Tag: religious center

  • ಧಾರ್ಮಿಕ ಕೇಂದ್ರಗಳ ನಿರ್ಲಕ್ಷ್ಯಕ್ಕೆ ಗುಲಾಮಗಿರಿ ಮನಸ್ಥಿತಿಯೇ ಕಾರಣ – ಮೋದಿ

    ಧಾರ್ಮಿಕ ಕೇಂದ್ರಗಳ ನಿರ್ಲಕ್ಷ್ಯಕ್ಕೆ ಗುಲಾಮಗಿರಿ ಮನಸ್ಥಿತಿಯೇ ಕಾರಣ – ಮೋದಿ

    ಡೆಹ್ರಾಡೂನ್: ದೇಶದಾದ್ಯಂತ ಇರುವ ಧಾರ್ಮಿಕ ಕೇಂದ್ರಗಳನ್ನು (Religious Center) ಹಿಂದಿನ ಸರ್ಕಾರಗಳು ನಿರ್ಲಕ್ಷಿಸಿದ್ದವು. ಗುಲಾಮಗಿರಿ ಮನಸ್ಥಿತಿಯೇ ಇದಕ್ಕೆ ಕಾರಣ. ಈಗ ಅವುಗಳ ವೈಭವ ಮರುಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.

    ಉತ್ತರಾಖಂಡದ ಭಾರತ-ಚೀನಾ ಗಡಿಯಲ್ಲಿರುವ ಮನ ಗ್ರಾಮದಲ್ಲಿ ಕೇದಾರನಾಥ (Kedarnath Temple) ಮತ್ತು ಹೇಮಕುಂಡ್ ಸಾಹಿಬ್ ರೋಪ್ ವೇ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಕಾಶಿ ವಿಶ್ವನಾಥ ದೇವಾಲಯ (Kashi Vishwanath Temple), ಉಜ್ಜಯಿನಿ ಮತ್ತು ಅಯೋಧ್ಯೆಯಲ್ಲಿ ಈಚೆಗೆ ಪುನರ್‌ನಿರ್ಮಾಣ ಕಾರ್ಯಗಳು ನಡೆದಿರುವುದನ್ನು ಉದಾಹರಣೆ ನೀಡಿ ಅವರು ಮಾತನಾಡಿದರು. ಇದನ್ನೂ ಓದಿ: 4ರ ಬಾಲಕಿ ಮೇಲೆ ಪ್ರಾಂಶುಪಾಲರ ಚಾಲಕನಿಂದ ಅತ್ಯಾಚಾರ – ಶಾಲೆಯನ್ನೇ ಮುಚ್ಚಿಸಿದ ಸರ್ಕಾರ

    ನಮ್ಮ ಧಾರ್ಮಿಕ ಕೇಂದ್ರಗಳು ಕೇವಲ ಕಟ್ಟಡಗಳಲ್ಲ. ಅವು ನಮ್ಮ ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆಯ ಸಂಕೇತಗಳು. ಆದರೆ ಹಿಂದಿನ ಸರ್ಕಾರಗಳು (Government) ಧಾರ್ಮಿಕ ಕೇಂದ್ರಗಳನ್ನು ನಿರ್ಲಕ್ಷಿಸಿದ್ದವು. ಗುಲಾಮಗಿರಿ ಮನಸ್ಥಿತಿಯೇ ಇದಕ್ಕೆ ಕಾರಣ ಎಂದು ಕುಟುಕಿದರು. ಇದನ್ನೂ ಓದಿ: ಅಭಿಮಾನಿಗಳ ಮೂಲಕ ಅಪ್ಪು ಇನ್ನೂ ಜೀವಂತವಾಗಿದ್ದಾರೆ: ನಟಿ ರಮ್ಯಾ

