Tag: rent house

  • ಮನೆ ಬಾಡಿಗೆ ಕೊಡುವ ಮುನ್ನ ಹುಷಾರ್; ಲಿವಿಂಗ್ ರಿಲೇಷನ್‌ನಲ್ಲಿ ಇದ್ಕೊಂಡೇ ಮನೆ ದೋಚಿದ ಖತರ್ನಾಕ್ ಜೋಡಿ

    ಮನೆ ಬಾಡಿಗೆ ಕೊಡುವ ಮುನ್ನ ಹುಷಾರ್; ಲಿವಿಂಗ್ ರಿಲೇಷನ್‌ನಲ್ಲಿ ಇದ್ಕೊಂಡೇ ಮನೆ ದೋಚಿದ ಖತರ್ನಾಕ್ ಜೋಡಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು ಇದೀಗ ಬಾಡಿಗೆ ಕೊಡುವ ಮನೆ ಮಾಲೀಕರು ಎಚ್ಚೆತ್ತುಕೊಳ್ಳಬೇಕಾಗಿದೆ.

    ಹೌದು, ಬೆಂಗ್ಳೂರಿನಲ್ಲಿ (Bengaluru) ಲಿವಿಂಗ್ ರಿಲೇಷನ್‌ಶಿಪ್‌ನಲ್ಲೇ (Live In Relationship) ಇದ್ದುಕೊಂಡು ಮನೆ ದೋಚಿದ ಖತರ್ನಾಕ್ ಜೋಡಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.

    ಮನೆಯನ್ನೇ ಗುಡಿಸಿ ಗುಂಡಾತರ ಮಾಡಿದ್ದ ಜೋಡಿ ಇದೀಗ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರ (Subramanya Pura Police) ಬಲೆಗೆ ಬಿದ್ದಿದೆ. ಲಿಖಿತಾ ಹಾಗೂ ಸುಮಂತ್ ಬಂಧಿತ ಆರೋಪಿಗಳು. ಇದನ್ನೂ ಓದಿ: ಅಕ್ರಮ ಆಸ್ತಿ ಕೇಸ್‌; ಕೆ.ಆರ್‌. ಪುರಂ ತಹಶೀಲ್ದಾರ್‌ ಸಹೋದರ ಸೇರಿ ನಾಲ್ವರಿಗೆ ಲೋಕಾಯುಕ್ತ ನೋಟಿಸ್‌

    ಈ ಖತರ್ನಾಕ್ ಜೋಡಿ ತಾವು ಬಾಡಿಗೆಗೆ (Rent House) ಇದ್ದ ಮಾಲೀಕರ ಮನೆಯಲ್ಲೇ ಬರೋಬ್ಬರಿ 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದರು. ಬೆಂಗಳೂರು ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್‌ನಲ್ಲಿ ಘಟನೆ ನಡೆದಿತ್ತು.

    ನಡೆದಿದ್ದು ಹೇಗೆ..?
    ಆರೋಪಿಗಳಾದ ಲಿಖಿತಾ, ಸುಮಂತ್, ಎಜಿಎಸ್ ಬಡಾವಣೆಯ ಪ್ರೇಮಲತಾ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಬಾಡಿಗೆ ಜಾಸ್ತಿ ಬರುತ್ತೆ ಅಂತಾ ಲಿವಿಂಗ್ ರಿಲೇಷನ್‌ನಲ್ಲಿರಲು ಮಾಲೀಕರು ಅನುಮತಿಸಿದ್ದರು. ಕಳೆದ ನಾಲ್ಕೂವರೆ ತಿಂಗಳಿನಿಂದ ಬಾಡಿಗೆ ಮನೆಯಲ್ಲಿದ್ದುಕೊಂಡೇ ಮಾಲೀಕರ ಚಲನವಲನ ವೀಕ್ಷಿಸುತ್ತಿದ್ದರು. ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿದರು. ಮನೆ ಖಾಲಿ ಮಾಡಿದ ಕೆಲವೇ ದಿನಗಳಲ್ಲಿ ಮಾಲೀಕರ ಮನೆಯಲ್ಲಿ ಕಳ್ಳತನವಾಯಿತು. ಆರೋಪಿಗಳ ಕೈಚಳಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನೂ ಓದಿ: ಚಾಮುಂಡಿಬೆಟ್ಟದಲ್ಲಿ ಆಷಾಢ 2ನೇ ಶುಕ್ರವಾರವೂ ಭಕ್ತರ ದಂಡು – 60 ವರ್ಷ ಮೇಲ್ಪಟ್ಟವರಿಗೆ ನೇರ ದರ್ಶನ

