Tag: Renewable Energy

  • ನವೀಕರಿಸಬಹುದಾದ ಇಂಧನ ವಲಯದಲ್ಲಿ ಆಸಕ್ತಿ ಒಂದು ಆಯ್ಕೆಯಲ್ಲ, ಅನಿವಾರ್ಯ – ಜಗದೀಪ್ ಧನಕರ್

    ನವೀಕರಿಸಬಹುದಾದ ಇಂಧನ ವಲಯದಲ್ಲಿ ಆಸಕ್ತಿ ಒಂದು ಆಯ್ಕೆಯಲ್ಲ, ಅನಿವಾರ್ಯ – ಜಗದೀಪ್ ಧನಕರ್

    ಗಾಂಧಿನಗರ: ಹವಾಮಾನ ವೈಪರೀತ್ಯದ ಸಮಸ್ಯೆ ಭೂಮಿಯ ಅಸ್ತಿತ್ವಕ್ಕೆ ಧಕ್ಕೆ ತಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಹೀಗಾಗೀ ನವೀಕರಿಸಬಹುದಾದ ಇಂಧನದಲ್ಲಿ (Renewable Energy) ಆಸಕ್ತಿ ತೋರಿಸುವುದು ಒಂದು ಆಯ್ಕೆಯಲ್ಲ ಅದು ಪ್ರಪಂಚದ ಅನಿವಾರ್ಯವಾಗಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagadeep Dhankar) ಹೇಳಿದರು.

    ನಾಲ್ಕನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಭೂಮಿಯನ್ನು ಉಳಿಸಲು, ನವೀಕರಿಸಬಹುದಾದ ಇಂಧನದಲ್ಲಿ ಹೂಡಿಕೆ ಮಾಡದೆ ನಮಗೆ ಬೇರೆ ದಾರಿಯಿಲ್ಲ ಮತ್ತು ಹವಾಮಾನ ಬದಲಾವಣೆಯ ಬೆದರಿಕೆಯನ್ನು ಎದುರಿಸಲು ನಾವು ಹಗಲಿರುಳು ಶ್ರಮಿಸಬೇಕಾಗಿದೆ ಎಂದರು. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್‌ಗೆ ಡಿಸಿಎಂ ಪಟ್ಟ – ಶೀಘ್ರವೇ ಘೋಷಣೆ ಸಾಧ್ಯತೆ

    ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ವಿಶ್ವಕ್ಕೆ ಮುಂಚೂಣಿಯಲ್ಲಿದೆ, ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಎದುರಿಸಲು, ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿರ್ವಹಿಸಬೇಕು. ಭಾರತದ ಉಪಕ್ರಮದ ಮೇಲೆ ಸೌರ ಒಕ್ಕೂಟವನ್ನು ರಚಿಸಲಾಯಿತು. ಜಗತ್ತನ್ನು ಉಳಿಸಲು ನಾವು ಬದ್ಧರಾಗಿದ್ದೇವೆ. ಇದಕ್ಕಾಗಿ ಜಗತ್ತಿನ ಎಲ್ಲಾ ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿರ್ವಹಿಸಬೇಕು. ನಾವು ಶಕ್ತಿಯನ್ನು ಬಳಸುವಾಗ ನಮ್ಮ ಅಗತ್ಯಕ್ಕೆ ಮಾತ್ರ ಬಳಸಬೇಕು. ಭಾರತದಲ್ಲಿ ಆಗುತ್ತಿರುವ ಅಭಿವೃದ್ಧಿಯು ಇಡೀ ಜಗತ್ತಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ ಮಸೂದೆಗೆ ಕ್ಯಾಬಿನೆಟ್‌ ಒಪ್ಪಿಗೆ

    ಈ ಸಂದರ್ಭದಲ್ಲಿ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಮಾತನಾಡಿ, ಇಂದು ಇಡೀ ವಿಶ್ವವೇ ನವೀಕರಿಸಬಹುದಾದ ಇಂಧನಕ್ಕಾಗಿ ಭಾರತದತ್ತ ನೋಡುತ್ತಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಮುಂದಿಟ್ಟಿರುವ ದೂರದೃಷ್ಟಿ. ಗುಜರಾತಿನ ಮುಖ್ಯಮಂತ್ರಿಯಾಗಿ ಮತ್ತು ದೇಶದ ಪ್ರಧಾನಿಯಾಗಿ ಅವರು ಇದರಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ರಾಜ್ಯಗಳು 2030 ರ ವೇಳೆಗೆ 540 ಜಿಡಬ್ಲ್ಯೂ ನವೀಕರಿಸಬಹುದಾದ ಶಕ್ತಿಯ ಗುರಿಯನ್ನು ಹೊಂದಿವೆ. 2030 ರ ವೇಳೆಗೆ ಹಸಿರು ಶಕ್ತಿ ಪರಿವರ್ತನೆಗಾಗಿ ಹಣಕಾಸು ಸಂಸ್ಥೆಗಳು 386 ಶತಕೋಟಿ ಡಾಲರ್ ವಾಗ್ದಾನ ಮಾಡಿವೆ. ಇದರಿಂದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 82 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು. ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನ – ಯುವಕ ಪೊಲೀಸ್ ವಶಕ್ಕೆ

  • 2030 ರ ವೇಳೆಗೆ 32.5 ಲಕ್ಷ ಕೋಟಿ ರೂ. ಮೌಲ್ಯದ ಸಾಲ ನೀಡಲು ಬ್ಯಾಂಕ್‌ಗಳ ಬದ್ಧ

    2030 ರ ವೇಳೆಗೆ 32.5 ಲಕ್ಷ ಕೋಟಿ ರೂ. ಮೌಲ್ಯದ ಸಾಲ ನೀಡಲು ಬ್ಯಾಂಕ್‌ಗಳ ಬದ್ಧ

    -ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರಿ ಹೂಡಿಕೆ ಸುಳಿವು

    ಗಾಂಧಿನಗರ: ನವೀಕರಿಸಬಹುದಾದ ಇಂಧನ (Renewable Energy) ವಲಯದಲ್ಲಿ ಭಾರೀ ಹೂಡಿಕೆ ಸುಳಿವು ಸಿಕ್ಕಿದ್ದು, 2030ರ ವೇಳೆಗೆ 32.5 ಲಕ್ಷ ಕೋಟಿ ರೂ. ಮೌಲ್ಯದ ಸಾಲಗಳನ್ನು ನೀಡಲು ಬ್ಯಾಂಕ್‌ಗಳ ಬದ್ಧವಾಗಿದೆ ಎಂದು ಸಚಿವಾಲಯ ನೀಡಿದ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. 4ನೇ ಜಾಗತಿಕ ಮಟ್ಟದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಎಕ್ಸ್ ಪೋ ಆಯೋಜಿಸಿದ್ದು ಇಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲಾಗುತ್ತಿದೆ.

    ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಒದಗಿಸಿದ ಡೇಟಾ ಪ್ರಕಾರ ಆರ್‌ಇ ಇನ್ವೆಸ್ಟ್ 2024 ರ ಸಮಾವೇಶದಲ್ಲಿ 6 ಟ್ರಿಲಿಯನ್ ರೂ. ಮೌಲ್ಯದ ಸಾಲ ಒದಗಿಸುವ ಪ್ರಸ್ತಾಪಗಳು ಬಂದಿದೆ. ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಈಆರ್‌ಇಡಿಎ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಲಾ 5 ಲಕ್ಷ ಕೋಟಿ ರೂ. ಮೌಲ್ಯದ ಸಾಲ ನೀಡುವ ವಾಗ್ದಾನ ಮಾಡಿದೆ. ಇದನ್ನೂ ಓದಿ: ದರ್ಶನ್‌ಗೆ ರಾಜಾತಿಥ್ಯ – ಕಲಬುರಗಿ ಜೈಲಿಗೆ ವಿಲ್ಸನ್‌ ಗಾರ್ಡನ್‌ ನಾಗ ಶಿಫ್ಟ್‌

    ಪವರ್ ಫೈನಾನ್ಸ್ ಕಾರ್ಪೊರೇಷನ್ (PFC) ಮತ್ತು ನ್ಯಾಷನಲ್ ಬ್ಯಾಂಕ್ ಫಾರ್ ಫೈನಾನ್ಸಿಂಗ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಡೆವಲಪ್‌ಮೆಂಟ್ (NBFID) ಕ್ರಮವಾಗಿ 3 ಟ್ರಿಲಿಯನ್ ರೂ. ಮತ್ತು 1.86 ಟ್ರಿಲಿಯನ್ ರೂ. ಸಾಲ ನೀಡುವುದಾಗಿ ಭರವಸೆ ನೀಡಿವೆ. ಈ ಬಗ್ಗೆ ಮಾತನಾಡಿರುವ ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ, ಈ ದಶಕದ ಅಂತ್ಯದ ವೇಳೆಗೆ ನವೀಕರಿಸಬಹುದಾದ ಇಂಧನ ಕಂಪನಿಗಳು ಸುಮಾರು 32.5 ಟ್ರಿಲಿಯನ್ ರೂ. ಹೂಡಿಕೆ ಮಾಡಲು ಬದ್ಧವಾಗಿವೆ. ಭಾರತವು ಐದನೇ ದೊಡ್ಡದು ಮಾತ್ರವಲ್ಲದೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಬೆಳವಣಿಗೆಯು ಶಕ್ತಿಯ ಅಭೂತಪೂರ್ವ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಈ ಬೇಡಿಕೆಯನ್ನು ಸುಸ್ಥಿರವಾಗಿ ಪೂರೈಸಲು ನಾವು ಬದ್ಧರಾಗಿದ್ದೇವೆ ಎಂದರು. 2030ರ ವೇಳೆಗೆ ಸುಮಾರು 570 ಜಿಡಬ್ಯೂ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದುವ ಗುರಿಯನ್ನು ಸರ್ಕಾರ ಹೊಂದಿದೆ. ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಕೇಸ್‌ – ಡಿಕೆಶಿ, ಸಿಬಿಐಗೆ ಸುಪ್ರೀಂ ನೋಟಿಸ್

    ಈ ನಡುವೆ ನವೀಕರಿಸಬಹುದಾದ ಇಂಧನ ಸಚಿವಾಲಯದ 100 ದಿನಗಳ ಸಾಧನೆ ಬಿಡುಗಡೆ ಮಾಡಿದೆ. 4.5 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದಬೇಕೆಂಬ ಜೂನ್, ಜುಲೈ ತಿಂಗಳ ಗುರಿಗೆ ಪೂರಕವಾಗಿ 6 ಗಿ.ವ್ಯಾ. ಸ್ಥಾಪಿತ ಇಂಧನ ಸಾಮರ್ಥ್ಯ ಹೊಂದಲಾಗಿದೆ. ಕಚ್ಚಾ ಅಲ್ಲದ ಇಂಧನಗಳ ಸ್ಥಾಪಿತ ಸಾಮರ್ಥ್ಯ 207.76 ಗಿ.ವ್ಯಾಟ್ ಗೆ ತಲುಪಿದೆ. ಎರಡು ಸೋಲಾರ್ ಪಾರ್ಕ್ಗಳು ಪೂರ್ಣಗೊಂಡಿವೆ. ಇದನ್ನೂ ಓದಿ: ಯುಪಿಯಲ್ಲಿ ಪಟಾಕಿ ಕಾರ್ಖಾನೆ ಸ್ಫೋಟ – ಇಬ್ಬರು ಮಕ್ಕಳು ಸೇರಿ ಐವರು ಸಾವು, ಹಲವರಿಗೆ ಗಾಯ

    ಪಿಎಂ ಕುಸುಮ್ ಯೋಜನೆ ಅಡಿಯಲ್ಲಿ 1 ಲಕ್ಷ ಸೌರ ಪಂಪ್‌ಗಳನ್ನು ಸ್ಥಾಪಿಸಲಾಗಿದೆ. ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯಡಿಯಲ್ಲಿ, 3.56 ಲಕ್ಷ ರೂಫ್‌ಟಾಪ್ ಸೋಲಾರ್ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ. ಸಂಚಿತ 13.8 ಗಿಗಾ ವ್ಯಾಟ್ ಸೋಲಾರ್ ಮಾಡ್ಯೂಲ್ ಉತ್ಪಾದನೆ ಪ್ರಾರಂಭವಾಗಿದೆ. ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಎರಡನೇ ಹಂತದ ಎಲೆಕ್ಟ್ರೋಲೈಸರ್ ತಯಾರಿಕೆಗೆ 11 ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ.

    ಕಡಲಾಚೆಯ ಪವನಶಕ್ತಿ ಯೋಜನೆಗೆ ಜೂನ್ 19ರಂದು ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇಂಡಿಯನ್ ರಿನಿವೇಬಲ್ ಎನರ್ಜಿ ಡೆವಲಪ್ಮೆಂಟ್ ಏಜೆನ್ಸಿಯು ಐಆರ್‌ಇಡಿಎ ಗ್ಲೋಬಲ್ ಗ್ರೀನ್ ಎನರ್ಜಿ ಫೈನಾನ್ಸ್- ಐಎಫ್‌ಎಸ್‌ಸಿ ಲಿಮಿಟೆಡ್ ಎಂಬ ಅಂಗಸಂಸ್ಥೆಯನ್ನು ಆರಂಭಿಸಿದೆ ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಮಾಗಡಿಯಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ – ಒಂದೇ ಕುಟುಂಬದ ಐವರು ದುರ್ಮರಣ

  • 2030 ರ ವೇಳೆಗೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿ: ಮೋದಿ

    2030 ರ ವೇಳೆಗೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿ: ಮೋದಿ

    – ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆಯಲ್ಲಿ ವಾಗ್ದಾನ

    ಅಹಮಾದಾಬಾದ್‌:  200 ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನ ಉತ್ಪಾದನೆ ಮಾಡುವ ಗುರಿಯನ್ನು ನಾವು ತಲುಪಿದ್ದೇವೆ. 2030 ರ ವೇಳೆಗೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿಯನ್ನು ಹಾಕಿಕೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ನವೀಕರಿಸಬಹುದಾದ ಇಂಧನ ಇಲಾಖೆಯಿಂದ ಆಯೋಜಿಸಿರುವ 4ನೇ ಜಾಗತಿಕ ಮಟ್ಟದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಎಕ್ಸ್ ಪೋ‌ಗೆ (4th Global Renewable Energy Investor’s Meet and Expo) ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದರು.

    ಗುಜರಾತ್‌ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಎಕ್ಸ್‌ಪೋ ನಡೆಯುತ್ತಿದ್ದು ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prhlad Joshi) ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.

    200 ಅಧಿಕ ವಿದೇಶಿ ಪ್ರತಿನಿಧಿಗಳು, ವಿವಿಧ ಕಂಪನಿಗಳು ಹಾಗೂ 10,000 ಸಾರ್ವಜನಿಕರು ಇದರಲ್ಲಿ ಭಾಗಿಯಾಗಿದ್ದರು. ಮೂರು ದಿನಗಳಲ್ಲಿ 40 ಸೆಷನ್ ಗಳು ನಡೆಯುತ್ತಿದ್ದು ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದಲ್ಲಿರುವ ಅವಕಾಶಗಳುತ್ತು ಹೂಡಿಕೆ ಬಗ್ಗೆ ಸುಧೀರ್ಘ ಚರ್ಚೆ ನಡೆಯಲಿದೆ.

    ಕಾರ್ಯಕ್ರಮ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಮುಂದಿನ ಮೂರು ದಿನ ಇಂಧನದ ಭವಿಷ್ಯ ಮತ್ತು ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ, ಈ ವಲಯದ ತಜ್ಞರಿದ್ದಾರೆ ಇದರಿಂದ ನಮಗೆ ಮಾರ್ಗದರ್ಶನ ಸಿಗಲಿದೆ ಒಬ್ಬರಿಂದ ಮತ್ತೊಬ್ಬರು ಈ ಎಕ್ಸ್‌ಪೋದಿಂದ ಹೊಸತನ್ನು ಕಲಿಯಲಿದ್ದೇವೆ ಎಂದರು.

    ಭಾರತದ (India) ಜನರು ಐವತ್ತು ವರ್ಷಗಳ ನಂತರ ಒಂದೇ ಪಕ್ಷಕ್ಕೆ ಮೂರನೇ ಬಾರಿಗೆ ಸತತವಾಗಿ ಅಧಿಕಾರ ನೀಡಿದ್ದಾರೆ. 140 ಜನರಿಗೆ, ಭಾರತದ ಯುವಕರಿಗೆ ಭರವಸೆ ಇದೆ ಅವರ ಭರವಸೆಗಳನ್ನು ನಾವು ಈಡೇರಿಸಬೇಕಿದೆ. ದೇಶದ ಬಡವರು, ದಲಿತರು, ಹಿಂದೂಳಿದ, ವಂಚಿತರಿಗೆ ಆರಾಮದಾಯಕ ಜೀವನದ ಭರವಸೆ ನೀಡಬೇಕು. ವಿಶ್ವದ ಮೂರನೇ ಬಲಿಷ್ಠ ಆರ್ಥಿಕತೆಯ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನು ಮಾಡಬೇಕಿದೆ ಇದರ ಟ್ರೇಲರ್ ನಮ್ಮ ಮೂರನೇ ಅವಧಿಯ ಮೊದಲ ನೂರು ದಿನದಲ್ಲಿ ತೋರುತ್ತದೆ ನಮ್ಮ ಆದ್ಯತೆ ಮತ್ತು ನಮ್ಮ ವೇಗ ಕಾಣ ಸಿಗಲಿದೆ.  ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಕರ್ನಾಟಕಕ್ಕೆ ನಾಲ್ಕು ಪ್ರಶಸ್ತಿ

    ಪ್ರತಿಯೊಂದು ಸೆಕ್ಟರ್ ಅನ್ನು ಗಮನ ಹರಿಸಿ, ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ, 7 ಕೋಟಿ ಮನೆ ನಿರ್ಮಾಣ ಮಾಡುತ್ತಿದ್ದೇವೆ, ಹಿಂದಿನ ಎರಡು ಅವಧಿಯಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕು ಕೋಟಿ ಮನೆ ನಿರ್ಮಾಣ ಮಾಡಿದ್ದೇವೆ. ಕಳೆದ ನೂರು ದಿನಗಳಲ್ಲಿ 15 ವಂದೇ ಭಾರತ್ ಟ್ರೈನ್ ಚಾಲನೆ ನೀಡಲಾಗಿದೆ. 2025 ಒಳಗೆ ಪೆಟ್ರೋಲ್ ಒಳಗೆ 20% ಎಥಿನಾಲ್ ಬ್ಲೆಡಿಂಗ್ ಮಾಡಲಿದ್ದೇವೆ

    ಭಾರತದಲ್ಲಿ ನವೀಕರಿಸಬಹುದಾದ ಇಂಧನಕ್ಕೆ ಬೇಡಿಕೆ ಹೆಚ್ಚುತ್ತಿದೆ, ಅದಕ್ಕಾಗಿ ನಾವು ಹೊಸ ಯೋಜನೆಗಳನ್ನು ಆರಂಭಿಸುತ್ತಿದ್ದೇವೆ, ಹೀಗಾಗಿ ಭಾರತದಲ್ಲಿ ಹೂಡಿಕೆಗೆ ಅವಕಾಶಗಳಿದೆ, ಈ ವಲಯದಲ್ಲಿ ಭಾರತಕ್ಕಿಂತ ಉತ್ತಮ ಸ್ಥಳ ಮತ್ತೊಂದಿಲ್ಲ ಎಂದರು. ಪ್ರಹ್ಲಾದ್ ಜೋಶಿ ಕಳೆದ ಬಾರಿ ಕಲ್ಲಿದ್ದಲು ಸಚಿವರಾಗಿದ್ದರು, ಈಗ ಅವರು ನವೀಕರಿಸಬಹುದಾದ ಇಂಧನ ಸಚಿವರಾಗಿದ್ದಾರೆ ಅವರು ಈಗ ಅಪ್ಡೇಟ್ ಆಗಿದ್ದಾರೆ ಎಂದು ಭಾಷಣದಲ್ಲಿ ಪ್ರಹ್ಲಾದ್ ಜೋಶಿ ಉಲ್ಲೇಖಿಸಿ ಮೋದಿ ಹಾಸ್ಯ ಚಟಾಕಿ ಹಾರಿಸಿದರು‌.


    ಭಾರತದಲ್ಲಿ ಕಲ್ಲಿದ್ದಲು ಗ್ಯಾಸ್ ನಿಕ್ಷೇಪ ಹೆಚ್ಚಿನ ಪ್ರಮಾಣ ಇಲ್ಲ. ಹೀಗಾಗಿ ಸೋಲಾರ್ ಮತ್ತು ನ್ಯೂಕ್ಲಿಯರ್ ಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. 2030 ರ ವೇಳೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿ ಹೊಂದಿದೆ. ಸೂರ್ಯಘರ್ ಯೋಜನೆ ಅಧ್ಯಯನ ಮಾಡಬೇಕು, ಮನೆ ಛಾವಣಿ ಮೇಲೆ ಸೋಲಾರ್ ಅಳವಡಿಸಲು ಸಬ್ಸಿಡಿ ನೀಡುವುದಲ್ಲದೇ ಸರ್ಕಾರ ಸಹಾಯ ಮಾಡುತ್ತಿದೆ, 1.30 ಕೋಟಿ ಜನರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. 3.5 ಲಕ್ಷ ಮನೆಗಳಲ್ಲಿ ಸೋಲಾರ್ ಅಳವಡಿಕೆಯಾಗಿದೆ. ಈಗ ಜನರು ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ ಇದರಿಂದ ವಿದ್ಯುತ್ ಉಳಿತಾಯದ ಜೊತೆಗೆ ಹಣ ಮದ ಸಂಪಾದನೆಯಾಗಲಿದೆ ಎಂದರು.

    ಇಲ್ಲಿ ವಿದ್ಯುತ್ ಉತ್ಪಾದನೆ ಜೊತೆಗೆ ಉದ್ಯೋಗ ಸೃಷ್ಟಿಯಾಗಲಿದೆ ಮತ್ತು ಪ್ರಕೃತಿಯ ರಕ್ಷಣೆಯೂಯಾಗಲಿದೆ. ಮೂಡೇರಾ ದೇಶದ ಮೊದಲ ಗ್ರಾಮವಾಗಿದೆ, ಇಲ್ಲ ಎಲ್ಲ ಮನೆಗಳಿಗೆ ಸೋಲಾರ್ ಅಳವಡಿಸಿದೆ ಸೋಲಾರ್ ಮೂಲಕ ಈ ಹಳ್ಳಿ ವಿದ್ಯುತ್ ನಲ್ಲಿ ಸ್ವಾವಲಂಬಿಯಾಗಿದೆ. ಅಯೋಧ್ಯೆಯನ್ನು ಮಾಡೆಲ್‌ ಸೋಲಾರ್ ಸಿಟಿ ಮಾಡುವ ಚಿಂತನೆ ಇದೆ. ಈಗಾಗಲೇ ಈ ಕಾರ್ಯ ಶುರುವಾಗಿದೆ. ಬೀದಿ ದೀಪ, ಬೋರ್ಡ್, ಎಟಿಎಂ ಸೇರಿ ಹಲವು ಕಡೆ ಸೋಲಾರ್ ಬಳಸಲಾಗುತ್ತಿದೆ. ಭಾರತದಲ್ಲಿ 17 ಸೋಲಾರ್ ಸಿಟಿ ನಿರ್ಮಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ, ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನವೀಕರಿಸಬಹುದಾದ ಇಂಧನ ಶಕ್ತಿ ಹೆಚ್ಚಿದೆ, ಭಾರತದ ಸೋಲಾರ್ ಶಕ್ತಿ 33% ಹೆಚ್ಚಾಗಿದೆ. ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯಲ್ಲಿ ಸಾಕಷ್ಟು ಜನರು ಇಂದು ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ, 32.45 ಲಕ್ಷ ಕೋಟಿ 2030 ರೊಳಗೆ ಹೂಡಿಕೆ ಮಾಡಲು ಹೂಡಿಕೆದಾರರು ಮುಂದೆ ಬಂದಿದ್ದಾರೆ ಎಂದರು.

