Tag: Religious Centre

  • ದಾಂಡಿಯಾ ಪೆಂಡಾಲ್‌ನಲ್ಲಿ ಮುಸ್ಲಿಮ್ ಯುವಕರಿಗೆ ಏನು ಕೆಲಸ – ಮುತಾಲಿಕ್ ಪ್ರಶ್ನೆ

    ದಾಂಡಿಯಾ ಪೆಂಡಾಲ್‌ನಲ್ಲಿ ಮುಸ್ಲಿಮ್ ಯುವಕರಿಗೆ ಏನು ಕೆಲಸ – ಮುತಾಲಿಕ್ ಪ್ರಶ್ನೆ

    ಉಡುಪಿ: ಅಲ್ಲಾಹ್ ಒಬ್ಬನೇ ದೇವರನ್ನುವವರಿಗೆ ನವರಾತ್ರಿ ಉತ್ಸವದಲ್ಲಿ ಏನು ಕೆಲಸ ಎಂದು ಶ್ರೀರಾಮಸೇನೆ (SriRamasena) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಪ್ರಶ್ನಿಸಿದ್ದಾರೆ.

    ದೇಶಾದ್ಯಂತ ನಡೆಯುತ್ತಿರುವ ಧಾರ್ಮಿಕ ಸಂಘರ್ಷಕ್ಕೆ ಸಂಬಂಧಿಸಿದಂತೆ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು, ದಾಂಡಿಯಾ ಪೆಂಡಾಲ್‌ಗೆ (Dhadia Pendal) ಮುಸ್ಲಿಂ ಯುವಕರಿಗೆ (Muslim Youth) ನಿರ್ಬಂಧ ಹೇರಬೇಕು ಎಂದಿದ್ದಾರೆ. ಇದನ್ನೂ ಓದಿ: ನವರಾತ್ರಿ ಪೂಜಾ ಕೈಂಕರ್ಯಗಳು ಸಂಪನ್ನ- ನಾಳೆ ಆಯುಧಗಳಿಗೆ ಪೂಜೆ

    ದಾಂಡಿಯಾ ಹಿಂದೂಗಳ ಧಾರ್ಮಿಕ ಸಂಪ್ರದಾಯ. ವಿಕೃತಿ ಮೆರೆಯಲು ಹಾಗೂ ಹಿಂದೂ ಹುಡುಗಿಯರನ್ನು ಪಟಾಯಿಸುವ ಉದ್ದೇಶಕ್ಕೆ ಬರುತ್ತಾರೆ. ಲವ್ ಜಿಹಾದ್ (Love Jihad) ಮಾಡಲು ದಾಂಡಿಯಾ ಪೆಂಡಾಲ್‌ಗೆ ಬರುತ್ತಾರೆ. ನಮ್ಮ ಸಮಾಜ ಅವರನ್ನ ಸಂಪೂರ್ಣವಾಗಿ ಬಹಿಷ್ಕಾರ ಮಾಡಬೇಕು. ಹಿಂದೂ ಶ್ರದ್ಧಾಕೇಂದ್ರ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನ್ಯ ಧರ್ಮೀಯರು, ದುರುದ್ದೇಶದಿಂದ ಬಂದರೆ ಅವರನ್ನು ಸೇರಿಸಿಕೊಳ್ಳಬಾರದು ಎಂದು ಮುತಾಲಿಕ್ ಹೇಳಿದರು.

    Live Tv
    [brid partner=56869869 player=32851 video=960834 autoplay=true]