    ಚಿನ್ನಾಭರಣಗಳನ್ನ ಕದ್ದು ಮಾರಾಟ ಮಾಡಿದ್ದ ಜೋಡಿ, ಬೆಂಗಳೂರಿನಿಂದ ಎಸ್ಕೇಪ್ ಆಗಿ ಶಿವಮೊಗ್ಗದಲ್ಲಿ ಸೆಟಲ್ ಆಗಿತ್ತು. ಕೈಯಲ್ಲಿದ್ದ ಹಣ ಖಾಲಿಯಾಗಿ ಮತ್ತೊಂದು ಕಡೆ ಕೃತ್ಯವೆಸಗಲು ಈ ಜೋಡಿ ಸಿದ್ಧವಾಗಿತ್ತು. ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

    ಸದ್ಯ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಂಗಳೂರಿನಲ್ಲಿ ಬಾಡಿಗೆ ಮನೆ ದರ ಹೆಚ್ಚಳ- ಬಾಡಿಗೆದಾರರು ಕಂಗಾಲು

    ಬೆಂಗಳೂರಿನಲ್ಲಿ ಬಾಡಿಗೆ ಮನೆ ದರ ಹೆಚ್ಚಳ- ಬಾಡಿಗೆದಾರರು ಕಂಗಾಲು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮನೆಗಳ ಬಾಡಿಗೆ (Rent House) ಹೆಚ್ಚಾಗಿದೆ. ಸಂಬಳದ ಅರ್ಧ ಭಾಗ ಬಾಡಿಗೆಗೆನೇ ಕಟ್ಟೋ ಸ್ಥಿತಿ ನಿರ್ಮಾಣವಾಗಿದೆ.

    ಬೆಂಗಳೂರಿನಲ್ಲಿ ದಿನೇ ದಿನೇ ಮನೆ ಬಾಡಿಗೆ ಹೆಚ್ಚುತ್ತಿದೆ. ಶೇ.40 ರಷ್ಟು ಬಾಡಿಗೆ ಹೆಚ್ಚಾಗಿದ್ದು, ಬಾಡಿಗೆದಾರರು ಕಂಗಾಲಾಗುತ್ತಿದ್ದಾರೆ. ದುಡಿದ ಅರ್ಧ ದುಡ್ಡೆಲ್ಲ ಬಾಡಿಗೆಗೆನೇ ಸುರಿಯಬೇಕಾಗಿದೆ. ಕೊರೋನಾ (Corona Virus) ನಂತರ ವರ್ಕ್ ಫ್ರಮ್ ಹೋಮ್ ಗೆ ಕಂಪನಿಗಳು ಬ್ರೇಕ್ ಕೊಟ್ಟು, ಆಫ್ ಲೈನ್ ಕೆಲಸಕ್ಕೆ ಮುಂದಾಗಿವೆ. ಹೀಗಾಗಿ ಬಹುತೇಕ ಜನ ನಗರಕ್ಕೆ ಮರಳಿದ್ದಾರೆ. ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಸರ್ಕಾರವೇ ದರ ನಿಗದಿ ಮಾಡಬೇಕೆಂದು ಬಾಡಿಗೆದಾರರು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಮಾಜಿ ಸಂಸದರಾದ ಮುದ್ದಹನುಮೇಗೌಡ, ನಟ ಶಶಿಕುಮಾರ್‌ ಬಿಜೆಪಿ ಸೇರ್ಪಡೆ

    ಬಾಡಿಗೆ ಹೆಚ್ಚಳ ಮಾಡಿರುವ ಬಗ್ಗೆ ಮನೆ ಮಾಲೀಕರು ಕೂಡ ತಮ್ಮದೇ ಕಷ್ಟಗಳನ್ನ ತೋಡಿಕೊಂಡಿದ್ದಾರೆ. ಕೋವಿಡ್ ಟೈಂನಲ್ಲಿ ಸರ್ಕಾರ ನಮ್ಮ ಕೈ ಹಿಡಿಲಿಲ್ಲ. ದುಬಾರಿ ಬಾಡಿಗೆ ಕೊಡ್ತಿರೋದು ನಮ್ಮ ಕೈಗೆ ಬರುತ್ತಿಲ್ಲ. ಸರ್ಕಾರಕ್ಕೆನೇ ಟ್ಯಾಕ್ಸ್ ಆಗಿ ಹೋಗ್ತಿದೆ. ಕೋವಿಡ್ ಸಮಯದಲ್ಲಿ ಸರ್ಕಾರ, ಟ್ಯಾಕ್ಸ್ ಕಡಿಮೆ ಮಾಡಲಿಲ್ಲ, ಕರೆಂಟ್, ವಾಟರ್ ಬಿಲ್ ಕಡಿಮೆ ಮಾಡಲಿಲ್ಲ. ಬ್ಯಾಂಕ್ ಗಳಲ್ಲಿದ್ದ ಸಾಲದ ಬಡ್ಡಿಯನ್ನು ಕಡಿಮೆ ಮಾಡಿಲ್ಲ. ಸರ್ಕಾರ ಇದೆಲ್ಲದರ ಬಗ್ಗೆ ಗಮನ ಹರಿಸಿದ್ರೆ, ನಾವು ಬಾಡಿಗೆ ಇಳಿಸ್ತೀವಿ ಎಂದು ಮಾಲೀಕರು ಹೇಳುತ್ತಿದ್ದಾರೆ.