    ಸಿಎಂ ಭೂಪೇಂದ್ರ ಪಟೇಲ್ ಮಾತಾನಾಡಿ, ಪ್ರಧಾನಿ ನರೇಂದ್ರ ಮೋದಿ ಸಿಎಂಯಾಗಿದ್ದ ವೇಳೆ ಗುಜರಾತ್ ನಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಆರಂಭಿಸಿದರು. ಹವಮಾನ ಬದಲಾವಣೆ ಬಗ್ಗೆ ಚರ್ಚೆ ನಡೆಯುವ ಹೊತ್ತಲ್ಲಿ ಅವರು ಅದಕ್ಕಾಗಿ ಪ್ರತ್ಯೇಕ ಇಲಾಖೆ ತೆರೆದರು‌ ಗುಜರಾತ್ ನಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದರು. ವಿಂಡ್ ಎನರ್ಜಿ ಯಲ್ಲಿ ಗುಜರಾತ್ ಎರಡನೇ ಸ್ಥಾನದಲ್ಲಿದೆ. ಗುಜರಾತ್ ಅನ್ನು ಗ್ರೀನ್ ಎನರ್ಜಿ ಹಬ್ ಮಾಡುವ ಗುರಿ ಹೊಂದಿದೆ, ಅದಕ್ಕಾಗಿ ಸಾಕಷ್ಟು ಸ್ಥಳ ಪರಿಶೀಲನೆ ಮಾಡಿದೆ ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಕನಸು ಸಾಕಾರಗೊಳಿಸಲು ಗುಜರಾತ್ ತನ್ನದೇಯಾದ ಯೋಗದಾನ ಮಾಡಲಿದೆ, ನವೀಕರಿಸಬಹುದಾದ ಇಂಧನದ ಶಕ್ತಿ ಪ್ರಯೋಜನ ಸಾಮಾನ್ಯ ಜನರು ಪಡೆಯಬೇಕು ಎಂಬುದು ಮೋದಿ ಅವರು ಚಿಂತನೆ. ಸೂರ್ಯಘರ್ ಯೋಜನೆ ಮೂಲಕ ಅದನ್ನು ಸಾಕಾರಗೊಳಿಸಲಾಗುತ್ತಿದೆ. ಸೋಲಾರ್, ಸೆಮಿಕಂಡಕ್ಟರ್, ನಾಗರಿಕ ವಿಮಾನಯಾನ, ಗ್ರೀನ್ ಎನರ್ಜಿ ಹೀಗೆ ಹಲವು ವಲಯಗಳಲ್ಲಿ ಸಂಬಂಧಿಸಿದಂತೆ ಎಕ್ಸ್‌ಪೊ ನಡೆಸಲಾಗುತ್ತಿದೆ.ವಿಶ್ವದಲ್ಲಿ ಸೋಲಾರ್ ಬಗ್ಗೆ ಚರ್ಚೆ ಇರಲಿಲ್ಲ, ಆದರೆ ಗುಜರಾತ್ ನಲ್ಲಿ ಸೋಲಾರ್ ಅಳವಡಿಕೆ ಆರಂಭವಾಗಿತ್ತು, ಹವಾಮಾನ ಬದಲಾವಣೆಗೆ ಮೊದಲು ಸಚಿವಾಲಯ ಶುರು ಮಾಡಿದ್ದು ಗುಜರಾತ್ ನಲ್ಲಿ ಮಹಾತ್ಮ ಗಾಂಧಿ ಅವರ ಕನಸು ನನಸು ಮಾಡಬೇಕಿದೆ ಗ್ರೀನ್ ಎನರ್ಜಿ ಇಂದಿನ ಭಾರತದ ಅಗತ್ಯವಾಗಿದೆ ಎಂದರು.

  • ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದಿಸುತ್ತಿದೆ ಭಾರತ – ಶಕ್ತಿ ಪರಿವರ್ತನಾ ಶೃಂಗಸಭೆಯಲ್ಲಿ ಜೋಶಿ ಶ್ಲಾಘನೆ

    ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದಿಸುತ್ತಿದೆ ಭಾರತ – ಶಕ್ತಿ ಪರಿವರ್ತನಾ ಶೃಂಗಸಭೆಯಲ್ಲಿ ಜೋಶಿ ಶ್ಲಾಘನೆ

    – ಸೌರ ವಿದ್ಯುತ್ ಸ್ಥಾವರಗಳಿಗೆ ಶೇ.76ರಷ್ಟು ಸುಂಕ ಇಳಿಸಿ ಉತ್ತೇಜನ

    ನವದೆಹಲಿ: ಭಾರತ ಇಂದು ಪ್ರಧಾನಿ ಮೋದಿ (PM Modi) ಜೀ ಅವರ ನಾಯಕತ್ವದಲ್ಲಿ ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಮೆಚ್ಚುಗೆ ವ್ಯಕ್ತಪಡಿಸಿದರು.

    ನವದೆಹಲಿಯಲ್ಲಿ (New Delhi) ಹನಿವೆಲ್ ಮತ್ತು CNBC-TV18 ಆಯೋಜಿಸಿದ್ದ ಭಾರತ ಶಕ್ತಿ ಪರಿವರ್ತನಾ ಶೃಂಗಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಜಾಗತಿಕವಾಗಿ ಇಂಧನ ಕ್ಷೇತ್ರದಲ್ಲಿ ಶುದ್ಧ ಮತ್ತು ಸುಸ್ಥಿರ ಇಂಧನಕ್ಕಾಗಿ (Sustainable Energy) ಭಾರತ ಪ್ರಭಾವಶಾಲಿ ಹೆಜ್ಜೆಯನ್ನಿಟ್ಟಿದೆ. ಆರ್ಥಿಕತೆ ಜೊತೆಗೆ ಪರಿಸರ ಕಾಳಜಿ, ನಿರ್ವಹಣೆಗೂ ಮಹತ್ವ ನೀಡಿದೆ ಎಂದು ಹೇಳಿದರು.

    ಸೌರ ವಿದ್ಯುತ್ ಸ್ಥಾವರ ಸುಂಕ ಶೇ.76 ಇಳಿಕೆ: ಸೌರ ವಿದ್ಯುತ್ (Solar Power) ಉತ್ಪಾದನೆಗೆ ಉತ್ತೇಜನ ನೀಡಲೆಂದು ಭಾರತ ಸರ್ಕಾರ ಗ್ರಿಡ್ ಸಂಪರ್ಕಿತ ಸೌರ ವಿದ್ಯುತ್ ಸ್ಥಾವರಗಳಿಗೆ ಇದ್ದ ಸುಂಕವನ್ನು ಶೇ.76ರಷ್ಟು ಇಳಿಸಿದೆ. 2010-11ರಲ್ಲಿ ರೂ.10.95 ಇದ್ದ ಸುಂಕ 2023-24 ರ ಅವಧಿಯಲ್ಲಿ ಕೇವಲ ರೂ.2.60ಗೆ ಇಳಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಚಾಲನೆ ಹಿನ್ನೆಲೆ ಹೋಮ – 9 ಪೂರ್ಣ ಕುಂಭಗಳಿಗೆ ಪೂಜೆ ಸಲ್ಲಿಸಿದ ಡಿಕೆಶಿ

    ನವೀಕರಿಸಬಹುದಾದ ಇಂಧನ (Renewable Energy) ಕ್ಷೇತ್ರ ಭಾರತೀಯ ಆರ್ಥಿಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಭಾರತದ ತ್ವರಿತ ಬೆಳವಣಿಗೆ ಮತ್ತು ಆರ್ಥಿಕತೆ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ. ಈ ಕ್ಷೇತ್ರದಲ್ಲಿ ಭಾರತ ಒಂದು ಸ್ಪರ್ಧಾತ್ಮಕ ಉದ್ಯಮವನ್ನೇ ಸೃಷ್ಟಿಸಲಿದೆ. ಅಷ್ಟರ ಮಟ್ಟಿಗೆ ಸದೃಢವಾಗಿದೆ. ಭಾರತದಲ್ಲಿ ಸೌರಶಕ್ತಿಯ ವೆಚ್ಚ ವಿಶ್ವದಲ್ಲೇ ಅತ್ಯಂತ ಅಗ್ಗವಾಗಿದೆ ಎಂದು ಶ್ಲಾಘಿಸಿದರು.

    ಹೆಚ್ಚುವರಿ ವಿದ್ಯುಚ್ಛಕ್ತಿ ಸಂಗ್ರಹಿಸಲು ಯೋಜಿಸಿದ್ದು, ದೊಡ್ಡ ಪ್ರಮಾಣದ ಗ್ರಿಡ್ ಸಂಗ್ರಹಣೆಯಲ್ಲಿ ಯಶಸ್ಸು ಅತ್ಯಗತ್ಯ. ಇದಕ್ಕಾಗಿ PSP ಯೋಜನೆಗಳ ಅಭಿವೃದ್ಧಿಗೆ ವೇಗ ನೀಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಗಣೇಶ ಮತ್ತೆ ಬಂದ.. ಪರಿಸರ ಸ್ನೇಹಿ ಮೂರ್ತಿಯ ಪ್ರಯೋಜನ ನಿಮಗೆಷ್ಟು ಗೊತ್ತು?

