Tag: Reliance Industries

  • ಟಿಸಿಎಸ್ ಹಿಂದಿಕ್ಕಿ ದೇಶದ ಅತಿ ದೊಡ್ಡ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್!

    ಟಿಸಿಎಸ್ ಹಿಂದಿಕ್ಕಿ ದೇಶದ ಅತಿ ದೊಡ್ಡ ಕಂಪೆನಿಯಾದ ರಿಲಯನ್ಸ್ ಇಂಡಸ್ಟ್ರೀಸ್!

    ಮುಂಬೈ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್(ಟಿಸಿಎಸ್) ಕಂಪೆನಿಯನ್ನು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಹಿಂದಿಕ್ಕಿ ದೇಶದ ಅತಿ ದೊಡ್ಡ ಕಂಪೆನಿಯಾಗಿ ಹೊರಹೊಮ್ಮಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ ತನ್ನ ಷೇರಿನ ಬೆಲೆ 2.4% ಏರಿಕೆಯಾದ ಹಿನ್ನೆಲೆಯಲ್ಲಿ ರಿಲಯನ್ಸ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ರಿಲಯನ್ಸ್ ಷೇರಿನ ಬೆಲೆ 2.4% ಏರಿಕೆಯಾದ ಪರಿಣಾಮ ಮಂಗಳವಾರ  ಒಂದು ಷೇರಿನ ಬೆಲೆ 1,177 ರೂ. ಇದ್ದರೆ, ಟಿಸಿಎಸ್ ಒಂದು ಷೇರಿನ ಬೆಲೆ 1,930 ರೂ. ಇತ್ತು. ಟಿಸಿಎಸ್ 7.39 ಲಕ್ಷ ಕೋಟಿ ರೂ. ಮೌಲ್ಯದ ಕಂಪೆನಿಯಾಗಿದ್ದರೆ ರಿಲಯನ್ಸ್ ಈಗ 7.46 ಲಕ್ಷ ಕೋಟಿ ರೂ. ಮೌಲ್ಯದ ಕಂಪೆನಿಯಾಗಿ ಹೊರಹೊಮ್ಮಿದೆ.

    ಕಳೆದ ಎರಡು ತಿಂಗಳಿನಿಂದ ರಿಲಯನ್ಸ್ ಷೇರು ಏರಿಕೆ ಕಾಣುತ್ತಿದ್ದು, ವಿಶೇಷವಾಗಿ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಜಿಯೋದಿಂದಾಗಿ ಏರಿಕೆಯಾಗುತ್ತಿದೆ.

    ಶುಕ್ರವಾರ ರಿಲಯನ್ಸ್ ಕಂಪೆನಿ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಏಪ್ರಿಲ್-ಜೂನ್ ಅವಧಿಯಲ್ಲಿ 9,459 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು. ಸಂಸ್ಥೆ ಕಳೆದ ವರ್ಷ ಇದೇ ಅವಧಿಯಲ್ಲಿ 8,021 ಕೋಟಿ ರೂ. ಲಾಭ ದಾಖಲಿಸಿತ್ತು. ಇದನ್ನೂ ಓದಿ: ಏಷ್ಯಾದ ಅಗ್ರಗಣ್ಯ ಶ್ರೀಮಂತ ಜಾಕ್ ಮಾ ರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ!

     

     

  • ವಜ್ರ ಉದ್ಯಮಿಯ ಮಗಳನ್ನು ವರಿಸಲಿದ್ದಾರೆ ಮುಕೇಶ್ ಅಂಬಾನಿ ಪುತ್ರ – ಫೋಟೋಗಳಲ್ಲಿ ನೋಡಿ

    ವಜ್ರ ಉದ್ಯಮಿಯ ಮಗಳನ್ನು ವರಿಸಲಿದ್ದಾರೆ ಮುಕೇಶ್ ಅಂಬಾನಿ ಪುತ್ರ – ಫೋಟೋಗಳಲ್ಲಿ ನೋಡಿ

    ಮುಂಬೈ: ಭಾರತ ನಂಬರ್ ಒನ್ ಶ್ರೀಮಂತ, ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಪುತ್ರ ಅಕಾಶ್ ಅಂಬಾನಿ ವಜ್ರದ ಉದ್ಯಮಿಯೊಬ್ಬರ ಪುತ್ರಿಯನ್ನು ವರಿಸಲಿದ್ದಾರೆ.

    ಮುಕೇಶ್ ಅಂಬಾನಿ ಅವರ ಹಿರಿಯ ಪುತ್ರ ಅಕಾಶ್ ಮತ್ತು ವಜ್ರ ಉದ್ಯಮಿ ರಸೆಲ್ ಮೆಹ್ತಾ ಅವರ ಪುತ್ರಿ ಶ್ಲೋಕ ಮೆಹ್ತಾ ಅವರನ್ನು ವರಿಸಲಿದ್ದಾರೆ. ಎರಡು ಕುಟುಂಬಗಳ ಶನಿವಾರ ಗೋವಾದಲ್ಲಿ ಮಾತುಕತೆ ನಡೆಸಿವೆ ಎಂದು ವರದಿಯಾಗಿದೆ.

    ಸಮಾರಂಭದ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸುಂದರ ವಾತಾವರಣವೊಂದರಲ್ಲಿ ಎರಡು ಕುಟುಂಬಗಳ ಸದಸ್ಯರು ಒಂದಾಗಿ ಸಂಭ್ರಮಾಚರಣೆ ನಡೆಸಿದ್ದಾರೆ. ಕೆಲ ಸ್ಥಳೀಯ ಮಾಧ್ಯಮಗಳು ಈ ಸಮಾರಂಭವನ್ನು ನಿಶ್ಚಿತಾರ್ಥ ಸಮಾರಂಭವೆಂದು ವರದಿ ಮಾಡಿವೆ. ಆದರೆ ಇದುವರೆಗೂ ಎರಡು ಕುಟುಂಬಗಳಿಂದ ಯಾವುದೇ ಅಧಿಕೃತವಾಗಿ ಯಾವುದೇ ಹೇಳಿಕೆ ಬಂದಿಲ್ಲ.

    ಮುಕೇಶ್ ಹಾಗೂ ನೀತಾ ಅಂಬಾನಿ ದಂಪತಿಗೆ ಇಬ್ಬರು ಪುತ್ರರಿದ್ದು ಅಕಾಶ್ (25) ಹಿರಿಯ ಪುತ್ರ. ಇನ್ನು ರಸೆಲ್ ಮೆಹ್ತಾ ಅವರಿಗೆ ಮೊನಾ, ಶ್ಲೋಕ ಮೆಹ್ತಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಶ್ಲೋಕ ಮೆಹ್ತಾ ಈಗಾಗಲೇ ಉದ್ಯಮಿಯಾಗಿದ್ದು, ರೊಸಿ ಬ್ಲೂ ಡೈಮಾಂಡ್ ಹೆಸರಿನ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ರೊಸಿ ಬ್ಲೂ ಡೈಮಾಂಡ್ ಸಂಸ್ಥೆ ಪ್ರಪಂಚದ ಪ್ರಮುಖ ವಜ್ರದ ಕಂಪೆನಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

    ಅಕಾಶ್ ಹಾಗೂ ಶ್ಲೋಕ ಇಬ್ಬರು ಬಾಲ್ಯದ ಗೆಳೆಯರಾಗಿದ್ದು, ಮುಂಬೈನ ಧೀರೂಬಾಯಿ ಅಂಬಾನಿ ಅಂತರಾಷ್ಟ್ರೀಯ ಶಾಲೆಯಲ್ಲಿ ಓದಿದ್ದರು. ಶ್ಲೋಕಾ ಮೆಹ್ತಾ ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್ ನಲ್ಲಿ ಪದವಿ ಪಡೆದಿದ್ದು, ಕುಟುಂಬದ ಉದ್ಯಮಗಳನ್ನು ನಿರ್ವಹಿಸುತ್ತಿದ್ದಾರೆ. ಇನ್ನು ಅಕಾಶ್ ರಿಲಯನ್ಸ್ ಉದ್ಯಮ ಸಂಸ್ಥೆಗಳ ಬೋರ್ಡ್ ಆಫ್ ಡೈರೆಕ್ಟರ್ ಆಗಿ ನೇಮಕವಾಗಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ರಾಷ್ಟ್ರೀಯ ಸುದ್ದಿ ಮಾಧ್ಯಮಮೊಂದು ಆಯೋಜಿಸಿದ್ದ ಸಂವಾದ ಕಾಯಕ್ರಮದಲ್ಲಿ ಭಾಗವಹಿಸಿದ್ದ ನೀತಾ ಅಂಬಾನಿ, ತಮ್ಮ ಮಕ್ಕಳ ಜೀವನ ಸಂಗಾತಿಗಳ ಆಯ್ಕೆಯಲ್ಲಿ ಸ್ವಾತಂತ್ರ್ಯ ನೀಡಿರುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಮಗ 118 ಕೆಜಿ ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನೀತಾ ಅಂಬಾನಿ