Tag: rent

  • ಬೆಂಗಳೂರಿನಲ್ಲಿ ಹೊಸ ಆ್ಯಪಲ್ ಕಚೇರಿ – ತಿಂಗಳಿಗೆ 6.3 ಕೋಟಿ ರೂ. ಬಾಡಿಗೆ

    ಬೆಂಗಳೂರಿನಲ್ಲಿ ಹೊಸ ಆ್ಯಪಲ್ ಕಚೇರಿ – ತಿಂಗಳಿಗೆ 6.3 ಕೋಟಿ ರೂ. ಬಾಡಿಗೆ

    – 10 ವರ್ಷಕ್ಕೆ 1,000 ಕೋಟಿ ರೂ. ವೆಚ್ಚ

    ನವದೆಹಲಿ: ಐಫೋನ್ ತಯಾರಕ ಆ್ಯಪಲ್ (Apple) ಕಂಪನಿ ಬೆಂಗಳೂರಿನ ಡೌನ್‌ಟೌನ್‌ನಲ್ಲಿರುವ ಮಿನ್ಸ್ಕ್ ಸ್ಕ್ವೇರ್‌ನಲ್ಲಿ ಹೊಸ ಕಚೇರಿಯನ್ನು ತೆರೆದಿದೆ. ಸುಮಾರು 2.7 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು 10 ವರ್ಷಗಳ ಕಾಲ ಲೀಸ್‌ಗೆ (Lease) ಪಡೆದಿದ್ದು, ತಿಂಗಳಿಗೆ 6.3 ಕೋಟಿ ರೂ. ಬಾಡಿಗೆ (Rent) ಪಾವತಿಸಲಿದೆ ಎಂದು ಡೇಟಾ ಅನಾಲಿಟಿಕ್ಸ್ ಸಂಸ್ಥೆ ಪ್ರಾಪ್‌ಸ್ಟ್ಯಾಕ್ ತಿಳಿಸಿದೆ.

    ಬೆಂಗಳೂರಿನ ವಸಂತ ನಗರದ ಸ್ಯಾಂಕಿ ರಸ್ತೆಯಲ್ಲಿರುವ ಎಂಬೆಸಿ ಜೆನಿತ್ ಕಟ್ಟಡದ 5ರಿಂದ 13ನೇ ಮಹಡಿಯಲ್ಲಿ ಆಪಲ್‌ನ ಹೊಸ ಕಚೇರಿಯಿದೆ. ಈ ಎಲ್ಲ ಮಹಡಿಗಳಿಗೆ ಕಂಪನಿಯು ಪಾರ್ಕಿಂಗ್, ನಿರ್ವಹಣಾ ಶುಲ್ಕಾ ಸೇರಿದಂತೆ ಮಾಸಿಕ 6.31 ಕೋಟಿ ರೂ.ಗಳ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ. ಪ್ರತಿ ಚದರ ಅಡಿಗೆ 235 ರೂ. ಬಾಡಿಗೆ ಬೀಳಲಿದೆ. ಇದನ್ನೂ ಓದಿ: Asia Cup 2025: ಟೀಂ ಇಂಡಿಯಾ ಪ್ರಕಟ- ಸೂರ್ಯಕುಮಾರ್‌ ನಾಯಕ, ಕನ್ನಡಿಗ ವರುಣ್‌ಗೆ ಸ್ಥಾನ

    ರಿಯಲ್ ಎಸ್ಟೇಟ್ ಸಂಸ್ಥೆ ಎಂಬಸಿ ಗ್ರೂಪ್‌ನಿಂದ (Embassy Group) ಕಾರ್ ಪಾರ್ಕಿಂಗ್ ಸ್ಥಳ ಸೇರಿದಂತೆ ಬಹು ಮಹಡಿ ಕಟ್ಟಡವನ್ನು ಆ್ಯಪಲ್ ಕಂಪನಿ 10 ವರ್ಷಗಳ ಕಾಲ ಗುತ್ತಿಗೆಗೆ ತೆಗೆದುಕೊಂಡಿದೆ. ಆ್ಯಪಲ್ ಕಂಪನಿ 31.57 ಕೋಟಿ ರೂ. ಭದ್ರತಾ ಠೇವಣಿ ಇಟ್ಟಿದೆ. ವಾರ್ಷಿಕ ಬಾಡಿಗೆ 4.5%ರಷ್ಟು ಹೆಚ್ಚಳವಾಗಲಿದೆ. ಈ ವರ್ಷದ ಏಪ್ರಿಲ್ 3ರಿಂದ ಲೀಸ್ ಪ್ರಾರಂಭವಾಗಿದ್ದು, ಜುಲೈನಲ್ಲಿ ನೋಂದಾಯಿಸಲಾಗಿದೆ. ಆಪಲ್ 1.5 ಕೋಟಿ ರೂ.ಗಳ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಿದೆ ಎಂದು ದಾಖಲೆಗಳು ಬಹಿರಂಗಪಡಿಸಿವೆ. ಇದನ್ನೂ ಓದಿ: ಎಸ್‌ಸಿ ಒಳಮೀಸಲಾತಿ ಜಾರಿಗೆ ವಿಶೇಷ ಸಭೆ; 101 ಜಾತಿಗಳಿಗೂ ನ್ಯಾಯ ಕೊಡಿ: ವಿಜಯೇಂದ್ರ ಆಗ್ರಹ

    2024-25ರ ಆರ್ಥಿಕ ವರ್ಷದಲ್ಲಿ ಆ್ಯಪಲ್ ಕಂಪನಿ ಸುಮಾರು 1.5 ಲಕ್ಷ ಕೋಟಿ ರೂ. ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿದೆ. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ; ಎಲ್ಲೆಲ್ಲಿ ಪವರ್‌ ಕಟ್‌?

