ನವದೆಹಲಿ: ಆನ್‍ಲೈನ್ ಶಾಪಿಂಗ್‍ನಲ್ಲಿ ಹೆಸರುವಾಸಿಯಾದ ಅಮೆಜಾನ್ ಮತ್ತು ಭಾರತದ ಫ್ಯೂಚರ್ ಗ್ರೂಪ್ ಜೊತೆಗಿನ 2019ರ ಒಪ್ಪಂದವನ್ನು ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ರದ್ದುಗೊಳಿಸಿ, ಅಮೆಜಾನ್‍ಗೆ 202 ಕೋಟಿ ರೂ. ದಂಡ ವಿಧಿಸಿದೆ.
ಭಾರತದ ಫ್ಯೂಚರ್ ಗ್ರೂಪ್ ಜೊತೆ ಅಮೆರಿಕಾದ ಅಮೆಜಾನ್ 2019ರಲ್ಲಿ ಹೂಡಿಕೆ ಒಪ್ಪಂದ ಮಾಡಿಕೊಂಡಿತ್ತು. ಈ ನಡುವೆ ಫ್ಯೂಚರ್ ಗ್ರೂಪ್ 2019ರಲ್ಲಿ 24,713 ಕೋಟಿ ರೂಪಾಯಿಯ ತನ್ನ ರಿಟೇಲ್‍ನ ಸಗಟು ಮತ್ತು ಇತರೆ ವಹಿವಾಟುಗಳನ್ನು ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಗೆ ಮಾರಾಟ ಮಾಡಲು ಯತ್ನಿಸಿತು. ಆಗ ಅಮೆಜಾನ್ ಇದ್ದಕ್ಕೆ ತಕರಾರು ಎತ್ತಿತ್ತು. ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಶೀಘ್ರವೇ 1 ನಿಮಿಷದ ಸ್ಟೋರಿ ಹಾಕಬಹುದು!
ಮಾರಾಟಕ್ಕೆ ಅಪಸ್ವರ ಎತ್ತಿದ್ದಕ್ಕೆ ಫ್ಯೂಚರ್ ಗ್ರೂಪ್ ಸಿಸಿಐಗೆ ದೂರು ದಾಖಲಿಸಿತ್ತು. ಇದೀಗ ದೂರನ್ನು ಪಲೀಶಿಸಿ ಸಿಸಿಐ 57 ಪುಟಗಳ ಆದೇಶವನ್ನು ಹೊರಡಿಸಿದೆ. ಜೊತೆಗೆ ಈ ಹಿಂದೆ 2019ರಲ್ಲಿ ಮಾಡಿದ ಡೀಲ್‍ಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗಿದೆ. ಹಾಗಾಗಿ ಅಲ್ಲಿಯ ವರೆಗೆ 2019ರಲ್ಲಿ ನೀಡಲಾಗಿರುವ ಅನುಮೋದನೆ ಸ್ಥಗಿತವಾಗಿರುತ್ತದೆ ಎಂದು ಆದೇಶಿಸಿದೆ. ಇದರಿಂದ ಅಮೆಜಾನ್‍ಗೆ ಹಿನ್ನಡೆ ಉಂಟಾಗಿದೆ. ಇದನ್ನೂ ಓದಿ: ಬಿಎಸ್‌ಎನ್‌ಎಲ್‌ನಿಂದ 465 ದಿನಗಳವರೆಗೆ ವ್ಯಾಲಿಡಿಟಿ ಆಫರ್ ರಿಲೀಸ್
ಅಮೆಜಾನ್ ವಾದ ಏನು?
2019ರ ಹೂಡಿಕೆ ಒಪ್ಪಂದ ಪ್ರಕಾರ, ಫ್ಯೂಚರ್ ಗ್ರೂಪ್‍ನಲ್ಲಿ ನಾವು 1,460 ಕೋಟಿ ಹೂಡಿಕೆ ಮಾಡಿದ್ದೇವೆ. ಒಪ್ಪಂದ ಪ್ರಕಾರ, ಫ್ಯೂಚರ್ ಸಮೂಹವು ತನ್ನ ಆಸ್ತಿಯನ್ನು ನಿಬರ್ಂಧಿತ ವ್ಯಕ್ತಿಗಳ ಪಟ್ಟಿಯಲ್ಲಿ ಹೇಳಿರುವ ಯಾರೊಬ್ಬರಿಗೂ ಮಾರಾಟ ಮಾಡುವಂತಿಲ್ಲ. ಆ ಪಟ್ಟಿಯಲ್ಲಿ ರಿಲಯನ್ಸ್ ಸಹ ಸೇರಿಕೊಂಡಿದೆ. ಈ ಒಪ್ಪಂದ ನಡೆದಿದ್ದರೂ 2020ರ ಆಗಸ್ಟ್‍ನಲ್ಲಿ ಫ್ಯೂಚರ್ ರಿಟೇಲ್‍ನ ಸಗಟು ಮತ್ತು ಇತರೆ ವಹಿವಾಟುಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿದೆ. ಇದು 2019ರಲ್ಲಿ ಫ್ಯೂಚರ್ ಮಾಡಿಕೊಂಡಿದ್ದ ಒಪ್ಪಂದದ ಉಲ್ಲಂಘನೆಯಾಗಿದೆ ಎನ್ನುವುದು ಅಮೆಜಾನ್‍ನ ವಾದವಾಗಿದೆ.
ಫ್ಯೂಚರ್ ಗ್ರೂಪ್ ಮತ್ತು ಅಮೆಜಾನ್ ನಡುವಿನ ಕಾನೂನು ಹೋರಾಟದಲ್ಲಿ ಫ್ಯೂಚರ್ ಗ್ರೂಪ್‍ಗೆ ಮುನ್ನಡೆ ಸಿಕ್ಕಿದ್ದು, ಅಮೆಜಾನ್‍ಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾಕಿರುವ ದಂಡದ ಬಗ್ಗೆ ಪ್ರಶ್ನೆ ಮಾಡುವ ಸಾಧ್ಯತೆ ಇದೆ.
– ಇವಿ ಚಾರ್ಜಿಂಗ್ ಮೂಲಸೌಕರ್ಯ – ಇಂಟರ್ ನ್ಯಾಷನಲ್ ಆನ್-ದಿ-ಮೂವ್ ಬ್ರ್ಯಾಂಡ್, ವೈಲ್ಡ್ ಬೀನ್ ಕೆಫೆ
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಮತ್ತು ಬಿಪಿ ಯ ಇಂಧನ ಮತ್ತು ಮೊಬಿಲಿಟಿಯ ಜಂಟಿ ಉದ್ಯಮ, ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ (RBML) ತನ್ನ ಮೊದಲ ಜಿಯೋ-ಬಿಪಿ ಬ್ರಾಂಡ್ ಮೊಬಿಲಿಟಿ ಸ್ಟೇಷನ್ ಅನ್ನು ಮಹಾರಾಷ್ಟ್ರದ ನವಿ ಮುಂಬೈನ ನಾವ್ಡೆಯಲ್ಲಿ ಆರಂಭಿಸಿದೆ.
ಸಾಂಕ್ರಾಮಿಕ-ಪೀಡಿತ ಪರಿಸರದಲ್ಲಿ ಕೆಲಸ ಮಾಡುವುದು ಸವಾಲಾದರೂ ಜಿಯೋ-ಬಿಪಿ ಗ್ರಾಹಕರಿಗೆ ಬಹು ಇಂಧನ ಆಯ್ಕೆಗಳನ್ನು ನೀಡುವ ಮೂಲಕ ವಿಶ್ವ ದರ್ಜೆಯ ಮೊಬಿಲಿಟಿ ಸ್ಟೇಷನ್ ಗಳ ನೆಟ್ ವರ್ಕ್ ಅನ್ನು ಪರಿಚಯಿಸಿದೆ. ಭಾರತದಲ್ಲಿ ಮೊಬಿಲಿಟಿ ಪರಿಹಾರಗಳನ್ನು ಮರುರೂಪಿಸುವಾಗ, ಜಿಯೊ-ಬಿಪಿ ಬ್ರ್ಯಾಂಡ್ ಸಾಟಿಯಿಲ್ಲದ ಮತ್ತು ವಿಶಿಷ್ಟವಾದ ಗ್ರಾಹಕ ಅನುಭವವನ್ನು ಒದಗಿಸಲು ಸಿದ್ಧವಾಗಿದೆ. ಅಸ್ತಿತ್ವದಲ್ಲಿರುವ 1400 ಇಂಧನ ಪಂಪ್ ಗಳ ನೆಟ್ ವರ್ಕ್ ಅನ್ನು ಜಿಯೊ-ಬಿಪಿ ಎಂದು ಮರುಬ್ರಾಂಡ್ ಮಾಡಲಾಗುವುದರ ಜೊತೆಗೆ ಮುಂದಿನ ತಿಂಗಳುಗಳಲ್ಲಿ ಹೊಸ ಶ್ರೇಣಿಯ ಗ್ರಾಹಕ ಮೌಲ್ಯದ ಪ್ರಸ್ತಾಪಗಳನ್ನು ಮುಂದಿಡಲಿದೆ.
ಇಂಧನ ಮತ್ತು ಮೊಬಿಲಿಟಿ ಕ್ಷೇತ್ರದಲ್ಲಿ ಭಾರತದ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಮುಂದಿನ 20 ವರ್ಷಗಳಲ್ಲಿ ಇದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಇಂಧನ ಮಾರುಕಟ್ಟೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಜಿಯೋ-ಬಿಪಿ ಮೊಬಿಲಿಟಿ ಸ್ಟೇಷನ್ ಗಳನ್ನು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲೆಂದೇ ವಿನ್ಯಾಸಗೊಳಿಸಲಾಗಿದೆ ಮತ್ತು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲಾಗಿದೆ. ಸಂಯೋಜಿತ ಇಂಧನಗಳು, ಇವಿ ಚಾರ್ಜಿಂಗ್, ರಿಫ್ರೆಶ್ ಮೆಂಟ್ ಗಳು ಮತ್ತು ಆಹಾರ(ಹೊಟೇಲ್) ಸೇರಿದಂತೆ – ಸಂಚಾರ ನಡೆಸುವ ಗ್ರಾಹಕರಿಗೆ ನೆರವಾಗುವಂತೆ ಹಲವು ಸೇವೆಗಳನ್ನು ಜೊತೆಯಾಗಿ ನೀಡಲಿದೆ. ಮುಂದಿನ ದಿನಗಳಲ್ಲಿ ಕಡಿಮೆ ಇಂಗಾಲವನ್ನು ಹೊರಸೂಸುವ ಸರಳ ಯೋಜನೆಗಳನ್ನು ರೂಪಿಸಲಿದೆ.
ಎಕ್ಸ್‌ಪ್ರೆಸ್ ಆಯಿಲ್ ಚೇಂಜ್
ಜಿಯೋ ಮತ್ತು ರಿಲಯನ್ಸ್ ರೀಟೇಲ್ ನಲ್ಲಿ ನೂರಾರು ಮಿಲಿಯನ್ ಗ್ರಾಹಕರನ್ನು ಹೊಂದಿರುವ ರಿಲಯನ್ಸ್ ತನ್ನ ವಿಶಾಲ ನೆಟ್ ವರ್ಕ್ ನಿಂದ ಭಾರತದಾದ್ಯಂತ ಗ್ರಾಹಕ ವ್ಯವಹಾರಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಇಂಧನ ಮತ್ತು ಮೊಬಿಲಿಟಿ ಕ್ಷೇತ್ರದ ಉದ್ಯಮದಲ್ಲಿ ನಾಯಕರಾಗುವ ಲಕ್ಷಣಗಳನ್ನು ಹೊಂದಿದೆ. ಉತ್ತಮ ಗುಣಮಟ್ಟದ ವಿಭಿನ್ನ ಇಂಧನಗಳು, ಲೂಬ್ರಿಕಂಟ್ ಗಳು, ಅನುಕೂಲತೆ ಮತ್ತು ಸುಧಾರಿತ ಕಡಿಮೆ ಇಂಗಾಲದ ಮೊಬಿಲಿಟಿ ಸೊಲ್ಯೂಷನ್ ಗಳನ್ನು ಒಳಗೊಂಡಿದೆ.
ಇವಿ ಚಾರ್ಜಿಂಗ್
ಸಾಮಾನ್ಯ ಇಂಧನಗಳ ಬದಲಿಗೆ, ದೇಶಾದ್ಯಂತ ಜಿಯೋ-ಬಿಪಿ ಮೊಬಿಲಿಟಿ ಕೇಂದ್ರಗಳು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಂಯೋಜಿತ ಇಂಧನವನ್ನು ನೀಡುತ್ತವೆ. ಇಂಧನದ ಕೊಡುಗೆಯು ಅಂತರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಲಾದ ‘ACTIVE’ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ, ಇದು ಇಂಜಿನ್ ಗಳನ್ನು ಸ್ವಚ್ಛವಾಗಿಡಲು ಸಹಾಯ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಎಂಜಿನ್ ಭಾಗಗಳ ಮೇಲೆ ರಕ್ಷಣಾತ್ಮಕ ಪದರವನ್ನು ರೂಪಿಸುತ್ತದೆ. ಇದನ್ನೂ ಓದಿ: 75 ಕೆಜಿಯ ಮೀನು 36 ಲಕ್ಷ ರೂಪಾಯಿಗೆ ಮಾರಾಟ
ಜಿಯೋ-ಬಿಪಿ ತನ್ನ ಮೊಬಿಲಿಟಿ ಕೇಂದ್ರಗಳು ಮತ್ತು ಇತರ ಸ್ವತಂತ್ರ ಸ್ಥಳಗಳಲ್ಲಿ – ಮೊಬಿಲಿಟಿ ಪಾಯಿಂಟ್‌ಗಳಲ್ಲಿ ಇವಿ(EV) ಚಾರ್ಜಿಂಗ್ ಸ್ಟೇಷನ್ ಗಳು ಮತ್ತು ಬ್ಯಾಟರಿ ಸ್ವಾಪ್ ಸ್ಟೇಷನ್ ಗಳ ನೆಟ್ವರ್ಕ್ ಅನ್ನು ಸ್ಥಾಪಿಸುತ್ತದೆ. ಜಂಟಿ ಉದ್ಯಮವು ಭಾರತದಲ್ಲಿ ಪ್ರಮುಖ ಇವಿ (EV )ಚಾರ್ಜಿಂಗ್ ಮೂಲಸೌಕರ್ಯ ಕ್ಷೇತ್ರದಲ್ಲಿ ಮೊದಲಿಗನಾಗುವ ಗುರಿಯನ್ನು ಹೊಂದಿದೆ.
ವೈಲ್ಡ್ ಬೀನ್ ಕೆಫೆಯ ಮೂಲಕ ಪ್ರಯಾಣದಲ್ಲಿರುವ ಗ್ರಾಹಕರಿಗೆ ಉಪಹಾರಗಳು ಲಭ್ಯವಾಗುವಂತೆ ಮಾಡುವ ಉದ್ದೇಶವನ್ನು ಹೊಂದಿದೆ. ಇವು ದಿನವಿಡೀ ತೆರೆದಿರುತ್ತವೆ. ಇವು ದೈನಂದಿನ ವಸ್ತುಗಳಿಗಾಗಿ, ತಿಂಡಿ, ತಿನಿಸುಗಳಿಗಾಗಿ ಭಾರತದ ಅತಿದೊಡ್ಡ ರಿಟೇಲ್ ಆಗಿರುವ ರಿಲಯನ್ಸ್ ರಿಟೇಲ್ ನೊಂದಿಗೆ ಪಾಲುದಾರಿಕೆ ಹೊಂದಿರುತ್ತದೆ. ವೈಲ್ಡ್ ಬೀನ್ ಕೆಫೆ, ಬಿಪಿಯ ಅಂತಾರಾಷ್ಟ್ರೀಯ ಆನ್-ದಿ-ಮೂವ್ ಬ್ರ್ಯಾಂಡ್, ಮಸಾಲಾ ಚಾಯ್, ಸಮೋಸಾ, ಉಪ್ಮಾ, ಪನೀರ್ ಟಿಕ್ಕಾ ರೋಲ್ ಮತ್ತು ಚಾಕೊಲೇಟ್ ಲಾವಾ ಕೇಕ್ ಸೇರಿದಂತೆ ಪ್ರಾದೇಶಿಕ ಮತ್ತು ಸ್ಥಳೀಯ ದರಗಳಲ್ಲಿ ಒದಗಿಸಲಿದೆ. ಇದನ್ನೂ ಓದಿ: ಸಾಮಾನ್ಯ ವ್ಯಕ್ತಿ ಜೊತೆಗೆ ಜಪಾನ್ ಯುವರಾಣಿ ಮದುವೆ-ಪದವಿ, ಗೌರವ ಹಿಂಪಡೆದ ಅರಮನೆ
ಜಿಯೋ-ಬಿಪಿ ಎಕ್ಸ್ ಪ್ರೆಸ್ ಆಯಿಲ್ ಚೇಂಜ್ ಔಟ್‌ಲೆಟ್ ಗಳ ನೆಟ್ವರ್ಕ್ ಅನ್ನು ತನ್ನ ಮೊಬಿಲಿಟಿ ಸ್ಟೇಷನ್ ಗಳಲ್ಲಿ ಕ್ಯಾಸ್ಟ್ರೋಲ್ ಸಹಭಾಗಿತ್ವದಲ್ಲಿ ನೀಡುತ್ತದೆ, ವೃತ್ತಿಪರವಾಗಿ ತರಬೇತಿ ಪಡೆದ ತಜ್ಞರು ಉಚಿತ ವಾಹನ ತಪಾಸಣೆ ಮತ್ತು ಉಚಿತ ಆಯಿಲ್ ಚೇಂಜ್ ಸೇವೆಯನ್ನು ನೀಡಲಿದ್ದಾರೆ. ಎಕ್ಸ್ ಪ್ರೆಸ್ ಆಯಿಲ್ ಚೇಂಜ್ ಔಟ್ಲೆಟ್ ಗಳಲ್ಲಿ ಕ್ಯಾಸ್ಟ್ರೋಲ್ ಲೂಬ್ರಿಕಂಟ್ ಖರೀದಿಸುವ ಪ್ರತಿಯೊಬ್ಬ ದ್ವಿಚಕ್ರ -ವಾಹನದ ಗ್ರಾಹಕರು ಯಾವುದೇ ವೆಚ್ಚವಿಲ್ಲದೆ ತೈಲ ಬದಲಾವಣೆ ಸೇವೆಯನ್ನು ಪಡೆಯಲಿದ್ದಾರೆ.
ಈ ಹೊಸ ಮೌಲ್ಯದ ಪ್ರಸ್ತಾಪಗಳ ಜೊತೆಗೆ, ಜಿಯೋ-ಬಿಪಿ ಎಂಡ್-ಟು-ಎಂಡ್ ಆಟೊಮೇಷನ್ ಬೆಂಬಲಿತ ‘ಗುಣಮಟ್ಟ ಮತ್ತು ಪ್ರಮಾಣ’ದ ಭರವಸೆಯನ್ನು ಖಾತ್ರಿಗೊಳಿಸುತ್ತದೆ, ಪ್ರತಿ ಗ್ರಾಹಕನಿಗೆ ಜಿಯೊ-ಬಿಪಿ ಮೊಬಿಲಿಟಿ ಸ್ಟೇಷನ್‌ಗಳಲ್ಲಿ ಖರ್ಚು ಮಾಡುವ ಪ್ರತಿ ರೂಪಾಯಿಗೂ ಮೌಲ್ಯವನ್ನು ನೀಡುತ್ತದೆ. ಗ್ರಾಹಕರಿಗೆ ಅತ್ಯುತ್ತಮ ಅನುಭವ ನೀಡುವುದರ ಜೊತೆಗೆ, ಡೈನಾಮಿಕ್ ಬೆಲೆಗಳು, ತ್ವರಿತ ರಿಯಾಯಿತಿಗಳು, ಹ್ಯಾಪಿ ಅವರ್ ಯೋಜನೆಗಳು, ನೆಟ್ವರ್ಕ್ ಆದ್ಯಂತ ಹೊಂದಿಕೊಳ್ಳುವ ಮತ್ತು ಏಕರೂಪದ ಡಿಜಿಟಲ್ ಪಾವತಿಯ ಅನುಷ್ಠಾನದಂತಹ ಅತ್ಯಾಕರ್ಷಕ ಹೊಸ ಯೋಜನೆಗಳು ಕೂಡ ಇದರಲ್ಲಿದೆ.
ಮುಂಬೈ: ನಾರ್ವೆಯ ಆರ್‌ಇಸಿ ಸೋಲಾರ್ ಹೋಲ್ಡಿಂಗ್ಸ್ ಕಂಪನಿಯನ್ನು ರಿಲಯನ್ಸ್ ಕಂಪನಿ 771 ದಶಲಕ್ಷ ಡಾಲರ್‌ಗೆ (ಅಂದಾಜು 5,792 ಕೋಟಿ ರೂ.) ಖರೀದಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಂಗಸಂಸ್ಥೆಯಾದ ರಿಲಯನ್ ನ್ಯೂ ಎನರ್ಜಿ ಲಿಮಿಟೆಡ್ ಚೀನಾ ನ್ಯಾಷನಲ್ ಬ್ಲೂಸ್ಟಾರ್ ಕಂಪನಿಯಲ್ಲಿದ್ದ ಆರ್‌ಇಸಿ ಕಂಪನಿಯ ಶೇ.100 ರಷ್ಟು ಷೇರುಗಳನ್ನು ಖರೀದಿಸಿರುವುದಾಗಿ ಬಿಎಸ್‌ಇಗೆ(ಬಾಂಬೆ ಸ್ಟಾಕ್ ಎಕ್ಸ್‌ಚೆಂಜ್)ಮಾಹಿತಿ ನೀಡಿದೆ. ಇದನ್ನೂ ಓದಿ: ಶೇ.100 ಎಫ್‍ಡಿಐಗೆ ಸರ್ಕಾರದ ಅನುಮತಿ ಬೇಕಿಲ್ಲ – ಟೆಲಿಕಾಂ ಕಂಪನಿಗಳಿಗೆ ಹಲವು ಕೊಡುಗೆ
1996 ರಲ್ಲಿ ಆರ್‌ಇಸಿ ಕಂಪನಿ ಸ್ಥಾಪನೆಯಾಗಿದ್ದು ಸಿಂಗಾಪುರದಲ್ಲಿ ತನ್ನ ಕಾರ್ಯಕಾರಿ ಕೇಂದ್ರವನ್ನು ಹೊಂದಿದೆ. ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಮತ್ತು ಏಷ್ಯಾ ಪೆಸಿಫಿಕ್ ನಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆ. 2015 ರಲ್ಲಿ ಚೀನಾ 419 ದಶಲಕ್ಷ ಯುರೋಗೆ ಆರ್‌ಇಸಿ ಕಂಪನಿಯನ್ನು ಖರೀದಿಸಿತ್ತು.
ಕಂಪನಿ ಬಳಿ 600 ಕ್ಕೂ ಹೆಚ್ಚು ಯುಟಿಲಿಟಿ ಮತ್ತು ವಿನ್ಯಾಸದ ಪೇಟೆಂಟ್‌ಗಳನ್ನು ಹೊಂದಿದ್ದು, ಅದರಲ್ಲಿ 446 ಮಂಜೂರು ಮಾಡಲಾಗಿದೆ ಮತ್ತು ಉಳಿದವು ಮೌಲ್ಯಮಾಪನದಲ್ಲಿದೆ. ಹೆಚ್ಚಾಗಿ ಈ ಕಂಪನಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ. ಪಾಲಿಸಿಲಿಕಾನ್, ಬಿಲ್ಲೆಗಳು, ಸೌರ ಕೋಶಗಳು(ಸೋಲಾರ್ ಸೆಲ್), ಸೌರ ಘಟಕಗಳನ್ನು(ಸೋಲಾರ್ ಮಾಡ್ಯೂಲ್ಸ್) ಆರ್‌ಇಸಿ ಕಂಪನಿ ತಯಾರಿಸುತ್ತದೆ. ಇದನ್ನೂ ಓದಿ: ರಿಲಯನ್ಸ್ ಇಂಡಸ್ಟ್ರೀಸ್ ಈಗ ವಿಶ್ವದ ನಂ.2 ಇಂಧನ ಕಂಪನಿ
ಮುಂದಿನ ಮೂರು ವರ್ಷದಲ್ಲಿ 10.1 ಶತಕೋಟಿ ಡಾಲರ್ ಅನ್ನು ನವೀಕರಿಸಬಹುದಾದ ಶಕ್ತಿಯ ಮೇಲೆ ಹೂಡಿಕೆ ಮಾಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಈ ಹಿಂದೆ ಘೋಷಿಸಿದ್ದು, ಇದರ ಭಾಗವಾಗಿ ಈ ಕಂಪನಿಯನ್ನು ಖರೀದಿ ಮಾಡಿದೆ.
ಮುಂಬೈ: ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಜಸ್ಟ್ ಡಯಲ್ ಕಂಪನಿಯನ್ನು ಖರೀದಿಸಲು ಮುಂದಾಗಿದೆ. ಒಟ್ಟು 6,600 ಕೋಟಿ ರೂ. ಖರೀದಿ ಸಂಬಂಧ ಎರಡು ಕಂಪನಿಗಳ ಮಧ್ಯೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ.
25 ವರ್ಷದ ಹಳೆಯ ಕಂಪನಿಯಾಗಿರುವ ಜಸ್ಟ್ ಡಯಲ್ ಬೋರ್ಡ್ ಸಭೆ ನಾಳೆ ನಡೆಯಲಿದ್ದು, ನಾಳೆಯೇ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ. ಭಾರತದ ಲೋಕಲ್ ಸರ್ಚ್ ಇಂಜಿನ್ ಆಗಿರುವ ಜಸ್ಟ್ ಡಯಲ್, ಆನ್ ಲೈನ್ ಶಾಪಿಂಗ್, ಹೋಟೆಲ್, ಸಿನಿಮಾ, ಬಸ್ ಬುಕ್ಕಿಂಗ್ ಸೇರಿದಂತೆ ಹಲವು ಸೇವೆಗಳನ್ನು ನೀಡುತ್ತಿದೆ.
ಜಸ್ಟ್ ಡಯಲ್ ಸಂಸ್ಥಾಪಕ ವಿಎಸ್‍ಎಸ್ ಮಣಿ ಮತ್ತು ಕುಟುಂಬದ ಸದಸ್ಯರು ಕಂಪನಿಯಲ್ಲಿ ಶೇ.35.5 ಪಾಲು ಹೊಂದಿದ್ದಾರೆ. ಕಂಪನಿ ಒಟ್ಟು 2,387 ಕೋಟಿ ರೂ. ಮೌಲ್ಯವನ್ನು ಹೊಂದಿದೆ.
ಮುಂಬೈ: ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಪ್ರಕಾಶ್ ಶಾ ಜೈನ ಮುನಿಗಳ ಬಳಿ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಕಳೆದ ವರ್ಷ ಪ್ರಕಾಶ್ ರಿಲಯನ್ಸ್ ಇಂಡಸ್ಟ್ರಿಯ ಉಪಾಧ್ಯಕ್ಷ ಸ್ಥಾನದಿಂದ ನಿವೃತ್ತಿಯಾಗಿದ್ದರು.
ಒಂದು ವಾರದ ಹಿಂದೆ ಪ್ರಕಾಶ್ ಅವರ ಪತ್ನಿ ನೈನಾ ಶಾ ಸಹ ಜೈನ ಮುನಿಗಳಿಂದ ದೀಕ್ಷೆ ಪಡೆದಿದ್ದರು. ಒಂದು ದಶಕಕ್ಕೂ ಅಧಿಕ ಕಾಲ ರಿಲಯನ್ಸ್ ಇಂಡಸ್ಟ್ರಿಯ ಮಹತ್ವದ ಹುದ್ದೆಗಳನ್ನ ಒಪ್ರಕಾಶ್ ಶಾ ನಿರ್ವಹಿಸಿದ್ದಾರೆ. ಉನ್ನತ ಹುದ್ದೆಯಲ್ಲಿದ್ದ ಶಾ ಒಳ್ಳೆಯ ಸಂಬಳವನ್ನ ಪಡೆಯುತ್ತಿದ್ದರು. ನಿವೃತ್ತಿ ಪಡೆದ ಬಳಿಕ ಓರ್ವ ಸನ್ಯಾಸಿಯಾಗಿ ಜೀವನ ನಡೆಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಫೋಟೋ ವೈರಲ್: ಸದಾ ಸೂಟ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಕಾಶ್ ಶಾ, ಜೈನ ಸನ್ಯಾಸಿಯಾಗಿದ್ದು, ಶ್ವೇತ ವಸ್ತ್ರ, ಬರಿಗಾಲಿನಲ್ಲಿ ಕೋಲು ಹಿಡಿದು ನಿಂತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
40 ವರ್ಷಗಳ ಹಿಂದೆ ಬಾಂಬೆ ಐಐಟಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿದ್ದರು. ರಿಲಯನ್ಸ್ ಕಂಪನಿಯ ಜಾಮ್‍ನಗರ ಪೆಟಕೊಕ್ ಗ್ಯಾಸ್ಫಿಕೇಷನ್ ಪ್ರೊಜಕ್ಟ್ ನಲ್ಲಿ ಆರಂಭಿಸುವಲ್ಲಿ ಶಾ ಅವರು ಮಹತ್ವದ ಪಾತ್ರವಿದೆ. ಅವರ ಪತ್ನಿ ನೈನಾ ವಾಣಿಜ್ಯ ಪದವಿ ಓದಿದ್ದಾರೆ.
ಕಳೆದ ವರ್ಷವೇ ಶಾ ವರು ದೀಕ್ಷೆಗೆ ಮುಂದಾಗಿದ್ದರು. ಆದ್ರೆ ಕೊರೊನಾದಿಂದ ದೀಕ್ಷೆ ಪಡೆಯುವುದು ಮುಂದೂಡಿಕೆಯಾಗುತ್ತಾ ಬಂದಿತ್ತು. ಏಳು ವರ್ಷಗಳ ಹಿಂದೆ ಶಾ ಪುತ್ರ ದೀಕ್ಷೆ ಪಡೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಇವರು ಸಹ ಬಾಂಬೆ ಐಐಟಿಯಲ್ಲಿ ಪದವಿ ಪಡೆದಿದ್ದರು. ಮತ್ತೋರ್ವ ಮಗ ಗೃಹಸ್ಥ ಜೀವನ ನಡೆಸುತ್ತಿದ್ದು, ಒಬ್ಬ ಮಗನಿದ್ದಾನೆ.
ಮುಂಬೈ: 6 ತಿಂಗಳ ಒಳಗಡೆ ಜಿಯೋ ಮಾರ್ಟ್ ವಾಟ್ಸಪ್‌ನಲ್ಲಿ ಎಂಬೆಡ್ ಆಗಲಿದೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಆನ್‌ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಕಂಪನಿಗಳಿಗೆ ಸ್ಪರ್ಧೆ ನೀಡಲು ದೇಶದ ನಂಬರ್ ಒನ್ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಜಿಯೋ ಮಾರ್ಟ್ ತೆರೆದಿದ್ದಾರೆ. ಈಗಾಗಲೇ ಜಿಯೋ ಮಾರ್ಟ್ ತನ್ನ ಸೇವೆ ಆರಂಭಿಸಿದ್ದು ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯಲು ವಾಟ್ಸಪ್‌ನಲ್ಲಿ ಎಂಬೆಡ್ ಆಗಲಿದೆ.
ಈಗಾಗಲೇ ರಿಲಯನ್ಸ್ ಫ್ರೆಶ್, ರಿಲಯನ್ಸ್ ಡಿಜಿಟಲ್, ರಿಲಯನ್ಸ್ ಫುಟ್ ಪ್ರಿಂಟ್ ಸೇರಿದಂತೆ ವಿವಿಧ ಕಂಪನಿಗಳು ಕೆಲಸ ಮಾಡುತ್ತಿವೆ. ಇವುಗಳನ್ನು ಒಟ್ಟಿಗೆ ಸೇರಿಸಿ ಉದ್ಯಮವನ್ನು ವಿಸ್ತರಿಸುವ ನಿಟ್ಟಿನಲ್ಲಿ ರಿಲಯನ್ಸ್‌ಗೆ ಜಿಯೋ ಮಾರ್ಟ್ ಸಹಕಾರಿಯಾಗಲಿದೆ.
ಸದ್ಯ ದೇಶದದಲ್ಲಿ ಅತಿ ದೊಡ್ಡ ಆಫ್‌ಲೈನ್ ರಿಟೇಲ್ ಅಂಗಡಿಯನ್ನು ರಿಲಯನ್ಸ್ ಹೊಂದಿದೆ. ಈಗ 2025ರ ಒಳಗಡೆ ಜಿಯೋಮಾರ್ಟ್‌ಅನ್ನು ದೇಶದ ನಂಬರ್ ಒನ್ ಆನ್‌ಲೈನ್ ಶಾಪಿಂಗ್ ತಾಣವನ್ನಾಗಿ ಮಾಡಲು ಮುಕೇಶ್ ಅಂಬಾನಿ ಮುಂದಾಗಿದ್ದಾರೆ,
2020ರ ಏಪ್ರಿಲ್ 22 ರಂದು ಫೇಸ್‌ಬುಕ್ ಜಿಯೋದಲ್ಲಿ 43,354 ಕೋಟಿ ರೂ. ಹಣವನ್ನು ಹೂಡಿಕೆ ಮಾಡಿ ಶೇ.9.9ರಷ್ಟು ಪಾಲನ್ನು ಪಡೆದುಕೊಂಡಿತ್ತು.
ಡಿಸೆಂಬರ್‌ನಲ್ಲಿ ನಡೆದ ಫೇಸ್‌ಬುಕ್ ಫ್ಯುಯಲ್ ಫಾರ್ ಇಂಡಿಯಾ 2020 ಕಾರ್ಯಕ್ರಮದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರು ಫೇಸ್‌ಬುಕ್, ಜಿಯೋ ಪಾಲುದಾರಿಕೆಯಿಂದ ದೇಶದ ಮೇಲೆ ಆಗಿರುವ ಮತ್ತು ಆಗಲಿರುವ ಪರಿಣಾಮದ ಬಗ್ಗೆ ಚರ್ಚೆ ನಡೆಸಿದ್ದರು. ಈ ವೇಳೆ ಮಾತನಾಡಿದ ಅಂಬಾನಿ, ಮುಂದಿನ ಎರಡು ಮೂರು ದಶಕದಲ್ಲಿ ಭಾರತ ವಿಶ್ವದ ಟಾಪ್ 3 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದರು.
ಈ ಮೊದಲು ಜಿಯೋ ಮತ್ತು ವಾಟ್ಸಪ್ ಕೇವಲ ಸಂವಹನಕ್ಕಾಗಿ ಮಾತ್ರ ಬಳಕೆ ಆಗುತ್ತಿತ್ತು. ಆದರೆ ಈಗ ಗ್ರಾಹಕರು ಮತ್ತು ಸಣ್ಣ ವ್ಯವಹಾರಗಳಿಗೆ ಮೌಲ್ಯವನ್ನು ನೀಡುವ ವೇದಿಕೆಯಾಗಿ ಬದಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಕಲ್ಪನೆಯಿಂದ ಕಂಪನಿಗಳು ಈಗ ಹೆಚ್ಚು ಹೆಚ್ಚು ಇಂಟರ್‌ನೆಟ್ ಆಧಾರಿತ ಸೇವೆ ನೀಡುತ್ತಿವೆ ಎಂದು ತಿಳಿಸಿದ್ದರು.
ವಾಟ್ಸಾಪ್ ಭಾರತದಲ್ಲಿ 100 ದಶಲಕ್ಷ ಚಂದದಾರನ್ನು ಹೊಂದಿದ್ದರೆ ಜಿಯೋ 100 ದಶಲಕ್ಷ ಗ್ರಾಹಕರನ್ನು ಹೊಂದಿದೆ. ಇದರರ್ಥ ಜಿಯೋ ಡಿಜಿಟಲ್ ಕನೆಕ್ಟಿವಿಟಿ ತಂದರೆ ವಾಟ್ಸಪ್ ಡಿಜಿಟಲ್ ಇಂಟರಾಕ್ಟಿವಿಟಿ ತಂದಿದೆ. ಜಿಯೋ ಮಾರ್ಟ್ ಸಾಟಿಯಿಲ್ಲದ ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ಅವಕಾಶವನ್ನು ತರುತ್ತದೆ ಎಂದು ಅಂಬಾನಿ ಹೇಳಿದ್ದರು.
ಮಾರ್ಕ್ ಜುಕರ್‌ಬರ್ಗ್ ಮಾತನಾಡಿ, ನಾವು ಸಣ್ಣ ಉದ್ಯಮಗಳಿಗೆ ಸೇವೆ ಸಲ್ಲಿಸುವ ವ್ಯವಹಾರದಲ್ಲಿದ್ದೇವೆ ಎಂದು ಹೇಳಲು ನಾವು ಇಷ್ಟಪಡುತ್ತೇವೆ. ಭಾರತದ ಸಣ್ಣ ವ್ಯವಹಾರಗಳು ಜಾಗತಿಕ ಚೇತರಿಕೆಯ ಪ್ರಮುಖ ಭಾಗವಾಗಿರುತ್ತವೆ. ಹೀಗಾಗಿ ಅವರಿಗೆ ಸಹಾಯವಾಗಲು ಉತ್ತಮವಾದ ಟೂಲ್‌ಗಳನ್ನು ನಿರ್ಮಿಸುತ್ತೇವೆ. ಈ ಕಾರಣಕ್ಕೆ ನಾವು ಜಿಯೋ ಜೊತೆ ಪಾಲುದಾರಿಕೆ ಬಯಸಿದ್ದೇವೆ. ಇಂದು ಭಾರತದ ನೂರಾರು ಮಿಲಿಯನ್ ಮಂದಿಗೆ ಇಂಟರ್‌ನೆಟ್ ಸಿಗುವಲ್ಲಿ ಜಿಯೋದ ಪಾತ್ರ ದೊಡ್ಡದು ಎಂದು ಹೇಳಿ ಶ್ಲಾಘಿಸಿದ್ದರು.
ಲಾಕ್‌ಡೌನ್ ಮಧ್ಯದಲ್ಲಿ ಜಿಯೋ ಮತ್ತು ಫೇಸ್‌ಬುಕ್ ಪಾಲುದಾರಿಕೆ ಹೇಗೆ ನಡೆಯಿತು ಎಂಬುದಕ್ಕೆ ನಮ್ಮದೇ ಒಂದು ಉತ್ತಮ ಉದಾಹರಣೆ. ಈ ಮಾತನ್ನು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಜಿಯೋ ಮತ್ತು ಫೇಸ್‌ಬುಕ್ ನಡುವಿನ ಸಹಭಾಗಿತ್ವವು ಭಾರತ, ಭಾರತೀಯರು ಮತ್ತು ಸಣ್ಣ ಭಾರತೀಯ ವ್ಯವಹಾರಗಳಿಗೆ ಸಹಾಯವಾಗಲಿದೆ ಎಂದು ಮುಕೇಶ್ ಅಂಬಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
– 1 ಸಾವಿರ ಟನ್ ಭತ್ತ ಖರೀದಿ – ಕ್ವಿಂಟಾಲ್‌ಗೆ 100 ರೂ.ಹೆಚ್ಚಳ, ನಾಲ್ಕೇ ದಿನದಲ್ಲಿ ಹಣಪಾವತಿ
ರಾಯಚೂರು: ಒಂದೆಡೆ ದೇಶದ ರಾಜಧಾನಿಯಲ್ಲಿ ರೈತರು ಹೊಸ ಕೃಷಿ ನೀತಿಗಳನ್ನ ವಿರೋಧಿಸಿ ಹೋರಾಟ ನಡೆಸುತ್ತಿದ್ದರೆ ಇನ್ನೊಂದು ಕಡೆ ದೇಶದ ಒಳಗಡೆ ಖಾಸಗಿ ಕಂಪನಿಗಳು ಆಗಲೇ ಕೃಷಿ ಉತ್ಪನ್ನ ಖರೀದಿಗೆ ಲಗ್ಗೆ ಇಟ್ಟಿವೆ. ರಾಯಚೂರು ಜಿಲ್ಲೆಯಲ್ಲಿ ರೈತರೊಂದಿಗೆ ರಿಲಯನ್ಸ್ ಕಂಪನಿ ಒಪ್ಪಂದ ಮಾಡಿಕೊಂಡು ಭತ್ತ ಖರೀದಿ ನಡೆಸಿದೆ.
ರಿಲಯನ್ಸ್ ರೀಟೇಲ್ ಲಿಮಿಟೆಡ್ ಸಿಂಧನೂರಿನಲ್ಲಿ ಸ್ವಾಸ್ಥ ರೈತ ಉತ್ಪಾದಕರ ಕಂಪನಿ ಜೊತೆ 1,000 ಟನ್ ಸೋನಾಮಸೂರಿ ಭತ್ತ ಖರೀದಿ ಮಾಡಲು ಒಪ್ಪಂದ ಮಾಡಿಕೊಂಡಿದೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದ ಬಳಿಕ ಬಹುಶಃ ರಾಜ್ಯದಲ್ಲಿ ಇದೇ ಮೊದಲ ಒಪ್ಪಂದ ಇರಬಹುದು ಎನ್ನಲಾಗುತ್ತಿದೆ.
ಸರ್ಕಾರ ನೀಡುವ ಬೆಂಬಲ ಬೆಲೆಗಿಂತಲೂ ಕ್ವಿಂಟಾಲ್‌ಗೆ 100 ರೂ ಹೆಚ್ಚು ಕೊಟ್ಟು ಖರೀದಿಸಲು ರಿಲಯನ್ಸ್ ಒಪ್ಪಂದ ಮಾಡಿಕೊಂಡಿದೆ. ಭತ್ತಕ್ಕೆ ಸರ್ಕಾರದ ಬೆಂಬಲ ಬೆಲೆ ಕ್ವಿಂಟಾಲ್‌ಗೆ 1850 ರೂ.ಇದೆ. ಹೊರಗಡೆ ಮಾರುಕಟ್ಟೆಯಲ್ಲಿ ಇನ್ನೂ ಕಡಿಮೆಯಿದೆ. ಆದ್ರೆ ರಿಲಯನ್ಸ್ ಕ್ವಿಂಟಾಲ್ ಗೆ 1950 ರೂ ಕೊಟ್ಟು ಖರೀದಿ ನಡೆಸಿದೆ. ಮೊದಲ ಹಂತವಾಗಿ ಈಗ 100 ಟನ್ ಖರೀದಿಗೆ ಬೇಡಿಕೆ ಕೊಟ್ಟಿದೆ. ರೈತರ ಕಂಪನಿ 72 ಟನ್ ಸೋನಾಮಸೂರಿ ಭತ್ತವನ್ನ ಈಗಾಗಲೇ ನೀಡಿದೆ. ಈ ಹಿಂದೆ ಬಿಗ್ ಬಾಸ್ಕೆಟ್ ಕಂಪನಿ ಸಹ ಭತ್ತ ಖರೀದಿಗೆ ಬಂದಿತ್ತು. ಆದರೆ ತಾಂತ್ರಿಕ ಕಾರಣದಿಂದ ಒಪ್ಪಂದ ನಡೆದಿರಲಿಲ್ಲ. ಈಗ ರಿಲಯನ್ಸ್ ರೀಟೇಲ್ ಲಿಮಿಟೆಡ್ ಖರೀದಿ ಪ್ರಕ್ರಿಯೆ ನಡೆಸಿದೆ.
ನಬಾರ್ಡ್ ಯೋಜನೆಯ ಸಹಾಯದಲ್ಲಿ ನಡೆಯುತ್ತಿರುವ ಸಿಂಧನೂರಿನ ಸ್ವಾಸ್ಥ ರೈತ ಉತ್ಪಾದಕರ ಕಂಪನಿ 1100 ಕ್ಕೂ ಹೆಚ್ಚು ರೈತರನ್ನ ಹೊಂದಿದೆ. ಭತ್ತಕ್ಕೆ ಉತ್ತಮ ಬೆಲೆ ಹಾಗೂ ಕೂಡಲೇ ಹಣ ಸಿಗುವುದರಿಂದ ರೈತರಿಗೆ ಅನುಕೂಲವಾಗುತ್ತದೆ ಅಂತ ಒಪ್ಪಂದ ಮಾಡಿಕೊಂಡಿರುವುದಾಗಿ ಕಂಪನಿ ಆಡಳಿತ ಮಂಡಳಿ ಹೇಳಿದೆ.
ಖರೀದಿಯಾಗಿ ನಾಲ್ಕು ದಿನದಲ್ಲಿ ಹಣ ಸಿಗುತ್ತದೆ ತಿಂಗಳುಗಟ್ಟಲೆ ಕಾಯುವ ಅವಶ್ಯಕತೆಯಿಲ್ಲ. ಸೂಟ್ ತೆಗೆಯುವ ನೆಪದಲ್ಲಿ ಕೆ.ಜಿ.ಗಟ್ಟಲೇ ಭತ್ತ ತೆಗೆದುಕೊಳ್ಳುವುದಿಲ್ಲ. ಭತ್ತ ಉತ್ತಮ ಗುಣಮಟ್ಟದ್ದಾಗಿದ್ದರೆ ಸಾಕು ನಿಗದಿತ ಬೆಲೆ ಸಿಗುತ್ತದೆ. ಹೀಗಾಗಿ ಈ ಒಪ್ಪಂದ ರೈತರಿಗೆ ಅನುಕೂಲಕರವಾಗಿದೆ ಅಂತ ಸ್ವಾಸ್ಥ ರೈತ ಉತ್ಪಾದಕರ ಕಂಪನಿ ನಿರ್ದೇಶಕ ಚಂದ್ರಶೇಖರ್ ಹುಡೆದ್ ಹೇಳಿದ್ದಾರೆ.
ಹಿಂದಿನಿಂದಲೂ ರೈಸ್ ಮಿಲ್ ಮಾಲೀಕರು, ವ್ಯಾಪಾರಿಗಳು ಸಹ ನೇರವಾಗಿ ರೈತರಲ್ಲಿಗೆ ಬಂದು ಖರೀದಿ ಮಾಡುತ್ತಿದ್ದರು. ಆದರೆ ಎಪಿಎಂಸಿ ಕಾಯಿದೆ ತಿದ್ದುಪಡಿ ಬಳಿಕ ಕಂಪನಿಗಳೇ ನೇರವಾಗಿ ಖರೀದಿಗೆ ಇಳಿಯುತ್ತಿವೆ. ಇದರಿಂದ ರೈಸ್ ಮಿಲ್‌ಗಳ ಮೇಲೂ ಪರಿಣಾಮ ಬೀರಲಿದೆ.
ನವದೆಹಲಿ: ಕೇಂದ್ರ ಸರ್ಕಾರ ಅಂಗೀಕರಿಸಿದ ಮೂರು ನೂತನ ಕೃಷಿ ಕಾನೂನು ವಿರುದ್ಧ ಪಂಜಾಬ್ ಹಾಗೂ ಹರಿಯಾಣದ ರೈತರು ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ರಿಲಯನ್ಸ್ ಜಿಯೋ ಟೆಲಿಕಾಂ ಟವರ್‌ಗಳಿಗೆ ರೈತರು ಹಾನಿ ಮಾಡುತ್ತಿದ್ದಾರೆ. ಹೀಗಾಗಿ ಕಂಪನಿಯ ಆಸ್ತಿ ಮತ್ತು ಸೇವೆಗಳನ್ನು ಕಾಪಾಡಲು ಸಹಾಯಕ್ಕಾಗಿ ಸರ್ಕಾರದ ಹಸ್ತಕ್ಷೇಪ ಕೋರಿ ರಿಲಯನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಪಂಜಾಬ್ ಹಾಗೂ ಹರಿಯಾಣದ ರೈತರು ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್‍ನ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುವ, ಟೆಲಿಕಾಂ ಕೇಬಲ್‍ಗಳನ್ನು ಕತ್ತರಿಸುವ ಮತ್ತು ಜಿಯೋ ಮೂಲ ಸೌಕರ್ಯಗಳಿಗೆ ಹಾನಿ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಿಲಯನ್ಸ್ ಜಿಯೋನ 9,000 ಟೆಲಿಕಾಂ ಟವರ್‌ಗಳಲ್ಲಿ 1,500ಕ್ಕೂ ಹೆಚ್ಚು ಟವರ್‌ಗಳು ಡಿಸೆಂಬರ್‍ನಿಂದ ಕಾರ್ಯನಿರ್ವವಹಿಸುತ್ತಿಲ್ಲ. ವಿದ್ಯುತ್ ಸ್ಥಗಿತ ಗೊಳಿಸುವ ಮತ್ತು ಜನರೇಟರ್‍ಗಳ ಕಳ್ಳತನದಿಂದ ಟವರ್‌ಗೆ ಹಾನಿ ಮಾಡಲಾಗಿದೆ ಎಂದು ರಿಲಯನ್ಸ್ ಸಂಸ್ಥೆ ತಿಳಿಸಿದೆ. ಈ ಮೊದಲು ಇದೇ ವಿಚಾರವಾಗಿ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್‍ರವರೆಗೆ ಇಂತಹ ವಿದ್ವಂಸಕ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಬೇಕೆಂದು ಕಠಿಣ ಎಚ್ಚರಿಕೆ ನೀಡಿದ್ದು, ಇಂತಹ ಪ್ರಕರಣಗಳಲ್ಲಿ ಪೊಲೀಸರು ಕಠಿಣ ಕ್ರಮ ಜರುಗಿಸಬೇಕೆಂದು ಸೂಚಿಸಿದ್ದರು.
ರಿಲಯನ್ಸ್ ಜಿಯೋ ಇನ್ಫೋಕಾಮ್ ಇದೀಗ ಪಂಜಾಬ್ ಮತ್ತು ಹರಿಯಾಣ ಹೈ ಕೋರ್ಟ್ ಮೊರೆ ಹೋಗಿದೆ. ದುಷ್ಕರ್ಮಿಗಳು ನಡೆಸಿದ ಅಕ್ರಮ ವಿಧ್ವಂಸಕ ಕೃತ್ಯಗಳಿಗೆ ಸಂಪೂರ್ಣ ನಿಲುಗಡೆ ತರಲು ಸರ್ಕಾರದ ತುರ್ತು ಹಸ್ತಕ್ಷೇಪ ಕೋರಿ ಆರ್‍ಐಎಲ್ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಹಿಂಸಾಚಾರ ಘಟನೆಯು ಸಾವಿರಾರು ಉದ್ಯೋಗಿಗಳ ಜೀವನದ ಮೇಲೆ ಪರಿಣಾಮವನ್ನುಂಟು ಮಾಡಿದೆ. ಅಲ್ಲದೆ ಎರಡು ರಾಜ್ಯಗಳ ನಡೆಸುತ್ತಿರುವ ಪ್ರಮುಖ ಸಂವಹನ ಮೂಲಸೌಕರ್ಯ, ಮಾರಾಟ, ಸೇವಾ ಮಳಿಗಳಿಗೆ ಮೇಲೆ ಹಾನಿ ಹಾಗೂ ಅಡ್ಡ ಪರಿಣಾಮವನ್ನುಂಟು ಮಾಡಿದೆ ಎಂದು ತಿಳಿಸಿದರು.
ನವದೆಹಲಿ: ಗುಜರಾತಿನ ಜಾಮ್‌ನಗರದಲ್ಲಿ ವಿಶ್ವದ ಅತಿ ದೊಡ್ಡ ಮೃಗಾಲಯ ನಿರ್ಮಾಣಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಮುಂದಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಗೆ ಅನುಮತಿ ನೀಡಿದ್ದು 280 ಎಕ್ರೆ ಭೂಮಿಯಲ್ಲಿ ಮೃಗಾಲಯ ನಿರ್ಮಾಣವಾಗಲಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಈ ಯೋಜನೆ ಆರಂಭ ತಡವಾಗಿದ್ದು 2 ವರ್ಷದಲ್ಲಿ ಪೂರ್ಣಗೊಳ್ಳಲಿದೆ.
ಆರ್‌ಐಎಲ್‌ನ ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕ ಪರ್ಮಿಲ್ ನಾಥ್ವಾನಿ ಪ್ರತಿಕ್ರಿಯಿಸಿ, ನಾವು ಈ ಯೋಜನೆಯ ಕೆಲಸಗಳನ್ನು ಪ್ರಾರಂಭಿಸಿದ್ದೇವೆ. ಈ ಮೃಗಾಲಯವು ವಿಶ್ವದ ಅತಿದೊಡ್ಡ ಮೃಗಾಲಯವಾಗಲಿದೆ. ಸಿಂಗಾಪುರದಲ್ಲಿ ಇರುವ ಮೃಗಾಲಯಕ್ಕಿಂತಲೂ ಈ ಮೃಗಾಲಯ ದೊಡ್ಡದಿರಲಿದೆ ಎಂದು ಹೇಳಿದ್ದಾರೆ.
ಜಾಮ್ ನಗರದಲ್ಲಿ ಈಗಾಗಲೇ ರಿಲಯನ್ಸ್ ತೈಲ ಸಂಸ್ಕರಣ ಘಟಕವಿದೆ. ಈ ಘಟಕದ ಸಮೀಪ ಇರುವ ಮೋತಿ ಖಾವ್ಡಿ ಎಂಬಲ್ಲಿ ಈ ಮೃಗಾಲಯ ನಿರ್ಮಾಣವಾಗಲಿದೆ.
ಮುಂಬೈ: ನಕಲಿ ವೆಬ್‍ಸೈಟ್ ಗಳ ಮೂಲಕ ಕೆಲ ದುಷ್ಕರ್ಮಿಗಳು ತಾವು ಜಿಯೋಮಾರ್ಟ್ ಭಾಗವೆಂದು ಬಿಂಬಿಸಿಕೊಳ್ಳುರತ್ತಿರುವರಿಗೆ ರಿಲಯನ್ಸ್ ರಿಟೇಲ್ ಎಚ್ಚರಿಕೆ ನೀಡಿದೆ. ಜಿಯೋ ಮಾರ್ಟ್ ಸೇವೆಯ ಫ್ರಾಂಚೈಸಿ ನೀಡುವುದಾಗಿ ಅಮಾಯಕರನ್ನು ದುಷ್ಕರ್ಮಿಗಳು ವಂಚಿಸುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ರಿಲಯನ್ಸ್ ರಿಟೇಲ್ ತಿಳಿಸಿದೆ.
ರಿಲಯನ್ಸ್ ಪ್ಲಾಟ್‍ಫಾರ್ಮ್ ಗಳಲ್ಲಿ ಎಚ್ಚರಿಕೆಯ ನೋಟಿಸ್: ನಾವು ಸಾರ್ವಜನಿಕರ ಗಮನಕ್ಕೆ ತರಲು ಬಯಸುವ ವಿಷಯ ಏನೆಂದರೆ, ಸದ್ಯಕ್ಕೆ ನಾವು ಯಾವುದೇ ಡೀಲರ್ ಶಿಪ್ ಅಥವಾ ಫ್ರಾಂಚೈಸಿ ಮಾದರಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಫ್ರಾಂಚೈಸಿ-ಏಜೆಂಟ್ ನೇಮಕ ಮಾಡಿಕೊಂಡು, ಅವರ ಮೂಲಕ ಹೊಸ ಡೀಲರ್ ಅಥವಾ ಫ್ರಾಂಚೈಸಿಯನ್ನು ಯಾವುದೇ ಬಗೆಯಲ್ಲೂ ನೇಮಿಸಿಕೊಳ್ಳುತ್ತಿಲ್ಲ. ಫ್ರಾಂಚೈಸಿ ಆಗಿ ನೇಮಿಸಿಕೊಳ್ಳುವ ಸಲುವಾಗಿ ಯಾವ ಹಣವನ್ನು ಸಹ ಪಡೆಯುತ್ತಿಲ್ಲ ಎಂದು ರಿಲಯನ್ಸ್ ನೋಟಿಸ್ ನಲ್ಲಿ ಮಾಹಿತಿ ನೀಡಿದೆ.
ಕೆಲ ದುಷ್ಕರ್ಮಿಗಳು ತಾವುಗಳು ಜಿಯೋ ಮಾರ್ಟ್ ಭಾಗವೆಂದು ಪರಿಚಯಿಸಿಕೊಂಡು ಪ್ರಾಂಚೈಸಿ ನೀಡುವುದಾಗಿ ಜನರನ್ನು ವಂಚಿಸಲಾಗುತ್ತಿದೆ. ರಿಲಯನ್ಸ್ ರಿಟೇಲ್ ಕೆಲ ನಕಲಿ ವೆಬ್‍ಸೈಟ್ ವಿಳಾಸಗಳನ್ನು ನೋಟಿಸ್ ನಲ್ಲಿ ನೀಡಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದೆ.
ಟ್ರೇಡ್ ಮಾರ್ಕ್ ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಕ್ರಿಮಿನಲ್ ಅಥವಾ ಸಿವಿಲ್ ದಾವೆ ಹೂಡಲು ಕಂಪನಿ ಹಿಂದೇಟು ಹಾಕಲ್ಲ. ಈ ರೀತಿಯ ಕಾನೂನು ಬಾಹಿರ ಚಟುವಟಿಕೆಗಳ ಗಮನಕ್ಕೆ ಬಂದರೆ ಕಂಪನಿಯ ಕಾನೂನು ವಿಭಾಗಕ್ಕೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ರಿಲಯನ್ಸ್ ರಿಟೇಲ್ ಮನವಿ ಮಾಡಿಕೊಂಡು, ವಿಳಾಸ ಮತ್ತು ಮೇಲ್ ಐಡಿ ನೀಡಿದೆ.