    ಹಿಮಾಲಯದ ತಪ್ಪಲಿನ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯು ಯಾತ್ರಿಕರಿಗೆ ಅನುಕೂಲ ಉಂಟುಮಾಡುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಸಿದೆ. ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡಿದೆ. ಹೇಮಕುಂಡ್ ಸಾಹಿಬ್ ಗುರುದ್ವಾರಕ್ಕೆ ರೋಪ್‌ವೇ ನಿರ್ಮಿಸುವ ಯೋಜನೆಗೆ ಚಾಲನೆ ನೀಡಿರುವುದು ದೇಶದಲ್ಲಿ ಮಾತ್ರವಲ್ಲದೆ ಬ್ರಿಟನ್, ಜರ್ಮನಿ ಕೆನಡಾದಲ್ಲಿ ನೆಲೆಸಿರುವ ಸಿಖ್ ಸಮುದಾಯದವರಲ್ಲಿ ಹರ್ಷ ಉಂಟುಮಾಡಿದೆ ಎಂದು ಶ್ಲಾಘಿಸಿದರು.

    ಇದಕ್ಕೂ ಮೊದಲು ಮೋದಿ ಅವರು ಕೇದಾರನಾಥ ಮತ್ತು ಬದರೀನಾಥ ದೇವಾಲಯಗಳಿಗೆ ಭೇಟಿ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮೈಕ್ ಅನುಮತಿ ಪಡೆಯೋದ್ರಲ್ಲಿ ಹಿಂದೂ ದೇಗುಲಗಳ ನಿರಾಸಕ್ತಿ – ಮಸೀದಿ, ಚರ್ಚ್‌ಗಳೇ ಟಾಪ್

    ಮೈಕ್ ಅನುಮತಿ ಪಡೆಯೋದ್ರಲ್ಲಿ ಹಿಂದೂ ದೇಗುಲಗಳ ನಿರಾಸಕ್ತಿ – ಮಸೀದಿ, ಚರ್ಚ್‌ಗಳೇ ಟಾಪ್

    ಬೆಂಗಳೂರು: ರಾಜ್ಯದಲ್ಲಿ ಮೈಕ್ ದಂಗಲ್ ಬಳಿಕ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಸಲು ಪೊಲೀಸರ ಅನುಮತಿ ಕಡ್ಡಾಯ ಮಾಡಲಾಗಿದೆ. ಅದರಂತೆ, ಕೊಟ್ಟ ಗಡುವಿನಲ್ಲಿ ಧಾರ್ಮಿಕ ಕೇಂದ್ರಗಳು ಅನುಮತಿ ಪಡೆದಿವೆ.

    loudspeakers

    ವಿಶೇಷವೆಂದರೆ ಮೈಕ್ ಅನುಮತಿ ಪಡೆದ ಧಾರ್ಮಿಕ ಕೇಂದ್ರಗಳ ಪಟ್ಟಿಯಲ್ಲಿ ದೇಗುಲಗಳೇ ಅತಿ ಕಡಿಮೆ ಇವೆ. ಮೈಕ್ ಅನುಮತಿ ಪಡೆಯೋದ್ರದಲ್ಲಿ ದೇಗುಲಗಳು ಹಿಂದುಳಿದಿದ್ದು, ಮಸೀದಿ, ಚರ್ಚ್‌ಗಳು ಹೆಚ್ಚಿನ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಂಡಿವೆ. ಬೆಂಗಳೂರಲ್ಲಿ ಸಲ್ಲಿಕೆ ಆಗಿದ್ದ 1,530 ಅರ್ಜಿಗಳ ಪೈಕಿ 797 ಅರ್ಜಿಗಳು ಮಸೀದಿಗಳಿಂದಲೇ ಸಲ್ಲಿಕೆಯಾಗಿವೆ. ಒಟ್ಟು ಅರ್ಜಿಗಳ ಪೈಕಿ 10 ಅರ್ಜಿಗಳು ರದ್ದಾಗಿದ್ದು, 79 ಅರ್ಜಿಗಳು ಇನ್ನೂ ಪರಿಶೀಲನೆ ಹಂತದಲ್ಲಿದೆ. ಇದನ್ನೂ ಓದಿ: ಬರಗೂರು ಸಮಿತಿಯ ಪರಿಷ್ಕೃತ ಪಠ್ಯಪುಸ್ತಕದ ಗುಣಮಟ್ಟ ಸರಿಯಿಲ್ಲ: NCERT