  • ಉರ್ಫಿ ಜಾವೇದ್‌ಗೆ ಮನೆ ಬೇಕಂತೆ: ಮಾಲೀಕರೆ ಗಮನಿಸಿ

    ಉರ್ಫಿ ಜಾವೇದ್‌ಗೆ ಮನೆ ಬೇಕಂತೆ: ಮಾಲೀಕರೆ ಗಮನಿಸಿ

    ಚಿತ್ರವಿಚಿತ್ರ ಕಾಸ್ಟ್ಯೂಮ್‌ಗಳಿಂದಾಗಿಯೇ ಸಖತ್ ಫೇಮಸ್ ಆಗಿರುವ ಉರ್ಫಿ ಜಾವೇದ್ (Urfi Javed) ಅವರಿಗೆ ಬಾಡಿಗೆಗೆ ಮನೆ ಬೇಕಾಗಿದೆಯಂತೆ. ಬಾಡಿಗೆ (Rent) ಮನೆ (House) ಹುಡುಕುವುದಕ್ಕಾಗಿಯೇ ಅವರು ಹಲವು ದಿನಗಳಿಂದ ಬೀದಿ ಬೀದಿ ಅಲೆಯುತ್ತಿದ್ದಾರಂತೆ. ಮನೆ ಖಾಲಿ ಇದ್ದರೂ, ತಮಗೆ ಮಾತ್ರ ಮನೆ ಕೊಡುವುದಿಲ್ಲ ಎಂದು ಉರ್ಫಿ ನೋವಿನಿಂದ ಮಾತನಾಡಿದ್ದಾರೆ. ಅದಕ್ಕೆ ಅವರು ತಮ್ಮದೇ ಆದ ಕಾರಣವನ್ನೂ ಕೊಟ್ಟಿದ್ದಾರೆ.

    ತಾವು ಅರೆಬರೆ ಬಟ್ಟೆಗಳನ್ನು ಹಾಕುವ ಕಾರಣಕ್ಕಾಗಿ ತಮ್ಮದೇ ಧರ್ಮದವರು ಮನೆ ಬಾಡಿಗೆ ಕೊಡುತ್ತಿಲ್ಲವಂತೆ. ತಾನು ಬೇರೆ ಧರ್ಮದವರು ಆಗಿರುವ ಕಾರಣಕ್ಕಾಗಿ ಇನ್ನುಳಿದ ಧರ್ಮದವರು ಮನೆ ನೀಡುತ್ತಿಲ್ಲವಂತೆ. ಹೀಗಾದರೆ, ನಾನು ವಾಸಿಸುವುದು ಹೇಗೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ನಾನೊಬ್ಬ ಕಲಾವಿದೆ ಎನ್ನುವುದನ್ನು ಮರೆತು, ನಾನು ಹಾಕುವ ಬಟ್ಟೆ ಮತ್ತು ನನ್ನ ಧರ್ಮದ ಆಧಾರದಿಂದ ನನ್ನನ್ನು ಅಳೆಯಲಾಗುತ್ತಿದೆ ಎಂದು ನೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಮಂದಣ್ಣ ಪಾರ್ಟಿ

    ಮುಂಬೈ (Mumbai) ನಗರದಲ್ಲಿ ಅವರಿಗೆ ಯಾರೂ ಮನೆ ಕೊಡುತ್ತಿಲ್ಲವಂತೆ. ಮನೆ ಹುಡುಕಾಟದಲ್ಲೇ ಅವರು ಸಾಕಷ್ಟು ಸಮಯವನ್ನು ಕಳೆಯುತ್ತಿದ್ದಾರಂತೆ. ಮನೆ ಹುಡುಕುವುದರಲ್ಲೇ ಸಮಯ ವ್ಯರ್ಥವಾಗುತ್ತಿರುವುದರಿಂದ ಕಾಸ್ಟ್ಯೂಮ್ ಬಗ್ಗೆ ಯೋಚಿಸುವುದಕ್ಕೆ ಅವರಿಗೆ ಸಮಯವೇ ಸಿಗುತ್ತಿಲ್ಲ ಎಂದಿದ್ದಾರೆ ಉರ್ಫಿ. ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿರುವ ಇವರು, ನಟನೆಗಿಂತಲೂ ಹೆಚ್ಚು ಫೇಮಸ್ ಆಗಿದ್ದು ಅರೆಬರೆಯ ಬಟ್ಟೆಗಳನ್ನು ತೊಡುವ ಮೂಲಕ. ಇದೇ ಅವರಿಗೆ ಈಗ ಮುಳುವಾಗಿದೆಯಂತೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರಿನಲ್ಲಿ ಬಾಡಿಗೆ ಮನೆ ದರ ಹೆಚ್ಚಳ- ಬಾಡಿಗೆದಾರರು ಕಂಗಾಲು

    ಬೆಂಗಳೂರಿನಲ್ಲಿ ಬಾಡಿಗೆ ಮನೆ ದರ ಹೆಚ್ಚಳ- ಬಾಡಿಗೆದಾರರು ಕಂಗಾಲು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮನೆಗಳ ಬಾಡಿಗೆ (Rent House) ಹೆಚ್ಚಾಗಿದೆ. ಸಂಬಳದ ಅರ್ಧ ಭಾಗ ಬಾಡಿಗೆಗೆನೇ ಕಟ್ಟೋ ಸ್ಥಿತಿ ನಿರ್ಮಾಣವಾಗಿದೆ.

    ಬೆಂಗಳೂರಿನಲ್ಲಿ ದಿನೇ ದಿನೇ ಮನೆ ಬಾಡಿಗೆ ಹೆಚ್ಚುತ್ತಿದೆ. ಶೇ.40 ರಷ್ಟು ಬಾಡಿಗೆ ಹೆಚ್ಚಾಗಿದ್ದು, ಬಾಡಿಗೆದಾರರು ಕಂಗಾಲಾಗುತ್ತಿದ್ದಾರೆ. ದುಡಿದ ಅರ್ಧ ದುಡ್ಡೆಲ್ಲ ಬಾಡಿಗೆಗೆನೇ ಸುರಿಯಬೇಕಾಗಿದೆ. ಕೊರೋನಾ (Corona Virus) ನಂತರ ವರ್ಕ್ ಫ್ರಮ್ ಹೋಮ್ ಗೆ ಕಂಪನಿಗಳು ಬ್ರೇಕ್ ಕೊಟ್ಟು, ಆಫ್ ಲೈನ್ ಕೆಲಸಕ್ಕೆ ಮುಂದಾಗಿವೆ. ಹೀಗಾಗಿ ಬಹುತೇಕ ಜನ ನಗರಕ್ಕೆ ಮರಳಿದ್ದಾರೆ. ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಸರ್ಕಾರವೇ ದರ ನಿಗದಿ ಮಾಡಬೇಕೆಂದು ಬಾಡಿಗೆದಾರರು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಮಾಜಿ ಸಂಸದರಾದ ಮುದ್ದಹನುಮೇಗೌಡ, ನಟ ಶಶಿಕುಮಾರ್‌ ಬಿಜೆಪಿ ಸೇರ್ಪಡೆ

    ಬಾಡಿಗೆ ಹೆಚ್ಚಳ ಮಾಡಿರುವ ಬಗ್ಗೆ ಮನೆ ಮಾಲೀಕರು ಕೂಡ ತಮ್ಮದೇ ಕಷ್ಟಗಳನ್ನ ತೋಡಿಕೊಂಡಿದ್ದಾರೆ. ಕೋವಿಡ್ ಟೈಂನಲ್ಲಿ ಸರ್ಕಾರ ನಮ್ಮ ಕೈ ಹಿಡಿಲಿಲ್ಲ. ದುಬಾರಿ ಬಾಡಿಗೆ ಕೊಡ್ತಿರೋದು ನಮ್ಮ ಕೈಗೆ ಬರುತ್ತಿಲ್ಲ. ಸರ್ಕಾರಕ್ಕೆನೇ ಟ್ಯಾಕ್ಸ್ ಆಗಿ ಹೋಗ್ತಿದೆ. ಕೋವಿಡ್ ಸಮಯದಲ್ಲಿ ಸರ್ಕಾರ, ಟ್ಯಾಕ್ಸ್ ಕಡಿಮೆ ಮಾಡಲಿಲ್ಲ, ಕರೆಂಟ್, ವಾಟರ್ ಬಿಲ್ ಕಡಿಮೆ ಮಾಡಲಿಲ್ಲ. ಬ್ಯಾಂಕ್ ಗಳಲ್ಲಿದ್ದ ಸಾಲದ ಬಡ್ಡಿಯನ್ನು ಕಡಿಮೆ ಮಾಡಿಲ್ಲ. ಸರ್ಕಾರ ಇದೆಲ್ಲದರ ಬಗ್ಗೆ ಗಮನ ಹರಿಸಿದ್ರೆ, ನಾವು ಬಾಡಿಗೆ ಇಳಿಸ್ತೀವಿ ಎಂದು ಮಾಲೀಕರು ಹೇಳುತ್ತಿದ್ದಾರೆ.

    ಪೆಟ್ರೋಲ್, ತರಕಾರಿ, ಗ್ಯಾಸ್ ಹೀಗೆ ಬೆಲೆ ಏರಿಕೆಯ ಬಿಸಿಯಲ್ಲಿರುವ ಜನರಿಗೆ, ದಿನೆ ದಿನೇ ಏರಿಕೆಯಾಗ್ತಿರೋ ಬಾಡಿಗೆ ಮನೆಗಳ ದರದಿಂದ ಬಾಡಿಗೆದಾರರು ಆಕ್ರೋಶಗೊಂಡಿದ್ದಾರೆ. ಸರ್ಕಾರವೇ ಬಾಡಿಗೆ ಮನೆಗಳಿಗೆ ಹಣವನ್ನ ನಿಗದಿ ಮಾಡಿದ್ರೆ, ಅದೆಷ್ಟೋ ಜನ್ರಿಗೆ ಉಪಯೋಗವಾಗಲಿದೆ. ಇದನ್ನೂ ಓದಿ: ನನ್ನ ತಮ್ಮನ ಮಗ ಕಿಡ್ನ್ಯಾಪ್ ಆಗಿದ್ದಾನೆ: ರೇಣುಕಾಚಾರ್ಯ

    Live Tv
    [brid partner=56869869 player=32851 video=960834 autoplay=true]

  • ಬಾಡಿಗೆ ವಿಚಾರಕ್ಕೆ ಹುಬ್ಬಳ್ಳಿಯಲ್ಲಿ ಹರಿಯಿತು ನೆತ್ತರು!

    ಬಾಡಿಗೆ ವಿಚಾರಕ್ಕೆ ಹುಬ್ಬಳ್ಳಿಯಲ್ಲಿ ಹರಿಯಿತು ನೆತ್ತರು!

    ಹುಬ್ಬಳ್ಳಿ: ನಗರದಲ್ಲಿ ಒಂದೇ ಗಂಟೆಯಲ್ಲಿ ಎರಡು ಪ್ರತ್ಯೇಕ ಕಡೆಗಳಲ್ಲಿ ಚಾಕು ಮತ್ತು  ಬ್ಲೇಡ್‌ ನಿಂದ ಇರಿದು ಹಲ್ಲೆ ಮಾಡಲಾಗಿದೆ.

    ಹಳೇ ಹುಬ್ಬಳಿಯ ಇಬ್ರಾಹಿಂಪುರದಲ್ಲಿ ಬಾಡಿಗೆ ವಿಷಯಕ್ಕೆ ಜಗಳ ಮಾಡಿ ಆಟೋ ಚಾಲಕನ ಕುತ್ತಿಗೆಗೆ ಬ್ಲೇಡ್‌ ನಿಂದ ಹಲ್ಲೆ ಮಾಡಲಾಗಿದೆ. ಆಟೋ ಚಾಲಕ ಅಕ್ತರ್ ಗೆ ಇರ್ಫಾನ್ ಎಂಬಾತ ಹಲ್ಲೆ ಮಾಡಿ ಪರಾರಿ ಆಗಿದ್ದಾನೆ. ಗಾಯಾಳು ಅಕ್ತರ್‍ಗೆ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

    ಇತ್ತ ಹಣಕಾಸಿನ ವಿಚಾರಕ್ಕೆ ಸನ್ಮೂನ್ ಕಾಡೆ ಎಂಬಾತನಿಗೆ ಅನಿಲ್ ಎಂಬಾತ ಚಾಕು ಇರಿದಿದ್ದಾನೆ. ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಲವೇ ನಿಮಿಷಗಳಲ್ಲಿ ಆರೋಪಿಯನ್ನು ಪಿಐ ರಾಘವೇಂದ್ರ ಹಳ್ಳೂರ ಬಂಧಿಸಿದ್ದಾರೆ. ಇದನ್ನೂ ಓದಿ: ಕಾರಿಗೆ ಕಂಟೈನರ್ ಡಿಕ್ಕಿ- ಮಗು ಸೇರಿ ಐವರ ದುರ್ಮರಣ

    Live Tv
    [brid partner=56869869 player=32851 video=960834 autoplay=true]

  • ಪತಿ, ಪತ್ನಿ ನಡುವೆ ಒಡವೆ ವಿಚಾರಕ್ಕೆ ಕಿರಿಕ್ – ಕೊಲೆಯಲ್ಲಿ ಅಂತ್ಯ

    ಪತಿ, ಪತ್ನಿ ನಡುವೆ ಒಡವೆ ವಿಚಾರಕ್ಕೆ ಕಿರಿಕ್ – ಕೊಲೆಯಲ್ಲಿ ಅಂತ್ಯ

    ಬೆಂಗಳೂರು: ಬಾಡಿಗೆ ಕಟ್ಟಲು ಎತ್ತಿಟ್ಟ ಹಣವನ್ನು ಒಡವೆ ಖರೀದಿಗೆ ಖರ್ಚು ಮಾಡಿದಕ್ಕೆ ಪತ್ನಿ ಮೇಲೆ ಹಲ್ಲೆ ನಡೆಸಿ ಪತಿಯೇ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ನಾಜಿಯಾ ಎಂದು ಗುರುತಿಸಲಾಗಿದ್ದು, ಈ ಘಟನೆ ನವೆಂಬರ್ 2ರಂದು ಬೆಂಗಳೂರಿನ ದಯಾನಂದ ನಗರದಲ್ಲಿ ನಡೆದಿದೆ. ಪತಿ ಫಾರೂಕ್ ಮನೆ ಬಾಡಿಗೆಗೆಂದು ಹಣ ಕೂಡಿಟ್ಟಿದ್ದರು. ಆದರೆ ಒಡವೆ ಮೇಲೆ ಆಸೆ ಹೊಂದಿದ್ದ ಪತ್ನಿ ಬಾಡಿಗೆಗೆಂದು ಕೂಡಿಟ್ಟ 6,500 ರೂ. ಹಣ ಖರ್ಚು ಮಾಡಿ ಡ್ಯೂಪ್ಲಿಕೇಟ್ ಜ್ಯುವೆಲ್ಲರಿಯನ್ನು ಖರೀದಿ ಮಾಡಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

    BRIBE

    ಬಾಡಿಗೆ ಹಣ ನೀಡುವಂತೆ ಪತಿ ಕೇಳಿದಾಗ ಪತ್ನಿ ಹಣ ಖರ್ಚು ಮಾಡಿರುವ ವಿಚಾರವನ್ನು ತಿಳಿಸಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಜಗಳ ವಿಕೋಪಕ್ಕೆ ತಿರುಗಿ ಫಾರೂಕ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ನಾಜಿಯಾ ಪ್ರಜ್ಞೆ ತಪ್ಪಿದ್ದಾರೆ. ಹೀಗಾಗಿ ಪತ್ನಿಯನ್ನು ಕೂಡಲೇ ಫಾರೂಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ನಾಜಿಯಾ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಬಡ್ಡಿ ಸಮೇತ ವಸೂಲಿ ಮಾಡ್ತೀವಿ: ಈಶ್ವರಪ್ಪ

    ಈ ಸಂಬಂಧ ಮೃತಳ ಪೋಷಕರು ಫಾರೂಕ್ ವಿರುದ್ಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಆರೋಪಿ ಫಾರೂಕನ್ನು ಬಂಧಿಸಿದ್ದಾರೆ.

  • ಕಡಿಮೆ ಹಣಕ್ಕೆ ಆಟೋ ಬಾಡಿಗೆಗೆ ಹೋಗ್ತಾನೆ ಅಂತ ಸ್ನೇಹಿತನನ್ನೇ ಕೊಲೆಗೈದ

    ಕಡಿಮೆ ಹಣಕ್ಕೆ ಆಟೋ ಬಾಡಿಗೆಗೆ ಹೋಗ್ತಾನೆ ಅಂತ ಸ್ನೇಹಿತನನ್ನೇ ಕೊಲೆಗೈದ

    ಹಾಸನ: ತನಗಿಂತ ಕಡಿಮೆ ಹಣಕ್ಕೆ ಆಟೋ ಬಾಡಿಗೆಗೆ ಹೋಗುತ್ತಾನೆ ಎಂಬ ಒಂದೇ ಕಾರಣಕ್ಕೆ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದ ವ್ಯಕ್ತಿಯನ್ನು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಪೊಲೀಸರು ಬಂಧಿಸಿದ್ದಾರೆ.

