Tag: reliance jio

  • ಉಪಗ್ರಹದಿಂದ ಇಂಟರ್‌ನೆಟ್‌ – ದೇಶದಲ್ಲೇ ಫಸ್ಟ್‌, ಜಿಯೋದಿಂದ ಬಂತು ಜಿಯೋಸ್ಪೇಸ್ ಫೈಬರ್

    ಉಪಗ್ರಹದಿಂದ ಇಂಟರ್‌ನೆಟ್‌ – ದೇಶದಲ್ಲೇ ಫಸ್ಟ್‌, ಜಿಯೋದಿಂದ ಬಂತು ಜಿಯೋಸ್ಪೇಸ್ ಫೈಬರ್

    ನವದೆಹಲಿ: ಇನ್ನು ಮುಂದೆ ರಿಲಯನ್ಸ್‌ ಜಿಯೋ (Reliance Jio) ಕಂಪನಿಯ ಇಂಟರ್‌ನೆಟ್‌ ಸೇವೆ ಭಾರತದ ಮೂಲೆ ಮೂಲೆಗಳಲ್ಲಿ ಸಿಗಲಿದೆ. ಭಾರತದ ಮೊದಲ ಬಾರಿಗೆ ಉಪಗ್ರಹ ಆಧಾರಿತ ಇಂಟರ್‌ನೆಟ್‌ (Satellite Internet) ಸೇವೆಯನ್ನು ಜಿಯೋ ಅನಾವರಣಗೊಳಿಸಿದೆ.

    ದೆಹಲಿಯಲ್ಲಿ ಇಂದಿನಿಂದ ಆರಂಭಗೊಂಡ ಮೊಬೈಲ್‌ ವರ್ಲ್ಡ್‌ ಕಾಂಗ್ರೆಸ್‌ನಲ್ಲಿ (Mobile World Congress) ಜಿಯೋಸ್ಪೇಸ್‌ಫೈಬರ್‌ (JioSpaceFiber) ಗಿಗಾಬಿಟ್‌ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಪ್ರದರ್ಶಿಸಿದೆ. ಈ ಸೇವೆಯು ದೇಶದ ಉದ್ದಗಲಕ್ಕೂ ಲಭ್ಯವಿದ್ದು, ದರ ಕೂಡ ಕೈಗೆಟುಕುವ ಮಟ್ಟದಲ್ಲೇ ಇರಲಿದೆ. ಈ ಸೇವೆಯಿಂದ ದೇಶದ ದೂರ ದೂರದ ಭಾಗಗಳಲ್ಲಿ ಜಿಯೋ ಟ್ರೂ 5ಜಿ ಲಭ್ಯತೆ ಮತ್ತು ಪ್ರಮಾಣವನ್ನು ಇನ್ನೂ ಹೆಚ್ಚು ಮಾಡಲಿದೆ.

    ಜಾಗತಿಕ ಮಟ್ಟದಲ್ಲಿ ಇವತ್ತಿಗೆ ಮುಖ್ಯವಾದಂಥ ಮೀಡಿಯಂ ಅರ್ಥ್ ಆರ್ಬಿಟ್ ಉಪಗ್ರಹ ತಂತ್ರಜ್ಞಾನ ಸಂಪರ್ಕಿಸುವುದಕ್ಕೆ ಎಸ್ಇಎಸ್ ಜತೆಗೆ ಜಿಯೋ ಪಾಲುದಾರಿಕೆ ಹೊಂದಿದೆ. ಇದು ವಿಶಿಷ್ಟ ಗಿಗಾಬಿಟ್, ಫೈಬರ್ ತರಹದ ಸೇವೆಗಳನ್ನು ಬಾಹ್ಯಾಕಾಶದಿಂದ ತಲುಪಿಸುವ ಸಾಮರ್ಥ್ಯ ಹೊಂದಿರುವ ಏಕೈಕ ಎಂಇಒ ಸಮೂಹ ಆಗಿದೆ.   ಇದನ್ನೂ ಓದಿ: ಭಾರತವನ್ನು ಕಟ್ಟಲು ಯುವಜನರು ವಾರಕ್ಕೆ 70 ಗಂಟೆ ದುಡಿಯಬೇಕು: ನಾರಾಯಣ ಮೂರ್ತಿ

    ದೇಶದಲ್ಲಿ ಈ ತಂತ್ರಜ್ಞಾನದ ಸೇವೆಗಾಗಿ ಅತ್ಯಂತ ದೂರದ ಸ್ಥಳಗಳನ್ನು ಗುಜರಾತ್‌ನ ಗಿರ್, ಛತ್ತೀಸ್‌ಗಢದ ಕೊರ್ಬಾ, ಒಡಿಶಾದ ನಬರಂಗಪುರ, ಅಸ್ಸಾಂನ ಒಎನ್ ಜಿಸಿ- ಜೊರ್ಹಾತ್ ಸಂಪರ್ಕಿಸಲಾಗಿದೆ.

    ಜಿಯೋ ಇನ್ಫೋಕಾಮ್ ಲಿಮಿಟೆಡ್ ಅಧ್ಯಕ್ಷರಾದ ಆಕಾಶ್ ಅಂಬಾನಿ (Akash Ambani) ಮಾತನಾಡಿ, ಇದೇ ಮೊದಲ ಬಾರಿಗೆ ಹತ್ತಾರು ಲಕ್ಷ ಕುಟುಂಬಗಳು, ವ್ಯವಹಾರಗಳಿಗೆ ಬ್ರಾಡ್ ಬ್ಯಾಂಡ್ ಇಂಟರ್‌ನೆಟ್‌ ಅನುಭವ ದೊರೆಯುವಂತೆ ಜಿಯೋ ಮಾಡಿದೆ. ಇನ್ನೂ ಇಂಟರ್‌ನೆಟ್‌ ವ್ಯಾಪ್ತಿಗೆ ಬಾರದವರನ್ನು ಜಿಯೋಸ್ಪೇಸ್ ಫೈಬರ್ ಮೂಲಕ ಸಂರ್ಪಕಿಸಲಾಗುತ್ತದೆ. ಇದು ಸರ್ಕಾರಿ ಆನ್ ಲೈನ್, ಶಿಕ್ಷಣ, ಆರೋಗ್ಯ, ಮತ್ತು ಮನರಂಜನಾ ಸೇವೆಗಳಿಗೆ ಸಂಪರ್ಕ ಪಡೆಯುವುದಕ್ಕೆ ಗಿಗಾಬಿಟ್ ಮೂಲಕ ಹೊಸ ಡಿಜಿಟಲ್ ಸಮಾಜಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಿಲಯನ್ಸ್ ಜಿಯೋ: ಐಫೋನ್ 15 ಖರೀದಿಸಿದರೆ 6 ತಿಂಗಳು ಫ್ರೀ ಪ್ಲಾನ್

    ರಿಲಯನ್ಸ್ ಜಿಯೋ: ಐಫೋನ್ 15 ಖರೀದಿಸಿದರೆ 6 ತಿಂಗಳು ಫ್ರೀ ಪ್ಲಾನ್

    ಮುಂಬೈ: ಹೊಸದಾಗಿ ಲಾಂಚ್ ಆಗಿರುವ ಆಪಲ್ ಐಫೋನ್ 15 (Apple iPhone 15) ಖರೀದಿಯ ಮೇಲೆ ರಿಲಯನ್ಸ್ ಜಿಯೋ (Reliance Jio) ಬಂಪರ್ ಆಫರ್ ಘೋಷಣೆ ಮಾಡಿದೆ.

    ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ ಜಿಯೋಮಾರ್ಟ್‌ನಲ್ಲಿ ಜಿಯೋ ಐಫೋನ್ 15 ಖರೀದಿ ಮಾಡಿದರೆ 2,394 ರೂ.ಮೌಲ್ಯದ ಆರು ತಿಂಗಳ ಪ್ಲಾನ್ ಅನ್ನು ಉಚಿತವಾಗಿ ಬಳಕೆದಾರರಿಗೆ ನೀಡಲಿದೆ.

    ಭಾರತೀಯ ಮಾರುಕಟ್ಟೆಯಲ್ಲಿ ಬಳಕೆದಾರರ ನಾಡಿ ಮಿಡಿತವನ್ನು ಅರಿತು ಕೊಂಡಿರುವ ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ 399 ರೂ. ಪ್ಲಾನ್ ಅನ್ನು ಆರು ತಿಂಗಳುಗಳ ವರೆಗೆ ಉಚಿತವಾಗಿ ನೀಡಲಿದೆ. ಇದರ ಒಟ್ಟು ಮೌಲ್ಯ 2,394 ರೂ. ಗಳಾಗಲಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.

    ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ ನೀಡುತ್ತಿರುವ 399 ರೂ. ಪ್ಲಾನ್ ನಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ 3 ಜಿಬಿ ಹೈ ಸ್ಪೀಡ್ ಡೇಟಾ ಬಳಕೆಗೆ ದೊರೆಯಲಿದ್ದು, ಜೊತೆಗೆ ಸಂಪೂರ್ಣ ಅನ್ ಲಿಮಿಟೆಡ್ ಕಾಲಿಂಗ್ ಸಹ ಸಿಗಲಿದೆ. ಅಲ್ಲದೇ ಪ್ರತಿನಿತ್ಯ 100 ಎಸ್ಎಂಎಸ್ ಗಳನ್ನು ಸಹ ಉಚಿತವಾಗಿ ಕಳುಹಿಸಬಹುದಾಗಿದೆ.  ಇದನ್ನೂ ಓದಿ: ಭಾರತದಲ್ಲಿ ಐಫೋನ್ 15 ಸೇಲ್ ಶುರು- ಖರೀದಿಗೆ ಮುಂಜಾನೆ 4 ಗಂಟೆಗೇ ಕ್ಯೂ ನಿಂತ ಗ್ರಾಹಕರು

    ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ ಜಿಯೋಮಾರ್ಟ್ ನಲ್ಲಿ ಜಿಯೋ ಐಫೋನ್ 15 ಖರೀದಿ ಮಾಡಿದರೆ ಮಾತ್ರವೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

    ಜಿಯೋ ಬಳಕೆದಾರರಲಲ್ಲದವರಿಗೂ ಈ ಯೋಜನೆಯ ಲಾಭವು ದೊರೆಯಲಿದ್ದು, ಇದಕ್ಕಾಗಿ ಅವರು ಹೊಸ ಜಿಯೋ ಸಿಮ್ ಖರೀದಿ ಮಾಡಬೇಕು ಇಲ್ಲವೇ ಮೊಬೈಲ್ ನಂಬರ್ ಪೊರ್ಟಬಲಿಟಿ ಆಯ್ಕೆಯನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ.

    ಈ ಪ್ಲಾನ್ ಸೆಪ್ಟೆಂಬರ್ 22ರಿಂದ ಆರಂಭವಾಗಿದ್ದು, ಐಫೋನ್ 15 ಖರೀದಿ ಮಾಡಿ ಜಿಯೋ ಸಿಮ್ ಅನ್ನು ಆಕ್ಟಿವ್ ಮಾಡಿದರೆ ಈ ಹೊಸ ಯೋಜನೆಯು 72 ಗಂಟೆಗಳ ಒಳಗೆ ನಿಮ್ಮ ಬಳಕೆಗೆ ಲಭ್ಯವಾಗಲಿದೆ. ಈ ಯೋಜನೆಯೂ ಕೇವಲ ಐಫೋನ್ 15 ನಲ್ಲಿ ಮಾತ್ರವೇ ಕಾರ್ಯನಿರ್ವಹಿಸಲಿದೆ.

     
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪೊಲೀಸ್ ಇಲಾಖೆಯಿಂದ BSNL ಗೆ ಗುಡ್ ಬೈ – ಜಿಯೋಗೆ ಹಾಯ್

    ಪೊಲೀಸ್ ಇಲಾಖೆಯಿಂದ BSNL ಗೆ ಗುಡ್ ಬೈ – ಜಿಯೋಗೆ ಹಾಯ್

    ಬೆಂಗಳೂರು: ರಾಜ್ಯ ಪೊಲೀಸರು (Karnataka State Police) ಇದೀಗ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ (BSNL) ನೆಟ್‌ವರ್ಕ್ ಬಿಟ್ಟು ರಿಲಯನ್ಸ್ ಜಿಯೋಗೆ ಪೋರ್ಟ್ ಆಗಲು ನಿರ್ಧರಿಸಿದ್ದಾರೆ. ಪೊಲೀಸ್ ಇಲಾಖೆ ಬಳಸುತ್ತಿದ್ದ ಬಿಎಸ್‌ಎನ್‌ಎಲ್ ಸಿಮ್‌ಕಾರ್ಡ್ನಿಂದ ಮುಕೇಶ್ ಅಂಬಾನಿ (Mukesh Ambani) ಒಡೆತನದ ಜಿಯೋಗೆ ಶಿಫ್ಟ್ ಆಗಲು ನಿರ್ಧರಿಸಲಾಗಿದೆ.

    ಭಾರತ್ ಸಂಚಾರ ನಿಗಮ ನಿಯಮಿತ (BSNL) ರಾಜ್ಯಾದ್ಯಂತ ಸರಿಯಾಗಿ ನೆಟ್‌ವರ್ಕ್ ಸಿಗುತ್ತಿಲ್ಲ, ಇದರಿಂದ ಅಧಿಕಾರಿಗಳ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ರಾಜ್ಯ ಪೊಲೀಸ್ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸುಮಾರು 38,347 ಸಿಮ್‌ಕಾರ್ಡ್‌ಗಳನ್ನು (SIM Card) ಬದಲಾಯಿಸಲು ಸರ್ಕಾರ ಅನುಮತಿ ನೀಡಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಓಲಾದಿಂದ 7,614 ಕೋಟಿ ಹೂಡಿಕೆ- ಸಿಎಂ ಸ್ಟಾಲಿನ್‌ ಸಹಿ

    ಸಿಬ್ಬಂದಿಯ ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆಯನ್ನು ಉಳಿಸಿಕೊಳ್ಳಲು ಜಿಯೋಗೆ ಪೋರ್ಟ್ ಮಾಡಬೇಕಾಗುತ್ತದೆ. ಬಿಎಸ್‌ಎನ್‌ಎಲ್ ಪೋರ್ಟಿಂಗ್ ಪ್ರಕ್ರಿಯೆಯು ಪೂರ್ವಾಪೇಕ್ಷಿತವಾಗಿದ್ದು, ಮುಂಚಿತವಾಗಿಯೇ ಜಿಯೋ ಸಿಮ್‌ಕಾರ್ಡ್ಗಳನ್ನು ಒದಗಿಸಲಾಗುತ್ತದೆ. ಪ್ರತಿ ಸಿಮ್‌ಕಾರ್ಡ್ನಿಂದ ಪೂರ್ಟ್ ರಿಕ್ವೆಸ್ಟ್ ಸಂಗ್ರಹಿಸುವ ಅಗತ್ಯವಿದ್ದು, ಆರಂಭವಾದ 4 ದಿನಗಳ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ. 38,347 ಸಕ್ರಿಯ ಸಂಪರ್ಕ ಸಂಖ್ಯೆಗಳನ್ನು ಹೊಂದಿರುವುದರಿಂದ ಎಲ್ಲ ಘಟಕಗಳನ್ನು ಒಳಗೊಳ್ಳಲು ಹಂತ ಹಂತವಾಗಿ ಪೋರ್ಟ್ ಪ್ರಕ್ರಿಯೆ ಮಾಡಲಾಗುತ್ತದೆ ಎಂದು ಪೊಲೀಸ್ ಮಹಾನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    38,347 ಸಂಪರ್ಕಗಳಲ್ಲಿ ಹೆಚ್ಚಿನ ಸಂಪರ್ಕ ಸಂಖ್ಯೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಅಲ್ಲಿ ಉತ್ತಮ ನೆಟ್‌ವರ್ಕ್ ಕೊರತೆ ಕಂಡುಬಂದಿದೆ. ಇದರಿಂದ ಫೋಟೋ, ವೀಡಿಯೋ ಸೇರಿದಂತೆ ಇತರ ದತ್ತಾಂಶಗಳನ್ನು ವರ್ಗಾಯಿಸುವುದು ಕಷ್ಟಸಾಧ್ಯವಾಗುತ್ತಿತ್ತು. ಪೊಲೀಸ್ ತುರ್ತು ಸೇವೆಗಳಿಗಾಗಿ ಲಭ್ಯವಿರುವ ನೆಟ್‌ವರ್ಕ್‌ಗಳ ದಕ್ಷತೆ ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ನಂತೆ ಇನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲೂ ವೆರಿಫೈಡ್ ಖಾತೆಗಳಿಗೆ ದುಡ್ಡು ಪಾವತಿಸಬೇಕು

    ಖಾಸಗಿ ಸಂಸ್ಥೆಗಳು ಈಗಾಗಲೇ 5ಜಿ ಸೇವೆ ನೀಡುತ್ತಿವೆ. ಆದರೆ ಬಿಎಸ್‌ಎನ್‌ಎಲ್ 4ಜಿ ಸೇವೆಯನ್ನೂ ನೀಡುತ್ತಿಲ್ಲ. ಇದರಿಂದ ತುರ್ತು ಸೇವೆಗಳಿಗೆ ಸಮಸ್ಯೆಯಾಗಿದೆ. ಹಾಗಾಗಿ ಸಾರ್ವಜನಿಕ ಸಂಗ್ರಹಣೆಯಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆ 1999ರ ಪ್ರಕಾರ ವಾಣಿಜ್ಯ ಮೌಲ್ಯಮಾಪನದ ನಂತರ ರಿಲಯನ್ಸ್ ಜಿಯೋವನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಭಾರತದಲ್ಲಿ ರಿಲಯನ್ಸ್‌ 5G ಡೇಟಾ ಕ್ರಾಂತಿ ಮಾಡುತ್ತಾ?

    ಭಾರತದಲ್ಲಿ ರಿಲಯನ್ಸ್‌ 5G ಡೇಟಾ ಕ್ರಾಂತಿ ಮಾಡುತ್ತಾ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜಿಯೋ ಬಿಡುಗಡೆ ಮಾಡಲಿದೆ ಕಡಿಮೆ ಬೆಲೆಯ 5G ಫೋನ್‌ – ಬೆಲೆ ಎಷ್ಟು? ಗುಣ ವೈಶಿಷ್ಟ್ಯಗಳು ಏನು?

    ಜಿಯೋ ಬಿಡುಗಡೆ ಮಾಡಲಿದೆ ಕಡಿಮೆ ಬೆಲೆಯ 5G ಫೋನ್‌ – ಬೆಲೆ ಎಷ್ಟು? ಗುಣ ವೈಶಿಷ್ಟ್ಯಗಳು ಏನು?

    ಮುಂಬೈ: ಕಡಿಮೆ ಬೆಲೆಯ 4ಜಿ ಫೋನ್‌ ಬಿಡುಗಡೆ ಮಾಡಿದ್ದ ರಿಲಯನ್ಸ್‌ ಜಿಯೋ ಈಗ ಕಡಿಮೆ ಬೆಲೆಯಲ್ಲಿ 5ಜಿ ಫೋನ್‌ ಬಿಡುಗಡೆ ಮಾಡಲು ಮುಂದಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ, ಡಿಜಿಟಲ್ ಇಂಡಿಯಾ ಕ್ರಾಂತಿಯನ್ನು ತಳ ಮಟ್ಟಕ್ಕೆ ತರಲಾಗುತ್ತದೆ. ಶೀಘ್ರದಲ್ಲೇ ನಾವು 5ಜಿ ಯುಗವನ್ನು ಪ್ರಾರಂಭಿಸುತ್ತಿದ್ದಂತೆ ಪ್ರತಿ ಹಳ್ಳಿಗಳಿಗೂ ಡಿಜಿಟಲ್ ಸಂಪರ್ಕ ಸಿಗಲಿದೆ ಎಂದು ಹೇಳಿದ್ದರು.

    ಈಗ ದೇಶದ ದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್‌ ಜಿಯೋ 12 ಸಾವಿರ ರೂ. ಒಳಗಡೆ ಇರುವ ಫೋನ್‌ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ.

    5ಜಿ ಫೋನ್‌ ದರದ ಬಗ್ಗೆ ರಿಲಯನ್ಸ್‌ ಎಲ್ಲಿಯೂ ಅಧಿಕೃತವಾಗಿ ಪ್ರಕಟಿಸಿಲ್ಲ. ಸದ್ಯಕ್ಕೆ 12 ಸಾವಿರ ರೂ. ಒಳಗಡೆ ಯಾವುದೇ 5ಜಿ ಫೋನ್‌ ಲಭ್ಯವಿಲ್ಲ. ಈ ಕಾರಣಕ್ಕೆ 12 ಸಾವಿರ ರೂ. ಒಳಗಡೆ ಫೋನನ್ನು ಜಿಯೋ ಬಿಡುಗಡೆ ಮಾಡುತ್ತಿದೆ ಎಂದು ವರದಿಯಾಗಿದೆ. ಕೆಲ ದಿನಗಳ ಹಿಂದೆ ಸ್ಯಾಮ್‌ಸಂಗ್‌ 5ಜಿ ಫೋನ್‌ ಬಿಡುಗಡೆ ಮಾಡಿತ್ತು. ಎಂ 13 ಹೆಸರಿನ ಫೋನಿಗೆ 13,990 ರೂ. ದರ ನಿಗದಿಯಾಗಿತ್ತು.

    ಜಿಯೋಫೋನ್‌ ನೆಕ್ಷ್ಟ್‌ ಖರೀದಿಗೆ ನೀಡಿದಂತೆ ಈ ಫೋನ್‌ 2,500 ರೂ. ಡಿಸ್ಕೌಂಟ್‌ ದರದಲ್ಲಿ ಸಿಗುವ ಸಾಧ್ಯತೆಯಿದೆ. ಇದರ ಜೊತೆ ಆಫರ್‌ ದರದಲ್ಲಿ ಜಿಯೋ ಡೇಟಾ ಪ್ಯಾಕ್‌ ನೀಡಲಿದೆ ಎನ್ನಲಾಗುತ್ತಿದೆ.

    ಗುಣವೈಶಿಷ್ಟ್ಯ ಏನಿರಲಿದೆ?
    6.5 ಇಂಚಿನ ಎಚ್‌ಡಿ+ ಐಪಿಎಸ್‌ ಎಲ್‌ಸಿಡಿ ಡಿಸ್ಪ್ಲೇ(1600×720 ಪಿಕ್ಸೆಲ್‌), ಕ್ವಾಲಕಂ ಸ್ನಾಪ್‌ಡ್ರಾಗನ್‌ 480 5G (SM4350) ಅಕ್ಟಾ ಕೋರ್‌, 13 ಎಂಪಿ ಹಿಂದುಗಡೆ ಕ್ಯಾಮೆರಾ, 2 ಎಂಪಿ ಮ್ಯಾಕ್ರೋ ಸೆನ್ಸರ್‌, ಸೆಲ್ಫಿಗಾಗಿ 8 ಎಂಪಿ ಕ್ಯಾಮೆರಾ ಇರಲಿದೆ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್‌ ಬ್ಯಾನ್‌? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?

    2GB/4GB RAM ಮತ್ತು 32GB/64GB ಆಂತರಿಕ ಮೆಮೊರಿ ಇರಲಿದೆ. ಕ್ವಾಲಕಂ ಸ್ನಾಪ್‌ಡ್ರಾಗನ್‌ 480 5G ಪ್ರೊಸೆಸರ್‌ 2021ರ ಜನವರಿಯಲ್ಲಿ ಬಿಡುಗಡೆಯಾಗಿದ್ದು, ಎಂಟ್ರಿ ಲೆವೆಲ್‌ ಆಂಡ್ರಾಯ್ಡ್‌ ಫೋನ್‌, ಟ್ಯಾಬ್ಲೆಟ್‌ಗೆ ಬಳಕೆಯಾಗುತ್ತಿದೆ.

    ಈ ಫೋನ್‌ನಲ್ಲಿ ಜಿಯೋಫೋನ್‌ ನೆಕ್ಷ್ಟ್‌ಗೆ ನೀಡಿದಂತೆ ʼಪ್ರಗತಿʼ ಆಪರೇಟಿಂಗ್‌ ಸಿಸ್ಟಂ ಇರಲಿದೆ. ಗೂಗಲ್‌ ಮತ್ತು ಜಿಯೋ ಕಂಪನಿಗಳು ಈ ಕಸ್ಟಮೈಸ್ಡ್‌ ಆಂಡ್ರಾಯ್ಡ್‌ ಓಎಸ್‌ ತಯಾರಿಸಿವೆ.

    ಬಿಡುಗಡೆ ಯಾವಾಗ?
    ಜಿಯೋ ಈ ತಿಂಗಳಿನಲ್ಲೇ 5ಜಿ ಸೇವೆ ನೀಡುವುದಾಗಿ ಹೇಳಿದೆ. ಆರಂಭದಲ್ಲಿ ಮಹಾನಗರಗಳಲ್ಲಿ ಈ ಸೇವೆ ನೀಡಿದರೆ ಮುಂದೆ ಟಯರ್‌ 2, ಟಯರ್‌ 3 ನಗರಗಳಲ್ಲಿ ಸೇವೆ ಸಿಗಲಿದೆ. ಜಿಯೋ 5ಜಿ ಫೋನ್‌ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಹಿಂದೆ ಜಿಯೋಫೋನ್‌ ನೆಕ್ಷ್ಟ್‌ ದೀಪಾವಳಿಯಂದು ಬಿಡುಗಡೆಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಭಾರತದಲ್ಲೇ ಮೊದಲು – ನಮ್ಮ ಮೆಟ್ರೋದಲ್ಲಿ 5ಜಿ ನೆಟ್‌ವರ್ಕ್ ಪರೀಕ್ಷೆ

    ಭಾರತದಲ್ಲೇ ಮೊದಲು – ನಮ್ಮ ಮೆಟ್ರೋದಲ್ಲಿ 5ಜಿ ನೆಟ್‌ವರ್ಕ್ ಪರೀಕ್ಷೆ

    ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್)ದ ಪೈಲಟ್ ಪ್ರಾಜೆಕ್ಟ್‌ನ ಅಡಿಯಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ 5ಜಿ ನೆಟ್‌ವರ್ಕ್ ಅನ್ನು ಪರೀಕ್ಷಿಸಿದೆ. ಈ ಮೂಲಕ ಬೆಂಗಳೂರು ಮೆಟ್ರೋ ರೈಲು ನಿಗಮ ದೇಶದಲ್ಲೇ 5ಜಿ ನೆಟ್‌ವರ್ಕ್ ಪರೀಕ್ಷಿಸಿದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಹೌದು, ಬೆಂಗಳೂರಿನ ನಮ್ಮ ಮೆಟ್ರೋ 5ಜಿ ನೆಟ್‌ವರ್ಕ್ ಅನ್ನು ಪರೀಕ್ಷಿಸಿದೆ. ನಮ್ಮ ಮೆಟ್ರೋ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಇದು 4ಜಿ ನೆಟ್‌ವರ್ಕ್‌ಗಿಂತಲೂ 50 ಪಟ್ಟು ವೇಗದ ಇಂಟರ್‌ನೆಟ್ ಒದಗಿಸುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ದೇಶದಲ್ಲಿ ಮಂಕಿಪಾಕ್ಸ್ ಭೀತಿ – ಆತಂಕ ಹೆಚ್ಚಿಸಿದ ಆಫ್ರಿಕನ್ ಹಂದಿಜ್ವರ

    ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ಬೆಂಗಳೂರಿನ ಎಂಜಿ ರೋಡ್ ನಿಲ್ದಾಣದಲ್ಲಿ 200 ಮೀ. ವ್ಯಾಪ್ತಿಯಲ್ಲಿ 5ಜಿ ನೆಟ್‌ವರ್ಕ್ ಅನ್ನು ಸ್ಥಾಪಿಸಿದೆ. ಪರೀಕ್ಷೆಯಲ್ಲಿ 1.45 ಜಿಬಿಪಿಎಸ್(ಗಿಗಾಬಿಟ್ ಪರ್ ಸೆಕೆಂಡ್) ಡೌನ್‌ಲೋಡ್ ಹಾಗೂ 65 ಎಂಬಿಪಿಎಸ್(ಮೆಗಾಬಿಟ್ಸ್ ಪರ್ ಸೆಕೆಂಡ್) ಅಪ್‌ಲೋಡ್ ವೇಗವನ್ನು ಸಾಧಿಸಿದ್ದು, ಇದು 4ಜಿ ನೆಟ್‌ವರ್ಕ್‌ಗಿಂತಲೂ 50 ಪಟ್ಟು ವೇಗದ ಇಂಟರ್‌ನೆಟ್ ಒದಗಿಸಿದೆ ಎಂದು ನಮ್ಮ ಮೆಟ್ರೋ ಟ್ವೀಟ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ವೈದ್ಯಕೀಯ ಪರೀಕ್ಷೆ ನಡೆಸದೇ ಅಂಗವಿಕಲರ ವಿಮಾನ ಪ್ರಯಾಣವನ್ನು ರದ್ದುಗೊಳಿಸುವಂತಿಲ್ಲ: ಡಿಜಿಸಿಎ

    Live Tv
    [brid partner=56869869 player=32851 video=960834 autoplay=true]

  • ರಿಲಯನ್ಸ್ ರಿಟೇಲ್ ಅಧ್ಯಕ್ಷೆಯಾಗಲಿದ್ದಾರೆ ಅಂಬಾನಿ ಪುತ್ರಿ ಇಶಾ

    ರಿಲಯನ್ಸ್ ರಿಟೇಲ್ ಅಧ್ಯಕ್ಷೆಯಾಗಲಿದ್ದಾರೆ ಅಂಬಾನಿ ಪುತ್ರಿ ಇಶಾ

    ಮುಂಬೈ: ಮುಖೇಶ್ ಅಂಬಾನಿ ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನದಿಂದ ಕೆಳಗಿಳಿದು, ತನ್ನ ಪುತ್ರ ಆಕಾಶ್ ಅಂಬಾನಿಗೆ ಸ್ಥಾನವನ್ನು ಹಸ್ತಾಂತರಿಸಿದ ಬೆನ್ನಲ್ಲೇ ಪುತ್ರಿ ಇಶಾ ಅಂಬಾನಿಗೂ ಕಂಪನಿಯ ದೊಡ್ಡ ಅಧಿಕಾರವನ್ನು ನೀಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

    ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರನ್ನು ರಿಲಯನ್ಸ್‌ನ ರಿಟೇಲ್‌ವಿಭಾಗದ ಅಧ್ಯಕ್ಷೆಯನ್ನಾಗಿ ನೇಮಿಸಲಿದ್ದಾರೆ ಎಂದು ವರದಿಯಾಗಿದ್ದು, ಇದೀಗ 217 ಬಿಲಿಯನ್ ಡಾಲರ್(ಸುಮಾರು 17 ಲಕ್ಷ ಕೋಟಿ ರೂ.) ಮೌಲ್ಯದ ಕಂಪನಿಯನ್ನು ಮುನ್ನಡೆಸಲು ಮುಖೇಶ್ ಅಂಬಾನಿ ತಮ್ಮ ಮಕ್ಕಳನ್ನು ನೇಮಿಸುತ್ತಿದ್ದಾರೆ. ಇದನ್ನೂ ಓದಿ: ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನದಿಂದ ಕೆಳಗಿಳಿದ ಮುಖೇಶ್ ಅಂಬಾನಿ – ಮಗ ಆಕಾಶ್‌ಗೆ ಪಟ್ಟ

    ಇಶಾ ಅಂಬಾನಿ ಪ್ರಸ್ತುತ ರಿಲಯನ್ಸ್ ರಿಟೇಲರ್ ವೆಂಚರ್ಸ್ ಲಿಮಿಟೆಡ್‌ನ ನಿರ್ದೇಶಕಿಯಾಗಿದ್ದಾರೆ. ಇಶಾ ಅವರ ಹೊಸ ಹುದ್ದೆ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿಲ್ಲವಾದರೂ ಶೀಘ್ರವೇ ಕಂಪನಿ ಈ ಬಗ್ಗೆ ತಿಳಿಸುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.

    ಇಶಾ ಮತ್ತು ಆಕಾಶ್ ಮುಕೇಶ್ ಅಂಬಾನಿಯ ಅವಳಿ ಮಕ್ಕಳಾಗಿದ್ದು, ಅನಂತ್ ಹೆಸರಿನ ಕಿರಿಯ ಸಹೋದರನೂ ಇದ್ದಾನೆ. ಇಶಾ ಯೆಲ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿಯಾಗಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕಾಲೇಜಿನಲ್ಲಿ ಪಿಯು ಓದುವ ವಿದ್ಯಾರ್ಥಿನಿಯರಿಗೆ ಗುಡ್‌ನ್ಯೂಸ್‌ – ಯಾವುದೇ ಫೀಸ್‌ ಕಟ್ಟುವ ಅಗತ್ಯವಿಲ್ಲ

    Live Tv

  • ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನದಿಂದ ಕೆಳಗಿಳಿದ ಮುಖೇಶ್ ಅಂಬಾನಿ – ಮಗ ಆಕಾಶ್‌ಗೆ ಪಟ್ಟ

    ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನದಿಂದ ಕೆಳಗಿಳಿದ ಮುಖೇಶ್ ಅಂಬಾನಿ – ಮಗ ಆಕಾಶ್‌ಗೆ ಪಟ್ಟ

    ಮುಂಬೈ: ರಿಲಯನ್ಸ್ ಜಿಯೋ ನಿರ್ದೇಶಕರಾಗಿದ್ದ ಮುಖೇಶ್ ಅಂಬಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತಮ್ಮ ಹಿರಿಯ ಮಗ ಆಕಾಶ್‌ಗೆ ನಿರ್ದೇಶಕ ಸ್ಥಾನವನ್ನು ಹಸ್ತಾಂತರಿಸಿದ್ದಾರೆ.

    ಕಂಪನಿಯ ನಿರ್ದೇಶಕರ ಮಂಡಳಿ ಸೋಮವಾರ ನಡೆದ ಸಭೆಯಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಕಾಶ್ ಅಂಬಾನಿ ಅವರನ್ನು ಕಂಪನಿಯ ಅಧ್ಯಕ್ಷರನ್ನಾಗಿ ನೇಮಿಸಲು ಅನುಮೋದನೆ ನೀಡಿದೆ. ಈ ಬಗ್ಗೆ ರಿಲಯನ್ಸ್ ಇನ್ಫೋಕಾಮ್ ಭಾರತೀಯ ಷೇರು ಮಾರುಕಟ್ಟೆಗಳಿಗೆ ಮಾಹಿತಿ ನೀಡಿದೆ. ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ – ಕೆಎಸ್‌ಆರ್‌ಟಿಸಿ ವಿದ್ಯಾರ್ಥಿ ಬಸ್ ಪಾಸ್ ಅವಧಿ ವಿಸ್ತರಣೆ

    ಆಕಾಶ್ ಅಂಬಾನಿ ಅಮೆರಿಕದ ಬ್ರೌನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಪದವೀಧರರಾಗಿದ್ದು, ಅವರು ಹೊಸ ತಂತ್ರಜ್ಞಾನಗಳು ಹಾಗೂ ಸಾಮರ್ಥ್ಯಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಡೇಟಾ ಮತ್ತು ತಂತ್ರಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ತಲುಪಿಸಲು ಕೆಲಸ ಮಾಡುವುದಾಗಿ ಕಂಪನಿ ತಿಳಿಸಿದೆ.

    ಇದರೊಂದಿಗೆ ಮಂಡಳಿ ತನ್ನ ಸಭೆಯಲ್ಲಿ ಪಂಕಜ್ ಮೋಹನ್ ಪವಾರ್ ಅವರನ್ನು 5 ವರ್ಷಗಳ ಅವಧಿಗೆ ರಿಲಯನ್ಸ್ ಜಿಯೋ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲು ಅನುಮೋದಿಸಿದೆ. ರಮಿಂದರ್ ಸಿಂಗ್ ಗುಜ್ರಾಲ್ ಹಾಗೂ ಕೆ.ವಿ ಚೌಧರಿ ಅವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ನೇಮಿಸಿದೆ. ಇದನ್ನೂ ಓದಿ: ದಿಢೀರ್ ಭಾರೀ ಇಳಿಕೆಯಾಗಲಿದೆ ಫೋನ್ ಬೆಲೆ

    ರಾಜೀನಾಮೆ ನೀಡಿದ್ದರೂ ರಿಲಯನ್ಸ್ ಜಿಯೋ ಸೇರಿದಂತೆ ಎಲ್ಲಾ ಜಿಯೋ ಡಿಜಿಟಲ್ ಬ್ರ್ಯಾಂಡ್‌ಗಳ ಕಂಪನಿ ಜಿಯೋ ಪ್ಲಾಟ್‌ಫಾರ್ಮ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಮುಖೇಶ್ ಅಂಬಾನಿಯೇ ಮುಂದುವರಿಯಲಿದ್ದಾರೆ. ಅಂಕಿ ಅಂಶಗಳ ಪ್ರಕಾರ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಜಿಯೋ ಏಪ್ರಿಲ್‌ನಲ್ಲಿ 16.8 ಲಕ್ಷ ಮೊಬೈಲ್ ಚಂದಾದಾರರನ್ನು ಗಳಿಸಿದೆ. ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ ಟೆಲಿಕಾಂ ನೆಟ್‌ವರ್ಕ್ ಪೈಕಿ ಮೊದಲ ಸ್ಥಾನದಲ್ಲಿದೆ.

    Live Tv

  • ಹೊಸ ವರ್ಷಕ್ಕೆ ಗಿಫ್ಟ್‌ –  ಜನವರಿ 1 ರಿಂದ ಜಿಯೋದಿಂದ ಹೊರ ಹೋಗುವ ಎಲ್ಲ ಕರೆಗಳು ಉಚಿತ

    ಹೊಸ ವರ್ಷಕ್ಕೆ ಗಿಫ್ಟ್‌ – ಜನವರಿ 1 ರಿಂದ ಜಿಯೋದಿಂದ ಹೊರ ಹೋಗುವ ಎಲ್ಲ ಕರೆಗಳು ಉಚಿತ

    ಮುಂಬೈ: ಹೊಸ ವರ್ಷಕ್ಕೆ ಜಿಯೋ ಬಳಕೆದಾರರಿಗೆ ಗಿಫ್ಟ್‌ ಸಿಕ್ಕಿದೆ. 2021 ಜನವರಿ 1 ರಿಂದ ಭಾರತದಲ್ಲಿ ಜಿಯೋದಿಂದ ಇತರ ಟೆಲಿಕಾಂ ಕಂಪನಿಗಳಿಗೆ  ಹೋಗುವ ಎಲ್ಲ ಕರೆಗಳು ಉಚಿತವಾಗಲಿದೆ.

    ಜಿಯೋದಿಂದ ಜಿಯೋ ಸಿಮ್‌ಗೆ ಹೋಗುವ ಕರೆಗಳು ಉಚಿತವಾಗಿತ್ತು. ಆದರೆ ಜಿಯೋದಿಂದ ಇತರೆ ಟೆಲಿಕಾಂ ಕಂಪನಿಯ ಸಿಮ್‌ಗೆ ಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸುತ್ತಿತ್ತು. ಆದರೆ ಈಗ ಹೊರ ಹೋಗುವ ಕರೆಗಳಿಗಿದ್ದ ದರವನ್ನು ತೆಗೆದು ಹಾಕಿದೆ.

    ಭಾರತೀಯ ದೂರ ಸಂಪರ್ಕ ಪ್ರಾಧಿಕಾರ(ಟ್ರಾಯ್‌) 2021ರ ಜನವರಿ ಒಂದರಿಂದ ದೇಶದ ಒಳಗಡೆ ಮಾಡಲಾಗುವ ಕರೆಗಳಿಗೆ ವಿಧಿಸಲಾಗುತ್ತಿದ್ದ ಇಂಟರ್‌ ಕನೆಕ್ಟ್‌ ಯೂಸೇಜ್‌ ಚಾರ್ಜ್‌ (ಐಯುಸಿ) ಕೊನೆಗೊಳಿಸಬೇಕೆಂದು ನಿರ್ದೇಶನ ನೀಡಿತ್ತು. ಈ ನಿರ್ದೇಶನವನ್ನು ಜಿಯೋ ಪಾಲಿಸುವುದಾಗಿ ತಿಳಿಸಿದೆ.

     

    ಜಿಯೋ ಸೇವೆ ಆರಂಭಗೊಂಡ ಬಳಿಕ ಬೇರೆ ಟೆಲಿಕಾಂ ಕಂಪನಿಗಳಿಗೆ ಹೊರ ಹೋಗುವ ಕರೆಗೆ ದರ ವಿಧಿಸುತ್ತಿರಲಿಲ್ಲ. ಆದರೆ 2019ರ ಅಕ್ಟೋಬರ್‌ 9 ರಂದು ಜಿಯೋ ಬೇರೆ ಟೆಲಿಕಾಂ ಕಂಪನಿಗಳಿಗೆ ಹೊರಹೋಗುವ ಎಲ್ಲ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆ ದರ ವಿಧಿಸಲಾಗುವುದು ಎಂದು ಪ್ರಕಟಿಸಿತ್ತು. ಟ್ರಾಯ್‌ ನಿಗದಿ ಪಡಿಸಿದಂತೆ ಐಯುಸಿ ವಿಧಿಸಲು ಮುಂದಾಗುತ್ತಿದ್ದೇವೆ ಎಂದು ಜಿಯೋ ಹೇಳಿತ್ತು.

    2019ರ ಜಿಯೋ ಹೇಳಿಕೆ

     

    ಜಿಯೋ ಸೇವೆ ಆರಂಭಗೊಂಡ ಬಳಿಕ ಈ ಐಯುಸಿಯನ್ನು ತಗೆದು ಹಾಕಬೇಕೆಂದು ಟ್ರಾಯ್ ಮುಂದೆ ವಾದ ಮಂಡಿಸುತಿತ್ತು. ಆದರೆ ಬೇರೆ ಟೆಲಿಕಾಂ ಕಂಪನಿಗಳು ಐಯುಸಿಯನ್ನು ತೆಗೆದು ಹಾಕಬಾರದು ದರವನ್ನು ಹೆಚ್ಚಿಸಬೇಕು ಎಂದು ವಾದಿಸುತ್ತಿದ್ದವು. ಆದರೆ ಟ್ರಾಯ್ ಹಂತ ಹಂತವಾಗಿ ಐಯುಸಿ ದರವನ್ನು ಕಡಿತಗೊಳಿಸುತ್ತಾ ಬಂದಿತ್ತು.

    ಏನಿದು ಐಯುಸಿ?
    ಇಂಟರ್ ಕನೆಕ್ಟ್ ಯೂಸೇಜ್ ಚಾರ್ಜ್(ಐಯುಸಿ) ಟ್ರಾಯ್ ನಿಗದಿ ಪಡಿಸುತ್ತದೆ. ಉದಾಹರಣೆಗೆ ಜಿಯೋ ಗ್ರಾಹಕರೊಬ್ಬರು ವೊಡಾಫೋನ್ ಗ್ರಾಹಕರಿಗೆ ಕರೆ ಮಾಡಿದರೆ ಜಿಯೋ ಟ್ರಾಯ್ ನಿಗದಿ ಪಡಿಸಿದ ಐಯುಸಿಯನ್ನು ವೊಡಾಫೋನ್ ಕಂಪನಿಗೆ ಪಾವತಿಸಬೇಕಾಗುತ್ತದೆ.

    2003ರಲ್ಲಿ ಒಳಬರುವ ಕರೆಯನ್ನು ಉಚಿತವಾಗಿ ನೀಡುವ ಸಲುವಾಗಿ ಟ್ರಾಯ್ ಐಯುಸಿಯನ್ನು ತಂದಿತ್ತು. 2004ರ ಫೆಬ್ರವರಿಯಲ್ಲಿ ಟ್ರಾಯ್ ಪ್ರತಿ ನಿಮಿಷಕ್ಕೆ 30 ಪೈಸೆ, 2009ರ ಏಪ್ರಿಲ್ ನಲ್ಲಿ 20 ಪೈಸೆ, 2015ರ ಮಾರ್ಚ್ ನಲ್ಲಿ 14 ಪೈಸೆ, ಬಳಿಕ 6 ಪೈಸೆ ಐಯುಸಿ ಬೆಲೆಯನ್ನು ಟ್ರಾಯ್ ನಿಗದಿಪಡಿಸಿತ್ತು.

    ಐಯುಸಿಯಿಂದಾಗಿ ಇತರೇ ಟೆಲಿಕಾಂ ಕಂಪನಿಗಳು ಸಾವಿರಾರು ಕೋಟಿ ರೂ. ಆದಾಯಗಳಿಸುತ್ತಿದೆ ಎನ್ನುವುದು ಜಿಯೋ ಆರೋಪ. 2019ರಲ್ಲಿ ತಿಳಿಸಿದಂತೆ ಕಳೆದ 3 ವರ್ಷಗಳಲ್ಲಿ ಜಿಯೋ ಐಯುಸಿಗೆಂದು ಒಟ್ಟು 12 ಸಾವಿರ ಕೋಟಿ ರೂ. ಹಣವನ್ನು ವಿವಿಧ ಟೆಲಿಕಾಂ ಕಂಪನಿಗಳಿಗೆ ಪಾವತಿಸಿದೆ. ಹೊರ ಹೋಗುವ ಕರೆಗಳು ಉಚಿತವಾಗಿ ಇರುವ ಕಾರಣ ಬೇರೆ ಕಂಪನಿಯ ಗ್ರಾಹಕರು ನಮ್ಮ ಕಂಪನಿಯ ಗ್ರಾಹಕರಿಗೆ ಮಿಸ್ ಕಾಲ್ ನೀಡುತ್ತಿದ್ದರು. ಇದರಿಂದಾಗಿ ನಮಗೆ ಭಾರೀ ನಷ್ಟವಾಗಿದೆ ಎಂದು ಜಿಯೋ ಹೇಳಿತ್ತು.

    ಈ ಹಿಂದೆ ಭಾರತಿ ಎಂಟರ್ಪ್ರೈಸಸ್ ಮುಖ್ಯಸ್ಥ ಸುನೀಲ್ ಮಿತ್ತಲ್ ಟ್ರಾಯ್ ಮುಖ್ಯಸ್ಥರಿಗೆ ಪತ್ರ ಬರೆದು ಪ್ರಸ್ತುತ ಐಯುಸಿ ಕಡಿಮೆ ಇದೆ. ಪಾರದರ್ಶಕವಾಗಿ ಹೊಸ ಬೆಲೆಯನ್ನು ನಿಗದಿಪಡಿಸಬೇಕೆಂದು ಮನವಿ ಮಾಡಿದ್ದರು.

    ಜಿಯೋ ವಿರೋಧ ಯಾಕೆ?
    ಈ ಹಿಂದೆ ಟೆಲಿಕಾಂ ಕಂಪೆನಿಗಳು ಕರೆ ಮತ್ತು ಡೇಟಾ ಸೇವೆಗಳನ್ನು ಪ್ರತ್ಯೇಕವಾಗಿ ನಿಭಾಯಿಸುತಿತ್ತು. ಆದರೆ ಜಿಯೋ ಈ ಎರಡನ್ನೂ ಒಟ್ಟಿಗೆ ನಿಭಾಯಿಸುತ್ತದೆ. ಇದರಿಂದಾಗಿ ಖರ್ಚು ಕಡಿಮೆ ಆಗುತ್ತದೆ. ಇದರಲ್ಲಿ ಕರೆಗೆ ಬೇರೆ, ಡೇಟಾಗೆ ಬೇರೆ ಎಂದು ಹಣ ನೀಡಬೇಕಿಲ್ಲ. ಡೇಟಾಗೆ ನೀಡಿದ ಹಣದಲ್ಲೇ ಕರೆಯನ್ನೂ ಉಚಿತವಾಗಿ ಮಾಡಬಹುದು. ಈ ಕಾರಣಕ್ಕಾಗಿ ಜಿಯೋ ಸಂಪೂರ್ಣವಾಗಿ ಐಯುಸಿಯನ್ನು ತೆಗೆದು ಹಾಕಬೇಕೆಂದು ವಾದ ಮಂಡಿಸಿಕೊಂಡು ಬಂದಿತ್ತು. ಐಯುಸಿಯಿಂದ ನಮಗೆ ಹೊರೆಯಾಗುತ್ತಿದೆ. ಇತರೇ ಟೆಲಿಕಾಂ ಕಂಪೆನಿಗಳು ತಮ್ಮ ಆದಾಯವನ್ನು ಹೆಚ್ಚಿಸಲು ಮಾಡಿಕೊಂಡ ತಂತ್ರ ಎಂದು ಜಿಯೋ ವಾದಿಸುತ್ತಿತ್ತು.

  • ಕೆಲವರ ಹಿತಾಸಕ್ತಿಗೆ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ವಿಳಂಬ – ಕೇಂದ್ರಕ್ಕೆ ಜಿಯೋ ಪತ್ರ

    ಕೆಲವರ ಹಿತಾಸಕ್ತಿಗೆ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ವಿಳಂಬ – ಕೇಂದ್ರಕ್ಕೆ ಜಿಯೋ ಪತ್ರ

    – ಹರಾಜು ಪ್ರಕ್ರಿಯೆಯನ್ನು ದಿಢೀರ್‌ ತಡೆ ಹಿಡಿದಿದ್ದು ಯಾಕೆ
    – ಟೆಲಿಕಾಂ ಸಚಿವಾಲಯಕ್ಕೆ ಜಿಯೋ ಪತ್ರ

    ನವದೆಹಲಿ: ಅದಷ್ಟು ಶೀಘ್ರವಾಗಿ ಸ್ಪೆಕ್ಟ್ರಂ ಹರಾಜು ನಡೆಸಬೇಕೆಂದು ರಿಲಯನ್ಸ್‌ ಜಿಯೋ ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿದೆ.

    ಸೆ.28 ರಂದು ದೂರಸಂಪರ್ಕ ಸಚಿವಾಲಯಕ್ಕೆ ಪತ್ರ ಬರೆದ ಜಿಯೋ, ಸ್ಪೆಕ್ಟ್ರಂ ಹಂಚಿಕೆ ಸಂಬಂಧ ಯಾವ ಕಾರಣಕ್ಕೆ ಹರಾಜು ಪ್ರಕ್ರಿಯೆಯನ್ನುತಡ ಮಾಡಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಇದರಿಂದ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ಹೂಡಿಕೆದಾರರಿಗೂ ಸಮಸ್ಯೆಯಾಗುವುದರ ಜೊತೆಗೆ ದೇಶದ ಆದಾಯಕ್ಕೂ ನಷ್ಟವಾಗುತ್ತಿದೆ ಎಂದು ತಿಳಿಸಿದೆ.

    2012ರಲ್ಲಿ ಸುಪ್ರೀಂ ಕೋರ್ಟ್‌ ಪ್ರತಿವರ್ಷ ಸ್ಪೆಕ್ಟ್ರಂ ಹಂಚಿಕೆ ಮಾಡಬೇಕೆಂದು ಸೂಚಿಸಿದೆ. ಹೀಗಿದ್ದರೂ ಯಾವ ಕಾರಣಕ್ಕೆ ಡಿಢೀರ್‌ ಹರಾಜು ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿದೆ ಎಂಬುವುದು ತಿಳಿಯುತ್ತಿಲ್ಲ. ಕಂಪನಿಗಳು ತಮ್ಮ ಬಿಸಿನೆಸ್‌ಗೆ ಅನುಗುಣವಾಗಿ ಖರೀದಿ ಮಾಡಬಹುದು. ಕಾರ್ಯ ನಿರ್ವಹಿಸುವ ಎಲ್ಲ ಕಂಪನಿಗಳು ಎಲ್ಲ ಬ್ಯಾಂಡ್‌ ಖರೀದಿಸಬೇಕು ಎಂಬುದು ಕಡ್ಡಾಯವಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ದೇಶೀಯ ಫೋನ್‌ ತಯಾರಿಕಾ ಕಂಪನಿ ಖರೀದಿಗೆ ಮುಂದಾದ ಜಿಯೋ

    ಒಟ್ಟು 3.92 ಲಕ್ಷ ಕೋಟಿ ರೂ. ಮೌಲ್ಯದ 1,461.5 ಮೆಗಾಹರ್ಟ್ಸ್‌ ಪೇರ್ಡ್‌ ಸ್ಪೆಕ್ಟ್ರಂ ಮತ್ತು 790 ಮೆಗಾಹರ್ಟ್ಸ್‌ ಅನ್‌ ಪೇರ್ಡ್‌ ಸ್ಪೆಕ್ಟ್ರಂ ಇಲ್ಲಿಯವರೆಗೆ ಬಳಕೆಯಾಗಿಲ್ಲ.

    ಪತ್ರದಲ್ಲಿ ಯಾವುದೇ ಟೆಲಿಕಾಂ ಕಂಪನಿಯ ಹೆಸರನ್ನು ಪ್ರಸ್ತಾಪ ಮಾಡದೇ, ಕೆಲವು ಸೇವಾ ಕಂಪನಿಗಳ ಸ್ಪೆಕ್ಟ್ರಂ ಹರಾಜಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಕೆಲವರ ಹಿತಾಸಕ್ತಿಗೆ ಪೂರಕವಾಗಿ ರಾಷ್ಟ್ರ ನಿರ್ಮಾಣದ ನೀತಿಗಳನ್ನು ತಡೆ ಹಿಡಿಯುವುದು ಸರಿಯಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

    ಕಳೆದ ನಾಲ್ಕು ವರ್ಷದಲ್ಲಿ ನಮ್ಮ ಟ್ರಾಫಿಕ್‌ ವಿಥ್‌ ಪರ್‌ ಯೂಸರ್‌ ವಾಯ್ಸ್‌ ದುಪ್ಪಟ್ಟು ಆಗಿದೆ. ಡೇಟಾ ಬಳಕೆ 50 ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದೆ. ಜಿಯೋ ಕೂಡಲೇ ಸ್ಪೆಕ್ಟ್ರಂ ಹರಾಜು ಮಾಡಿ ಎಂದು ಒತ್ತಾಯ ಮಾಡಿದರೆ ಏರ್‌ಟೆಲ್‌ ಮತ್ತು ವಿಐ ಸ್ಪೆಕ್ಟ್ರಂ ದರ ದುಬಾರಿಯಾಗಿದೆ ಎಂದು ಹೇಳಿದೆ.

    ಜಿಯೋ 700, 800, 900, 1800, 2100 ಮತ್ತು 2500 ಮೆಗಾಹರ್ಟ್ಸ್‌ ಬ್ಯಾಂಡ್‌ ಖರೀದಿಸಲು ಆಸಕ್ತಿ ತೋರಿಸಿದೆ. 5ಜಿ ಸೇವೆಗೆ ಇರುವ 3,300-3600 ಮೆಗಾಹರ್ಟ್ಸ್‌ ಬ್ಯಾಂಡ್‌ ಖರೀದಿಸಲು ಜಿಯೋ ಆಸಕ್ತಿ ತೋರಿಸಿಲ್ಲ.

    ಭಾರತೀಯ ದೂರ ಸಂಪರ್ಕ ಪ್ರಾಧಿಕಾರ(ಟ್ರಾಯ್‌) ಬಿಡುಗಡೆ ಮಾಡಿದ ಜೂನ್‌ ತಿಂಗಳ ವರದಿಯಲ್ಲಿ ವಿಐ 48 ಲಕ್ಷ ಗ್ರಾಹಕರನ್ನು ಕಳೆದುಕೊಂಡರೆ ಏರ್‌ಟೆಲ್‌ 11 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಬಿಎಸ್‌ಎನ್‌ಎಲ್‌ 17 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಇತ್ತ ಜಿಯೋಗೆ 45 ಲಕ್ಷ ಗ್ರಾಹಕರು ಹೊಸದಾಗಿ ಸೇರ್ಪಡೆಯಾಗಿದ್ದಾರೆ.