Tag: Religious Leader

  • ಮತಾಂಧತೆ ಹೆಚ್ಚಾಗುತ್ತೆ, ಧಾರ್ಮಿಕ ಮುಖಂಡನ ಸಾವಾಗುತ್ತೆ: ಕೋಡಿಮಠದ ಶ್ರೀ ಭವಿಷ್ಯ

    ಮತಾಂಧತೆ ಹೆಚ್ಚಾಗುತ್ತೆ, ಧಾರ್ಮಿಕ ಮುಖಂಡನ ಸಾವಾಗುತ್ತೆ: ಕೋಡಿಮಠದ ಶ್ರೀ ಭವಿಷ್ಯ

    – ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಕೋಡಿಮಠದ ಶ್ರೀಗಳು ಹೇಳಿದ್ದೇನು?

    ಕೋಲಾರ: ಈವರ್ಷ ಧಾರ್ಮಿಕ ಮುಖಂಡನೊಬ್ಬನ (Religious Leader) ಸಾವಾಗುತ್ತೆ, ಮತಾಂಧತೆ ಹೆಚ್ಚಾಗುತ್ತದೆ. ಜಾಗತಿಕ ಮಟ್ಟದಲ್ಲಿ ಬಾಂಬ್ ಸ್ಫೋಟ ಸಂಭವಿಸುತ್ತೆ, ಭೂಕಂಪ ಆಗುತ್ತೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodimutt Swamiji) ಭವಿಷ್ಯ ನುಡಿದಿದ್ದಾರೆ.

    ಕೋಲಾರ (Kolara) ತಾಲೂಕಿನ ನರಸಾಪುರದ ಖಾಸಗಿ ಕಾರ್ಯಕ್ರಮದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವರ್ಷ ಜಾಗತಿಕ ಮಟ್ಟದಲ್ಲಿ ತೊಂದರೆ ಇದೆ. ಬೆಂಕಿ, ನೀರಿನ ಹಾವಳಿ, ಯುದ್ಧ ಆಗುತ್ತೆ. ಅನೇಕ ಸಾವು ನೋವುಗಳು ಸಂಭವಿಸುತ್ತೆ. ಮತಾದಂತೆ ಹೆಚ್ಚಾಗುತ್ತೆ, ಬಾಂಬ್ ಸ್ಫೋಟ ಸಂಭವಿಸುತ್ತೆ, ಭೂಕಂಪ ಆಗುತ್ತೆ. ಧಾರ್ಮಿಕ ಮುಖಂಡನ ಸಾವು ಸಹ ಆಗಲಿದೆ ಎಂದು ಆತಂಕಪಟ್ಟಿದ್ದಾರೆ.

    ಉತ್ತಮ ಮಳೆ-ಬೆಳೆ ಆಗುತ್ತೆ:
    ರಾಜ್ಯ ಹಾಗೂ ರಾಷ್ಟ್ರ ರಾಜಕಾರಣ ಕುರಿತು ಯುಗಾದಿ ಕಳೆದ ನಂತರ ಹೇಳುವೆ. ಒಂದು ತಿಂಗಳು ಕಳೆದ ಮೇಲೆ ಮಳೆ, ಬೆಳೆ, ರಾಜಕೀಯ, ದುಡಿಮೆ, ವ್ಯಾಪಾರ ಎಲ್ಲಾ ಗೊತ್ತಾಗಲಿದೆ. ಯುಗಾದಿ ನಂತರ ರಾಜ್ಯದಲ್ಲಿ ಒಳ್ಳೆಯ ಮಳೆ, ಬೆಳೆ ಆಗುವ ಲಕ್ಷಣಗಳಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಆನೆ ತುಳಿತಕ್ಕೆ ವ್ಯಕ್ತಿ ಬಲಿ; ಕರ್ನಾಟಕ ಸರ್ಕಾರದಿಂದ ಪರಿಹಾರ – ಈಶ್ವರ್‌ ಖಂಡ್ರೆ ಹೇಳಿದ್ದೇನು?