    24,000 ಕೋಟಿ ರೂ. ವೆಚ್ಚದಲ್ಲಿ ಹೆಚ್ಚಿನ ದಕ್ಷತೆಯ ಸೌರ PV ಮಾದರಿ ಘಟಕಕ್ಕೆ PLI ಯೋಜನೆ ಜಾರಿಗೊಳಿಸುತ್ತಿದ್ದು, ಈ ಯೋಜನೆಯಡಿ 48,337 MW ಸಾಮರ್ಥ್ಯದ ಉನ್ನತ-ದಕ್ಷತೆಯ ಸೌರ PV ಮಾದರಿಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

    ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯ 10 ವರ್ಷಗಳಲ್ಲಿ 75.52 GW ನಿಂದ 203 GW ಗಿಂತ ಹೆಚ್ಚಾಗಿದೆ. 165 ಪ್ರತಿಶತದಷ್ಟು ಹೆಚ್ಚಳ ಕಂಡಿದೆ. ಭಾರತದಲ್ಲಿ ಒಟ್ಟು ಆರ್‌ಇ ಉತ್ಪಾದನೆಯು 193.50 ಬಿಲಿಯನ್ ಯುನಿಟ್‌ಗಳಿಂದ 2023-24ರಲ್ಲಿ 360 ಬಿಲಿಯನ್ ಯುನೈಟ್‌ಗೆ ಏರಿಕೆಯಾಗಿದೆ, ಇದು ಶೇ.86ರಷ್ಟು ಹೆಚ್ಚಳವಾಗಿದೆ ಎಂದು ವಿವರಿಸಿದರು. ಇದನ್ನೂ ಓದಿ: Kolkata Horror | ಆರ್‌.ಜಿ ಕರ್‌ ಕಾಲೇಜಿನ ಮಾಜಿ ಪ್ರಾಂಶುಪಾಲನ ಮನೆ ಸೇರಿ 7 ಕಡೆ ಇಡಿ ದಾಳಿ!

    3 ತಿಂಗಳಲ್ಲಿ 2.5 ಲಕ್ಷಕ್ಕೂ ಅಧಿಕ ಸೂರ್ಯ ಘರ್:
    ತಾವು ನವೀಕರಿಸಬಹುದಾದ ಇಂಧನ ಖಾತೆ ವಹಿಸಿಕೊಂಡ ಮೇಲೆ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಅಡಿಯಲ್ಲಿ 2.5 ಲಕ್ಷಕ್ಕೂ ಹೆಚ್ಚು ಛಾವಣಿಗಳಲ್ಲಿ ಸೌರ ಘಟಕಗಳನ್ನು ಸ್ಥಾಪಿಸಲಾಗಿದೆ. ಒಟ್ಟು 3.28 ಲಕ್ಷ ಅಳವಡಿಕೆಗಳ ಪೈಕಿ ಶೇ.75ಕ್ಕೂ ಹೆಚ್ಚು ಈ ಮೂರು ತಿಂಗಳಲ್ಲಿ ಆಗಿದೆ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ಕೊಂಡಾಡಿದರು.

  • ಸೌರ ಪ್ಯಾರಾಬೋಲಾಯ್ಡ್ ತಂತ್ರಜ್ಞಾನ; ನವೀಕರಿಸಬಹುದಾದ ಶಕ್ತಿಯ ಭರವಸೆ – ಏನಿದು ತಂತ್ರಜ್ಞಾನ?

    ಸೌರ ಪ್ಯಾರಾಬೋಲಾಯ್ಡ್ ತಂತ್ರಜ್ಞಾನ; ನವೀಕರಿಸಬಹುದಾದ ಶಕ್ತಿಯ ಭರವಸೆ – ಏನಿದು ತಂತ್ರಜ್ಞಾನ?

    ಗತ್ತು ಆಧುನಿಕ ಯುಗದ ಓಟದಲ್ಲಿದೆ. ಆವಿಷ್ಕಾರ, ಅಭಿವೃದ್ಧಿ ನಾಗಾಲೋಟ ಮುಂದುವರಿದಿದೆ. ಭೂಗರ್ಭದಲ್ಲಿರುವ ಸಂಪನ್ಮೂಲಗಳ ಬಳಕೆಯೂ ಹೆಚ್ಚಾಗಿದೆ. ಭೂಮಿ ಬರಿದಾಗುತ್ತಿದ್ದು, ವಿಪತ್ತಿನ ಹಾದಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರಿಂದ ಎಚ್ಚೆತ್ತ ಮಾನವ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದ್ದಾನೆ. ಅದಕ್ಕಾಗಿ ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರವಾಗುತ್ತಿದೆ. ಭೂಸಂಪತ್ತು ಉಳಿಯಬೇಕು, ಪ್ರಕೃತಿಯಲ್ಲಿ ಹೇರಳವಾಗಿ ಸಿಗುವ ಸಂಪತ್ತನ್ನೇ ಆಧುನಿಕ ತಂತ್ರಜ್ಞಾನ ಬಳಸಿ ನವೀಕರಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗುತ್ತಿದೆ.

    ಪಳೆಯುಳಿಕೆ ಇಂಧನ ಅತಿಯಾದ ಬಳಕೆಯಿಂದ ಭೂಮಿ ಸಂಪತ್ತು ಬರಿದಾಗುವುದರ ಜೊತೆಗೆ ಪ್ರಕೃತಿ ಮೇಲೆ ದುಷ್ಪರಿಣಾಮಗಳು ಹೆಚ್ಚಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಾಗತಿಕ ವೇದಿಕೆಯು ನವೀಕರಿಸಬಹುದಾದ ಇಂಧನ ಬಳಕೆ ಉತ್ತೇಜಿಸಲು ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಮುಂಚೂಣಿಯಲ್ಲಿ ಬರುವುದು (Solar) ಸೌರಶಕ್ತಿ. ಸಣ್ಣ ಪ್ರಮಾಣದಲ್ಲಿ ಗೃಹ ಬಳಕೆ ಹಾಗೂ ಕೃಷಿಗೆ ಸೀಮಿತವಾಗಿದ್ದ ಶಕ್ತಿಯನ್ನು ಕೈಗಾರಿಕಾ ವಲಯದಲ್ಲೂ ಹೆಚ್ಚು ಬಳಕೆಗೆ ಹೊಸ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಲಾಗಿದೆ.

    ಸೌರ ಪ್ಯಾರಾಬೋಲಾಯ್ಡ್ ತಂತ್ರಜ್ಞಾನ(Solar paraboloid technology), ಏನಿದು ಟೆಕ್ನಾಲಜಿ?‌ ಇದರ ಆವಿಷ್ಕಾರ ಏಕೆ? ಹೊಸ ತಂತ್ರಜ್ಞಾನದಿಂದ ಆಗುವ ಉಪಯೋಗಗಳೇನು? ಪ್ರಸ್ತುತ ಕಾಲಮಾನಕ್ಕೆ ಇದು ಏಕೆ ಮುಖ್ಯ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

    ಸೌರಶಕ್ತಿ
    ಸೌರ ಪ್ಯಾರಾಬೋಲಾಯ್ಡ್ ಟೆಕ್ನಾಲಜಿಗೂ ಮುನ್ನ ಸೌರಶಕ್ತಿ ಬಗ್ಗೆ ತಿಳಿಯೋಣ. ಸೂರ್ಯನ ಕಿರಣಗಳ ಶಾಖ ಮತ್ತು ಬೆಳಕಿನಿಂದ ಸಿಗುವ ಎನರ್ಜಿಯನ್ನು (ಶಕ್ತಿ) ವಿವಿಧ ತಂತ್ರಜ್ಞಾನ ಬಳಸಿ, ಮಾನವನ ಉಪಯೋಗಕ್ಕೆ ಅನುಕೂಲವಾಗುವಂತೆ ಮಾರ್ಪಡಿಸಿ ಪಡೆಯುವುದೇ ಸೌರಶಕ್ತಿ. ಸೌರಶಕ್ತಿಯು ನವೀಕರಿಸಬಹುದಾದ (Renewable energy) ಸಂಪನ್ಮೂಲವಾಗಿದೆ. ಸಾಮಾನ್ಯವಾಗಿ ಸೋಲಾರ್ (ಬಿಸಿ ನೀರಿಗಾಗಿ), ಮನೆಗಳಿಗೆ ಹಾಗೂ ಕೃಷಿ ಚಟುವಟಿಕೆಗಳಲ್ಲಿ ವಿದ್ಯುತ್ ಪೂರೈಕೆಗೆ ಸೌರಶಕ್ತಿ ಬಳಸಲಾಗುತ್ತಿತ್ತು. ಈಗ ಸುಧಾರಿತ ತಂತ್ರಜ್ಞಾನ ಬಳಸಿ ಸೌರಶಕ್ತಿಯನ್ನು ಬೃಹತ್ ಕೈಗಾರಿಕೆಯ ವಾಣಿಜ್ಯೋದ್ಯಮಕ್ಕೆ ಬಳಸುವ ಕಾರ್ಯ ನಡೆಯುತ್ತಿದೆ. ಅದೇ ಸೌರ ಪ್ಯಾರಾಬೋಲಾಯ್ಡ್ ತಂತ್ರಜ್ಞಾನ.

    ಏನಿದು ಸೌರ ಪ್ಯಾರಾಬೋಲಾಯ್ಡ್ ಟೆಕ್ನಾಲಜಿ?
    ನವೀಕರಿಸಬಹುದಾದ ಎನರ್ಜಿಯ ತುರ್ತು ಅಗತ್ಯ ಈಗ ಜಗತ್ತಿಗಿದೆ. ಸೌರ ಪ್ಯಾರಾಬೋಲಾಯ್ಡ್ ತಂತ್ರಜ್ಞಾನವು ಸಂಭಾವ್ಯ ಪರಿವರ್ತಕ ಪರಿಹಾರವಾಗಿ ಹೊರಹೊಮ್ಮುತ್ತಿದೆ. ಇದು ಕೇಂದ್ರೀಕರಿಸುವ ಸೌರಶಕ್ತಿಯಾಗಿದೆ. ಸೂರ್ಯನ ಬೆಳಕನ್ನು ಒಂದೇ ಬಿಂದುವಿನ ಮೇಲೆ ಕೇಂದ್ರೀಕರಿಸಲು ಪ್ಯಾರಾಬೋಲಿಕ್ ಪ್ರತಿಫಲಕವನ್ನು ಬಳಸಲಾಗುತ್ತದೆ. ಕೇಂದ್ರೀಕರಿಸುವ ಸೌರಶಕ್ತಿಯ ಈ ಸುಧಾರಿತ ತಂತ್ರಜ್ಞಾನವು, ಸೌರ ಶಕ್ತಿಯ ಸೆರೆಹಿಡಿಯುವಿಕೆಯ ದಕ್ಷತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಸಾಂಪ್ರದಾಯಿಕ ದ್ಯುತಿವಿದ್ಯುಜ್ಜನಕ ವ್ಯವಸ್ಥೆಗಳನ್ನು ದೀರ್ಘಕಾಲ ಬಾಧಿಸುತ್ತಿರುವ ಮಿತಿಗಳನ್ನು ಪರಿಹರಿಸಲು ಸಹಕಾರಿಯಾಗಲಿದೆ. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಇದು ಪೂರಕ. ಸರ್ಕಾರಗಳು ಮತ್ತು ಕೈಗಾರಿಕೆಗಳು ಹೆಚ್ಚು ಬದ್ಧವಾಗಿರುವುದರೊಂದಿಗೆ, ಜಾಗತಿಕ ಇಂಧನ ಮಾರುಕಟ್ಟೆಗಳ ಭವಿಷ್ಯವನ್ನು ರೂಪಿಸುವಲ್ಲಿ ಸೌರ ಪ್ಯಾರಾಬೋಲಾಯ್ಡ್ ಟೆಕ್ನಾಲಜಿ ಪ್ರಮುಖ ಪಾತ್ರ ವಹಿಸುತ್ತವೆ.

    ಇದು ಹೇಗೆ ಕೆಲಸ ಮಾಡುತ್ತದೆ?
    ಸೌರ ಪ್ಯಾರಾಬೋಲಾಯ್ಡ್ಗಳು ಪ್ಯಾರಾಬೋಲಿಕ್ ಟ್ರಫ್ ಕಲೆಕ್ಟರ್ (ಪಿಟಿಸಿ) ಸಿಸ್ಟಮ್ ಬಳಸಿಕೊಂಡು ಕಾರ್ಯನಿರ್ವಹಿಸುತ್ತವೆ. ಈ ಸಿಸ್ಟಮ್‌ಗಳು ಉದ್ದವಾದ, ಪ್ಯಾರಾಬೋಲಿಕ್ ಕನ್ನಡಿಗಳನ್ನು ಒಳಗೊಂಡಿರುತ್ತವೆ. ಅದು ಕನ್ನಡಿಯ ಫೋಕಲ್ ಲೈನ್‌ನಲ್ಲಿ ಇರಿಸಲಾದ ರಿಸೀವರ್ ಟ್ಯೂಬ್‌ನ ಮೇಲೆ ಸೂರ್ಯನ ಬೆಳಕನ್ನು ಕೇಂದ್ರೀಕರಿಸುತ್ತದೆ. ಕೇಂದ್ರೀಕೃತ ಸೌರ ಶಕ್ತಿಯು ರಿಸೀವರ್ ಒಳಗೆ ದ್ರವವನ್ನು ಬಿಸಿ ಮಾಡುತ್ತದೆ. ನಂತರ ಅದನ್ನು ವಿದ್ಯುತ್ ಉತ್ಪಾದಿಸಲು ಅಥವಾ ಕೈಗಾರಿಕಾ ಪ್ರಕ್ರಿಯೆಗಳಿಗೆ ನೇರ ಶಾಖವನ್ನು ಒದಗಿಸಲು ಬಳಸಬಹುದು. ಈ ವಿನ್ಯಾಸವು ಸಾಂಪ್ರದಾಯಿಕ ಪಿವಿ ಪ್ಯಾನೆಲ್‌ಗಳಿಗಿಂತ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದು ಅರೆವಾಹಕಗಳನ್ನು ಬಳಸಿಕೊಂಡು ಸೂರ್ಯನ ಬೆಳಕನ್ನು ನೇರವಾಗಿ ವಿದ್ಯುತ್ ಆಗಿ ಪರಿವರ್ತಿಸುತ್ತದೆ.

    ಸೌರ ಪ್ಯಾರಾಬೋಲಾಯ್ಡ್ ತಂತ್ರಜ್ಞಾನದ ಪ್ರಮುಖ ಪ್ರಯೋಜನವೆಂದರೆ, 300 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಿನ ತಾಪಮಾನದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದು ಉಷ್ಣ ದಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಶಾಖ ಹೀರಿಕೊಳ್ಳಲು ಸಣ್ಣದಾದ ಜಾಗವಿರುತ್ತದೆ. ಇದು ಶಾಖದ ನಷ್ಟವಾಗುವುದನ್ನು ಕಡಿಮೆ ಮಾಡುತ್ತದೆ.

    ಟೆಕ್ನಾಲಜಿ ಮಹತ್ವವೇನು?
    ವಿದ್ಯುತ್ ಪ್ರತಿ ಯೂನಿಟ್‌ಗೆ ಕಡಿಮೆ ವೆಚ್ಚ?: ಸೌರ ಪ್ಯಾರಾಬೋಲಾಯ್ಡ್ಗಳ ಸಾಮರ್ಥ್ಯಕ್ಕೆ ತಕ್ಕಂತೆ ಸೂರ್ಯನ ಬೆಳಕಿನಿಂದ ಹೆಚ್ಚು ವಿದ್ಯುತ್ ಉತ್ಪಾದಿಸಬಹುದು. ಇದು ಪ್ರತಿ ಯೂನಿಟ್ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಪಳೆಯುಳಿಕೆ ಇಂಧನ ಬಳಕೆ ತಗ್ಗಿಸಲು ಇದು ಪೂರಕವಾಗಿದೆ.

    ತಂತ್ರಜ್ಞಾನಕ್ಕೆ ಬೇಕು ಹೆಚ್ಚಿನ ಹೂಡಿಕೆ?
    ಈ ತಂತ್ರಜ್ಞಾನವನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಹಣಕಾಸು ಹೂಡಿಕೆ ಪ್ರಮುಖ ವಿಷಯವಾಗಿದೆ. ಸೌರ ಶಕ್ತಿಯನ್ನು ಕೇಂದ್ರೀಕರಿಸುವಲ್ಲಿ ಸೌರ ಪ್ಯಾರಾಬೋಲಾಯ್ಡ್ಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಅಂದರೆ ಅದೇ ಪ್ರಮಾಣದ ಸೂರ್ಯನ ಬೆಳಕಿನಿಂದ ಹೆಚ್ಚಿನ ವಿದ್ಯುತ್ ಉತ್ಪಾದಿಸಬಹುದು. ಈ ದಕ್ಷತೆಯು ಪ್ರತಿ ಯೂನಿಟ್ ವಿದ್ಯುತ್ ಉತ್ಪಾದನೆಗೆ ಕಡಿಮೆ ವೆಚ್ಚಕ್ಕೆ ಕಾರಣವಾಗಬಹುದು. ಟೆಕ್ನಾಲಜಿಗೆ ವಿಶಾಲ ಭೂಪ್ರದೇಶ ಬೇಕಾಗುತ್ತದೆ. ವಿಶೇಷ ವಸ್ತುಗಳು, ಕಾಂಪ್ಲೆಕ್ಸ್ ಟ್ರ್ಯಾಕಿಂಗ್ ಸಿಸ್ಟಮ್ ಅಗತ್ಯವಿರುತ್ತದೆ. ಇದೆಲ್ಲದಕ್ಕೂ ಹೆಚ್ಚಿನ ಖರ್ಚಾಗುತ್ತದೆ. ತಂತ್ರಜ್ಞಾನ ಅನುಷ್ಠಾನಕ್ಕೆ ಎದುರಾಗುವ ತೊಡಕುಗಳ ನಿವಾರಣೆಗೆ, ಸರ್ಕಾರಗಳು ಮತ್ತು ಕೈಗಾರಿಕೆಗಳು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಬೇಕು. ಜೊತೆಗೆ ಆರಂಭಿಕ ಅಳವಡಿಕೆದಾರರಿಗೆ ಪ್ರೋತ್ಸಾಹ ನೀಡಬೇಕು.

