Tag: Relief Fund

  • “ಮೃತರ ಮನೆಗೆ ಸಚಿವರು ಹೋಗಬೇಕೋ? ಮೃತರ ಮನೆಯವರು ಸಚಿವರ ಬಳಿ ಹೋಗಬೇಕೋ?”

    “ಮೃತರ ಮನೆಗೆ ಸಚಿವರು ಹೋಗಬೇಕೋ? ಮೃತರ ಮನೆಯವರು ಸಚಿವರ ಬಳಿ ಹೋಗಬೇಕೋ?”

    – ಸಚಿವ ಪುಟ್ಟರಂಗ ಶೆಟ್ಟಿ ನಡೆಗೆ ಗ್ರಾಮಸ್ಥರ ಆಕ್ರೋಶ
    – ಮತಕ್ಕಾಗಿ ಮನೆಗೆ ಬರೋ ನೀವು ಈ ಸಮಯದಲ್ಲಿ ಯಾಕೆ ಬರಲ್ಲ?

    ಚಾಮರಾಜನಗರ: ಮಾರಮ್ಮ ದೇವಸ್ಥಾನ ಪ್ರಸಾದ ಸೇವಿಸಿ ಮೃತಪಟ್ಟ ಸದಸ್ಯರ ಕುಟುಂಬಸ್ಥರನ್ನು ತನ್ನ ಬಳಿ ಕರೆಯಿಸಿ ಪರಿಹಾರ ಧನ ನೀಡಲು ನಿರ್ಧಾರ ಮಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

    ಹನೂರಿನ ಪ್ರವಾಸಿ ಮಂದಿರದಲ್ಲಿ ಪರಿಹಾರ ಧನ ನೀಡಲು ಮಂಗಳವಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮೃತರ ಕುಟುಂಬಸ್ಥರು ಪರಿಹಾರ ಹಣ ಪಡೆಯಲು 50 ಕಿಲೋಮೀಟರ್ ಪ್ರಯಾಣ ಮಾಡಿ ಪಡೆಯಬೇಕಾದ ಸ್ಥಿತಿಗೆ ಬಂದಿದ್ದಾರೆ.

    ವಿಷ ಪ್ರಸಾದ ಸೇವಿಸಿ ಒಂದೇ ಗ್ರಾಮ ಬಿದರಹಳ್ಳಿಯಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಹೀಗಿರುವಾಗ ಗ್ರಾಮಕ್ಕೆ ಸಚಿವರು ಬರುವ ಬದಲು ಜನರನ್ನೇ ತಮ್ಮ ಬಳಿ ಕರೆಸಿಕೊಳ್ಳುತ್ತಿದ್ದಾರೆ. ಕುಟುಂಬದವರು ಮೊದಲೇ ಕುಟುಂಬ ಸದಸ್ಯರನ್ನು ಕಳೆದುಕೊಂಡು ದುಃಖಿತರಾಗಿದ್ದು, ಹಣ ಪಡೆಯಲು ಈಗ 50 ಕಿ.ಮೀ ಪ್ರಯಾಣಿಸಬೇಕಾಗಿದೆ.

    ಸಚಿವ ಸಿ. ಪುಟ್ಟರಂಗಶೆಟ್ಟಿ ಇಂದು ಮಧ್ಯಾಹ್ನ 2.30ಕ್ಕೆ ಪರಿಹಾದ ಹಣ ಕೊಡಲಿದ್ದಾರೆ. ಸಚಿವರ ಈ ನಿರ್ಧಾರಕ್ಕೆ ಜನಗಳು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಸತ್ತವರ ಮನೆಗೆ ಸಚಿರು ಹೋಗಬೇಕೋ? ಸತ್ತವರ ಮನೆಯವರು ಸಚಿವರ ಬಳಿ ಹೋಗಬೇಕೋ? ಮತ ಹಾಕಿಸಿಕೊಳ್ಳಲು ಮನೆ ಮುಂದೆ ಬರುತ್ತಾರೆ. ಈಗ ಜನರೇ ಅವರ ಬಳಿ ಹೋಗಬೇಕೇ? ಯಾವ ಸಮಯದಲ್ಲಿ ಯಾವ ರೀತಿ ವ್ಯವಹರಿಸಬೇಕು ಎನ್ನುವ ಕನಿಷ್ಟ ಜ್ಞಾನ ಸಚಿವರಿಗಿಲ್ಲವೇ ಎಂದು ಪ್ರಶ್ನಿಸಿ ಎಂದು ಸಚಿವರ ವಿರುದ್ಧ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ಪರಿಹಾರ ನಿಧಿಗೆ ಶಿವಣ್ಣರಿಂದ 10 ಲಕ್ಷ ಚೆಕ್

    ಸಿಎಂ ಪರಿಹಾರ ನಿಧಿಗೆ ಶಿವಣ್ಣರಿಂದ 10 ಲಕ್ಷ ಚೆಕ್

    ಬೆಂಗಳೂರು: ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗು ಮಂದಿಗೆ ರಾಜ್ಯದ ಮೂಲೆ ಮೂಲೆಗಳಿಂದ ನೆರವು ಹರಿದು ಬರುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ನೆರವು ನೀಡಿದ್ದಾರೆ.

    ನಟ ಶಿವರಾಜ್‍ಕುಮಾರ್ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಶಿವಣ್ಣ ಸಿಎಂ ಪರಿಹಾರ ನಿಧಿಗೆ 10 ಲಕ್ಷ ಚೆಕ್ ಕೂಡ ನೀಡಿದರು. ಅಲ್ಲದೇ ಅಭಿಮಾನಿಗಳಲ್ಲಿ ಮನವಿ ಕೂಡ ಮಾಡಿಕೊಂಡರು.

    ಇದೇ ವೇಳೆ ಮಾತನಾಡಿದ ಶಿವರಾಜ್‍ಕುಮಾರ್, ಕರ್ನಾಟಕ ಒಂದೇ. ಯಾರದ್ದೇ ಕಷ್ಟ ಇದ್ದರು ನಾವು ಸ್ಪಂಧಿಸಬೇಕು. ಮಂಗಳೂರು, ಕೊಡಗು, ಉತ್ತರ ಕರ್ನಾಟಕ ಅಂತ ಇಲ್ಲ. ಅಖಂಡ ಕರ್ನಾಟಕ ನಮ್ಮದು. ಯಾರದ್ದೇ ಕಷ್ಟ ಆದ್ರು ನಾವು ಸಹಾಯ ಮಾಡಬೇಕು. ಎಲ್ಲಾ ಜನರು ಕೈಲಾದಷ್ಟು ಸಹಾಯ ಮಾಡಿ. ಅಭಿಮಾನಿಗಳು, ನಟರು, ಜನರು ಸಹಾಯ ಮಾಡುವಂತೆ ಶಿವಣ್ಣ ಮನವಿ ಮಾಡಿಕೊಂಡರು.

    ನಿರ್ದೇಶಕ ಪವನ್ ಒಡೆಯರ್ ಮದುವೆಯಲ್ಲಿ ಪುನೀತ್ ರಾಜ್‍ಕುಮಾರ್ ಭಾಗಿಯಾಗಿದ್ದರು. ಇದೇ ವೇಳೆ ಕೊಡಗಿನಲ್ಲಿ ಸಂಭವಿಸಿರುವ ಪ್ರವಾಹದ ಪರಿಸ್ಥಿತಿ ಬಗ್ಗೆ ಮಾತನಾಡಿ, ಕೊಡಗಿನ ಜನತೆಗೆ ನನ್ನ ಕೈಲಾದಷ್ಟು ನಾನು ಸಹಾಯ ಮಾಡಿದ್ದೇನೆ. ಎಲ್ಲರೂ ಅವರ ಶಕ್ತಿಯಾನುಸಾರ ಸಹಾಯ ಮಾಡಬೇಕು. ಸಂತ್ರಸ್ತ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗು ಪರಿಹಾರ ನಿಧಿ- ಸಹಾಯ ಮಾಡುವಂತೆ ಸಿಎಂ ಎಚ್‍ಡಿಕೆ ಮನವಿ

    ಕೊಡಗು ಪರಿಹಾರ ನಿಧಿ- ಸಹಾಯ ಮಾಡುವಂತೆ ಸಿಎಂ ಎಚ್‍ಡಿಕೆ ಮನವಿ

    ಬೆಂಗಳೂರು: ಪ್ರವಾಹದಿಂದ ತೀವ್ರ ತತ್ತರಿಸಿ ಹೋಗಿರುವ ಕೊಡಗು ಜಿಲ್ಲೆಯ ಜನತೆಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

    ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಗೆ ಸಾರ್ವಜನಿಕರು ಕೊಡುಗೆ ನೀಡುವಂತೆ ಕೋರಿದ್ದಾರೆ. ವಿಧಾನಸೌಧ ವಿಳಾಸಕ್ಕೆ ಚೆಕ್ ಅಥವಾ ಡಿಡಿ ರೂಪದಲ್ಲಿ ಮಾತ್ರವಲ್ಲದೆ ಆನ್ ಲೈನ್ ಮೂಲಕವೂ ಸಲ್ಲಿಸಬಹುದು ಅಂತ ಮನವಿ ಮಾಡಿದ್ದಾರೆ. ಹೆಚ್ಚಿನ ವಿವರಗಳ ಬಗ್ಗೆ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.

    ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗು ಮಂದಿಗೆ ರಾಜ್ಯದ ಮೂಲೆ ಮೂಲೆಗಳಿಂದ ನೆರವು ಹರಿದು ಬರುತ್ತಿದೆ. ಈಗಾಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್‍ ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ನೆರವು ನೀಡಿದ್ದಾರೆ. ರಾಜ್ಯ ಸಭಾ ಸದಸ್ಯ ಕುಪ್ಪೆಂದ್ರ ರೆಡ್ಡಿ ಅವರು 25 ಲಕ್ಷ ರೂ. ಚೆಕ್ ನೀಡಿದ್ದಾರೆ. ಆನಂದ್ ನಾಗಮಂಗಲದ ನಿವಾಸಿ ಮನೆ ಗೃಹ ಪ್ರವೇಶ ನಿಲ್ಲಿಸಿ 1 ಲಕ್ಷ ರೂ. ಸಿಎಂ ಪರಿಹಾರ ನಿಧಿಗೆ ಹಣ ನೀಡಿದ್ದಾರೆ.

    ರಾಜ್ಯದ ಸಾರಿಗೆ ಸಿಬ್ಬಂದಿಗಳು ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದಾರೆ. ಆಗಸ್ಟ್ ತಿಂಗಳ ಒಂದು ದಿನದ ವೇತನ ನೀಡಲು ತಿರ್ಮಾನಿಸಿದ್ದು, ಒಟ್ಟು 1.16 ಲಕ್ಷ ಸಿಬ್ಬಂದಿ ಇದ್ದು, ಅಂದಾಜು 11. 80 ಕೋಟಿ ರೂ. ಹಣವನ್ನು ನೀಡಲು ತಿರ್ಮಾನ ಮಾಡಿದ್ದಾರೆ.

    ಕೊಡಗು ಪ್ರವಾಹದ ಬಗ್ಗೆ ಕುಮಾರಸ್ವಾಮಿ ಸಭೆ ನಡೆಸಿದ್ದು, ಎರಡು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಾಗಿದೆ. ಹಲವು ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದ್ದು, 12 ಜನ ಮೃತಪಟ್ಟಿದ್ದಾರೆ. ಸುಮಾರು 845 ಮನೆಗಳು ಪೂರ್ಣ ಹಾನಿಗೊಳಗಾಗಿವೆ ಎಂದು ಎಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

    ಇದೇ ವೇಳೆ ಕೊಡಗಿನ ನಿರಾಶ್ರಿತರಿಗೆ ಸರ್ಕಾರ ತಾತ್ಕಾಲಿಕ ಪರಿಹಾರ ಘೋಷಿಸಿದೆ. ಸದ್ಯಕ್ಕೆ 3,800 ರೂಪಾಯಿ ಹಣ ನೀಡಲು ನಿರ್ಧರಿಸಿದ್ದಾರೆ. ಜೊತೆಗೆ 10 ಕೆ.ಜಿ ಅಕ್ಕಿ, 1 ಕೆಜಿ ಸಕ್ಕರೆ, 1ಕೆಜಿ ಎಣ್ಣೆ, 1 ಕೆಜಿ ತೊಗರಿ ಬೇಳೆ, 5 ಲೀಟರ್ ಸೀಮೆಎಣ್ಣೆಯನ್ನು ಉಚಿತವಾಗಿ ನೀಡಲಿದೆ. ನಿರಾಶ್ರಿತರಿಗೆ ನರೇಗಾ ಯೋಜನೆಯಲ್ಲಿ ಕೆಲಸ ನೀಡಲು ಸಿಎಂ ಆದೇಶಿಸಿದ್ದು, 2 ಸಾವಿರ ಅಲ್ಯೂಮಿನಿಯಂ ಶೆಡ್ ನಿರ್ಮಿಸಲು ಸೂಚಿಸಿದ್ದಾರೆ.

    ಕೊಡಗಿನಲ್ಲಿ ಮಳೆಯಿಂದ ಹಾನಿ ಹಿನ್ನೆಲೆ
    ಹೊಸ ರಿಲೀಫ್ ಅಕೌಂಟ್ ತೆರೆದ ಸಿಎಂ
    ಖಾತೆ ಸಂಖ್ಯೆ : 37887098605
    ಐಎಫ್‍ಎಸ್‍ಸಿ ಕೋಡ್ : ಎಸ್‍ಬಿಐಎನ್ 0040277
    ಎಂಐಸಿಆರ್ : 560003419

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೈಕ್ ಸಮೇತ ಕೊಚ್ಚಿ ಹೋಗಿದ್ದ ಯುವಕನ ಕುಟುಂಬಕ್ಕೆ ಶಾಸಕರಿಂದ 5 ಲಕ್ಷ ರೂ.

    ಬೈಕ್ ಸಮೇತ ಕೊಚ್ಚಿ ಹೋಗಿದ್ದ ಯುವಕನ ಕುಟುಂಬಕ್ಕೆ ಶಾಸಕರಿಂದ 5 ಲಕ್ಷ ರೂ.

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಬಸ್ತಿಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ಯುವಕ ಅಶೋಕ್ ಕುಟುಂಬಕ್ಕೆ ಶಾಸಕ ಟಿ.ಡಿ.ರಾಜೇಗೌಡ ಅವರು ಶಾಸಕರ ಪರಿಹಾರ ನಿಧಿಯಿಂದ 5 ಲಕ್ಷದ ಚೆಕ್ ವಿತರಿಸಿದ್ದಾರೆ.

    ಜುಲೈ 11 ರಂದು ಬಸ್ತಿ ಹಳ್ಳದ ಮೇಲೆ ಕೊಗ್ರೆ ಗ್ರಾಮಕ್ಕೆ ಹೋಗುತ್ತಿದ್ದ ಶೃಂಗೇರಿ ತಾಲೂಕಿನ ಮೇಗೂರಿನ ಅಶೋಕ್ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದರು. ಎನ್.ಆಡಿ.ಆರ್.ಎಫ್ ತಂಡ ಮೂರು ದಿನಗಳ ಕಾಲ ಶವಕ್ಕಾಗಿ ಶೋಧ ನಡೆಸಿ, ನೀರಿನ ರಭಸ ಕಂಡು ವಾಪಸ್ಸಾಗಿದ್ದರು.

    ಸ್ಥಳೀಯರೇ ಚಂದಾ ಎತ್ತಿ ಖಾಸಗಿ ಈಜು ಪಟುಗಳನ್ನ ಕರೆಸಿ ಮೃತ ದೇಹ ಹುಡುಕಿಸಿದ್ದರು. 9 ದಿನಗಳ ಕಾಲ ನಿರಂತರವಾಗಿ ಶವ ಹುಡುಕಿದ್ದರಿಂದ ಗುರುವಾರ ಮಧ್ಯಾಹ್ನ ಮೂರು ಗಂಟೆಗೆ ಬಸ್ತಿ ಹಳ್ಳದಿಂದ ಹತ್ತು ಕಿ.ಮೀ. ದೂರದ ಭದ್ರಾ ಗೇಟ್ ಬಳಿ ಅಶೋಕ್ ಮೃತ ದೇಹ ಪತ್ತೆಯಾಗಿತ್ತು.

    ಶುಕ್ರವಾರ ಮೃತ ಅಶೋಕ್ ಮನೆಗೆ ಭೇಟಿ ನೀಡಿದ್ದ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರು ಅಶೋಕ್ ಕುಟುಂಬಕ್ಕೆ ಚೆಕ್ ನೀಡಿ ಸಾಂತ್ವಾನ ಹೇಳಿದ್ದಾರೆ.