    LOUDSPEAKER (1)

    ನಗರದಲ್ಲಿ ಒಟ್ಟು 308 ದೇಗುಲಗಳು ಅರ್ಜಿ ಸಲ್ಲಿಸಿದ್ದು, 295 ದೇಗುಲಗಳು ಅನುಮತಿ ಪಡೆದುಕೊಂಡಿದೆ. ಹಾಗೆಯೇ 797 ಮಸೀದಿಗಳಿಂದ ಅರ್ಜಿ ಸಲ್ಲಿಕೆಯಾಗಿದ್ದು, 762 ಮಸೀದಿಗಳು ಅನುಮತಿ ಪಡೆದಿವೆ. 358 ಚರ್ಚ್‌ಗಳಿಂದ ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ 320 ಚರ್ಚ್‌ಗಳಿಗೆ ಮೈಕ್‌ಗಳನ್ನು ಬಳಸಲು ಅನುಮತಿ ನೀಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಧ್ವನಿವರ್ಧಕ ಬಳಕೆಗೆ ನಿಯಮ ಜಾರಿ –  ಮಾರ್ಗಸೂಚಿಯಲ್ಲಿ ಏನಿದೆ?

    ಧ್ವನಿವರ್ಧಕ ಬಳಕೆಗೆ ನಿಯಮ ಜಾರಿ – ಮಾರ್ಗಸೂಚಿಯಲ್ಲಿ ಏನಿದೆ?

    ಬೆಂಗಳೂರು: ಧ್ವನಿವರ್ಧಕ ಬಳಕೆಯಲ್ಲಿ ನಿಯಮ ಉಲ್ಲಂಘನೆಯಾದರೆ, ಡಿವೈಎಸ್‌ಪಿ ದರ್ಜೆಯಿಂದ ಮೇಲ್ಪಟ್ಟು ರಾಜ್ಯ ಪೊಲೀಸ್ ಮಹಾನಿರ್ದೇಶಕರ ದರ್ಜೆವರೆಗೂ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಕ್ರಮ ಕೈಗೊಳ್ಳುವ ಅಧಿಕಾರ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    GOVERNMENT OF KARNATAKA NOTICE (1)

    ಈಗಾಗಲೇ ಧ್ವನಿವರ್ಧಕಗಳ ಬಳಕೆಗೆ 15 ದಿನಗಳ ಒಳಗಾಗಿ ಕಡ್ಡಾಯವಾಗಿ ಅನುಮತಿ ಪಡೆಯುವಂತೆ ಸೂಚಿಸಿದೆ. ಎಲ್ಲ ಧಾರ್ಮಿಕ ಕೇಂದ್ರಗಳು ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲೂ ಧ್ವನಿವರ್ಧಕ ಬಳಸುವುದಕ್ಕೂ ಅನುಮತಿ ಕಡ್ಡಾಯಗೊಳಿಸಿದೆ. ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಹಾಗೂ ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿರುವ ಮಿತಿಯಲ್ಲೇ ಮೈಕ್‌ಗಳ ಶಬ್ಧ ಪ್ರಮಾಣ ಇರಬೇಕು. ವಸತಿ ಪ್ರದೇಶಗಳಲ್ಲಿ ರಾತ್ರಿ 10ರ ಬಳಿಕ ವಾಹನಗಳ ಹಾರ್ನ್ ಗಳಿಗೂ ನಿರ್ಬಂಧವಿರಬೇಕು ಎಂದು ಆದೇಶಿಸಿದೆ.

    GOVERNMENT OF KARNATAKA NOTICE (1)

    ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಗಳ ಬಳಕೆಗೆ ಲಿಖಿತ ಅನುಮತಿ ಪಡೆದಿರಬೇಕು ಈ ಮಾರ್ಗಸೂಚಿ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸೂಚಿಸಿದೆ.

    ಅನುಮತಿ ನೀಡಲು 2 ಹಂತದ ಸಮಿತಿ: ಧ್ವನಿವರ್ಧಕಗಳಿಗೆ ಅನುಮತಿ ಕೊಡಲು 2 ಹಂತದಲ್ಲಿ ಸರ್ಕಾರ ಸಮಿತಿ ರಚನೆ ಮಾಡಲಿದೆ. ಕಮಿಷನರೇಟ್ ಜಿಲ್ಲೆಗಳಲ್ಲಿ ಮೊದಲ ಸಮಿತಿ ರಚಿಸಬೇಕು. ಈ ಸಮಿತಿಯಲ್ಲಿ ಎಸಿಪಿ, ಸ್ಥಳೀಯ ಸಂಸ್ಥೆಯ ಕಾರ್ಯಕಾರಿ ಇಂಜಿನಿಯರ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಒಬ್ಬರು ಸದಸ್ಯರಿರುತ್ತಾರೆ. ಉಳಿದ ಜಿಲ್ಲೆಗಳಲ್ಲಿ 2ನೇ ಸಮಿತಿ ರಚಿಸಬೇಕು. ಇದರಲ್ಲಿ ಡಿವೈಎಸ್ಪಿ, ತಹಸಿಲ್ದಾರ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಒಬ್ಬರು ಸದಸ್ಯರಿರುತ್ತಾರೆ. ಎಲ್ಲ ಪರಿಶೀಲಿಸಿ ಈ ಸಮಿತಿಗಳು ಧ್ವನಿವರ್ಧಕಗಳಿಗೆ ಅನುಮತಿ ಕೊಡಲಿವೆ.

    GOVERNMENT OF KARNATAKA NOTICE

    ಸಾರ್ವಜನಿಕ ಸ್ಥಳಗಳಲ್ಲಿ 10 ರಿಂದ 75 ಡೆಸಿಬಲ್, ಖಾಸಗಿ ಸ್ಥಳಗಳಲ್ಲಿ ಸ್ವಂತ ಸೌಂಡ್ ಸಿಸ್ಟಂಗಳ ಬಳಕೆಗೆ 5 ಡಿಸಿಬಲ್ ಶಬ್ಧ ಮಿತಿ ಇರಬೇಕು. ಹೊರತಾಗಿ ರಾತ್ರಿ 10ರ ಬಳಿಕ ಡ್ರಂ, ಟ್ರಂಪೆಟ್, ಟಂ-ಟಂ, ಇತರೆ ಶಬ್ಧ ಉಂಟು ಮಾಡುವ ಸಾಧನಗಳ ಬಳಕೆಯನ್ನೂ ನಿಷೇಧಿಸಲಾಗಿದೆ ಎಂದು ಆದೇಶ ಪ್ರತಿ ಹೇಳಿದೆ.

    ಸದ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ಅನುಮತಿ ಕೊಡಲು 2 ಹಂತದ ಸಮಿತಿಗಳ ರಚನೆ ಹೊರತುಪಡಿಸಿದರೆ ಹೊಸ ಟಫ್ ರೂಲ್ಸ್‌ಗಳು  ಇಲ್ಲ. ಉಳಿದಂತೆ 2005ರ ಸುಪ್ರೀಂ ಕೋರ್ಟ್ ಆದೇಶ, 1986ರ ಪರಿಸರ ಸಂರಕ್ಷಣೆ ಕಾಯ್ದೆ ಹಾಗೂ 2002 ರ ಕರ್ನಾಟಕ ಸರ್ಕಾರದ ಆದೇಶಗಳ ಪಾಲನೆಗೆ ತಾಕೀತು ಮಾಡಿದೆ.

    GOVERNMENT OF KARNATAKA NOTICE

    ಶಬ್ಧ ಪ್ರಮಾಣ ಎಲ್ಲಿ ಎಷ್ಟಿರಬೇಕು?

    • ಸಾರ್ವಜನಿಕ ಸ್ಥಳ- 10 ರಿಂದ 75 ಡೆಸಿಬಲ್
    • ಖಾಸಗಿ ಸ್ಥಳ – 5 ಡೆಸಿಬಲ್ (ಸ್ವಂತ ಸೌಂಡ್ ಸಿಸ್ಟಂಗಳ ಬಳಕೆ)
    • ಕೈಗಾರಿಕಾ ಪ್ರದೇಶ – ಹಗಲು 75 ಡೆಸಿಬಲ್, ರಾತ್ರಿ 70 ಡೆಸಿಬಲ್
    • ವಾಣಿಜ್ಯ ಚಟುವಟಿಕೆ ಪ್ರದೇಶ – ಹಗಲು 65 ಡೆಸಿಬಲ್, ರಾತ್ರಿ 60 ಡೆಸಿಬಲ್
    • ಜನವಸತಿ ಪ್ರದೇಶ – ಹಗಲು 55 ಡೆಸಿಬಲ್, ರಾತ್ರಿ 45 ಡೆಸಿಬಲ್
    • ಸೈಲೆಂಟ್ ಝೋನ್ (ನಿಶ್ಯಬ್ಧ ವಲಯ) ಹಗಲು 50 ಡೆಸಿಬಲ್, ರಾತ್ರಿ 40 ಡೆಸಿಬಲ್

  • ಯಾರೋ ಮಾಡುವ ತಪ್ಪಿಗೆ ಇಡೀ ಸಮಾಜವನ್ನು ದ್ವೇಷಿಸುವಂತಾಗಿದೆ: ಅಬೂಬಕರ್

    ಯಾರೋ ಮಾಡುವ ತಪ್ಪಿಗೆ ಇಡೀ ಸಮಾಜವನ್ನು ದ್ವೇಷಿಸುವಂತಾಗಿದೆ: ಅಬೂಬಕರ್

    ಉಡುಪಿ: ಉಡುಪಿಯಲ್ಲಿ ಮುಸ್ಲಿಂ ಸಮುದಾಯದ ವರ್ತಕರಿಗೆ ದೇವಸ್ಥಾನ ಜಾತ್ರಾ ಉತ್ಸವಗಳಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವಂತೆ ಉಡುಪಿ ಬಳಕೆದಾರರ ವೇದಿಕೆಯ ಗೌರವಾಧ್ಯಕ್ಷ ಅಬೂಬಕರ್ ಆತ್ರಾಡಿ, ಪೇಜಾವರ  ಸ್ವಾಮೀಜಿಗಳಿಗೆ ಮನವಿ ಮಾಡಿದ್ದಾರೆ. ಅಲ್ಲದೇ, ಧಾರ್ಮಿಕ ಕೇಂದ್ರಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡುವ ಸಂಬಂಧ ಮಾತುಕತೆಯನ್ನೂ ನಡೆಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಸಹಬಾಳ್ವೆ ನೆಲೆಸಬೇಕೆಂಬ ಉದ್ದೇಶದಿಂದ ಸ್ವಾಮೀಜಿಯೊಂದಿಗೆ ಮಾತುಕತೆ ನಡೆಸಿದ್ದೇವೆ. ಮುಸ್ಲಿಂ ಸಮುದಾಯ ಸಹ ಶಾಂತಿಯನ್ನೇ ಬಯಸುತ್ತದೆ. ಆದರೆ, ಯಾರೋ ಒಬ್ಬರು-ಇಬ್ಬರು ಮಾಡುವ ತಪ್ಪಿಗೆ ಇಡೀ ಸಮಾಜವನ್ನು ದ್ವೇಷಿಸುವಂತಾಗಿದೆ ಎಂದು ವಿಷಾದಿಸಿದ್ದಾರೆ. ಇದನ್ನೂ ಓದಿ: ಬಪ್ಪನಾಡಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ – ಸಾಮರಸ್ಯ ಎತ್ತಿಹಿಡಿದ ಕ್ಷೇತ್ರದ ಆಡಳಿತ ಮಂಡಳಿ 

