Tag: rent

  • ಒಂದು ತಿಂಗಳು ತಡೆಯಿರಿ ಬಾಡಿಗೆ ಕೊಡ್ತೀವಿ- ಚಾಕುವಿನಿಂದ ಇರಿದ ಮನೆ ಓನರ್

    ಒಂದು ತಿಂಗಳು ತಡೆಯಿರಿ ಬಾಡಿಗೆ ಕೊಡ್ತೀವಿ- ಚಾಕುವಿನಿಂದ ಇರಿದ ಮನೆ ಓನರ್

    – ಲಾಕ್‍ಡೌನ್ ನಿಂದ ಕೆಲಸ ಕಳೆದುಕೊಂಡಿದ್ದ ಮಹಿಳೆ ಪತಿ

    ಬೆಂಗಳೂರು: ಬಾಡಿಗೆ ಕೊಡದ್ದಕ್ಕೆ ತನ್ನ ಬಾಡಿಗೆದಾರ ಮಹಿಳೆಗೆ ಮನೆಯ ಯಜಮಾನಿ ಚಾಕುವಿನಿಂದ ಇರಿದಿರುವ ಆಘಾತಕಾರಿ ಘಟನೆ ರಾಜಗೋಪಾಲ ನಗರದಲ್ಲಿ ನಡೆದಿದೆ.

    ಪೂರ್ಣಿಮಾ(28) ಅವರು 24,000 ರೂ, ಬಾಡಿಗೆ ಬಾಕಿ ಉಳಿಸಿಕೊಂಡಿದ್ದರು. ಇದನ್ನು ಕೊಡದ್ದಕ್ಕೆ ಸಿಟ್ಟಿಗೆದ್ದ ಮನೆಯ ಯಜಮಾನಿ ಜಾಕು ಇರಿದಿದ್ದಾಳೆ. ಸದ್ಯ ಪೂರ್ಣಿಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಲಗ್ಗೆರೆಯ ಮಾರುತಿ ನಗರದ ಯಜಮಾನಿ ಕೆ.ಮಹಾಲಾಕ್ಷ್ಮಿಯನ್ನು ಪೊಲೀಸರು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ ಬಂಧಿಸಿದ್ದಾರೆ. ಮಹಿಳೆಯನ್ನು ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಘಟನೆ ಹೇಗೆ ನಡೀತು?
    ಪೂರ್ಣಿಮಾ ಹಾಗೂ ಪತಿ ರವಿಚಂದ್ರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮಹಾಲಕ್ಷ್ಮಿ ಅವರ ಸಿಂಗಲ್ ಬೆಡ್ ರೂಮ್ ಮನೆಯಲ್ಲಿ ಒಂದು ವರ್ಷದಿಂದ ವಾಸವಾಗಿದ್ದಾರೆ. ಮನೆಗೆ 65 ಸಾವಿರ ರೂ. ಮುಂಗಡ ಹಣವನ್ನು ಸಹ ನೀಡಿದ್ದಾರೆ. ಪ್ರತಿ ತಿಂಗಳು 6,000 ಬಾಡಿಗೆಯನ್ನೂ ನೀಡಿದ್ದಾರೆ. ಆದರೆ ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಪೂರ್ಣಿಮಾ ಪತಿ ತನ್ನ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸವನ್ನು ಮೇನಲ್ಲಿ ಕಳೆದುಕೊಂಡಿದ್ದಾರೆ. ಪೂರ್ಣಿಮಾ ಆರಂಭದಲ್ಲಿ ಮನೆಯಲ್ಲೇ ಇರುತ್ತಿದ್ದರು. ಆದರೆ ಇತ್ತೀಚೆಗೆ ಬೇರೆ ಕಂಪನಿಗೆ ಕೆಲಸಕ್ಕೆ ಸೇರಿದ್ದಾರೆ.

    ಈ ವೇಳೆ ಅವರಿಗೆ ಹಣದ ಬಿಕ್ಕಟ್ಟು ಉಂಟಾಗಿದ್ದು, ರವಿಚಂದ್ರ ಅವರು ನಾಲ್ಕು ತಿಂಗಳಿಂದ ಬಾಡಿಗೆ ಪಾವತಿಸಿಲ್ಲ. ಶುಕ್ರವಾರ ರಾತ್ರಿ ಆರೋಪಿ ಮಹಾಲಕ್ಷ್ಮಿ ಬಾಡಿಗೆ ಕೇಳಲು ಪೂರ್ಣಿಮಾ ಮನೆಗೆ ಹೋಗಿದ್ದಾರೆ. ಈ ವೇಳೆ ದಂಪತಿ ಇನ್ನೊಂದು ತಿಂಗಳು ಕಾಯಿರಿ ಎಂದು ಮನವಿ ಮಾಡಿದ್ದಾರೆ. ಆದರೆ ಮಹಾಲಕ್ಷ್ಮಿ ಇದಾವುದನ್ನೂ ಕೇಳದೆ ಬಾಡಿಗೆ ಕೊಡದಿದ್ದರೆ ಮನೆಯಿಂದ ಹೊರಗಡೆ ಹೋಗಿ ಎಂದು ಕೂಗಾಡಿದ್ದಾಳೆ. ಆಗ ಬಾಕಿ ಇರುವ ಬಾಡಿಗೆಯನ್ನು ಮುಂಗಡ ಹಣದಲ್ಲೇ ತೆಗೆದುಕೊಳ್ಳಿ ಎಂದು ಪೂರ್ಣಿಮಾ ಹೇಳಿದ್ದಾರೆ. ಆದರೆ ಮಹಾಲಕ್ಷ್ಮಿ ಇದಾವುದನ್ನೂ ಕೇಳದೆ, ಮುಂಗಡ ಹಣವನ್ನು ಚೀಟಿ ಹಾಕಿರುವುದಾಗಿ ಹೇಳಿದ್ದಾಳೆ.

