Tag: Remembrance

  • ಶಿವಕುಮಾರ ಶ್ರೀಗಳ 6ನೇ ಪುಣ್ಯಸ್ಮರಣೆ – ಸಿದ್ಧಗಂಗಾ ಮಠದಲ್ಲಿಂದು ಸಂಸ್ಮರಣೋತ್ಸವ

    ಶಿವಕುಮಾರ ಶ್ರೀಗಳ 6ನೇ ಪುಣ್ಯಸ್ಮರಣೆ – ಸಿದ್ಧಗಂಗಾ ಮಠದಲ್ಲಿಂದು ಸಂಸ್ಮರಣೋತ್ಸವ

    – ಕರ್ನಾಟಕ, ಮೇಘಾಲಯದ ರಾಜ್ಯಪಾಲರು ಭಾಗಿ

    ತುಮಕೂರು: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕ ಯೋಗಿ, ಶಿವೈಕ್ಯ ಡಾ.ಶಿವಕುಮಾರ ಶ್ರೀಗಳು ಇಂದಿಗೆ ನಮ್ಮೆನ್ನೆಲ್ಲ ಅಗಲಿ 6 ವರ್ಷಗಳೇ ಕಳೆದಿವೆ. ಇದರ ಸ್ಮರಣಾರ್ಥವಾಗಿ ಇಂದು (ಜ.21) ತುಮಕೂರಿನ ಸಿದ್ಧಗಂಗಾ ಮಠದಲ್ಲಿ (Tumakuru Siddaganga Mutt) ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

    ಶ್ರೀಗಳು ನಮ್ಮನ್ನಗಲಿ 6 ವರ್ಷಗಳೇ ಉರುಳಿದರೂ ಅವರ ಆದರ್ಶಗಳು, ಬದುಕಿನ ಚಿಂತನೆಗಳು, ನಡೆದುಕೊಂಡ ರೀತಿ ನೀತಿ, ಆಚಾರ-ವಿಚಾರಗಳು ಇಂದಿಗೂ ಜೀವಂತ. ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದ ಹಿನ್ನೆಲೆ ಮಠದ ಆವಣರಣದಲ್ಲಿ ಬೃಹತ್ ವೇದಿಕೆ ತಲೆ ಎತ್ತಿದೆ.ಇದನ್ನೂ ಓದಿ: ಬೆಂಬಲ ತೊಗರಿ ಖರೀದಿ ಶುರು – ಜಿಲ್ಲೆಯಾದ್ಯಂತ 177 ಖರೀದಿ ಕೇಂದ್ರ ಸ್ಥಾಪನೆ

    ಏನೇನು ಕಾರ್ಯಕ್ರಮ?
    ಇಂದು ಬೆಳಗ್ಗೆಯಿಂದಲೇ ಸಿದ್ಧಮಠದ ಆವರಣದಲ್ಲಿರುವ ಶಿವೈಕ್ಯ ಡಾ.ಶಿವಕುಮಾರ ಶ್ರೀಗಳ ಗದ್ದುಗೆಗೆ ಮಂತ್ರಘೋಷ್ಯಗಳೊಂದಿಗೆ ವಿಶೇಷ ಪೂಜೆ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಗೆ ಮಠದ ಆವರಣದಲ್ಲಿ ಶ್ರೀಗಳ ಪುತ್ಥಳಿಯನ್ನ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಗುತ್ತದೆ. ಬೆಳಗ್ಗೆ 11 ಗಂಟೆಗೆ ಶ್ರೀಮಠದ ಆವರಣದಲ್ಲಿ ನಿರ್ಮಾಣವಾಗಿರುವ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

    ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮೇಘಾಲಯ ರಾಜ್ಯಪಾಲ ಸಿ.ಹೆಚ್ ವಿಜಯಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಇನ್ನು ವೇದಿಕೆಯಲ್ಲಿ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿ ಹಾಗೂ ಉತ್ತಾಧಿಕಾರಿ ಶ್ರೀ ಶಿವ ಸಿದ್ಧೇಶ್ವರ ಸ್ವಾಮೀಜಿ, ಮೈಸೂರಿನ ಶ್ರೀ ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಅಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಕೇಂದ್ರ ಸಚಿವ ವಿ.ಸೋಮಣ್ಣ ಸೇರಿದಂತೆ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

    ಜಾನಪದ ವಿದ್ವಾಂಸ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅವರಿಗೆ ಸಿದ್ಧಗಂಗಾಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಮೈಸೂರಿನ ಸಾಹಿತಿ ಡಾ ಹೆಚ್.ಟಿ.ಶೈಲಜಾ ಹಾಗೂ ತುಮಕೂರಿನ ಸಮಾಜ ಸೇವಕ ಜಿ.ಎನ್.ಬಸವರಾಜಪ್ಪ ಅವರಿಗೆ ಸಿದ್ಧಗಂಗಾ ಶಿವಕುಮಾರ ಶ್ರೀ ಪ್ರಶಸ್ತಿಯನ್ನ ಪ್ರದಾನ ಮಾಡಲಾಗುವುದು. ಅಲ್ಲದೇ ಸಂಜೆ 6 ಗಂಟೆಗೆ ಇದೇ ವೇದಿಕೆಯಲ್ಲಿ ವಿವಿಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