    ABUBKER

    ನಾವೆಲ್ಲರೂ ಒಂದೇ ತಾಯಿಯ ಮಕ್ಕಳ ಹಾಗೇ ಸಹಬಾಳ್ವೆಯಿಂದ ಬಾಳಬೇಕು. ಹಿಂದೆ ಆದ ಘಟನೆಗಳನ್ನು ಮರೆತು ಸಹಬಾಳ್ವೆಯಿಂದ ಬಾಳೋಣ. ಈಗಾಗಲೇ ಒಂದು ಸಮಿತಿ ರಚನೆ ಮಾಡುವಂತೆ ಸ್ವಾಮೀಜಿ ಅವರು ಸೂಚನೆ ಕೊಟ್ಟಿದ್ದಾರೆ. ಜೊತೆಗೆ ವ್ಯಾಪಾರ ನಿರ್ಬಂಧಕ್ಕೆ ಪರಿಹಾರ ಸೂಚಿಸುವ ಭರವಸೆಯನ್ನೂ ನೀಡಿದ್ದಾರೆ ಎಂದರು. ಇದನ್ನೂ ಓದಿ: ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಎನ್ನುವ ಕಿಡಿಗೇಡಿಗಳನ್ನು ಮಟ್ಟ ಹಾಕಿ: ಹೆಚ್‌ಡಿಕೆ ಆಗ್ರಹ

    ಇದೇ ವೇಳೆ `ಮುಸ್ಲಿಂ ವ್ಯಾಪಾರಿಗಳ ವ್ಯಾಪಾರಕ್ಕೆ ನಿಷೇಧ ಹೇರಿದರೆ ನಮ್ಮ ವ್ಯಾಪಾರ ನಮಗೆ ಇದೆ. ಹುಟ್ಟಿಸಿದವ ಹುಲ್ಲು ಮೇಯಿಸದೆ ಇರುವುದಿಲ್ಲ’ ಎಂಬ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮಜೀರ್ ಅವರ ಹೇಳಿಗೆ ಪ್ರತಿಕ್ರಿಯಿಸಿದ ಅಬೂಬಕರ್, ಮುಸ್ಲಿಂ ಸಮುದಾಯದ ಜನರೊಂದಿಗೆ ನಾವು ಯಾವುದೇ ಸಭೆ ನಡೆಸಿಲ್ಲ. ಚರ್ಚೆ ಹಲವು ದಾರಿಗಳಲ್ಲಿ ಸಾಗಿ ಇಂದು ಈ ಪರಿಸ್ಥಿತಿ ನಿರ್ಮಾಣವಾಗಿದೆ. ಮನಸ್ಸಿಗೆ ಬಂದ ಹಾಗೆ ಹೇಳಿಕೆಗಳನ್ನು ನೀಡುವುದರಿಂದ ಸಮಾಜದಲ್ಲಿ ಶಾಂತಿ ಕದಡುತ್ತದೆ. ಮಾತಿನಲ್ಲಿ ಪ್ರೀತಿ ತೋರಿದರೆ ಸಮಾಜದ ಶಾಂತಿ ಕದಡುವುದಿಲ್ಲ ಎಂದು ಸಲಹೆ ನೀಡಿದ್ದಾರೆ.

