Tag: rent home

  • ಬಾಡಿಗೆಗೆ ಮನೆ ಕೊಟ್ಟು ಕ್ಯಾಮೆರಾ ಇಟ್ಟ- ಗಂಡ, ಹೆಂಡ್ತಿ ಬೆತ್ತಲೆ ವಿಡಿಯೋ ವೆಬ್‍ಸೈಟ್‍ಗೆ ಹಾಕಿದ ಕಾಮುಕ

    ಬಾಡಿಗೆಗೆ ಮನೆ ಕೊಟ್ಟು ಕ್ಯಾಮೆರಾ ಇಟ್ಟ- ಗಂಡ, ಹೆಂಡ್ತಿ ಬೆತ್ತಲೆ ವಿಡಿಯೋ ವೆಬ್‍ಸೈಟ್‍ಗೆ ಹಾಕಿದ ಕಾಮುಕ

    ಬೆಂಗಳೂರು: ವ್ಯಕ್ತಿಯೊಬ್ಬ ದಂಪತಿಯ ಬೆಡ್‍ರೂಮ್ ಗೆ ಕ್ಯಾಮೆರಾ ಇಟ್ಟು ವಿಕೃತಿ ಮೆರೆದಿರೋ ಘಟನೆ ಕೋರಮಂಗಲದಲ್ಲಿ ನಡೆದಿದೆ.

    ಕೊರಮಂಗಲದ ಅಂಜನ್ ಎಂಬಾತ ಈ ವಿಕೃತ ಕೆಲಸ ಮಾಡಿದ್ದಾನೆ. ಅಂಜನ್ ಮನೆಯಲ್ಲಿ ದಂಪತಿ ಬಾಡಿಗೆಗೆ ವಾಸವಾಗಿದ್ದರು. ದಂಪತಿಯ ರೂಮಿಗೆ ಕ್ಯಾಮೆರಾ ಇಟ್ಟ ಅಂಜನ್, ಅವರ ಖಾಸಗಿ ದೃಶ್ಯಗಳನ್ನ ಸೆರೆಹಿಡಿದು ಅಶ್ಲೀಲ ವೆಬ್‍ಸೈಟ್ ಗೆ ಅಪ್ಲೋಡ್ ಮಾಡಿದ್ದಾನೆ.

    ದಂಪತಿಯ ಸ್ನೇಹಿತರೊಬ್ಬರು ಈ ದೃಶ್ಯವನ್ನ ವೆಬ್‍ಸೈಟ್ ನಲ್ಲಿ ಗಮನಿಸಿದ್ದರು. ತನ್ನ ಸ್ನೇಹಿತ ಮತ್ತು ಆತನ ಹೆಂಡತಿಯ ವಿಡಿಯೋ ನೋಡಿ ಶಾಕ್ ಆಗಿದ್ರು. ಬಳಿಕ ತನ್ನ ಸ್ನೇಹಿತನಿಗೆ ಕರೆ ಮಾಡಿ ವೆಬ್ ಸೈಟ್ ನಲ್ಲಿ ವಿಡಿಯೋ ಇದ್ದ ಬಗ್ಗೆ ಮಾಹಿತಿ ನೀಡಿದ್ದರು.

    ತಮ್ಮ ಖಾಸಗಿ ದೃಶ್ಯವನ್ನ ಯಾರು ರೆಕಾರ್ಡ್ ಮಾಡಿದ್ದಾರೆಂದು ಪರೀಶಿಲಿಸಿದಾಗ ಮನೆ ಮಾಲೀಕನ ಮಗನ ಕೈವಾಡ ಬಯಲಾಗಿದೆ. ಮನೆಯ ನಕಲಿ ಕೀ ಬಳಿಸಿ ದಂಪತಿ ಇಲ್ಲದೆ ಇದ್ದಾಗ ಅಂಜನ್ ಕ್ಯಾಮೆರಾ ಅಳವಡಿಸಿದ್ದ ಎಂಬುದು ಗೊತ್ತಾಗಿದೆ.

    ಸದ್ಯ ದಂಪತಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.