Tag: Religious Places

  • ರಾಮಮಂದಿರದ ಜೊತೆಗೆ ಅಪವಿತ್ರಗೊಂಡ ಧಾರ್ಮಿಕ ಸ್ಥಳಗಳ ಜೀರ್ಣೋದ್ಧಾರ ಆಗಬೇಕು: ಯೋಗಿ ಕರೆ

    ರಾಮಮಂದಿರದ ಜೊತೆಗೆ ಅಪವಿತ್ರಗೊಂಡ ಧಾರ್ಮಿಕ ಸ್ಥಳಗಳ ಜೀರ್ಣೋದ್ಧಾರ ಆಗಬೇಕು: ಯೋಗಿ ಕರೆ

    ಜೈಪುರ: ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ನಿರ್ಮಾಣದ ಜೊತೆಗೆ ಅಪವಿತ್ರಗೊಂಡಿರುವ ಧಾರ್ಮಿಕ ಸ್ಥಳಗಳ (Religious Places) ಜೀರ್ಣೋದ್ಧಾರಕ್ಕಾಗಿ ಹೊಸ ಅಭಿಯಾನ ಆರಂಭಿಸಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಕರೆ ನೀಡಿದ್ದಾರೆ.

    ರಾಜಸ್ಥಾನದಲ್ಲಿರುವ (Rajasthan) ನೀಲಕಂಠ ಮಹಾದೇವ ದೇವಸ್ಥಾನದಲ್ಲಿ (Neelkanth Mahadev Temple) ನಡೆದ `ಮೂರ್ತಿ ಪ್ರತಿಷ್ಠಾಪನೆ ಹಾಗೂ ಜೀರ್ಣೋದ್ಧಾರ’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಅಪವಿತ್ರಗೊಂಡ ಧಾರ್ಮಿಕ ಸ್ಥಳಗಳನ್ನು ಪುನರ್ ಸ್ಥಾಪಿಸುವಂತೆ ಹೇಳಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಎಲ್ಲಾ ನಾನೇ ನಿರ್ಧಾರ ಮಾಡ್ತೀನಿ- ದೊಡ್ಡಗೌಡ್ರ ಗುಟುರಿಗೆ ಎಲ್ಲರೂ ಗಪ್ ಚಿಪ್

    `ಸನಾತನ ಧರ್ಮವು ಭಾರತದ ರಾಷ್ಟ್ರೀಯ ಧರ್ಮವಾಗಿದೆ. ಈ ಹಿಂದೆ ನಮ್ಮ ಧಾರ್ಮಿಕ ಸ್ಥಳಗಳನ್ನ ಅಪವಿತ್ರಗೊಳಿಸಿದ್ದಾರೆ. ಆದ್ರೆ 500 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಪರಿಶ್ರಮದೊಂದಿಗೆ ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದಕ್ಕೆ ಭಕ್ತರ ಕೊಡುಗೆ ಅಪಾರವಾಗಿದೆ. ಇದರೊಂದಿಗೆ ಅಪವಿತ್ರಗೊಂಡ ಧಾರ್ಮಿಕ ಸ್ಥಳಗಳ ಜೀರ್ಣೋದ್ಧಾರಕ್ಕಾಗಿ ಹೊಸ ಅಭಿಯಾನ ಶುರು ಮಾಡಬೇಕು ಎಂದು ಕರೆ ನೀಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಇಡೀ ದೇಶ ವಾಸಿಗಳು ತಮ್ಮ ಪರಂಪರೆಯನ್ನು ಗೌರವಿಸಿ, ಉಳಿಸುವಂತೆ ಮಾಡುವ ಪ್ರತಿಜ್ಞೆ ಮಾಡಿದ್ದರು. ಅದಕ್ಕೆ 1,400 ವರ್ಷಗಳ ನಂತರ ಭಗವಾನ್ ನೀಲಕಂಠ ದೇವಾಲಯದ ಪುನರ್ ಸ್ಥಾಪನೆಯು ಉದಾಹರಣೆಯಾಗಿದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಒಕ್ಕಲಿಗರ ಭದ್ರಕೋಟೆಯಲ್ಲಿ ಮತ್ತೆ ಡಿಕೆಶಿ ಸಿಎಂ ಜಪ- ಬಸವನ ಕಿವಿಯಲ್ಲಿ ತಮ್ಮ ಕೋರಿಕೆ ಹೇಳಿದ್ರಾ ಶಿವಕುಮಾರ್?

    ರಾಜಸ್ಥಾನದ ಭೂಮಿ ಧರ್ಮ, ಕರ್ಮ, ಭಕ್ತಿ ಮತ್ತು ಶಕ್ತಿ, ಸಮನ್ವಯದ ಕೇಂದ್ರ ಬಿಂದು. ನೀವು ಧರ್ಮದ ನೈಜ ರಹಸ್ಯಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ರಾಜಸ್ಥಾನಕ್ಕೆ ಬರುವುದು ಅವಶ್ಯಕ ಎಂದು ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಫಿನಾಡಲ್ಲಿ ಆಪರೇಷನ್ `ಮೈಕ್’ ತೀರ್ಮಾನ

    ಕಾಫಿನಾಡಲ್ಲಿ ಆಪರೇಷನ್ `ಮೈಕ್’ ತೀರ್ಮಾನ

    ಚಿಕ್ಕಮಗಳೂರು: ಹಿಂದೂಯೇತರ ವರ್ತಕರಿಗೆ ನಿರ್ಬಂಧ ಹಾಕಬೇಕು ಎಂಬ ಕೂಗಿನ ಮಧ್ಯೆಯೇ ಈಗ ಆಪರೇಷನ್ `ಮೈಕ್’ ಅಭಿಯಾನ ಶುರುವಾಗಿದೆ. ಚಿಕ್ಕಮಗಳೂರಿನ 13 ವಾರ್ಡ್‍ಗಳಲ್ಲಿರುವ ಪ್ರಾರ್ಥನಾ ಮಂದಿರ, ಚರ್ಚ್, ಮಸೀದಿಗಳ ಅನಧಿಕೃತ ಮೈಕ್‍ಗಳ ತೆರವಿಗೆ ನಗರಸಭೆ ನಿರ್ಧರಿಸಿದೆ.

    ಹಿಂದೂ-ಮುಸ್ಲಿಂ-ಕ್ರೈಸ್ತ ಸೇರಿದಂತೆ ಯಾವುದೇ ಧರ್ಮದ ಪ್ರಾರ್ಥನ ಮಂದಿರಗಳ ಮೇಲೆ ಅಕ್ರಮವಾಗಿ ಹಾಕಿರುವ ಮೈಕ್‍ಗಳನ್ನು ತೆರವುಗೊಳಿಸಲು ಚಿಕ್ಕಮಗಳೂರು ನಗರಸಭೆ ಮುಂದಾಗಿದೆ. ಮೂರು ವರ್ಷಗಳ ಬಳಿಕ ನಡೆದ ಚಿಕ್ಕಮಗಳೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಿದ ಚುಕ್ಕಾಣಿ ಹಿಡಿದಿತ್ತು. ಮಾರ್ಚ್ 25ರಂದು ನಡೆದ ಬಜೆಟ್‍ನಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಈ ತೀರ್ಮಾನ ಮಾಡಿದ್ದಾರೆ. ನಗರಸಭೆ ಅನುಮತಿ ಪಡೆಯದೆ, ನ್ಯಾಯಾಲಯದ ಸೂಚನೆಗಳನ್ನು ಮೀರಿ ಕಟ್ಟಿರುವ ಹಾಗೂ ಅವುಗಳನ್ನು ಬಳಸುತ್ತಿರುವ ಪ್ರಾರ್ಥನಾ ಮಂದಿರಗಳ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಮೋದಿ ವೆಬ್‍ಸೈಟ್ ಲಾಂಚ್ – ಈ ವೆಬ್‍ಸೈಟ್‍ನಲ್ಲಿದೆ ಮೋದಿಜಿ ಕುತೂಹಲಕಾರಿ ಕಥೆಗಳು