    ಪೆಟ್ರೋಲ್, ತರಕಾರಿ, ಗ್ಯಾಸ್ ಹೀಗೆ ಬೆಲೆ ಏರಿಕೆಯ ಬಿಸಿಯಲ್ಲಿರುವ ಜನರಿಗೆ, ದಿನೆ ದಿನೇ ಏರಿಕೆಯಾಗ್ತಿರೋ ಬಾಡಿಗೆ ಮನೆಗಳ ದರದಿಂದ ಬಾಡಿಗೆದಾರರು ಆಕ್ರೋಶಗೊಂಡಿದ್ದಾರೆ. ಸರ್ಕಾರವೇ ಬಾಡಿಗೆ ಮನೆಗಳಿಗೆ ಹಣವನ್ನ ನಿಗದಿ ಮಾಡಿದ್ರೆ, ಅದೆಷ್ಟೋ ಜನ್ರಿಗೆ ಉಪಯೋಗವಾಗಲಿದೆ. ಇದನ್ನೂ ಓದಿ: ನನ್ನ ತಮ್ಮನ ಮಗ ಕಿಡ್ನ್ಯಾಪ್ ಆಗಿದ್ದಾನೆ: ರೇಣುಕಾಚಾರ್ಯ

    Live Tv
    [brid partner=56869869 player=32851 video=960834 autoplay=true]

  • ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟ – 7 ಮಂದಿಗೆ ಗಾಯ

    ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟ – 7 ಮಂದಿಗೆ ಗಾಯ

    ಬೆಂಗಳೂರು/ಆನೇಕಲ್: ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು 7 ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ನಡೆದಿದೆ.

    cylinder-blast

    ಜಿಗಣಿ ಪೊಲೀಸ್ ಠಾಣೆ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ಮಂಜುನಾಥ್ ರೆಡ್ಡಿ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಬಾಡಿಗೆಗೆ ಇದ್ದ ಉತ್ತರ ಭಾರತ ಮೂಲದ ಏಳು ಕಾರ್ಮಿಕರು ಗಾಯಗೊಂಡಿದ್ದಾರೆ.  ಇದನ್ನೂ ಓದಿ: ನಟಿ ಆಥಿಯಾ ಶೆಟ್ಟಿ ಜೊತೆಗಿನ ಡೇಟಿಂಗ್ ಗಾಸಿಪ್‌ಗೆ ಬ್ರೇಕ್ ಹಾಕಿದ ರಾಹುಲ್

    ಬೆಳಿಗ್ಗೆ 8 ಗಂಟೆ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡು, ಮನೆ ಬೆಂಕಿಯಿಂದ ಹೊತ್ತಿ ಉರಿದಿದೆ. ಘಟನೆಯಲ್ಲಿ ಕಾರ್ಮಿಕರಾದ ಜಗದೀಶ್ ಶಾಂತಿಬೈ, ಪ್ರಕಾಶ್, ಕಾಡು, ಜೈಮುಲ್, ಮಂಜು, ವಲ್ಲಿ ಎಂಬವರು ತೀವ್ರವಾಗಿ ಗಾಯಗೊಂಡಿದ್ದು, ಇದೀಗ ಅವರನ್ನು ಜಿಗಣಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.  ಇದನ್ನೂ ಓದಿ: ಅಪ್ಪು ಜೊತೆಗಿನ ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಿರುವ ಶಿವಣ್ಣ, ರಾಘಣ್ಣ

     