  • ಧಾರ್ಮಿಕ ಸ್ಥಳದಲ್ಲಿ ಜೋಡಿಯಿಂದ ಸೆಕ್ಸ್- ವೆಬ್‍ಸೈಟ್‍ನಲ್ಲಿ ವಿಡಿಯೋ ಅಪ್ಲೋಡ್

    ಧಾರ್ಮಿಕ ಸ್ಥಳದಲ್ಲಿ ಜೋಡಿಯಿಂದ ಸೆಕ್ಸ್- ವೆಬ್‍ಸೈಟ್‍ನಲ್ಲಿ ವಿಡಿಯೋ ಅಪ್ಲೋಡ್

    -ಜೋಡಿ ವಿರುದ್ಧ ನೆಟ್ಟಿಗರು ಗರಂ

    ಮ್ಯಾನ್ಮಾರ್: ಜೋಡಿಯೊಂದು ಧಾರ್ಮಿಕ ಸ್ಥಳದಲ್ಲಿ ಪೋರ್ನ್ ವಿಡಿಯೋ ಮಾಡಿ ವೆಬ್‍ಸೈಟ್‍ನಲ್ಲಿ ಅಪ್ಲೋಡ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಜೋಡಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಇಟಲಿ ಮೂಲದ ಜೋಡಿ ಮ್ಯಾನ್ಮಾರ್ ನ ಧಾರ್ಮಿಕ ಸ್ಥಳದಲ್ಲಿ 12 ನಿಮಿಷದ ಪೋರ್ನ್ ವಿಡಿಯೋ ಮಾಡಿದ್ದಾರೆ. ಬಳಿಕ ಆ ವಿಡಿಯೋವನ್ನು ಪೋರ್ನ್ ವೆಬ್‍ಸೈಟ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋಗೆ ಇದುವರೆಗೂ 1000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

    ಜೋಡಿಯ ವಿಡಿಯೋವನ್ನು ಧಾರ್ಮಿಕ ಸ್ಥಳದಲ್ಲಿ ಸೆರೆ ಹಿಡಿದಿರುವುದು ಕಂಡು ಬಂದಿದೆ. ಈ ವಿಷಯ ಸ್ಥಳೀಯರಿಗೆ ತಿಳಿದ ತಕ್ಷಣ ಬೇಸರಗೊಂಡಿದ್ದಾರೆ. ಅಲ್ಲದೆ ವಿಡಿಯೋ ನೋಡಿ ಇದರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಸ್ಥಳೀಯರು ಪ್ರತಿಕ್ರಿಯಿಸಿ, ಈ ವಿಡಿಯೋ ನೋಡಿ ನಾವು ಆಘಾತಕ್ಕೆ ಒಳಗಾಗಿದ್ದೇವೆ. ನಮಗೆ ತುಂಬಾನೇ ದುಃಖವಾಗುತ್ತಿದೆ ಎಂದು ವಿಡಿಯೋ ನೋಡಿದ ಮೇಲೆ ತಮ್ಮ ನೋವನ್ನು ಹೊರಹಾಕಿದರು.

    ಸ್ಥಳೀಯ ಸುದ್ದಿ ಸಂಸ್ಥೆ ಪ್ರಕಾರ, ಈ ಧಾರ್ಮಿಕ ಸ್ಥಳದಲ್ಲಿ ಸ್ಥಳೀಯರು ವಿದೇಶಿಗರಿಗೆ ಶಟ್ರ್ಸ್ ಹಾಗೂ ಅಸಭ್ಯ ಉಡುಗೆ ಹಾಕದಂತೆ ನಿಯಮ ಮಾಡಲಾಗಿದೆ. ದೇವಸ್ಥಾನ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಅಸಭ್ಯ ಬಟ್ಟೆಗಳನ್ನು ನಿರ್ಬಂಧಿಸಲಾಗಿದೆ. ಇದರ ಜೊತೆಗೆ ಮ್ಯಾನ್ಮಾರ್‍ದ ಧಾರ್ಮಿಕ ಸ್ಥಳಗಳಲ್ಲಿ ಎಲ್ಲರ ಮುಂದೆ ಕಿಸ್ ಮಾಡುವುದು ಹಾಗೂ ಅನುಚಿತವಾಗಿ ವರ್ತಿಸುವುದನ್ನು ಕೂಡ ನಿಷೇಧಿಸಲಾಗಿದೆ.