    ಈ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನೀರಿಕ್ಷೆಯನ್ನು ಮಠದ ಆಡಳಿತ ಮಂಡಳಿ ಇಟ್ಟುಕೊಂಡಿದೆ. ಬರುವಂತಹ ಭಕ್ತರಿಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಕೂಡ ಮಾಡಲಾಗಿದೆ. ಈಗಾಗಲೇ ಮಠದ ಆವರಣದಲ್ಲಿ ಉಪಾಹಾರ ಸಿದ್ಧಗೊಂಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಇಡೀ ಮಠ ಸುತ್ತಲೂ ಹಾಗೂ ಒಳಗೆ ಪೊಲೀಸ್ ವ್ಯವಸ್ಥೆ ನಿಯೋಜಿಸಲಾಗಿದೆ.ಇದನ್ನೂ ಓದಿ: ದಿನ ಭವಿಷ್ಯ 21-01-2025

     

  • ಜನಪದರ ಬಾಯಲ್ಲಿ ಹಾಡಾದ ಪುನೀತ್ – ತಾಯಂದಿರ ಕಣ್ಣಲ್ಲಿ ನೀರು ತರಿಸ್ತಿದೆ ಹಾಡು

    ಜನಪದರ ಬಾಯಲ್ಲಿ ಹಾಡಾದ ಪುನೀತ್ – ತಾಯಂದಿರ ಕಣ್ಣಲ್ಲಿ ನೀರು ತರಿಸ್ತಿದೆ ಹಾಡು

    ಚಾಮರಾಜನಗರ: ಚಂದನವನದ ದಿ.ನಟ ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆ ನೋವು ಅಭಿಮಾನಿಗಳ ಮನದಲ್ಲಿ ಇನ್ನೂ ಹಸಿ ಗಾಯದಂತೆಯೇ ಇದೆ. ಅಪ್ಪು ಕುರಿತು ಲೆಕ್ಕವಿಲ್ಲದಷ್ಟು ಮಂದಿ ತಮ್ಮ ಮನದಲ್ಲಿ ಮೂಡಿದ ಭಾವವನ್ನು ಅಕ್ಷರಕ್ಕಿಳಿಸಿದ್ದಾರೆ. ಹಲವರು ಸಾಹಿತ್ಯ ರಚಿಸಿ ಹಾಡುವ ಮೂಲಕ ನಮಿಸಿದ್ದಾರೆ. ಅವರ ಹೆಸರಲ್ಲಿ ನಿತ್ಯ ಒಂದಲ್ಲೊಂದು ವಿಭಿನ್ನ ಕಾರ್ಯಕ್ರಮಗಳು ನಡೆಯುತ್ತಲೇ ಇವೆ.

    ಇದೀಗ ಪುನೀತ್ ಜನಪದರ ಬಾಯಲ್ಲೂ ಹಾಡಾಗಿದ್ದಾರೆ. ಅಭಿಮಾನಿಗಳ ಮನದಲ್ಲಿ ಅಪ್ಪು ಅಜರಾಮರ ಎಂಬುದಕ್ಕೆ ಇದು ಮತ್ತೊಂದು ಸೇರ್ಪಡೆಯಾಗಿದೆ. ಹೇಗೆ ಮರಿಯಾಲಿ ಪುನೀತರಾಜು ನಿನ್ನ ಮರೆಸಿ ಮಣ್ಣಿನೊಳಗೆ, ಹೇಗೆ ಬಂತಪ್ಪ ನಿನಗೆ ಸಾವು ಹುಟ್ಟಿ ಬೆಳೆದಿದ್ದು ಎಲ್ಲೋ.. ಸಾವು ಬಂದಿದ್ದು ಎಲ್ಲೋ.. ಬೆಂಗಳೂರಿನಲ್ಲಿತ್ತಾ ಸಾವು? ಹೇಗೆ ಮರಿಯಾಲಿ… ಹೇಗೆ ಮರಿಯಾಲಿ ಪುನೀತರಾಜು ನಿನ್ನ ಎಂದು ಚಾಮರಾಜನಗರ ರಾಮಸಮುದ್ರದ ಸಾವಿತ್ರಮ್ಮ, ಮಣಿಯಮ್ಮ ಅವರ ತಂಡ ಪುನೀತ್ ಸಾವಿನ ಬಗ್ಗೆ ನೋವಿನಿಂದಲೇ ಹಾಡಿದ್ದಾರೆ. ಇದನ್ನೂ ಓದಿ: ನಾಡೋಜ ಡಾ.ಮಹೇಶ್ ಜೋಶಿ ಕನ್ನಡದ ನಿಷ್ಠಾವಂತ ಸೇವಕ: ಅರವಿಂದರಾವ್ ದೇಶಪಾಂಡೆ

    ಸಾವಿತ್ರಮ್ಮ, ಮಣಿಯಮ್ಮ ಅನಕ್ಷರಸ್ಥರಾದರೂ ಪುನೀತ್ ರಾಜಕುಮಾರ್ ಮೇಲಿನ ಅಭಿಮಾನದಿಂದ ಜನಪದ ಹಾಡು ಕಟ್ಟಿದ್ದು, ಈ ಹಾಡನ್ನು ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದಾರೆ.