Tag: Religious Convert

  • ಹಿಂದೂ ಧರ್ಮ ತ್ಯಜಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಬಂದರೆ ಕಷ್ಟಗಳು ದೂರ – ಮತಾಂತರಕ್ಕೆ ಯತ್ನಿಸಿದ ವ್ಯಕ್ತಿ ಬಂಧನ

    ಹಿಂದೂ ಧರ್ಮ ತ್ಯಜಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಬಂದರೆ ಕಷ್ಟಗಳು ದೂರ – ಮತಾಂತರಕ್ಕೆ ಯತ್ನಿಸಿದ ವ್ಯಕ್ತಿ ಬಂಧನ

    ಶಿವಮೊಗ್ಗ: ಹಿಂದೂ ಧರ್ಮ ತ್ಯಜಿಸಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರ್ಪಡೆಯಾದರೆ ನಿಮ್ಮ ಕಷ್ಟಗಳೆಲ್ಲಾ ದೂರ ಆಗುತ್ತವೆ ಎಂದು ನಂಬಿಸಿ, ಬಲವಂತವಾಗಿ ಮತಾಂತರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದಿದೆ.

    ಬಂಧಿತನನ್ನು ಮಧು ಫಾಸ್ಟರ್ (34) ಎಂದು ಗುರುತಿಸಲಾಗಿದೆ. ಬೊಮ್ಮನಕಟ್ಟೆ ನಿವಾಸಿ, ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಶಿವಕುಮಾರ್ ಎಂಬುವರ, 3 ವರ್ಷದ ಮಗ ಅಖಿಲ್ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ತನ್ನ ಮಗನ ಆರೋಗ್ಯ ಸಮಸ್ಯೆಗೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೂ ಮಗನ ಆರೋಗ್ಯ ಸುಧಾರಿಸಿರಲಿಲ್ಲ. ನಂತರ ಶಿವಕುಮಾರ್‌ಗೆ ಕ್ರಿಶ್ಚಿಯನ್ ಧರ್ಮದ ಮಧು ಪಾದ್ರಿ ಪರಿಚಯವಾಗಿದೆ. ಪರಿಚಯದ ನಂತರ ಶಿವಕುಮಾರ್ ಮಗನ ಆರೋಗ್ಯ ಸಮಸ್ಯೆಯನ್ನು ದುರುಪಯೋಗ ಪಡಿಸಿಕೊಂಡ ಮಧು, ನಿನ್ನ ಮಗನ ಆರೋಗ್ಯ ಸಮಸ್ಯೆ ಸುಧಾರಿಸಬೇಕು ಅಂದರೆ ಹಿಂದೂ ಧರ್ಮ ತ್ಯಜಿಸಿ, ಕ್ರಿಶ್ಚಿಯನ್ ಧರ್ಮಕ್ಕೆ ಸೇರ್ಪಡೆಯಾಗು. ಜೊತೆಗೆ ನಿಮ್ಮ ಮನೆಯಲ್ಲಿರುವ ಹಿಂದೂ ದೇವರ ಫೋಟೋಗಳನ್ನು ತೆಗೆದು ಹಾಕುವಂತೆ ತಿಳಿಸಿದ್ದಾನೆ. ಇದನ್ನೂ ಓದಿ: ಹಾಸ್ಟೆಲ್ ವಾರ್ಡನ್‍ನಿಂದ ಮತಾಂತರ ಕಿರುಕುಳ – ವಿದ್ಯಾರ್ಥಿನಿ ಆತ್ಮಹತ್ಯೆ

    ಅಷ್ಟೇ ಅಲ್ಲದೇ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಕೆಲವು ಪುಸ್ತಕಗಳನ್ನು ನೀಡಿ, ಇವುಗಳನ್ನು ಮನೆಯಲ್ಲಿ ಇಟ್ಟುಕೊಂಡು ಪ್ರಾರ್ಥನೆ ಮಾಡುವಂತೆ ತಿಳಿಸಿದ್ದಾನೆ. ಅಲ್ಲದೇ ಮಧು ಪಾದ್ರಿ ಬೊಮ್ಮನಕಟ್ಟೆ ಸಮೀಪ ಖಾಲಿ ನಿವೇಶನ ಒತ್ತುವರಿ ಮಾಡಿಕೊಂಡು, ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸಿ ಅಲ್ಲಿ ಹಲವು ಮಂದಿಯನ್ನು ಸೇರಿಸಿ ಪ್ರಾರ್ಥನೆ ಮಾಡಿಸುತ್ತಿದ್ದ. ಇದೆಲ್ಲಾದರಿಂದ ಬೇಸತ್ತ ಶಿವಕುಮಾರ್, ಮಧು ಪಾದ್ರಿ ಎಂಬಾತ ನನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾನೆ ಎಂದು ಆರೋಪಿಸಿ, ಮಧು ಪಾದ್ರಿ ವಿರುದ್ಧ ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಮತಾಂತರವಾಗುವಂತೆ ಅಣ್ಣನ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ತಮ್ಮ

    ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ಮಧು ಪಾದ್ರಿಯನ್ನು ಬಂಧಿಸಿದ್ದಾರೆ. ಅಲ್ಲದೇ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡವನ್ನು ನೆಲಸಮಗೊಳಿಸಿದ್ದಾರೆ.

  • ಹಾಸ್ಟೆಲ್ ವಾರ್ಡನ್‍ನಿಂದ ಮತಾಂತರ ಕಿರುಕುಳ – ವಿದ್ಯಾರ್ಥಿನಿ ಆತ್ಮಹತ್ಯೆ

    ಹಾಸ್ಟೆಲ್ ವಾರ್ಡನ್‍ನಿಂದ ಮತಾಂತರ ಕಿರುಕುಳ – ವಿದ್ಯಾರ್ಥಿನಿ ಆತ್ಮಹತ್ಯೆ

    ಚೆನ್ನೈ: ಹಾಸ್ಟೆಲ್ ವಾರ್ಡನ್, ಶಾಲಾ ಬಾಲಕಿಯೋರ್ವಳ ಕುಟುಂಬವನ್ನು ಮತಾಂತರ ಆಗುವಂತೆ ಪೀಡಿಸುತ್ತಿದ್ದ ಹಿನ್ನೆಲೆ ಬಾಲಕಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಂಜವೂರ್‌ನಲ್ಲಿ ವರದಿಯಾಗಿದೆ.

    ಬಾಲಕಿ ಸಾವಿಗೆ ಶರಣಾಗುವ ಮುನ್ನ ವೀಡಿಯೋ ಮಾಡಿದ್ದು, ನನ್ನ ಕುಟುಂಬಕ್ಕೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವಂತೆ ನನ್ನ ಹಾಸ್ಟೆಲ್ ವಾರ್ಡನ್ ಕಿರುಕುಳ ನೀಡುತ್ತಿದ್ದು, ಅಷ್ಟೇ ಅಲ್ಲದೆ ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಹಾಗಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಬಾಲಕಿ ಹೇಳಿಕೊಂಡಿದ್ದಾಳೆ. ಈ ಘಟನೆ ಜನವರಿ 9 ರಂದು ನಡೆದಿದೆ. ವಿಷ ಸೇವಿಸಿದ ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾಳೆ. ಇದನ್ನೂ ಓದಿ: ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯನ್ನ ಎಳೆದೊಯ್ದು ಅತ್ಯಾಚಾರ ಮಾಡಿದ್ರು

    ಬಾಲಕಿ ತಿಳಿಸಿರುವಂತೆ ಹಾಸ್ಟೆಲ್ ವಾರ್ಡನ್ ಮೊದಲು ಬಾಲಕಿಯ ಪೋಷಕರಲ್ಲಿ ಆಕೆಯ ಶಿಕ್ಷಣದ ಜವಾಬ್ದಾರಿಯನ್ನು ಹೊರುವುದಾಗಿ ತಿಳಿಸಿದ್ದರಂತೆ. ಬಳಿಕ ಆಕೆಯ ಕುಟುಂಬಕ್ಕೆ ಮತಾಂತರವಾಗುವಂತೆ ಕಿರುಕುಳ ನೀಡಿದ್ದಾರೆ ಎಂದು ಬಾಲಕಿಯ ವೀಡಿಯೋ ಹೇಳಿಕೆಯನ್ನು ಪರಿಗಣಿಸಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಈಗಾಗಲೇ ಹಾಸ್ಟಲ್‌ ವಾರ್ಡನ್‌ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಡಾನ್ಸ್ ಮಾಡಿದ ವಧುವಿನ ಕೆನ್ನೆಗೆ ಹೊಡೆದ ವರ- ಮದುವೆ ಮುರಿದು ಬಿತ್ತು

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ವೀಡಿಯೋ  ಶೇರ್ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದ್ದಾರೆ. ಇತ್ತ ಈ ಪ್ರಕರಣ ರಾಜಕೀಯ ತಿರುವು ಕೂಡ ಪಡೆದುಕೊಳ್ಳುತ್ತಿದೆ.