    ಭಾರತದಲ್ಲಿ ತಂತ್ರಜ್ಞಾನ ಅಳವಡಿಕೆ?
    ಸೌರ ಪ್ಯಾರಾಬೋಲಾಯ್ಡ್ಗಳಿಗೆ ಉದ್ಯಮ ಕ್ಷೇತ್ರದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜಸ್ಥಾನದ ಗೋದಾವರಿ ಸೌರ ಯೋಜನೆ ಮತ್ತು ಉತ್ತರ ಪ್ರದೇಶದ ದಾದ್ರಿ ಐಎಸ್‌ಸಿಸಿ ಸ್ಥಾವರ ಸ್ಥಾಪನೆಗೆ ಪ್ರಾತ್ಯಕ್ಷಿಕೆ ಯೋಜನೆಗಳು ನಡೆದಿದ್ದರೂ, ತಂತ್ರಜ್ಞಾನವು ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ. ಹೆಚ್ಚಿನ ಮುಂಗಡ ವೆಚ್ಚಗಳು, ತಾಂತ್ರಿಕ ಸಂಕೀರ್ಣತೆ ಮತ್ತು ನಿಯಮಿತ ನಿರ್ವಹಣೆಯ ಅಗತ್ಯವು ಗಮನಾರ್ಹವಾದ ಸವಾಲುಗಳಾಗಿವೆ.

    ನವೀಕರಿಸಬಹುದಾದ ಶಕ್ತಿಯ ಗೇಮ್ ಚೇಂಜರ್ ಆಗುತ್ತಾ?
    ಸೌರ ಪ್ಯಾರಾಬೋಲಾಯ್ಡ್ ತಂತ್ರಜ್ಞಾನ ಅಭಿವೃದ್ಧಿ ಕಾರ್ಯವು ಇನ್ನೂ ಅದರ ಆರಂಭಿಕ ಹಂತಗಳಲ್ಲಿದೆ. ಆದರೆ ನವೀಕರಿಸಬಹುದಾದ ಇಂಧನ ಬಳಕೆ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ನಿರಾಕರಿಸಲಾಗದು. ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ನೆರವಾಗುತ್ತದೆ.

  • ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರ ಕಡೆಗಣನೆ – ಹೆಚ್‌ಡಿಡಿ ಬೇಸರ

    ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರ ಕಡೆಗಣನೆ – ಹೆಚ್‌ಡಿಡಿ ಬೇಸರ

    – 2050ರ ವೇಳೆಗೆ ಇಂಧನ ಬೇಡಿಕೆ ಪ್ರಮಾಣ 400% ಹೆಚ್ಚಾಗಲಿದೆ
    – ಮೋದಿ ಸರ್ಕಾರದ ವಿರುದ್ಧ ಒಂದೇ ಒಂದು ಭ್ರಷ್ಟಾಚಾರ ಆರೋಪ ಇಲ್ಲವೆಂದ ಗೌಡರು

    ನವದೆಹಲಿ: ಕರ್ನಾಟಕವೂ ಸೇರಿ ಹಲವಾರು ರಾಜ್ಯಗಳು ನವೀಕರಿಸಬಹುದಾದ ಇಂಧನ ಶಕ್ತಿಯನ್ನು (Renewable Energy) ಕಡೆಗಣಿಸುತ್ತಿವೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ (HD DeveGowda) ಅವರು ಬೇಸರ ಹೊರಹಾಕಿದರು.

    ನವೀಕರಿಸಬಹುದಾದ ಇಂಧನ ಶಕ್ತಿಗಳ ಬಗ್ಗೆ ರಾಜ್ಯಸಭೆಯಲ್ಲಿಂದು (Rajya Sabha) ಮಹತ್ವದ ಭಾಷಣ ಮಾಡಿದ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು, ಈ ಕ್ಷೇತ್ರವನ್ನು ಕರ್ನಾಟಕವೂ ಸೇರಿ ಹಲವಾರು ರಾಜ್ಯಗಳು ಕಡೆಗಣಿಸುತ್ತಿವೆ ಎಂದರು. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದನ್ನೂ ಓದಿ: Paris Olympics 2024: ಲಕ್ಷ್ಯ ಸೇನ್‌ಗೆ ಸೋಲು – ಕಂಚು ಗೆಲ್ಲುವ ಕನಸು ಭಗ್ನ; ಭಾರತಕ್ಕೆ ಮತ್ತೆ ನಿರಾಸೆ!

    ಹಿಂದೆ ಕರ್ನಾಟಕ ರಾಜ್ಯವು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ನಾಯಕತ್ವ ನೀಡಿತ್ತು. ಈ ಕ್ಷೇತ್ರದಲ್ಲಿ ಗಣನೀಯ ದಾಪುಗಾಲು ಇರಿಸಿತ್ತು. ಆದರೆ ಕೆಲ ವರ್ಷಗಳಿಂದ ಈಚೆಗೆ ಕರ್ನಾಟಕದಲ್ಲಿ ಈ ಕ್ಷೇತ್ರ ಗಣನೀಯವಾಗಿ ಹಿನ್ನೆಡೆ ಅನುಭವಿಸಿದೆ. ನಮ್ಮ ದೇಶದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದ ಬೆಳವಣಿಗೆ ಪ್ರಮಾಣ ಶೇ.14ರಷ್ಟು ಇದ್ದು, ಕರ್ನಾಟಕ ರಾಜ್ಯದಲ್ಲಿ ಆ ಪ್ರಮಾಣ ಶೇ.2.58ರಷ್ಟು ಇದೆ. ಈ ಸಂದರ್ಭದಲ್ಲಿ ಈ ಕ್ಷೇತ್ರದ ಬೆಳವಣಿಗೆಯ ದರ ಕುಂಠಿತವಾಗಿರುವ ಬಗ್ಗೆ ಎಲ್ಲರೂ ಗಂಭೀರ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.

    ಈ ಕ್ಷೇತ್ರದಲ್ಲಿ ಉಂಟಾಗುವ ತ್ಯಾಜ್ಯ ವಸ್ತುಗಳ ಬಗ್ಗೆಯೂ ಮಹತ್ವದ ಸಲಹೆ ನೀಡಿದ ಮಾಜಿ ಪ್ರಧಾನಿಗಳು, ಸೋಲಾರ್‌ ಪ್ಯಾನಲ್‌ಗಳನ್ನು 25 ವರ್ಷಗಳ ಬಳಿಕ ವಿಲೇವಾರಿ ಮಾಡಲೇಬೇಕಾಗುತ್ತದೆ. ಅವುಗಳನ್ನು ವಿಲೇವಾರಿ ಮಾಡುವ ಬಗ್ಗೆ ನಮ್ಮ ದೇಶದಲ್ಲಿ ಯಾವುದೇ ರೀತಿಯ ವೈಜ್ಞಾನಿಕ ನೀತಿ ಇರುವುಲ್ಲ. ಸೋಲಾರ್ ಪ್ಯಾನಲ್‌ಗಳ ವಿಲೇವಾರಿಯಲ್ಲಿ ನಾವು ಅತ್ಯಂತ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೇ ಭವಿಷ್ಯದಲ್ಲಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ, ಅವುಗಳ ವಿಲೇವಾರಿಗೆ ವೈಜ್ಞಾನಿಕ ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ‘ಸ್ವಾತಿಮುತ್ತೇ ಸಿಕ್ಕಂಗೈತೆ’ ಎಂದು ಜ್ಯೂ.ಎನ್‌ಟಿಆರ್ ಜೊತೆ ಹೆಜ್ಜೆ ಹಾಕಿದ ಜಾನ್ವಿ ಕಪೂರ್

    ಪರಿಸರ ಸಂರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನವೀಕರಿಸಬಹುದಾದ ಇಂಧನ ಶಕ್ತಿಯಿಂದ ನಮ್ಮ ಪರಿಸರ ಹಾಗೂ ಜೀವ ವೈವಿಧ್ಯತೆ ಮೇಲೆ ಉಂಟಾಗುವ ದುಷ್ಪರಿಣಾಮದ ಬಗ್ಗೆಯೂ ಅತ್ಯಂತ ಮುನ್ನೆಚ್ಚರಿಕೆ ವಹಿಸಬೇಕು. ಸೋಲಾರ್ ಪ್ಯಾನೆಲ್‌ಗಳನ್ನ ಇದೀಗ ಕೃಷಿ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಳವಡಿಸಲಾಗುತ್ತಿದೆ. ಭವಿಷ್ಯದಲ್ಲಿ ಇವುಗಳನ್ನು ಕೃಷಿ ಯೋಗ್ಯವಲ್ಲದ ಪ್ರದೇಶಗಳಲ್ಲಿ ಅಳವಡಿಸಲು ಯೋಜನೆಗಳನ್ನು ರೂಪಿಸಬೇಕು ಎನ್ನುವುದು ನನ್ನ ಕಳಕಳಿಯ ಸಲಹೆಯಾಗಿದೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ನಮ್ಮ ಹೋರಾಟದ ಬಿಸಿಗೆ ಕಾಂಗ್ರೆಸ್ ಸರ್ಕಾರ ಒಂಟಿ ಕಾಲಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣ: ವಿಜಯೇಂದ್ರ

    ಸದ್ಯದ ಸಂದರ್ಭದಲ್ಲಿ ನವೀಕರಿಸಬಹುದಾದ ಇಂಧನ ಶಕ್ತಿಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ನಾವು ಕೇವಲ ಇದನ್ನಷ್ಟೆ ಮಾಡಿದರೆ ಸಾಲದು. ಅವುಗಳ ಅಳವಡಿಕೆ, ಬಳಕೆ, ನಿರ್ವಹಣೆ ಪರಿಣಾಮಕಾರಿ ವ್ಯವಸ್ಥೆ ಅತ್ಯಗತ್ಯವಿದೆ. ಈ ಬಗ್ಗೆ ಸರ್ಕಾರ ಗಮನ ಕೊಡಬೇಕು. ನವೀಕರಿಸಬಹುದಾದ ಇಂಧನಕ್ಕೆ ಇನ್ನಷ್ಟು ಒತ್ತು ನೀಡಿ ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು. ಇದಕ್ಕಾಗಿ ಸಮಗ್ರ ನೀತಿ ರೂಪಿಸಬೇಕು ಎಂದು ಎಚ್ಚರಿಸಿದರು.

    ಮೋದಿ ಸರ್ಕಾರದ ಬಗ್ಗೆ ಮೆಚ್ಚುಗೆ
    ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಸಾಧನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿ ಬಗ್ಗೆ ದೇವೇಗೌಡರು ಮೆಚ್ಚುಗೆ ಮಾತುಗಳನ್ನಾಡಿದರು. ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಅಭಿವೃದ್ಧಿ ಆಗಿದೆ. ಈ ಸರ್ಕಾರದ ವಿರುದ್ಧ ಕಳೆದ 10 ವರ್ಷಗಳಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪ ಇಲ್ಲ ಎಂಬುದನ್ನು ನಾವು ಗಮನಿಸಬೇಕು ಎಂದು ಅವರು ಹೇಳಿದರು. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ, ಕಾಂಗ್ರೆಸ್ಸಿಗನಾಗಿ ನಾನೇ ಕೈಮುಗಿದು ಧನ್ಯವಾದ ಹೇಳ್ತೀನಿ: ಕೃಷ್ಣಬೈರೇಗೌಡ

    ಹಸಿರು, ಶುದ್ಧ ಇಂಧನದ ಅಗತ್ಯವಿದೆ:
    ಪರಿಸರ ರಕ್ಷಣೆ ಮಾಡಿಕೊಂಡು ಹಸಿರು ಹಾಗೂ ಶುದ್ಧ ಇಂಧನದ ಬಳಕೆಯಿಂದ ದೇಶದ ಸುಸ್ಥಿರ ಅಭಿವೃದ್ಧಿಯಾಗಲು ಸಾಧ್ಯ. ಇದಕ್ಕೂ ಮುನ್ನ ಜಲ ವಿದ್ಯುತ್‌, ಆ ನಂತರ ಸೌರ ವಿದ್ಯುತ್, ಪವನ ವಿದ್ಯುತ್‌ ಶಕ್ತಿಗಳಿಗೆ ಪ್ರೋತ್ಸಾಹ ಕೊಡಲಾಯಿತು. ಸದ್ಯದ ಸಂದರ್ಭದಲ್ಲಿ ನವೀಕರಿಸಬಹುದಾದ ಇಂಧನಕ್ಕೆ ಮಹತ್ವ ಕೊಡುವುದು ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಈಗ 1,000 ಗಿಗಾವ್ಯಾಟ್‌ ಸೌರ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಉತ್ಪಾದನೆ ಪ್ರಮಾಣ 30 ಪಟ್ಟು ಹೆಚ್ಚಳವಾಗಿದೆ. ಆದರೂ, ಇಂಧನ ಕ್ಷೇತ್ರದಲ್ಲಿ ಕೆಲವೊಂದು ಆತಂಕಗಳು ಇದ್ದೇ ಇದೆ ಎಂಬುದನ್ನು ನಾವು ಮರೆಯಬಾರದು ಎಂದು ಮಾಜಿ ಪ್ರಧಾನಿಗಳು ಸವಿಸ್ತಾರವಾಗಿ ಹೇಳಿದರು.

    ಇಂಧನ ಬೇಡಿಕೆ ಪ್ರಮಾಣ 400% ಹೆಚ್ಚಾಗಲಿದೆ:
    ಇಡೀ ಜಗತ್ತಿನಲ್ಲಿಯೇ ಭಾರತವು ಇಂಧನ ಬಳಕೆಯಲ್ಲಿ 3ನೇ ಸ್ಥಾನದಲ್ಲಿದೆ. ಈಗಲೂ ಶೇ.80ರಷ್ಟು ಪಳೆಯುಳಿಕೆ ಇಂಧನಗಳನ್ನೇ ಬಳಸುತ್ತಿದ್ದೇವೆ. ನವೀಕರಿಸಬಹುದಾದ ಇಂಧನಗಳ ಪಾಲು ಶೇ.20ರಷ್ಟು ಮಾತ್ರ ಎಂದು ಟೆರಿ ವರದಿಯಲ್ಲಿ ಬೊಟ್ಟು ಮಾಡಿ ತೋರಿಸಲಾಗಿದೆ. 2050ರ ವೇಳೆಗೆ ಇಂಧನ ಬೇಡಿಕೆ ಪ್ರಮಾಣ ಶೇ.400ರಷ್ಟು ಹೆಚ್ಚಳವಾಗಲಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಈ ಸಲದ ಬಜೆಟ್‌ನಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ವಿಶೇಷ ಒತ್ತಾಸೆ ನೀಡಲಾಗಿದೆ ಎಂದರು.

    ಹಲವಾರು ರಾಜ್ಯಗಳು ಈ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿವೆ ಎಂಬುದು ಗಮನಾರ್ಹ. ಇನ್ನು ಕೆಲ ರಾಜ್ಯಗಳಲ್ಲಿ ಈ ಕ್ಷೇತ್ರದ ಪ್ರಗತಿ ಏನೇನೂ ಸಾಲದು ಎನ್ನುವುದು ನನ್ನ ಅಭಿಪ್ರಾಯ. ಇಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸಲು ಗಮನ ಹರಿಸಬೇಕು ಎಂದು ಗೌಡರು ಹೇಳಿದರು.

    ಕೃಷಿ ಕ್ಷೇತ್ರದಲ್ಲಿ ರೈತರು ಅನುಭವಿಸುತ್ತಿರುವ ಕಷ್ಟಗಳ ಅರಿವು ನನಗಿದೆ. ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿದ್ದಾಗ ಕೃಷಿಕರ ಕಲ್ಯಾಣಕ್ಕೆ ಹಲವು ಪ್ರಮುಖ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇನೆ. ಕರ್ನಾಟಕದ ಮುಖ್ಯಮಂತ್ರಿ ಆಗಿದ್ದಾಗ ಗಂಗಾ ಕಲ್ಯಾಣ ಯೋಜನೆಯನ್ನು ನಾನೇ ಜಾರಿ ಮಾಡಿದೆ ಎಂದು ಮಾಜಿ ಪ್ರಧಾನಿಗಳು ನೆನಪು ಮಾಡಿಕೊಂಡರು.