    ಚಿಕ್ಕಮಗಳೂರು ನಗರದ ಹಲವು ವಾರ್ಡ್‍ಗಳಲ್ಲಿ ಅಕ್ರಮವಾಗಿ ಪ್ರಾರ್ಥನಾ ಮಂದಿರಗಳು ಮೈಕ್ ಕಟ್ಟಿ ಬಳಸುತ್ತಿರುವುದರ ಬಗ್ಗೆ ಸ್ಥಳೀಯರು ನಗರಸಭೆಗೆ ದೂರು ನೀಡಿದ್ದಾರೆ. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ವರಸಿದ್ಧಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ. ಪ್ರಾರ್ಥನ ಮಂದಿರಗಳ ಮೇಲೆ ಮೈಕ್‍ಗಳನ್ನು ಅಳವಡಿಸಲು ನಗರಸಭೆ ಅನುಮತಿ ಬೇಕು. ಹಾಗಾಗಿ, ಅಕ್ರಮವಾಗಿ ಮೈಕ್‍ಗಳನ್ನು ಬಳಸುತ್ತಿರುವವರಿಗೆ ನಗರಸಭೆ ನೋಟಿಸ್ ನೀಡಲಿದ್ದು, ನಿಗದಿತ ಕಾಲಮಿತಿಯೊಳಗೆ ತಾವು ಪಡೆದಿರುವ ಅನುಮತಿ ಪತ್ರವನ್ನು ನಗರಸಭೆಗೆ ನೀಡಬೇಕು. ಅನುಮತಿ ಪತ್ರವನ್ನು ನಗರಸಭೆಗೆ ನೀಡದಿದ್ದರೆ, ಅನುಮತಿ ಪಡೆಯದಿದ್ದರೆ ಅಂತಹಾ ಯಾವುದೇ ಧರ್ಮದ ಪ್ರಾರ್ಥನಾ ಮಂದಿರಗಳಾದರೂ ತೆರವುಗೊಳಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಏಕಾಂಗಿ: ಡಿಕೆಶಿ ಅಂತರ ಕಾಯ್ದುಕೊಂಡಿದ್ದು ಏಕೆ..?

    ಸ್ಥಳೀಯರು ಕೂಡ ಪ್ರಾರ್ಥನ ಮಂದಿರಗಳ ಮೈಕ್‍ಗಳ ಹಾವಳಿಯಿಂದ ಬೇಸತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಸ್ಥಳೀಯರಾದ ವಿರೇಶ್, ಇಂತದ್ದೇ ಸಮಯದಲ್ಲಿ ಮೈಕ್‍ಗಳನ್ನು ಬಳಸಬೇಕೆಂದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಆದೇಶವಿದೆ. 11 ಡೆಸಿಬಲ್ ಒಳಗೆ ಇರಬೇಕು ಎಂದು ಕೋರ್ಟ್ ಹೇಳಿದೆ. ಆದರೆ ಮೈಕ್‍ಗಳ ಹಾವಳಿಯಿಂದ ಜನ ರೋಸಿ ಹೋಗಿದ್ದಾರೆ. ಮಕ್ಕಳು ಓದುವುದು ಕಷ್ಟವಾಗಿದೆ. ವೃದ್ಧರು ಮತ್ತು ಮಕ್ಕಳಿಗೂ ಸಮಸ್ಯೆಯಾಗಿದೆ. ಯಾವಾಗ ಬೇಕು ಆವಾಗ ಮೈಕ್‍ಗಳನ್ನು ಬಳಸುತ್ತಿರುವುದರಿಂದ ಮಾನಸಿಕ ನೆಮ್ಮದಿ ಕೂಡ ಹಾಳಾಗಿದೆ. ಹಾಗಾಗಿ ಕೋರ್ಟ್ ಆದೇಶದಂತೆ ಮೈಕ್‍ಗಳನ್ನು ಬಳಸುವುದು ಮತ್ತು ಆ ನಿಟ್ಟಿನಲ್ಲಿ ನಗರಸಭೆ ಕೈಗೊಂಡ ಕ್ರಮ ಸ್ವಾಗತಾರ್ಹ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ವಿಷಯವನ್ನು ಪ್ರಸ್ತಾಪ ಮಾಡೇ ಇಲ್ಲ: ಸ್ವಾಮೀಜಿಗಳ ಟೀಕೆ ಬಳಿಕ ಸಿದ್ದು ಸ್ಪಷ್ಟನೆ

    ನಗರಸಭೆ, ಸಮಾಜ ಹಾಗೂ ಜನಸಾಮಾನ್ಯರಿಗೆ ಶಾಂತಿ ತರುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬಂದಿದೆ. ಆದರೆ ನಗರಸಭೆಯ ಈ ನಡೆಗೆ ಕೆಲ ಕಾಂಗ್ರೆಸ್ ನಗರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ನಗರಸಭೆ ಕಾನೂನಿನ ಮಿತಿಯೊಳಗೆ ಇದ್ದರೆ ಯಾವುದೇ ತೊಂದರೆ ಇಲ್ಲ. ತೆರವು ಮಾಡುವುದಿಲ್ಲ. ಕಾನೂನಿನ ಮಿತಿಯಲ್ಲಿ ಇಲ್ಲದೆ, ಅಕ್ರಮವಾಗಿದ್ದರೆ ಮಾತ್ರ ತೆರವು ಎಂದು ನಗರಸಭೆ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.