Tag: religion

  • ಸ್ವಧರ್ಮ ಪಾಲನೆ ಮಾಡಿ ಅನ್ಯ ಧರ್ಮಕ್ಕೆ ಗೌರವ ನೀಡಿ: ಸಿದ್ದರಾಮಯ್ಯ

    ಸ್ವಧರ್ಮ ಪಾಲನೆ ಮಾಡಿ ಅನ್ಯ ಧರ್ಮಕ್ಕೆ ಗೌರವ ನೀಡಿ: ಸಿದ್ದರಾಮಯ್ಯ

    – ಬೇರೆ ಧರ್ಮವನ್ನು ಸಹಿಸೋ ಸಹಿಷ್ಣುತೆ ಇರಬೇಕು

    ಬಳ್ಳಾರಿ: ಒಬ್ಬರು ಮತ್ತೊಬ್ಬರನ್ನು ದಯೇ ಕರುಣೆ ವಾತ್ಸಲ್ಯದಿಂದ ನೋಡಬೇಕು. ದ್ವೇಷ ಅಸೂಯೆ ಇದ್ದರೆ ಸಮಾಜದಲ್ಲಿ ಒಡುಕು ಉಂಟಾಗಿ ವಿಭಜನೆಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

    ಕ್ರೈಸ್ತ ಧರ್ಮಕ್ಷೇತ್ರ ಅಮೃತೋತ್ಸವ ಹಿನ್ನೆಲೆಯಲ್ಲಿ ಬಳ್ಳಾರಿ ಆರೋಗ್ಯಮಾತೆ ಪುಣ್ಯಕ್ಷೇತ್ರದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಸಂವಿಧಾನದಲ್ಲಿ ನಿಮ್ಮ ಧರ್ಮ ಪಾಲನೆ ಮಾಡಿ ಬೇರೆ ಧರ್ಮದ ಬಗ್ಗೆ ಸಹಿಷ್ಣುತೆ ಇರಲಿ ಎಂದಿದ್ದಾರೆ. ಬೇರೆ ಧರ್ಮವನ್ನು ಸಹಿಸುವ ಸಹಿಷ್ಣುತೆ ಇರಬೇಕು. ಸ್ವಧರ್ಮ ಪಾಲನೆ ಮಾಡಿ ಅನ್ಯ ಧರ್ಮಕ್ಕೆ ಗೌರವ ನೀಡಿ. ಎಲ್ಲರನ್ನೂ ಗೌರವಿಸಿದರೆ ಅಂಬೇಡ್ಕರ್, ಸಂವಿಧಾನ ಮತ್ತು ಧರ್ಮ ಗುರುಗಳಿಗೆ ಗೌರವ ನೀಡಿದಂತೆ ಎಂದರು. ಇದನ್ನೂ ಓದಿ: ಬಳ್ಳಾರಿಯಲ್ಲಿ ಮುಂದುವರಿದ ಸರಣಿ ಸಾವು – ಬಿಮ್ಸ್‌ನಲ್ಲಿ ಹೆರಿಗೆ ಬಳಿಕ ಬಾಣಂತಿ ಸಾವು

    ಸಿಎಂ ಸಿದ್ದರಾಮಯ್ಯ ಕುವೆಂಪು ಅವರ ನಾಡ ಗೀತೆ ಸಾಲು ಹಾಡುವ ಮೂಲಕ ಧರ್ಮದ ಬಗ್ಗೆ ಸಮಗ್ರವಾಗಿ ಮಾತನಾಡಿದರು. ಸಿದ್ದರಾಮಯ್ಯ ಮುಸ್ಲಿಂ ಒಲೈಸುತ್ತಾರೆ ಎಂದು ಹೇಳುತ್ತಾರೆ ಹಿಂದೂಗಳನ್ನು ವಿರೋಧಿ ಮಾಡುತ್ತಾರೆ ಎನ್ನುತ್ತಾರೆ. ಆದರೆ ನಾನು ಹಿಂದೂ ಮುಸ್ಲಿಂ, ಕ್ರೈಸ್ತ ಎಲ್ಲರನ್ನೂ ಪ್ರೀತಿಸುತ್ತೇನೆ ಎಂದು ತಿಳಿಸಿದರು.

    ಭಾರತ ದೇಶ ಬಹುತ್ವದ ದೇಶವಾಗಿದೆ. ಎಲ್ಲಾ ಧರ್ಮ ಜಾತಿ ಧರ್ಮ, ಭಾಷೆಯವರು ಇದ್ದಾರೆ. ಮೂಲತಃ ನಾವೆಲ್ಲ ಮಾನವರು. ಸರ್ವಧರ್ಮ ಸಮನ್ವಯ ದೇಶದಲ್ಲಿ ಮಾತ್ರ ಇದೆ ಇದು ನಮ್ಮ ಪರಂಪರೆ ಇದನ್ನು ಉಳಿಸುವ ಬೆಳೆಸಬೇಕಿದೆ. ಹುಟ್ಟುವಾಗ ವಿಶ್ವ ಮಾನವರಾಗಿ ಹುಟ್ಟುತ್ತೇವೆ. ಬೆಳೆಯುತ್ತಾ ಅಲ್ಪ ಮಾನವರಾಗುತ್ತೇವೆಂದು ಕುವೆಂಪು ಹೇಳಿದ್ದಾರೆ. ವಿಶ್ವಮಾನವರಾಗಬೇಕು ಅಲ್ಪ ಮಾನವರಾಗಬಾರದು. ಪರಸ್ಪರ ಪ್ರೀತಿಯಿಂದ ಇರಬೇಕು. ಯಾವುದೇ ಧರ್ಮ ದ್ವೇಷ ಬೋಧನೆ ಮಾಡಲ್ಲ. ಹಿಂದೂ, ಕೈಸ್ತ, ಮುಸ್ಲಿಂ ಯಾವ ಧರ್ಮ ದ್ವೇಷ ಬಿತ್ತಲ್ಲ ಬೋಧನೆ ಮಾಡಲ್ಲ. ಹೀಗಾಗಿ ಬಸವಾದಿ ಶರಣರು ದಯವೇ ಧರ್ಮದ ಮೂಲವಯ್ಯ ಎಂದಿದ್ದಾರೆ ಎಂದು ಹೇಳಿದರು.

     

  • ಭಾರತದಲ್ಲಿ ಹಿಂದೂ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ

    ಭಾರತದಲ್ಲಿ ಹಿಂದೂ ಸಂಖ್ಯೆ ಇಳಿಕೆ, ಮುಸ್ಲಿಮರ ಸಂಖ್ಯೆ ಏರಿಕೆ

    ನವದೆಹಲಿ: ಭಾರತದಲ್ಲಿ (India) ಬಹುಸಂಖ್ಯಾತ ಹಿಂದೂಗಳು (Hindu) ಸಂಖ್ಯೆ ಬಹಳ ಕುಸಿತವಾಗಿದೆ ಎಂದು ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿಯೊಂದು (Economic Advisory Council to the Prime Minister) ವರದಿ ಪ್ರಕಟಿಸಿದೆ.

    ಶಮಿಕಾ ರವಿ, ಅಪೂರ್ವ್ ಕುಮಾರ್ ಮಿಶ್ರಾ, ಅಬ್ರಹಾಂ ಜೋಸ್ ಅವರಿದ್ದ ತಂಡ 1950 ಮತ್ತು 2015ರ ನಡುವೆ 167 ದೇಶಗಳಲ್ಲಿರುವ ಧರ್ಮಗಳನ್ನು (Religion) ಅಧ್ಯಯನ ಮಾಡಿ ವರದಿಯನ್ನು ಬಿಡುಗಡೆ ಮಾಡಿದೆ. ಲೋಕಸಭಾ ಚುನಾವಣಾ (Lok Sabha Election) ಸಮಯದಲ್ಲಿ ಈ ವರದಿ ಬಿಡುಗಡೆ ಮಾಡಿದ್ದು ರಾಜಕೀಯ ಪಕ್ಷಗಳ ಮಧ್ಯೆ ಮತ್ತೊಂದು ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆಯಿದೆ.

    ವರದಿಯಲ್ಲಿ ಏನಿದೆ?
    1950 ಮತ್ತು 2015 ರ ನಡುವೆ ಭಾರತದಲ್ಲಿ ಹಿಂದೂಗಳ ಪ್ರಮಾಣ 7.8% ರಷ್ಟು ಕುಸಿತವಾದರೆ ಮುಸ್ಲಿಮರ (Muslims) ಪ್ರಮಾಣ 53% ಏರಿಕೆಯಾಗಿದೆ. 1950ರಲ್ಲಿ 84.68% ಹಿಂದೂಗಳಿದ್ದರೆ ಈಗ ಇದು 78.06% ಇಳಿಕೆಯಾಗಿದೆ. ಮುಸ್ಲಿಮ್‌ ಜನಸಂಖ್ಯೆ 9.84% ಇದ್ದರೆ ಈಗ ಇದು 14.09% ಏರಿಕೆಯಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭಯೋತ್ಪಾದಕರಿಂದ ಗುಂಡಿನ ದಾಳಿ – ಮಲಗಿದ್ದಲ್ಲೇ 7 ಕಾರ್ಮಿಕರು ಸಾವು

    ಭಾರತದಲ್ಲಿ ಹಿಂದೂ ಜನಸಂಖ್ಯೆಯು ಕುಗ್ಗಿದರೆ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಮತ್ತು ಸಿಖ್‌ ಜನಾಂಗವರ ಸಂಖ್ಯೆ ಹೆಚ್ಚಳವಾದರೆ ಜೈನ ಮತ್ತು ಪಾರ್ಸಿಗಳ ಸಂಖ್ಯೆ ಕಡಿಮೆಯಾಗಿದೆ.

    ಕೈಸ್ತರು 5.38%, ಸಿಖ್‌ 6.58%, ಬೌದ್ಧ 0.81% ಪ್ರಮಾಣದಲ್ಲಿ ಏರಿಕೆಯಾಗಿದೆ. 1950 ರಲ್ಲಿ ಕ್ರೈಸ್ತರ ಸಂಖ್ಯೆ 2.24 ಇದ್ದರೆ 2015ರಲ್ಲಿ 2.36% ಏರಿದೆ. 1950 ರಲ್ಲಿ ಸಿಖ್ಬರ ಸಂಖ್ಯೆ 1.24% ಇದ್ದರೆ 2015ರಲ್ಲಿ 1.85% ಏರಿಕೆಯಾಗಿದೆ. 1950 ರಲ್ಲಿ ಬೌದ್ಧರ ಸಂಖ್ಯೆ 0.05% ಇದ್ದರೆ 0.81% ಏರಿಕೆಯಾಗಿದೆ.

    ಜೈನರ ಸಂಖ್ಯೆ 1950ರಲ್ಲಿ 0.45% ಇದ್ದರೆ 2015ರಲ್ಲಿ 0.36% ಇಳಿದಿದೆ. ಪಾರ್ಸಿ ಜನಾಂಗದ ಸಂಖ್ಯೆ 85% ಇಳಿಕೆಯಾಗಿದ್ದು 0.03% ನಿಂದ ಇದು 0.004% ಇಳಿದಿದೆ.

     

    ಪಾಕಿಸ್ತಾನದಲ್ಲಿ 3.75%, ಬಾಂಗ್ಲಾದೇಶ 18.55% ಬಹುಸಂಖ್ಯಾತ ಮುಸ್ಲಿಮರ ಸಂಖ್ಯೆ ಹೆಚ್ಚಳವಾಗಿದೆ. ಫ್ರಾನ್ಸ್‌ನಲ್ಲಿ 36.76%, ಯುಕೆ 25.29% ಅಮೆರಿಕದಲ್ಲಿ 45.80% ಕ್ರೈಸ್ತರ ಸಂಖ್ಯೆ ಇಳಿಕೆಯಾಗಿದೆ.

    ಅಲ್ಪಸಂಖ್ಯಾತರ ಏರಿಕೆಗೆ ಕಾರಣ ಏನು?
    ಅಲ್ಪಸಂಖ್ಯಾತರ (Minority) ಜೀವನವನ್ನು ಸುಧಾರಿಸಲು ಭಾರತದ ಸರ್ಕಾರ ನೀತಿಗಳು, ರಾಜಕೀಯ ನಿರ್ಧಾರಗಳು, ಭಾರತದಲ್ಲಿ ವೈವಿಧ್ಯತೆ ವಾತಾವರಣದಿಂದಾಗಿ ಭಾರತದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಏರಿಕೆಯಾಗಿದೆ.

     

  • ಬರಗಾಲ ಬಂದಿದೆ, ನಿಮ್ಮ ದೇವ್ರು ಏನೂ ಮಾಡಲ್ಲ – ನಮ್ಮ ಧರ್ಮಕ್ಕೆ ಬನ್ನಿ ಎಂದ ಮೂವರು ಅರೆಸ್ಟ್‌

    ಬರಗಾಲ ಬಂದಿದೆ, ನಿಮ್ಮ ದೇವ್ರು ಏನೂ ಮಾಡಲ್ಲ – ನಮ್ಮ ಧರ್ಮಕ್ಕೆ ಬನ್ನಿ ಎಂದ ಮೂವರು ಅರೆಸ್ಟ್‌

    ಚಿಕ್ಕಮಗಳೂರು: ನಿಮ್ಮ ದೇವರು ಏನು ಮಾಡುವುದಿಲ್ಲ. ತೀವ್ರ ಬರಗಾಲ ಬಂದಿದೆ. ಮಳೆ-ಬೆಳೆ ಇಲ್ಲ. ಜನ ಸಂಕಷ್ಟದಲ್ಲಿ ಇದ್ದಾರೆ. ನೀವು ಕಷ್ಟದಲ್ಲಿ ಇದ್ದೀರಾ. ನೀವು ನಮ್ಮ ಧರ್ಮಕ್ಕೆ (Religion) ಬಂದರೆ ಯೇಸು (Jesus)ನಿಮಗೆಲ್ಲಾ ಒಳ್ಳೆಯದು ಮಾಡುತ್ತಾನೆ. ಮಳೆ-ಬೆಳೆ ಆಗಲಿದೆ. ನಿಮ್ಮ ಕಷ್ಟವನ್ನು ಬಗೆಹರಿಸುತ್ತಾನೆ ಎಂದು ಹೇಳಿ ಮತಾಂತರ (Conversion) ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆಗಳು ತಾಲೂಕಿನ ಎರೇಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಬಂದವರ ವಿರುದ್ದ ಹಿಂದೂಗಳು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ಮೂವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಎನ್‌ಡಿಎ ಅಧಿಕಾರಕ್ಕೆ ಬರುವ ಮೊದಲು ಕಂಪನಿಗಳು ಪಕ್ಷಗಳಿಗೆ ಎಷ್ಟು ದೇಣಿಗೆ ನೀಡಿದೆ ಹೇಳಬಹುದೇ – ಮೋದಿ ಪ್ರಶ್ನೆ

     

    ಮೂವರಲ್ಲಿ ಓರ್ವ ಅಪ್ರಾಪ್ತ ಹಿಂದೂ ಹೇಳಲಾಗಿದೆ. ರಾಜನ್ ಎಂಬಾತ ಇನ್ನಿಬ್ಬರೊಂದಿಗೆ ಇಂದಾವರ, ಉಂಡೇದಾಸರಹಳ್ಳಿ, ಎರೇಹಳ್ಳಿಯ ಮನೆಗಳಿಗೆ ತೆರಳಿ ಮತಾಂತರ ಸೆಳೆಯಲು ಮುಂದಾಗಿದ್ದರು. ಈ ವೇಳೆ ಎರೇಹಳ್ಳಿ ನಿವಾಸಿ ಪ್ರಸನ್ನ ಕುಮಾರ್‌ ಎಂಬುವವರ ಮನೆಗೂ ಹೋಗಿದ್ದರು. ಇದನ್ನೂ ಓದಿ: 15 ವರ್ಷದ ಬಳಿಕ ರಾಜ್ಯದಲ್ಲಿ ವಿದ್ಯುತ್‌ ದರ ಇಳಿಕೆ – 100+ ಯೂನಿಟ್‌ ಬಳಸುವವರಿಗೆ ಲಾಭ

    ನಿಮ್ಮ ದೇವರು ನಿಮ್ಮ ಕಷ್ಟಕ್ಕೆ ಸಹಾಯ ಮಾಡುತ್ತಿಲ್ಲ. ಮಳೆ ಬರಿಸುತ್ತಿಲ್ಲ. ನಿಮ್ಮ ಮನೆಗೆ ಏಸು ಬರುತ್ತಾನೆ. ನಿಮ್ಮ ಕಷ್ಟಗಳಿಗೆ ಪರಿಹಾರ ಒದಗಿಸುತ್ತಾನೆ ಎಂದಿದ್ದಾರೆ. ಬಳಿಕ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯ ಮಾಡಿದ್ದಾರೆ. ಎರೇಹಳ್ಳಿಯ ಹಲವು ಮನೆಗಳಿಗೆ ಹೋಗಿ ಮತಾಂತರ ಮಾಡಲು ಮುಂದಾಗಿದ್ದರು.

    ಸ್ಥಳೀಯರ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಹೋಗಿ ಮೂವರನ್ನು ಬಂಧಿಸಿದ್ದಾರೆ. ಮತಾಂತರ ಮಾಡಲು ಬಂದವರ ಮಾತುಗಳನ್ನ ಗಮನಿಸಿದ ಪ್ರಸನ್ನ ಆಕ್ರೋಶಗೊಂಡು ಅವರ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲ ಗ್ರಾಮಸ್ಥರು ಒಟ್ಟಾಗಿ ಮತಾಂತರ ಮಾಡುವ ಪ್ರಯತ್ನವನ್ನು ವಿರೋಧಿಸಿದ್ದಾರೆ. ಬಳಿಕ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • ಧರ್ಮ ಇಲ್ಲ ಎಂದು ಹೇಳುವವರನ್ನ ಗಲ್ಲಿಗೇರಿಸಬೇಕು – ಶಾಸಕ ಕೊತ್ತೂರು ಮಂಜುನಾಥ್

    ಧರ್ಮ ಇಲ್ಲ ಎಂದು ಹೇಳುವವರನ್ನ ಗಲ್ಲಿಗೇರಿಸಬೇಕು – ಶಾಸಕ ಕೊತ್ತೂರು ಮಂಜುನಾಥ್

    ಕೋಲಾರ: ಧರ್ಮ (Religion) ಇಲ್ಲ ಎಂದು ಹೇಳುವವರನ್ನ ಗಲ್ಲಿಗೇರಿಸಬೇಕು, ಆ ಧರ್ಮ, ಈ ಧರ್ಮ ಅಂತ ಹೇಳುವವರನ್ನ ದೇಶದಿಂದಲೇ ಗಡಿಪಾರು ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ವಿರುದ್ಧ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ (Kotturu Manjunath) ವಾಗ್ದಾಳಿ ನಡೆಸಿದ್ದಾರೆ.

    ಗಾಂಧಿ ಜಯಂತಿ ಪ್ರಯುಕ್ತ ನಗರದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ ಇಲ್ಲ ಎಂದು ಹೇಳುವವರನ್ನ ಗಲ್ಲಿಗೇರಿಸಬೇಕು. ಉದಯನಿಧಿ (Udhayanidhi Stalin) ಅವರಿಗೆ ದುಡ್ಡು ಜಾಸ್ತಿಯಾಗಿ ಮೆಂಟಲ್ ಆಗಿದ್ದಾರೆ. ಅವನಿಗೆ ಎರಡೂ ಮೂರು ಹುಚ್ಚು ನಾಯಿ ಕಚ್ಚಿದೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಗ್ಗತ್ತಲ ಮಳೆಯಲ್ಲಿ ನದಿಯನ್ನು ರಸ್ತೆ ಎಂದು ತೋರಿಸಿದ ಜಿಪಿಎಸ್ – ಕಾರು ಮುಳುಗಿ ಕೇರಳದ ಇಬ್ಬರು ವೈದ್ಯರು ಸಾವು

    ನಾವು ಇರೋದು ಭಾರತ ದೇಶದಲ್ಲಿ ಯಾರು ಯಾವ ಧರ್ಮವನ್ನ ಯಾರು ಬೇಕಾದ್ರು ಪಾಲನೆ ಮಾಡಲಿ, ನಿನ್ನ ಧರ್ಮವನ್ನ ನೀನು ಪಾಲನೆ ಮಾಡು. ನನ್ನ ಧರ್ಮವನ್ನ ಪಾಲನೆ ಮಾಡಬೇಡ ಎನ್ನುವುದಕ್ಕೆ ಯಾರಿಗೂ ಹಕ್ಕಿಲ್ಲ ನನ್ನ ಧರ್ಮವನ್ನ ಇಲ್ಲ ಎಂದು ಹೇಳುವುದಕ್ಕೆ ನೀನ್ಯಾರು? ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಸೌಹಾರ್ದಯುತ ಈದ್ ಮಿಲಾದ್ ಹಬ್ಬದಂದೇ ಕಿಡಿಗೇಡಿಗಳು ಶಾಂತಿ ಭಂಗಕ್ಕೆ ಯತ್ನಿಸಿದ್ದಾರೆ: ಉಮೇಶ್ ಜಾಧವ್

    ಇದೇ ವೇಳೆ ತಮಿಳು ನಟ ರಜಿನಿಕಾಂತ್‌ ಅವರನ್ನ ಉದಾಹರಣೆ ನೀಡಿ ನಾನೇನಾದ್ರು ಮೋರಿಯಲ್ಲಿ ಬಿದ್ದು ಎದ್ದರೇ ಅದು ಬೇರೆ ಅರ್ಥ ಬರುತ್ತೆ. ಇವನಿಗೆ ನಾಯಿ ಕಚ್ಚಿದೆ ಅಂತಾರೆ. ಅದೇ ಕೆಲಸ ಸೂಪರ್ ಸ್ಟಾರ್ ರಜನಿಕಾಂತ್ ಮಾಡಿದ್ರೆ ಸೂಪರ್ ಅಂತಾರೆ. ಹಾಗೆಯೇ ಧರ್ಮದ ವಿಚಾರವಾಗಿ ಮೋರಿಯಲ್ಲಿ ಬಿದ್ದಂತ್ತಾಗಿದೆ ಎಂದು ತಮಿಳುನಾಡು ಸಚಿವರ ವಿರುದ್ಧ ಹರಿಹಾಯ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಧರ್ಮದ ವಿಚಾರದಲ್ಲಿ ದ್ವೇಷ, ನೋವುಂಟು ಮಾಡಬಾರದು: ಯು.ಟಿ ಖಾದರ್

    ಧರ್ಮದ ವಿಚಾರದಲ್ಲಿ ದ್ವೇಷ, ನೋವುಂಟು ಮಾಡಬಾರದು: ಯು.ಟಿ ಖಾದರ್

    ಮಂಗಳೂರು: ಧರ್ಮದ ವಿಚಾರದಲ್ಲಿ ದ್ವೇಷ, ನೋವುಂಟು ಮಾಡಬಾರದು. ಪ್ರೀತಿ ಸಹೋದರತೆಯನ್ನು ಬೆಳೆಸಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ (U.T Khader) ಪ್ರತಿಕ್ರಿಯಿಸಿದ್ದಾರೆ.

    ಧರ್ಮಗಳ ಬಗ್ಗೆ ಅವಹೇಳನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ಧರ್ಮಕ್ಕೂ ಅದರದ್ದೇ ಆದ ಮಹತ್ವವಿದೆ, ಗೌರವವಿದೆ. ಎಲ್ಲಾ ಧರ್ಮವೂ ಪ್ರೀತಿ, ವಿಶ್ವಾಸ, ಸಹೋದರತೆಯನ್ನು ತಿಳಿಸುತ್ತದೆ. ಇದನ್ನು ಹೊರತುಪಡಿಸಿ ದ್ವೇಷವನ್ನು ಎಲ್ಲಿಯೂ ತಿಳಿಸುವುದಿಲ್ಲ. ಎಲ್ಲಾ ಧರ್ಮಗಳು ಸಮಾಜವನ್ನು ಒಗ್ಗಟ್ಟು ಮಾಡುವ ಸಂದೇಶ ಕೊಡುತ್ತೆ. ಬಿಕ್ಕಟ್ಟು ಮಾಡುವ ಸಂದೇಶ ಯಾವ ಧರ್ಮವೂ ನೀಡಲ್ಲ ಎಂದರು.

    ಮಾನವೀಯತೆ, ಕರುಣೆ, ಪ್ರೀತಿ ವಿಶ್ವಾಸ, ಸಹೋದರತೆ, ಕ್ಷಮೆ ಇದಕ್ಕೆ ಸೀಮಿತವಾಗಿರಬೇಕು. ನೆಮ್ಮದಿಯ ಜೀವನ ನಡೆಸುವ ಅವಕಾಶ ಎಲ್ಲಾ ಧರ್ಮ ಕೊಡುತ್ತೆ. ಯಾರು ಏನು ಹೇಳಿಕೆ ನೀಡಿದ್ದಾರೆಂದು ಗೊತ್ತಿಲ್ಲ. ನಾವು ನಮ್ಮ ನಮ್ಮ ಧರ್ಮವನ್ನು ಅಚ್ಚುಕಟ್ಟಾಗಿ ಆಚರಿಸಿ ಇನ್ನಿತರ ಧರ್ಮವನ್ನು ಗೌರವಿಸಬೇಕು ಎಂದು ಖಾದರ್ ತಿಳಿಸಿದರು. ಇದನ್ನೂ ಓದಿ: ನಿನ್ನನ್ನು ಚಂದ್ರಯಾನ-4ರಲ್ಲಿ ಕಳುಹಿಸುತ್ತೇನೆ: ಮಹಿಳೆ ಮನವಿಗೆ ಖಟ್ಟರ್ ಹಾಸ್ಯ

    ಸರ್ವ ಜನರ ಪ್ರೀತಿಗೆ ಪಾತ್ರರಾಗಿ ದೇವರ ಪ್ರೀತಿಗೆ ಪಾತ್ರರಾಗಬೇಕು. ಒಂದಿಬ್ಬರು ಹೇಳುವ ಹೇಳಿಕೆಗೆ ಮಹತ್ವ ಕೊಡಬೇಕಿಲ್ಲ. ಒಗ್ಗಟ್ಟಿನ ಸಮಾಜ ನಿರ್ಮಾಣ ಆಗಬೇಕು ಎಂದು ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದ್ವೇಷ ಭಾಷಣದ ವಿರುದ್ಧ ಸ್ವಯಂಪ್ರೇರಿತ ಕೇಸ್‌ ದಾಖಲಿಸಿ: ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಆದೇಶ

    ದ್ವೇಷ ಭಾಷಣದ ವಿರುದ್ಧ ಸ್ವಯಂಪ್ರೇರಿತ ಕೇಸ್‌ ದಾಖಲಿಸಿ: ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಆದೇಶ

    ನವದೆಹಲಿ: ದ್ವೇಷ ಭಾಷಣ (Hate Speech) ಮಾಡುವವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಸುಪ್ರೀಂ ಕೋರ್ಟ್‌ (Supreme Court) ಎಲ್ಲಾ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸೂಚಿಸಿದೆ.

    ದ್ವೇಷ ಭಾಷಣಕ್ಕೆ ಸಂಬಂಧಿಸಿದ ಸಲ್ಲಿಕೆಯಾದ ಎಲ್ಲಾ ಅರ್ಜಿಗಳ ವಿಚಾರಣೆ ನ್ಯಾ. ಕೆಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸುತ್ತಿದೆ.

    ಯಾರು ದೂರು ನೀಡದೇ ಇದ್ದರೂ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ಒಂದು ವೇಳೆ ಪ್ರಕರಣ ದಾಖಲಿಸದೇ ಇದ್ದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.  ಇದನ್ನೂ ಓದಿ: ಶನಿವಾರ ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ – ಪರ್ಯಾಯ ರಸ್ತೆಗಳ ಪೂರ್ಣ ವಿವರ ಇಲ್ಲಿದೆ


    ದ್ವೇಷ ಭಾಷಣ ಗಂಭೀರ ಅಪರಾಧ ಎಂದು ಬಣ್ಣಿಸಿದ ಸುಪ್ರೀಂ ಕೋರ್ಟ್ ಇದು ದೇಶದ ಜಾತ್ಯಾತೀತ ರಚನೆಯ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಮೇ 12ಕ್ಕೆ ಕೋರ್ಟ್‌ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

  • ಭಯೋತ್ಪಾದನೆಯನ್ನು ಯಾವುದೇ ಧರ್ಮಕ್ಕೆ ಹೋಲಿಸೋದು ಬೇಡ – ಅಮಿತ್ ಶಾ

    ಭಯೋತ್ಪಾದನೆಯನ್ನು ಯಾವುದೇ ಧರ್ಮಕ್ಕೆ ಹೋಲಿಸೋದು ಬೇಡ – ಅಮಿತ್ ಶಾ

    ನವದೆಹಲಿ: ಭಯೋತ್ಪಾದನೆಯನ್ನು ಅಥವಾ ಭಯೋತ್ಪಾದನೆಯ (Terrorism) ಬೆದರಿಕೆಗಳನ್ನು ಯಾವುದೇ ಧರ್ಮ (Religion) ಅಥವಾ ಗುಂಪಿಗೆ ಹೋಲಿಕೆ ಮಾಡಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಲಹೆ ನೀಡಿದ್ದಾರೆ.

    ದೆಹಲಿಯ ಗೃಹ ಸಚಿವಾಲಯ ಆಯೋಜಿಸಿದ್ದ ಭಯೋತ್ಪಾದನಾ ಚಟುವಟಿಕೆಗಳ ನಿಗ್ರಹ ಕುರಿತ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಭಯೋತ್ಪಾದನೆ (Terrorism) ಚಟುವಟಿಕೆಗಳಿಗೆ ಹಣಕಾಸು ಒದಗಿಸುವುದು ಭಯೋತ್ಪಾದನೆಗಿಂತಲೂ ಅಪಾಯಕಾರಿ. ಹಾಗಾಗಿ ಭಯೋತ್ಪಾದನಾ ಚಟುವಟಿಕೆಗಳನ್ನು ಯಾವುದೇ ಧರ್ಮ, ರಾಷ್ಟ್ರೀಯತೆ ಅಥವಾ ಜನಾಂಗದ ಗುಂಪಿಗೆ ಹೋಲಿಸಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂದೋರ್‌ಗೆ ಬಂದ ತಕ್ಷಣ ರಾಹುಲ್ ಗಾಂಧಿಯನ್ನು ಬಾಂಬ್ ಸ್ಫೋಟಿಸಿ ಕೊಲ್ಲುವ ಬೆದರಿಕೆ

    ಭಯೋತ್ಪಾದನೆಗೆ ಹಣಕಾಸು ಒದಗಿಸುವುದು ವಿಶ್ವದ ರಾಷ್ಟ್ರಗಳ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ, ಹಿಂಚಾರ ನಡೆಸಲು, ಯುವಸಮೂಹವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಳ್ಳೋದು ಹಾಗೂ ತಮ್ಮ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳಲು ಭಯೋತ್ಪಾದಕರು ನಿರಂತರವಾಗಿ ಹೊಸ – ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ತಮ್ಮ ಗುರುತನ್ನು ಮರೆಮಾಚಲು ಡಾರ್ಕ್‌ನೆಟ್‌ (DrakNet) ಬಳಸುತ್ತಿದ್ದಾರೆ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಹೌದು, ನಾನು ಡ್ರಗ್ಸ್ ಸೇವಿಸುತ್ತಿದ್ದೆ, ನಶೆಯಲ್ಲೇ ಶ್ರದ್ಧಾ ಹತ್ಯೆ ಮಾಡಿದೆ: ಅಫ್ತಾಬ್ ತಪ್ಪೊಪ್ಪಿಗೆ

    ಭಯೋತ್ಪಾದನಾ ಬೆದರಿಕೆಗಳು ವಿಶ್ವದ ಶಾಂತಿಗೆ ಭಂಗ ತರುತ್ತವೆ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಇಂತಹ ಚಟುವಟಿಕೆಗಳ ನಿಧಿಗೆ ಹಣಕಾಸು ಹರಿದು ಬರೋದ್ರಿಂದಲೇ ಚಟುವಟಿಕೆ ಪೋಷಣೆಯಾಗುತ್ತಿದೆ. ಈ ಬೆಳವಣಿಗೆಯು ವಿಶ್ವದ ರಾಷ್ಟ್ರಗಳ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ ಎಂದು ಎಚ್ಚರಿಸಿದ್ದಾರೆ.

    ಭಯೋತ್ಪಾದನೆ ವಿರುದ್ಧ ಹೋರಾಡುವ ನಮ್ಮ ಸಾಮೂಹಿಕ ಸಂಕಲ್ಪವನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಕೆಲವು ದೇಶಗಳು ನಡೆಸುತ್ತಿವೆ. ಇದರ ಹೊರತಾಗಿಯೂ ಭಾರತ ಭಯೋತ್ಪಾದನೆ ನಿಗ್ರಹಿಸಲು ಆರ್ಥಿಕ ವ್ಯವಸ್ಥೆ ಹಾಗೂ ಕಾನೂನು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿದೆ ಎಂದು ಶ್ಲಾಘಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರೀತಿಸಿ ಮದುವೆಯಾದವಳು ಮತಾಂತರವಾಗಲಿಲ್ಲ – ಪತ್ನಿಯನ್ನೇ ಕೊಲ್ಲಲು ಮುಂದಾದ ಪತಿ

    ಪ್ರೀತಿಸಿ ಮದುವೆಯಾದವಳು ಮತಾಂತರವಾಗಲಿಲ್ಲ – ಪತ್ನಿಯನ್ನೇ ಕೊಲ್ಲಲು ಮುಂದಾದ ಪತಿ

    ಚಿತ್ರದುರ್ಗ: ಎಲ್ಲೆಡೆ ಧರ್ಮಸಂಘರ್ಷ ತಾರಕಕ್ಕೇರಿದೆ. ಇಂತಹ ವೇಳೆ ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ಮತಾಂತರವಾಗಲಿಲ್ಲ ಎಂಬ ಕಾರಣಕ್ಕೆ ಗಂಡನೇ ಕೊಲೆ ಮಾಡಲು ಯತ್ನಿಸಿರುವ ಹೃದಯವಿದ್ರಾವಕ ಘಟನೆ ಚಿತ್ರದುರ್ಗದಲ್ಲಿ (Chitradurga) ಬೆಳಕಿಗೆ ಬಂದಿದೆ.

    ಆರೋಪಿ ಖಾದರ್ ಶಿವಮೊಗ್ಗ (Shivamogga) ಮೂಲದ ಉಮಾರನ್ನು ಮೊದಲೇ ವಿವಾಹವಾಗಿದ್ದ. ಚಿತ್ರದುರ್ಗದ (Chitradurga) ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಉಮಾ ಅವರಿಗೆ ಖಾದರ್ ಪರಿಚಯವಾಗಿದೆ. ಆ ಪರಿಚಯ ಪ್ರೀತಿಯಾಗಿ ವಿವಾಹವಾಗಿದ್ದರು. ವಿವಾಹದ ಬಳಿಕ ಆತನ ವರಸೆ ಬದಲಾಗಿದ್ದು, ಹೆಂಡತಿಯನ್ನು ಮತಾಂತರವಾಗುವಂತೆ ಒತ್ತಾಯಿಸಿದ್ದನು. ಆಗ ಈ ಒತ್ತಡಕ್ಕೊಳಗಾದ ಉಮಾಳ ಆರೋಗ್ಯ ಹದಗೆಟ್ಟಿದ್ದು, ಎರಡು ಕಾಲುಗಳು ನಿಷ್ಕ್ರಿಯಗೊಂಡಿದ್ದವು. ಈ ವೇಳೆ ತನ್ನ ಪತ್ನಿಯ ಬಗ್ಗೆ ಕಾಳಜಿವಹಿಸಬೇಕಾದ ಖಾದರ್, ಉಮಾಗೆ ಚಿತ್ರಹಿಂಸೆ ನೀಡಿ, ಆಕೆಯ ಖಾಸಗಿ ಅಂಗಾಂಗಾಗಳ ಹಲ್ಲೆ ನಡೆಸಿ, ಕ್ರೌರ್ಯ ಮೆರೆದಿದ್ದಾನೆ. ಅಲ್ಲದೇ ಇಸ್ಲಾಂ ಧರ್ಮಕ್ಕೆ ಮತಾಂತರವಾಗದಿದ್ದರೆ ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾನೆ. ಯಾರು ಇಲ್ಲದ ವೇಳೆ ಉಮಾಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲು ಖಾದರ್ ಯತ್ನಿಸಿದ್ದಾನೆ ಎಂದು ಉಮಾ ಆರೋಪಿಸಿದ್ದಾರೆ.

    ಸದ್ಯ ಖಾದರ್ ಮೋಸದ ಬಲೆಗೆ ಸಿಲುಕಿಕೊಂಡಿರುವ ಉಮಾ ಕಟ್ಟುಕೊಂಡ ಗಂಡನನ್ನು ಬಿಟ್ಟು ಬಂದು, ಮತಾಂತರದ ಕೂಪಕ್ಕೆ ಸಿಲುಕಿದ್ದಾರೆ. ಅತ್ತ ಸಂಸಾರವೂ ಇಲ್ಲ, ಇತ್ತ ಆರೋಗ್ಯವು ಹದಗೆಟ್ಟಿದೆ. ಹೀಗಾಗಿ ಕಂಗಾಲಾಗಿರುವ ಉಮಾ, ಅವರ ಸಂಬಂಧಿಯಾದ ವಿಶ್ವನಾಥ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ. ಇನ್ನೂ ತಮಗಾದ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡುವಂತೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಭೀಮಾ ಕೋರೆಗಾಂವ್‌ ಪ್ರಕರಣ – ದಲಿತ ಚಿಂತಕ ಆನಂದ್‌ ತೇಲ್ತುಂಬ್ಡೆಗೆ ಬಾಂಬೆ ಹೈಕೋರ್ಟ್ ಜಾಮೀನು

    ಒಟ್ಟಾರೆ ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಮತಾಂತರಗೊಳಿಸಲು ಗಂಡ ಯತ್ನಿಸಿದ್ದಾನೆ. ಹೀಗಾಗಿ ಪೊಲೀಸರೇ ಶಾಕ್ ಆಗಿದ್ದೂ, ಆರೋಪಿ ಅಬ್ದುಲ್ ಖಾದರ್‌ನನ್ನು ವಶಕ್ಕೆ ಪಡೆದು, ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಇತಿಹಾಸ ನಿರ್ಮಿಸಿದ ಭಾರತ – ಮೊದಲ ಖಾಸಗಿ ನಿರ್ಮಿತ ರಾಕೆಟ್ ಉಡಾಯಿಸಿದ ಇಸ್ರೋ

    Live Tv
    [brid partner=56869869 player=32851 video=960834 autoplay=true]

  • ರಾಜಕಾರಣಿಗಳು ಧರ್ಮ, ಜಾತಿಗಳ ಮಧ್ಯೆ ಸಂಘರ್ಷ ಹುಟ್ಟುಹಾಕುತ್ತಿದ್ದಾರೆ: ರಂಭಾಪುರಿ ಶ್ರೀ

    ರಾಜಕಾರಣಿಗಳು ಧರ್ಮ, ಜಾತಿಗಳ ಮಧ್ಯೆ ಸಂಘರ್ಷ ಹುಟ್ಟುಹಾಕುತ್ತಿದ್ದಾರೆ: ರಂಭಾಪುರಿ ಶ್ರೀ

    ಬೆಳಗಾವಿ: ಧರ್ಮ ಮತ್ತು ಜಾತಿಗಳ (Religion And Caste)  ಮಧ್ಯೆ ವ್ಯಾಪಕ ಸಂಘರ್ಷ ಹುಟ್ಟು ಹಾಕುವಂತ ಕೆಲಸವನ್ನು ಕೆಲ ರಾಜಕಾರಣಿಗಳು (Politicians) ಮಾಡುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

    ಬೈಲಹೊಂಗಲ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯ ಧುರೀಣರು ಸರ್ವ ಜನಾಂಗದ ಶ್ರೇಯೋಭಿವೃದ್ಧಿಗೆ ಗಮನ ಹರಿಸದೇ ಶಾಂತಿ ಮತ್ತು ಸೌಹಾರ್ದತೆ ಬೆಳೆಸದೇ ಅಧಿಕಾರದ ಗದ್ದುಗೆಗಾಗಿ ಜಾತಿಯಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಜನರ ಭಾವನೆಗಳನ್ನು ಕೆರಳಿಸುವಂತ ಕೆಲಸ ಮಾಡುತ್ತಿದ್ದಾರೆ. ಇಂತಹ ಕೃತ್ಯವನ್ನು ಯಾರೂ ಮಾಡಬಾರದೆಂಬ ಸಂದೇಶ ನಾವು ನೀಡಲು ಇಚ್ಚಿಸುತ್ತೇವೆ ಎಂದರು. ಇದನ್ನೂ ಓದಿ: ರವಿ.ಡಿ ಚನ್ನಣ್ಣನವರ್ ಸೇರಿ 11 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

    ಭಾರತೀಯ ಉತ್ಕೃಷ್ಟ ಸಂಸ್ಕೃತಿಯಲ್ಲಿ ಎಲ್ಲರೂ ಒಂದಾಗಿ ಬಾಳಬೇಕು. ಶಾಂತಿ, ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ, ತಮ್ಮ ಧರ್ಮಗಳಲ್ಲಿ ನಿಷ್ಠೆ ಹೊಂದಿರಬೇಕು. ಆದರೆ, ಪರಧರ್ಮದ ಬಗ್ಗೆ ಸಂಹಿಷ್ಣತಾ ಮನೋಭಾವ ಬೆಳೆಸಿಕೊಂಡು ಬಂದಾಗ ಮಾತ್ರ ಧರ್ಮ, ಜಾತಿಗಳ ಮಧ್ಯೆ ಯಾವುದೇ ಸಂಘರ್ಷ ಉಂಟಾಗುವುದಿಲ್ಲ. ಪ್ರತಿಯೊಬ್ಬರಲ್ಲಿ ಸ್ವಾಭಿಮಾನ ಇರಬೇಕು. ಸ್ವಾಭಿಮಾನದ ಕೊರತೆಯಿಂದಾಗಿ ಎಲ್ಲ ರಂಗಗಳಲ್ಲಿ ಅನೇಕ ಸಂಘರ್ಷ ಉಂಟಾಗುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರತಾಪ್‌ಸಿಂಹನಿಗೆ ಬಸ್‌ನಿಲ್ದಾಣದ ಗುಂಬಜ್‌ಗಳೂ ಮುಸ್ಲಿಮರ ಮಸೀದಿಯೆಂತೆ ಕಾಣ್ತಿದೆ – ಸೇಠ್ ತಿರುಗೇಟು

    ಕಾರ್ಯಕ್ರಮದಲ್ಲಿ ಸಂಗೊಳ್ಳಿ ಗುರುಲಿಂಗ ಸ್ವಾಮೀಜಿ, ಶಿರಕೊಳ್ಳ ಗುರುಸಿದ್ದೇಶ್ವರ ಸ್ವಾಮೀಜಿ, ಸುಳ್ಳದ ಶಿವಸಿದ್ಧರಾಮೇಶ್ವರ ಸ್ವಾಮೀಜಿ ಸೇರಿ ಅನೇಕರು ಇದ್ದರು.

    Live Tv
    [brid partner=56869869 player=32851 video=960834 autoplay=true]

  • ವೀರಶೈವ, ಲಿಂಗಾಯತ ಎರಡೂ ಒಂದೇ: ಬಿದರಿ ಸ್ಪಷ್ಟನೆ

    ವೀರಶೈವ, ಲಿಂಗಾಯತ ಎರಡೂ ಒಂದೇ: ಬಿದರಿ ಸ್ಪಷ್ಟನೆ

    ರಾಯಚೂರು: ವೀರಶೈವ (Veerashaiva), ಲಿಂಗಾಯತ (Lingayat) ಅಂತಾ ಪ್ರತ್ಯೇಕ ಧರ್ಮ ಅಥವಾ ಒಂದು ಜಾತಿಯಿಲ್ಲ. ವೀರಶೈವ, ಲಿಂಗಾಯತ ಎರಡೂ ಒಂದೇ ಅಂತಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಶಂಕರ ಮಹದೇವ ಬಿದರಿ ಸ್ಪಷ್ಟಪಡಿಸಿದ್ದಾರೆ.

    ರಾಯಚೂರಿನಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ (All India Veerashaiva Lingayat Mahasabha) ನಡೆದ ಬಯಲು ಸಿರಿ ಬೆಳಕು ಪ್ರಶಸ್ತಿ ಪ್ರದಾನ ಹಾಗೂ ಮಹಿಳಾ ಕಾನೂನು (Women’s Law) ಮತ್ತು ಯುವ ವಿಭಾಗಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಪತಿಯ ಕಿರುಕುಳ – ಪ್ರೀತಿಸಿ ಮದುವೆಯಾಗಿದ್ದ ತುಂಬು ಗರ್ಭಿಣಿ ನೇಣಿಗೆ ಶರಣು

    ವೀರಶೈವ, ಲಿಂಗಾಯತ ಎರಡೂ ಒಂದೇ, ವೀರಶೈವ ಮಹಾಸಭೆಯಲ್ಲಿ ಇತ್ತೀಚೆಗೆ ವಿನಂತಿ ಮಾಡಿಕೊಂಡು ಲಿಂಗಾಯತ ಪದವನ್ನ ಕೂಡಿಸುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೊಂದು ಹನಿಟ್ರ್ಯಾಪ್ ಕೇಸ್ – ಪ್ರೀತ್ಸೋ ನೆಪದಲ್ಲಿ ಮಾಯಾಂಗನೆ ಹನಿಟ್ರ್ಯಾಪ್ ಖೆಡ್ಡಕ್ಕೆ ಬಿದ್ದ ಯುವಕ

    ಒಳ್ಳೆಯ ರೀತಿಯಲ್ಲಿ ಒಗ್ಗಟ್ಟಾಗಿದ್ದ ನಮ್ಮ ಸಮಾಜದಲ್ಲಿ ಕೆಲವರು ಚಿಲ್ಲರೆ ವಿಚಾರಗಳು ಹಾಗೂ ತಾತ್ವಿಕ ವಿಚಾರಗಳನ್ನ ತಂದು ಸಮಾಜ ಒಡೆಯುವಂತ ಪ್ರಯತ್ನ ನಡೆಯಿತು. ಇದಕ್ಕಾಗಿ ಮಹಾಸಭಾದಲ್ಲಿ ಲಿಂಗಾಯತ ಪದ ಸೇರಿಸಿದ್ದೇವೆ. ವೀರಶೈವ ಲಿಂಗಾಯತ ಸಮಾಜವನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ. ಆದರೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ಅಭಿವೃದ್ಧಿ ಹೊಂದಲು ಪ್ರಯತ್ನಿಸಬೇಕಿದೆ. ಎಲ್ಲರ ಒಗ್ಗಟ್ಟಿನಿಂದ ಮಾತ್ರ ಸಮಾಜ ಉಳಿಯಲು ಸಾಧ್ಯ ಎಂದು ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]