  • ಬೆಂಗ್ಳೂರಿಗೆ ಎದುರಾಗಿದೆ ಜಲಕಂಟಕ – ಮನೆ, ಅಪಾರ್ಟ್‌ಮೆಂಟ್ ಖಾಲಿ ಮಾಡ್ತಿದ್ದಾರೆ ಜನ

    ಬೆಂಗ್ಳೂರಿಗೆ ಎದುರಾಗಿದೆ ಜಲಕಂಟಕ – ಮನೆ, ಅಪಾರ್ಟ್‌ಮೆಂಟ್ ಖಾಲಿ ಮಾಡ್ತಿದ್ದಾರೆ ಜನ

    ಬೆಂಗಳೂರು: ಭೂಕುಸಿತದ ಭಯದಿಂದ ಕೊಡಗಿನಿಂದ ಜನ ಮನೆ ಖಾಲಿ ಮಾಡಿ ಶಿಫ್ಟ್ ಆಗುತ್ತಿದ್ದಾರೆ. ಈಗ ಅದೇ ರೀತಿ ಬೆಂಗಳೂರಿನ ಮೂರು ಏರಿಯಾದಿಂದ ಜನ ನಿಧಾನವಾಗಿ ಬಾಡಿಗೆ ಮನೆಯನ್ನು ಖಾಲಿ ಮಾಡುತ್ತಿದ್ದಾರೆ.

    ಹೌದು. ಬೆಂಗಳೂರಿನ ಬಿಟಿಎಂ ಲೇಔಟ್, ಕೋರಮಂಗಲ, ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ಬಾಡಿಗೆ ಮನೆಗಳನ್ನು ಜನ ಖಾಲಿ ಮಾಡುತ್ತಿದ್ದಾರೆ. ಸಣ್ಣ ಮಳೆ ಬಂದರೂ ಜಲಾವೃತವಾಗಿ ಮನೆಯೊಳಗೆ, ಅಪಾರ್ಟ್ ಮೆಂಟ್‍ನೊಳಗೆ ನೀರು ಬರುತ್ತಿದೆ. ಇದರಿಂದ ಜನರು ರೋಸಿ ಹೋಗಿ ಮನೆ ಖಾಲಿ ಮಾಡುತ್ತಿದ್ದಾರೆ.

    ಇದರಿಂದ ಸಿಟ್ಟಿಗೆದ್ದ ಬೆಂಗಳೂರು ಅಪಾರ್ಟ್ ಮೆಂಟ್ ಅಸೋಸಿಯೇಷನ್, ನಾವ್ಯಾಕೆ ಬಿಬಿಎಂಪಿಗೆ ಟ್ಯಾಕ್ಸ್ ಕಟ್ಟಬೇಕು. ನಮಗೆ ಬಿಬಿಎಂಪಿಯಿಂದ ಯಾವ ಸೌಲಭ್ಯವೂ ಸಿಗಲ್ಲ. ಮಳೆ ಬಂದಾಗ ಇಡೀ ಏರಿಯಾ ಮುಳುಗಡೆಯಾಗುತ್ತದೆ. ಈ ಏರಿಯಾದ ಜನ ಇನ್ನು ಮುಂದೆ ಬಿಬಿಎಂಪಿಗೆ ಟ್ಯಾಕ್ಸ್ ಕಟ್ಟದೆ ಪ್ರತಿಭಟನೆ ನಡೆಸುವ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತಿದ್ದೇವೆ ಎಂದು ಹೇಳಿದೆ.

  • ಕೊಡಗಿನಲ್ಲಿ ಮತ್ತೆ ಪ್ರವಾಹ ಭೀತಿ – ಮನೆ ಖಾಲಿ ಮಾಡ್ತಿರುವ ಮಂದಿಗೆ ಬಾಡಿಗೆ ಮನೆಗಳೇ ಸಿಗ್ತಿಲ್ಲ

    ಕೊಡಗಿನಲ್ಲಿ ಮತ್ತೆ ಪ್ರವಾಹ ಭೀತಿ – ಮನೆ ಖಾಲಿ ಮಾಡ್ತಿರುವ ಮಂದಿಗೆ ಬಾಡಿಗೆ ಮನೆಗಳೇ ಸಿಗ್ತಿಲ್ಲ

    ಮಡಿಕೇರಿ: ಕಳೆದ ವರ್ಷ ಅಬ್ಬರಿಸಿ ಬೊಬ್ಬಿರಿದಿದ್ದ ಮಳೆ ಕೊಡಗು ಜಿಲ್ಲೆಯನ್ನು ಅಕ್ಷರಶಃ ನೀರಿನಲ್ಲಿ ಮುಳುಗಿಸಿತ್ತು. ಆದರೆ ಈಗ ಮತ್ತೆ ಕೊಡಗಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ.

