿರ್ಧರಿಸಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಸ್ವಂತ ಮನೆ ಕಟ್ಟಲು ಕೂಡ ನಿಖಿಲ್ ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ದೊರಕಿದೆ. ಇದನ್ನೂ ಓದಿ:ಮಂಡ್ಯದಿಂದ ಸ್ಪರ್ಧೆ ಖಚಿತ: ಸುಮಲತಾ ಅಂಬರೀಶ್

    ಐದು ಎಕರೆ ಜಮೀನು ಖರೀದಿಸಿ ಅಲ್ಲಿಯೂ ತೋಟ, ಮನೆ ನಿರ್ಮಿಸಲು ಈಗಾಗಲೇ ನಿಖಿಲ್ ಪ್ಲಾನ್ ಮಾಡಿದ್ದಾರೆ. ರಾಜಕೀಯ, ಸಿನಿಮಾ ಜೊತೆಗೆ ಕೃಷಿಯಲ್ಲೂ ತೊಡಗಿಸಿಕೊಳ್ಳಲು ನಿಖಿಲ್ ಚಿಂತನೆ ನಡೆಸಿದ್ದಾರೆ. ಮಂಡ್ಯದಲ್ಲಿ ಸ್ವಂತ ಜಮೀನು, ಮನೆ ಮಾಡದಿದ್ದರೆ ಚುನಾವಣೆ ನಂತರ ನಿಖಿಲ್ ಮಂಡ್ಯಕ್ಕೆ ಬರಲ್ಲ ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ. ಇದು ಮತಗಳಿಕೆ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಹೀಗಾಗಿ ಸ್ವಂತ ಕೃಷಿ ಜಮೀನು, ಮನೆ ನಿರ್ಮಿಸಿ ಮಂಡ್ಯ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ನಿಖಿಲ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

    ನಿಖಿಲ್‍ಗೆ ಎದುರಾಳಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡೋದು ಬಹುತೇಕ ಖಚಿತವಾಗಿದ್ದು, ಈಗಾಗಲೇ ಸುಮಲತಾ ಅವರು ಕೂಡ ಮಂಡ್ಯದ ಮಂಜುನಾಥ ನಗರದಲ್ಲಿರುವ ಸೈಟ್‍ನಲ್ಲಿ ಸ್ವಂತ ಮನೆ ಕಟ್ಟುವುದಾಗಿ ತಿಳಿಸಿದ್ದಾರೆ. ಇದರಿಂದ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ದಿನದಿಂದ ದಿನಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರ ರಂಗೇರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿಕಾ ಮನೆ ಬಾಡಿಗೆಯಲ್ಲೂ ಮಧ್ಯಸ್ಥಿಕೆ ವಹಿಸಿದ್ದ ಇಮ್ಮಡಿ ಮಹದೇವ ಸ್ವಾಮೀಜಿ

    ಅಂಬಿಕಾ ಮನೆ ಬಾಡಿಗೆಯಲ್ಲೂ ಮಧ್ಯಸ್ಥಿಕೆ ವಹಿಸಿದ್ದ ಇಮ್ಮಡಿ ಮಹದೇವ ಸ್ವಾಮೀಜಿ

    ಚಾಮರಾಜನಗರ: ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯ ವಿಷ ಪ್ರಸಾದ ಪ್ರಕರಣದ ಎ2 ಆರೋಪಿ ಅಂಬಿಕಾ ನಾಲ್ಕು ವರ್ಷದಿಂದ ಮನೆಯ ಬಾಡಿಗೆಯನ್ನ ಕಟ್ಟದ ಮನೆಯ ಮಾಲೀಕನಿಗೂ ವಂಚನೆ ಮಾಡಿದ್ದಾಳೆ.

    ಮಾರ್ಟಳ್ಳಿ ಗ್ರಾಮದಲ್ಲಿರುವ ಗೋವಿಂದ ಎಂಬವರ ಮನೆಯನ್ನ ಅಂಬಿಕಾ ಬಾಡಿಗೆ ಪಡೆದುಕೊಂಡಿದ್ದಳು. ಪ್ರಕರಣದ ಎ1 ಆರೋಪಿ ಇಮ್ಮಡಿ ಮಹದೇವ ಸ್ವಾಮೀಜಿಯ ಮಧ್ಯಸ್ಥಿಕೆಯಲ್ಲಿ ಬಾಡಿಗೆ ಪಡೆದಿದ್ದಳು. ಆದರೆ ಸುಮಾರು ನಾಲ್ಕು ವರ್ಷದಿಂದ ಮನೆ ಬಾಡಿಗೆ ಕೊಡದೆ ಮಾಲೀಕರಿಗೆ ವಂಚನೆ ಮಾಡಿದ್ದಾಳೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಮನೆ ಮಾಲೀಕ, ಮೊದಲಿಗೆ 1 ಲಕ್ಷ ಹಣ ಅಡ್ವಾನ್ಸ್ ನೀಡಿದ್ದಾಳೆ. ನಾವು ಪ್ರತಿ ತಿಂಗಳು 1 ಸಾವಿರ ಮನೆಯ ಬಾಡಿಗೆ ಕೇಳಿದೆ. ಆದರೆ ಅವರು 1 ಸಾವಿರ ಬಾಡಿಗೆ ನೀಡಲು ಸಾಧ್ಯವಿಲ್ಲ, 500 ರೂಪಾಯಿ ಕೊಡುತ್ತೇನೆ ಎಂದು ಇಮ್ಮಡಿ ಮಹದೇವ ಸ್ವಾಮೀಜಿ ಹೇಳಿದ್ದರು. ನಾನು 500 ರೂಪಾಯಿ ಆಗುವುದಿಲ್ಲ 1 ಸಾವಿರ ಬಾಡಿಗೆ ಕೊಡಬೇಕು ಎಂದಿದ್ದೆ. ಕೊನೆಗೆ ನನ್ನ ಷರತ್ತಿಗೆ ಒಪ್ಪಿ ಇಮ್ಮಡಿ ಮಹದೇವಸ್ವಾಮೀಜಿ ಮನೆ ಬಾಡಿಗೆ ಕೊಡಿಸಿದ್ದರು ಎಂದು ಹೇಳಿದ್ದಾರೆ.

    ಇದಾದ ಬಳಿಕ ನಾಲ್ಕು ವರ್ಷಗಳ ಕಾಲ ಅಂಬಿಕಾ ಮನೆಯ ಬಾಡಿಗೆ ನೀಡಲಿಲ್ಲ. ಇಮ್ಮಡಿ ಮಹದೇವಸ್ವಾಮೀಜಿಯ ಮೇಲೆ ಇದ್ದ ನಂಬಿಕೆಯಿಂದ ಮಾಲೀಕ ಗೋವಿಂದ ಅಂಬಿಕಾಳಿಂದ ಮನೆಯ ಬಾಡಿಗೆ ಕೇಳಲಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡ ಅಂಬಿಕಾ ನಾಲ್ಕು ವರ್ಷ ಬಾಡಿಗೆ ನೀಡದೆ ಮಾಲೀಕನಿಗೆ ವಂಚನೆ ಮಾಡಿದ್ದಾಳೆ. ಇತ್ತ ಬಾಡಿಗೆಯೂ ಇಲ್ಲ, ಮನೆ ಖಾಲಿಯೂ ಇಲ್ಲ. ಈಗ ಮನೆ ಖಾಲಿ ಮಾಡಿಸಿಕೊಡುವಂತೆ ಪೊಲೀಸರ ಮೊರೆ ಹೋಗಲು ಮಾಲೀಕ ನಿರ್ಧರಿಸಿದ್ದಾರೆ.

    ಹಗಲಲ್ಲೇ ಈ ಮನೆಗೆ ಇಮ್ಮಡಿ ಮಹದೇವಸ್ವಾಮೀಜಿ ಹೋಗುತ್ತಿದ್ದನು. ಇದನ್ನು ಕಂಡು ಕಾಣದಂತೆ ಮನೆಯ ಮಾಲೀಕ ಗೋವಿಂದ ಇದ್ದರು. ಈಗ ತಮ್ಮ ಮನೆ ಅನೈತಿಕ ತಾಣವಾಗಿದ್ದಕ್ಕೆ ಬೇಸರ ವ್ಯಕ್ಯ ಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಬೆಂಗ್ಳೂರಿಗರೇ ಮನೆ ಬಾಡಿಗೆ ಕೊಡೋ ಮುನ್ನ ಎಚ್ಚರ- ಬಾಡಿಗೆ ಹಣ ಕೇಳಿದ್ದಕ್ಕೆ ಬಿದ್ದಿದೆ ನಿರ್ಮಾಪಕನ ಹೆಣ..!

    ಬೆಂಗ್ಳೂರಿಗರೇ ಮನೆ ಬಾಡಿಗೆ ಕೊಡೋ ಮುನ್ನ ಎಚ್ಚರ- ಬಾಡಿಗೆ ಹಣ ಕೇಳಿದ್ದಕ್ಕೆ ಬಿದ್ದಿದೆ ನಿರ್ಮಾಪಕನ ಹೆಣ..!

    ರಮೇಶ್ ಜೈನ್ ಕೊಲೆಯಾದ ದುರ್ದೈವಿ

    ಬೆಂಗಳೂರು: ಬಾಡಿಗೆ ಹಣ ಕಲೆಕ್ಟ್ ಮಾಡುವುದಕ್ಕೆ ಹೋದ ನಿರ್ಮಾಪಕನನ್ನು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ನಾನಿ ಚಿತ್ರದ ನಿರ್ಮಾಪಕ ರಮೇಶ್ ಜೈನ್ ಕೊಲೆಯಾದ ದುರ್ದೈವಿ. ರಮೇಶ್ ಜೈನ್ ಬ್ಯಾಟರಾಯನಪುರದ ಕವಿತಾ ಲೇಔಟ್‍ನಲ್ಲಿರುವ ತಮ್ಮ ಮನೆಯ ಬಾಡಿಗೆ ಹಣವನ್ನ ಕಲೆಕ್ಟ್ ಮಾಡಿಕೊಳ್ಳುವುದಕ್ಕೆ ಹೋಗಿದ್ದರು. ಆ ಮನೆಯಲ್ಲಿ ಬಾಡಿಗೆಯಿದ್ದ ನಸೀರ್ ಹಾಗೂ ಪಾಷ ಕಳೆದ 7 ವರ್ಷದಿಂದ ಬಾಡಿಗೆಯನ್ನೇ ಕೊಡುತ್ತಿರಲಿಲ್ಲ. ಆಗ ಬಾಡಿಗೆ ವಿಚಾರದಲ್ಲಿ ಜಗಳವಾಡಿ ಕೊಲೆ ಮಾಡಿದ್ದಾರೆ.

    ಬುಧವಾರ ಸಹ ಹೇಗಾದರೂ ಮಾಡಿ ಬಾಡಿಗೆ ಹಣ ಕಲೆಕ್ಟ್ ಮಾಡಿಕೊಳ್ಳೋಣ ಅಂತ ಹೋದಾಗ ಗಲಾಟೆಯಾಗಿದೆ. ಆಗ ಇಸ್ಲಾಂ ಪಾಷ ನಸೀರ್, ಜುಬೇದ್, ಸಬೀನಾ, ಹೀನಾ ಸೇರಿಕೊಂಡು ನಿರ್ಮಾಪಕ ರಮೇಶ್ ಜೈನ್‍ನನ್ನು ಕೊಲೆ ಮಾಡಿದ್ದಾರೆ. ಬಳಿಕ ಕೋಳಿ ತ್ಯಾಜ್ಯದ ಮೂಟೆಯಲ್ಲಿ ಶವ ಸಾಗಿಸಿ ಕೆಂಗೇರಿ ಮೋರಿಯಲ್ಲಿ ಎಸೆದು ಬಂದಿದ್ದಾರೆ. ನಂತರ ತಮಗೆ ಏನು ಗೊತ್ತಿರದ ಹಾಗೇ ಸುಮ್ಮನಾಗಿ ಬಿಟ್ಟಿದ್ದರು ಎಂದು ಮೃತ ರಮೇಶ್ ಸ್ನೇಹಿತ ಸೋಮ ತಿಳಿಸಿದ್ದಾರೆ.

    ರಮೇಶ್ ಜೈನ್ ಎರಡು ದಿನಗಳಿಂದ ಮನೆಗೆ ಬಾರದಿದ್ದಕ್ಕೆ ಅನುಮಾನಗೊಂಡ ಮಗ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ರಮೇಶ್ ಜೈನ್ ಹುಡುಕಾಟ ನಡೆಸುತ್ತಿದ್ದನ್ನ ಕಂಡ ಆರೋಪಿಗಳು ತಾವೇ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಹೋಗಿ ಸರೆಂಡರ್ ಆಗಿದ್ದಾರೆ. ಪ್ರಕರಣ ಸಂಬಂಧ ಐವರನ್ನ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ರವಿ.ಡಿ.ಚನ್ನಣ್ಣನವರ್ ಹೇಳಿದ್ದಾರೆ.

    ಕೊಲೆಯಾದ ನಿರ್ಮಾಪಕ ನಸೀರಳಾ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದನು. ಅಷ್ಟೇ ಅಲ್ಲದೇ ಪತಿ ಇಲ್ಲದ ವೇಳೆ ಲಾಂಗ್ ಡ್ರೈವ್ ಕರೆಯುತ್ತಿದ್ದನು. ಅದಕ್ಕೆ ಕೊಲೆ ಮಾಡಿದ್ದೀವಿ ಅಂತ ಆರೋಪಿಗಳು ಪ್ರಾಥಮಿಕ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆ ಬಾಡಿಗೆ ಕೇಳಿದ್ದಕ್ಕೆ ಮಾಲೀಕನಿಗೇ ಸುನಾಮಿ ಕಿಟ್ಟಿ ಅವಾಜ್

    ಮನೆ ಬಾಡಿಗೆ ಕೇಳಿದ್ದಕ್ಕೆ ಮಾಲೀಕನಿಗೇ ಸುನಾಮಿ ಕಿಟ್ಟಿ ಅವಾಜ್

    ಬೆಂಗಳೂರು: ಕಿಡ್ನಾಪ್ ಆಯ್ತು, ಒರಾಯಾನ್ ಮಾಲ್ ಗಲಾಟೆಯಾಯ್ತು, ಇದೀಗ ಮತ್ತೊಂದು ವಿಚಾರಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ಸುನಾಮಿ ಕಿಟ್ಟಿ ಕಿರಿಕ್ ಮಾಡಿದ್ದಾನೆ.

    ಹೌದು. ಸುನಾಮಿ ಕಿಟ್ಟಿ ನಗರದ ಶಂಕರ ಮಠದಲ್ಲಿರೋ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದನು. ಆದ್ರೆ ಇತ್ತೀಚೆಗೆ ಆತ ಬಾಡಿಗೆ ಹಣವನ್ನು ನೀಡುತ್ತಿರಲಿಲ್ಲ. ಹೀಗಾಗಿ ಮನೆ ಮಾಲೀಕ ಶಿವಣ್ಣ ಬಾಡಿಗೆ ನೀಡುವಂತೆ ಹೇಳಿದ್ದಾರೆ. ಇದರಿಂದ ಸಿಟ್ಟುಗೊಂಡ ಕಿಟ್ಟಿ, ಶಿವಣ್ಣ ಅವರಿಗೆ ಅವಾಜ್ ಹಾಕಿದ್ದಾನೆ.

    ಬಾಡಿಗೆ ಎಷ್ಟು?:
    ಕಿಟ್ಟಿ ತಿಂಗಳಿಗೆ 22 ಸಾವಿರದಂತೆ ಶಿವಣ್ಣ ಅವರ ಮನೆಯಲ್ಲಿ ವಾಸವಾಗಿದ್ದನು. ಆದ್ರೆ 4 ತಿಂಗಳ ಬಾಡಿಗೆ 88 ಸಾವಿರ ಕೊಡದೆ ಮನೆ ಮಾಲೀಕನಿಗೆ ಕಿಟ್ಟಿ ಸತಾಯಿಸುತ್ತಿದ್ದನು. ಹೀಗಾಗಿ ಈ ಹಣವನ್ನು ಮನೆ ಮಾಲೀಕ ಕೇಳಿದಾಗ ಕಿಟ್ಟಿ ಅವರ ವಿರುದ್ಧವೇ ತಿರುಗಿ ಬಿದ್ದಿದ್ದಾನೆ.

    ಈ ಸಂಬಂಧ ಕಿಟ್ಟಿ ವಿರುದ್ಧ ಮಾಲೀಕ ಶಿವಣ್ಣ ಮಹಾಲಕ್ಷಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸದ್ಯ ಪೊಲೀಸರು ಕಿಟ್ಟಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

    ಕಿಟ್ಟಿ ವಿರುದ್ಧ ಮಹಾಲಕ್ಷೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • 1947ರ ಈ ಕಾರಿನ ಒಂದು ದಿನದ ಬಾಡಿಗೆ 1 ಲಕ್ಷ ರೂ.!

    1947ರ ಈ ಕಾರಿನ ಒಂದು ದಿನದ ಬಾಡಿಗೆ 1 ಲಕ್ಷ ರೂ.!

    ಮಂಡ್ಯ: ಒಂದು ದಿನಕ್ಕೆ ಕಾರಿನ ಬಾಡಿಗೆ ಹೆಚ್ಚೆಂದರೆ ಎಷ್ಟಿರಬಹುದು 5 ರಿಂದ 10 ಸಾವಿರ ರೂಪಾಯಿ ಇರಬಹುದು. ಆದರೆ ಈ ಕಾರಿಗೆ ಬರೋಬ್ಬರಿ ಒಂದು ಲಕ್ಷ ರೂ. ಬಾಡಿಗೆ ಇದೆ.

    ಈ ಕಾರ್ ಶ್ರೀರಂಗಪಟ್ಟಣದಲ್ಲಿ ಕಂಡು ಬಂದಿದೆ. ಸಿನಿಮಾ ಶೂಟಿಂಗ್ ಗೆಂದು ತಂದಿದ್ದ ಈ ವಿಂಟೇಜ್ ಕಾರಿನ ಬಾಡಿಗೆ ಒಂದು ಲಕ್ಷ ರೂಪಾಯಿಗಳು. ಕೇವಲ ಒಂದು ದಿನಕ್ಕೆ ಆರು ಕಿಲೋಮೀಟರ್ ಮಾತ್ರ ಸಂಚಾರ ಮಾಡುತ್ತದೆ. ನೋಡಲು ಚಿಕ್ಕದಾಗಿದ್ದು, ಮುಂದೆ ಎರಡು ಸೀಟ್ ಮತ್ತು ಹಿಂದೆ ಒಂದು ಉದ್ದನೇಯ ಸೀಟ್ ಇದೆ. ಈ ಕಾರು ಹ್ಯಾಂಡ್ ಗೇರ್ ಹೊಂದಿದೆ.

    1947ರ ಹಿಂದೂಸ್ತಾನ್ ಕಂಪನಿಯ ಕಾರು ಇದಾಗಿದೆ. ತುಂಬಾ ಹಳೆಯ ಕಾರಾಗಿದ್ದರಿಂದ ಕೇವಲ ಸಿನಿಮಾ ಶೂಟಿಂಗ್‍ ಗೆ ಮಾತ್ರ ಈ ಕಾರ್ ನೀಡಲಾಗುತ್ತದೆ. ಶ್ರೀರಂಗಪಟ್ಟಣಕ್ಕೆ ಈ ವಿಂಟೇಜ್ ಕಾರ್ ಬರುತ್ತಿದ್ದಂತೆ ಸ್ಥಳೀಯರು ನೋಡಿ ಭಾರೀ ಖುಷಿಪಟ್ಟಿದ್ದಾರೆ. ಇಷ್ಟು ಹಳೆಯ ಕಾರನ್ನು ನೋಡುತ್ತಿರುವುದು ಇದೇ ಮೊದಲ ಬಾರಿಗೆ ಎಂದು ಅಚ್ಚರಿಯನ್ನು ಕೂಡ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 10 ಎಕರೆ ಬೌರಿಂಗ್ ಜಾಗಕ್ಕೆ ವರ್ಷಕ್ಕೆ ಕೇವಲ 30 ರೂ. ಬಾಡಿಗೆ!

    10 ಎಕರೆ ಬೌರಿಂಗ್ ಜಾಗಕ್ಕೆ ವರ್ಷಕ್ಕೆ ಕೇವಲ 30 ರೂ. ಬಾಡಿಗೆ!

    ಬೆಂಗಳೂರು: ಕೋಟಿ ಕೋಟಿ ಅಕ್ರಮ ಸಂಪತ್ತು ಸಿಕ್ಕ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಬೌರಿಂಗ್ ಕ್ಲಬ್ ಜಾಗದ ಬಾಡಿಗೆ ಕೇವಲ 30 ರೂಪಾಯಿ.

    ಹೌದು. 10 ಎಕರೆ ಜಾಗದಲ್ಲಿರುವ ಬೌರಿಂಗ್ ಕ್ಲಬ್ ಬಿಬಿಎಂಪಿಗೆ ವರ್ಷಕ್ಕೆ 30 ರೂ. ಬಾಡಿಗೆಯನ್ನು ನೀಡುತ್ತಿದೆ. ವರ್ಷಕ್ಕೆ 30 ರೂ. ಬಾಡಿಗೆ ನೀಡುವ ಬೌರಿಂಗ್ ಕ್ಲಬ್ ಸದಸ್ಯತ್ವ ಪಡೆಯಲು 20 ಲಕ್ಷ ರೂ. ನೀಡಬೇಕು. ಲಾಕರ್ ನಲ್ಲಿ ಅಕ್ರಮ ಸಂಪತ್ತು ಪತ್ತೆಯಾದ ಬಳಿಕ ಬಾಡಿಗೆ ಹೆಚ್ಚಿಸುವ ಕುರಿತು ಬಿಬಿಎಂಪಿಯಲ್ಲಿ ಚರ್ಚೆ ನಡೆಯುತ್ತಿದೆ

    ಭಾರೀ ಆದಾಯ:
    1956ರಲ್ಲಿ 99 ವರ್ಷಗಳ ಅವಧಿಗೆ ಬೌರಿಂಗ್ ಕ್ಲಬ್‍ಗೆ 10 ಎಕರೆ ಜಾಗವನ್ನು ವಾರ್ಷಿಕ 30 ರೂ. ಬಾಡಿಗೆಯನ್ನು ಬಿಬಿಎಂಪಿ ನಿಗದಿಪಡಿಸಿ ಗುತ್ತಿಗೆಗೆ ನೀಡಿದೆ. ಈ ಜಾಗದ ಗುತ್ತಿಗೆ ಅವಧಿ 99 ವರ್ಷವಾಗಿದ್ದು, 2055ರವರಗೆ ಈ ಜಾಗವನ್ನು ಬೌರಿಂಗ್ ಕ್ಲಬ್ ತನ್ನ ಸುಪರ್ದಿಯಲ್ಲಿ ಇಟ್ಟುಕೊಳ್ಳಲಿದೆ. ವಾರ್ಷಿಕ ಕೇವಲ 30 ರೂ. ಬಾಡಿಗೆ ನೀಡುತ್ತಿರುವ ಬೌರಿಂಗ್ ಕ್ಲಬ್‍ನ ತಾತ್ಕಾಲಿಕ ಸದಸ್ಯತ್ವ ಪಡೆಯಲು 2 ಲಕ್ಷ ರೂ. ಕಾಯಂ ಸದಸ್ಯತ್ವಕ್ಕೆ 20 ಲಕ್ಷ ರೂ. ನೀಡಬೇಕು.

    ನಿಗದಿ ಮಾಡಲಾಗಿದ್ದ ಮೊತ್ತ ಹೆಚ್ಚಿಸುವಂತೆ 1956ರಲ್ಲಿ ಆರ್.ದಯಾನಂದ್ ಕೌನ್ಸಿಲ್‍ನಲ್ಲಿ ವಾದ ಮಂಡಿಸಿದ್ದರು. 99 ವರ್ಷಗಳ ಬದಲಿಗೆ 10 ವರ್ಷಕ್ಕೆ ಗುತ್ತಿಗೆ ನೀಡಿದ್ರೆ ಒಳ್ಳೆಯದು ಎಂಬುವುದು ದಯಾನಂದವರ ವಾದವಾಗಿತ್ತು. ಅಂದು ನಡೆದ ಸಭೆಯಲ್ಲಿ ಕ್ಲಬ್‍ಗೆ 99 ವರ್ಷಕ್ಕೆ ಜಾಗ ಗುತ್ತಿಗೆ ನೀಡುವುದರ ಪರವಾಗಿ 19 ಮತಗಳ ಚಲಾವಣೆಯಾದ್ರೆ, ವಿರೋಧವಾಗಿ 4 ಮತಗಳು ಮಾತ್ರ ಚಲಾವಣೆಯಾದಗಿದ್ದವು.

    ಹೇಗಿದೆ ಬೌರಿಂಗ್ ಕ್ಲಬ್:
    ಕ್ಲಬ್ ಸದಸ್ಯರಿಗಾಗಿ 2 ಬ್ಯಾಡ್ಮಿಂಟನ್ ಕೋರ್ಟ್, 4 ಬಿಲಿಯರ್ಡ್ಸ್, 5 ಟೆನಿಸ್ ಕೋರ್ಟ್, ಹೆಲ್ತ್ ಪಾರ್ಲರ್ ಸೇರಿದಂತೆ ಇನ್ನಿತರ ವ್ಯವಸ್ಥೆಗಳಿವೆ. ಕ್ಲಬ್‍ನಲ್ಲಿ ಸದಸ್ಯರು ಉಳಿದುಕೊಳ್ಳಲು ವಿವಿಧ ಮಾದರಿಯ 60 ಕೊಠಡಿಗಳನ್ನು ನಿರ್ಮಿಸಲಾಗಿದೆ. ಇವುಗಳಿಂದಲೂ ಕ್ಲಬ್‍ಗೆ ಆದಾಯ ಬರುತ್ತದೆ. ಸದಸ್ಯತ್ವ ಪಡೆದವರಿಗೆ ಮಾತ್ರ ಕ್ಲಬ್ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಕ್ಲಬ್ ಪ್ರವೇಶಿಸಿಬೇಕಾದ್ರೆ ನಿಗದಿತ ಸಮವಸ್ತ್ರ ಧರಿಸಲೇಕು. ಟ್ರ್ಯಾಕ್ ಪ್ಯಾಂಟ್, ಶಾಟ್ರ್ಸ್ ಧರಿಸಿದವರಿಗೆ ಪ್ರವೇಶವಿಲ್ಲ.

    ನಕ್ಷೆ ಬದಲಾವಣೆ?:
    ಗುತ್ತಿಗೆಗೆ ಒಪ್ಪಂದದಲ್ಲಿ ಕೆಲ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಿಸಬಾರದು ಎಂಬುವುದು ಉಲ್ಲೇಖಿಸಲಾಗಿದೆ. ಆದ್ರೆ ಕ್ಲಬ್ ನಕ್ಷೆಗೂ ಮೀರಿ ಅಕ್ರಮವಾಗಿ ತನ್ನ ಸದಸ್ಯರಿಗೆ ಕೊಠಡಿ, ಆಟದ ಮೈದಾನ, ಸ್ಪೆಶಲ್ ಗೆಸ್ಟ್ ರೂಮ್‍ಗಳನ್ನು ನಿರ್ಮಿಸಲಾಗಿದೆ ಎಂಬ ಆರೋಪ ಈಗ ಕೇಳಿಬಂದಿದೆ.

    ಹಣ ಸಿಕ್ಕಿದ್ದು ಹೇಗೆ?
    ಬೌರಿಂಗ್ ಇನ್ಸ್ಟಿಟ್ಯೂಟ್ ಆಡಳಿತ ಮಂಡಳಿ ಲಾಕರ್ ನಲ್ಲಿ ಇಟ್ಟಿದ್ದ ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗಿ ಎಂದು ಸದಸ್ಯರಿಗೆ ತಿಳಿಸಿತ್ತು. ಒಂದು ವೇಳೆ ಲಾಕರ್ ನಲ್ಲಿರುವ ವಸ್ತು ಕೊಂಡೊಯ್ಯದಿದ್ದರೆ ಲಾಕರ್ ಒಡೆಯುದಾಗಿ ನೋಟಿಸ್ ಕಳುಹಿಸಿತ್ತು. ಸ್ವಲ್ಪ ಕೆಲಸ ಕಾರ್ಯಗಳಿವೆ. ಆದ್ದರಿಂದ ಅವುಗಳನ್ನು ಒಡೆದು ನವೀಕರಣಗೊಳಿಸಬೇಕಿದೆ ಎಂದು ಬೌರಿಂಗ್ ಆಡಳಿತ ಮಂಡಳಿ ನೋಟಿಸಿನಲ್ಲಿ ತಿಳಿಸಿತ್ತು. ಆದರೆ ಉದ್ಯಮಿ ಅವಿನಾಶ್ ನೋಟಿಸ್ ಬಗ್ಗೆ ತಲೆ ತಲೆಕೆಡಿಸಿಕೊಂಡಿರಲ್ಲ. ಕೊನೆಗೆ ಆಡಳಿತ ಮಂಡಳಿ 86, 87ರಲ್ಲಿ ಲಾಕರ್ ಒಡೆದಿತ್ತು. ಆಗ ಈ ಕೋಟಿ ಕೋಟಿ ಆಸ್ತಿ ಪತ್ತೆಯಾಗಿತ್ತು. ರಾಜಸ್ಥಾನ ಮೂಲದ ಅವಿನಾಶ್ ಅಮರ್ಲಾಲ್ ಪ್ರೆಸ್ಟಿಜ್ ಗ್ರೂಪ್ ಆಫ್ ಕಂಪೆನಿಯಲ್ಲಿ ಪಾಲುದಾರನಾಗಿದ್ದು, ಬೆಂಗಳೂರಲ್ಲಿ 30% ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ಲಾಕರ್ ನಲ್ಲಿ ಏನಿತ್ತು?
    ಉದ್ಯಮಿ ಅವಿನಾಶ್ ಅಮರ್ ಲಾಲ್, ನಗರದ ಟೆನಿಸ್ ಕೋರ್ಟ್ ನಲ್ಲಿ ಕಳೆದ 1 ವರ್ಷದಿಂದ ನಿಧಿಯನ್ನು ಬಚ್ಚಿಟ್ಟಿದ್ದರು. ಬೌರಿಂಗ್ ಇನ್ಸ್ಟಿಟ್ಯೂಟ್ ಆಡಳಿತ ಮಂಡಳಿ ಅವರು ಬಚ್ಚಿಟ್ಟಿದ್ದ ಲಾಕರ್ ಓಪನ್ ಮಾಡಿದ್ದಾರೆ. 2 ಲಾಕರ್ ಓಪನ್ ಮಾಡಿದ್ದು, ಅದರಲ್ಲಿ 2 ಬ್ಯಾಗ್ ಪತ್ತೆಯಾಗಿತ್ತು. ಈ 2 ಬ್ಯಾಗಿನಲ್ಲಿ ಸುಮಾರು 3.90 ಕೋಟಿ ನಗದು, 5 ಕೋಟಿ ಮೌಲ್ಯದ ವಜ್ರಾಭರಣ ಮತ್ತು 100ಕೋಟಿ ರೂ. ಆಸ್ತಿ ಪತ್ರ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಐಟಿ ಇಲಾಖೆ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ https://www.instagram.com/publictvnews/

  • ಬಾಡಿಗೆ ಆಸೆಗೆ ಹೆತ್ತವರನ್ನೇ ಹೊರಹಾಕಿದ ಮಗ- ಮನೆಯಲ್ಲಿದ್ದ ವಸ್ತುಗಳ ಧ್ವಂಸ

    ಬಾಡಿಗೆ ಆಸೆಗೆ ಹೆತ್ತವರನ್ನೇ ಹೊರಹಾಕಿದ ಮಗ- ಮನೆಯಲ್ಲಿದ್ದ ವಸ್ತುಗಳ ಧ್ವಂಸ

    ಹಾಸನ: ಬಾಡಿಗೆ ಹಣದ ಆಸೆಗೆ ಮಗನೇ ತಂದೆ-ತಾಯಿಯನ್ನು ಮನೆ ಖಾಲಿ ಮಾಡುವಂತೆ ಹಲ್ಲೆ ನಡೆಸಿ ಮನೆಯಲ್ಲಿದ್ದ ವಸ್ತುಗಳನ್ನ ಧ್ವಂಸಗೊಳಸಿರುವ ಘಟನೆ ಹಾಸದಲ್ಲಿ ನಡೆದಿದೆ.

    ನಗರದ ವಲ್ಲಭಾಯಿ ರಸ್ತೆಯ ನಿವಾಸಿಗಳಾದ ಕೃಷ್ಣಪ್ಪ ಮತ್ತು ಗಂಗಮ್ಮ ಹಲ್ಲೆಗೊಳಗಾಗಿರುವ ವೃದ್ಧ ದಂಪತಿ. ಕೃಷ್ಣಪ್ಪ ಮತ್ತು ಗಂಗಮ್ಮ ತಮ್ಮ ಇಬ್ಬರು ಮಕ್ಕಳಿಗೂ ಒಂದೊಂದು ಮನೆಯನ್ನು ನೀಡಿ ತಾವು ಪುಟ್ಟ ಮನೆಯೊಂದರಲ್ಲಿ ವಾಸವಾಗಿದ್ದರು.

    ಹಿರಿಯ ಮಗ ನಾಗೇಶ್ ಮನೆಯನ್ನು ಬಾಡಿಗೆಗೆ ನೀಡಿದ್ರೆ ಒಂದಿಷ್ಟು ಹಣ ಸಿಗುತ್ತೆ ಎಂಬ ದುರಾಸೆಯಿಂದ ತಂದೆ-ತಾಯಿಯ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸಗೆಳಿಸಿ ಕಿರುಕುಳ ನೀಡಿದ್ದಾನೆ. ದಿನನಿತ್ಯ ಕುಡಿದು ಬಂದು ತಮ್ಮ ಮೇಲೆ ದೌರ್ಜನ್ಯ ಮಾಡುತ್ತಿರುವ ಮಗನಿಂದ ನಮಗೆ ರಕ್ಷಣೆ ನೀಡಿ ಎಂದು ವೃದ್ಧ ದಂಪತಿ ಪೊಲೀಸರ ಮೊರೆ ಹೋಗಿದ್ದಾರೆ.

  • ಪ್ರತಿಷ್ಟಿತ ಹೋಟೆಲ್‍ನ ಒಂದು ರೂಮಿಗೆ ಯಶ್ 2 ವರ್ಷದಿಂದ 6ಲಕ್ಷ ರೂ. ಬಾಡಿಗೆ ಕಟ್ಟುತ್ತಿದ್ದಾರೆ- ಪ್ರಥಮ್

    ಪ್ರತಿಷ್ಟಿತ ಹೋಟೆಲ್‍ನ ಒಂದು ರೂಮಿಗೆ ಯಶ್ 2 ವರ್ಷದಿಂದ 6ಲಕ್ಷ ರೂ. ಬಾಡಿಗೆ ಕಟ್ಟುತ್ತಿದ್ದಾರೆ- ಪ್ರಥಮ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬಾಡಿಗೆ ಮನೆ ವಿವಾದದ ಬಗ್ಗೆ ಬುಧವಾರ ಫೇಸ್‍ಬುಕ್ ಲೈವ್ ಬಂದಿದ್ದರು. ಈಗ ಬಿಗ್‍ಬಾಸ್ ವಿಜೇತ ಪ್ರಥಮ್ ಯಶ್ ಅವರ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.

    ಬಿಗ್‍ಬಾಸ್ ಪ್ರಥಮ್ ತಮ್ಮ ಫೇಸ್‍ಬುಕ್‍ನಲ್ಲಿ ಯಶ್ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್‍ವೊಂದರಲ್ಲಿ 2 ವರ್ಷದಿಂದ ಯಶ್ ಅವರ ಒಂದು ರೂಮ್(ಆಫೀಸ್) ಇದೆ. ಆ ರೂಮಿಗೆ ತಿಂಗಳಿಗೆ 6 ಲಕ್ಷಕ್ಕೂ ಹೆಚ್ಚು ರೂ. ಬಾಡಿಗೆ ನೀಡುತ್ತಾರೆ.

    ಆ ರೂಮಿನಲ್ಲಿ ಯಶ್ ಸಿನಿಮಾದವರನ್ನು ಬಂದರೆ ಕೂರಿಸಿ ಮಾತನಾಡುತ್ತಾರೆ. ಹೊಸಬರನ್ನು ಪ್ರೋತ್ಸಾಹಿಸೋಕೆ ಹಾಗೂ ತನ್ನ ಆಪ್ತ ಸ್ನೇಹಿತರ ಜೊತೆ ಕ್ರಿಕೆಟ್ ಆಡೋಕೆ ಆ ರೂಮನ್ನು ಉಪಯೋಗಿಸುತ್ತಾರೆ. ಹೊಸಬರನ್ನು ಪ್ರೋತ್ಸಾಹಿಸೋಕೆ 6 ಲಕ್ಷ ರೂ. ಬಾಡಿಗೆ ಕಟೋ ಯಶ್ ಅವರಿಗೆ ತನ್ನ ಮನೆ ಬಾಡಿಗೆ ಕಟ್ಟೋಕೆ ದುಡ್ಡಿಲ್ಲ ಎಂದರೆ ಜನ ನಂಬಬೇಕು ಎಂದು ಪ್ರಥಮ್ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಯಶ್ ಈಗ ಪಡೆಯುವ ಸಂಭಾವಣೆ(ನಾನು ಮಾತನಾಡಬಾರದು, ಆದ್ರೂ ಹೇಳ್ತೀನಿ) ಯಶ್ ಈಗ ಪಡೆಯುವ ಸಂಭಾವನೆಯಲ್ಲಿ ಆತರ ಎರಡು ಮನೆ ಖರೀದಿಸಬಹುದು. ಅಂತವರಿಗೆ ಮನೆ ಬಾಡಿಗೆ ಕೊಡೋಕೆ ದುಡ್ಡಿಲ್ಲ(ಆಪಾದನೆಗಳು). ಅಷ್ಟೇ ಅಲ್ಲದೇ ತುಂಬಾ ಸಲ ಅವರನ್ನು ಮೀಟ್ ಮಾಡಲು ಹೋಟೆಲ್‍ಗೆ ಹೋಗಿದ್ದೇನೆ. ಹೊಸಬರನ್ನು ಪ್ರೋತ್ಸಾಹಿಸೋಕೆ ಆರು ಲಕ್ಷ ಬಾಡಿಗೆ ಕಟ್ಟೋ ಯಶ್ ರ ಬಗ್ಗೆ ದಯವಿಟ್ಟು ಅಪಪ್ರಚಾರ ಮಾಡುವುದು ಬೇಡ ಎಂದು ಎಂದು ಪ್ರಥಮ್ ಮನವಿ ಮಾಡಿಕೊಂಡಿದ್ದಾರೆ.

    ಯಶ್ ಒಬ್ಬ ಒಳ್ಳೆಯ ಮನುಷ್ಯ. ದಯವಿಟ್ಟು ಕಾಲೆಳೆಯಬೇಡಿ. ತುಂಬಾ ಕಷ್ಟಪಟ್ಟು ಯಶ್ ಆಗಿದ್ದಾರೆ. ಸುಮ್ಮನೆ ಕಲ್ಲು ಹೊಡೆಯಬೇಡಿ. ಈ ಸಮಸ್ಯೆಗೆ ಒಂದೇ ಪರಿಹಾರ. ನನ್ನ ಆರನೇ ಸೆನ್ಸ್ ಹೇಳುತ್ತಿದೆ ಅದಷ್ಟು ಬೇಗ ಮನೆಗೆ ಅವಳಿ-ಜವಳಿ ಮಗು ಬೇಕೆಂದು. ಆಗ ಈ ಸಮಸ್ಯೆ ಆಗಲ್ಲ ಎಂದು ಪ್ರಥಮ್ ಪೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

  • ಕರ್ನಾಟಕದತ್ತ ಅಮಿತ್ ಶಾ ಚಿತ್ತ- ಬೆಂಗ್ಳೂರಲ್ಲೇ ವಾಸ್ತವ್ಯ ಹೂಡಲಿದ್ದಾರೆ ರಾಷ್ಟ್ರಾಧ್ಯಕ್ಷ

    ಕರ್ನಾಟಕದತ್ತ ಅಮಿತ್ ಶಾ ಚಿತ್ತ- ಬೆಂಗ್ಳೂರಲ್ಲೇ ವಾಸ್ತವ್ಯ ಹೂಡಲಿದ್ದಾರೆ ರಾಷ್ಟ್ರಾಧ್ಯಕ್ಷ

    ಬೆಂಗಳೂರು: ಈಗಾಗಲೇ ಗುಜರಾತ್ ಚುನಾವಣೆ ಮುಗಿದಿದ್ದು, ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕದತ್ತ ಮುಖ ಮಾಡಿದ್ದಾರೆ. ಗುಜರಾತ್ ಫಲಿತಾಂಶದ ಬೆನ್ನಲ್ಲೇ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

    ಸಂಕ್ರಾಂತಿ ವೇಳೆಗೆ ರಾಜ್ಯಕ್ಕೆ ಆಗಮಿಸಲಿರುವ ಅಮಿತ್ ಶಾ, ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಸಾದರಹಳ್ಳಿ ಸಮೀಪ ಏರ್ ಪೋರ್ಟ್ ರಸ್ತೆಯಲ್ಲಿರುವ ಬಹು ದೊಡ್ಡ ವಿಲ್ಲಾವೊಂದನ್ನು ಬಾಡಿಗೆಗೆ ಪಡೆದಿದ್ದಾರೆ.

    ಬಿಜೆಪಿ ಕಚೇರಿ ಹಾಗೂ ವಿಮಾನ ನಿಲ್ದಾಣಕ್ಕೆ ಹತ್ತಿರವಾಗಲೆಂದು ಸಾದರಹಳ್ಳಿಯಲ್ಲಿ ವಿಲ್ಲಾ ಬಾಡಿಗೆಗೆ ಪಡೆದಿದ್ದಾರೆ. ಈ ವಿಲ್ಲಾದಲ್ಲೇ ಎಲೆಕ್ಷನ್ ಕಾರ್ಯತಂತ್ರ ನಡೆಯುತ್ತದೆ. ವಾರ್ ರೂಂ, ಅಮಿತ್ ಶಾ ಅವರ ಸ್ಟ್ರ್ಯಾಟಜಿ ರೂಂ ಕೂಡ ವಿಲ್ಲಾದಲ್ಲೇ ಇದ್ದು, ವಾರ್ ರೂಂನ 10 ತಂಡವೂ ಬೆಂಗಳೂರಿಗೆ ಶಿಫ್ಟ್ ಆಗಲಿದೆ.

    ಅಮಿತ್ ಶಾ ಅವರು ವಾರದಲ್ಲಿ ಎರಡು ಬಾರಿ ಬೆಂಗಳೂರಿಗೆ ಭೇಟಿ ಕೊಡಲಿದ್ದಾರೆ. ಈ ವೇಳೆ ಮಂಗಳೂರು, ಮೈಸೂರು, ಹುಬ್ಬಳಿ, ಬೆಳಗಾವಿಗೂ ಕೂಡ ಅವರು ಹೋಗಲಿದ್ದಾರೆ. ಒಟ್ಟಿನಲ್ಲಿ ಹೊಸ ವರ್ಷದಿಂದ ಕರ್ನಾಟಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಅವರ ಅಸಲಿ ಆಟ ಶುರುವಾಗುತ್ತದೆ.

  • ಬಾಡಿಗೆ ನೀಡದಕ್ಕೆ ಕರೆಂಟ್, ನೀರು ಕಟ್ ಮಾಡಿದ ಮನೆ ಮಾಲೀಕನ ಮೇಲೆಯೇ ಹಲ್ಲೆ

    ಬಾಡಿಗೆ ನೀಡದಕ್ಕೆ ಕರೆಂಟ್, ನೀರು ಕಟ್ ಮಾಡಿದ ಮನೆ ಮಾಲೀಕನ ಮೇಲೆಯೇ ಹಲ್ಲೆ

    ಕೊಪ್ಪಳ: ಮನೆಯ ಬಾಡಿಗೆ ಕೊಟ್ಟಿಲ್ಲವೆಂದು ನೀರು, ವಿದ್ಯುತ್ ಕಟ್ ಮಾಡಿದ ಮನೆ ಮಾಲೀಕನಿಗೆ ಬಾಡಿಗೆದಾರರು ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಕೊಪ್ಪಳದ ಕಲ್ಯಾಣ ನಗರದಲ್ಲಿ ನಡೆದಿದೆ.

    ಬಾಬಾ ಹಲ್ಲೆಗೊಳಗಾದ ಮನೆಯ ಮಾಲೀಕ. ಬಾಬಾ ಮನೆಯಲ್ಲಿ ಮೊಹಮ್ಮದ್ ಎಂಬವರು 14 ತಿಂಗಳಿನಿಂದ ವಾಸವಾಗಿದ್ದಾರೆ. ಕೇವಲ ಎರಡು ದಿನ ಬಾಡಿಗೆ ನೀಡಲು ತಡ ಮಾಡಿದ್ದಕ್ಕೆ ಮನೆಯ ಓನರ್ ಬುಧವಾರದಿಂದಲೇ ಬಾಡಿಗೆದಾರರ ಮನೆಯ ನೀರು ಮತ್ತು ವಿದ್ಯುತ್ ಕಟ್ ಮಾಡಿದ್ದಾನೆ.

    ಮುಂದಿನ ತಿಂಗಳು 1ನೇ ತಾರೀಖಿನಿಂದ ಮನೆಯನ್ನು ಖಾಲಿ ಮಾಡುತ್ತವೆ. ನಿಮ್ಮ ಬಳಿಯಿರುವ 10 ಸಾವಿರ ಡಿಪಾಸಿಟ್ ಹಣದಲ್ಲಿ ವಜಾ ಮಾಡಿಕೊಳ್ಳಿ ಎಂದು ಹೇಳಿದರೂ ಮನೆಯ ಓನರ್ ದರ್ಪ ತೋರಿದ್ದಾನೆ. ಇಂದು ಬೆಳಗ್ಗೆ ನೀರು ಕೊಡಿ ಎಂದು ಕೇಳಲು ಹೋದಾಗ ಮನೆಯ ಮಾಲೀಕ ಮಹಿಳೆಗೆ ಅವಾಚ್ಯ ಶಬ್ಧಗಳಿಂದ  ನಿಂದಿಸಿದ್ದಾನೆ. ಇದರಿಂದ ಕೋಪಗೊಂಡು ನಾನು ಮತ್ತು ನನ್ನ ಪತ್ನಿ ಇಬ್ಬರೂ ಸೇರಿ ಹೊಡೆದಿದ್ದೇವೆ ಎಂದು ಮೊಹಮದ್ ಜೀಲಾನಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.