    HASSAN MURDER

    ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಪ್ರಸನ್ನ (31) ಬಂಧಿತ ಆರೋಪಿ. ಎರಡು ದಿನದ ಹಿಂದೆ ಅರಕಲಗೂಡು ತಾಲೂಕಿನ ಮಲ್ಲಾಪುರ ಲಕ್ಕೂರು ಅರಣ್ಯ ಪ್ರದೇಶದ ಸ್ನೇಹಿತ ಜಗದೀಶ್ (42)ನನ್ನು ಹತ್ಯೆಗೈದಿದ್ದಾನೆ. ಜಗದೀಶ್ ಮತ್ತು ಪ್ರಸನ್ನ ಇಬ್ಬರೂ ಗೆಳೆಯರಾಗಿದ್ದು, ಆಪೆ ಆಟೋ ಇಟ್ಟುಕೊಂಡು ಬಾಡಿಗೆಗೆ ಹೋಗುತ್ತ ಜೀವನ ನಡೆಸುತ್ತಿದ್ದರು.  ಇದನ್ನೂ ಓದಿ:ಕುಖ್ಯಾತ ಮನೆಗಳ್ಳನ ಬಂಧನ- 150 ಗ್ರಾಂ ಚಿನ್ನಾಭರಣ ವಶ

    HASSAN MURDER

     

    ಇಬ್ಬರೂ ಪಿರಿಯಾಪಟ್ಟಣ-ರಾಮನಾಥಪುರ ಆಟೋ ಸ್ಟಾಂಡ್ ನಿಂದ ಬಾಡಿಗೆಗೆ ಹೋಗುತ್ತಿದ್ದರು. ಆದರೆ ಜಗದೀಶ್ ತನ್ನ ಗೆಳೆಯ ಪ್ರಸನ್ನನಿಗಿಂತ ಕಡಿಮೆ ಹಣಕ್ಕೆ ಆಟೋ ಬಾಡಿಗೆಗೆ ಹೋಗುತ್ತಿದ್ದ. ಇದರಿಂದ ಪ್ರಸನ್ನನಿಗೆ ಸರಿಯಾಗಿ ಆಟೋ ಬಾಡಿಗೆ ಸಿಗುತ್ತಿರಲಿಲ್ಲ. ಇದೇ ಕಾರಣಕ್ಕೆ ಜಗದೀಶ್ ಮೇಲೆ ಕೋಪಗೊಂಡಿದ್ದ ಪ್ರಸನ್ನ, ಗುರುವಾರ ರಾತ್ರಿ ರಾಮನಾಥಪುರಕ್ಕೆ ಆಟೋ ಬಾಡಿಗೆ ಇದೆ ಎಂದು ಜಗದೀಶ್‍ನನ್ನು ಕರೆದೊಯ್ದಿದ್ದ. ನಿರ್ಜನ ಪ್ರದೇಶದಲ್ಲಿ ಆಟೋ ನಿಲ್ಲಿಸಿ ಮೊದಲು ಜಗದೀಶ್ ಮೇಲೆ ಹಲ್ಲೆ ಮಾಡಿ ನಂತರ ತಲೆಯ ಹತ್ಯೆಗೈದು ಪ್ರಸನ್ನ ಸ್ಥಳದಿಂದ ಪರಾರಿಯಾಗಿದ್ದನು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ:ಕಾರಿಗೆ ಮೂತ್ರ ಮಾಡಿದ ನಾಯಿ- ಕಾರ್ ಮಾಲೀಕನಿಗೆ ಬಿತ್ತು ಗೂಸಾ

  • ಪ್ರಧಾನಿ ನಿವಾಸವನ್ನು ಬಾಡಿಗೆ ನೀಡಲು ಮುಂದಾದ  ಇಮ್ರಾನ್‍ಖಾನ್

    ಪ್ರಧಾನಿ ನಿವಾಸವನ್ನು ಬಾಡಿಗೆ ನೀಡಲು ಮುಂದಾದ ಇಮ್ರಾನ್‍ಖಾನ್

    ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ಇಮ್ರಾನ್‍ಖಾನ್ ಅಧಿಕೃತ ನಿವಾಸವನ್ನು ಬಾಡಿಗೆ ನೀಡಲು ಮುಂದಾಗುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ಇಮ್ರಾನ್ ಖಾನ್ ಅಧಿಕೃತ ನಿವಾಸವನ್ನು ಬಾಡಿಗೆ ನೀಡಲಿದ್ದಾರೆ. ಈ ಕುರಿತಾಗಿ ಖುದ್ದು ಇಮ್ರಾನ್ ಖಾನ್ ಅವರೇ ಹೀಗೊಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪಾಕಿಸ್ತಾನ ಸುದ್ದಿ ಮೂಲಗಳಿಂದ ತಿಳಿದುಬಂದಿದೆ. 2019ರ ಅಗಸ್ಟ್ ನಲ್ಲಿ ಇಮ್ರಾನ್ ಖಾನ್ ಪ್ರಧಾನಿ ಸರ್ಕಾರದ ಅಧಿಕೃತ ನಿವಾಸದಿಂದ ಸ್ವಂತ ಮನೆಗೆ ಶಿಫ್ಟ್ ಆಗಿದ್ದರು. ಬಳಿಕ ಈ ಪ್ರಧಾನಿ ನಿವಾಸವನ್ನು ವಿಶ್ವವಿದ್ಯಾಲಯವಾಗಿ ಪರಿವರ್ತಿಸತ್ತೇವೆ ಎಂದು ಪಾಕಿಸ್ತಾನ ಸರ್ಕಾರ ಹೇಳಿತ್ತು. ಆದರೀಗ ಪ್ರಧಾನಿ ನಿವಾಸ ಕಟ್ಟಡವನ್ನು ಬಾಡಿಗೆಗೆ ನೀಡಲಾಗುವುದು ಎಂದು ತಿಳಿಸಿದೆ.

    ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಫ್ಯಾಷನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಪ್ರಧಾನಿ ನಿವಾಸ ಬಾಡಿಗೆಗೆ ಸಿಗಲಿದೆ. ಸರ್ಕಾರದ ಯಾವುದೇ ನಿಯಮಗಳನ್ನು ಉಲ್ಲಂಘಿಸದೇ ಈ ಕಟ್ಟಡ ಬಳಸಿಕೊಳ್ಳಬಹುದಾಗಿದೆ ಎಂದು ಕಾಲ್ ಫೆಡೆರಲ್ ಕ್ಯಾಬಿನೆಟ್ ಆದೇಶ ಹೊರಡಿಸಿದೆ. ಇದನ್ನೂ ಓದಿ:  45 ಕೆಜಿ ತೂಕವಿದ್ದ 2ವರ್ಷದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

    ಯೂನಿವರ್ಸಿಟಿ ಮಾಡುತ್ತೇವೆ ಎಂದು ಹೇಳಿ ಇದೀಗ ಬಾಡಿಗೆಗೆ ನೀಡುತ್ತಿರುವುದ್ಯಾಕೆ ಎಂಬುದಕ್ಕೆ ಉತ್ತರ ಹಣಕಾಸಿನ ಕೊರತೆಯಾಗಿದೆ. ಈ ಹಿಂದೆ ಇಮ್ರಾನ್‍ಖಾನ್ ತಮ್ಮ ಸಚಿವಾಲಯದ ಕರೆಂಟ್ ಬಿಲ್ ಕಟ್ಟದೆ ಸುದ್ದಿಯಾಗಿದ್ದರು. ಇದೀಗ ನಿವಾಸವನ್ನು ಬಾಡಿಗೆ ನೀಡುವ ನಿರ್ಧಾರಕ್ಕೆ ಬರುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

  • 2 ತಿಂಗಳ ಅಡ್ವಾನ್ಸ್ ಅಷ್ಟೇ ಪಾವತಿಸಿ – ಮಾದರಿ ಬಾಡಿಗೆ ಕಾಯ್ದೆಯಲ್ಲಿ ಏನಿದೆ?

    2 ತಿಂಗಳ ಅಡ್ವಾನ್ಸ್ ಅಷ್ಟೇ ಪಾವತಿಸಿ – ಮಾದರಿ ಬಾಡಿಗೆ ಕಾಯ್ದೆಯಲ್ಲಿ ಏನಿದೆ?

    ನವದೆಹಲಿ: ಮನೆ ಮಾಲೀಕರು ಮತ್ತು ಬಾಡಿಗೆದಾರರಿಗೆ ಸಹಾಯವಾಗುವ ಹೊಸ ಕಾಯ್ದೆಗೆ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ‘ಮಾದರಿ ಬಾಡಿಗೆ ಕಾಯ್ದೆ’ಗೆ ಅನುಮೋದನೆ ನೀಡಿದೆ.

    ಪ್ರಸ್ತುತ ಈಗ ಬಾಡಿಗೆದಾರರಿಂದ 10 ತಿಂಗಳ ಮುಂಗಡ ಬಾಡಿಗೆಯನ್ನು ಪಡೆಯಲಾಗುತ್ತದೆ. ಆದರೆ ಹೊಸ ಕಾಯ್ದೆಯಲ್ಲಿ ಕೇವಲ 2 ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಪಡೆಯಲು ಮಾತ್ರ ಷರತ್ತನ್ನು ವಿಧಿಸಲಾಗಿದೆ. ಇದನ್ನೂ ಓದಿ: ಬಾಡಿಗೆ ಕಟ್ಟುವ ದರದಲ್ಲಿ ಇಎಂಐ ಕಟ್ಟಿ, ಸ್ವಂತ ಮನೆ ನಿಮ್ಮದಾಗಿಸಿಕೊಳ್ಳಿ

    ಹೊಸ ಕಾಯ್ದೆಯನ್ನು ನೇರವಾಗಿ ಕೇಂದ್ರ ಸರ್ಕಾರ ಜಾರಿ ಮಾಡುವುದಿಲ್ಲ. ಶೀಘ್ರವೇ ಈ ಕಾಯ್ದೆಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿ ಕೊಡಲಿದೆ. ರಾಜ್ಯಗಳಲ್ಲಿ ಪ್ರತ್ಯೇಕ ಕಾಯ್ದೆಗಳು ಇರುವ ಕಾರಣ ಹಾಲಿ ಬಾಡಿಗೆ ಕಾಯ್ದೆಗಳಿಗೆ ತಿದ್ದುಪಡಿ ತಂದು ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಮನೆಗಳನ್ನು ಬಾಡಿಗೆ ನೀಡುವ ವ್ಯವಸ್ಥೆಗೆ ಉದ್ಯಮ ಸ್ವರೂಪ ನೀಡಿ, ಈ ಉದ್ಯಮದಲ್ಲಿ ಪಾಲ್ಗೊಳ್ಳುವಂತೆ ಖಾಸಗಿ ವಲಯಕ್ಕೆ ಉತ್ತೇಜನ ನೀಡುವ ಉದ್ದೇಶವನ್ನು ಈ ಕಾಯ್ದೆ ಹೊಂದಿದೆ. ಇದರಿಂದ ವಸತಿ ಕ್ಷೇತ್ರ ಎದುರಿಸುತ್ತಿರುವ ಕೊರತೆಯನ್ನು ನೀಗಿಸಲು ಸಾಧ್ಯವಾಗಲಿದೆ ಎಂಬ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಭೂ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ವಿವಾದಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಾಯ್ದೆಯ ಕರಡನ್ನು ಸರ್ಕಾರ  2019 ರಲ್ಲಿ ಬಿಡುಗಡೆ ಮಾಡಿತ್ತು.

    ಕಾಯ್ದೆಯಲ್ಲಿ ಏನಿದೆ?
    ಮಾಲೀಕರು ಮತ್ತು ಬಾಡಿಗೆದಾರರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಬಾಡಿಗೆ ಪ್ರಾಧಿಕಾರ ರಚನೆ ಮಾಡಬೇಕು. ಮಾಲೀಕರು ಭದ್ರತಾ ಠೇವಣಿಯಾಗಿ ಬಾಡಿಗೆದಾರರಿಂದ ಕೇವಲ 2 ತಿಂಗಳ ಬಾಡಿಗೆಯನ್ನು ಮಾತ್ರ ಪಡೆಯಬೇಕು.

