Tag: reliance

  • ರಿಲಾಯನ್ಸ್ ನಿಂದ ಧೀರೂಭಾಯಿ ಅಂಬಾನಿ ಸ್ಕ್ವೇರ್ ಲೋಕಾರ್ಪಣೆ

    ರಿಲಾಯನ್ಸ್ ನಿಂದ ಧೀರೂಭಾಯಿ ಅಂಬಾನಿ ಸ್ಕ್ವೇರ್ ಲೋಕಾರ್ಪಣೆ

    – ಬಡ ಮಕ್ಕಳಿಗೆ ಇಂದಿನಿಂದ ಅನ್ನದಾನ

    ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈ ಜನತೆಗಾಗಿ ರಿಲಯನ್ಸ್ ಇಂಡಸ್ಟ್ರಿಯ ಮುಖ್ಯಸ್ಥ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಇಂದು ‘ಧೀರೂಭಾಯಿ ಸ್ಕ್ವೇರ್’ ಲೋಕಾರ್ಪಣೆ ಮಾಡಿದರು. ಇದು ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ಬಳಿಯ ಧೀರೂಭಾಯಿ ಅಂಬಾನಿ ಅಂತರಾಷ್ಟ್ರೀಯ ಶಾಲೆಯ ಬಳಿ ನಿರ್ಮಾಣಗೊಂಡಿದೆ.

    ಧೀರೂಭಾಯಿ ಸ್ಕ್ವೇರ್ ಜಿಯೋ ವರ್ಲ್ಡ್ ಸೆಂಟರ್ ನ ಭಾಗವಾಗಿದೆ. ಜಿಯೋ ವರ್ಲ್ಡ್  ಸೆಂಟರ್ ಮತ್ತು ರಿಲಯನ್ಸ್ ಉದ್ಯಮ ದೇಶದ ಅತ್ಯುನ್ನತ ಸಂಸ್ಥೆಯಾಗಿದ್ದು, ದೇಶದ ಜನತೆ ಹಲವು ಸೇವೆಗಳನ್ನು ನೀಡುತ್ತಿದೆ. ಜಾಗತಿಕ ಮಟ್ಟದ ಸೇವೆ ಮತ್ತು ಸೌಲಭ್ಯಗಳನ್ನು ಭಾರತದ ಜನತೆ ನೀಡುವ ಉದ್ದೇಶದಿಂದ ರಿಲಯನ್ಸ್ ಉದ್ಯಮ ಕೆಲಸ ಮಾಡುತ್ತಿದೆ.

    ಈ ವೇಳೆ ಮಾತನಾಡಿದ ರಿಲಯನ್ಸ್ ಫೌಂಡೇಶನ್‍ನ ಮುಖ್ಯಸ್ಥೆ ಮತ್ತು ಸ್ಥಾಪಕಿ ನೀತಾ ಅಂಬಾನಿ, ಜಾಗತಿಕ ಮಟ್ಟದಲ್ಲಿ ಭಾರತದ ಅಭಿವೃದ್ಧಿಯಲ್ಲಿ ದೇಶದ ಇಬ್ಬರು ಸುಪುತ್ರರಂತೆ ಧೀರೂಭಾಯಿ ಸ್ಕ್ವೇರ್ ಮತ್ತು ಜಿಯೋ ವರ್ಲ್ಡ್ ಸೆಂಟರ್ ಕೆಲಸ ಮಾಡುತ್ತಿವೆ. ಇಂದಿನ ಸಂಜೆ ನಮಗೆ ಸ್ಪೆಶಲ್ ಆಗಿದ್ದು, ಮುಂಬೈನ ಮಕ್ಕಳಿಗಾಗಿ ನಾವು ಇಂದು ಸುಂದರ ಕಾಣಿಕೆಯನ್ನು ನೀಡುತ್ತಿದ್ದೇವೆ. ನಮ್ಮನ್ನು ಈ ಸ್ಥಾನಕ್ಕೆ ತಂದ ಮುಂಬೈ ಮಹಾನಗರಿಗೆ ಧನ್ಯವಾದ ಹೇಳುವ ಸಂಜೆ ಇದಾಗಿದೆ ಅಂದ್ರು.

    ಈ ಕಾರ್ಯಕ್ರಮಕ್ಕೆ 2 ಸಾವಿರ ಮಕ್ಕಳನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ರಿಲಯನ್ಸ್ ಫೌಂಡೇಶನ್ ಅಡಿಯಲ್ಲಿರುವ ಎನ್‍ಜಿಓ ಗಳಿಂದ ಆಗಮಿಸಿದ್ದ ಮಕ್ಕಳಿಗಾಗಿ ಧೀರೂಭಾಯಿ ಸ್ಕ್ವೇರ್ ನಲ್ಲಿ ಸಂಗೀತ ಕಾರಂಜಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ವಂದೇ ಮಾತರಂ ಮತ್ತು ಜೈ ಹೋ ಹಾಡಿಗೆ ಬಣ್ಣ ಬಣ್ಣಗಳ ಕಾರಂಜಿಯ ಚಿತ್ತಾರವನ್ನು ನೋಡಿ ಮಕ್ಕಳು ಖುಷಿಪಟ್ಟರು.

    ಸಂಗೀತ ಕಾರಂಜಿ ಕುರಿತು ಮಾತನಾಡಿದ ನೀತಾ ಅಂಬಾನಿ, ಮುಂದಿನ ದಿನಗಳ ಮುಂಬೈನ ಎಲ್ಲ ನಿವಾಸಿಗಳಿಗೂ ಮ್ಯೂಸಿಕಲ್ ಫೌಂಟೇನ್ ನೋಡುವ ಅವಕಾಶ ಸಿಗಲಿದೆ. ಮುಂಬೈ ನಿವಾಸಿಗಳಿಗೆ ವರ್ಲ್ಡ್ ಕ್ಲಾಸ್ ಧೀರೂಭಾಯಿ ಸ್ಕ್ವೇರ್ ಭೇಟಿ ನೀಡಬಹುದು. ಜಿಯೋ ವರ್ಲ್ಡ್ ಸೆಂಟರ್ ದೇಶದ ಅತಿದೊಡ್ಡ ಅತ್ಯತ್ತಮ ಜಾಗತಿಕ ಸಮಾವೇಶ ಕೇಂದ್ರವಾಗಲಿದೆ ಎಂದು ಹೇಳಿದರು.

    ಜಿಯೋ ವರ್ಲ್ಡ್ ಸೆಂಟರ್ ಈ ವರ್ಷದ ಅಂತ್ಯದವರೆಗೆ ತೆರೆಯಲಿದ್ದು, ಎಲ್ಲ ತರಹದ ಜನರು ಇಲ್ಲಿ ಸೇರಬಹುದು. ಕಲೆ, ಆಚಾರ, ವಿಚಾರ, ಸಂಪ್ರದಾಯದ ಬಗ್ಗೆ ತಮ್ಮ ಅನುಭವವಗಳನ್ನು ಇಲ್ಲಿ ಹಂಚಿಕೊಳ್ಳಬಹುದಾಗಿದೆ. ಇದರಿಂದ ನಮ್ಮ ದೇಶದ ಸಂಸ್ಕೃತಿಯ ಉಳಿಸುವ ಉದ್ದೇಶವನ್ನು ಜಿಯೋ ಹೊಂದಿದೆ ಎಂದರು.

    ಅನ್ನದಾನ: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಇಂದಿನಿಂದ ಮಾರ್ಚ್ 16ರವರೆಗೆ ಮುಂಬೈನ ಎಲ್ಲ ಆನಾಥಾಶ್ರಮ ಮತ್ತು ವೃದ್ಧಾಶ್ರಮಗಳಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಧೀರೂಭಾಯಿ ಸ್ಕ್ವೇರ್ ಮುಂಬೈ ನಿವಾಸಿಗಳಿಗೆ ಸಮರ್ಪಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರು ಈ ಸ್ಥಳಕ್ಕೆ ಭೇಟಿ ನೀಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶದ ಮೊದಲ VOLTE ಅಂತರಾಷ್ಟ್ರೀಯ ರೋಮಿಂಗ್ ಪ್ರಾರಂಭಿಸಿದ ಜಿಯೋ

    ದೇಶದ ಮೊದಲ VOLTE ಅಂತರಾಷ್ಟ್ರೀಯ ರೋಮಿಂಗ್ ಪ್ರಾರಂಭಿಸಿದ ಜಿಯೋ

    ಮುಂಬೈ: ಭಾರತ ಮತ್ತು ಜಪಾನ್ ನಡುವೆ ವಾಯ್ಸ್ ಓವರ್ ಎಲ್‍ಟಿಇ(ವಿಓಎಲ್‍ಟಿಇ) ಆಧರಿತ ಒಳಬರುವ (ಇನ್‍ಬೌಂಡ್) ಅಂತರಾಷ್ಟ್ರೀಯ ರೋಮಿಂಗ್ ಸೇವೆಯನ್ನು ರಿಲಯನ್ಸ್ ಜಿಯೋ ಆರಂಭಿಸಿದೆ.

    ಈ ಸೇವೆಯನ್ನು ಆರಂಭಿಸುವ ಮೂಲಕ ಭಾರತದಲ್ಲಿ ವಿಓಎಲ್‍ಟಿಇ ಆಧರಿತ ಅಂತರಾಷ್ಟ್ರೀಯ ರೋಮಿಂಗ್ ಸೇವೆಗಳನ್ನು ಒದಗಿಸಿದ ಮೊದಲ 4ಜಿ ಮೊಬೈಲ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಜಿಯೋ ಪಾತ್ರವಾಗಿದೆ. ಈ ಸೇವೆಯನ್ನು ಬಳಸುವ ಅಂತರಾಷ್ಟ್ರೀಯ ಪ್ರಯಾಣಿಕರು ಎಚ್‍ಡಿ ವಾಯ್ಸ್ ಹಾಗೂ ಎಲ್‍ಟಿಇ ಅತಿವೇಗದ ಡೇಟಾ ಸಂಪರ್ಕವನ್ನು ಪಡೆಯಲಿದ್ದಾರೆ.

    ಜಿಯೋನ ಸಂಪೂರ್ಣ-ಐಪಿ ಮತ್ತು 4ಜಿ ಜಾಲದಲ್ಲಿ ಅತಿವೇಗದ ಡೇಟಾ ಹಾಗೂ ವಾಯ್ಸ್ ಸೇವೆಗಳನ್ನು ಅಂತರಾಷ್ಟ್ರೀಯ ಪ್ರಯಾಣಿಕರೂ ಪಡೆಯಲು ಜಿಯೋ ವಿಓಎಲ್‍ಟಿಇ ಕಾಲಿಂಗ್ ಹಾಗೂ ಎಲ್‍ಟಿಇ ಅಂತಾರಾಷ್ಟ್ರೀಯ ರೋಮಿಂಗ್ ಸೇವೆ ನೆರವಾಗಲಿದ್ದು, ಇದನ್ನು ಬಳಸಲಿರುವ ಮೊದಲ ಅಂತರಾಷ್ಟ್ರೀಯ ಮೊಬೈಲ್ ಸೇವಾ ಸಂಸ್ಥೆ ಜಪಾನಿನ ಕೆಡಿಡಿಐ ಕಾರ್ಪೊರೇಶನ್ ಆಗಲಿದೆ.

    “ಇಡೀ ಭಾರತ ಮತ್ತು ಹಾಗೂ ಜಪಾನಿಗೆ ಭೇಟಿ ನೀಡುವವರಿಗೆ ಅತ್ಯುತ್ತಮ ಡೇಟಾ ಮತ್ತು ವಾಯ್ಸ್ ಅನುಭವವನ್ನು ನೀಡುವುದು ರಿಲಯನ್ಸ್ ಜಿಯೋ ಗುರಿ. ಭಾರತದ ಮೊದಲ ಅಂತರಾಷ್ಟ್ರೀಯ ವಿಓಎಲ್‍ಟಿಇ ಹಾಗೂ ಎಚ್‍ಡಿ ರೋಮಿಂಗ್ ಬಳಕೆದಾರರಾಗಿ ಕೆಡಿಡಿಐ ಗ್ರಾಹಕರನ್ನು ನಾವು ಜಿಯೋಗೆ ಸ್ವಾಗತಿಸುತ್ತೇವೆ,” ಎಂದು ರಿಲಯನ್ಸ್ ಜಿಯೋದ ಮಾರ್ಕ್ ಯಾರ್ಕೋಸ್ಕಿ ಹೇಳಿದರು.

    ಸೆಪ್ಟೆಂಬರ್ 2018ರಲ್ಲಿ 20.6 ಎಂಬಿಪಿಎಸ್ ಡೌನ್‍ಲೋಡ್ ವೇಗದೊಡನೆ, ಟ್ರಾಯ್‍ನ ಮೈಸ್ಪೀಡ್ ಅಪ್ಲಿಕೇಶನ್‍ನಿಂದ ಕಳೆದ ಇಪ್ಪತ್ತು ತಿಂಗಳ ಅವಧಿಯಲ್ಲಿ ಸತತವಾಗಿ ದೇಶದ ಅತ್ಯಂತ ವೇಗದ ಜಾಲವೆಂಬ ಹೆಗ್ಗಳಿಕೆಯನ್ನು ಜಿಯೋ ಪಡೆದುಕೊಂಡಿದೆ. ದೇಶದಲ್ಲೇ ಅತ್ಯಂತ ದೊಡ್ಡದಾದ ಎಲ್‍ಟಿಇ ವ್ಯಾಪ್ತಿ ಹೊಂದಿರುವ ಹೆಗ್ಗಳಿಕೆಯನ್ನೂ ಜಿಯೋ ಹೊಂದಿದೆ.

    ಪ್ರಾರಂಭವಾದ ಎರಡೇ ವರ್ಷಗಳಲ್ಲಿ 25.2 ಕೋಟಿಗೂ ಹೆಚ್ಚಿನ ಗ್ರಾಹಕರನ್ನು ಪಡೆದು, ವಿಶ್ವದ 9ನೇ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಜಿಯೋ ಬೆಳೆದಿದೆ. ಕಡಿಮೆ ಬೆಲೆಯಲ್ಲಿ ಡೇಟಾ ಪ್ಯಾಕ್ ಗಳನ್ನು ಘೋಷಿಸುವುದರೊಂದಿಗೆ ಭಾರತವನ್ನು ವಿಶ್ವದ ಅತಿದೊಡ್ಡ ಮೊಬೈಲ್ ಡೇಟಾ ಬಳಕೆದಾರ ರಾಷ್ಟ್ರವಾಗಿ ಜಿಯೋ ಈಗ ಬದಲಿಸಿದೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಭಾರತದ ಟೆಲಿಕಾಂ ಕ್ಷೇತ್ರವನ್ನು ಜಿಯೋ ಶೇಕ್ ಮಾಡಿದ್ದು ಹೇಗೆ?

    ಭಾರತದ ಟೆಲಿಕಾಂ ಕ್ಷೇತ್ರವನ್ನು ಜಿಯೋ ಶೇಕ್ ಮಾಡಿದ್ದು ಹೇಗೆ?

    ಮುಂಬೈ: ದೇಶದ ನಂಬರ್ ಒನ್ ಶ್ರೀಮಂತ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಒಡೆತನದ ಜಿಯೋ ನೆಟ್‍ವರ್ಕ್ ಭಾರತದ ಟೆಲಿಕಾಂ ಮಾರುಕಟ್ಟೆಯನ್ನೇ ಬುಡಮೇಲು ಮಾಡಿದೆ. ಒಂದು ಜಿಬಿ ಡೇಟಾ ಪ್ಯಾಕ್ ಹಾಕಲು ಹಿಂದೆ ಮುಂದೆ ನೋಡುತ್ತಿದ್ದ ಜನ ಈಗ ಜಿಯೋದಿಂದ ಪ್ರತಿದಿನ ಒಂದು ಜಿಬಿ ಡೇಟಾದ ಜೊತೆಗೆ ಉಚಿತವಾಗಿ ಕರೆಯನ್ನು ಮಾಡುವಂತೆ ಮಾಡಿದೆ.

    2016ರಲ್ಲಿ ಸ್ಥಾಪನೆಯಾದ ಜಿಯೋ ದೇಶದ ಮೂರನೇ ಅತಿದೊಡ್ಡ ನೆಟ್‍ವರ್ಕ್ ಸಂಸ್ಥೆಯಾಗಿ ಹೊರಹೊಮ್ಮಿದೆ. ಮೊದಲನೇ ಸ್ಥಾನದಲ್ಲಿ ಭಾರತಿ ಏರ್‍ಟೆಲ್ ಇದ್ದರೆ,  ಎರಡನೇ ಸ್ಥಾನದಲ್ಲಿ ಐಡಿಯಾ ಸೆಲ್ಯುಲರ್ ಹಾಗೂ ವೊಡಾಫೋನ್ ಇದೆ.

    1 ಜಿಬಿ ಡೇಟಾ ದರ ಎಷ್ಟಿತ್ತು?
    2013ರಲ್ಲಿ ಪ್ರತಿ ಜಿಬಿ ದರ 350 ರೂಪಾಯಿಗಳಾಗಿದ್ದರೆ, 2014ರಲ್ಲಿ 250 ರೂ. ಆಗಿ, ಕ್ರಮೇಣ 2015 ರಲ್ಲಿ 225 ರೂ. ಆಗಿತ್ತು. ಆದರೆ 2016ರಲ್ಲಿ ಜಿಯೋ ಮಾರುಕಟ್ಟೆಗೆ ಪ್ರವೇಶಿಸಿದ ಸಮಯದಲ್ಲಿ ಪ್ರತಿ ಜಿಬಿಗೆ 150 ರೂ. ನಿಗದಿಪಡಿಸಿತ್ತು. ಆರಂಭದ ಮೂರು ತಿಂಗಳು ಜಿಯೋ ಉಚಿತ ಡೇಟಾ ನೀಡಿತ್ತು. 2018 ರಲ್ಲಿ 1 ಜಿಬಿ ಡೇಟಾಗೆ 1.50 ರೂ. ಇದೆ. ಪ್ರಸ್ತುತ ಜಿಯೋದಲ್ಲಿ 449 ರೂ. ರಿಚಾರ್ಜ್ ಮಾಡಿದರೆ ದಿನಕ್ಕೆ ಗರಿಷ್ಟ 1.5 ಜಿಬಿ ಡೇಟಾದಂತೆ 91 ದಿನ ವ್ಯಾಲಿಡಿಟಿ ಇರುವ ಪ್ಯಾಕ್ ಸಿಗುತ್ತಿದೆ.

    2016ಕ್ಕೂ ಮೊದಲು ಯಾವೆಲ್ಲ ಕಂಪನಿಗಳು ಇತ್ತು?
    ಭಾರತಿ ಏರ್‍ಟೆಲ್ 24.8% ರಷ್ಟು ಗ್ರಾಹಕರನ್ನು ಹೊಂದಿದ್ದರೆ, ವೋಡಫೋನ್ 19.1%ರಷ್ಟು, ಐಡಿಯಾ 17.0%, ಬಿಎಸ್‍ಎನ್‍ಎಲ್/ಎಂಟಿಎನ್‍ಎಲ್ 9.3% ರಷ್ಟು ಗ್ರಾಹಕರನ್ನು ಹೊಂದಿತ್ತು. ಏರ್ ಸೆಲ್ 8.6% ಗ್ರಾಹಕರನ್ನು ಹೊಂದಿದ್ದರೆ, 21.2% ಇತರೆ ಐದು ಕಂಪೆನಿಗಳು ಸ್ಥಾನವನ್ನು ಗಳಿಸಿದ್ದವು. ಇದನ್ನೂ ಓದಿ: ಜಿಯೋ ಎಫೆಕ್ಟ್: ಟೆಲಿಕಾಂ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಎಷ್ಟು?

    2016ರ ಏನೆಲ್ಲಾ ಬದಲಾವಣೆಗಳಾಯಿತು?
    ವೋಡಾಫೋನ್ ಹಾಗೂ ಐಡಿಯಾ ಕಂಪೆನಿಗಳು ವಿಲೀನಗೊಂಡು 38.4% ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ ದೇಶದ ನಂಬರ್ ಒನ್ ಕಂಪನಿಯಾಗಿ ಬದಲಾಗಿದ್ದರೆ, ಭಾರತಿ ಏರ್‍ಟೆಲ್ 29.8% ರಷ್ಟು ಮಾರುಕಟ್ಟೆಯನ್ನು ಹೊಂದುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ರಿಲಯನ್ಸ್ ಜಿಯೋ 19.6% ಮಾರುಕಟ್ಟೆ ಪಾಲನ್ನು ಹೊಂದಿದೆ. ಇತರೇ ಕಂಪನಿಗಳು 12.2% ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಇದನ್ನೂ ಓದಿ: ಜಿಯೋ ನಿವ್ವಳ ಲಾಭ ಏರಿಕೆ- ಪ್ರತಿ ಬಳಕೆದಾರರನಿಂದ ಎಷ್ಟು ಆದಾಯ ಬಂದಿದೆ?

    ಭಾರತ ನಂಬರ್ ಒನ್:
    2016ರ ಅವಧಿಯಲ್ಲಿ ವಿಶ್ವದ ಇಂಟರ್ ನೆಟ್ ಬಳಕೆಯಲ್ಲಿ ಭಾರತ 150ನೇ ಸ್ಥಾನದಲ್ಲಿತ್ತು. ಆದರೆ ಜಿಯೋ ಬಂದ ಬಳಿಕ 2017ರಲ್ಲಿ ಭಾರತ ಈ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ. ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಇದನ್ನೂ ಓದಿ: ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ

    ಇದನ್ನೂ ಓದಿ: ಉಚಿತ ಕರೆ ನೀಡುತ್ತಿರೋ ಜಿಯೋಗೆ ಎಷ್ಟು ಕೋಟಿ ನಷ್ಟವಾಗಿದೆ? ನಷ್ಟವಾಗಿದ್ದು ಎಲ್ಲಿ?

    ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಇದನ್ನೂ ಓದಿ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಿಯೋ ನಿವ್ವಳ ಲಾಭ ಏರಿಕೆ: ಪ್ರತಿ ಬಳಕೆದಾರರನಿಂದ ಎಷ್ಟು ಆದಾಯ ಬಂದಿದೆ?

    ಜಿಯೋ ನಿವ್ವಳ ಲಾಭ ಏರಿಕೆ: ಪ್ರತಿ ಬಳಕೆದಾರರನಿಂದ ಎಷ್ಟು ಆದಾಯ ಬಂದಿದೆ?

    ಮುಂಬೈ: ದೇಶದ ನಂ.1 ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಪ್ರತಿ ಬಳಕೆದಾರನಿಂದ ಸೆಪ್ಟೆಂಬರ್ ಅಂತ್ಯಕ್ಕೆ ಮುಕ್ತಾಯಗೊಂಡ ಎರಡನೇ ತ್ರೈಮಾಸಿಕದಲ್ಲಿ 131.7 ರೂ. ಆದಾಯ ಗಳಿಸಿದೆ.

    ಬಾಂಬೆ ಶೇರು ಮಾರುಕಟ್ಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಜಿಯೋ ಶೇ.11 ರಷ್ಟು ಪ್ರಗತಿ ಸಾಧಿಸಿದ್ದು, 681 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಒಟ್ಟು ಆದಾಯದಲ್ಲಿ ಶೇ.13.9 ಏರಿಕೆಯಾಗಿದ್ದು 9,240 ಕೋಟಿ ರೂ. ಗಳಿಸಿದೆ. ಕಾರ್ಯಾಚರಣಾ ಲಾಭ ಶೇ.13.5 ಏರಿಕೆಯಾಗಿದ್ದು 3,563 ಕೋಟಿ ರೂ. ಗಳಿಸಿದೆ.

    ಪ್ರತಿ ಬಳಕೆದಾರನಿಂದ 131.7 ರೂ. ಆದಾಯ ಬಂದಿದ್ದು, ಕಳೆದ 4 ತ್ರೈಮಾಸಿಕಕ್ಕೆ ಹೋಲಿಸಿದರೆ ಕಡಿಮೆ ಆದಾಯ ಬಂದಿದೆ. ಜಿಯೋ ಫೋನ್ ಮೂಲಕ ಗ್ರಾಹಕರನ್ನು ಹೆಚ್ಚಿಸಲು ಮುಂದಾಗಿದ್ದರ ಜೊತೆಗೆ ಕಡಿಮೆ ಬೆಲೆಗೆ ಡೇಟಾ ಪ್ಯಾಕ್ ನೀಡಿದ ಪರಿಣಾಮ ಆದಾಯ ಕುಸಿದಿದೆ. ಇದರ ಜೊತೆಗೆ 501 ರೂ. ನೀಡಿ ಹೊಸ ಜಿಯೋ ಫೋನ್ ಖರೀದಿಸಲು ನೀಡಿದ ಆಫರ್ ನಿಂದಾಗಿಯೂ ಈ ಆದಾಯದಲ್ಲಿ ಕುಸಿತ ಕಂಡಿದೆ.

    ಈ ಹಿಂದಿನ ನಾಲ್ಕು ತ್ರೈಮಾಸಿಕದಲ್ಲಿ ಜಿಯೋ ಅನುಕ್ರಮವಾಗಿ 156 ರೂ., 154 ರೂ., 137 ರೂ., 135 ರೂ., ಸೆಪ್ಟೆಂಬರ್‍ನಲ್ಲಿ ಮುಕ್ತಾಯವಾದ ಎರಡನೇ ತ್ರೈಮಾಸಿಕದಲ್ಲಿ ಪ್ರತಿ ಬಳಕೆದಾರನಿಂದ 131.7 ರೂ. ಆದಾಯಗಳಿಸಿದೆ.

    ಎರಡನೇ ತ್ರೈಮಾಸಿಕದಲ್ಲಿ ಒಟ್ಟು 3 ಕೋಟಿ ಗ್ರಾಹಕರನ್ನು ಹೆಚ್ಚಿಸಿಕೊಂಡಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ 25.2 ಕೋಟಿ ಜಿಯೋ ಗ್ರಾಹಕರಿದ್ದಾರೆ. ಫೀಚರ್ ಫೋನ್‍ಗಳ ಪೈಕಿ ಈಗ 4ಜಿ ಜಿಯೋ ಫೋನ್2 ಅತಿ ಹೆಚ್ಚು ಮಾರಾಟವಾಗುತ್ತಿದ್ದು, ಈ ಸೆಟ್ ವಾಟ್ಸಪ್, ಫೇಸ್‍ಬುಕ್, ಯೂ ಟ್ಯೂಬ್ ಅಪ್ಲಿಕೇಶನ್ ಗಳನ್ನೂ ಸಪೋರ್ಟ್ ಮಾಡುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಫೇಲ್ ಡೀಲ್ ಬಗ್ಗೆ ಸುಮ್ನೆ ಮಾತಾಡ್ಬೇಡಿ- ಕಾಂಗ್ರೆಸ್ ನಾಯಕರಿಗೆ ರಿಲಯನ್ಸ್ ನೋಟಿಸ್

    ರಫೇಲ್ ಡೀಲ್ ಬಗ್ಗೆ ಸುಮ್ನೆ ಮಾತಾಡ್ಬೇಡಿ- ಕಾಂಗ್ರೆಸ್ ನಾಯಕರಿಗೆ ರಿಲಯನ್ಸ್ ನೋಟಿಸ್

    ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಬಹುದೊಡ್ಡ ಹಗರಣ ನಡೆದಿದ್ದು, ಹಗರಣದಲ್ಲಿ ಸಂಸ್ಥೆ ಭಾಗಿಯಾಗಿದೆ ಎಂದು ಆರೋಪ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ರಿಲಯನ್ಸ್ ನೋಟಿಸ್ ಜಾರಿ ಮಾಡಿದೆ.

    ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧಿಸಿದಂತೆ ಸಂಸ್ಥೆಯ ಕುರಿತು ಆರೋಪ ಮಾಡುವ ವೇಳೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಲು ತಿಳಿಸಿರುವ ಸಂಸ್ಥೆ, ಈ ಕುರಿತು ಕಾನೂನು ಕ್ರಮ ಜರುಗಿಸುವ ಕುರಿತು ಎಚ್ಚರಿಕೆ ನೀಡಿದೆ.

    ರಫೇಲ್ ಯುದ್ಧ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ತಪ್ಪು ಮಾಹಿತಿ ನೀಡಿದ್ದಾರೆ. ಅವರು ಮಾಡುತ್ತಿರುವ ಆರೋಪ ನಿರಾಧಾರವಾಗಿದೆ ಎಂದು ರಿಲಯನ್ಸ್ ಸಂಸ್ಥೆ ಈ ನೋಟಿಸ್ ಜಾರಿ ಮಾಡಿದೆ. ಕಾಂಗ್ರೆಸ್ ಆರೋಪದ ಕುರಿತು ರಿಲಯನ್ಸ್ ಸಂಸ್ಥೆಯ ಅಧ್ಯಕ್ಷ ಅನಿಲ್ ಅಂಬಾನಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದ ಬಳಿಕ ಕಾನೂನು ಕ್ರಮಕ್ಕೆ ಸಂಸ್ಥೆ ಮುಂದಾಗಿದೆ.

    ಈ ಸಂಬಂಧ ಟ್ವೀಟ್ ಮೂಲಕ ಉತ್ತರಿಸಿರುವ ಕಾಂಗ್ರೆಸ್ ನಾಯಕ ಜೈವೀರ್ ಶೇರ್‍ಗಿಲ್, ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದು, ಇಂತಹ ಬೆದರಿಕೆಗಳಿಗೆಲ್ಲ ಮಣಿಯುವುದಿಲ್ಲ. ದೇಶದ ತೆರಿಗೆದಾರನಾದ ನಾನು ಸರ್ಕಾರ ಯಾಕೆ 42 ಸಾವಿರ ಕೋಟಿ ರೂ. ಹೆಚ್ಚು ಹಣ ನೀಡಿತು ಎಂಬುದನ್ನು ತಿಳಿಯುವ ಅಧಿಕಾರ ನನಗಿದೆ ಎಂದು ಬರೆದುಕೊಂಡಿದ್ದಾರೆ.

    ಕಾಂಗ್ರೆಸ್ ಆರೋಪ:
    ಎನ್‍ಡಿಎ ಅಧಿಕಾರ ಅವಧಿಯಲ್ಲಿ ಮಾಡಲಾದ ರಫೇಲ್ ಒಪ್ಪಂದದಿಂದ ದೇಶದ 41 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಸರ್ಕಾರಿ ಸ್ವಾಮ್ಯದ ಹಿಂದುಸ್ಥಾನ್ ಏರೊನಾಟಿಕಲ್ಸ್ ಕಂಪೆನಿಗೆ ನೀಡಿದ್ದ ಒಪ್ಪಂದವನ್ನು ಯಾವುದೇ ಕಾರಣ ನೀಡದೆ ಖಾಸಗಿ ಕಂಪೆನಿಗೆ ನೀಡಿ ಕೇಂದ್ರ ಸರ್ಕಾರ ಅಕ್ರಮ ಎಸಗಿದೆ ಎಂದು ಆರೋಪಿಸಿದೆ. ಈ ಕುರಿತು ಕಳೆದ ಬಾರಿ ಸಂಸತ್ ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ಆರೋಪಗಳ ಸುರಿಮಳೆಗೈದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಆಗಸ್ಟ್ 15ರಿಂದ ಜಿಯೋ ಬ್ರಾಡ್‍ಬ್ಯಾಂಡ್ ನೋಂದಣಿ ಪ್ರಾರಂಭ: ಬೆಲೆ ಎಷ್ಟು? ಡೇಟಾ ಸ್ಪೀಡ್ ಎಷ್ಟು?

    ಆಗಸ್ಟ್ 15ರಿಂದ ಜಿಯೋ ಬ್ರಾಡ್‍ಬ್ಯಾಂಡ್ ನೋಂದಣಿ ಪ್ರಾರಂಭ: ಬೆಲೆ ಎಷ್ಟು? ಡೇಟಾ ಸ್ಪೀಡ್ ಎಷ್ಟು?

    ಮುಂಬೈ: ಟೆಲಿಕಾಂ ಕಂಪೆನಿಗಳ ಡೇಟಾ ದರ ಸಮರಕ್ಕೆ ಕಾರಣವಾಗಿದ್ದ ಜಿಯೋ ಈಗ ಬ್ರಾಡ್‍ಬ್ಯಾಂಡ್ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದು, ಇದೇ ಆಗಸ್ಟ್ 15 ರಿಂದ ಅಧಿಕೃತವಾಗಿ ಜಿಯೋ ಫೈಬರ್  ಬ್ರಾಡ್‍ಬ್ಯಾಂಡ್ ಸೇವೆಯು ದೇಶದಲ್ಲಿ ಉದ್ಘಾಟನೆಯಾಗಲಿದೆ.

    ಜಿಯೋ ಬ್ರಾಡ್‍ಬ್ಯಾಂಡ್ ಸೇವೆ ಭಾರತದ ಕೆಲವು ನಗರಗಳಲ್ಲಿ 2016 ರಿಂದಲೂ ಪ್ರಾಯೋಗಿಕವಾಗಿ ಚಾಲನೆಯಲ್ಲಿದ್ದು, ಇದೀಗ ದೇಶಾದ್ಯಂತ ಇರುವ ಒಟ್ಟು 1,100 ನಗರಗಳಿಗೆ ಸೇವೆಯನ್ನು ಒದಗಿಸಲು ಜಿಯೋ ನೋಂದಣಿಯನ್ನು ಪ್ರಾರಂಭಿಸಿದೆ. ಗ್ರಾಹಕರಿಗೆ ಒಟ್ಟಾರೆ 1 ಜಿಬಿಪಿಎಸ್(ಗಿಗಾ ಬೈಟ್ ಪರ್ ಸೆಕೆಂಡ್) ಡೌನ್‍ಲೋಡ್ ಸ್ಪೀಡ್ ಹಾಗೂ 100 ಎಂಬಿಪಿಎಸ್(ಮೆಗಾ ಬೈಟ್ ಪರ್ ಸೆಕೆಂಡ್) ಅಪ್ಲೋಡ್ ಸ್ಪೀಡ್ ನೀಡಲಿದೆ.

    ಇದೇ ಆಗಸ್ಟ್ 15 ರಿಂದ ಬ್ರಾಡ್‍ಬ್ಯಾಂಡ್ ಸೇವೆ ಆರಂಭಗೊಳ್ಳಲಿದ್ದು, ಈ ಸೇವೆ ಪಡೆಯಬೇಕಾದರೆ ಗ್ರಾಹಕರು ಆನ್‍ಲೈನಲ್ಲಿ ನೋಂದಣಿ ಮಾಡಬೇಕಾಗಿರುತ್ತದೆ.

    ಬೆಲೆ ಎಷ್ಟು?
    ಜಿಯೋ ಬ್ರಾಡ್‍ಬ್ಯಾಂಡ್ ತನ್ನ ಸೇವೆಯನ್ನು 4,500 ರೂ.ಗಳಿಗೆ ನಿಗದಿಪಡಿಸಿದ್ದು, ಈ ಹಣವನ್ನು ಕಂಪೆನಿ ಮರು ಪಾವತಿ ಮಾಡುವುದಾಗಿ ತಿಳಿಸಿದೆ. ಕೇವಲ ತನ್ನ ಗೀಗಾ ರೂಟರ್ ಹಾಗೂ ಇತರೆ ಬಿಡಿಭಾಗಗಳ ಸುರಕ್ಷತೆಯ ದೃಷ್ಟಿಯಿಂದ ಭದ್ರತಾ ಠೇವಣಿಯನ್ನಾಗಿ ಈ ಮೊತ್ತವನ್ನು ಪಡೆದುಕೊಳ್ಳುತ್ತದೆ. ಈ ಹಣವನ್ನು ಪಾವತಿಸಿದ ಗ್ರಾಹಕರಿಗೆ 3 ತಿಂಗಳುಗಳವರೆಗೆ ಅನ್‍ಲಿಮಿಟೆಡ್ ಇಂಟರ್‌ನೆಟ್ ಸೇವೆಯನ್ನು 1 ಜಿಬಿಪಿಎಸ್ ಡೌನ್‍ಲೋಡ್ ಹಾಗೂ 100 ಎಂಬಿಪಿಎಸ್ ಅಪ್‍ಲೋಡ್ ಸ್ಪೀಡ್‍ನೊಂದಿಗೆ ನೀಡಲಿದೆ. ಪ್ರತಿ ತಿಂಗಳ ಪ್ಯಾಕೇಜ್‍ಗಳ ಕುರಿತು ಮಾಹಿತಿಯನ್ನು ಸದ್ಯವೇ ಬಿಡುಗಡೆಮಾಡಲಿದೆ. ನೊಂದಣಿಯನ್ನು ಯಾರು ಬೇಕಾದರೂ ಮಾಡಬಹುದು. ಆದರೆ ನೀವು ನೆಲೆಸಿರುವ ಸ್ಥಳದಲ್ಲಿ ಈ ಸೇವೆ ಆರಂಭದಲ್ಲೇ ಸಿಗುವುದಿಲ್ಲ. ಮುಂದಿನ ದಿನಗಳಲ್ಲಿ ಸಿಗಲಿದೆ.

    ಗೀಗಾ ಟಿವಿ:
    ಬ್ಯಾಡ್‍ಬ್ಯಾಂಡ್ ಸೇವೆಯ ಜೊತೆಗೆ ಜಿಯೋ ತನ್ನ ನೂತನ ಜಿಯೋಫೈಬರ್ ಸೇವೆಯೊಂದಿಗೆ ಜಿಯೋ ಗೀಗಾ ಟಿವಿಯ ಸೌಲಭ್ಯವನ್ನು ನೀಡಲಿದೆ. ಗೀಗಾ ರೂಟರ್ ಮನೆ ಹಾಗೂ ಕಚೇರಿಯಲ್ಲಿನ ವಾಲ್-ಟು-ವಾಲ್ ಹೈ ಸ್ಪೀಡ್ ವೈ-ಫೈ ವದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಗೀಗಾ ಟಿವಿಯನ್ನು ಗ್ರಾಹಕರು ತಮ್ಮ ಸ್ಮಾರ್ಟ್ ಟಿವಿಗಳಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುವ ಮೂಲಕ 4ಕೆ ವಿಡಿಯೋ ಹಾಗೂ ಅತ್ಯಾಧುನಿಕ ವಿಡಿಯೋ ಗೇಮ್‍ಗಳನ್ನು ಯಾವುದೇ ಅಡೆತಡೆಯಿಲ್ಲದೆ ಪಡೆಯಬಹುದಾಗಿದೆ.

    ಜಿಯೋ ಸಂಸ್ಥೆಯು ಗಿಗಾ ಟಿವಿ ಸೆಟ್-ಟಾಪ್ ಬಾಕ್ಸ್ ಜೊತೆಗೆ ವಾಯ್ಸ್ ಆಧರಿತ ರಿಮೋಟ್ ಗಳನ್ನು ನೀಡಲಿದೆ. ಈ ರಿಮೋಟ್ ಗಳ ಮೂಲಕ ಗ್ರಾಹಕರು ವಾಯ್ಸ್ ಮೂಲಕವೇ ತಮಗೇ ಬೇಕಾದ ಚಾನಲ್ ಹಾಗೂ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಗ್ರಾಹಕರು ಗಿಗಾ ಟಿವಿಯಲ್ಲಿ ಸುಮಾರು 600 ಕ್ಕೂ ಹೆಚ್ಚಿನ ಚಾನೆಲ್‍ಗಳು, ಲಕ್ಷಾಂತರ ಹಾಡುಗಳನ್ನು ವೀಕ್ಷಿಸಬಹುದಾಗಿದೆ. ಇದಲ್ಲದೇ ತನ್ನ ಜಿಯೋ ಸಿನಿಮಾ, ಜಿಯೋ ಟಿವಿ ಕಾಲ್, ಜಿಯೋ ಸ್ಮಾರ್ಟ್ ಲಿವಿಂಗ್, ಜಿಯೋ ಕ್ಲೌಡ್, ಮೀಡಿಯಾಶೇರ್ ಮತ್ತು ಜಿಯೋ ಸ್ಟೋರ್ಸ್ ನಂತಹ ಅಪ್ಲಿಕೇಶನ್ ತಮ್ಮ ಟಿವಿಗಳಲ್ಲಿ ಪಡೆದುಕೊಳ್ಳಬಹುದು.

    ಜಿಯೋ ಬ್ರಾಡ್‍ಬ್ಯಾಂಡ್ ನೆಟ್‍ವರ್ಕ್ ಅಡಿಯಲ್ಲಿ ಇಂಟರ್‌ನೆಟ್ ಬಳಕೆಮಾಡಿಕೊಂಡು ಮನೆಯನ್ನು ಸ್ಮಾರ್ಟ್ ಹೋಮ್ ಆಗಿ ಬದಲಾಯಿಸಿಕೊಳ್ಳಬಹುದು. ಮನೆಯಲ್ಲಿನ ಆಡಿಯೊ ಡಾಂಗಲ್, ವಿಡಿಯೋ ಡಾಂಗಲ್, ಸ್ಮಾರ್ಟ್ ಸ್ಪೀಕರ್, ವೈ-ಫೈ ಎಕ್ಸ್ಟೆಂಡರ್, ಸ್ಮಾರ್ಟ್ ಪ್ಲಗ್, ಸೆಕ್ಯುರಿಟಿ ಕ್ಯಾಮೆರಾ ಮತ್ತು ಟಿವಿ ಕ್ಯಾಮೆರಾ ಸೇರಿದಂತೆ ಹಲವು ಇಲೆಕ್ಟ್ರಾನಿಕ್ಸ್ ಉಪಕರಣಗಳನ್ನು ನಿಯಂತ್ರಿಸಬಹುದು. ಮನೆಯ ತಾಪಮಾನ, ಬೆಳಕು, ಗ್ಯಾಸ್ ಮತ್ತು ನೀರಿನ ಸೋರಿಕೆಯನ್ನು ಸ್ಮಾರ್ಟ್ ಫೋನ್ ಬಳಸಿಕೊಂಡು ಗೀಗಾ ಟಿವಿಯೊಂದಿಗೆ ನಿಯಂತ್ರಿಬಹುದು ಎಂದು ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಏಷ್ಯಾದ ಅಗ್ರಗಣ್ಯ ಶ್ರೀಮಂತ ಜಾಕ್ ಮಾ ರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ!

    ಏಷ್ಯಾದ ಅಗ್ರಗಣ್ಯ ಶ್ರೀಮಂತ ಜಾಕ್ ಮಾ ರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ!

    ನವದೆಹಲಿ: ಆಲಿಬಾಬಾ ಒಡೆತನದ ಮಾಲೀಕ ಜಾಕ್ ಮಾ ರನ್ನು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರು ಹಿಂದಿಕ್ಕಿ, ಏಷ್ಯಾದ ಅಗ್ರಗಣ್ಯ ಶ್ರೀಮಂತ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

    ಭಾರತದ ಇ-ಕಾಮರ್ಸ್ ವಲಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಸಂಚಲನಕ್ಕೆ ಕಾರಣವಾಗಿದ್ದು, ಮುಕೇಶ್ ಅಂಬಾನಿಯವರು ಏಷ್ಯಾದ ಬೃಹತ್ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಬ್ಲೂಮ್‍ಬರ್ಗ್ ಬಿಲಿಯನೇರ್ಸ್‌ ಸೂಚ್ಯಂಕದ ಪ್ರಕಾರ ಅಂಬಾನಿ ಅವರ ಆಸ್ತಿ 44.3 ಶತಕೋಟಿ ಡಾಲರ್(3,03,445 ಕೋಟಿ ರೂ.) ಆಗಿದೆ. ಈ ಮೊದಲು ಏಷ್ಯಾದ ನಂ. 1 ಶ್ರೀಮಂತರಾಗಿದ್ದ ಆಲಿಬಾಬಾ ಸಂಸ್ಥೆಯ ಮಾಲೀಕ ಜಾಕ್ ಮಾ ಅವರ ಸಂಪತ್ತು 44 ಶತಕೋಟಿ ಡಾಲರ್‍ನಷ್ಟಿತ್ತು ಎಂದು ಬ್ಲೂಮ್‍ಬರ್ಗ ಸಂಸ್ಥೆ ವರದಿ ಮಾಡಿದೆ.

    ಬ್ಲೂಮ್‍ಬರ್ಗ್ ವರದಿ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇ.1.7ರಷ್ಟು ಬೆಳವಣಿಗೆ ದಾಖಲಿಸಿ ರೂಪಾಯಿ 1,199.8 ರಷ್ಟನ್ನು ಷೇರುದಾರರು ಹೆಚ್ಚಿಗೆ ಗಳಿಸಿದ್ದಾರೆ. ಈ ವರ್ಷ ರಿಲಯನ್ಸ್ ನ ಪೆಟ್ರೊಕೆಮಿಕಲ್ಸ್ ಸಾಮರ್ಥ್ಯ ದುಪ್ಪಟ್ಟಾಗಿದ್ದು, ಅಂಬಾನಿ ಸಂಪತ್ತಿಗೆ ಈ ವರ್ಷ 400 ಕೋಟಿ ಡಾಲರ್(27,400 ಕೋಟಿ ರೂ.) ಜಮೆಯಾಗಿದೆ. ರಿಲಯನ್ಸ್ ಜಿಯೋ ಆದಾಯದಿಂದ ಹೂಡಿಕೆದಾರರು ಸಂತೋಷಗೊಂಡಿದ್ದಾರೆ.

    ಜಿಯೋಗೆ 21.5 ಕೋಟಿ ಟೆಲಿಕಾಂ ಚಂದಾದಾರರಿದ್ದು, ವ್ಯಾಪ್ತಿ ವಿಸ್ತರಣೆಗೆ ಪೂರಕವಾಗಿ ನಾನಾ ಹೊಸ ಯೋಜನೆಗಳನ್ನು ತಿಂಗಳ ಆರಂಭದಲ್ಲಿಯಷ್ಟೇ ಕಂಪನಿ ಘೋಷಿಸಿದೆ. ರಿಲಯನ್ಸ್ ರೀಟೇಲ್ ಲಿಮಿಟೆಡ್ ಮತ್ತು ರಿಲಯನ್ಸ್ ಜಿಯೋ ಬಿಸಿನೆಸ್ ಅನ್ನು ಬಳಸಿಕೊಂಡು, ಆನ್‍ಲೈನ್‍ನಿಂದ ಆಫ್‍ಲೈನ್ ವರೆಗಿನ ವಲಯದಲ್ಲಿ ದೊಡ್ಡ ಬೆಳವಣಿಗೆಯ ಅವಕಾಶ ಸೃಷ್ಟಿಸಲಿದ್ದೇವೆ,” ಎಂದು ಅಂಬಾನಿ ಅವರು ಇತ್ತೀಚೆಗೆ ನಡೆದ 41ನೇ ವಾರ್ಷಿಕ ಸಭೆಯಲ್ಲಿ ಹೇಳಿದ್ದರು.

    ದೇಶದ 1,100 ನಗರಗಳಲ್ಲಿ ಮೊದಲ ಹಂತದಲ್ಲಿ ಫೈಬರ್ ಆಧಾರಿತ ಬ್ರ್ಯಾಡ್‍ಬ್ಯಾಂಡ್ ಸೇವೆಯನ್ನು ಆರಂಭಿಸಲು ಜಿಯೊ ಮುಂದಾಗಿದೆ. ಇದು ಟೆಲಿಕಾಂ ವಲಯದಲ್ಲಿ ಇನ್ನೊಂದು ಸಂಚಲನಕ್ಕೆ ಕಾರಣವಾಗಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.

  • 501 ರೂ.ಗೆ ಸಿಗಲಿದೆ ನೂತನ ಜಿಯೋ ಫೋನ್- 2: ಗುಣವೈಶಿಷ್ಟ್ಯಗಳೇನು?

    501 ರೂ.ಗೆ ಸಿಗಲಿದೆ ನೂತನ ಜಿಯೋ ಫೋನ್- 2: ಗುಣವೈಶಿಷ್ಟ್ಯಗಳೇನು?

    ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ನ 41ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಮುಖೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ಮತ್ತು ಮಗ ಆಕಾಶ್ ಅಂಬಾನಿಯವರು ನೂತನ ಜಿಯೋ ಫೋನ್- 2 ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

    ಈ ಬಾರಿ ಜಿಯೋ ಫೋನ್- 2 ನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಫೇಸ್ಬುಕ್, ವಾಟ್ಸಪ್ ಮತ್ತು ಯೂಟ್ಯೂಬ್ ನಂತಹ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಗಳನ್ನು ಒಳಗೊಂಡಿದೆ.

    ರಿಲಯನ್ಸ್ ಕಂಪನಿಯ ನೂತನ ಜಿಯೋ ಫೋನ್-2, ಆಗಸ್ಟ್ 15 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದರ ಪ್ರಾರಂಭಿಕ ಬೆಲೆ 2,999 ರೂಪಾಯಿಗಳಾಗಿದೆ. ಇದಲ್ಲದೆ ಕಂಪನಿಯು ತನ್ನ ಹಳೆಯ ಜಿಯೋ ಫೋನ್ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಅವರಿಗಾಗಿಯೇ ನೂತನ ಕೊಡುಗೆಯನ್ನು ನೀಡಿದೆ. ಈ ಕೊಡುಗೆಯಲ್ಲಿ ಗ್ರಾಹಕರು ತಮ್ಮ ಬಳಿ ಇರುವ ಹಳೆಯ ಜಿಯೋ ಫೋನನ್ನು ಕಂಪೆನಿಗೆ ಹಿಂದುರಿಗಿಸಿ 501 ರೂಪಾಯಿಯನ್ನು ಮಾತ್ರ ನೀಡಿ ಹೊಸ ಜಿಯೋ ಫೋನ್-2 ಖರೀದಿಸಬಹುದಾಗಿದೆ.

    ಜಿಯೋ ಫೋನ್-2ರ ಗುಣವೈಶಿಷ್ಟ್ಯಗಳು:
    * ಕ್ವರ್ಟಿ ಕೀ ಪ್ಯಾಡ್ ನ 2.4 ಇಂಚ್ ಸ್ಕೀನ್ ಡಿಸ್ಪ್ಲೇ (240X340 ಪಿಕ್ಸೆಲ್)
    * ಜಿಯೋ ಫೋನ್’ನ ಧ್ವನಿ ಆಜ್ಞೆ (ವಾಯ್ಸ್ ಕಮ್ಯಾಂಡ್) ವೈಶಿಷ್ಟ್ಯವನ್ನು
    * ಫೇಸ್ಬುಕ್, ವಾಟ್ಸಪ್, ಯುಟ್ಯೂಬ್, ವೈ-ಫೈ ಮತ್ತು ಜಿಪಿಎಸ್ ಸೌಲಭ್ಯ.
    * 512 MB RAM 4 ಜಿಬಿ ಆಂತರಿಕ ಮೆಮೊರಿ ಹೊಂದಿದೆ. ಮೆಮೊರಿ ಕಾರ್ಡ್ ಮೂಲಕ 128 ಜಿಬಿವರೆಗೆ ವಿಸ್ತರಿಸಬಹುದು.
    * ಹಿಂದುಗಡೆ 2 ಮೆಗಾಪಿಕ್ಸೆಲ್ ಕ್ಯಾಮೆರಾ ಮುಂದುಗಡೆ 0.3 ಮೆಗಾಪಿಕ್ಸೆಲ್(ವಿಜಿಎ) ಕ್ಯಾಮೆರಾ.
    * ಫೋನ್ ಡ್ಯೂಯಲ್ ಸಿಮ್ ವೈಶಿಷ್ಟ್ಯವನ್ನು ಹಾಗೂ ಲೌಡ್ ಮೆನೋ ಸ್ಪೀಕರ್
    * 2000 ಎಂಎಎಚ್ ಬ್ಯಾಟರಿ ಸಾಮರ್ಥ್ಯ.

    ಜಿಯೋ ಮೊದಲ ಫೋನಿನಲ್ಲಿ ನೀಡಿದಂತೆ ಎಫ್‍ಎಂ ರೇಡಿಯೋ, ವೈಫೈ, ಎನ್‍ಎಫ್‍ಸಿ, ಬ್ಲೂಟೂತ್, ಜಿಪಿಎಸ್ ಹೊಂದಿದ್ದು, ಕನ್ನಡ ಸೇರಿದಂತೆ ದೇಶದ 22 ಭಾಷೆಗಳನ್ನು ಈ ಫೋನ್ ಸಪೋರ್ಟ್  ಮಾಡುತ್ತದೆ. ಮೈ ಜಿಯೋ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಚಾಟ್, ಜಿಯೋ ಮ್ಯೂಸಿಕ್, ಜಿಯೋ ಎಕ್ಸ್ ಪ್ರೆಸ್ ನ್ಯೂಸ್ ಅಪ್ಲಿಕೇಶನ್‍ಗಳು ಪ್ರಿಲೋಡೆಡ್ ಆಗಿ ಇರಲಿದೆ.

    ಜಿಯೋ ಫೋನ್ -1ರ ಗುಣವೈಶಿಷ್ಟ್ಯ ಏನಿತ್ತು?
    ಸಿಂಗಲ್ ನ್ಯಾನೋ ಸಿಮ್ 2.4 ಇಂಚಿನ (240X320 ಪಿಕ್ಸೆಲ್), ಟಾರ್ಚ್ ಲೈಟ್ ಹೊಂದಿರುವ ಈ ಫೀಚರ್ ಫೋನ್ ಕೈ ಆಪರೇಟಿಂಗ್ ಸಿಸ್ಟಂ( KaiOS ) ನೀಡಿತ್ತು.

    1.2 GHz ಡ್ಯುಯಲ್ ಕೋರ್ ಎಸ್‍ಪಿಆರ್ಡಿ ಪ್ರೋಸೆಸರ್ ಹೊಂದಿರುವ ಈ ಫೋನ್ ಮಲಿ 400 ಗ್ರಾಫಿಕ್ಸ್ ಪ್ರೋಸೆಸರ್ ಇದೆ. 2000 ಎಂಎಎಚ್ ಲಿಪೋ ಬ್ಯಾಟರಿ ಹೊಂದಿರುವ ಈ ಫೋನ್ 4ಜಿಬಿ ಆಂತರಿಕ ಮೆಮೊರಿ, 128 ಜಿಬಿವರೆಗೆ ಮೆಮೊರಿ ವಿಸ್ತರಿಸುವ ಸಾಮರ್ಥ್ಯ, ಹಿಂದುಗಡೆ 2 ಎಂಪಿ ಕ್ಯಾಮೆರಾ, ಮುಂದುಗಡೆ ವಿಜಿಎ ಕ್ಯಾಮೆರಾ ಇದ್ದು, ವಿಡಿಯೋ ರೆಕಾರ್ಡಿಂಗ್ ನೀಡಿತ್ತು.

  • ಕಡಿಮೆ ಬೆಲೆಗೆ ಡೇಟಾ, ಫೋನ್ ಆಯ್ತು ಈಗ ಜಿಯೋದಿಂದ ಹೋಮ್ ಟಿವಿ: ತಿಂಗಳಿಗೆ ಎಷ್ಟು ರೂ.? ಎಷ್ಟು ಚಾನೆಲ್ ಸಿಗುತ್ತೆ?

    ಕಡಿಮೆ ಬೆಲೆಗೆ ಡೇಟಾ, ಫೋನ್ ಆಯ್ತು ಈಗ ಜಿಯೋದಿಂದ ಹೋಮ್ ಟಿವಿ: ತಿಂಗಳಿಗೆ ಎಷ್ಟು ರೂ.? ಎಷ್ಟು ಚಾನೆಲ್ ಸಿಗುತ್ತೆ?

    ಮುಂಬೈ: ಕಡಿಮೆ ಬೆಲೆಗೆ ಡೇಟಾ, ಕಡಿಮೆ ಬೆಲೆಯ ಫೀಚರ್ ಫೋನ್ ಬಿಡುಗಡೆ ಮಾಡಿದ್ದ ಜಿಯೋ ಈಗ ಟಿವಿ ವಾಹಿನಿಗಳನ್ನು ನೀಡಲು ಮುಂದಾಗಿದೆ.

    200 ರೂ.ಗೆ ಎಸ್ ಡಿ ಚಾನಲ್ ಗಳು, 400 ರೂ.ಗೆ ಹೆಚ್ ಡಿ ಚಾನಲ್ ಗಳನ್ನು ನೀಡಲು ಜಿಯೋ ಸಿದ್ಧತೆ ನಡೆಸಿದ್ದು ಇದರ ಟೆಸ್ಟಿಂಗ್ ನಡೆಯುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಭಾರತದ ಡೈರೆಕ್ಟ್ ಟು ಹೋಮ್ (ಡಿಟಿಎಚ್) ವಲಯದಲ್ಲಿ ರಿಲಯನ್ಸ್ ನ ಹೊಸ ಪ್ರಾಜೆಕ್ಟ್ ಜಿಯೋ ಹೋಮ್ ಟಿವಿ ಸಾಕಷ್ಟು ಬದಲಾವಣೆಗಳನ್ನು ತರಲಿದೆ. ಇಎಂಬಿಎಂಎಸ್ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಜಿಯೋ ಹೋಮ್ ಟಿವಿ ಕಾರ್ಯನಿರ್ವಹಿಸಲಿದೆ ಎಂದು ವರದಿಯಾಗಿದೆ.

    ಕೆಲ ದಿನಗಳ ಹಿಂದೆ ಹೆಚ್ ಡಿ ವಿಡಿಯೋವನ್ನು ಕೆಲವು ಡಿವೈಸ್ ಗಳಲ್ಲಿ ಪರೀಕ್ಷೆ ಮಾಡಲಾಗಿದೆ. ಇನ್ನು ಗ್ರಾಹಕರು ಇಂಟರನೆಟ್ ಸೇವೆ ಇಲ್ಲದೆಯೂ ಜಿಯೋ ಹೋಮ್ ಟಿವಿ ಯನ್ನು ವೀಕ್ಷಿಸಬಹುದಾಗಿದೆ. ಇಎಮ್‍ಬಿಎಂಎಸ್ ತಂತ್ರಜ್ಞಾನ ಬಳಸಿ ಈ ಸೇವೆ ನೀಡುತ್ತದೆ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು ಮತ್ತಷ್ಟು ವಿವರಗಳು ಲಭ್ಯವಾಗಿಲ್ಲ. ಶೀಘ್ರದಲ್ಲಿ ಸೇವೆ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಡೇಟಾ, 4ಜಿ ಫೀಚರ್ ಫೋನ್ ಆಯ್ತು, ಈಗ ಜಿಯೋದಿಂದ ಸಿಮ್ ಇರೋ ಲ್ಯಾಪ್‍ಟಾಪ್!

    ಇಎಮ್‍ಬಿಎಂಎಸ್ ಅಂದರೆ ಏನು?
    ಎಲ್‍ಟಿಇ ಬ್ರಾಡ್ ಕಾಸ್ಟ್ ಅಥವಾ evolved Multimedia Broadcast Multicast Service(ಇಎಂಬಿಎಂಎಸ್) ಅಂದರೆ ಮೊಬೈಲ್ ಟವರ್ ಮೂಲಕ ಸಿಗ್ನಲ್ ಪಡೆದು ಟಿವಿಯನ್ನು ನೋಡುವ ತಂತ್ರಜ್ಞಾನ. ಇನ್ನು ಸುಲಭವಾಗಿ ಹೇಳುವುದಿದ್ದರೆ ಈಗ ಟವರ್ ನಲ್ಲಿರುವ ನೆಟ್ ವರ್ಕ್ ಸಿಗ್ನಲ್ ಬಳಸಿಕೊಂಡು ನಾವು ಕರೆ ಮತ್ತು ಡೇಟಾಗಳನ್ನು ಬಳಸುತ್ತೇವೆಯೋ ಅದೇ ರೀತಿಯಾಗಿ ಟವರ್ ಗಳನ್ನು ಬಳಸಿಕೊಂಡು ಗ್ರಾಹಕರಿಗೆ ಟಿವಿ ವಾಹಿನಿಗಳನ್ನು ನೀಡಲು ಈಗ ಜಿಯೋ ಮುಂದಾಗಿದೆ.

    ಸದ್ಯಕ್ಕೆ ಸಾವಿರ ಗಟ್ಟಲೆ ವೀಕ್ಷಕರು ನೋಡಲು ನೆಟ್ ವರ್ಕ್ ಸಮಸ್ಯೆ ಎದುರಾಗುತ್ತದೆ. ಹೊಸ ತಂತ್ರಜ್ಞಾನದ ಸಹಾಯದಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ. 1 ಎಂಬಿ ವಿಡಿಯೋ 1000 ಜನರ ಡಿವೈಸ್ ಗಳಲ್ಲಿ ನೆಟ್‍ವರ್ಕ್ ಮೂಲಕ ಪ್ರಸಾರವಾದಾಗ ನೆಟ್‍ವರ್ಕ್ ಮೇಲೆ 1000 ಎಂಬಿ ಲೋಡ್ ಬೀಳುತ್ತದೆ. ಆದರೆ ಇಎಮ್‍ಬಿಎಂಎಸ್ ತಂತ್ರಜ್ಞಾನದ ಮೂಲಕ ಕಡಿಮೆ ಲೋಡ್ ನಲ್ಲಿ 1000 ಡಿವೈಸ್ ಗಳಿಗೆ ವಿಡಿಯೋಗಳನ್ನು ಪ್ರಸಾರ ಮಾಡಬಹುದಾಗಿದೆ.

  • ಡೇಟಾ, 4ಜಿ ಫೀಚರ್ ಫೋನ್ ಆಯ್ತು, ಈಗ ಜಿಯೋದಿಂದ ಸಿಮ್ ಇರೋ ಲ್ಯಾಪ್‍ಟಾಪ್!

    ಡೇಟಾ, 4ಜಿ ಫೀಚರ್ ಫೋನ್ ಆಯ್ತು, ಈಗ ಜಿಯೋದಿಂದ ಸಿಮ್ ಇರೋ ಲ್ಯಾಪ್‍ಟಾಪ್!

    ನವದೆಹಲಿ: ಕಡಿಮೆ ಬೆಲೆಯಲ್ಲಿ ಡೇಟಾ, 4ಜಿ ಫೀಚರ್ ಫೋನ್ ಬಿಡುಗಡೆ ಮಾಡಿದ್ದ ಜಿಯೋ ಈಗ ಕಡಿಮೆ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ಸಿಮ್ ಹೊಂದಿರುವ ಲ್ಯಾಪ್ ಟಾಪ್ ಬಿಡುಗಡೆ ಮಾಡಲು ಮುಂದಾಗಿದೆ.

    ಹೌದು. ಚಿಪ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಟಿತ ಹಾರ್ಡ್ ವೇರ್ ಕಂಪನಿ ಕ್ವಾಲ್ಕಾಮ್ ಜೊತೆ ವಿಂಡೋಸ್ 10 ಆಪರೇಟಿಂಗ್ ವ್ಯವಸ್ಥೆ ಇರುವ ಲ್ಯಾಪ್ ಟಾಪ್‍ಗಳಲ್ಲಿ ಸಿಮ್‍ಗಳನ್ನು ಅಳವಡಿಸುವುದರ ಕುರಿತು ರಿಲಯನ್ಸ್ ಜಿಯೋ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.

    ಈಗಾಗಲೇ ಕ್ವಾಲ್ಕಾಮ್ ಕಂಪನಿಯು ಹೆಚ್‍ಪಿ, ಏಸಸ್, ಲೆನೊವೊ ಲ್ಯಾಪ್ ಟಾಪ್ ಕಂಪೆನಿಗಳ ಜೊತೆ ಇದೇ ಪ್ರಾಜೆಕ್ಟ್ ಮೇಲೆ ಕೆಲಸ ಮಾಡುತ್ತಿದೆ. ಲ್ಯಾಪ್ ಟಾಪ್ ಸದಾ ಇಂಟರ್‍ನೆಟ್ ಸಂಪರ್ಕದಲ್ಲಿರುವಂತೆ ಈ ಹೊಸ ವ್ವವಸ್ಥೆ ನೋಡಿಕೊಳ್ಳಲಿದೆ. ಈ ಹೊಸ ವ್ಯವಸ್ಥೆಗೆ ಬಹಳಷ್ಟು ದೇಶಗಳ ಮೊಬೈಲ್ ಸೇವಾ ಆಪರೇಟರ್ ಗಳು ಬೆಂಬಲ ಸೂಚಿಸಿವೆ.

    ಸಿಮ್ ಯಾಕೆ?
    ಲ್ಯಾಪ್ ಟಾಪ್ ನೊಂದಿಗೆ ಹೊರಗಡೆ ಹೋದಾಗ ಇಂಟರ್ ನೆಟ್ ಸಂಪರ್ಕ ಬೇಕಾದರೆ ವೈಫೈ ವ್ಯವಸ್ಥೆ ಇರಬೇಕಾಗುತ್ತದೆ. ವೈಫೈ ಸಂಪರ್ಕ ಸಿಗದ ಕಡೆ ಇಂಟರ್ ನೆಟ್ ಪಡೆಯಬೇಕಾದರೆ ಮೊಬೈಲ್ ಮೂಲಕ ಹಾಟ್ ಸ್ಪಾಟ್ ಓಪನ್ ಮಾಡಿ ವೈಫೈ ಸಂಪರ್ಕ ಕಲ್ಪಿಸಬೇಕಾಗುತ್ತದೆ ಅಥವಾ ಹಾಟ್ ಸ್ಪಾಟ್ ಸಾಧನಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಎಂಬಂತೆ ಲ್ಯಾಪ್ ಟಾಪ್ ನಲ್ಲೇ ಸಿಮ್ ಅಳವಡಿಸುವ ಪ್ರಯತ್ನ ನಡೆಯುತ್ತಿದೆ.

    ಕೌಂಟರ್ ಪಾಯಿಂಟ್ ಸಂಸ್ಥೆಯ ನೀಡಿದ ಡೇಟಾಗಳ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 50 ಲಕ್ಷ ಲ್ಯಾಪ್ ಟಾಪ್ ಗಳು ಮಾರಾಟವಾಗುತ್ತಿದ್ದು, ಇವುಗಳಿಗೆ ಕಚೇರಿ, ಮನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿರುವ ವೈಫೈ ಹಾಟ್ ಸ್ಪಾಟ್ ಗಳು ಕನೆಕ್ಟ್ ಆಗುತ್ತದೆ.

    ಸೈಬರ್ ಭದ್ರತೆ ಮತ್ತು ಖಾಸಗಿ ಮಾಹಿತಿ ಸೋರಿಕೆಯಾಗದೇ ಇರಲು ಯಾವಾಗಲೂ ವೈಫೈ ನೆಟ್‍ವರ್ಕ್ ಗಿಂತ ಸೆಲ್ಯುಲರ್ ನೆಟ್‍ವರ್ಕ್ ಹೆಚ್ಚು ಸುರಕ್ಷಿತ. ಈ ಕಾರಣಕ್ಕಾಗಿ ಟೆಲಿಕಾಂ ಕಂಪೆನಿಗಳು ಸಿಮ್ ಆಧಾರಿತ ಲ್ಯಾಪ್ ಟಾಪ್ ಬಿಡುಗಡೆ ಮುಂದಾಗುತ್ತಿದೆ. ಇದರ ಜೊತೆ ಡೇಟಾದ ಮೂಲಕ ಟೆಲಿಕಾಂ ಕಂಪೆನಿಗಳು ಆದಾಯ ವೃದ್ಧಿಸಿಕೊಳ್ಳಲು ಸಹಕಾರಿಯಾಗಲಿದೆ.  ಇದನ್ನೂ ಓದಿ: ಜಿಯೋಫಿ ಹೊಸ ಸಾಧನ ಬಿಡುಗಡೆ: ಬೆಲೆ ಎಷ್ಟು? ಎಷ್ಟು ಡಿವೈಸ್ ಕನೆಕ್ಟ್ ಮಾಡಬಹುದು?