    ಗ್ಯಾರಂಟಿಗಳ ಬಗ್ಗೆ ನುಣುಚಿಕೊಂಡ ಶ್ರೀಗಳು:
    ಇದೇ ವೇಳೆ ರಾಜ್ಯ ಸರ್ಕಾರ ಗ್ಯಾರಂಟಿಗಳ (Gurantee Scheme) ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ನನಗಿಂತ ನಿಮಗೇ ಚೆನ್ನಾಗಿ ಗೊತ್ತು ಎಂದು ನುಣುಚಿಕೊಂಡಿದ್ದಾರೆ. ಯುಗಾದಿಯ ನಂತರ ನೂತನ ಸಂವತ್ಸರದ ಭವಿಷ್ಯ ಬರಲಿದೆ. ನಂತರ ರಾಷ್ಟ್ರ ರಾಜಕಾರಣದ ಬಗ್ಗೆಯೂ ಹೇಳುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಸತಿ ಶಾಲೆಯಲ್ಲಿ ಘೋಷವಾಕ್ಯ ಬದಲು; ಅಧಿಕಾರಿಯ ವಿರುದ್ಧ ಕ್ರಮ ವಹಿಸಿ: ಅಶೋಕ್ ಒತ್ತಾಯ

  • ಉಗ್ರ ಸಂಘಟನೆಗೆ ಬೆಂಬಲ ಆರೋಪ – ಪ್ರೊಫೆಸರ್ ಮನೆ ಮೇಲೆ NIA ದಾಳಿ

    ಉಗ್ರ ಸಂಘಟನೆಗೆ ಬೆಂಬಲ ಆರೋಪ – ಪ್ರೊಫೆಸರ್ ಮನೆ ಮೇಲೆ NIA ದಾಳಿ

    ಶ್ರೀನಗರ: ಭಯೋತ್ಪಾದನಾ ಚಟುವಟಿಕೆಗಳಿಗೆ ನಿಧಿ (Terror Funding) ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ತಂಡ ಮಂಗಳವಾರ ಬೆಳ್ಳಂಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir)ದಾಳಿ ನಡೆಸಿದೆ.

    ಬೆಳಗ್ಗೆಯೇ ಕಾರ್ಯಾಚರಣೆ ಶುರು ಮಾಡಿರುವ ಎನ್‌ಐಎ (NIA) ಪೂಂಚ್, ರಜೌರಿ, ಪುಲ್ವಾಮಾ, ಶೋಪಿಯಾನ್, ಶ್ರೀನಗರ, ಬುದ್ಗಾಮ್ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ಪೊಲೀಸರು (Police) ಮತ್ತು ಅರೆಸೈನಿಕ ಸಿಬ್ಬಂದಿಯ ನೆರವಿನೊಂದಿಗೆ ದಾಳಿ ನಡೆಸಿದೆ. ಇದನ್ನೂ ಓದಿ: 856 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಉಜ್ಜಯಿನಿ ದೇಗುಲ ಇಂದು ಲೋಕಾರ್ಪಣೆ

    ಇದೇ ವೇಳೆ ಧಾರ್ಮಿಕ ಮುಖಂಡರಾದ (Religious Leader) ದಾರುಲ್ ಉಲೂಮ್ ರಹೀಮಿಯಾ ಬಂಡಿಪೋರಾ, ಮೌಲಾನಾ ರೆಹಮತ್ ಉಲ್ಲಾ ಖಾಸ್ಮಿ ಹಾಗೂ ಎನ್‌ಐಟಿ ಶ್ರೀನಗರದ ಪ್ರೊಫೆಸರ್ (Professor) ಸಮಮ್ ಅಹ್ಮದ್ ಲೋನ್ ಅವರ ಮನೆಗಳ ಮೇಲೆ ನಡೆಸಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಪುಟಿನ್ ಕನಸಿನ ಸೇತುವೆ ಧ್ವಂಸಗೊಳಿಸಿದ್ದಕ್ಕೆ ಕೆರಳಿದ ರಷ್ಯಾ – ಉಕ್ರೇನ್ ಮೇಲೆ ಮತ್ತಷ್ಟು ತೀವ್ರ ದಾಳಿ

    ಇತ್ತೀಚೆಗೆ ದೇಶದ 15 ರಾಜ್ಯಗಳಲ್ಲಿ 93 ಕಡೆ ದಾಳಿ ನಡೆಸಿ ನೂರಾರು ಪಿಎಫ್‌ಐ ಕಾರ್ಯಕರ್ತರು, ಮುಖ್ಯಸ್ಥರನ್ನು ಬಂಧಿಸಿದ್ದ ಎನ್‌ಐಎ ತಂಡ ಇದೀಗ ಮತ್ತೆ ತನ್ನ ಅಬ್ಬರ ಶುರು ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಅನುಮಾನಾಸ್ಪದವಾಗಿ ರಕ್ತದ ಮಡುವಿನಲ್ಲಿ 22ರ ಧರ್ಮಗುರು ಶವ ಪತ್ತೆ

    ಅನುಮಾನಾಸ್ಪದವಾಗಿ ರಕ್ತದ ಮಡುವಿನಲ್ಲಿ 22ರ ಧರ್ಮಗುರು ಶವ ಪತ್ತೆ

    – ತಲೆಯ ಭಾಗದಲ್ಲಿ ಗಾಯ ಪತ್ತೆ, ತನಿಖೆ ಆರಂಭ

    ಭೋಪಾಲ್: 22 ವರ್ಷದ ಧರ್ಮಗುರುವಿನ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಮಧ್ಯ ಪ್ರದೇಶದ ಉಜೈನ್ ನಗರದ ನಾಗಾದದಲ್ಲಿ ನಡೆದಿದೆ. ಇಂದು ಬೆಳಗ್ಗೆ ಧರ್ಮಗುರುವಿನ ಶವ ಮನೆಯ ಮುಂಭಾಗ ಪತ್ತೆಯಾಗಿದೆ.

    ಬೊಹ್ರಾ ಸಮಾಜದ 22 ವರ್ಷದ ಮುರ್ತುಜಾ ಮೃತ ಧರ್ಮಗುರು. ಮುರ್ತುಜಾ ಮೂಲತಃ ಖಂಡ್ವಾ ನಿವಾಸಿಯಾಗಿದ್ದು, ಕಳೆದ ಒಂದು ವರ್ಷದಿಂದ ನಾಗಾದದಲ್ಲಿ ವಾಸವಾಗಿ ತಮ್ಮ ಸಮಾಜದ ಮಕ್ಕಳಿಗೆ ಧರ್ಮದ ಕುರಿತು ಶಿಕ್ಷಣ ನೀಡುವ ಕೆಲಸ ಮಾಡಿಕೊಂಡಿದ್ದರು.

    ಮಿರ್ಚಿ ಬಜಾರ್ ನಲ್ಲಿಯ ಜಾಬೀರ್ ಎಂಬವರ ಮನೆ ಬಾಡಿಗೆ ಪಡೆದುಕೊಂಡಿದ್ದ ಮುರ್ತುಜಾ ಒಬ್ಬರೇ ವಾಸವಾಗಿದ್ದರು. ಇಂದು ಬೆಳಗ್ಗೆ ಮನೆ ಕೆಲಸದಾಕೆ ಬಂದಾಗ ಮೆಟ್ಟಿಲ ಬಳಿ ಮುರ್ತುಜಾ ಶವ ಕಂಡಿದೆ. ಕೂಡಲೇ ಭಯಗೊಂಡ ಮಹಿಳೆ ಸ್ಥಳೀಯರಿಗೆ ವಿಷಯ ತಿಳಿಸಿದ್ದಾಳೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನ ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಕುಟುಂಬಸ್ಥರಿಗೆ ವಿಷಯ ತಲುಪಿಸಿದ್ದಾರೆ. ಮೆಟ್ಟಿಲಿನಿಂದ ಕೆಳಗೆ ಇಳಿಯುವಾಗ ಆಯಕತಪ್ಪಿ ಬಿದ್ದಿದ್ದರಿಂದ ತಲೆ ಭಾಗದಲ್ಲಿ ಪೆಟ್ಟು ಆಗಿದೆ. ತಲೆ ಭಾಗದಲ್ಲಾದ ಗಾಯದಿಂದ ತೀವ್ರ ರಕ್ತಸ್ರಾವವಾದ ಹಿನ್ನೆಲೆ ಧರ್ಮಗುರು ಸಾವನ್ನಪ್ಪಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.