    ಶತಮಾನದಲ್ಲಿ ಕಂಡು ಕೇಳರಿಯದ ಮಳೆಗೆ ಮಂಜಿನ ನಗರಿಯ ಜನತೆ ತತ್ತರಿಸಿ ಹೋಗಿದ್ದರು. ಮಡಿಕೇರಿ ನಗರದ ಸುತ್ತಮುತ್ತಲಿರುವ ಜನರ ನೂರಾರು ಮನೆಗಳು ಧರಶಾಹಿಯಾಗಿತ್ತು. ನೂರಾರು ವರ್ಷಗಳಿಂದ ಎಂಥಂತದ್ದೋ ಮಳೆಯನ್ನು ನೋಡಿದ ಜನ ಕಳೆದ ವರ್ಷದ ಮಳೆಗೆ ಬೆಚ್ಚಿ ಬಿದ್ದಿದ್ದರು.

    ಕಳೆದ ವರ್ಷದ ಮಳೆಯಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಅಪಾಯದ ಸ್ಥಳಗಳಲ್ಲಿರುವ ಮನೆಗಳನ್ನು ಖಾಲಿ ಮಾಡುವಂತೆ ಜನಸಾಮಾನ್ಯರಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಮಂಗಳಾದೇವಿನಗರ ಸೇರಿದಂತೆ ಕೆಲ ಪ್ರದೇಶಗಳಲ್ಲಿನ ಜನರು ಒಬ್ಬೊಬ್ಬರಾಗಿಯೇ ವರುಣನ ಭಯದಿಂದ ಮನೆ ಖಾಲಿ ಮಾಡುತ್ತಿದ್ದಾರೆ.

    ಜನರು ಏನೋ ಮಳೆಯ ಭಯದಿಂದ ಮನೆಯೇನೋ ಖಾಲಿ ಮಾಡುತ್ತಿದ್ದಾರೆ. ಆದರೆ ಹೀಗೆ ಮನೆ ಖಾಲಿ ಮಾಡಲು ಹೊರಟವರಿಗೆ ಮಡಿಕೇರಿ ನಗರದಲ್ಲಿ ಮನೆಗಳೇ ಸಿಗುತ್ತಿಲ್ಲ. ಇರೋ ಕೆಲವೇ ಕೆಲ ಮನೆಗಳು ಹೋಮ್ ಸ್ಟೇಗಳಾಗಿ ಪರಿವರ್ತನೆ ಆಗಿರುವ ಕಾರಣ ಜನರಿಗೆ ಬಾಡಿಗೆ ಮನೆಗಳು ಸಿಗುವುದೇ ದೊಡ್ಡ ಸವಾಲಾಗಿದೆ.

  • ಮಳೆಗೆ ಹೆದರಿ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆ ಸೇರುತ್ತಿರುವ ಕೊಡಗು ಸಂತ್ರಸ್ತರು

    ಮಳೆಗೆ ಹೆದರಿ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆ ಸೇರುತ್ತಿರುವ ಕೊಡಗು ಸಂತ್ರಸ್ತರು

    ಮಡಿಕೇರಿ: ಈ ಬಾರಿಯ ಮಳೆಯಿಂದಾಗಿ ಮತ್ತೆ ಮನೆಗಳಿಗೆ ಹಾನಿ ಆಗಬಹುದು ಎಂದು ಆತಂಕಕ್ಕೆ ಒಳಗಾಗಿರುವ ಮಂಜಿನ ನಗರಿ ಮಡಿಕೇರಿಯ ಕೆಲವು ಸಂತ್ರಸ್ತರು, ಅಪಾಯದ ಪರಿಸ್ಥಿತಿಯಲ್ಲಿರುವ ತಮ್ಮ ಸ್ವಂತ ಮನೆಗಳನ್ನು ಸ್ವಯಂ ಪ್ರೇರಿತರಾಗಿ ಖಾಲಿ ಮಾಡಿ ಬಾಡಿಗೆ ಮನೆಗೆ ತೆರಳುತ್ತಿದ್ದಾರೆ.

    ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಕಳೆದ ವರ್ಷ ಪ್ರಕೃತಿ ವಿಕೋಪ ಸಂಭವಿಸಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು. ಮಡಿಕೇರಿ ಸೇರಿದಂತೆ ಹಲವು ಗ್ರಾಮೀಣ ಭಾಗಗಳಲ್ಲಿ ಮನೆಗಳು ಕೊಚ್ಚಿ ಹೋಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸಂತ್ರಸ್ತರಿಗೆ ಸರ್ಕಾರದಿಂದ ಮನೆ ನಿರ್ಮಾಣ ಕಾರ್ಯವು ನಡೆಯುತ್ತಿದೆ. ಆದರೆ ಮಡಿಕೇರಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಮನೆಗಳು ಈಗಲೂ ಅಪಾಯದ ಸ್ಥಿತಿಯಲ್ಲಿದೆ. ಈ ಬಾರಿಯ ಮಳೆಯಿಂದ ಮತ್ತೆ ಅನಾಹುತ ಸಂಭವಿಸಬಹುದೆಂದು ಮಳೆಗಾಲ ಆರಂಭಕ್ಕೆ ಒಂದು ತಿಂಗಳಿರುವ ಮೊದಲೇ ತಮ್ಮ ಮನೆಗಳಲ್ಲಿನ ವಸ್ತುಗಳನ್ನು ಕೊಂಡುಕೊಂಡು ಇತರೆ ಕಡೆ ಬಾಡಿಗೆ ಮನೆಗಳಲ್ಲಿ ವಾಸಿಸಲು ಜನರು ಮುಂದಾಗಿದ್ದಾರೆ.