     

    ವಾಣಿಜ್ಯ ಕಟ್ಟಡಗಳಿಗೆ ಭದ್ರತಾ ಠೇವಣಿಯಾಗಿ 6 ತಿಂಗಳ ಹಣವನ್ನು ಮಾತ್ರ ಪಡೆಯಬೇಕು. ಬಾಡಿಗೆ ವಿಚಾರದಲ್ಲಿ ಸಮಸ್ಯೆಯಾದಲ್ಲಿ ಜಿಲ್ಲಾ ಬಾಡಿಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು.

    ಒಪ್ಪಂದ ಮುಗಿದ ಬಳಿಕವೂ ಮನೆಯನ್ನು ಖಾಲಿ ಮಾಡದೇ ಇದ್ದಲ್ಲಿ ಮಾಲೀಕ ಮುಂದಿನ 2 ತಿಂಗಳ ಅವಧಿಗೆ ಬಾಡಿಗೆಯನ್ನು ದ್ವಿಗುಣ ಮಾಡಬಹುದು. 2 ತಿಂಗಳ ಬಳಿಕವೂ ಮನೆ ಖಾಲಿ ಮಾಡದೇ ಇದ್ದರೆ ಬಾಡಿಗೆಯನ್ನು 4 ಪಟ್ಟು ಹೆಚ್ಚಿಸಬಹುದು.

    ಮಾಲೀಕ ಪೂರ್ವ ಸೂಚನೆ ನೀಡದೇ ಬಾಡಿಗೆದಾರನ ಮನೆಯನ್ನು ಪ್ರವೇಶಿಸುವಂತಿಲ್ಲ. 24 ಗಂಟೆಗಳ ಮೊದಲು ನೋಟಿಸ್ ನೀಡಿದರೆ ಮಾತ್ರ ಮಾಲೀಕ ಮನೆಯನ್ನು ಪ್ರವೇಶಿಸುವ ಹಕ್ಕನ್ನು ಹೊಂದಿರುತ್ತಾನೆ. ಕಟ್ಟಡಕ್ಕೆ ಹಾನಿಯಾಗಿದ್ದರೆ ರಿಪೇರಿಗೆ ಬಾಡಿಗೆದಾರನೇ ಹಣವನ್ನು ನೀಡಬೇಕು.

    ವಿವಾದದ ಸಂದರ್ಭದಲ್ಲಿ ಮಾಲೀಕರು ವಿದ್ಯುತ್ ಮತ್ತು ನೀರು ಸರಬರಾಜನ್ನು ಕಡಿತಗೊಳಿಸುವಂತಿಲ್ಲ. ಒಪ್ಪಂದದ ಅವಧಿ ಇರುವವರೆಗೆ ಬಾಡಿಗೆ ದರವನ್ನು ಇದ್ದಕ್ಕಿದ್ದಂತೆ ಹೆಚ್ಚಿಸಲು ಸಾಧ್ಯವಿಲ್ಲ. ಬಾಡಿಗೆ ಪರಿಷ್ಕರಿಸುವ 3 ತಿಂಗಳ ಮೊದಲು ಮಾಲೀಕ ನೋಟಿಸ್ ನೀಡಬೇಕಾಗುತ್ತದೆ.

    ಹೊಸ ಕಾಯ್ದೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ತಿಳಿಸಿ.

  • ತಂದೆಯ ಜೊತೆಗೆ ಜಗಳ- ಬಾಡಿಗೆದಾರರ ಮೇಲೆ ಮಗನ ದರ್ಪ

    ತಂದೆಯ ಜೊತೆಗೆ ಜಗಳ- ಬಾಡಿಗೆದಾರರ ಮೇಲೆ ಮಗನ ದರ್ಪ

    ಮಡಿಕೇರಿ: ಕೊರೊನಾ ಲಾಕ್‍ಡೌನ್ ನಿಂದ ಮನೆಯಿಂದ ಹೊರಗೆ ಓಡಾಡುವಂತೆ ಇಲ್ಲ. ಆದರೆ ಇಲ್ಲೊಬ್ಬ ಮನೆ ಮಾಲೀಕನ ಮಗ ಬಾಡಿಗೆದಾರರನ್ನು ಹೊರ ಹಾಕಲು ಪ್ರಯತ್ನಿಸಿ ಈಗ ಪೊಲೀಸರ ವಿಚಾರಣೆ ಎದುರಿಸುವಂತೆ ಆಗಿದೆ.

    ಮಡಿಕೇರಿ ನಗರದ ಮೈತ್ರಿ ಹಾಲ್ ಬಳಿ ಬಾಡಿಗೆ ಮನೆಯಲ್ಲಿದ್ದ ದಂಪತಿಗಳನ್ನು ಮನೆ ಮಾಲೀಕನ ಮಗ ಪ್ರದೀಪ್ ಬಾಡಿಗೆದಾರರಾದ ಮಧು ಮತ್ತು ಪ್ರಿಯಾ ದಂಪತಿಗಳನ್ನು ಹೊರ ಹಾಕಲು ಪ್ರಯತ್ನಿಸಿದ್ದಾನೆ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಮಧು ಪ್ರಿಯಾ ದಂಪತಿಗಳು ಈ ಮನೆಗೆ ಬಾಡಿಗೆಗೆ ಬಂದಿದ್ದರು.