    ಆಗ ಪೂರ್ಣಿಮಾ ಅಸಹಾಯಕಳಾಗಿದ್ದು, ಇತ್ತ ಮಹಾಲಕ್ಷ್ಮಿ ತನ್ನ ತಾಳ್ಮೆಯನ್ನು ಕಳೆದುಕೊಂಡಿದ್ದಾಳೆ. ಈ ವೇಳೆ ದಿಡೀರನೇ ಅಡುಗೆ ಮನೆಗೆ ಓಡಿ ಹೋಗಿದ್ದಾಳೆ. ಅಲ್ಲಿದ್ದ ಚಾಕುವನ್ನು ತಂದು ಪೂರ್ಣಿಮಾಳ ಕೈ ಹಾಗೂ ಕುತ್ತಿಗೆಗೆ ಇರಿದಿದ್ದಾಳೆ. ಈ ವೇಳೆ ರವಿಚಂದ್ರ ಮಧ್ಯಪ್ರವೇಶಿಸಿದ ಬಳಿಕ ನಿಲ್ಲಿಸಿ, ಓಡಿ ಹೋಗಿದ್ದಾಳೆ.

    ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಘಟನೆ ನಡೆದ ರಾತ್ರಿಯೇ ಮಹಾಲಕ್ಷ್ಮಿಯನ್ನು ಬಂಧಿಸಿದ್ದೇವೆ. ಮಹಿಳಾ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದೇವೆ. ಶನಿವಾರವೇ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಮುಸ್ಲಿಮರು, ನಾಯಿಗಳಿಗೆ ಪ್ರವೇಶವಿಲ್ಲ – ವೈರಲ್ ಆಯ್ತು ಅಪಾರ್ಟ್‍ಮೆಂಟ್ ನಿಯಮದ ಪೋಸ್ಟ್

    ಮುಸ್ಲಿಮರು, ನಾಯಿಗಳಿಗೆ ಪ್ರವೇಶವಿಲ್ಲ – ವೈರಲ್ ಆಯ್ತು ಅಪಾರ್ಟ್‍ಮೆಂಟ್ ನಿಯಮದ ಪೋಸ್ಟ್

    ಮುಂಬೈ: 3ಬಿಎಚ್‍ಕೆ ಫ್ಲ್ಯಾಟ್ ಲಭ್ಯವಿದೆ. ಆದರೆ ಮುಸ್ಲಿಮರು, ನಾಯಿಗಳಿಗೆ ಪ್ರವೇಶವಿಲ್ಲ ಎಂದು ಮುಂಬೈ ನಗರದ ಅಪಾರ್ಟ್‍ಮೆಂಟ್ ಮಾಲೀಕ ಹಾಕಿರುವ ಟು ಲೆಟ್ ಫಲಕ ಈಗ ವಿವಾದಕ್ಕೆ ಕಾರಣವಾಗಿದೆ.

    3 ಬಿಎಚ್‍ಕೆ ನಿವಾಸ ಭೋಗ್ಯಕ್ಕೆ ಲಭ್ಯವಿದೆ. ಆದರೆ ಮುಸ್ಲಿಮರು ಹಾಗೂ ನಾಯಿಗಳನ್ನು ಹೊಂದಿರುವವರಿಗೆ ಪ್ರವೇಶವಿಲ್ಲ ಎಂದು ಹಾಕಿದ್ದಾರೆ. ಮುಂಬೈ ನಿವಾಸಿ ಅನ್ಮೆಶ್ ಪಾಟೀಲ್ ಈ ನಿಯಮಗಳು ಹಾಗೂ ಫ್ಲ್ಯಾಟ್‍ನ ಚಿತ್ರವನ್ನು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸಖತ್ ವೈರಲ್ ಆಗಿದೆ. ವರ್ಣಬೇಧ ನೀತಿಗೆ ಇದೊಂದು ಉದಾಹರಣೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪತ್ರಕರ್ತೆ ರಾಣಾ ಅಯ್ಯುಬ್ ಈ ಪೋಸ್ಟ್ ಶೇರ್ ಮಾಡಿ, ಮುಸ್ಲಿಮರು ಹಾಗೂ ನಾಯಿಗಳಿಗೆ ಪ್ರವೇಶವಿಲ್ಲ ಎಂಬುದು ಮುಂಬೈನ ಬಾಂದ್ರಾದಲ್ಲಿ ಸೊಗಸಾದ ವಿಳಾಸವಾಗಿದೆ. ಇದು 20ನೇ ಶತಮಾನದ ಭಾರತ, ನಮ್ಮದು ಕೋಮುವಾದಿ ರಾಷ್ಟ್ರವಲ್ಲ. ಇದು ವರ್ಣಬೇಧ ನೀತಿಯಲ್ಲವೇ ಹೇಳಿ ಎಂದು ಪ್ರಶ್ನಿಸಿದ್ದಾರೆ.

    ನಾನೂ ಸಹ ಕಳೆದ ಮೂರು ತಿಂಗಳಿಂದ ಬಾಂದ್ರಾದಲ್ಲಿ ಮನೆ ಹುಡುಕುತ್ತಿದ್ದೇನೆ. ನನ್ನ ಹೆಸರು ರಾಣಾ ಇದು ಮುಸ್ಲಿಂ ಹೆಸರಲ್ಲ ಎಂಬುದು ಹಲವು ಮಾಲೀಕರಿಗೆ ತಿಳಿಯುತ್ತದೆ. ಆದರೆ ನಮ್ಮ ಸರ್‍ನೇಮ್ ಶೇಖ್ ಎಂಬುದನ್ನು ಓದಿದಾಗ ನಮ್ಮ ಬ್ರೋಕರ್ ಕಡೆಯಿಂದ ಕರೆ ಬರುತ್ತದೆ. ಆಗ ಬ್ರೋಕರ್ ಅಸಹ್ಯಕರವಾಗಿ ಕ್ಷಮೆಯಾಚಿಸುತ್ತಾರೆ ಎಂದು ಅವರು ತಮ್ಮ ಮನೆ ಹುಡುಕುವ ಅನುಭವವನ್ನು ಹಂಚಿಕೊಂಡಿದ್ದಾರೆ.

    ಈ ಪೋಸ್ಟ್ ಪಾಕಿಸ್ತಾನ ರಾಷ್ಟ್ರಪತಿ ಡಾ.ಆರೀಫ್ ಅಲ್ವಿ ಅವರ ಗಮನ ಸೆಳೆದಿದ್ದು, ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹಿಂದುತ್ವ ಹಾಗೂ ಆರ್‍ಎಸ್‍ಎಸ್‍ನ ಉಗ್ರಗಾಮಿ ಮತ್ತು ತತ್ವಶಾಸ್ತ್ರದಿಂದ ಪ್ರೋತ್ಸಾಹಿಸಲ್ಪಟ್ಟ ಸಮಾಜ ಮಾತ್ರ ಇದನ್ನು ಈ ರೀತಿಯಾಗಲು ಬಿಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪರ, ವಿರೋಧ ಚರ್ಚೆಗಳು ನಡೆಯುತ್ತಿದ್ದು, ಹಲವರು ಈ ಕುರಿತು ವಿರೋಧ ವ್ಯಕ್ತಪಡಿಸಿದರೆ, ಇನ್ನೂ ಹಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಮನೆಯ ಮಾಲೀಕ ಸಹ ತಮ್ಮ ನಿಯಮಗಳನ್ನು ಸಮರ್ಥಿಸಿಕೊಂಡಿದ್ದು, ಇದು ಖಾಸಗಿ ಆಸ್ತಿ, ನನ್ನ ಮನೆಗೆ ಯಾರು ಬಾಡಿಗೆಗೆ ಬರಬೇಕು ಎಂಬುದನ್ನು ನಿರ್ಧರಿಸುವ ಎಲ್ಲ ಹಕ್ಕನ್ನು ಹೊಂದಿದ್ದೇನೆ ಎಂದು ಹೇಳಿದ್ದಾರೆ.

  • ಬಾಡಿಗೆ ನೀಡದ್ದಕ್ಕೆ ವಿಧವೆಯನ್ನ ಮರಕ್ಕೆ ಕಟ್ಟಿದ ಮಾಲೀಕ

    ಬಾಡಿಗೆ ನೀಡದ್ದಕ್ಕೆ ವಿಧವೆಯನ್ನ ಮರಕ್ಕೆ ಕಟ್ಟಿದ ಮಾಲೀಕ

    – ಮನೆಯ ವಸ್ತುಗಳನ್ನ ಹೊರಗೆ ಎಸೆದ
    – ಲಾಕ್‍ಡೌನ್‍ನಲ್ಲಿ ಕೆಲಸ ಕಳೆದುಕೊಂಡಿದ್ದ ಮಹಿಳೆ

    ಲಕ್ನೋ: ಮನೆಯ ಬಾಡಿಗೆ ನೀಡದಕ್ಕೆ ಮಾಲೀಕನೋರ್ವ ಮಹಿಳೆ ಜೊತೆ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಹಮರೀಪುರ ಜಿಲ್ಲೆಯ ತಲಾಬ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಶೋಭಾ ದೇವಿ ಹಲ್ಲೆಗೊಳಗಾದ ಮಹಿಳೆ. ತಲಾಬ್ ಇಲಾಖೆಯಲ್ಲಿರುವ ಭಗೀರಥ್ ಪ್ರಜಾಪತಿ ಎಂಬಾತನ ಬಾಡಿಗೆ ಮನೆಯಲ್ಲಿ ಶೋಭಾ ವಾಸವಾಗಿದ್ದರು. ಶೋಭಾ ಪತಿ ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಲಾಕ್‍ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡಿದ್ದ ಶೋಭಾ ಕೆಲ ತಿಂಗಳ ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿದ್ದರು.

    ಮಾನವೀಯತೆ ಮರೆತ ಭಗೀರಥ್ ಕೆಲ ಮಹಿಳೆಯರೊಂದಿಗೆ ಶೋಭಾ ಮನೆಗೆ ಆಗಮಿಸಿದ್ದಾನೆ. ಮಹಿಳೆಯರ ಸಹಾಯದಿಂದ ಶೋಭಾ ಅವರನ್ನ ಮರಕ್ಕೆ ಕಟ್ಟಿ ಹಾಕಿ, ಮನೆಯಲ್ಲಿದ್ದ ವಸ್ತುಗಳನ್ನು ಹೊರ ಹಾಕಿ ಬೀಗ ಹಾಕಿ ಬಾಡಿಗೆ ನೀಡುವಂತೆ ಕಿರುಕುಳ ನೀಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನ ರಕ್ಷಿಸಿ, ಭಗೀರಥ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

  • ತಲೆ ಸುತ್ತು ಬಂದಾಗ ನನ್ನ ಬಟ್ಟೆ ಬಿಚ್ಚಿದ – ಬಾಡಿಗೆ ಕೊಡೋ ನೆಪದಲ್ಲಿ ಮಾಲೀಕನ ಪತ್ನಿಯ ಮೇಲೆ ರೇಪ್

    ತಲೆ ಸುತ್ತು ಬಂದಾಗ ನನ್ನ ಬಟ್ಟೆ ಬಿಚ್ಚಿದ – ಬಾಡಿಗೆ ಕೊಡೋ ನೆಪದಲ್ಲಿ ಮಾಲೀಕನ ಪತ್ನಿಯ ಮೇಲೆ ರೇಪ್

    – ತನಿಖೆ ವೇಳೆ ಮಹಿಳೆಯ ರಹಸ್ಯ ಬಯಲು

    ಲಕ್ನೋ: 23 ವರ್ಷದ ಯುವಕನೊಬ್ಬ ಮತ್ತು ಬರುವ ಔಷಧಿ ನೀಡಿ ಮನೆ ಮಾಲೀಕನ ಪತ್ನಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಜಹಾಂಗೀರ್‌ಪುರ ಪ್ರದೇಶದಲ್ಲಿ ನಡೆದಿದೆ.

    ಆರೋಪಿಯನ್ನು ವಿಶಾಲ್ ಎಂದು ಗುರುತಿಸಲಾಗಿದೆ. ಆರೋಪಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದು, ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದನು. ಮತ್ತು ಬರುವ ಔಷಧಿ ನೀಡಿ ಪ್ರಜ್ಞಾಹೀನಾ ಸ್ಥಿತಿಯಲ್ಲಿದ್ದಾಗ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ.

    ಈ ಘಟನೆ ನಡೆದಾಗ ಮಹಿಳೆಯ ಪತಿ ಮನೆಯಲ್ಲಿ ಇರಲಿಲ್ಲ. ಪತಿ ಕೆಲಸದ ನಿಮಿತ್ತ ರಾಜಸ್ಥಾನಕ್ಕೆ ಹೋಗಿದ್ದರು. ಆದರೆ ಏಪ್ರಿಲ್‍ನಿಂದ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆಗಿದ್ದರಿಂದ ಮಹಿಳೆಯ ಪತಿ ಅಲ್ಲಿಯೇ ಇದ್ದರು. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಮಹಿಳೆ ಈಗ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾಳೆ.

    “ಆರೋಪಿ ವಿಶಾಲ್ ಬಾಡಿಗೆ ನೀಡುವ ನೆಪದಲ್ಲಿ ನಮ್ಮ ಮನೆಗೆ ಬಂದಿದ್ದ. ನಂತರ ಇಬ್ಬರು ಚಹಾವನ್ನು ಕುಡಿದೆವು. ಚಹಾ ಕುಡಿದ ನಂತರ ನನಗೆ ತಲೆ ಸುತ್ತು ಬಂತು. ಈ ವೇಳೆ ವಿಶಾಲ್ ನನ್ನ ಬಟ್ಟೆಗಳನ್ನು ಬಿಚ್ಚಿದ್ದನು. ನಂತರ ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ನಾನು ವಿರೋಧಿಸಿದಾಗ ಆರೋಪಿ ನನ್ನನ್ನು ಥಳಿಸಿ ನನ್ನ ಮತ್ತು ನನ್ನ ಇಬ್ಬರು ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದನು. ಚಹಾದಲ್ಲಿ ಮತ್ತು ಬರುವ ಔಷಧಿ ಮಿಕ್ಸ್ ಮಾಡಿದ್ದನು” ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಮಹಿಳೆ ಜೇವರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಐಪಿಸಿ ಸೆಕ್ಷನ್ ಕಾಯ್ದೆಯಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ತನಿಖೆ ವೇಳೆ ಮಹಿಳೆಯ ಅನೈತಿಕ ಸಂಬಂಧ ಬಯಲಾಗಿದೆ.

    ಮಹಿಳೆ ಆರೋಪಿ ವಿಶಾಲ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇವರಿಬ್ಬರ ಸಂಬಂಧದ ಬಗ್ಗೆ ತಿಳಿದು ಪತಿ ಕೆಲವು ದಿನಗಳ ಹಿಂದೆ ಅವಳಿಂದ ದೂರವಾಗಿ ವಾಸಿಸುತ್ತಿದ್ದನು. ಆರೋಪಿಯನ್ನು ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಸಬ್ ಇನ್ಸ್‌ಪೆಕ್ಟರ್ ಫಿರೋಜ್ ಖಾನ್ ಹೇಳಿದ್ದಾರೆ.

  • ಬೆಂಗ್ಳೂರಿನಲ್ಲಿ ಕಾರ್ಮಿಕರಿಗೆ ಬಿಬಿಎಂಪಿ ಬಿಗ್ ರಿಲೀಫ್ – ಮಾಲೀಕರು 1 ತಿಂಗ್ಳ ಬಾಡಿಗೆ ಕೇಳುವಂತಿಲ್ಲ

    ಬೆಂಗ್ಳೂರಿನಲ್ಲಿ ಕಾರ್ಮಿಕರಿಗೆ ಬಿಬಿಎಂಪಿ ಬಿಗ್ ರಿಲೀಫ್ – ಮಾಲೀಕರು 1 ತಿಂಗ್ಳ ಬಾಡಿಗೆ ಕೇಳುವಂತಿಲ್ಲ

    ಬೆಂಗಳೂರು: ಕೊರೊನಾ ಲಾಕ್‍ಡೌನ್ ಇನ್ನೂ ಮೂರು ದಿನಗಳಲ್ಲಿ ಮುಗಿಯಲಿದೆ. ಈಗಾಗಲೇ ಸರ್ಕಾರ ಅನೇಕ ರಿಯಾಯಿತಿಗಳನ್ನು ಘೋಷಿಸಿದೆ. ಇದೀಗ ಬೆಂಗಳೂರಿನ ವಲಸಿಗರು ಮತ್ತು ಅಸಂಘಟಿತ ಕಾರ್ಮಿಕರಿಗೆ ಬಿಬಿಎಂಪಿ ಬಿಗ್ ರಿಲೀಫ್ ನೀಡಿದೆ.

    ಸಿಲಿಕಾನ್ ಸಿಟಿಯಲ್ಲಿ ವಲಸಿಗರು ಮತ್ತು ಅಸಂಘಟಿತ ಕಾರ್ಮಿಕರು ಒಂದು ತಿಂಗಳ ಬಾಡಿಗೆಯನ್ನು ನೀಡುವಂತಿಲ್ಲ. ಈ ಬಗ್ಗೆ ಬಿಬಿಎಂಪಿ ಭೂ ಮಾಲೀಕರು, ಮನೆ ಮಾಲೀಕರಿಗೆ ಎಚ್ಚರಿಕೆ ನೀಡಿದೆ. ಮನೆ ಮಾಲೀಕರು, ಕಾರ್ಮಿಕರನ್ನು ಬಾಡಿಗೆ ಕೊಡುವಂತೆ ಪೀಡಿಸುವಂತಿಲ್ಲ. ಅಲ್ಲದೇ ಅವರ ಒಂದು ತಿಂಗಳು ಬಾಡಿಗೆ ಕೇಳುವಂತಿಲ್ಲ. ಒಂದು ವೇಳೆ ನಿಯಮ ಮೀರಿ ಬಾಡಿಗೆ ಕೇಳಿದರೆ ಕಾನೂನು ರೀತಿ ಕ್ರಮಗೊಳ್ಳಲು ಪಾಲಿಕೆ ಮುಂದಾಗುತ್ತದೆ.

    ವಾರ್ಡ್ ಗಳಲ್ಲಿ ವಿಪತ್ತು ನಿರ್ವಹಣಾ ಕೋಶ ತೆರೆಯಲು ಬಿಬಿಎಂಪಿ ಮುಂದಾಗಿದೆ. ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಬಿಬಿಎಂಪಿಯ 198 ವಾರ್ಡ್ ಗಳಲ್ಲಿ ಪಾಲಿಕೆ ಸದಸ್ಯರ ಅಧ್ಯಕ್ಷತೆಯಲ್ಲಿ ವಿಪತ್ತು ನಿರ್ವಹಣಾ ಕೋಶ ಆರಂಭವಾಗಲಿದೆ. ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಹಾಗೂ ನಿರ್ವಹಣೆಯ ಹೊಣೆಯನ್ನು ವಿಪತ್ತು ನಿರ್ವಹಣಾ ಕೋಶ ವಹಿಸಿಕೊಳ್ಳಲಿದೆ.

    ಲಾಕ್‍ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು, ನಿರ್ಗತಿಕರು ಮತ್ತು ಬಡವರಿಗೆ ಹಾಲು, ಆಹಾರ, ಆಶ್ರಯ ಒದಗಿಸಬೇಕು. ಆಶ್ರಯ ಇಲ್ಲದ ಬಡ ಜನರನ್ನು ಪಾಲಿಕೆ ನಿರ್ಮಿಸಿರುವ ನೂರು ಸೂರುಗಳಿಗೆ ಸ್ಥಳಾಂತರಿಸಲು ಮಾರ್ಷಲ್‍ಗಳ ಗಮನಕ್ಕೆ ತರಬೇಕು. ವಲಸೆ ಕಾರ್ಮಿಕರಿಗೆ ಮಾಲೀಕರು ಒಂದು ತಿಂಗಳು ಬಾಡಿಗೆ ಕೊಡಲು ಒತ್ತಾಯಿಸುವಂತಿಲ್ಲ. ಈ ರೀತಿ ನಡೆದರೆ ಸ್ಥಳೀಯ ಪೊಲೀಸರ ಸಹಾಯದಿಂದ ವಲಸಿಗರಿಗೆ ರಕ್ಷಣೆ ಕೊಡಲು ಕ್ರಮ ಕೈಗೊಳ್ಳಬೇಕು. ಇವೆಲ್ಲವನ್ನೂ ಪ್ರತಿ ವಲಯದ ವಿಶೇಷ ಆಯುಕ್ತರು ಹಾಗೂ ಜಂಟಿ ಆಯುಕ್ತರು ಮೇಲುಸ್ತುವಾರಿ ವಹಿಸಿಕೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

  • KSRTC ವಾಣಿಜ್ಯ ಮಳಿಗೆಗಳಿಗೆ ಬಾಡಿಗೆ ವಿನಾಯಿತಿ

    KSRTC ವಾಣಿಜ್ಯ ಮಳಿಗೆಗಳಿಗೆ ಬಾಡಿಗೆ ವಿನಾಯಿತಿ

    – ಜಾಹೀರಾತುದಾರರಿಗೂ ರಿಲೀಫ್

    ಬೆಂಗಳೂರು: ಕೊರೊನಾ ಮಹಾಮಾರಿಯಿಂದಾಗಿ ಜನರ ಬಳಿ ಹಣ ಇಲ್ಲದಂತಾಗಿದ್ದು, ಜೀವನ ಸಾಗಿಸುವುದೇ ದುಸ್ತರವಾಗಿದೆ. ಹೀಗಾಗಿ ಕೆಎಸ್‍ಆರ್ ಟಿಸಿ ತನ್ನ ಬಾಡಿಗೆದಾರರು ಹಾಗೂ ಜಾಹೀರಾತುದಾರರಿಗೆ ವಿನಾಯಿತಿ ನೀಡಿ ಸುತ್ತೋಲೆ ಹೊರಡಿಸಿದೆ.

    ಲಾಕ್‍ಡೌನ್ ಆದಾಗಿನಿಂದ ಎಲ್ಲ ಮಳಿಗೆಗಳು ಬಂದ್ ಆಗಿದ್ದು, ವ್ಯಾಪಾರವಿಲ್ಲದೆ ಜನ ಪರದಾಡುತ್ತಿದ್ದಾರೆ. ಹೀಗಾಗಿ ಕೆಎಸ್‍ಆರ್ ಟಿಸಿಯಿಂದ ವಾಣಿಜ್ಯ ಮಳಿಗೆಗಳು, ಹೋಟೆಲ್‍ಗಳು ಹಾಗೂ ಜಾಹಿರಾತುದಾರರಿಗೆ ವಿನಾಯಿತಿ ನೀಡಲಾಗಿದೆ. ಲಾಕ್‍ಡೌನ್ ಆರಂಭವಾದ ದಿನದಿಂದ ಮುಗಿಯುವವರೆಗೂ ಬಾಡಿಗೆ ಕಟ್ಟುವುದರಿಂದ ವಿನಾಯಿತಿ ನೀಡಲಾಗಿದೆ. ಮಾನವೀಯತೆ ದೃಷ್ಟಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಕೆಎಸ್‍ಆರ್ ಟಿಸಿ ತಿಳಿಸಿದೆ.

    ಈ ಮೂಲಕ ರಾಜ್ಯಾದ್ಯಂತ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣಗಳಲ್ಲಿ ಇರುವ ವಾಣಿಜ್ಯ ಮಳಿಗೆಗಳು, ಹೋಟೆಲ್ ಜಾಹೀರಾತುದಾರರಿಗೆ ವಿನಾಯಿತಿ ಸಿಕ್ಕಂತಾಗಿದೆ. ಯಾರಿಂದಲೂ ಬಾಡಿಗೆ, ಹಣ ಪಡೆಯದಂತೆ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಕೆಎಸ್‍ಆರ್ ಟಿಸಿ ಸುತ್ತೋಲೆ ಹೊರಡಿಸಿದೆ.

  • ಸ್ಟಾರ್ಟ್ ಅಪ್‍ಗಳಿಗೆ ನಾಲ್ಕು ತಿಂಗಳ ಬಾಡಿಗೆ ಇಲ್ಲ

    ಸ್ಟಾರ್ಟ್ ಅಪ್‍ಗಳಿಗೆ ನಾಲ್ಕು ತಿಂಗಳ ಬಾಡಿಗೆ ಇಲ್ಲ

    ನವದೆಹಲಿ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಎಡರನೇ ಬಾರಿ ಲಾಕ್‍ಡೌನ್ ಆಗಿದೆ. ಈಗಾಗಲೇ ಅನೇಕ ಬ್ಯಾಂಕ್, ಕಂಪನಿಗಳು ಕೆಲಸಗಾರರಿಗೆ ವಿನಾಯಿತಿ ನೀಡಿದೆ. ಇದೀಗ ಸ್ಟಾರ್ಟ್ ಅಪ್‍ಗಳಿಗೂ ಬಾಡಿಗೆ ವಿನಾಯಿತಿ ನೀಡಲಾಗಿದೆ.

    ಸ್ಟಾರ್ಟ್ ಅಪ್‍ಗಳು ಮಾರ್ಚ್ ತಿಂಗಳಿಂದ ಜೂನ್‍ವರೆಗೆ ಬಾಡಿಗೆ ಕಟ್ಟುವ ಅಗತ್ಯವಿಲ್ಲ. ಸುಮಾರು 200 ಸಣ್ಣ ಪ್ರಮಾಣದ ಘಟಕಗಳಿಗೆ ಬಾಡಿಗೆ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಸ್ವತಃ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡುವ ಮೂಲಕ ಆದೇಶ ಹೊರಡಿಸಿದ್ದಾರೆ.

    ಟ್ವೀಟ್‍ನಲ್ಲೇನಿದೆ.?
    “ಭಾರತದಾದ್ಯಂತ 60 ಎಸ್‍ಟಿಪಿಐ ಕೇಂದ್ರಗಳಿಂದ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್ ಅಪ್‍ಗಳಿಗೆ ಮಾಚ್ 1 ರಿಂಂದ ಜೂನ್ 30ರ ವರೆಗೆ ಬಾಡಿಗೆ ಪಾವತಿಸುವುದನ್ನು ಮನ್ನಾ ಮಾಡಲಾಗಿದೆ. ಇದರಿಂದ 3000 ಜನರಿಗೆ ಉದ್ಯೋಗ ನೀಡಿರುವ ಸುಮಾರು 200 ಸಣ್ಣ ಮತ್ತು ಮಧ್ಯಮ ಐಟಿ/ಐಟಿಇಎಸ್ ಘಟಕಗಳಿಗೆ ಪ್ರಯೋಜನವಾಗಲಿದೆ” ಎಂದು ರವಿಶಂಕರ್ ಪ್ರಸಾದ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

  • ಕಾಂಪ್ಲೆಕ್ಸ್ ಅಂಗಡಿಗಳ ಒಂದು ತಿಂಗ್ಳ ಬಾಡಿಗೆ ಮನ್ನಾ – ಮಾನವೀಯತೆ ಮೆರೆದ ಮಾಲೀಕ

    ಕಾಂಪ್ಲೆಕ್ಸ್ ಅಂಗಡಿಗಳ ಒಂದು ತಿಂಗ್ಳ ಬಾಡಿಗೆ ಮನ್ನಾ – ಮಾನವೀಯತೆ ಮೆರೆದ ಮಾಲೀಕ

    ಉಡುಪಿ: ಕೊರೊನಾ ವೈರಸ್‍ನಿಂದ ದೇಶಕ್ಕೆ ಬೀಗ ಹಾಕಲಾಗಿದೆ. ಬ್ಯಾಂಕ್‍ಗಳ EMI ಪಾವತಿಸಲು ಆರ್‌ಬಿಐ ವಿನಾಯಿತಿ ಕೊಟ್ಟಿದೆ. ಈ ನಡುವೆ ಸಂಪೂರ್ಣ ಲಾಕ್‍ಡೌನ್ ಆಗಿರುವ ಜಿಲ್ಲೆಯಲ್ಲಿ ಕಾಂಪ್ಲೆಕ್ಸ್ ಮಾಲೀಕರೊಬ್ಬರು ತನ್ನ ಅಂಗಡಿಗಳಿಗೆ ಬಾಡಿಗೆ ವಿನಾಯಿತಿ ಮಾಡಿದ್ದಾರೆ.

    ಕುಂದಾಪುರ ಉಳ್ತೂರು ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಎಲ್ಲಾ ಅಂಗಡಿಗಳಿಗೆ ರಿಯಾಯಿತಿ ನೀಡುವುದಾಗಿ ಮಾಲೀಕ ರಮೇಶ್ ಅಡಿಗ ಘೋಷಣೆ ಮಾಡಿದ್ದಾರೆ. ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮದಲ್ಲಿರುವ ಈ ಕಾಂಪ್ಲೆಕ್ಸ್‌ನ ಬಾಡಿಗೆದಾರರಿಗೆ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದ್ದೇನೆ. ಸಂದರ್ಭಕ್ಕೆ ಅನುಗುಣವಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಮೇಶ್ ಅಡಿಗ, ಬಾಡಿಗೆದಾರರು ವ್ಯಾಪಾರ ಮಾಡದೆ ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ಅವರಿಂದ ಬಾಡಿಗೆ ತೆಗೆದುಕೊಳ್ಳಲು ಮನಸ್ಸಾಗುತ್ತಿಲ್ಲ. ಒಂದು ತಿಂಗಳ ಬಾಡಿಗೆ ಪಡೆಯದಿದ್ದರೆ ನಮಗೆ ಲಾಭ ಆಗದೇ ಇರಬಹುದು. ಆದರೆ ನಷ್ಟ ಆಗುವುದಿಲ್ಲ. ನಮ್ಮಲ್ಲಿರುವ ಎಲ್ಲ ಬಾಡಿಗೆದಾರರು ಇಲ್ಲಿ ನಡೆಯುವ ವ್ಯಾಪಾರವನ್ನು ಅವಲಂಬಿಸಿಯೇ ಜೀವನ ಮಾಡುತ್ತಿದ್ದಾರೆ ಎಂದರು.

    ಈಗಾಗಲೇ ಅವರು ಅವರ ಜೀವನೋಪಾಯಕ್ಕಾಗಿ ಸಾಲಗಳನ್ನು ಮಾಡಿದ್ದು, ಕಂತು ಕಟ್ಟಲು ಬಹಳ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆಯುವುದು ನನಗೆ ಯಾಕೋ ಸರಿ ಅನ್ನಿಸಲಿಲ್ಲ. ನನ್ನದು ಸಣ್ಣ ಕಾಂಪ್ಲೆಕ್ಸ್ ಹಳ್ಳಿ ಭಾಗದಲ್ಲಿದೆ. ಪೇಟೆಯಲ್ಲಿರುವ ಕಾಂಪ್ಲೆಕ್ಸ್‌ಗಳು ಕೂಡ ಇದೇ ನಿರ್ಧಾರವನ್ನು ಮಾಡಬೇಕು. ಜನಸಾಮಾನ್ಯರ ಮೇಲಿನ ಹೊರೆಯನ್ನು ಕೊಂಚ ಮಟ್ಟಿಗೆ ಇಳಿಸಬೇಕು ಎಂದು ವಿನಂತಿ ಮಾಡಿಕೊಂಡರು.

  • ಬೆಂಗ್ಳೂರಿನಲ್ಲಿ `ಟಾಯ್ಲೆಟ್ ಬಾಡಿಗೆ’ ಮನೆ ಫುಲ್ ಟ್ರೆಂಡ್

    ಬೆಂಗ್ಳೂರಿನಲ್ಲಿ `ಟಾಯ್ಲೆಟ್ ಬಾಡಿಗೆ’ ಮನೆ ಫುಲ್ ಟ್ರೆಂಡ್

    ಬೆಂಗಳೂರು: ಪ್ರಧಾನಿ ಮೋದಿ ಅವರು ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಅಭಿಯಾನ ಶುರು ಮಾಡಿದ್ದಾರೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಟಾಯ್ಲೆಟ್ ಬಾಡಿಗೆ ಮನೆ ಸಖತ್ ಟ್ರೆಂಡ್ ಆಗಿದೆ

    ಬಿಬಿಎಂಪಿ ಸ್ಥಾಪಿಸಿರುವ ನಿರ್ಮಲ ಶೌಚಾಲಯ ಮನೆಯಾಗಿ ಪರಿವರ್ತನೆಯಾಗಿದೆ. ಅಂದಹಾಗೇ ಈ ಶೌಚಾಲಯ ಕಮ್ ಮನೆ ವಾರ್ಡ್ ನಂಬರ್ 130ರ ಭುವನೇಶ್ವರಿ ನಗರದಲ್ಲಿದೆ. ಎಂಎಲ್‍ಎ ಎಸ್.ಟಿ.ಸೋಮಶೇಖರ್ ಪ್ರತಿನಿಧಿಸುವ ಕ್ಷೇತ್ರ ಇದಾಗಿದ್ದು, ಗುತ್ತಿಗೆದಾರ ಸತೀಶ್ ನಾಯ್ಕ್ ಈ ಟಾಯ್ಲೆಟ್‍ನ್ನು ಬಾಡಿಗೆ ಕೊಟ್ಟು ದೇಶದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

    ಆರ್ಮಿ ಲ್ಯಾಂಡ್‍ನಲ್ಲಿ ಈ ಶೌಚಾಲಯವನ್ನ ನಿರ್ಮಾಣ ಮಾಡಲಾಗಿದ್ದು, ಬಿಬಿಎಂಪಿಯಲ್ಲಿ ಪೌರಕಾರ್ಮಿಕರಾಗಿರುವ ಕುಟುಂಬವೊಂದು ಇದನ್ನ ನಿರ್ವಹಣೆ ಮಾಡುತ್ತಿದೆ. ಪೌರಕಾರ್ಮಿಕ ಕುಟುಂಬ ಪ್ರತಿ ತಿಂಗಳು ಗುತ್ತಿಗೆದಾರ ಸತೀಶ್ ನಾಯ್ಕ್ ಗೆ 10 ಸಾವಿರ ರೂಪಾಯಿ ಕೊಡಬೇಕು. ಶೌಚಾಲಯದ ನಿರ್ವಹಣೆಗಾಗಿ ಮೂರು ದಿನಕ್ಕೊಮ್ಮೆ ಟ್ಯಾಂಕರ್ ನೀರನ್ನ ಪೌರಕಾರ್ಮಿಕರೇ ತರಿಸಿಕೊಳ್ಳುತ್ತಾರೆ ಎಂದು ಶೌಚಾಲಯದಲ್ಲಿ ವಾಸಿಸುವವರು ಹೇಳುತ್ತಿದ್ದಾರೆ.

    ಮನೆ ಮಾತ್ರ ಅಲ್ಲ ಶೌಚಾಲಯದ ಮುಂದಿನ ಜಾಗದಲ್ಲಿ ಟೀ-ಕಾಫಿ ಅಂಗಡಿಯನ್ನು ನಡೆಸಲು ಅಲ್ಲಿನ ಬಿಬಿಎಂಪಿ ಸದಸ್ಯೆ ಶಾರದಾ ಮುನಿರಾಜು ಅವರೇ ಅನುಮತಿ ಕೊಟ್ಟಿದ್ದಾರೆ. ಇದಕ್ಕೆ ಬೇರೆ ಬಾಡಿಗೆ ತಗೋತಾರೆ ಎಂದು ತಿಳಿದು ಬಂದಿದೆ.

    ಒಂದೇ ಜಾಗದಲ್ಲಿ ಶೌಚಾಲಯ, ಟೀ-ಕಾಫಿ ಅಂಗಡಿ ಮತ್ತು ಒಂದು ಕುಟುಂಬದ ವಾಸ. ಇದೆಲ್ಲಾ ಕಳೆದ 8 ವರ್ಷದಿಂದ ನಡೆಯುತ್ತಿದೆ. ಶೌಚಾಲಯದಲ್ಲೇ ವಾಸವಾದರೆ ಆ ಪೌರಕಾರ್ಮಿಕರ ಆರೋಗ್ಯವೇನಾಗಬೇಕು? ಈ ತರಾನೂ ದಂಧೆ ನಡೆಸ್ತಾರ? ಬಿಬಿಎಂಪಿ ಸದಸ್ಯೆ ಅನುಮತಿಯನ್ನ ನೀಡಿರುವುದಾದರೂ ಯಾಕೆ ಎಂಬ ಅನುಮಾನ ಜನರಲ್ಲಿ ಮೂಡಿದೆ.

  • ವಿಚಾರಣೆಗೆ ಹಾಜರಾಗಿ – ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬುಗೆ ಪೊಲೀಸ್ ನೋಟಿಸ್

    ವಿಚಾರಣೆಗೆ ಹಾಜರಾಗಿ – ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬುಗೆ ಪೊಲೀಸ್ ನೋಟಿಸ್

    ಬೆಂಗಳೂರು: ಹಲವು ಬಾರಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರೂ ಕ್ಯಾರೆ ಅನ್ನದ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಕುಟುಂಬದ ಸದಸ್ಯರು ವಿಚಾರಣೆಗೆ ಹಾಜರಾಗುವಂತೆ ಸದಾಶಿವನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

    ಬಾಡಿಗೆ ಕಟ್ಟದೇ ಮನೆಯ ಮಾಲೀಕ ಜಿ.ಆರ್.ಪ್ರಸನ್ನ ಜೊತೆ ಜಗಳ ಮಾಡಿ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿರುವ ಆರೋಪ ರಾಜೇಂದ್ರ ಸಿಂಗ್ ಬಾಬು ಮೇಲಿದೆ. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು 12 ದಿನಗಳಿಂದ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

    ಪೊಲೀಸ್ ಸೂಚನೆಗೆ ರಾಜೇಂದ್ರ ಸಿಂಗ್ ಬಾಬು ಕುಟುಂಬ, ನಾವು ಹೊರದೇಶದಲ್ಲಿ ಇರುವ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರ ನೀಡಿದ್ದಾರೆ. ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಈಗ ಪೊಲೀಸ್ ಆಯುಕ್ತರಿಗೆ ದೂರು ನೀಡಲು ಮುಂದಾಗಿದ್ದೇನೆ ಎಂದು ಮನೆ ಮಾಲೀಕ ಪ್ರಸನ್ನ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ರಾಜೇಂದ್ರ ಸಿಂಗ್ ಬಾಬು ಮತ್ತು ಅವರ ಮಗ ಆದಿತ್ಯ ಮತ್ತು ಮಗಳು ಹಾಗೂ ಅವರ ಪತ್ನಿ ಕಳೆದ ನಾಲ್ಕು ವರ್ಷದಿಂದ ಸದಾಶಿವನಗರದ ಆರ್‍ಎಂವಿ ಎಕ್ಷಟೆನ್ಷನ್‍ನಲ್ಲಿರುವ ಪ್ರಸನ್ನ ಎಂಬುವವರ ಮನೆಯಲ್ಲಿ ಬಾಡಿಗೆಯಲ್ಲಿದ್ದಾರೆ. ನಾಲ್ಕು ವರ್ಷದಿಂದ ತಿಂಗಳಿಗೆ 40 ಸಾವಿರ ಬಾಡಿಗೆ ನೀಡಲಾಗುತ್ತಿತ್ತು. ಆದರೆ ಮನೆಯ ಮಾಲೀಕ ಮನೆಯ ಬಾಡಿಗೆಯನ್ನು ಏರಿಕೆ ಮಾಡಿ 48 ಸಾವಿರ ಕೊಡಲು ಹೇಳಿದ್ದಾರೆ. ಇದಕ್ಕೆ ಒಪ್ಪದ ರಾಜೇಂದ್ರ ಸಿಂಗ್ ಬಾಬು ಅವರು ಕಳೆದ 7 ತಿಂಗಳಿನಿಂದ 2 ಲಕ್ಷ 88 ಸಾವಿರ ಬಾಡಿಗೆ ಹಣವನ್ನು ಬಾಕಿ ಉಳಿಸಿಕೊಂಡಿದ್ದರು. ಈ ಸಂಬಂಧ ಮನೆ ಮಾಲೀಕ ಪ್ರಸನ್ನ ಅವರು ಕೋರ್ಟ್‍ಗೆ ಎವಿಕ್ಷನ್ ಕೇಸ್ ನೀಡಿದ್ದರು. ಸದ್ಯ ಈಗ ಮನೆ ಖಾಲಿ ಮಾಡಿಸಿ ಕೊಡುವಂತೆ ಪೊಲೀಸರಿಗೆ ಮೇ 2 ರಂದು ದೂರು ನೀಡಿದ್ದಾರೆ.