    ಜೋಡಿಯ ಪೋರ್ನ್ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

  • ಮುಸ್ಲಿಂ ಟೋಪಿ ಧರಿಸಲು ನಿರಕಾರಿಸಿದ ಸಿಎಂ ಯೋಗಿ ಅದಿತ್ಯನಾಥ್ – ವಿಡಿಯೋ ವೈರಲ್

    ಮುಸ್ಲಿಂ ಟೋಪಿ ಧರಿಸಲು ನಿರಕಾರಿಸಿದ ಸಿಎಂ ಯೋಗಿ ಅದಿತ್ಯನಾಥ್ – ವಿಡಿಯೋ ವೈರಲ್

    ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ ಮುಸ್ಲಿಂ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಧಾರ್ಮಿಕ ಟೋಪಿಯನ್ನು ಧರಿಸಲು ನಿರಾಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬಿಜೆಪಿ ಫೈರ್ ಬ್ರಾಂಡ್ ಸಿಎಂ ಯೋಗಿ ಅದಿತ್ಯನಾಥ್ ಅವರು ಸಂತ ಕಬೀರ್ ಅವರ ಸ್ಮಾರಕ ಭವನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ಮಾರಕದ ಉಸ್ತುವಾರಿ ವಹಿಸಿದ್ದ ಧಾರ್ಮಿಕ ಮುಖಂಡರು ಯೋಗಿ ಅವರಿಗೆ ಟೋಪಿ ಧರಿಸಲು ಮುಂದಾಗಿದ್ದರು. ಆದರೆ ಈ ವೇಳೆ ಯೋಗಿ ಅವರು ಟೋಪಿ ಧರಿಸಲು ನಿರಾಕರಿಸಿ ಬಳಿಕ ಅಲ್ಲಿಂದ ತೆರಳಿದ್ದರು.

    https://twitter.com/ANINewsUP/status/1012204968831520769?

    ಸದ್ಯ ಸಿಎಂ ಯೋಗಿ ಅದಿತ್ಯನಾಥ್ ಧಾರ್ಮಿಕ ಟೋಪಿ ಧರಿಸಲು ನಿರಾಕರಿಸಿರುವ ದೃಶ್ಯಗಳು ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂತ ಕಬೀರ್ ಅವರ 500 ನೇ ಪುಣ್ಯಸ್ಮರಣೆ ಪ್ರಯುಕ್ತ ಪ್ರಧಾನಿ ಮೋದಿ ಅವರು ಗುರುವಾರ ಭೇಟಿ ನೀಡಿದ್ದರು. ಪ್ರಧಾನಿ ಆಗಮನ ಹಿನ್ನೆಲೆ ಸಿಎಂ ಯೋಗಿ ಅದಿತ್ಯನಾಥ್ ಬುಧವಾರ ಸಿದ್ಧತೆಗಳ ಪರಿಶೀಲನೆಗೆ ತೆರಳಿದ್ದರು.

    ಇದೇ ಮೊದಲಲ್ಲ: 2019 ರ ಲೋಕಾಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಆದರೆ ಪ್ರಧಾನಿ ಮೋದಿ ಸೇರಿದಂತೆ, ಸಿಎಂ ಯೋಗಿ ಅದಿತ್ಯನಾಥ್ ಈ ಹಿಂದೆಯೂ ಧಾರ್ಮಿಕ ಟೋಪಿ ಧರಿಸಲು ನಿರಾಕರಿಸಿದ್ದರು. ಸದ್ಯ ಯೋಗಿ ಅದಿತ್ಯನಾಥ್ ಅವರ ನಡೆಯನ್ನು ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಮುಖಂಡರು ಟೀಕಿಸಿ ವಾಗ್ದಾಳಿ ನಡೆಸಿದ್ದಾರೆ. ಆದರೆ ಇತ್ತೀಚೆಗೆ ಎಐಸಿಸಿ ರಾಹುಲ್ ಗಾಂಧಿ ಅವರು ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು ನೀಡಿದ ಟೋಪಿಯನ್ನು ಧರಿಸಲು ರಾಹುಲ್ ಗಾಂಧಿ ನಿರಾಕರಿಸಿದ್ದರು. ಈ ವೇಳೆ ಬಿಜೆಪಿ ಕೆಲ ನಾಯಕರು ಸಹ ರಾಹುಲ್ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದರು.