Tag: Reliance Retail

  • ಟ್ರೆಂಡ್ಸ್ ಅವಂತ್ರ ರಾಯಭಾರಿಯಾದ ‘ಕಾಂತಾರದ ರಾಜಕುಮಾರಿ’ ರುಕ್ಮಿಣಿ ವಸಂತ್

    ಟ್ರೆಂಡ್ಸ್ ಅವಂತ್ರ ರಾಯಭಾರಿಯಾದ ‘ಕಾಂತಾರದ ರಾಜಕುಮಾರಿ’ ರುಕ್ಮಿಣಿ ವಸಂತ್

    ಮುಂಬೈ: ರಿಲಯನ್ಸ್ ರಿಟೇಲ್‌ನ (Reliance Retail) ಅವಂತ್ರ (Avantra) ಎಂಬುದು ಸಮಕಾಲೀನ ಸೀರೆಗಳನ್ನು ಖರೀದಿಸಲು ಅತ್ಯುತ್ತಮ ತಾಣ. ಭಾರತೀಯ ಮಹಿಳೆಯರ ಆಯ್ಕೆಗೆ ಹೇಳಿ ಮಾಡಿಸಿದ ಸ್ಥಳ ಇದು. ಇದೀಗ ಹೊಸದಾಗಿ ಹಬ್ಬದ ಅಭಿಯಾನವನ್ನು ಅವಂತ್ರ ಶುರು ಮಾಡಿದ್ದು, ದೇಶದೆಲ್ಲೆಡೆ ಮನೆ ಮಾತಾಗಿರುವ ಚೆಲುವೆ, ಕಾಂತಾರ (Kantara Chapter 1) ಸಿನಿಮಾದ ರಾಜಕುಮಾರಿ ಹಾಗೂ ನಟಿ ರುಕ್ಮಿಣಿ ವಸಂತ್ (Rukmini Vasanth) ರಾಯಭಾರಿ ಆಗಿದ್ದಾರೆ.

    ಹಬ್ಬಗಳು ಬಂತೆಂದರೆ ಸಂಭ್ರಮ. ಅದರಲ್ಲೂ ಹೆಣ್ಣುಮಕ್ಕಳಿಗೆ ವಿಶೇಷವಾದ ಸಂದರ್ಭ ಇದಾಗಿರುತ್ತದೆ. ಹೌದು, ಈಗಿನ ಮಹಿಳೆಯಲ್ಲಿ ಆತ್ಮವಿಶ್ವಾಸ ಕಾಣಬಹುದು. ತನ್ನ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ, ಗುರುತನ್ನು ತೆರೆದಿಡುವ ಹಾಗೂ ತನ್ನ ಭಾವನೆಯನ್ನು ಅಭಿವ್ಯಕ್ತಪಡಿಸುವುದಕ್ಕಾಗಿ ಹಬ್ಬದ ಋತುವಿನಲ್ಲಿ ಅವಂತ್ರಗಿಂತ ಮತ್ತೊಂದು ಉತ್ತಮ ಆಯ್ಕೆ ಬೇರಾವುದೂ ಇಲ್ಲ. ಈ ಅಭಿಯಾನವನ್ನು “ಮೈ ವೇ” (My way) ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ. ಇದನ್ನೂ ಓದಿ: ಬೆಳಕಿನ ಹಬ್ಬ ದೀಪಾವಳಿಗೆ ʻಅವಂತ್ರ ಬೈ ಟ್ರೆಂಡ್ಸ್‌ʼ ವಿಶಿಷ್ಟ ಸಂಗ್ರಹ – 399 ರೂ.ರಿಂದ 39,999 ರೂ. ತನಕ ಸಿಗುತ್ತೆ ಸೀರೆಗಳು

    ಈ ಅಭಿಯಾನದ ಜಾಹೀರಾತಿನಲ್ಲಿ ಪ್ರತಿ ಮಹಿಳೆಗೂ ಹೇಗೆ ಈ ಕ್ಷಣವನ್ನು ತಮ್ಮದಾಗಿಸಿಕೊಳ್ಳುವುದು? ತಮ್ಮದೇ ಸ್ಥಾನವನ್ನು ಹೇಗೆ ಗುರುತಿಕೊಳ್ಳುವುದು ಎಂಬುದನ್ನು ಮುಖ್ಯ ವಿಷಯವಾಗಿ ತೆಗೆದುಕೊಳ್ಳಲಾಗಿದೆ. ಭಾರತೀಯ ಹಬ್ಬಗಳ ಅದ್ಭುತ ಸಂಭ್ರಮದ ಹಿನ್ನೆಲೆಯಲ್ಲಿ ಕುಟುಂಬಗಳು ಒಗ್ಗೂಡುವುದು, ಸಂಪ್ರದಾಯಗಳ ಆಚರಣೆ ಮತ್ತು ನಗು ಈ ಎಲ್ಲವನ್ನು ತುಂಬ ಚೆನ್ನಾಗಿ ಚಿತ್ರಿಸಲಾಗಿದೆ. ಈ ಎಲ್ಲ ಖುಷಿಯ ವಾತಾವರಣದ ಮಧ್ಯೆ ಸೌಂದರ್ಯದ ಖನಿಯಾದ ರುಕ್ಮಿಣಿ ವಸಂತ್ ಅವರು ಶ್ರೀಮಂತಿಕೆಯ- ಅವಂತ್ರದ ರೇಷ್ಮೆ ಸೀರೆಯುಟ್ಟು ಮಿರಮಿರ ಮಿಂಚಿದ್ದಾರೆ.

    ಅವಂತ್ರ ಒಂದು ಬ್ರ್ಯಾಂಡ್ ಆಗಿ ಐವತ್ತಕ್ಕೂ ಹೆಚ್ಚಿನ ಬಗೆಯ ಸೀರೆಗಳನ್ನು ಒಂದೇ ಜಾಗದಲ್ಲಿ ಖರೀದಿ ಮಾಡಬಹುದು. ತುಂಬ ವಿಶಿಷ್ಟವಾದ ಮತ್ತು ಸಾಂಸ್ಕೃತಿಕವಾಗಿಯೂ ಮುಖ್ಯವಾದ ಸ್ಥಳ ಇದಾಗಿರಲಿದೆ. ಭಾರತೀಯ ಹೊಸ ತಲೆಮಾರಿನ ಮಹಿಳೆಯರನ್ನು ಅವಂತ್ರ ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಈಗಿನ ಮಹಿಳೆಯರಿಗೆ ತಮ್ಮ ಗುರುತನ್ನು ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸಲು ಹಾಗೂ ಭಾವಾಭಿವ್ಯಕ್ತಿ ಸಂಕೇತವಾಗಿ ಈ ಸೀರೆಗಳು ಕಾಣುತ್ತವೆ. ಇದನ್ನೂ ಓದಿ: ರಿಲಯನ್ಸ್ ರೀಟೇಲ್‌ನ ಜಿಯೋಮಾರ್ಟ್‌ ಜೊತೆಗೆ ಆನ್‌ಲೈನ್‌ಗೆ ಸ್ಥಳೀಯ ಕುಶಲಕರ್ಮಿಗಳು ಪ್ರವೇಶ

    ರುಕ್ಮಿಣಿ ಅವರನ್ನು ತಮ್ಮ ಬ್ರ್ಯಾಂಡ್ ರಾಯಭಾರಿ ಆಗಿ, ಅವಂತ್ರದ ಮುಖವಾಗಿ ಪರಿಚಯಿಸುವುದಕ್ಕೆ ಸಂಸ್ಥೆಯು ಹೆಮ್ಮೆ ಪಡುತ್ತದೆ. ಈ ಅಭಿಯಾನಕ್ಕೆ ಅವರನ್ನು ಸ್ವಾಗತಿಸುತ್ತದೆ. ಅವರು ತಮ್ಮ ವಿಶ್ವಾಸದ ಮೂಲಕ, ಪರಂಪರೆ ಆಳವಾದ ಬೇರುಗಳ ಜೊತೆಗೆ ಗುರುತಿಸಿಕೊಂಡು ಹೆಮ್ಮೆಯನ್ನು ಪ್ರತಿನಿಧಿಸುತ್ತಾರೆ. ಈ ಎಲ್ಲ ಮೌಲ್ಯಗಳು ಹೇಳಿ ಮಾಡಿಸಿದಂತೆ ಅವಂತ್ರದ ಸಿದ್ಧಾಂತಗಳ ಜೊತೆಗೆ ಹೊಂದಿಕೊಳ್ಳುತ್ತವೆ. ಸಂಪ್ರದಾಯವನ್ನು ಆಧುನಿಕ ಸ್ಪರ್ಶದ ಜೊತೆಗೆ ಸಂಭ್ರಮಿಸಬೇಕು ಎಂಬುದು ಅವಂತ್ರದ ಧ್ಯೇಯವಾಗಿದೆ. ಭಾರತದಾದ್ಯಂತ ರುಕ್ಮಿಣಿ ವಸಂತ್ ಜನಪ್ರಿಯತೆ ಹೆಚ್ಚಾಗಿದೆ. ಸೌಂದರ್ಯದಲ್ಲೂ ಮನಸೂರೆಗೊಂಡಿದ್ದಾರೆ. ಇವೆಲ್ಲ ಇಂದಿನ ಮಹಿಳೆಯರಲ್ಲಿ ಹೊಸ ಶಕ್ತಿಯನ್ನು ಮತ್ತು ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ.

    ಅವಂತ್ರದ ಮಾರ್ಕೆಟಿಂಗ್ ಹೆಡ್ ಮಾತನಾಡಿ, ಈ ಹಬ್ಬದ ಋತುವಿನ ಟಿವಿ ಜಾಹೀರಾತು ಸುಂದರ, ಮೃದುವಾದ ಕ್ಷಣದ ಧ್ವನಿಯ ವಿಸ್ತರಣೆ ಆಗುತ್ತದೆ. ಈ ಎಲ್ಲದರ ಮಧ್ಯೆ ನಿಮ್ಮನ್ನು ನೀವು ಗೌರವಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ ಎಂದಿದ್ದಾರೆ. ಅವಂತ್ರದ ಜಗತ್ತಿನಲ್ಲಿ ಒಮ್ಮೆ ಸುತ್ತಾಡುವ ಮೂಲಕ ಆ ಅನುಭವವನ್ನು ನಿಮ್ಮದಾಗಿಸಿಕೊಳ್ಳಿ. ಅದಕ್ಕಾಗಿ ಒಮ್ಮೆ ಕ್ಲಿಕ್ ಮಾಡಿ: https://www.instagram.com/avantraofficial/

  • ಕೋರಮಂಗಲದಲ್ಲಿ ರಿಲಯನ್ಸ್ ರಿಟೇಲ್ ‘ಯೂಸ್ಟಾ’ ಸ್ಟೋರ್ ಓಪನ್ – ಯುವಜನರ ಫ್ಯಾಷನ್‌ ಬ್ರ್ಯಾಂಡ್‌

    ಕೋರಮಂಗಲದಲ್ಲಿ ರಿಲಯನ್ಸ್ ರಿಟೇಲ್ ‘ಯೂಸ್ಟಾ’ ಸ್ಟೋರ್ ಓಪನ್ – ಯುವಜನರ ಫ್ಯಾಷನ್‌ ಬ್ರ್ಯಾಂಡ್‌

    – 499 ರೂ.ಗಿಂತ ಕಡಿಮೆ ಬೆಲೆಗೆ ಖರೀದಿ ಮಾಡಿ

    ಬೆಂಗಳೂರು: ಯುವಜನರಿಗಾಗಿ ಮಾಡಿರುವಂಥ ಫ್ಯಾಷನ್ ಬ್ರ್ಯಾಂಡ್ ರಿಲಯನ್ಸ್ ರಿಟೇಲ್‌ನ (Reliance Retail) ‘ಯೂಸ್ಟಾ’ವನ್ನು ಈಚೆಗೆ ಬೆಂಗಳೂರಿನಲ್ಲಿ ತೆರೆಯಲಾಗಿದೆ. ಕೋರಮಂಗಲದಲ್ಲಿ ಮಳಿಗೆ ಆರಂಭಿಸಲಾಗಿದೆ.

    ಇದರೊಂದಿಗೆ ತುಂಬ ವೇಗವಾಗಿ ವಿಸ್ತರಣೆಯನ್ನು ಮುಂದುವರಿಸಿದಂತೆ ಆಗಿದೆ. ಈ ಹೊಸದಾದ ಮಳಿಗೆ ತೆರೆಯುವುದರ ಮೂಲಕ ಯೂಸ್ಟಾ ಒಂದು ಚಲನೆ ಪಡೆದುಕೊಂಡಿದ್ದು, ಭಾರತದಾದ್ಯಂತ ಯುವಜನರ ಸ್ಟೈಲ್‌ಗೆ ಪ್ರಾಧಾನ್ಯ ನೀಡಿ, ಗ್ರಾಹಕರಿಗೆ ಬೇಕಾದದ್ದನ್ನು ನೀಡುತ್ತಿದೆ. ಹೋಲಿಕೆ ಮಾಡುವುದಕ್ಕೆ ಸಾಧ್ಯವಿಲ್ಲದಷ್ಟು ಕಡಿಮೆ ಬೆಲೆಗೆ ಹೊಚ್ಚ ಹೊಸ ಫ್ಯಾಷನ್ ದಿರಿಸುಗಳನ್ನು ನೀಡುವುದಕ್ಕೆ ಯೂಸ್ಟಾ (Yousta) ಹೆಸರಾಗಿದೆ. ಯುವಜನರಲ್ಲಿ ಈ ಬ್ರ್ಯಾಂಡ್ ಬಹಳ ಅಚ್ಚುಮೆಚ್ಚಾಗಿದೆ. ಅದಕ್ಕೆ ಮುಖ್ಯ ಕಾರಣ ಆಗಿರುವುದು ರೋಮಾಂಚಕವಾದ ಸ್ಟೈಲ್ ಮತ್ತು ವ್ಯಕ್ತಿತ್ವಕ್ಕೆ ಒಪ್ಪುವ ರೀತಿಯಲ್ಲಿ ಇರುವಂಥ ಉಡುಪುಗಳು. ಈ ಎರಡರ ಸಮಿಶ್ರಣವನ್ನು ಕಾಣಬಹುದಾಗಿದೆ. ಇದನ್ನೂ ಓದಿ: Fashion Tips| ಹೆಣ್ಣಿಗೆ ಸೀರೆ ಯಾಕೆ ಅಂದ?- ನಾರಿಮಣಿಯರ ಗಮನ ಸೆಳೆದ ಬನಾರಸ್ ಸೀರೆ

    ಈ ಮಳಿಗೆ ಉದ್ಘಾಟನಾ ಸಮಾರಂಭದಲ್ಲಿ ರಿಲಯನ್ಸ್ ರಿಟೇಲ್‌ನ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಅಧ್ಯಕ್ಷ ಹಾಗೂ ಸಿಇಒ ಅಖಿಲೇಶ್ ಪ್ರಸಾದ್ ಅವರು ಬ್ರ್ಯಾಂಡ್‌ನ ಇತ್ತೀಚಿನ ಸಂಗ್ರಹವನ್ನು ಅನಾವರಣಗೊಳಿಸಿದರು. ಯುವಜನರ ಸ್ಟೈಲ್ ಅಭಿರುಚಿಗೆ ಇರುವಂಥ ಯೂಸ್ಟಾ ಬ್ರ್ಯಾಂಡ್‌ ಸ್ಥಾನವನ್ನು ಖಚಿತಪಡಿಸಿದರು. ‘ಯೂಸ್ಟಾ ಕೈಗೆಟುಕುವ ಬೆಲೆಯ ಆಫರ್ ಜೊತೆಗೆ ಯುವ ಫ್ಯಾಷನ್ ಲೋಕದಲ್ಲಿ ಬಿರುಗಾಳಿ ರೀತಿಯಲ್ಲಿ ತನ್ನ ಆನ್-ಟ್ರೆಂಡ್ ಉಡುಪುಗಳನ್ನು ತಂದಿದೆ. ಬೆಂಗಳೂರು ಯುವ ಶಕ್ತಿ ಮತ್ತು ಸೃಜನಶೀಲತೆಯ ಕೇಂದ್ರವಾಗಿದ್ದು, ಈ ಮಳಿಗೆಯು ಫ್ಯಾಷನ್‌ನ ಭವಿಷ್ಯವನ್ನು ರೂಪಿಸುವ ಟ್ರೆಂಡ್‌ಸೆಟರ್‌ಗಳಿಗೆ ಪ್ರಮುಖ ತಾಣವಾಗಲಿದೆ. ಇದು ಕೇವಲ ನಮ್ಮ ಬೆಳವಣಿಗೆ ಗುರುತಿಸುವುದಷ್ಟೇ ಅಲ್ಲ, ಭಾರತದಲ್ಲಿ ಯುವ ಫ್ಯಾಷನ್ ಅನ್ನು ಮರುವ್ಯಾಖ್ಯಾನಿಸುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ’ ಎಂದು ಪ್ರಸಾದ್ ಹೇಳಿದರು. ಮಾತು ಮುಂದುವರಿಸಿದ ಅವರು, ಯುಸ್ಟಾ ದೇಶಾದ್ಯಂತ ಯುವ ಫ್ಯಾಷನ್ ಉತ್ಸಾಹಿಗಳಿಗೆ ಬಲ ತುಂಬುವ ಜೊತೆಗೆ ತನ್ನ ವಿಸ್ತರಣೆಯನ್ನು ಮುಂದುವರಿಸಲು ಸಿದ್ಧವಾಗಿದೆ ಎಂದರು.

    27 ನಗರಗಳಲ್ಲಿ ಮಳಿಗೆಗಳನ್ನು ಹೊಂದಿರುವ ‘ಯುಸ್ಟಾ’, ಯುವ ಫ್ಯಾಷನ್‌ನ ಪ್ರಮುಖ ತಾಣವಾಗಿದೆ. ಈ ಬ್ರ್ಯಾಂಡ್ ಕೇರಳ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಗುಜರಾತ್, ತಮಿಳುನಾಡು, ಉತ್ತರ ಪ್ರದೇಶ, ಕರ್ನಾಟಕ, ಹರಿಯಾಣ ಸೇರಿದಂತೆ ಭಾರತದಾದ್ಯಂತ ಇತರ ನಗರಗಳಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿದೆ. ಭೌತಿಕ ಮಳಿಗೆಗಳ ಹೊರತಾಗಿ, ಯುಸ್ಟಾದ ಆನ್‌ಲೈನ್ ವ್ಯಾಪ್ತಿಯು ದೇಶದಲ್ಲಿ ಶೇ.98 ರಷ್ಟು ಪಿನ್‌ಕೋಡ್‌ಗಳನ್ನು ಒಳಗೊಂಡಿದ್ದು, ಇದು ರಾಷ್ಟ್ರವ್ಯಾಪಿ ಯುವ ಖರೀದಿದಾರರಿಗೆ ಸಾಟಿಯಿಲ್ಲದಂಥ ಸಂಪರ್ಕವನ್ನು ನೀಡುತ್ತದೆ. ಇದನ್ನೂ ಓದಿ: Winter Fashion: ಚುಮು ಚುಮು ಚಳಿಗೆ ಬೆಚ್ಚನೆಯ ಫ್ಯಾಷನ್

    ಯುಸ್ಟಾವು ವಿಶಿಷ್ಟ ‘ಸ್ಟಾರಿಂಗ್ ನೌ’ ಸಂಗ್ರಹಗಳು, ಟ್ರೆಂಡಿ ಉಡುಪುಗಳು, ಯುನಿಸೆಕ್ಸ್ ಶೈಲಿಗಳು ಮತ್ತು ವ್ಯಕ್ತಿತ್ವ-ಆಧಾರಿತವಾದ ಸರಕುಗಳನ್ನು ಒಳಗೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಹೆಚ್ಚಿನ ವಸ್ತುಗಳು 499 ರೂ.ಗಿಂತ ಕಡಿಮೆ ಬೆಲೆಗೆ ದೊರೆಯುತ್ತದೆ. ಹೊಸ ಸ್ಟೋರ್ ಸ್ವಯಂ-ಚೆಕ್‌ಔಟ್ ಆಯ್ಕೆಗಳು ಮತ್ತು ತಡೆರಹಿತ ಶಾಪಿಂಗ್ ಅನುಭವಕ್ಕಾಗಿ ಚಾರ್ಜಿಂಗ್ ಸ್ಟೇಷನ್‌ಗಳಂತಹ ತಾಂತ್ರಿಕವಾಗಿ ಉತ್ಕೃಷ್ಟ ಮಟ್ಟದ ವೈಶಿಷ್ಟ್ಯಗಳನ್ನು ಪರಿಚಯಿಸುತ್ತದೆ.

    ಇನ್ನು ತನ್ನ ಸುಸ್ಥಿರತೆಯ ಪ್ರಯತ್ನಗಳ ಭಾಗವಾಗಿ, ಯುಸ್ಟಾ ನಡೆಸುತ್ತಿರುವ ಸಮುದಾಯ-ಚಾಲಿತ ಉಪಕ್ರಮಗಳ ಮೂಲಕ ಗ್ರಾಹಕರಿಗೆ ತಮ್ಮ ಹಳೆಯ ಉಡುಪುಗಳನ್ನು ದಾನ ಮಾಡಲು ಪ್ರೋತ್ಸಾಹಿಸುತ್ತದೆ. ಬಜೆಟ್ ಸ್ನೇಹಿ ಬೆಲೆಗಳಲ್ಲಿ ಉನ್ನತ ಮಟ್ಟದ ಫ್ಯಾಷನ್ ಉಡುಪುಗಳನ್ನು ನೀಡುತ್ತಿರುವಾಗ ಸ್ಥಳೀಯ ವಿಚಾರಗಳನ್ನು ಬೆಂಬಲಿಸಲು ಬ್ರ್ಯಾಂಡ್ ಬದ್ಧವಾಗಿದೆ.

    ಬೆಂಗಳೂರಿನ ಗ್ರಾಹಕರು ಕೋರಮಂಗಲ ಸ್ಟೋರ್‌ನಲ್ಲಿ ಹೊಸ ಸಂಗ್ರಹವನ್ನು ನೋಡಬಹುದು, ಖರೀದಿಸಬಹುದು ಅಥವಾ ಅಜಿಯೋ (AJIO) ಮತ್ತು ಜಿಯೋಮಾರ್ಟ್ (JioMart) ಮೂಲಕ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಬಹುದು. ಇತ್ತೀಚಿನ ಫ್ಯಾಷನ್ ಸಂಗ್ರಹಗಳಿಗಾಗಿ ಇನ್‌ಸ್ಟಾಗ್ರಾಮ್ ನಲ್ಲಿ @youstafashion ಅನ್ನು ಫಾಲೋ ಮಾಡಿ. ಇದನ್ನೂ ಓದಿ: ಮಳೆಗಾಲದ ಫ್ಯಾಷನ್‌ಗೆ ಟ್ರೆಂಡ್ ಆಯ್ತು ರೆಟ್ರೊ ಸ್ಪೆಕ್ಟ್ರಮ್‌ ಡ್ರೆಸ್

  • Reliance Retail Smart; ಸ್ಮಾರ್ಟ್ ಬಜಾರ್ ಗಮನ ಈಗ ಪ್ರೀಮಿಯಂ ವಸ್ತುಗಳ ಮಾರಾಟ, ಪ್ರಾದೇಶಿಕ ವಿಸ್ತರಣೆಗೆ

    Reliance Retail Smart; ಸ್ಮಾರ್ಟ್ ಬಜಾರ್ ಗಮನ ಈಗ ಪ್ರೀಮಿಯಂ ವಸ್ತುಗಳ ಮಾರಾಟ, ಪ್ರಾದೇಶಿಕ ವಿಸ್ತರಣೆಗೆ

    ಮುಂಬೈ: ಪ್ರೀಮಿಯಂ ಕೊಡುಗೆಗಳ ಜೊತೆಗೆ ರಿಲಯನ್ಸ್ ಸ್ಮಾರ್ಟ್ (Reliance Retail Smart) ಹಾಗೂ ಸ್ಮಾರ್ಟ್ ಬಜಾರ್ (Smart Bazaar) ತಮ್ಮ ಉತ್ಪನ್ನಗಳ ಪೋರ್ಟ್ ಫೋಲಿಯೋ ವೈವಿಧ್ಯಗೊಳಿಸುತ್ತಿದೆ.

    ಗ್ರಾಹಕರ ಆದ್ಯತೆಗಳಿಗೆ ತಕ್ಕಂತೆ ವಿಲಾಸಿ ಗುಣಮಟ್ಟದ ದೇಹ ಸುಗಂಧ (ಲಘುವಾದ ಹಾಗೂ ಹೆಚ್ಚು ಘಾಟಿಲ್ಲದಂತೆ ವಾಸನೆ ಬೀರುವಂಥ ದ್ರವ್ಯ- ಬಾಡಿ ಮಿಸ್ಟ್) ಹಾಗೂ ಅತ್ಯುತ್ಕೃಷ್ಟ ಗುಣಮಟ್ಟದ, ಹಗುರವಾದ ಚರ್ಮ ರಕ್ಷಕ ಉತ್ಪನ್ನಗಳು (ಸೆರಮ್) ಒಳಗೊಂಡಂತೆ ವಿವಿಧ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುತ್ತಿದೆ. ರಿಲಯನ್ಸ್ ರಿಟೇಲ್ ಸಿಎಫ್ಒ ಆದ ದಿನೇಶ್ ತಲುಜಾ ಅವರು ಪ್ರೀಮಿಯಂ ವಸ್ತುಗಳ ಕಡೆಗೆ ಏರುತ್ತಿರುವ ಟ್ರೆಂಡ್‌ನ ಬಗ್ಗೆ ಗಮನ ಸೆಳೆದಿದ್ದಾರೆ. ಅದರಿಂದಾಗಿ ಹೆಚ್ಚುತ್ತಿರುವ ಸರಾಸರಿ ಬಿಲ್ ಮೌಲ್ಯ ಹಾಗೂ ಉತ್ತಮ ಮಾರ್ಜಿನ್‌ಗಳ ಬಗ್ಗೆಯೂ ತಿಳಿಸಿದ್ದಾರೆ. ಇದನ್ನೂ ಓದಿ: ಲಂಡನ್ ಅಲ್ಲ, ಭಾರತದಲ್ಲೇ ಅಂಬಾನಿ ಪುತ್ರನ ವಿವಾಹ

    ಸ್ಮಾರ್ಟ್ ಹಾಗೂ ಸ್ಮಾರ್ಟ್ ಬಜಾರ್‌ನ ಇತ್ತೀಚಿನ ‘ಫುಲ್ ಪೈಸಾ ವಸೂಲ್ ಸೇಲ್’ ಮಾರಾಟವು ವರ್ಷದಿಂದ ವರ್ಷಕ್ಕೆ 21%ರಷ್ಟು ಮಾರಾಟ ಹೆಚ್ಚಳವನ್ನು ಕಂಡಿದೆ. ಈ ವೇಳೆ ಗೃಹೋಪಯೋಗಿ ಮತ್ತು ಪರ್ಸನಲ್ ಕೇರ್ ವಸ್ತುಗಳು ಹೆಚ್ಚು ಮಾರಾಟವಾಗಿವೆ. ಅವರ ಪ್ರಾದೇಶಿಕ ಅಸ್ತಿತ್ವವು ಬೆಳವಣಿಗೆಯ ಅವಕಾಶಗಳಿಗೆ ಇನ್ನಷ್ಟು ಪುಷ್ಟಿ ನೀಡಿದೆ.

    ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ 2023-24ರ ನಾಲ್ಕನೇ ತ್ರೈಮಾಸಿಕದ ಹಣಕಾಸು ಫಲಿತಾಂಶಗಳ ಪ್ರಕಟಣೆ ವೇಳೆ ದಿನೇಶ್ ತಲುಜಾ ಅವರು ಮಾತನಾಡಿ, ನಾವು ದೇಶದಲ್ಲಿ ತಳ ಮಟ್ಟದಲ್ಲೂ ಮಳಿಗೆಗಳ ಪ್ರಾದೇಶಿಕ ಜಾಲವನ್ನು ನಿರ್ಮಿಸುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ರಾಹುಲ್‌ ನೆಹರೂ ಕುಟುಂಬದಲ್ಲಿ ಹುಟ್ಟಿದ್ದಾರಾ? ಡಿಎನ್‌ಎ ಪರಿಶೀಲಿಸಬೇಕು: ಕೇರಳ ಶಾಸಕ ಅನ್ವರ್‌

    ರಿಲಯನ್ಸ್ ರಿಟೇಲ್‌ನಿಂದ ದಿನಸಿ ಹೊಸ ವಾಣಿಜ್ಯ ವಿಭಾಗದಿಂದ ನಡೆಸಿದ ‘ಮೆಟ್ರೋ ಕಿರಾಣಾ ಉತ್ಸವ’ದಂಥ ಉಪಕ್ರಮಗಳಿಂದ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಆದರೆ ಹೋಟೆಲ್-ರೆಸ್ಟೋರೆಂಟ್-ಕೆಫೆ/ಕ್ಯಾಟರಿಂಗ್ (HoReCa) ವಿಭಾಗದಲ್ಲಿನ ಸಾಂಸ್ಥಿಕ ಗ್ರಾಹಕರೊಂದಿಗೆ ಪಾಲುದಾರಿಕೆಯು ವೈವಿಧ್ಯಮಯ ಆದಾಯದ ಹರಿವುಗಳನ್ನು ಹೊಂದಿದೆ.

  • ರಿಲಯನ್ಸ್ ರಿಟೇಲ್‌ನಿಂದ ಬೆಂಗಳೂರಿನಲ್ಲಿ ತಿರಾ ಪ್ರಾರಂಭ

    ರಿಲಯನ್ಸ್ ರಿಟೇಲ್‌ನಿಂದ ಬೆಂಗಳೂರಿನಲ್ಲಿ ತಿರಾ ಪ್ರಾರಂಭ

    ಬೆಂಗಳೂರು: ರಿಲಯನ್ಸ್‌ ರಿಟೇಲ್‌ (Reliance Retail) ಆಮ್ನಿ-ಚೆನೆಲ್‌ ಬ್ಯೂಟಿ ರಿಲೇಟ್‌ ಪ್ಲಾಟ್‌ಫಾರ್ಮ್‌ ತಿರಾ (Tira), ಫೀನಿಕ್ಸ್‌ ಮಾಲ್‌ ಆಫ್‌ ಏಷ್ಯಾದಲ್ಲಿ ಐಷಾರಾಮಿ ರಿಟೇಲ್‌ ಕೇಂದ್ರ ಪ್ರಾರಂಭಿಸುವ ಮೂಲಕ ಬೆಂಗಳೂರು ನಗರಕ್ಕೆ ಪ್ರವೇಶ ಪಡೆದಿದೆ. ಆ ಮೂಲಕ ಮುಂಬೈ, ಹೈದರಾಬಾದ್‌, ಚೆನ್ನೈ ಆಯ್ತು.. ಈಗ ಬೆಂಗಳೂರು ನಗರಕ್ಕೆ ವ್ಯಾಪ್ತಿ ವಿಸ್ತರಿಸಿ ತಿರಾ ಹೆಜ್ಜೆ ಗುರುತು ಮೂಡಿಸಿದೆ.

    ತಿರಾ ಸರಿಸಾಟಿ ಇಲ್ಲದ ಖರೀದಿ ಅನುಭವ ನೀಡುತ್ತಿದೆ. ಈಗಿನ ಟ್ರೆಂಡಿಂಗ್‌ಗೆ ತಕ್ಕಂತೆ ಹಾಗೂ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ರೂಪಿಸಿರುವ ಜಾಗತಿಕ ಮತ್ತು ಸ್ಥಳೀಯ ಬ್ಯೂಟಿ ಬ್ರ್ಯಾಂಡ್‌ಗಳ ವಿಶೇಷ ಉತ್ಪನ್ನಗಳನ್ನು ಪ್ರಸ್ತುತಪಡಿಸುತ್ತಿದೆ. ಬ್ಯೂಟಿ ರಿಟೇಲ್‌ ಪರಿವರ್ತನೆಗೆ ತಿರಾ ಮುಂಚೂಣಿಯಲ್ಲಿದೆ. ಇದನ್ನೂ ಓದಿ: ಪ.ಬಂಗಾಳದಲ್ಲಿ ರಿಲಯನ್ಸ್‌ನಿಂದ 20 ಸಾವಿರ ಕೋಟಿ ರೂ. ಹೂಡಿಕೆ: ಅಂಬಾನಿ ಘೋಷಣೆ

    ನೂತನವಾಗಿ ಪ್ರಾರಂಭವಾದ ಬೆಂಗಳೂರು ಮಳಿಗೆಯು ಫ್ರಾಗ್ರೆನ್ಸ್‌ ಫೈಂಡರ್‌ನಂತಹ ನೂತನ ವಿಶೇಷತೆಗಳನ್ನು ಹೊಂದಿದೆ. ಪ್ರತಿ ಗ್ರಾಹಕರಿಗೂ ಇಷ್ಟವಾಗುವಂತಹ ಸುಗಂಧದ್ರವ್ಯ ಉತ್ಪನ್ನವನ್ನೂ ನೀಡುತ್ತದೆ. ಹೊಸ ಬಗೆಯ ಸ್ಮಾರ್ಟ್‌ ಕನ್ನಡಿಗಳು ಸಹ ಇವೆ. ಗ್ರಾಹಕರು ಉತ್ಪನ್ನಗಳನ್ನು ಖರೀದಿಸುವ ಮುನ್ನವೇ ವರ್ಚುಯಲ್‌ ರೂಪದಲ್ಲಿ ಪ್ರಯೋಗಿಸಬಹುದು.

    ಪರಿಣಿತ ಸೌಂದರ್ಯದ ಸಲಹೆಗಾರರು ರೂಪಿಸಿದ ‘ತಿರಾ ಸಿಗ್ನೇಚರ್‌ ಲುಕ್ಸ್‌’ಗೆ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ತಿರಾ ಆಪ್‌ ಕೂಡ ಇದ್ದು, ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಮಂದಿ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಇದು ತಿರಾ ಉತ್ಪನ್ನಗಳ ಜನಪ್ರಿಯತೆಯನ್ನು ತೋರಿಸುತ್ತದೆ. ಭಾರತದಾದ್ಯಂತ ಶೇ. 98 ರಷ್ಟು ಪಿನ್‌ಕೋಡ್‌ಗಳ ವ್ಯಾಪ್ತಿ ಹೊಂದಿರುವ ತಿರಾ ತ್ವರಿತ ಪೂರೈಕೆಗಳನ್ನು ಮಾಡುತ್ತಿದೆ. 100 ಕ್ಕೂ ಹೆಚ್ಚು ನಗರಗಳ ಗ್ರಾಹಕರನ್ನು ತಲುಪುತ್ತಿದೆ. ಇದನ್ನೂ ಓದಿ: ಮಕ್ಕಳಿಗಾಗಿ ನೀತಾ ಅಂಬಾನಿ ತ್ಯಾಗ – ರಿಲಯನ್ಸ್‌ ಬೋರ್ಡ್‌ ಏರಿದ ಇಶಾ, ಆಕಾಶ್‌, ಅನಂತ್‌ ಅಂಬಾನಿ

    ಮಾಲ್ ಆಫ್ ಏಷ್ಯಾ ಮಳಿಗೆಯು ಬೆಂಗಳೂರು ಮತ್ತು ಆಚೆಗೂ ಸೌಂದರ್ಯದ ಉತ್ಸಾಹಿಗಳಿಗೆ ಪ್ರಮುಖ ಕೇಂದ್ರವಾಗಲು ಸಜ್ಜಾಗಿದ್ದು, ಉನ್ನತೀಕರಿಸಿದ ಸೌಂದರ್ಯದ ಅನುಭವಗಳ ಹೊಸ ಯುಗಕ್ಕೆ ನಾಂದಿ ಹಾಡಿದೆ.

    ಮಳಿಗೆ ವಿಳಾಸ: ಲೋಯರ್ ಗ್ರೌಂಡ್ ಫ್ಲೋರ್, 239/240, ಬ್ಯಾಟರಾಯನಪುರ, ಯಲಹಂಕ ಹೋಬಳಿ, ಯಲಹಂಕ ತಾಲ್ಲೂಕು, ಬಳ್ಳಾರಿ ರಸ್ತೆ, ಬೆಂಗಳೂರು, ಕರ್ನಾಟಕ 560092.

  • ಮಹೇಂದ್ರ ಸಿಂಗ್ ಧೋನಿ ಈಗ ಜಿಯೋಮಾರ್ಟ್ ಬ್ರಾಂಡ್ ಅಂಬಾಸಿಡರ್

    ಮಹೇಂದ್ರ ಸಿಂಗ್ ಧೋನಿ ಈಗ ಜಿಯೋಮಾರ್ಟ್ ಬ್ರಾಂಡ್ ಅಂಬಾಸಿಡರ್

    ಮುಂಬೈ: ರಿಲಯನ್ಸ್ ರಿಟೇಲ್‌ನ (Reliance Retail) ಜಿಯೋಮಾರ್ಟ್ (Jio Mart) ದೇಶದ ಪ್ರಮುಖ ಇ-ಮಾರ್ಕೆಟ್‌ ಪ್ಲೇಸ್‌ಗಳಲ್ಲಿ ಒಂದಾಗಿದ್ದು, ಭಾರತೀಯ ಕ್ರಿಕೆಟ್ ಐಕಾನ್ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ. ಇದರ ಜೊತೆಗೆ, ತನ್ನ ಹಬ್ಬದ ಕ್ಯಾಂಪೇನ್ ಅನ್ನು ಜಿಯೋ ಉತ್ಸವ, ಸೆಲೆಬ್ರೇಶನ್‌ ಆಫ್‌ ಇಂಡಿಯಾ ಎಂದು ಮರುನಾಮಕರಣ ಮಾಡಿದ್ದು, 2023 ಅಕ್ಟೋಬರ್ 8 ರಿಂದ ಲೈವ್ ಆಗಲಿದೆ.

    ಜಿಯೋಮಾರ್ಟ್ ಸಿಇಒ ಸಂದೀಪ್ ವರಗಂಟಿ, ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ಎಂಎಸ್ ಧೋನಿ ಅತ್ಯಂತ ಉತ್ತಮವಾಗಿ ಹೊಂದಿಕೆಯಾಗುತ್ತಾರೆ. ಅವರ ವ್ಯಕ್ತಿತ್ವವು ಜಿಯೋಮಾರ್ಟ್‌ನ ಹಾಗೆಯೇ ವಿಶ್ವಾಸ, ನಂಬಿಕೆ ಮತ್ತು ಖಾತರಿಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಪ್ರೀತಿ ಪಾತ್ರರ ಜೊತೆಗೆ ವಿಶೇಷ ಕ್ಷಣಗಳನ್ನು ಕಳೆಯುವುದಕ್ಕೆ ನಮ್ಮ ಹೊಸ ಅಭಿಯಾನವು ಅನುವು ಮಾಡುತ್ತದೆ. ಇದರಲ್ಲಿ ಶಾಪಿಂಗ್ ಎಂಬುದು ಒಂದು ಅವಿಭಾಜ್ಯ ಅಂಗ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ಮೆಟ್ರೋ ಹೊರತಾದ ಪ್ರದೇಶಗಳು ಒಟ್ಟಾರೆ ಸೇಲ್ ನಲ್ಲಿ ಸುಮಾರು 60% ಪಾಲು ಹೊಂದಿದೆ. ಇದು ದೇಶದ ರಿಟೇಲ್ ವಲಯ ವಿಕೇಂದ್ರೀಕರಣಗೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.  ಇದನ್ನೂ ಓದಿ: ರಿಲಯನ್ಸ್ ಜಿಯೋ: ಐಫೋನ್ 15 ಖರೀದಿಸಿದರೆ 6 ತಿಂಗಳು ಫ್ರೀ ಪ್ಲಾನ್

    ಪ್ರಾದೇಶಿಕ ಕಲಾಕಾರರನ್ನು ಪ್ರೋತ್ಸಾಹಿಸುವ ಕೆಲಸವನ್ನು ಜಿಯೋಮಾರ್ಟ್ ಎಂದಿಗೂ ಮಾಡುತ್ತಿದೆ. ಪ್ಲಾಟ್‌ಫಾರಂ ಪ್ರಸ್ತುತ 1000 ಕ್ಕೂ ಹೆಚ್ಚು ಕಲಾಕಾರರ ಜೊತೆಗೆ ಕೆಲಸ ಮಾಡುತ್ತಿದ್ದು, 1.5 ಲಕ್ಷ ವಿಶಿಷ್ಟ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಅಷ್ಟಕ್ಕೂ, ಕ್ಯಾಂಪೇನ್ ಶೂಟಿಂಗ್‌ನ ಭಾಗವಾಗಿ, ಬಿಹಾರದ ಪ್ರಶಸ್ತಿ ಪುರಸ್ಕೃತ ಕಲಾವಿದೆ ಅಂಬಿಕಾ ದೇವಿಯವರ ಮಧುಬನಿ ಪೇಂಟಿಂಗ್ ಅನ್ನು ಧೋನಿಯವರಿಗೆ ವರಗಂಟಿ ಪ್ರದಾನ ಮಾಡಿದರು. ಗ್ರಾಹಕರಿಗೆ ಉತ್ತಮ ಉತ್ಪನ್ನಗಳು ಮತ್ತು ಉತ್ತಮ ಅನುಭವವನ್ನು ಒದಗಿಸುವುದಷ್ಟೇ ಅಲ್ಲ, ಸರಾಗವಾಗಿ ಉದ್ಯಮವನ್ನು ನಡೆಸಲು ಲಕ್ಷಾಂತರ ಕಲಾಕಾರರು ಮತ್ತು ಎಸ್‌ಎಂಬಿಗಳಿಗೆ ಅನುವು ಮಾಡಿಕೊಡುತ್ತಿದೆ.

    ಮಹೇಂದ್ರ ಸಿಂಗ್ ಧೋನಿ ಪ್ರತಿಕ್ರಿಯಿಸಿ, ಜಿಯೋಮಾರ್ಟ್‌ನ ಮೌಲ್ಯ ಮತ್ತು ಗುರುತಿಗೂ ನನಗೂ ಹೊಂದಿಕೆಯಾಗುತ್ತದೆ. ದೇಶೀಯ ಇ-ಕಾಮರ್ಸ್ ಬ್ರಾಂಡ್ ಆಗಿರುವ ಇದು ಭಾರತದಲ್ಲಿ ಡಿಜಿಟಲ್ ರಿಟೇಲ್ ಕ್ರಾಂತಿಯನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದ್ದಾರೆ. ಭಾರತದು ವೈವಿಧ್ಯಮ ಸಂಸ್ಕೃತಿ ಜನರು ಮತ್ತು ಹಬ್ಬಗಳಿಗೆ ಹೆಸರಾಗಿದೆ. ಭಾರತ ಮತ್ತು ಭಾರತೀಯರ ಸಂಭ್ರಮಕ್ಕೆ ಜಿಯೋಮಾರ್ಟ್‌ನ ಜಿಯೋ ಉತ್ಸವವು ಹೊಸ ಆಯಾಮವನ್ನು ನೀಡಿದೆ. ಜಿಯೋಮಾರ್ಟ್ ಜೊತೆಗೆ ಗುರುತಿಸಿಕೊಳ್ಳಲು ಮತ್ತು ಲಕ್ಷಾಂತರ ಭಾರತೀಯರ ಶಾಪಿಂಗ್ ಪಯಣದ ಭಾಗವಾಗುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ ಎಂದು ಹೇಳಿದರು.

     

    ಜಿಯೋಮಾರ್ಟ್‌ನ ವಿಭಿನ್ನ ವಿಭಾಗೀಯ ಪರಿಣಿತಿ, ಹಬ್ಬದ ಉತ್ಸಾಹ ಮತ್ತು ಅದ್ಭುತ ಶಾಪಿಂಗ್ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಹೈಲೈಟ್ ಮಾಡುವಂತೆ ಫಿಲಂ ಅನ್ನು ರೂಪಿಸಲಾಗಿದೆ.

    ಕಳೆದ ವರ್ಷ ಜಿಯೋಮಾರ್ಟ್ ವಿವಿಧ ವಿಭಾಗಗಳಲ್ಲಿ ಲಭ್ಯವಿರುವ ಉತ್ಪನ್ನಗಳನ್ನು ಪ್ರಚಾರ ಮಾಡುವ ವಿಧಾನವನ್ನು ಅಳವಡಿಸಿಕೊಂಡಿತ್ತು. ಎಲೆಕ್ಟಾನಿಕ್ಸ್, ಫ್ಯಾಷನ್, ಬ್ಯೂಟಿ, ಮನೆ ಅಲಂಕಾರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ರಿಲಯನ್ಸ್ ಮಾಲೀಕತ್ವದ ಬ್ರಾಂಡ್‌ಗಳನ್ನು ಜಿಯೋಮಾರ್ಟ್ ಸೇರಿಸಿಕೊಂಡಿದೆ. ಇದರಲ್ಲಿ ಅರ್ಬನ್ ಲ್ಯಾಡರ್, ರಿಲಯನ್ಸ್ ಟ್ರೆಂಡ್ಸ್, ರಿಲಯನ್ಸ್ ಜ್ಯೂವೆಲ್ಸ್, ಹ್ಯಾಮ್ಲೇಸ್ ಸೇರಿದಂತೆ ಇತರೆ ಇವೆ. ಭಾರತದ ಅತಿದೊಡ್ಡ ದೇಶೀಯ ಇ-ಮಾರ್ಕೆಟ್‌ಪ್ಲೇಸ್ ಆಗುವ ಜಿಯೋಮಾರ್ಟ್ ಈಗ ತ್ವರಿತವಾಗಿ ವಿಸ್ತರಣೆಯಾಗುತ್ತಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಿಲಯನ್ಸ್ ರೀಟೇಲ್‌ನ ಜಿಯೋಮಾರ್ಟ್‌ ಜೊತೆಗೆ ಆನ್‌ಲೈನ್‌ಗೆ ಸ್ಥಳೀಯ ಕುಶಲಕರ್ಮಿಗಳು ಪ್ರವೇಶ

    ರಿಲಯನ್ಸ್ ರೀಟೇಲ್‌ನ ಜಿಯೋಮಾರ್ಟ್‌ ಜೊತೆಗೆ ಆನ್‌ಲೈನ್‌ಗೆ ಸ್ಥಳೀಯ ಕುಶಲಕರ್ಮಿಗಳು ಪ್ರವೇಶ

    ಭಾರತದ ಅತಿದೊಡ್ಡ ಸ್ಥಳೀಯ ಇ-ಮಾರ್ಕೆಟ್ (E-Market) ಪ್ಲೇಸ್‌ಗಳಲ್ಲಿ ಒಂದಾದ ರಿಲಯನ್ಸ್ ರೀಟೇಲ್‌ನ ಜಿಯೋಮಾರ್ಟ್ (Reliance Retail) ಇತ್ತೀಚೆಗೆ ಸಣ್ಣ ಉದ್ಯಮಗಳು, ಎಂಎಸ್‌ಎಂಇಗಳು ಮತ್ತು ಸ್ಥಳೀಯ ಮಳಿಗೆಗಳನ್ನು ಬಲಪಡಿಸುವ ಉದ್ದೇಶದಿಂದ ಥರ್ಡ್‌ ಪಾರ್ಟಿ ಮಾರಾಟಗಾರರನ್ನು ಸೇರಿಸಿಕೊಳ್ಳುವುದಕ್ಕೆ ಪ್ರಾರಂಭಿಸಿದೆ. ಈ ಗುರಿ ಸಾಧಿಸುವ ಪ್ರಯತ್ನದಲ್ಲಿ ಮೊದಲ ಬಾರಿಗೆ ಜಿಯೋಮಾರ್ಟ್ (jioMart) ಸ್ಥಳೀಯ ಕುಶಲಕರ್ಮಿಗಳನ್ನು ತನ್ನ ಇ-ಕಾಮರ್ಸ್‌ನೊಳಗೆ ಸೇರಿಸಿಕೊಳ್ಳುವುದಕ್ಕೆ ಶುರು ಮಾಡಿದೆ. ಈ ಮೂಲಕ ಕುಶಲಕರ್ಮಿಗಳಿಗೆ ಜೀವನೋಪಾಯ ಒದಗಿಸಲು ಮತ್ತು ದೇಶದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ಮುಂದಾಗಿದೆ.

    ಕೊರೊನಾ ಸಮಯದಲ್ಲಿ ಈ ಸ್ಥಳೀಯ ಕುಶಲಕರ್ಮಿಗಳು ಇತರ ಉದ್ಯಮಗಳಂತೆಯೇ ಭಾರೀ ನಷ್ಟಕ್ಕೆ ಗುರಿಯಾದರು. ಆದರೆ ಕೆಲವರು ಇ-ವ್ಯವಹಾರದ ಮೂಲಕ ಸಂದರ್ಭಕ್ಕೆ ಹೊಂದಿಕೊಳ್ಳುವುದಕ್ಕೆ ಸಿದ್ಧರಾಗಿದ್ದರು. ಅದು ಅವರಿಗೆ ಮತ್ತೆ ಹಳಿಗೆ ಮರಳಲು ಸಹಾಯ ಮಾಡಿದೆ. ಈಗ ನಡೆಯುತ್ತಿರುವ ಹಬ್ಬದ ಋತುವಿನಿಂದಾಗಿ ಬೇಡಿಕೆಯು ಮತ್ತೆ ಕೋವಿಡ್ ಪೂರ್ವದ ಮಟ್ಟಕ್ಕೆ ಮರಳಿದೆ. ಇದನ್ನೂ ಓದಿ: ಬೆಳಕಿನ ಹಬ್ಬ ದೀಪಾವಳಿಗೆ ʻಅವಂತ್ರ ಬೈ ಟ್ರೆಂಡ್ಸ್‌ʼ ವಿಶಿಷ್ಟ ಸಂಗ್ರಹ – 399 ರೂ.ರಿಂದ 39,999 ರೂ. ತನಕ ಸಿಗುತ್ತೆ ಸೀರೆಗಳು

    ʻಆಟಿಕೆಗಳ ಮಾರಾಟ ಆರಂಭಿಸಿದ 24 ಗಂಟೆಗಳಲ್ಲಿ ನನ್ನ ಮೊದಲ ಆರ್ಡರ್ ಸಿಕ್ಕಿದ್ದು ಆಶ್ಚರ್ಯವಾಯಿತು. ಅಂದಿನಿಂದ ನಾನು ಪ್ರತಿ ದಿನವೂ ಆರ್ಡರ್‌ಗಳನ್ನು ಪಡೆದಿದ್ದೇನೆʼ ಎಂದು ಸ್ಥಳೀಯ ಕುಶಲಕರ್ಮಿಗಳಲ್ಲಿ ಒಬ್ಬರಾದ ಮೀರ್ ಆರೀಫ್ ಹೇಳಿದ್ದಾರೆ. ಅಂದಹಾಗೆ ಇವರು ಪರಿಸರ ಸ್ನೇಹಿ- ವಿಷಕಾರಿಯಲ್ಲದ ಆಟಿಕೆಗಳನ್ನು ಜಿಯೋಮಾರ್ಟ್‌ನಲ್ಲಿ ಒದಗಿಸುತ್ತಾರೆ. ʼ ಚನ್ನಪಟ್ಟಣ ಮರದ ಆಟಿಕೆಗಳು (Channapatna Toys) ಸ್ವದೇಶಿ ಬ್ರಾಂಡ್‌ಗಳಾಗಿದ್ದು, ಉತ್ತಮ ಬೇಡಿಕೆ ಇದೆ. ಲಾಭದಾಯಕ ವ್ಯವಹಾರಕ್ಕೆ ಆನ್‌ಲೈನ್‌ ವೇದಿಕೆ ತುಂಬಾ ಸಹಕಾರಿ. ನಾನು ಸದ್ಯಕ್ಕೆ 200 ಉತ್ಪನ್ನಗಳನ್ನು ಹೊಂದಿದ್ದೇನೆ. ನಿರೀಕ್ಷೆಗೂ ಮೀರಿ ಆರ್ಡರ್‌ ಬರುತ್ತಿದ್ದು, ಇದಕ್ಕೆ ಇನ್ನೂ 100ಕ್ಕೂ ಹೆಚ್ಚು ಸೇರ್ಪಡೆ ಮಾಡಲು ಬಯಸುತ್ತೇನೆ ಎನ್ನುತ್ತಾರೆ ಆರೀಫ್‌.

    ಜಿಯೋಮಾರ್ಟ್ ಹಬ್ಬದ ಮಾರಾಟದ ಮೊದಲ ವಾರದಲ್ಲಿ ಆರ್ಡರ್‌ಗಳಲ್ಲಿ ಎರಡೂವರೆ ಪಟ್ಟು ಏರಿಕೆ ಕಂಡಿದೆ. ಅಕ್ಟೋಬರ್ 24ರ ವರೆಗೆ ನಡೆಯುತ್ತಿರುವ 10 ದಿನಗಳ ಬೆಸ್ಟಿವಲ್ ಸೇಲ್‌ನಲ್ಲಿ ಇದೇ ರೀತಿಯ ಕಾರ್ಯಕ್ಷಮತೆ ನಿರೀಕ್ಷಿಸಲಾಗಿದೆ. ಚನ್ನಪಟ್ಟಣದ ಆಟಿಕೆಗಳಿಗೆ ಟಿಪ್ಪು ಸುಲ್ತಾನ್ ಕಾಲದಷ್ಟು ಸುದೀರ್ಘ ಇತಿಹಾಸ ಇದೆ. ಆತ ಪರ್ಷಿಯನ್ನರನ್ನು ಭಾರತಕ್ಕೆ ಆಹ್ವಾನಿಸಿ, ಸ್ಥಳೀಯ ಕುಶಲಕರ್ಮಿಗಳಿಗೆ ತಮ್ಮ ಜ್ಞಾನವನ್ನು ಹಂಚುವುದಕ್ಕೆ ಕೇಳಿಕೊಂಡಿದ್ದ. ಇದನ್ನೂ ಓದಿ: ಹುಡುಗಿಯರ ಮೈಕಾಂತಿ ಹೆಚ್ಚಿಸುವ ಸೀರೆಗೊಂದು ಸಿಂಗಾರ ಬೇಡವೇ?

    ʻನನ್ನ ತಂದೆ ಮತ್ತು ಅಜ್ಜ ಇಬ್ಬರೂ ಕುಶಲಕರ್ಮಿಗಳಾಗಿ ಕೆಲಸ ಮಾಡುತ್ತಿದ್ದರು. ನಮ್ಮ ಕುಟುಂಬ ತಲೆತಲಾಂತರವಾಗಿ 100 ವರ್ಷಗಳಿಂದ ಈ ವ್ಯಾಪಾರ ನಡೆಸಿಕೊಂಡು ಬಂದಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಚನ್ನಪಟ್ಟಣ ತನ್ನ ವಿಶಿಷ್ಟ ಮರದ ಆಟಿಕೆಗಳಿಗೆ ಹೆಸರುವಾಸಿ ಆಗಿದೆ. ಈ ಉದ್ಯಮವು ಅನೇಕ ಕುಶಲಕರ್ಮಿಗಳ ಜೀವನಕ್ಕೆ ಆಧಾರವಾಗಿದೆ. ನಮ್ಮಲ್ಲಿ ಕನಿಷ್ಠ 35 ಕುಶಲಕರ್ಮಿಗಳಿದ್ದು, ಅವರಲ್ಲಿ ಕೆಲವರು 40 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿದ್ದಾರೆ. 60 ವರ್ಷ ವಯಸ್ಸಿನವರು ನನ್ನೊಂದಿಗೆ ಕೆಲಸ ಮಾಡುತ್ತಾರೆ. ಆನ್‌ಲೈನ್ ವೇದಿಕೆಯು ವ್ಯಾಪಾರಿಗಳ ಜೀವನೋಪಾಯದ ಪ್ರಮುಖ ಮೂಲವಾಗಿದೆʼ ಎಂದು ಆರೀಫ್‌ ಹೇಳುತ್ತಾರೆ.

    ಪಶ್ಚಿಮ ಬಂಗಾಳದ ಫುಲಿಯಾದಿಂದ ಬಂದ ಮತ್ತೊಬ್ಬ ಪ್ರಾದೇಶಿಕ ಕೈಮಗ್ಗ ಕುಶಲಕರ್ಮಿ, ಕೈಯಿಂದ ನೇಯ್ದ ಸೊಗಸಾದ ಮಸ್ಲಿನ್ ಜಮದಾನಿ ಸೀರೆಗಳನ್ನು ಮಾರಾಟ ಮಾಡಲು ಜಿಯೋಮಾರ್ಟ್‌ನಲ್ಲಿ ಯಶಸ್ವಿಯಾಗಿ ನೋಂದಾಯಿಸಿಕೊಂಡಿದ್ದಾರೆ. ʼನನ್ನ ಪ್ರಾಥಮಿಕ ವ್ಯವಹಾರವು ಆಫ್‌ಲೈನ್ ಆಗಿದ್ದರೂ ಎರಡು ಕಾರಣಗಳಿಗಾಗಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತೇನೆ. ಗಂಗಾ ನದಿಪಾತ್ರದ ಬಂಗಾಳದ ನೇಕಾರರಿಂದ ಶತಮಾನಗಳಷ್ಟು ಹಳೆಯದಾದ ಶ್ರೀಮಂತ ಕೈಮಗ್ಗ ಜವಳಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಮತ್ತು ನೇಕಾರ ಸಮುದಾಯದಿಂದ ನೇರವಾಗಿ ಗ್ರಾಹಕರಿಗೆ ನ್ಯಾಯಯುತ ಬೆಲೆಗೆ ಅಧಿಕೃತ ಸರಕುಗಳನ್ನು ಒದಗಿಸಲು ಬಯಸುತ್ತೇನೆ. ಇದು ಎರಡೂ ಕಡೆಯಿಂದ (ಗ್ರಾಹಕ- ಮಾರಾಟಗಾರರು) ಉತ್ತಮ ವ್ಯವಹಾರ ಬಾಂಧವ್ಯಕ್ಕೆ ಸಹಕಾರಿಯಾಗಲಿದೆ ಎಂದು ಜಿಯೋಮಾರ್ಟ್‌ನ ಉನ್ನತ ಮಾರಾಟಗಾರರಲ್ಲಿ ಒಬ್ಬರಾದ ಮಾಸ್ಟರ್ ಹ್ಯಾಂಡ್‌ಲೂಮ್ ಕುಶಲಕರ್ಮಿ ದೀಪಕ್ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್

    ಸ್ಥಳೀಯ ಕುಶಲಕರ್ಮಿಗಳು ಆನ್‌ಲೈನ್ ಮಾರಾಟದಿಂದ ಅನೇಕ ಪ್ರಯೋಜನ ಪಡೆಯುತ್ತಿದ್ದಾರೆ. ಇದರಲ್ಲಿ ಸರಕು ಸಾಗಣೆ, ತಾಂತ್ರಿಕ, ಆನ್-ಸೈಟ್ ಮಾರಾಟಗಾರರ ಬೆಂಬಲ, ಮಾರುಕಟ್ಟೆ ಮತ್ತು ಪ್ರಚಾರಗಳು ಸೇರಿವೆ. ಜಿಯೋಮಾರ್ಟ್‌ನಂತಹ ಇ-ಮಾರುಕಟ್ಟೆ ಭಾರತದ ಕರಕುಶಲ ಮತ್ತು ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಿ ಶಾಶ್ವತಗೊಳಿಸಲು ಮತ್ತು ಉದ್ಯಮವನ್ನು ಉತ್ತೇಜಿಸಲು ಮಾರ್ಗಗಳನ್ನು ಒದಗಿಸುವುದನ್ನು ಮುಂದುವರಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ವಾರ್ಷಿಕ ಸಾಮಾನ್ಯ ಸಭೆ – ಶೇ. 34.8 ನಿವ್ವಳ ಲಾಭ ಹೆಚ್ಚಳ

    ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ವಾರ್ಷಿಕ ಸಾಮಾನ್ಯ ಸಭೆ – ಶೇ. 34.8 ನಿವ್ವಳ ಲಾಭ ಹೆಚ್ಚಳ

    – ಸಭೆಯಲ್ಲಿ ಹೊಸ ಯೋಜನೆಗಳ ಘೋಷಣೆ

    ಮುಂಬೈ: ಕೋವಿಡ್ ಸಂಕಷ್ಟದ ನಡುವೆಯೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಉತ್ತಮ ನಿರ್ವಹಣೆ ಪ್ರದರ್ಶಿಸಿದ್ದು, ಕಳೆದ ವರ್ಷದಲ್ಲಿ 540,000 ಕೋಟಿ ರೂ.ಗಳ ಒಟ್ಟು ಆದಾಯ ಗಳಿಸಿದೆ. ಬಡ್ಡಿ, ತೆರಿಗೆ, ಡಿಪ್ರಿಸಿಯೇಶನ್ ಹಾಗೂ ಅಮಾರ್ಟೈಸೇಶನ್‍ಗಳ ಮೊದಲಿನ ಆದಾಯವು (EBITDA) ಸುಮಾರು 98,000 ಕೋಟಿ ರೂ.ಗಳಷ್ಟಿದ್ದು, ಈ ಪೈಕಿ ಸುಮಾರು ಅರ್ಧದಷ್ಟು ಗ್ರಾಹಕ ವಹಿವಾಟುಗಳಿಂದಲೇ ಬಂದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್‍ನ ಮುಖ್ಯಸ್ಥ ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಇಂದು ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಳೆದ ವರ್ಷದಲ್ಲಿ 53,739 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದ್ದಾರೆ. ಇದು ಹಿಂದಿನ ವರ್ಷಕ್ಕಿಂತ ಶೇ. 34.8ರಷ್ಟು ಹೆಚ್ಚಾಗಿದೆ.

    ಸೌದಿ ಅರಾಮ್‍ಕೋ ಹಾಗೂ ಪಬ್ಲಿಕ್ ಇನ್‍ವೆಸ್ಟ್ ಮೆಂಟ್ ಫಂಡ್‍ನ ಮುಖ್ಯಸ್ಥ ಯಾಸಿರ್ ಅಲ್-ರುಮಯ್ಯನ್, ಸ್ವತಂತ್ರ ನಿರ್ದೇಶಕರಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ನಿರ್ದೇಶಕ ಮಂಡಲಿಯನ್ನು ಸೇರಲಿದ್ದಾರೆ ಎಂದು ಮುಖೇಶ್ ಅಂಬಾನಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ನಿರ್ದೇಶಕ ಮಂಡಳಿಗೆ ಅವರ ಸೇರ್ಪಡೆ, ರಿಲಯನ್ಸ್ ನ ಅಂತಾರಾಷ್ಟ್ರೀಕರಣದ ಪ್ರಾರಂಭದ ದ್ಯೋತಕವೂ ಆಗಿದೆ ಎಂದು ಅವರು ಹೇಳಿದ್ದಾರೆ.

    ‘ಜಿಯೋಫೋನ್ ನೆಕ್ಸ್ಟ್’
    ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ 4G ಬ್ರಾಡ್‍ಬ್ಯಾಂಡ್ ಸೇವೆಗಳನ್ನು ಒದಗಿಸುವ ಮೂಲಕ ಭಾರತದಲ್ಲಿ ಡಿಜಿಟಲ್ ಸಂಪರ್ಕ ಕ್ರಾಂತಿಯನ್ನೇ ಉಂಟುಮಾಡಿರುವ ಜಿಯೋ, ಇದೀಗ ಭಾರತವನ್ನು ‘2G-ಮುಕ್ತ’ವಾಗಿಸುವ ಉದ್ದೇಶದೊಂದಿಗೆ ಕೈಗೆಟುಕುವ ಬೆಲೆಯ 4G ಸ್ಮಾರ್ಟ್ ಫೋನ್ ಅನ್ನು ಪರಿಚಯಿಸುತ್ತಿದೆ. ‘ಜಿಯೋಫೋನ್ ನೆಕ್ಸ್ಟ್’ ಎಂಬ ಹೆಸರಿನ ಈ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅನ್ನು ಜಿಯೋ ಹಾಗೂ ಗೂಗಲ್ ತಂಡಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಸೆಪ್ಟೆಂಬರ್ 10ರ ಗಣೇಶ ಚತುರ್ಥಿಯ ದಿನದಿಂದ ಅದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ವಾಯ್ಸ್ ಅಸಿಸ್ಟೆಂಟ್, ಪರದೆಯ ಮೇಲಿನ ಪಠ್ಯವನ್ನು ಓದಿ ಹೇಳುವ ಸೌಲಭ್ಯ, ಅನುವಾದ ಸೌಲಭ್ಯ, ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್ ಗಳಿರುವ ಸ್ಮಾರ್ಟ್ ಕ್ಯಾಮೆರಾ ಸೇರಿದಂತೆ ಈ ಸ್ಮಾರ್ಟ್‍ಫೋನಿನಲ್ಲಿ ಅನೇಕ ವಿಶಿಷ್ಟ ಸೌಲಭ್ಯಗಳಿರಲಿದ್ದು, ಗೂಗಲ್ ಹಾಗೂ ಜಿಯೋ ಆಪ್‍ಗಳಷ್ಟೇ ಅಲ್ಲದೆ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿರುವ ಆಪ್ ಗಳನ್ನೂ ಬಳಸುವುದು ಸಾಧ್ಯವಾಗಲಿದೆ. ಇದು ಭಾರತದಲ್ಲಿ ಮಾತ್ರವೇ ಅಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಆಗಿರಲಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಗೂಗಲ್ ಸಿಇಒ ಸುಂದರ್ ಪಿಚೈ, “ಈ ಸ್ಮಾರ್ಟ್‍ಫೋನ್ ಅನ್ನು ಭಾರತಕ್ಕೆಂದೇ ನಿರ್ಮಿಸಲಾಗಿದ್ದು, ಮೊತ್ತಮೊದಲ ಬಾರಿಗೆ ಅಂತರಜಾಲ ಬಳಸುವ ಲಕ್ಷಾಂತರ ಹೊಸ ಬಳಕೆದಾರರಿಗೆ ಅದು ಹೊಸ ಸಾಧ್ಯತೆಗಳನ್ನು ತೆರೆದಿಡಲಿದೆ” ಎಂದು ಹೇಳಿದ್ದಾರೆ.

    2G-ಮುಕ್ತ, 5G-ಯುಕ್ತ ಭಾರತದತ್ತ
    ದೇಶೀಯ ನಿರ್ಮಿತ 5G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಯೋ ಗಮನಾರ್ಹ ಸಾಧನೆಗಳನ್ನು ಮಾಡಿದ್ದು, ಪರೀಕ್ಷಾರ್ಥ ಚಟುವಟಿಕೆಗಳು ಮುಂದುವರೆದಿವೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಶಿಕ್ಷಣ, ಆರೋಗ್ಯ ರಕ್ಷಣೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ 5ಉ ತಂತ್ರಜ್ಞಾನದ ಬಳಕೆಯನ್ನು ಪರೀಕ್ಷಿಸಲಾಗುತ್ತಿದ್ದು, ಭಾರತ ಶೀಘ್ರವೇ ‘2ಉ-ಮುಕ್ತ’ವಾಗುವುದರ ಜೊತೆಗೆ ‘5G-ಯುಕ್ತ’ವೂ ಆಗುತ್ತದೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಭಾರತದಾದ್ಯಂತ 5G ಪರಿಚಯಿಸುವುದರ ಜೊತೆಗೆ ನಮ್ಮ ತಂತ್ರಜ್ಞಾನವನ್ನು ಇನ್ನಿತರ ದೇಶಗಳೂ ಬಳಸಲಿವೆ ಎಂದು ಅವರು ಹೇಳಿದ್ದಾರೆ.

    ದೇಶದೆಲ್ಲೆಡೆ 5G ಅನುಷ್ಠಾನಕ್ಕಾಗಿ ಜಿಯೋ ಹಾಗೂ ಗೂಗಲ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಜಿಯೋದ 5G ಜಾಲ ಹಾಗೂ ಸೇವೆಗಳು ಗೂಗಲ್ ಕ್ಲೌಡ್ ವೇದಿಕೆಯನ್ನು ಬಳಸಿಕೊಳ್ಳಲಿವೆ. ಈ ಒಪ್ಪಂದದ ಅಂಗವಾಗಿ ರಿಲಯನ್ಸ್ ನ ರೀಟೇಲ್ ವಹಿವಾಟು ಗೂಗಲ್ ಕ್ಲೌಡ್ ಅನ್ನು ವ್ಯಾಪಕವಾಗಿ ಬಳಸಲಿದೆ.

    ಗೂಗಲ್ ಮಾತ್ರವೇ ಅಲ್ಲದೆ ಫೇಸ್‍ಬುಕ್ ಹಾಗೂ ಮೈಕ್ರೋಸಾಫ್ಟ್ ಸಂಸ್ಥೆಗಳ ಜೊತೆಗೂ ರಿಲಯನ್ಸ್ ಸಹಭಾಗಿತ್ವ ಮುಂದುವರಿದಿದೆ. ಜಿಯೋಮಾರ್ಟ್ ಸೇವೆಗಳನ್ನು ವಾಟ್ಸಪ್ ಮೂಲಕ ಒದಗಿಸುವ ಪ್ರಯೋಗ ಮುಂದುವರೆದಿದ್ದು, ಇದಕ್ಕೆ ಜಿಯೋಮಾರ್ಟ್ ಹಾಗೂ ವಾಟ್ಸಪ್ ಎರಡೂ ಸೌಲಭ್ಯಗಳ ಗ್ರಾಹಕರಿಂದ ದೊರೆತಿರುವ ಆರಂಭಿಕ ಪ್ರತಿಕ್ರಿಯೆ ಉತ್ತಮವಾಗಿದೆಯೆಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಜಾಮನಗರ ಹಾಗೂ ನಾಗಪುರಗಳಲ್ಲಿ ಮೈಕ್ರೋಸಾಫ್ಟ್ ಸಹಯೋಗದೊಂದಿಗೆ ಎರಡು ಜಿಯೋ-a ರ್ ಕ್ಲೌಡ್ ಡೇಟಾ ಸೆಂಟರುಗಳನ್ನು ಕಾರ್ಯರಂಭಗೊಳಿಸಿರುವುದಾಗಿಯೂ ಅವರು ಹೇಳಿದ್ದಾರೆ.

    ಇದೇ ಸಂದರ್ಭದಲ್ಲಿ ಜಿಯೋಫೈಬರ್ ಕುರಿತು ಮಾತನಾಡಿದ ಮುಖೇಶ್ ಅಂಬಾನಿ, ಕಳೆದ ಒಂದು ವರ್ಷದಲ್ಲಿ ಅದು ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಹೊಸ ತಾಣಗಳಲ್ಲಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಮೂವತ್ತು ಲಕ್ಷಕ್ಕೂ ಹೆಚ್ಚಿನ ಬಳಕೆದಾರರೊಂದಿಗೆ, ಜಿಯೋಫೈಬರ್ ಭಾರತದ ಅತಿದೊಡ್ಡ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಫಿಕ್ಸೆಡ್ ಬ್ರಾಡ್‍ಬ್ಯಾಂಡ್ ಸೇವಾದಾರ ಸಂಸ್ಥೆಯಾಗಿ ರೂಪುಗೊಂಡಿದೆ ಎಂದು ಅವರು ಹೇಳಿದ್ದಾರೆ.

    ‘ಕಾರ್ಬನ್ ಜೀರೋ’ ಸಾಧನೆ
    2035ರ ವೇಳೆಗೆ ನಿವ್ವಳ ‘ಕಾರ್ಬನ್ ಜೀರೋ’ ಸಾಧನೆ ಮಾಡುವ ನಿಟ್ಟಿನಲ್ಲಿ ರಿಲಯನ್ಸ್ ಸಂಸ್ಥೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಪ್ರಕಟಿಸಿದೆ. ರಿಲಯನ್ಸ್ ನ ಈಗಿನ ವಹಿವಾಟಿನ ಆರಂಭಿಕ ಕೇಂದ್ರವಾಗಿದ್ದ ಜಾಮನಗರದಲ್ಲಿ 5,000 ಎಕರೆ ವಿಸ್ತೀರ್ಣದ ‘ಧೀರೂಭಾಯಿ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್’ ಅನ್ನು ಪ್ರಾರಂಭಿಸುವ ಮೂಲಕ ಅದನ್ನು ತಮ್ಮ ಹೊಸ ವಹಿವಾಟಿನ ಕೇಂದ್ರವನ್ನಾಗಿಯೂ ಮಾಡಿಕೊಳ್ಳುವುದಾಗಿ ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಸೌರಶಕ್ತಿಯ ಉತ್ಪಾದನೆ ಮತ್ತು ಶೇಖರಣೆ ಹಾಗೂ ಪರಿಸರ ಸ್ನೇಹಿ ಹೈಡ್ರೋಜನ್ ಉತ್ಪಾದನೆ ಮತ್ತು ಇಂಧನ ರೂಪಕ್ಕೆ ಪರಿವರ್ತನೆಗಾಗಿ ಒಟ್ಟು ನಾಲ್ಕು ಬೃಹತ್ ಕಾರ್ಖಾನೆಗಳನ್ನು ರಿಲಯನ್ಸ್ ಸ್ಥಾಪಿಸಲಿದೆ. ಈ ಉದ್ದೇಶಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 60,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಬಂಡವಾಳ ಹೂಡಲಿರುವುದಾಗಿ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. 2030ರ ವೇಳೆಗೆ ಕನಿಷ್ಠ 100 ಗಿಗಾವ್ಯಾಟ್‍ನಷ್ಟು ಸೌರ ವಿದ್ಯುತ್ ಉತ್ಪಾದನೆಯನ್ನು ರಿಲಯನ್ಸ್ ಸಾಧ್ಯವಾಗಿಸಲಿದೆ ಎಂದು ಅವರು ಹೇಳಿದ್ದಾರೆ.

    ಹೊಸ ಮಟೀರಿಯಲ್‍ಗಳು ಹಾಗೂ ಪರಿಸರ ಸ್ನೇಹಿ ರಾಸಾಯನಿಕಗಳನ್ನು ಉತ್ಪಾದಿಸುವ ನಿಟ್ಟಿನಲ್ಲೂ ರಿಲಯನ್ಸ್ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಕಾರ್ಯಕ್ರಮಗಳ ಅಂಗವಾಗಿ ಭಾರತದ ಮೊತ್ತಮೊದಲ ವಿಶ್ವದರ್ಜೆಯ ಕಾರ್ಬನ್ ಫೈಬರ್ ಘಟಕದಲ್ಲಿ ಹೂಡಿಕೆ ಮಾಡುತ್ತಿರುವುದಾಗಿ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. ತಮ್ಮ ಹೊಸ ಯೋಜನೆಗಳ ಮೂಲಕ ರಿಲಯನ್ಸ್‍ನ ಸಾಂಪ್ರದಾಯಿಕ ಇಂಧನಗಳ ವಹಿವಾಟನ್ನು ತಾಳಿಕೆಯ, ಸಕ್ರ್ಯುಲರ್ ಮತ್ತು ನಿವ್ವಳ ಜೀರೋ ಕಾರ್ಬನ್ ಮಟೀರಿಯಲ್‍ಗಳ ವಹಿವಾಟಾಗಿ ಬದಲಿಸುವುದಾಗಿ ಅವರು ತಿಳಿಸಿದ್ದಾರೆ. ಇದು ನಮಗೆ ಕೇವಲ ಹೊಸದೊಂದು ವಹಿವಾಟು ಮಾತ್ರವೇ ಅಲ್ಲ, ಇದು ಪರಿಸರಕ್ಕೆ ಉಂಟಾಗಿರುವ ಹಾನಿಯನ್ನು ಗುಣಪಡಿಸುವ ತಮ್ಮ ಉದ್ದಿಷ್ಟಕಾರ್ಯ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.

    ರಿಲಯನ್ಸ್ ರೀಟೇಲ್ ಸಾಧನೆ
    ಕಳೆದ ವರ್ಷದಲ್ಲಿ 1,500 ಹೊಸ ಮಳಿಗೆಗಳ ಸೇರ್ಪಡೆಯೊಂದಿಗೆ, ಇದೀಗ ಭಾರತದ ಪ್ರತಿ ಎಂಟು ಗ್ರಾಹಕರಲ್ಲಿ ಒಬ್ಬರು ರಿಲಯನ್ಸ್ ರೀಟೇಲ್ ನೊಂದಿಗೆ ವ್ಯವಹರಿಸುತ್ತಿದ್ದಾರೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ರಿಲಯನ್ಸ್ ರೀಟೇಲ್ ಗಮನಾರ್ಹ ಸಾಧನೆ ತೋರಿದ್ದು, 65,000ಕ್ಕೂ ಹೆಚ್ಚಿನ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಜಿಯೋಮಾರ್ಟ್ ಸೇವೆಗಳಿಗೂ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಒಂದೇ ದಿನದಲ್ಲಿ 6.5 ಲಕ್ಷ ಆರ್ಡರುಗಳನ್ನು ದಾಖಲಿಸುವ ಮೂಲಕ ಅದು ದಾಖಲೆ ನಿರ್ಮಿಸಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.

    ರಿಲಯನ್ಸ್ ಸಹಾಯಹಸ್ತ
    ಕೋವಿಡ್ ಜಾಗತಿಕ ಸೋಂಕಿನ ಸಂದರ್ಭದಲ್ಲಿ ಇಡೀ ರಿಲಯನ್ಸ್ ಕುಟುಂಬ ಒಟ್ಟಾಗಿ ನಿಂತು ರಾಷ್ಟ್ರೀಯ ಕರ್ತವ್ಯಗಳನ್ನು ನಿಭಾಯಿಸಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ರಿಲಯನ್ಸ್ ಪ್ರಾರಂಭಿಸಿದ ಐದು ಉದ್ದಿಷ್ಟ ಕಾರ್ಯಗಳ ಬಗ್ಗೆ ಮಾತನಾಡಿದ ನೀತಾ ಅಂಬಾನಿ, ಆಕ್ಸಿಜನ್ ತಯಾರಿಕೆ ಹಾಗೂ ಪೂರೈಕೆ, ಕೋವಿಡ್ ಮೂಲಸೌಕರ್ಯ ಸೃಷ್ಟಿ, ಆಹಾರ ವಿತರಣೆ, ಉದ್ಯೋಗಿಗಳ ರಕ್ಷಣೆ ಹಾಗೂ ಲಸಿಕೆ ನೀಡುವ ನಿಟ್ಟಿನಲ್ಲಿ ರಿಲಯನ್ಸ್‍ನ ಸಾಧನೆಗಳನ್ನು ವಿವರಿಸಿದರು. ಎಂದೂ ಮೆಡಿಕಲ್ ದರ್ಜೆಯ ಆಕ್ಸಿಜನ್ ಉತ್ಪಾದನೆ ಮಾಡಿಲ್ಲದಿದ್ದ ರಿಲಯನ್ಸ್ ಸಂಸ್ಥೆ ಇದೀಗ ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟಾರೆ ಆಕ್ಸಿಜನ್ ಪ್ರಮಾಣದ ಶೇ. 11ಕ್ಕೂ ಹೆಚ್ಚಿನ ಪಾಲನ್ನು ತಯಾರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈವರೆಗೆ 7.5 ಕೋಟಿಗೂ ಹೆಚ್ಚಿನ ಆಹಾರ ಪೊಟ್ಟಣಗಳನ್ನು ವಿತರಿಸಿರುವ ರಿಲಯನ್ಸ್‍ನ ‘ಮಿಶನ್ ಅನ್ನ ಸೇವಾ’ ಕಾರ್ಪೊರೇಟ್ ಪ್ರತಿಷ್ಠಾನವೊಂದು ಕೈಗೊಂಡ ವಿಶ್ವದ ಅತಿದೊಡ್ಡ ಆಹಾರ ವಿತರಣಾ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.

  • ರಿಲಯನ್ಸ್ ರೀಟೇಲ್‍ಗೆ ಅಬುಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿಯಿಂದ 5 ಸಾವಿರ ಕೋಟಿ ಹೂಡಿಕೆ

    ರಿಲಯನ್ಸ್ ರೀಟೇಲ್‍ಗೆ ಅಬುಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿಯಿಂದ 5 ಸಾವಿರ ಕೋಟಿ ಹೂಡಿಕೆ

    ಮುಂಬೈ: ಅಬುಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿ (ಎಡಿಐಎ) ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‍ನಲ್ಲಿ (ಆರ್.ಆರ್.ವಿ.ಎಲ್) 5,512.50 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ. ಈ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಲ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಮಂಗಳವಾರ ಘೋಷಣೆ ಮಾಡಿದೆ.

    ಆರ್.ಆರ್.ವಿ.ಎಲ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಾಗಿದೆ. ಈ ಹೊಸ ಹೂಡಿಕೆಯು ರಿಲಯನ್ಸ್ ರೀಟೇಲ್ ಪ್ರೀ ಮನಿ ಈಕ್ವಿಟಿ ಮೌಲ್ಯವನ್ನು 4.285 ಲಕ್ಷ ಕೋಟಿ ರುಪಾಯಿ ಮಾಡಿದೆ. ಇಷ್ಟು ಮೊತ್ತಕ್ಕೆ ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ ರಿಲಯನ್ಸ್ ರೀಟೇಲ್ ವೆಂಚರ್ಸ್ ನ 1.20% ಈಕ್ವಿಟಿ ಪಾಲು ಖರೀದಿಯನ್ನು ಎಡಿಐಎ ಮಾಡಿದಂತಾಗುತ್ತದೆ.

    ಈಗಿನ ವ್ಯವಹಾರವೂ ಸೇರಿಕೊಂಡಂತೆ ಸಿಲ್ವರ್ ಲೇಕ್, ಕೆಕೆಆರ್, ಜನರಲ್ ಅಟ್ಲಾಂಟಿಕ್, ಮುಬದಾಲ, ಜಿಐಸಿ, ಟಿಪಿಜಿ ಹಾಗೂ ಎಡಿಐಎ ಈ ಎಲ್ಲವೂ ಸೇರಿ ಕಳೆದ ನಾಲ್ಕು ವಾರದೊಳಗೆ 37,710 ಕೋಟಿ ರುಪಾಯಿಯನ್ನು ಸಂಗ್ರಹಿಸಿದಂತಾಗುತ್ತದೆ. ಇದು ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. ಭಾರತದ ರೈತರು, ಎಂಎಸ್‍ಎಂಇ ವಲಯ ಬಲಪಡಿಸುವ ಮೂಲಕ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಉದ್ದೇಶ ಆರ್.ಆರ್.ವಿ.ಎಲ್‍ಗೆ ಇದೆ.

    ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಮಾತನಾಡಿ, ಎಡಿಐಎ ಸದ್ಯದ ಹೂಡಿಕೆಯಿಂದ ಬಹಳ ಖುಷಿಯಾಗಿದೆ. ಅದರ ಮುಂದುವರಿದ ಬೆಂಬಲ ಮತ್ತು ಜಾಗತಿಕ ಮಟ್ಟದಲ್ಲಿ ಬಲವಾದ ಹಿನ್ನೆಲೆಯಿಂದ ಅನುಕೂಲ ಆಗುವ ಭರವಸೆಯ ಮೂಲಕ ನಾಲ್ಕು ದಶಕಕ್ಕೂ ಹೆಚ್ಚು ಸಮಯದಿಂದ ಮೌಲ್ಯವನ್ನು ಸೃಷ್ಟಿಸುತ್ತಿದೆ. ರಿಲಯನ್ಸ್ ರೀಟೇಲ್ ಸಾಮಥ್ರ್ಯ ಹಾಗೂ ಪ್ರದರ್ಶನಕ್ಕೆ ಇದು ಮತ್ತೊಂದು ನಿದರ್ಶನ. ಹೊಸ ವಾಣಿಜ್ಯ ವ್ಯವಹಾರದ ಮಾದರಿಯೊಂದು ಸಿದ್ಧವಾಗುತ್ತಿದೆ ಎಂದಿದ್ದಾರೆ.

    ಎಡಿಐಎಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಹಮದ್ ಷಾವನ್ ಅಲ್ಧೇರಿ ಮಾತನಾಡಿ, ಭಾರತದ ಪ್ರಮುಖ ರೀಟೇಲ್ ವ್ಯವಹಾರದ ಉದ್ಯಮವಾಗಿ ರಿಲಯನ್ಸ್ ರೀಟೇಲ್ ಬಹಳ ಶೀಘ್ರವಾಗಿ ರೂಪುಗೊಂಡಿತು. ಅದಕ್ಕೆ ಅದರ ಫಿಸಿಕಲ್ ಹಾಗೂ ಡಿಜಿಟಲ್ ಪೂರೈಕೆ ಜಾಲದ ಬಲವೂ ಇದೆ. ಆರ್.ಆರ್.ವಿ.ಎಲ್‍ನ ಇನ್ನಷ್ಟು ಬೆಳವಣಿಗೆಗೆ ಪೂರಕ ಸ್ಥಿತಿಯಲ್ಲಿದೆ. ಹೆಚ್ಚು ಬಳಕೆ ಆಧಾರಿತ ಬೆಳವಣಿಗೆ ಹಾಗೂ ತಂತ್ರಜ್ಞಾನದ ಅಭಿವೃದ್ಧಿ ಎಲ್ಲಿ ವೇಗವಾಗಿ ಆಗುತ್ತಿದೆಯೋ ಏಷ್ಯಾದ ಅಂಥ ಪ್ರಾದೇಶಿಕ ಭಾಗದಲ್ಲಿ ಹೂಡಿಕೆ ಮಾಡುವುದು ನಮ್ಮ ಸ್ಟ್ರಾಟೆಜಿಯ ಭಾಗ ಎಂದು ಅವರು ಹೇಳಿದ್ದಾರೆ.

    ಎಡಿಐಎ ಆರಂಭವಾದದ್ದು 1976ರಲ್ಲಿ. ಜಾಗತಿಕ ಮಟ್ಟದಲ್ಲಿ ವಿವಿಧ ಹೂಡಿಕೆ ಸಂಸ್ಥೆಗಳಲ್ಲಿ ಅಬುಧಾಬಿ ಸರ್ಕಾರದ ಪರವಾಗಿ ಹೂಡಿಕೆ ಮಾಡಿಕೊಂಡು ಬಂದಿದೆ. ದೀರ್ಘಕಾಲದಲ್ಲಿ ಮೌಲ್ಯವನ್ನು ಸೃಷ್ಟಿಸುವಂತೆ ಮಾಡುವ ಕಡೆಗೆ ಎಡಿಐಎ ಗಮನ ನೆಟ್ಟಿರುತ್ತದೆ. ನಿಯಂತ್ರಕರು ಮತ್ತು ಇತರ ಅನುಮತಿಗಳ ಆಧಾರದ ಮೇಲೆ ಈ ವ್ಯವಹಾರವು ಅಂತಿಮವಾಗುತ್ತದೆ. ಮೊರ್ಗನ್ ಸ್ಟ್ಯಾನ್ಲಿಯು ಆರ್ಥಿಕ ಸಲಹೆಗಾರರಾಗಿ ಹಾಗೂ ಸಿರಿಲ್ ಅಮರ್ ಚಂದ್ ಮಂಗಲ್ ದಾಸ್ ಮತ್ತು ಡೇವಿಸ್ ಪೋಲ್ಕ್ ಅಂಡ್ ವಾರ್ಡ್ ವೆಲ್ ಕಾನೂನು ಸಲಹೆಗಾರರಾಗಿ ರಿಲಯನ್ಸ್ ರೀಟೇಲ್ ಪರ ಇದ್ದರು.

  • ಅಬುಧಾಬಿ ಮೂಲದ ಮುಬದಾಲದಿಂದ ರಿಲಯನ್ಸ್ ರೀಟೇಲ್‍ನಲ್ಲಿ 6,247.5 ಕೋಟಿ ರೂ. ಹೂಡಿಕೆ

    ಅಬುಧಾಬಿ ಮೂಲದ ಮುಬದಾಲದಿಂದ ರಿಲಯನ್ಸ್ ರೀಟೇಲ್‍ನಲ್ಲಿ 6,247.5 ಕೋಟಿ ರೂ. ಹೂಡಿಕೆ

    ಮುಂಬೈ: ಅಬುಧಾಬಿ ಮೂಲದ ಸಾರ್ವಭೌಮ ಹೂಡಿಕೆದಾರ ಮುಬದಾಲ ಇನ್‍ವೆಸ್ಟ್ ಮೆಂಟ್ ಕಂಪೆನಿಯಿಂದ (ಮುಬದಾಲ) ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ (RRVL) 6,247.5 ಕೋಟಿ ರುಪಾಯಿ (AED 3.1 ಬಿಲಿಯನ್) ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಗುರುವಾರ ಘೋಷಣೆ ಮಾಡಿವೆ.

    ಈ ಹೊಸ ಹೂಡಿಕೆಯು ರಿಲಯನ್ಸ್ ರೀಟೇಲ್ ಪ್ರೀ ಮನಿ ಈಕ್ವಿಟಿ ಮೌಲ್ಯವನ್ನು 4.285 ಲಕ್ಷ ಕೋಟಿ ರುಪಾಯಿ ಮಾಡಿದೆ. ಇಷ್ಟು ಮೊತ್ತಕ್ಕೆ ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ ರಿಲಯನ್ಸ್ ರೀಟೇಲ್ ವೆಂಚರ್ಸ್ ನ 1.40% ಈಕ್ವಿಟಿ ಪಾಲು ಖರೀದಿಯನ್ನು ಮುಬದಾಲ ಮಾಡಿದಂತಾಗುತ್ತದೆ.

    ಈ ವರ್ಷದ ಆರಂಭದಲ್ಲಿ ಮುಬದಾಲದಿಂದ ಜಿಯೋ ಪ್ಲಾಟ್ ಫಾಮ್ರ್ಸ್ ನಲ್ಲಿ 1.2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯ ಘೋಷಣೆ ಮಾಡಲಾಗಿತ್ತು. ಜಿಯೋ ಪ್ಲಾಟ್ ಫಾರ್ಮ್ಸ್ ನಂತರ ರಿಲಯನ್ಸ್ ಇಂಡಸ್ಟ್ರೀಸ್ ನ ಮತ್ತೊಂದು ಅಂಗಸಂಸ್ಥೆಯಾದ ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಮುಬದಾಲ ಮಾಡುತ್ತಿರುವ ಅತಿ ಮುಖ್ಯವಾದ ಹೂಡಿಕೆ ಇದು.

    ರಿಲಯನ್ಸ್ ರೀಟೇಲ್ ಲಿಮಿಟೆಡ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ. ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. ಭಾರತದ ರೈತರು, ಎಂಎಸ್ ಎಂಇ ವಲಯ ಬಲಪಡಿಸುವ ಮೂಲಕ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಉದ್ದೇಶ RRVLಗೆ ಇದೆ.

    ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ, ರಿಲಯನ್ಸ್ ರೀಟೇಲ್ ವೆಂಚರ್ಸ್ ನ ಮೌಲ್ಯಯುತ ಹೂಡಿಕೆದಾರರಾಗಿ ಮುಬದಾಲವನ್ನು ಸ್ವಾಗತಿಸಲು ಸಂತೋಷವಾಗುತ್ತದೆ. ಜ್ಞಾನ ಶ್ರೀಮಂತಿಕೆಯಿಂದ ಕೂಡಿರುವ ಮುಬದಾಲದಂಥ ಸಂಸ್ಥೆ ಜತೆಗೆ ಸಹಭಾಗಿತ್ವ ವಹಿಸಿರುವುದನ್ನು ಗೌರವಿಸುತ್ತೇವೆ ಎಂದಿದ್ದಾರೆ.

    ಭಾರತದ ರೀಟೇಲ್ ವಲಯವನ್ನು ಬಲಪಡಿಸಬೇಕು ಎಂದಿರುವ ನಮ್ಮ ಗುರಿಯ ಮೇಲೆ ಮುಬದಾಲ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ. ಅದು ಕೂಡ ಲಕ್ಷಾಂತರ ಸಣ್ಣ ಪ್ರಮಾಣದ ಚಿಲ್ಲರೆ ಮಾರಾಟಗಾರರು, ವರ್ತಕರು- ತಂತ್ರಜ್ಞಾನದ ಶಕ್ತಿಯ ಮೂಲಕ. ಮುಬದಾಲದ ಹೂಡಿಕೆ ಮತ್ತು ಮಾರ್ಗದರ್ಶನವು ಈ ಪ್ರಯಾಣದಲ್ಲಿ ಬೆಲೆಯೇ ಕಟ್ಟಲಾಗದ ಬೆಂಬಲ ಆಗಲಿದೆ ಎಂದಿದ್ದಾರೆ.

    ಮುಬದಾಲ ಇನ್ವೆಸ್ಟ್ ಮೆಂಟ್ ಕಂಪೆನಿ ಸಮೂಹದ ಸಿಇಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಖಲ್ದೂನ್ ಅಲ್ ಮುಬಾರಕ್ ಮಾತನಾಡಿ, ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ ಹೂಡಿಕೆ ಮಾಡುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಜತೆಗೆ ಬಾಂಧವ್ಯ ಗಟ್ಟಿಯಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.

    ಅವರ ದೃಷ್ಟಿಕೋನವು ಎಲ್ಲರನ್ನೂ ಒಳಗೊಂಡಂತೆ ಭಾರತದ ಗ್ರಾಹಕರ ಆರ್ಥಿಕತೆಯನ್ನು ಡಿಜಿಟೈಸೇಷನ್ ಶಕ್ತಿಯ ಮೂಲಕ ಬದಲಾವಣೆ ಮಾಡುತ್ತದೆ. ಅವಕಾಶಗಳನ್ನು ಸೃಷ್ಟಿಸುತ್ತದೆ. ದೇಶದಲ್ಲಿರುವ ಲಕ್ಷಾಂತರ ಮಂದಿ ಸಣ್ಣ ವ್ಯಾಪಾರಿಗಳಿಗೆ ಮಾರುಕಟ್ಟೆಗೆ ಸಂಪರ್ಕ ಪಡೆಯಲು ಸಹಾಯ ಮಾಡುತ್ತದೆ. ಕಂಪೆನಿಯ ನಿರಂತರ ಬೆಳವಣಿಗೆಗೆ ಬೆಂಬಲಿಸಲು ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.

    ನಿಯಂತ್ರಕರು ಮತ್ತು ಇತರ ಅನುಮತಿಗಳ ಆಧಾರದ ಮೇಲೆ ಈ ವ್ಯವಹಾರವು ಅಂತಿಮವಾಗುತ್ತದೆ. ಮೊರ್ಗನ್ ಸ್ಟ್ಯಾನ್ಲಿಯು ಆರ್ಥಿಕ ಸಲಹೆಗಾರರಾಗಿ ಹಾಗೂ ಸಿರಿಲ್ ಅಮರ್ ಚಂದ್ ಮಂಗಲ್ ದಾಸ್ ಮತ್ತು ಡೇವಿಸ್ ಪೋಲ್ಕ್ ಅಂಡ್ ವಾರ್ಡ್ ವೆಲ್ ಕಾನೂನು ಸಲಹೆಗಾರರಾಗಿ ರಿಲಯನ್ಸ್ ರೀಟೇಲ್ ಪರ ಇದ್ದರು.