    ಮನೆ ಬಾಡಿಗೆಯನ್ನು ಇವರು ಮನೆ ಮಾಲೀಕನಿಗೆ ಪ್ರತೀ ತಿಂಗಳು ಸರಿಯಾಗಿ ನೀಡುತ್ತಿದ್ದರು. ಆದರೆ, ಮಾಲೀಕನ ಮಗ ಪ್ರದೀಪ್ ಬಾಡಿಗೆಯನ್ನು ನನ್ನ ತಂದೆಗೆ ಹಾಕದೆ ನನಗೆ ಕೊಡಬೇಕು. ಇಲ್ಲದಿದ್ದರೆ ಮನೆ ಖಾಲಿ ಮಾಡಿ ಎಂದು ಬಾಡಿಗೆದಾರರಿಗೆ ಮನಬಂದಂತೆ ಬೈದು ಜಗಳವಾಡುತ್ತಿದ್ದನಂತೆ. ಇದರಿಂದ ಬೇಸತ್ತ ಪ್ರಿಯಾ ಅವರು ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರದೀಪ್‍ನನ್ನು ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

  • ಬಾಡಿಗೆ ಮನೆಯ ಲೀಸ್ ಹಣದ ವಿಚಾರ ಜಗಳ – ಇಬ್ಬರ ದುರ್ಮರಣ

    ಬಾಡಿಗೆ ಮನೆಯ ಲೀಸ್ ಹಣದ ವಿಚಾರ ಜಗಳ – ಇಬ್ಬರ ದುರ್ಮರಣ

    ಚಿಕ್ಕಬಳ್ಳಾಪುರ: ಬಾಡಿಗೆ ಮನೆಯ ಲೀಸ್ ಹಣದ ವಿಚಾರದಲ್ಲಿ ಅಣ್ಣ-ತಮ್ಮಂದಿರು ಮಾರಕಾಸ್ತ್ರಗಳಿಂದ ಬಡಿದಾಡಿಕೊಂಡಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

    ಶ್ರೀರಾಮ ನಗರದಲ್ಲಿ ತಡರಾತ್ರಿ ಘಟನೆ ನಡೆದಿದ್ದು, ಅಂಜಿನಪ್ಪ(45) ಹಾಗೂ ಈತನ ಮಗ ವಿಷ್ಣು(18) ಸಾವನ್ನಪ್ಪಿದ್ದಾನೆ. ಅಂದಹಾಗೆ ಸೀನಪ್ಪ ಹಾಗೂ ಸರೋಜಮ್ಮ ಎಂಬವರಿಗೆ ಅಶ್ವಥ್ ನಾರಾಯಣ್ ಎಂಬ ಹಿರಿ ಮಗ ಹಾಗೂ ಅಂಜಿನಪ್ಪ ಎಂಬ ಕಿರಿ ಮಗ ಸೇರಿ 6 ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು.

    ಹಿರಿ ಮಗ ಅಶ್ವಥ್ ನಾರಾಯಣ್ ಶ್ರೀರಾಮನಗರದಲ್ಲಿ ವಾಸವಾಗಿದ್ರೆ, ತಮ್ಮ ಅಂಜಿನಪ್ಪ ಬೆಂಗಳೂರಿನಲ್ಲಿ ವಾಸವಾಗಿದ್ದ. ಇತ್ತ ಇವರ ತಂದೆ-ತಾಯಿ ಚಿಂತಾಮಣಿ ನಗರದಲ್ಲೇ ವಾಸವಾಗಿದ್ರು. ತಂದೆ ಸೀನಪ್ಪ ಸಂಪಾದನೆ ಮಾಡಿ ಕಟ್ಟಿಸಿದ್ದ ಬಾಡಿಗೆ ಮನೆಗಳಿಂದ ಬರುತ್ತಿದ್ದ ಹಣವನ್ನ ಅಶ್ವಥ್ ನಾರಾಯಣ್ ಮಾತ್ರ ಪಡೆದುಕೊಳ್ಳುತ್ತಿದ್ದನಂತೆ. ಬಾಡಿಗೆ ಹಣ ಪಡೆಯುತ್ತಿದ್ದ ಅಶ್ವಥ್‍ನಾರಾಯಣ್ ತಂದೆ-ತಾಯಿಯನ್ನ ಸಹ ಚೆನ್ನಾಗಿ ನೋಡಿ ಕೊಳ್ಳುತ್ತಿರಲಿಲ್ಲವಂತೆ. ಈ ವಿಚಾರವಾಗಿ ನಿನ್ನೆ ಅಣ್ಣ ಅಶ್ವಥ್ ನಾರಾಯಣ್ ಹಾಗೂ ತಮ್ಮ ಅಂಜಿನಪ್ಪ ಪೊಲೀಸ್ ಠಾಣೆಗೆ ಹೋಗಿ ಬಂದಿದ್ದಾರೆ.

    ತಡರಾತ್ರಿ ಇದೇ ವಿಚಾರವಾಗಿ ಅಶ್ವಥ್ ನಾರಾಯಣ್ ಹಾಗೂ ವಿಷ್ಣು, ಅಂಜಿನಪ್ಪ ಜೊತೆ ಮಾತನಾಡೋಕೆ ಅಂತ ತಾಯಿ ಸರೋಜಮ್ಮ ಮನೆ ಬಳಿ ತೆರಳಿದ್ರು. ಈ ವೇಳೆ ಮಾತಿಗೆ ಮಾತು ಬೆಳೆದು ಮಚ್ಚು, ಚಾಕುವಿನಿಂದ ಬಡಿದಾಡಿಕೊಂಡಿದ್ದಾರೆ. ಪರಿಣಾಮ ಅಂಜಿನಪ್ಪ ಹಾಗೂ ವಿಷ್ಣು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಅಶ್ವಥ್ ನಾರಾಯಣ್ ಸಹ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಅಂಜಿನಪ್ಪಗೆ ಮೂರು ಜನ ಗಂಡು ಮಕ್ಕಳಿದ್ರು. ಅಶ್ವಥ್ ನಾರಾಯಣ್ ಗೆ ಮೂರು ಜನ ಹೆಣ್ಣು ಮಕ್ಕಳು. ಹೀಗಾಗಿ ಅಂಜಿನಪ್ಪನ ಮಗ ವಿಷ್ಣು ಎಂಬಾತನನ್ನ ಹುಟ್ಟಿದಾಗಲೇ ಅಶ್ವಥ್ ನಾರಾಯಣ್ ದತ್ತು ಪಡೆದುಕೊಂಡಿದ್ರು.

    ಸದ್ಯ ಚಿಂತಾಮಣಿ ನಗರ ಠಾಣೆಯಲ್ಲಿ ಪರ ವಿರೋಧ ಪ್ರಕರಣಗಳು ದಾಖಲಾಗಿವೆ.