    ಮಡಿಕೇರಿಯ ಚಾಮುಂಡೇಶ್ವರಿ ನಗರ ಮತ್ತು ಇಂದಿರಾನಗರ ಬಡಾವಣೆಗಳಲ್ಲಿ ಕಳೆದ ಬಾರಿಯ ಪ್ರಕೃತಿ ವಿಕೋಪದಿಂದ ಮನೆಗಳು ಕುಸಿದು ಬಿದ್ದಿರುವ ಶೋಚನೀಯ ದೃಶ್ಯ ಇನ್ನೂ ಕಾಣಸಿಗುತ್ತಿದೆ. ಈ ಹಿಂದಿನ ಮಳೆಯಲ್ಲಿ ಸ್ವಲ್ಪ ಹಾನಿಗೊಳಗಾದ ಮನೆಯಲ್ಲಿ ವಾಸದಲ್ಲಿದ್ದ ಜನತೆ ಇದೀಗ ತಮ್ಮ ಸ್ಥಳದಿಂದ ಬೇರೆಡೆಗೆ ತೆರಳುತ್ತಿದ್ದಾರೆ. ಕೆಲವರು ಹುಟ್ಟಿ ಬೆಳೆದ ಮನೆಯನ್ನು ತೊರೆದು ಎಲ್ಲಿಗೆ ಹೋಗುವುದು ಎಂದು ಚಿಂತಿಸುತ್ತಿದ್ದಾರೆ.

    ಚಾಮುಂಡೇಶ್ವರಿ ನಗರ ಹಾಗೂ ಇಂದಿರಾ ನಗರ ಬಡಾವಣೆಗಳಲ್ಲಿ ಜಲಪ್ರಳಯದ ಭೀಕರತೆಗೆ ಕೂಲಿ ಕಾರ್ಮಿಕರು, ಬಡಬಗ್ಗರು ಸಂಕಷ್ಟಕ್ಕೆ ಒಳಗಾಗಿದ್ದರು. ಸಂತ್ರಸ್ತರು ರೋಧಿಸುತ್ತಲೇ ಸಂತ್ರಸ್ತ ಕೇಂದ್ರಗಳಲ್ಲಿ ಆಸರೆ ಪಡೆದಿದ್ದರು. ಅಬ್ಬರಿಸಿ ಬೊಬ್ಬಿರಿದ ವರುಣನ ಆರ್ಭಟದ ಕುರುಹು, ಈ ಬಡಾವಣೆಗಳಲ್ಲಿ ಇಂದಿಗೂ ಇದೆ. ಬೆಂದ ಗಾಯಕ್ಕೆ ಉಪ್ಪು ಸುರಿದಂತೆ ಮತ್ತೆ ಇದೀಗ ಅದೇ ಮಳೆಗಾಳಿಯ ಆರ್ಭಟದ ಆತಂಕ ಕಣ್ಣೆದುರಿನಲ್ಲಿ ಕುಣಿದಾಡುತ್ತಿದೆ. ಬಾಡಿಗೆ ಮನೆಯಲ್ಲೋ, ನೆಂಟರಿಷ್ಟರ ಮನೆಯಲ್ಲೋ ಉಳಿದು ಹೋದವರಿಗೆ ಇನ್ನೂ ಆಸರೆ ಸಿಕ್ಕಿಲ್ಲ. ಅದೇ ಬಡಾವಣೆಯಲ್ಲಿ ಉಳಿದು ಹೋದವರಿಗೂ ಭದ್ರತೆಯಿಲ್ಲ. ಹೀಗಾಗಿ ಅನೇಕರು ತಮ್ಮ ನಿವಾಸಗಳನ್ನು ಸ್ಥಳಾಂತರಿಸುತ್ತಿದ್ದಾರೆ. ಮತ್ತೆ ಬಾಡಿಗೆ ಮನೆಗಳನ್ನು ಹುಡುಕುತ್ತಿದ್ದಾರೆ.

    ಸರ್ಕಾರದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಾಣವಾಗುತ್ತಿದ್ದರೂ ಎಲ್ಲಾ ಸಂತ್ರಸ್ತರಿಗೆ ಈ ಮಳೆಗಾಲದ ಆರಂಭದ ಮುನ್ನ ಮನೆ ನೀಡುವುದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಆದರೆ ಅಪಾಯದ ಸ್ಥಿತಿಯಲ್ಲಿರುವ ಮನೆಗಳಲ್ಲಿ ವಾಸಿಸುವವರ ಪರಿಸ್ಥಿತಿ ಮಾತ್ರ ಕೇಳುವವರಿಲ್ಲ. ಇದರಿಂದ ಕೆಲವು ಸಂತ್ರಸ್ತರು ತಮ್ಮ ಮನೆಯ ಸ್ಥಿತಿಯನ್ನು ಅರಿತು ಸ್ವಯಂ ಪ್ರೇರಿತವಾಗಿ ಖಾಲಿ ಮಾಡುತ್ತಿದ್ದಾರೆ.

  • ಕೊಡಗು ನಿರಾಶ್ರಿತರಿಗೆ ಸೂರು ವಿಳಂಬ- ಇತ್ತ ಬಾಡಿಗೆ ಮನೆಯೂ ಸಿಗ್ತಿಲ್ಲ

    ಕೊಡಗು ನಿರಾಶ್ರಿತರಿಗೆ ಸೂರು ವಿಳಂಬ- ಇತ್ತ ಬಾಡಿಗೆ ಮನೆಯೂ ಸಿಗ್ತಿಲ್ಲ

    ಮಡಿಕೇರಿ: ಪ್ರಾಕೃತಿಕ ವಿಕೋಪದಿಂದ ಸೂರು ಕಳೆದುಕೊಂಡ ಸಾವಿರಾರು ನಿರಾಶ್ರಿತರಿಗೆ ಸೂರು ಕಲ್ಪಿಸೋ ಕಾರ್ಯ ವಿಳಂಬವಾಗ್ತಿರೋದ್ರಿಂದ ಸಂತ್ರಸ್ತರು ನಿರಾಶ್ರಿತ ಕೇಂದ್ರದಲ್ಲಿರಲು ಹಿಂದೇಟು ಹಾಕ್ತಿದ್ದಾರೆ. ಅದ್ರಿಂದ ಬಾಡಿಗೆ ಮನೆಗಳಿಗೆ ತೆರಳೋಕೆ ಮುಂದಾಗ್ತಿರೋ ನಿರಾಶ್ರಿತ ಕುಟುಂಬಗಳಿಗೆ ಜಿಲ್ಲಾಡಳಿತ ತಿಂಗಳ ಬಾಡಿಗೆ ಕೊಡೋಕೆ ರೆಡಿ ಇದ್ರೂ ಬಾಡಿಗೆ ಮನೆಗಳು ಸಿಗ್ತಿಲ್ಲ. ಅತ್ತ ನಿರಾಶ್ರಿತ ಕೇಂದ್ರಗಳಲ್ಲಿ ಗುಂಪು ಗುಂಪಾಗಿ ಇರೋಕು ಆಗದೆ, ಇತ್ತ ಬಾಡಿಗೆ ಮನೆಯೂ ಸಿಗದೆ ಸಂತ್ರಸ್ತರು ಪರದಾಡ್ತಿದ್ದಾರೆ.

    ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತರ ಕೇಂದ್ರ ಸೇರಿರೋ ಸಂತ್ರಸ್ತರು ಇನ್ನೂ ಕೂಡಾ ಅಲ್ಲೇ ಇದ್ದಾರೆ. ಒಂದೂವರೆ ತಿಂಗಳು ಕಳೆದ್ರೂ ಸಂತ್ರಸ್ತರಿಗೆ ಇನ್ನೂ ಸೂರು ಸಿಕ್ಕಿಲ್ಲ. ಸೂರು ಕಲ್ಪಿಸೋ ಕಾರ್ಯ ವಿಳಂಬವಾಗ್ತಿರೋದ್ರಿಂದ ನಿರಾಶ್ರಿತರ ಕೇಂದ್ರದಲ್ಲಿರೋಕೆ ಸಂತ್ರಸ್ತರು ಹಿಂದೇಟು ಹಾಕ್ತಿದ್ದಾರೆ. ಅದಕ್ಕೆ ಪ್ರಮುಖ ಕಾರಣವಾಗಿರೋದು ಸಂತ್ರಸ್ತರು ಈ ಹಿಂದೆ ಬದುಕಿದ್ದ ರೀತಿ. ಬಹುತೇಕ ಸಂತ್ರಸ್ತರು ಕಾಫಿ ತೊಟಗಳ ನಡುವೆ ಒಂಟಿ ಮನೆಗಳಲ್ಲಿ ಬದುಕು ಕಟ್ಟಿಕೊಂಡಿದ್ದರು. ಹೀಗೆ ಜೀವನ ನಡೆಸಿದ್ದವರು ನಿರಾಶ್ರಿತರ ಕೇಂದ್ರದಲ್ಲಿ ಇರೋಕೆ ಹಿಂಜರಿಯುತ್ತಿದ್ದಾರೆ. ಸದ್ಯ ಬಾಡಿಗೆ ಮನೆ ಹುಡುಕುವ ಪ್ರಯತ್ನ ಮಾಡ್ತಿದ್ದಾರೆ.


    ಜಿಲ್ಲಾಡಳಿತ ಕೂಡ ಸಂತ್ರಸ್ತರ ಪಯತ್ನಕ್ಕೆ ಸಾಥ್ ನೀಡಿದೆ. ಬಾಡಿಗೆ ಮನೆಗಳಿಗೆ ಹೋಗೋರಿಗೆ ತಿಂಗಳಿಗೆ 10 ಸಾವಿರದವರೆಗೆ ಭರಿಸೋದಕ್ಕೆ ಕೊಡಗು ಜಿಲ್ಲಾಡಳಿತ ರೆಡಿ ಇದೆ. ಇಷ್ಟಿದ್ರೂ ದುರಂತ ಎಂಬಂತೆ ಬಾಡಿಗೆ ಮನೆಗಳು ಸಿಗ್ತಿಲ್ಲ. ಸರ್ಕಾರವೇ ಹಣ ಭರಿಸೋದಕ್ಕೆ ರೆಡಿ ಇದ್ರೂ ಬಾಡಿಗೆ ಮನೆಗಳು ಸಿಗದಿರೋದು ಸಂತ್ರಸ್ತರನ್ನು ಮತ್ತಷ್ಟೂ ಆತಂಕಕ್ಕೀಡು ಮಾಡಿದೆ. ಹೆಚ್ಚಾಗಿ ಲೋಕಲೈಟ್ಸ್ ಇರೋದ್ರಿಂದ ಮತ್ತು ಬಹುತೇಕ ಬಾಡಿಗೆ ಮನೆಗಳು ಹೋಮ್ಸ್ ಸ್ಟೇಗಳಾಗಿ ಪರಿವರ್ತನೆ ಆಗಿರೋದ್ರಿಂದ ಈ ಸಮಸ್ಯೆ ಎದುರಾಗಿದೆ. ಅಷ್ಟೇ ಅಲ್ದೆ ಮಡಿಕೇರಿ ನಗರ ವ್ಯಾಪ್ತಿಯಲ್ಲೂ ಪ್ರಾಕೃತಿಕ ವಿಕೋಪಕ್ಕೆ ಕೆಲವು ಬಡಾವಣೆಗಳು ಬಲಿಯಾಗಿರೋದು ಸಂತ್ರಸ್ತರಿಗೆ ನುಂಗಲಾರದ ತುತ್ತಾಗಿದೆ. ಇನ್ನೂ ದೂರದ ಬಾಡಿಗೆ ಮನೆಗಳಿಗೆ ತೆರಳೋಕೆ ಮಕ್ಕಳ ವಿದ್ಯಾಬ್ಯಾಸ, ತಮ್ಮ ಕೆಲಸ ಅಡ್ಡಿಯಾಗಿದೆ ಅಂತ ಸಂತ್ರಸ್ತೆ ಭಾಗೀರಥಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

    ಒಟ್ಟಿನಲ್ಲಿ ರೆಡ್ ಅಲರ್ಟ್ ಸಂದರ್ಭದಲ್ಲಿ ನಿರಾಶ್ರಿತ ಕೇಂದ್ರ ಸೇರಿದ್ದವರಿಗೆ ಒಂದೂವರೆ ತಿಂಗಳು ಕಳೆದ್ರೂ ಸೂರು ಸಿಕ್ಕಿಲ್ಲ. ತಮ್ಮ ಜೀವನ ಶೈಲಿಗೆ ಹೊಂದಿಕೊಳ್ಳದ ರೀತಿಯಲ್ಲಿರೋ ನಿರಾಶ್ರಿತರ ಕೇಂದ್ರದಲ್ಲಿ ತಿಂಗಳುಗಟ್ಟಲೆ ಇರೋದು ಕಷ್ಟ ಅಂತ ಬಾಡಿಗೆ ಮನೆಯತ್ತ ಮುಖ ಮಾಡೋಣ ಅಂದ್ರೆ ಅದೂ ಸಿಗದೆ ಸಂತ್ರಸ್ತರು ಕಂಗಾಲಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv