Tag: Reliance Industries

  • ಲಿವರ್‌ಪೂಲ್‌ ತಂಡವನ್ನು ಖರೀದಿಸಲು ಮುಂದಾದ ಅಂಬಾನಿ

    ಲಿವರ್‌ಪೂಲ್‌ ತಂಡವನ್ನು ಖರೀದಿಸಲು ಮುಂದಾದ ಅಂಬಾನಿ

    ಲಂಡನ್‌: ಇಂಗ್ಲೆಂಡ್‌ನ ಪ್ರಸಿದ್ಧ ಲಿವರ್‌ಪೂಲ್‌(Liverpool) ಫುಟ್‌ಬಾಲ್‌ ತಂಡವನ್ನು ಮುಕೇಶ್‌ ಅಂಬಾನಿ(Mukesh Ambani ) ಖರೀದಿಸಲು ಮುಂದಾಗಿದ್ದಾರೆ.

    ವಿಶ್ವದ 8ನೇ ಶ್ರೀಮಂತ ವ್ಯಕ್ತಿಯಾಗಿರುವ ರಿಲಯನ್ಸ್‌ ಇಂಡಸ್ಟ್ರೀಸ್‌(Reliance Industries) ಕಂಪನಿಯ ಮುಖ್ಯಸ್ಥ ಮುಕೇಶ್‌ ಅಂಬಾನಿ ಈಗಾಲೇ ಐಪಿಎಲ್‌ನಲ್ಲಿ(IPL) ಮುಂಬೈ ಇಂಡಿಯನ್ಸ್‌ ತಂಡವನ್ನು ಖರೀದಿಸಿದ್ದಾರೆ. ಈಗ ಫುಟ್‌ಬಾಲ್‌ ತಂಡದ ಮೇಲೆ ಕಣ್ಣಿಟ್ಟಿದ್ದಾರೆ.

    ಲಿವರ್‌ಪೂಲ್‌ ಮಾಲೀಕತ್ವ ಹೊಂದಿರುವ ಫೆನ್‌ವೇ ಸ್ಫೋರ್ಟ್ಸ್‌ ಗ್ರೂಪ್‌ ತಂಡವನ್ನು 4 ಶತಕೋಟಿ ಪೌಂಡ್‌ ಮಾರಾಟ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ICC ಹಣಕಾಸು ಸಮಿತಿಗೆ ಅಮಿತ್ ಶಾ ಪುತ್ರ ಮುಖ್ಯಸ್ಥ – ದಾದಾಗಿಲ್ಲ BCCI ಬೆಂಬಲ

    ಲಿವರ್‌ಪೂಲ್‌ ತಂಡವನ್ನು ಭಾರತದ ಕಂಪನಿಗಳು ಖರೀದಿಸುತ್ತಿರುವ ಸುದ್ದಿಯಾಗುತ್ತಿರುವುದು ಇದು ಮೊದಲೆನಲ್ಲ. ಈ ಹಿಂದೆ 2010ರಲ್ಲಿ ಸಹರಾ ಕಂಪನಿ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಶೇ.51 ರಷ್ಟು ಪಾಲನ್ನು ಖರೀದಿಸುವ ಬಗ್ಗೆ ಸುದ್ದಿಯಾಗಿತ್ತು. ಆದರೆ ಈ ವದಂತಿಯನ್ನು ಲಿವರ್‌ಪೂಲ್‌ ನಿರಾಕರಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಸಲೂನ್ ಉದ್ಯಮಕ್ಕೂ ರಿಲಯನ್ಸ್ ಎಂಟ್ರಿ

    ಸಲೂನ್ ಉದ್ಯಮಕ್ಕೂ ರಿಲಯನ್ಸ್ ಎಂಟ್ರಿ

    ಮುಂಬೈ: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ನೇತೃತ್ವದ ರಿಲಯನ್ಸ್ ಕಂಪನಿ ಇದೀಗ ಸಲೂನ್ ಉದ್ಯಮಕ್ಕೂ ಕಾಲಿಡುತ್ತಿದೆ. ಅದಕ್ಕಾಗಿ ಚೆನ್ನೈ ಮೂಲದ `ನ್ಯಾಚುರಲ್ಸ್ ಸಲೂನ್ ಅಂಡ್ ಸ್ಪಾ’ (Naturals Salon and Spa) ಕಂಪನಿಯ ಶೇ.49ರಷ್ಟು ಪಾಲನ್ನು ಖರೀದಿಸಲು ಮಾತುಕತೆ ನಡೆಸುತ್ತಿದ್ದು, ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.

    ರಿಲಯನ್ಸ್ ಸಲೂನ್ ಉದ್ಯಮಕ್ಕೆ (Reliance Industries) ಕಾಲಿಡುವ ಮೂಲಕ ಹಿಂದೂಸ್ತಾನ್ ಯುನಿಲೀವರ್‌ನ ಲ್ಯಾಕ್ಮೆ ಬ್ರ‍್ಯಾಂಡ್, ಎನ್ರಿಚ್ ಮತ್ತು ಗೀತಾಂಜಲಿಯಂಥ ಇತರ ಸ್ಥಳೀಯ ಬ್ರ‍್ಯಾಂಡ್‌ಗಳಿಗೂ ಪೈಪೋಟಿ ನೀಡಲಿದೆ ಎಂದು ರಿಲಯನ್ಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಾಕ್ ರಿಜ್ವಾನ್ ಹಿಂದಿಕ್ಕಿ ನಂ.1 ಪಟ್ಟಕ್ಕೆ ಏರಿದ ಸೂರ್ಯ

    ಈ ಕುರಿತು ಮಾತನಾಡಿರುವ ನ್ಯಾಚುರಲ್ಸ್ ಸಲೂನ್ ಅಂಡ್ ಸ್ಪಾ ಸಿಇಒ ಸಿಕೆ ಕಮಾರವೇಲ್ ಮಾತನಾಡಿ, ದೇಶಾದ್ಯಂತ ಗ್ರೂಮ್‌ ಇಂಡಿಯಾ ಸಲೂನ್ಸ್ ಅಂಡ್ ಸ್ಪಾ (Groom India Salons & Spa) 700 ನ್ಯಾಚುರಲ್ ಸಲೂನ್‌ಗಳನ್ನು ನಡೆಸುತ್ತಿದೆ. ರಿಲಯನ್ಸ್ ಹೂಡಿಕೆಯಿಂದ ನಮ್ಮ ನೆಟ್‌ವರ್ಕ್ ಅನ್ನು ಇನ್ನಷ್ಟು ವಿಸ್ತರಿಸಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ED ಪ್ರಕರಣದಲ್ಲಿ ಬಂಧನದ ಭೀತಿ – ಮಧ್ಯಂತರ ರಕ್ಷಣೆ ಕೋರಿ ಡಿಕೆಶಿ ಕೋರ್ಟ್ ಮೊರೆ

    ಯಾವುದೇ ಸಂಭಾವ್ಯ ಒಪ್ಪಂದದ ಬಗ್ಗೆ ಉಲ್ಲೇಖಿಸಲಾಗಿಲ್ಲ. ಸರಿ ಸುಮಾರು 2 ಸಾವಿರ ಇಸ್ವಿಯಲ್ಲಿ ಸ್ಥಾಪಿಸಲಾದ ಚೆನ್ನೈ ಮೂಲದ ನ್ಯಾಚುರಲ್ಸ್ ಸಲೂನ್ ಅಂಡ್ ಸ್ಪಾ 2025ರ ವೇಳೆಗೆ 3,000 ಸಲೂನ್‌ಗಳನ್ನು ನಡೆಸುವ ಗುರಿಯನ್ನು ಹೊಂದಿದೆ ಎಂದು ಅದರ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಅಂಬಾನಿ ಕುಟುಂಬಕ್ಕೆ ಬೆದರಿಕೆ ಕರೆ – ಆರೋಪಿ ಅರೆಸ್ಟ್

    ಅಂಬಾನಿ ಕುಟುಂಬಕ್ಕೆ ಬೆದರಿಕೆ ಕರೆ – ಆರೋಪಿ ಅರೆಸ್ಟ್

    ಮುಂಬೈ: ದೇಶದ ಎರಡನೇ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಹಾಗೂ ಅವರ ಕುಟುಂಬಕ್ಕೆ ಬೆದರಿಕೆ ಮೂರು ಕರೆಗಳು ಬಂದಿದ್ದು, ಈ ಪೈಕಿ ಕರೆ ಮಾಡಿದವರಲ್ಲಿ ಓರ್ವನನ್ನು ಪಶ್ಚಿಮ ಮುಂಬೈನ ದಹಿಸರ್ ನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ರಿಲಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷ ಮುಖೇಶ್ ಅಂಬಾನಿ ಹಾಗೂ ಅವರ ಕುಟುಂಬಕ್ಕೆ ಇಂದು ಬೆಳಿಗ್ಗೆ 10:30ರ ಸುಮಾರಿಗೆ ಮೂರು ಬೆದರಿಕೆ ಕರೆಗಳು ಬಂದಿದ್ದವು. ಈ ಕುರಿತಾಗಿ ಮುಖೇಶ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಕರೆ ಮಾಡಿದ ಅಫ್ಜಲ್ ಎಂಬಾತನನ್ನು ಬಂದಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.

    ಬಂಧಿತ ಆರೋಪಿ ಮಾನಸಿಕ ಅಸ್ವಸ್ಥ ಎಂದು ವರದಿಯಾಗಿದೆ. ಕರೆ ಮಾಡಿದವನು ವಿಷ್ಣು ಬೌಮಿಕ್‌ ಆಗಿದ್ದು ಕರೆ ಮಾಡುವಾಗ ಆತ ತನ್ನ ಹೆಸರನ್ನು ಅಫ್ಜಲ್‌ ಎಂದು ಹೇಳಿದ್ದ.

    ಇದನ್ನೂ ಓದಿ: ಸ್ವಾತಂತ್ರ‍್ಯ ದಿನದಂದೇ ರೈತರ ಪ್ರತಿಭಟನೆ – ದರದರನೆ ಎಳೆದೊಯ್ದ ಪೊಲೀಸರು 

    ಕಳೆದ ವರ್ಷ ಮುಖೇಶ್ ಅಂಬಾನಿ ಅವರ ಮುಂಬೈಯಲ್ಲಿರುವ ಆಂಟಿಲಿಯಾ ನಿವಾಸದ ಹೊರಗೆ 20 ಸ್ಫೋಟಕ ಜಿಲೆಟಿನ್ ಸ್ಟಿಕ್‌ಗಳು ಹಾಗೂ ಬೆದರಿಕೆ ಪತ್ರವಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಮುಂಬೈಯ ಅಪರಾಧ ಗುಪ್ತಚರ ಘಟಕ ಸೇರಿದಂತೆ ಹಲವಾರು ಪೊಲೀಸರು ತನಿಖೆಗಾಗಿ ಸ್ಥಳಕ್ಕೆ ಆಗಮಿಸಿದ್ದರು. ಇದನ್ನೂ ಓದಿ: ಭೂಮಿಯಿಂದ 30 ಕಿ.ಮೀ ಎತ್ತರದಲ್ಲಿ ಹಾರಾಡಿತು ರಾಷ್ಟ್ರಧ್ವಜ

    ಕೆಲವು ದಿನಗಳ ಬಳಿಕ ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರೇನ್ ನಿಗೂಢವಾಗಿ ಸಾವನ್ನಪ್ಪಿದ್ದು ತಿಳಿದುಬಂದಿತ್ತು. ಬಳಿಕ ಅಂಬಾನಿಯವರ ಮನೆ ಎದುರು ಪತ್ತೆಯಾಗಿದ್ದ ಸ್ಕಾರ್ಪಿಯೋ ಕಾರು ಹಿರೇನ್ ಅವರದ್ದೇ ಎಂಬುದು ತನಿಖೆಯಲ್ಲಿ ಬಯಲಾಗಿತ್ತು. ಘಟನೆಗೂ ಒಂದು ವಾರದ ಮುನ್ನ ಹಿರೇನ್ ತಮ್ಮ ಕಾರು ಕಳ್ಳತನವಾಗಿದ್ದರ ಬಗ್ಗೆ ದೂರು ನೀಡಿದ್ದರು. ಕಳೆದ ವರ್ಷ ಮಾರ್ಚ್ 5 ರಂದು ಥಾಣೆಯ ತೊರೆಯೊಂದರಲ್ಲಿ ಹಿರೇನ್ ಅವರ ಮೃತದೇಹ ಪತ್ತೆಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಕುಟುಂಬಕ್ಕೆ ಬೆದರಿಕೆ ಕರೆ!

    ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಕುಟುಂಬಕ್ಕೆ ಬೆದರಿಕೆ ಕರೆ!

    ಮುಂಬೈ: ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಹಾಗೂ ಅವರ ಕುಟುಂಬಕ್ಕೆ ಸೋಮವಾರ ಬೆದರಿಕೆ ಕರೆಗಳು ಬಂದಿವೆ. ರಿಲಯನ್ಸ್ ಫೌಂಡೇಶನ್ ಹರ್ಸ್ಕಿಸಂದಾಸ್ ಆಸ್ಪತ್ರೆಯ ದೂರವಾಣಿ ಸಂಖ್ಯೆಗೆ 3ಕ್ಕೂ ಹೆಚ್ಚು ಬಾರಿ ಕರೆಗಳು ಬಂದಿರುವುದಾಗಿ ವರದಿಯಾಗಿದೆ.

    ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹಾಗೂ ಅವರ ಕುಟುಂಬಕ್ಕೆ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ರಿಲಯನ್ಸ್ ಫೌಂಡೇಶನ್ ದೂರು ನೀಡಿದೆ. ಅವರ ಆಸ್ಪತ್ರೆಗೆ 3ಕ್ಕೂ ಹೆಚ್ಚು ಕರೆಗಳು ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಳನ್ನು ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ‍್ಯ ದಿನದಂದೇ ರೈತರ ಪ್ರತಿಭಟನೆ – ದರದರನೆ ಎಳೆದೊಯ್ದ ಪೊಲೀಸರು

    ಕಳೆದ ವರ್ಷ ಮುಖೇಶ್ ಅಂಬಾನಿ ಅವರ ಮುಂಬೈಯಲ್ಲಿರುವ ಆಂಟಿಲಿಯಾ ನಿವಾಸದ ಹೊರಗೆ 20 ಸ್ಫೋಟಕ ಜಿಲೆಟಿನ್ ಸ್ಟಿಕ್‌ಗಳು ಹಾಗೂ ಬೆದರಿಕೆ ಪತ್ರವಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಮುಂಬೈಯ ಅಪರಾಧ ಗುಪ್ತಚರ ಘಟಕ ಸೇರಿದಂತೆ ಹಲವಾರು ಪೊಲೀಸರು ತನಿಖೆಗಾಗಿ ಸ್ಥಳಕ್ಕೆ ಆಗಮಿಸಿದ್ದರು. ಇದನ್ನೂ ಓದಿ: ಭೂಮಿಯಿಂದ 30 ಕಿ.ಮೀ ಎತ್ತರದಲ್ಲಿ ಹಾರಾಡಿತು ರಾಷ್ಟ್ರಧ್ವಜ

    ಕೆಲವು ದಿನಗಳ ಬಳಿಕ ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರೇನ್ ನಿಗೂಢವಾಗಿ ಸಾವನ್ನಪ್ಪಿದ್ದು ತಿಳಿದುಬಂದಿತ್ತು. ಬಳಿಕ ಅಂಬಾನಿಯವರ ಮನೆ ಎದುರು ಪತ್ತೆಯಾಗಿದ್ದ ಸ್ಕಾರ್ಪಿಯೋ ಕಾರು ಹಿರೇನ್ ಅವರದ್ದೇ ಎಂಬುದು ತನಿಖೆಯಲ್ಲಿ ಬಯಲಾಗಿತ್ತು. ಘಟನೆಗೂ ಒಂದು ವಾರದ ಮುನ್ನ ಹಿರೇನ್ ತಮ್ಮ ಕಾರು ಕಳ್ಳತನವಾಗಿದ್ದರ ಬಗ್ಗೆ ದೂರು ನೀಡಿದ್ದರು. ಕಳೆದ ವರ್ಷ ಮಾರ್ಚ್ 5 ರಂದು ಥಾಣೆಯ ತೊರೆಯೊಂದರಲ್ಲಿ ಹಿರೇನ್ ಅವರ ಮೃತದೇಹ ಪತ್ತೆಯಾಗಿತ್ತು.

    Live Tv

    [brid partner=56869869 player=32851 video=960834 autoplay=true]

  • ಉದ್ಯೋಗಿಗಳ ಬೆಸ್ಟ್‌ ಕಂಪನಿ ಔಟ್‌ – ಭಾರತದ ಯಾವ ಕಂಪನಿಗೆ ಎಷ್ಟನೇ ಸ್ಥಾನ?

    ಉದ್ಯೋಗಿಗಳ ಬೆಸ್ಟ್‌ ಕಂಪನಿ ಔಟ್‌ – ಭಾರತದ ಯಾವ ಕಂಪನಿಗೆ ಎಷ್ಟನೇ ಸ್ಥಾನ?

    ನವದೆಹಲಿ: ಉದ್ಯೋಗಿಗಳ ಬೆಸ್ಟ್‌ ಕಂಪನಿ ಪಟ್ಟಿಯಲ್ಲಿ ವಿಶ್ವದಲ್ಲೇ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ 52ನೇ ಸ್ಥಾನ ಪಡೆದಿದೆ.

    ಫೋರ್ಬ್ಸ್‌ ಮ್ಯಾಗಜಿನ್‌ ವಿಶ್ವದ 750 ಬೃಹತ್‌ ಕಂಪನಿಗಳ ಬಗ್ಗೆ ಅಧ್ಯಯನ ನಡೆಸಿ ಈ ರ‍್ಯಾಂಕ್ ನೀಡಿದೆ. ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಮೊದಲ ಸ್ಥಾನ ಪಡೆದರೆ ಅಮೆರಿಕದ ಐಬಿಎಂ ಎರಡನೇ ಸ್ಥಾನ ಪಡೆದಿದೆ.

    ಅಮೆರಿಕದ ಕಂಪನಿಗಳಾದ ಮೈಕ್ರೋಸಾಫ್ಟ್, ಅಮೆಜಾನ್, ಆಪಲ್, ಗೂಗಲ್‌ ಮಾತೃಸಂಸ್ಥೆ ಅಲ್ಫಾಬೆಟ್‌, ಡೆಲ್‌ ಅನುಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದಿದೆ. ಚೀನಾದ ಹುವಾವೇ 8ನೇ ಸ್ಥಾನ ಪಡೆದಿದೆ. ಫೇಸ್‌ಬುಕ್‌ 49ನೇ ಸ್ಥಾನ ಪಡೆದಿದೆ. ಇದನ್ನೂ ಓದಿ: ಆಪಲ್ ಉದ್ಯೋಗಿಗಳ ವಿರುದ್ಧ ಗರಂ – ಖಾರವಾದ ಪತ್ರ ಬರೆದು ಎಚ್ಚರಿಕೆ ನೀಡಿದ ಟಿಮ್ ಕುಕ್

    ಭಾರತದ ಕಂಪನಿಗಳಿಗೆ ಎಷ್ಟು ಸ್ಥಾನ?
    ರಿಲಯನ್ಸ್‌ ಇಂಡಸ್ಟ್ರೀಸ್‌ 52, ಐಸಿಐಸಿಐ ಬ್ಯಾಂಕ್‌ 65, ಎಚ್‌ಡಿಎಫ್‌ಸಿ 77, ಎಚ್‌ಸಿಎಲ್‌ ಟೆಕ್ನಾಲಜೀಸ್‌ 90, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ 119, ಲರ್ಸನ್‌ ಆಂಡ್‌ ಟ್ಯಾಬ್ರೋ 127, ಇಂಡಿಯನ್‌ ಬ್ಯಾಂಕ್‌ 314, ಕೋಟಕ್‌ ಮಹೀಂದ್ರಾ ಬ್ಯಾಂಕ್ 418, ಬ್ಯಾಂಕ್‌ ಆಫ್‌ ಇಂಡಿಯಾ 451, ಲೈಫ್‌ ಇನ್ಶುರೆನ್ಸ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ 504 ಸ್ಥಾನ ಪಡೆದಿದೆ.

    58 ದೇಶಗಳಲ್ಲಿ ಕೆಲಸ ಮಾಡುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸಂಸ್ಥೆಗಳ 1,50,000 ಉದ್ಯೋಗಿಗಳನ್ನು ಸಂದರ್ಶಿಸಿ ಫೋರ್ಬ್ಸ್‌ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.

  • ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ವಾರ್ಷಿಕ ಸಾಮಾನ್ಯ ಸಭೆ – ಶೇ. 34.8 ನಿವ್ವಳ ಲಾಭ ಹೆಚ್ಚಳ

    ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ವಾರ್ಷಿಕ ಸಾಮಾನ್ಯ ಸಭೆ – ಶೇ. 34.8 ನಿವ್ವಳ ಲಾಭ ಹೆಚ್ಚಳ

    – ಸಭೆಯಲ್ಲಿ ಹೊಸ ಯೋಜನೆಗಳ ಘೋಷಣೆ

    ಮುಂಬೈ: ಕೋವಿಡ್ ಸಂಕಷ್ಟದ ನಡುವೆಯೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಉತ್ತಮ ನಿರ್ವಹಣೆ ಪ್ರದರ್ಶಿಸಿದ್ದು, ಕಳೆದ ವರ್ಷದಲ್ಲಿ 540,000 ಕೋಟಿ ರೂ.ಗಳ ಒಟ್ಟು ಆದಾಯ ಗಳಿಸಿದೆ. ಬಡ್ಡಿ, ತೆರಿಗೆ, ಡಿಪ್ರಿಸಿಯೇಶನ್ ಹಾಗೂ ಅಮಾರ್ಟೈಸೇಶನ್‍ಗಳ ಮೊದಲಿನ ಆದಾಯವು (EBITDA) ಸುಮಾರು 98,000 ಕೋಟಿ ರೂ.ಗಳಷ್ಟಿದ್ದು, ಈ ಪೈಕಿ ಸುಮಾರು ಅರ್ಧದಷ್ಟು ಗ್ರಾಹಕ ವಹಿವಾಟುಗಳಿಂದಲೇ ಬಂದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್‍ನ ಮುಖ್ಯಸ್ಥ ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಇಂದು ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಳೆದ ವರ್ಷದಲ್ಲಿ 53,739 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದ್ದಾರೆ. ಇದು ಹಿಂದಿನ ವರ್ಷಕ್ಕಿಂತ ಶೇ. 34.8ರಷ್ಟು ಹೆಚ್ಚಾಗಿದೆ.

    ಸೌದಿ ಅರಾಮ್‍ಕೋ ಹಾಗೂ ಪಬ್ಲಿಕ್ ಇನ್‍ವೆಸ್ಟ್ ಮೆಂಟ್ ಫಂಡ್‍ನ ಮುಖ್ಯಸ್ಥ ಯಾಸಿರ್ ಅಲ್-ರುಮಯ್ಯನ್, ಸ್ವತಂತ್ರ ನಿರ್ದೇಶಕರಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‍ನ ನಿರ್ದೇಶಕ ಮಂಡಲಿಯನ್ನು ಸೇರಲಿದ್ದಾರೆ ಎಂದು ಮುಖೇಶ್ ಅಂಬಾನಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ನಿರ್ದೇಶಕ ಮಂಡಳಿಗೆ ಅವರ ಸೇರ್ಪಡೆ, ರಿಲಯನ್ಸ್ ನ ಅಂತಾರಾಷ್ಟ್ರೀಕರಣದ ಪ್ರಾರಂಭದ ದ್ಯೋತಕವೂ ಆಗಿದೆ ಎಂದು ಅವರು ಹೇಳಿದ್ದಾರೆ.

    ‘ಜಿಯೋಫೋನ್ ನೆಕ್ಸ್ಟ್’
    ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ 4G ಬ್ರಾಡ್‍ಬ್ಯಾಂಡ್ ಸೇವೆಗಳನ್ನು ಒದಗಿಸುವ ಮೂಲಕ ಭಾರತದಲ್ಲಿ ಡಿಜಿಟಲ್ ಸಂಪರ್ಕ ಕ್ರಾಂತಿಯನ್ನೇ ಉಂಟುಮಾಡಿರುವ ಜಿಯೋ, ಇದೀಗ ಭಾರತವನ್ನು ‘2G-ಮುಕ್ತ’ವಾಗಿಸುವ ಉದ್ದೇಶದೊಂದಿಗೆ ಕೈಗೆಟುಕುವ ಬೆಲೆಯ 4G ಸ್ಮಾರ್ಟ್ ಫೋನ್ ಅನ್ನು ಪರಿಚಯಿಸುತ್ತಿದೆ. ‘ಜಿಯೋಫೋನ್ ನೆಕ್ಸ್ಟ್’ ಎಂಬ ಹೆಸರಿನ ಈ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅನ್ನು ಜಿಯೋ ಹಾಗೂ ಗೂಗಲ್ ತಂಡಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಸೆಪ್ಟೆಂಬರ್ 10ರ ಗಣೇಶ ಚತುರ್ಥಿಯ ದಿನದಿಂದ ಅದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ವಾಯ್ಸ್ ಅಸಿಸ್ಟೆಂಟ್, ಪರದೆಯ ಮೇಲಿನ ಪಠ್ಯವನ್ನು ಓದಿ ಹೇಳುವ ಸೌಲಭ್ಯ, ಅನುವಾದ ಸೌಲಭ್ಯ, ಆಗ್ಮೆಂಟೆಡ್ ರಿಯಾಲಿಟಿ ಫಿಲ್ಟರ್ ಗಳಿರುವ ಸ್ಮಾರ್ಟ್ ಕ್ಯಾಮೆರಾ ಸೇರಿದಂತೆ ಈ ಸ್ಮಾರ್ಟ್‍ಫೋನಿನಲ್ಲಿ ಅನೇಕ ವಿಶಿಷ್ಟ ಸೌಲಭ್ಯಗಳಿರಲಿದ್ದು, ಗೂಗಲ್ ಹಾಗೂ ಜಿಯೋ ಆಪ್‍ಗಳಷ್ಟೇ ಅಲ್ಲದೆ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿರುವ ಆಪ್ ಗಳನ್ನೂ ಬಳಸುವುದು ಸಾಧ್ಯವಾಗಲಿದೆ. ಇದು ಭಾರತದಲ್ಲಿ ಮಾತ್ರವೇ ಅಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಆಗಿರಲಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಗೂಗಲ್ ಸಿಇಒ ಸುಂದರ್ ಪಿಚೈ, “ಈ ಸ್ಮಾರ್ಟ್‍ಫೋನ್ ಅನ್ನು ಭಾರತಕ್ಕೆಂದೇ ನಿರ್ಮಿಸಲಾಗಿದ್ದು, ಮೊತ್ತಮೊದಲ ಬಾರಿಗೆ ಅಂತರಜಾಲ ಬಳಸುವ ಲಕ್ಷಾಂತರ ಹೊಸ ಬಳಕೆದಾರರಿಗೆ ಅದು ಹೊಸ ಸಾಧ್ಯತೆಗಳನ್ನು ತೆರೆದಿಡಲಿದೆ” ಎಂದು ಹೇಳಿದ್ದಾರೆ.

    2G-ಮುಕ್ತ, 5G-ಯುಕ್ತ ಭಾರತದತ್ತ
    ದೇಶೀಯ ನಿರ್ಮಿತ 5G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಯೋ ಗಮನಾರ್ಹ ಸಾಧನೆಗಳನ್ನು ಮಾಡಿದ್ದು, ಪರೀಕ್ಷಾರ್ಥ ಚಟುವಟಿಕೆಗಳು ಮುಂದುವರೆದಿವೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಶಿಕ್ಷಣ, ಆರೋಗ್ಯ ರಕ್ಷಣೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ 5ಉ ತಂತ್ರಜ್ಞಾನದ ಬಳಕೆಯನ್ನು ಪರೀಕ್ಷಿಸಲಾಗುತ್ತಿದ್ದು, ಭಾರತ ಶೀಘ್ರವೇ ‘2ಉ-ಮುಕ್ತ’ವಾಗುವುದರ ಜೊತೆಗೆ ‘5G-ಯುಕ್ತ’ವೂ ಆಗುತ್ತದೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಭಾರತದಾದ್ಯಂತ 5G ಪರಿಚಯಿಸುವುದರ ಜೊತೆಗೆ ನಮ್ಮ ತಂತ್ರಜ್ಞಾನವನ್ನು ಇನ್ನಿತರ ದೇಶಗಳೂ ಬಳಸಲಿವೆ ಎಂದು ಅವರು ಹೇಳಿದ್ದಾರೆ.

    ದೇಶದೆಲ್ಲೆಡೆ 5G ಅನುಷ್ಠಾನಕ್ಕಾಗಿ ಜಿಯೋ ಹಾಗೂ ಗೂಗಲ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಜಿಯೋದ 5G ಜಾಲ ಹಾಗೂ ಸೇವೆಗಳು ಗೂಗಲ್ ಕ್ಲೌಡ್ ವೇದಿಕೆಯನ್ನು ಬಳಸಿಕೊಳ್ಳಲಿವೆ. ಈ ಒಪ್ಪಂದದ ಅಂಗವಾಗಿ ರಿಲಯನ್ಸ್ ನ ರೀಟೇಲ್ ವಹಿವಾಟು ಗೂಗಲ್ ಕ್ಲೌಡ್ ಅನ್ನು ವ್ಯಾಪಕವಾಗಿ ಬಳಸಲಿದೆ.

    ಗೂಗಲ್ ಮಾತ್ರವೇ ಅಲ್ಲದೆ ಫೇಸ್‍ಬುಕ್ ಹಾಗೂ ಮೈಕ್ರೋಸಾಫ್ಟ್ ಸಂಸ್ಥೆಗಳ ಜೊತೆಗೂ ರಿಲಯನ್ಸ್ ಸಹಭಾಗಿತ್ವ ಮುಂದುವರಿದಿದೆ. ಜಿಯೋಮಾರ್ಟ್ ಸೇವೆಗಳನ್ನು ವಾಟ್ಸಪ್ ಮೂಲಕ ಒದಗಿಸುವ ಪ್ರಯೋಗ ಮುಂದುವರೆದಿದ್ದು, ಇದಕ್ಕೆ ಜಿಯೋಮಾರ್ಟ್ ಹಾಗೂ ವಾಟ್ಸಪ್ ಎರಡೂ ಸೌಲಭ್ಯಗಳ ಗ್ರಾಹಕರಿಂದ ದೊರೆತಿರುವ ಆರಂಭಿಕ ಪ್ರತಿಕ್ರಿಯೆ ಉತ್ತಮವಾಗಿದೆಯೆಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಜಾಮನಗರ ಹಾಗೂ ನಾಗಪುರಗಳಲ್ಲಿ ಮೈಕ್ರೋಸಾಫ್ಟ್ ಸಹಯೋಗದೊಂದಿಗೆ ಎರಡು ಜಿಯೋ-a ರ್ ಕ್ಲೌಡ್ ಡೇಟಾ ಸೆಂಟರುಗಳನ್ನು ಕಾರ್ಯರಂಭಗೊಳಿಸಿರುವುದಾಗಿಯೂ ಅವರು ಹೇಳಿದ್ದಾರೆ.

    ಇದೇ ಸಂದರ್ಭದಲ್ಲಿ ಜಿಯೋಫೈಬರ್ ಕುರಿತು ಮಾತನಾಡಿದ ಮುಖೇಶ್ ಅಂಬಾನಿ, ಕಳೆದ ಒಂದು ವರ್ಷದಲ್ಲಿ ಅದು ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಹೊಸ ತಾಣಗಳಲ್ಲಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಮೂವತ್ತು ಲಕ್ಷಕ್ಕೂ ಹೆಚ್ಚಿನ ಬಳಕೆದಾರರೊಂದಿಗೆ, ಜಿಯೋಫೈಬರ್ ಭಾರತದ ಅತಿದೊಡ್ಡ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಫಿಕ್ಸೆಡ್ ಬ್ರಾಡ್‍ಬ್ಯಾಂಡ್ ಸೇವಾದಾರ ಸಂಸ್ಥೆಯಾಗಿ ರೂಪುಗೊಂಡಿದೆ ಎಂದು ಅವರು ಹೇಳಿದ್ದಾರೆ.

    ‘ಕಾರ್ಬನ್ ಜೀರೋ’ ಸಾಧನೆ
    2035ರ ವೇಳೆಗೆ ನಿವ್ವಳ ‘ಕಾರ್ಬನ್ ಜೀರೋ’ ಸಾಧನೆ ಮಾಡುವ ನಿಟ್ಟಿನಲ್ಲಿ ರಿಲಯನ್ಸ್ ಸಂಸ್ಥೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಪ್ರಕಟಿಸಿದೆ. ರಿಲಯನ್ಸ್ ನ ಈಗಿನ ವಹಿವಾಟಿನ ಆರಂಭಿಕ ಕೇಂದ್ರವಾಗಿದ್ದ ಜಾಮನಗರದಲ್ಲಿ 5,000 ಎಕರೆ ವಿಸ್ತೀರ್ಣದ ‘ಧೀರೂಭಾಯಿ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್’ ಅನ್ನು ಪ್ರಾರಂಭಿಸುವ ಮೂಲಕ ಅದನ್ನು ತಮ್ಮ ಹೊಸ ವಹಿವಾಟಿನ ಕೇಂದ್ರವನ್ನಾಗಿಯೂ ಮಾಡಿಕೊಳ್ಳುವುದಾಗಿ ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಸೌರಶಕ್ತಿಯ ಉತ್ಪಾದನೆ ಮತ್ತು ಶೇಖರಣೆ ಹಾಗೂ ಪರಿಸರ ಸ್ನೇಹಿ ಹೈಡ್ರೋಜನ್ ಉತ್ಪಾದನೆ ಮತ್ತು ಇಂಧನ ರೂಪಕ್ಕೆ ಪರಿವರ್ತನೆಗಾಗಿ ಒಟ್ಟು ನಾಲ್ಕು ಬೃಹತ್ ಕಾರ್ಖಾನೆಗಳನ್ನು ರಿಲಯನ್ಸ್ ಸ್ಥಾಪಿಸಲಿದೆ. ಈ ಉದ್ದೇಶಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 60,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಬಂಡವಾಳ ಹೂಡಲಿರುವುದಾಗಿ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. 2030ರ ವೇಳೆಗೆ ಕನಿಷ್ಠ 100 ಗಿಗಾವ್ಯಾಟ್‍ನಷ್ಟು ಸೌರ ವಿದ್ಯುತ್ ಉತ್ಪಾದನೆಯನ್ನು ರಿಲಯನ್ಸ್ ಸಾಧ್ಯವಾಗಿಸಲಿದೆ ಎಂದು ಅವರು ಹೇಳಿದ್ದಾರೆ.

    ಹೊಸ ಮಟೀರಿಯಲ್‍ಗಳು ಹಾಗೂ ಪರಿಸರ ಸ್ನೇಹಿ ರಾಸಾಯನಿಕಗಳನ್ನು ಉತ್ಪಾದಿಸುವ ನಿಟ್ಟಿನಲ್ಲೂ ರಿಲಯನ್ಸ್ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಕಾರ್ಯಕ್ರಮಗಳ ಅಂಗವಾಗಿ ಭಾರತದ ಮೊತ್ತಮೊದಲ ವಿಶ್ವದರ್ಜೆಯ ಕಾರ್ಬನ್ ಫೈಬರ್ ಘಟಕದಲ್ಲಿ ಹೂಡಿಕೆ ಮಾಡುತ್ತಿರುವುದಾಗಿ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. ತಮ್ಮ ಹೊಸ ಯೋಜನೆಗಳ ಮೂಲಕ ರಿಲಯನ್ಸ್‍ನ ಸಾಂಪ್ರದಾಯಿಕ ಇಂಧನಗಳ ವಹಿವಾಟನ್ನು ತಾಳಿಕೆಯ, ಸಕ್ರ್ಯುಲರ್ ಮತ್ತು ನಿವ್ವಳ ಜೀರೋ ಕಾರ್ಬನ್ ಮಟೀರಿಯಲ್‍ಗಳ ವಹಿವಾಟಾಗಿ ಬದಲಿಸುವುದಾಗಿ ಅವರು ತಿಳಿಸಿದ್ದಾರೆ. ಇದು ನಮಗೆ ಕೇವಲ ಹೊಸದೊಂದು ವಹಿವಾಟು ಮಾತ್ರವೇ ಅಲ್ಲ, ಇದು ಪರಿಸರಕ್ಕೆ ಉಂಟಾಗಿರುವ ಹಾನಿಯನ್ನು ಗುಣಪಡಿಸುವ ತಮ್ಮ ಉದ್ದಿಷ್ಟಕಾರ್ಯ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.

    ರಿಲಯನ್ಸ್ ರೀಟೇಲ್ ಸಾಧನೆ
    ಕಳೆದ ವರ್ಷದಲ್ಲಿ 1,500 ಹೊಸ ಮಳಿಗೆಗಳ ಸೇರ್ಪಡೆಯೊಂದಿಗೆ, ಇದೀಗ ಭಾರತದ ಪ್ರತಿ ಎಂಟು ಗ್ರಾಹಕರಲ್ಲಿ ಒಬ್ಬರು ರಿಲಯನ್ಸ್ ರೀಟೇಲ್ ನೊಂದಿಗೆ ವ್ಯವಹರಿಸುತ್ತಿದ್ದಾರೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ರಿಲಯನ್ಸ್ ರೀಟೇಲ್ ಗಮನಾರ್ಹ ಸಾಧನೆ ತೋರಿದ್ದು, 65,000ಕ್ಕೂ ಹೆಚ್ಚಿನ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಜಿಯೋಮಾರ್ಟ್ ಸೇವೆಗಳಿಗೂ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಒಂದೇ ದಿನದಲ್ಲಿ 6.5 ಲಕ್ಷ ಆರ್ಡರುಗಳನ್ನು ದಾಖಲಿಸುವ ಮೂಲಕ ಅದು ದಾಖಲೆ ನಿರ್ಮಿಸಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.

    ರಿಲಯನ್ಸ್ ಸಹಾಯಹಸ್ತ
    ಕೋವಿಡ್ ಜಾಗತಿಕ ಸೋಂಕಿನ ಸಂದರ್ಭದಲ್ಲಿ ಇಡೀ ರಿಲಯನ್ಸ್ ಕುಟುಂಬ ಒಟ್ಟಾಗಿ ನಿಂತು ರಾಷ್ಟ್ರೀಯ ಕರ್ತವ್ಯಗಳನ್ನು ನಿಭಾಯಿಸಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ರಿಲಯನ್ಸ್ ಪ್ರಾರಂಭಿಸಿದ ಐದು ಉದ್ದಿಷ್ಟ ಕಾರ್ಯಗಳ ಬಗ್ಗೆ ಮಾತನಾಡಿದ ನೀತಾ ಅಂಬಾನಿ, ಆಕ್ಸಿಜನ್ ತಯಾರಿಕೆ ಹಾಗೂ ಪೂರೈಕೆ, ಕೋವಿಡ್ ಮೂಲಸೌಕರ್ಯ ಸೃಷ್ಟಿ, ಆಹಾರ ವಿತರಣೆ, ಉದ್ಯೋಗಿಗಳ ರಕ್ಷಣೆ ಹಾಗೂ ಲಸಿಕೆ ನೀಡುವ ನಿಟ್ಟಿನಲ್ಲಿ ರಿಲಯನ್ಸ್‍ನ ಸಾಧನೆಗಳನ್ನು ವಿವರಿಸಿದರು. ಎಂದೂ ಮೆಡಿಕಲ್ ದರ್ಜೆಯ ಆಕ್ಸಿಜನ್ ಉತ್ಪಾದನೆ ಮಾಡಿಲ್ಲದಿದ್ದ ರಿಲಯನ್ಸ್ ಸಂಸ್ಥೆ ಇದೀಗ ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟಾರೆ ಆಕ್ಸಿಜನ್ ಪ್ರಮಾಣದ ಶೇ. 11ಕ್ಕೂ ಹೆಚ್ಚಿನ ಪಾಲನ್ನು ತಯಾರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈವರೆಗೆ 7.5 ಕೋಟಿಗೂ ಹೆಚ್ಚಿನ ಆಹಾರ ಪೊಟ್ಟಣಗಳನ್ನು ವಿತರಿಸಿರುವ ರಿಲಯನ್ಸ್‍ನ ‘ಮಿಶನ್ ಅನ್ನ ಸೇವಾ’ ಕಾರ್ಪೊರೇಟ್ ಪ್ರತಿಷ್ಠಾನವೊಂದು ಕೈಗೊಂಡ ವಿಶ್ವದ ಅತಿದೊಡ್ಡ ಆಹಾರ ವಿತರಣಾ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.

  • ಕೋವಿಡ್‍ನಿಂದ ಮೃತಪಟ್ಟರೆ 5 ವರ್ಷದವರೆಗೆ ಕುಟುಂಬಕ್ಕೆ ಸಿಗಲಿದೆ ಉದ್ಯೋಗಿಯ ಸಂಬಳ – ರಿಲಯನ್ಸ್ ಘೋಷಣೆ

    ಕೋವಿಡ್‍ನಿಂದ ಮೃತಪಟ್ಟರೆ 5 ವರ್ಷದವರೆಗೆ ಕುಟುಂಬಕ್ಕೆ ಸಿಗಲಿದೆ ಉದ್ಯೋಗಿಯ ಸಂಬಳ – ರಿಲಯನ್ಸ್ ಘೋಷಣೆ

    ಮುಂಬೈ: ಕೋವಿಡ್ 19 ನಿಂದ ಮೃತರಾದ ಸಿಬ್ಬಂದಿಯ ಕುಟುಂಬಕ್ಕೆ ಸಹಾಯ ಮಾಡಲು ರಿಲಯನ್ಸ್ ಇಂಡಸ್ಟ್ರೀಸ್ ಮುಂದಾಗಿದೆ. ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಉದ್ಯೋಗಿಗಳಿಗೆ ಪತ್ರ ಬರೆದು ಆತ್ಮಸ್ಪೈರ್ಯ ತುಂಬಿದ್ದಾರೆ.

    ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ವ್ಯಕ್ತಿ ಕೋವಿಡ್‍ನಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ 10 ಲಕ್ಷ ರೂ ನೀಡಲು ರಿಲಯನ್ಸ್ ನಿರ್ಧರಿಸಿದೆ. ಸಾವನ್ನಪ್ಪಿದ ಉದ್ಯೋಗಿಯ ನಾಮಿನಿಗೆ 10 ಲಕ್ಷ ಹಣವನ್ನು ನೇರವಾಗಿ ಪಾವತಿಸಿ ಅವರ ಕುಟುಂಬಕ್ಕೆ ಧೈರ್ಯ ತುಂಬಲಿದೆ ಎಂದು ನೀತಾ ಅಂಬಾನಿ ತಿಳಿಸಿದ್ದಾರೆ.

    ಪತ್ರದಲ್ಲಿ ಏನಿದೆ?
    ಸಾವನ್ನಪ್ಪಿದ ಉದ್ಯೋಗಿಯ ಕೊನೆಯದಾಗಿ ಪಡೆದ ವೇತನವನ್ನು ಐದು ವರ್ಷಗಳ ಕಾಲ ಕುಟುಂಬಕ್ಕೆ ನೀಡಲಾಗುವುದು. ಇದನ್ನೂ ಓದಿ: ರೈತರೊಂದಿಗೆ ರಿಲಯನ್ಸ್ ಒಪ್ಪಂದ- ಎಂಎಸ್‌ಪಿಗಿಂತ ಹೆಚ್ಚಿನ ದರ

    ಸಾವನ್ನಪ್ಪಿದ ಕುಟುಂಬದ ಮಕ್ಕಳು ದೇಶದಲ್ಲಿ ಎಲ್ಲೇ ಓದಿದರೂ ಅವರು ಡಿಗ್ರಿ ಪದವಿವರೆಗಿನ ಟ್ಯೂಷನ್ ಫೀಸ್, ಹಾಸ್ಟೆಲ್ ವ್ಯವಸ್ಥೆ, ಬುಕ್ ಫೀಸ್‍ಗಳನ್ನು ಸಂಪೂರ್ಣವಾಗಿ ಕಂಪನಿಯೇ ಪಾವತಿಸಲಿದೆ.

    ಮಕ್ಕಳು ಪದವಿ ಪಡೆಯುವವರೆಗೂ ಕುಟುಂಬದ ಪೋಷಕರು, ಹೆಂಡತಿ ಅಥವಾ ಗಂಡ ಹಾಗೂ ಮಕ್ಕಳ ಆರೋಗ್ಯ ವಿಮೆಯನ್ನು ಶೇ.100ರವರೆಗೆ ಭರಿಸಲಾಗುವುದು.

    ರಿಲಯನ್ಸ್ ಸಂಸ್ಥೆಗೆ ನಮ್ಮ ಸಹೋದ್ಯೋಗಿಗಳ ಕೊಡುಗೆ ಅಪಾರವಾಗಿದೆ. ಈಗಾಗಲೇ ಉದ್ಯೋಗಿಗಳಿಗೆ ಉಚಿತ ಲಸಿಕೆ ಅಭಿಯಾನ ನಡೆಸಲಾಗಿದೆ. ಎಲ್ಲರೂ ಒಟ್ಟಾಗಿ ಕೊರೊನಾ ವಿರುದ್ಧ ಹೋರಾಡೋಣ. ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಿ.

  • ಗುಜರಾತಿನಲ್ಲಿ ವಿಶ್ವದ ಅತಿ ದೊಡ್ಡ ಮೃಗಾಲಯ ನಿರ್ಮಾಣಕ್ಕೆ ಮುಂದಾದ ರಿಲಯನ್ಸ್‌

    ಗುಜರಾತಿನಲ್ಲಿ ವಿಶ್ವದ ಅತಿ ದೊಡ್ಡ ಮೃಗಾಲಯ ನಿರ್ಮಾಣಕ್ಕೆ ಮುಂದಾದ ರಿಲಯನ್ಸ್‌

    ನವದೆಹಲಿ: ಗುಜರಾತಿನ ಜಾಮ್‌ನಗರದಲ್ಲಿ ವಿಶ್ವದ ಅತಿ ದೊಡ್ಡ ಮೃಗಾಲಯ ನಿರ್ಮಾಣಕ್ಕೆ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಂದಾಗಿದೆ.

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಗೆ ಅನುಮತಿ ನೀಡಿದ್ದು 280 ಎಕ್ರೆ ಭೂಮಿಯಲ್ಲಿ ಮೃಗಾಲಯ ನಿರ್ಮಾಣವಾಗಲಿದೆ. ಕೋವಿಡ್‌ 19 ಹಿನ್ನೆಲೆಯಲ್ಲಿ ಈ ಯೋಜನೆ ಆರಂಭ ತಡವಾಗಿದ್ದು 2 ವರ್ಷದಲ್ಲಿ ಪೂರ್ಣಗೊಳ್ಳಲಿದೆ.

    ಆರ್‌ಐಎಲ್‌ನ ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕ ಪರ್ಮಿಲ್ ನಾಥ್ವಾನಿ ಪ್ರತಿಕ್ರಿಯಿಸಿ, ನಾವು ಈ ಯೋಜನೆಯ ಕೆಲಸಗಳನ್ನು ಪ್ರಾರಂಭಿಸಿದ್ದೇವೆ. ಈ ಮೃಗಾಲಯವು ವಿಶ್ವದ ಅತಿದೊಡ್ಡ ಮೃಗಾಲಯವಾಗಲಿದೆ. ಸಿಂಗಾಪುರದಲ್ಲಿ ಇರುವ ಮೃಗಾಲಯಕ್ಕಿಂತಲೂ ಈ ಮೃಗಾಲಯ ದೊಡ್ಡದಿರಲಿದೆ ಎಂದು ಹೇಳಿದ್ದಾರೆ.

     

    ಜಾಮ್‌ ನಗರದಲ್ಲಿ ಈಗಾಗಲೇ ರಿಲಯನ್ಸ್‌ ತೈಲ ಸಂಸ್ಕರಣ ಘಟಕವಿದೆ. ಈ ಘಟಕದ ಸಮೀಪ ಇರುವ ಮೋತಿ ಖಾವ್ಡಿ ಎಂಬಲ್ಲಿ ಈ ಮೃಗಾಲಯ ನಿರ್ಮಾಣವಾಗಲಿದೆ.

    ಪ್ರವಾಸೋದ್ಯಮದ ಮೂಲಕ ಅದಾಯ ಮತ್ತು ಉದ್ಯೋಗವಕಾಶ ಸೃಷ್ಟಿಗೆ ಗುಜರಾತ್‌ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ವಿಶ್ವದ ಅತಿ ಎತ್ತರದ ಏಕತಾ ಪ್ರತಿಮೆ ನಿರ್ಮಾಣವಾಗಿದೆ. ಈಗ ವಿಶ್ವದ ಅತಿ ದೊಡ್ಡ ಮೃಗಾಲಯ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ರಿಲಯನ್ಸ್ – ಒಂದು ಒಪ್ಪಂದ, ಒಂದು ಹೇಳಿಕೆಯಿಂದ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ.ಗೆ ಏರಿಕೆ

  • ಮುಕೇಶ್‌ ಅಂಬಾನಿಯಿಂದ ಬಿಗ್‌ ಬಜಾರ್‌ ಶಾಪಿಂಗ್‌ – ರಿಲಯನ್ಸ್‌ ಪ್ಲ್ಯಾನ್‌ ಏನು?

    ಮುಕೇಶ್‌ ಅಂಬಾನಿಯಿಂದ ಬಿಗ್‌ ಬಜಾರ್‌ ಶಾಪಿಂಗ್‌ – ರಿಲಯನ್ಸ್‌ ಪ್ಲ್ಯಾನ್‌ ಏನು?

    ಮುಂಬೈ: ಫೇಸ್‌ಬುಕ್‌ ಜೊತೆ ಸೇರಿ ಕಿರಾಣಿ ಉದ್ಯಮಗಳಿಗೆ ಸಹಾಯ ಮಾಡಲು ಜಿಯೋ ಮಾರ್ಟ್‌ ತೆರೆದಿದ್ದ ಮುಕೇಶ್‌ ಅಂಬಾನಿ ಈಗ ಸೂಪರ್‌ ಮಾರ್ಕೆಟ್‌ ಕಂಪನಿ ಬಿಗ್‌ ಬಜಾರ್‌ ಅನ್ನೇ ಶಾಪಿಂಗ್‌ ಮಾಡಿದ್ದಾರೆ.

    ರಿಲಯನ್ಸ್‌ ಇಂಡಸ್ಟ್ರೀಸ್‌ ಬಿಗ್‌ ಬಜಾರ್‌ ಮಾಲೀಕತ್ವ ಹೊಂದಿರುವ ಫ್ಯೂಚರ್‌ ಗ್ರೂಪ್‌ ಅನ್ನು 24,713 ಕೋಟಿ ರೂ.ಗಳಿಗೆ ಖರೀದಿಸಿದೆ. ಫ್ಯೂಚರ್‌ ಗ್ರೂಪ್‌ ತನ್ನ ಐದು ಕಂಪನಿಗಳನ್ನು ಒಟ್ಟು ಸೇರಿಸಿ ‘ಫ್ಯೂಚರ್‌ ಎಂಟರ್‌ಪ್ರೈಸಸ್‌’ ಹೆಸರಿನಲ್ಲಿ ರಿಲಯನ್ಸ್‌ಗೆ ಮಾರಾಟ ಮಾಡಿದೆ. ಇದನ್ನೂ ಓದಿ: ಫೇಸ್‌ಬುಕ್‌ ಬಳಿಕ ಜಿಯೋದಲ್ಲಿ ಭಾರೀ ಹೂಡಿಕೆ ಮಾಡಲಿದೆ ಗೂಗಲ್‌

    ಕಿಶೋರ್‌ ಬಿಯಾನಿ ಮಾಲಿಕತ್ವದ ಫ್ಯೂಚರ್‌ ಗ್ರೂಪ್‌ ಬಿಗ್‌ ಬಜಾರ್‌, ಫುಡ್‌ ಬಜಾರ್‌, ಲೈಫ್‌ಸ್ಟೈಲ್‌ ಸ್ಟೋರ್‌ಗಳನ್ನು ಒಳಗೊಂಡಿದೆ. ಫ್ಯೂಚರ್‌ ಗ್ರೂಪ್‌ ಬ್ರ್ಯಾಂಡ್‌ ಫ್ಯಾಕ್ಟರಿ, ನೀಲಗಿರೀಸ್‌, ಎಫ್‌ಬಿಬಿ, ಸೆಂಟ್ರಲ್‌, ಈಸಿಡೇನಂಥ ಮಳಿಗೆಗಳು, ಲೀ ಕೂಪರ್‌, ಹೆರಿಟೇಜ್‌ ಫ್ರೆಷ್‌, ಗೋಲ್ಡನ್‌ ಹಾರ್ವೆಸ್ಟ್‌, ಡಿಜೆ & ಜಿ, ಕೊರ್ಯೋ ಮೊದಲಾದ ಬ್ರ್ಯಾಂಡ್‌ಗಳನ್ನು ಹೊಂದಿದೆ. ಇನ್ನು ಮುಂದೆ ಇವುಗಳೆಲ್ಲ ರಿಲಯನ್ಸ್‌ ಇಂಡಸ್ಟ್ರೀಸ್‌ ಒಡೆತನಕ್ಕೆ ಸೇರಲಿವೆ. ಇದನ್ನೂ ಓದಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ವಿಶ್ವದ ನಂ.2 ಇಂಧನ ಕಂಪನಿ

    ಫ್ಯೂಚರ್‌ ಗ್ರೂಪ್‌ನ ಸಾಲ ಪಾವತಿಗೆ ರಿಲಯನ್ಸ್‌ 13 ಸಾವಿರ ಕೋಟಿ ರೂಪಾಯಿ ನೀಡಲಿದ್ದರೆ, ಬಾಕಿ ಪಾವತಿಗೆ 7 ಸಾವಿರ ಕೋಟಿ ರೂಪಾಯಿ ನೀಡಲಿದೆ. ದೇಶದ ಒಟ್ಟು 420 ನಗರಗಳಲ್ಲಿ ಬಿಗ್‌ ಬಜಾರ್‌ ಮಳಿಗೆಗಳನ್ನು ತೆರೆದಿದೆ. ಫ್ಯೂಚರ್‌ ಗ್ರೂಪ್‌ ಖರೀದಿಯೊಂದಿಗೆ ರಿಲಯನ್ಸ್‌ ತೆಕ್ಕೆಗೆ ಒಟ್ಟು 1,800 ಮಳಿಗೆಗಳು ಸಿಗಲಿವೆ.

    ಮಾರಾಟ ಮಾಡಿದ್ದು ಯಾಕೆ?
    2001ರಲ್ಲಿ ಮೊದಲ ಬಿಗ್‌ ಬಜಾರ್‌ ಮಳಿಗೆ ಸ್ಥಾಪನೆಗೊಂಡಿತ್ತು. 2007ರಲ್ಲಿ ಫ್ಯೂಚರ್‌ ಗ್ರೂಪ್‌ ವಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿತ್ತು. ಈ ಸಂದರ್ಭದಲ್ಲಿ ವಿಶ್ವದಲ್ಲಿ ಆರ್ಥಿಕ ಕುಸಿತ ಸಂಭವಿಸಿತ್ತು. ಇದರಿಂದಾಗಿ ಫ್ಯೂಚರ್‌ ಗ್ರೂಪ್‌ಗೆ ಮೊದಲ ಪೆಟ್ಟು ಬಿದ್ದಿತ್ತು. ಇದಾದ ನಂತರ ಭಾರತದಲ್ಲಿನ ಆನ್‌ಲೈನ್‌ ಶಾಪಿಂಗ್‌ ಮಾರುಕಟ್ಟೆ ಬೆಳವಣಿಗೆ ಭಾರೀ ಹೊಡೆತ ನೀಡಿತು. ಇದರಿಂದಾಗಿ ಕಂಪನಿಯ ಸಾಲ ಏರತೊಡಗಿತು. ಈ ವರ್ಷ ಕೋವಿಡ್‌ 19ನಿಂದ ಮತ್ತಷ್ಟು ಸಂಕಷ್ಟಕ್ಕೆ ಈಡಾಗಿತ್ತು. ಈ ಕಾರಣಕ್ಕೆ ಕಿಶೋರ್‌ ಬಿಯಾನಿ ಫ್ಯೂಚರ್‌ ಗ್ರೂಪ್‌ ಅನ್ನೇ ಮಾರಾಟ ಮಾಡಿದ್ದಾರೆ.

    ರೇಟಿಂಗ್ ಏಜೆನ್ಸಿ ಐಸಿಆರ್‌ಎ(ಕ್ರೇಡಿಟ್‌ ರೇಟಿಂಗ್‌ ಏಜೆನ್ಸಿ ಆಫ್‌ ಇಂಡಿಯಾ) ಪ್ರಕಾರ, ಫ್ಯೂಚರ್ ಗ್ರೂಪ್‌ ಕಂಪನಿಗಳ ಸಾಲವು 2019ರ ಮಾರ್ಚ್‌ ವೇಳೆಗೆ 10,951 ಕೋಟಿ ರೂ. ಇದ್ದರೆ 2019 ರ ಸೆಪ್ಟೆಂಬರ್ 30 ರ ವೇಳೆಗೆ 12,778 ಕೋಟಿ ರೂ.ಗೆ ಏರಿಕೆ ಆಗಿತ್ತು.

    ಮುಕೇಶ್‌ ಅಂಬಾನಿ ಪ್ಲಾನ್ ಏನು‌?
    ಮುಕೇಶ್‌ ಅಂಬಾನಿ ಇಂಧನ ಕ್ಷೇತ್ರದ ಬಳಿಕ ತಮ್ಮ ಹೂಡಿಕೆಯನ್ನು ಟೆಲಿಕಾಂ ಕಂಪನಿಯಲ್ಲಿ ಮಾಡಿದ್ದರು. ಜಿಯೋ ಸ್ಥಾಪಿಸಿ ಕಡಿಮೆ ದರದಲ್ಲಿ ಡೇಟಾ ನೀಡುವ ಮೂಲಕ ಟೆಲಿಕಾಂ ಮಾರುಕಟ್ಟೆಯನ್ನೇ ಅಲುಗಡಿಸಿದ್ದರು. ಈಗ ಕಿರಾಣಿ ಮತ್ತು ರಿಟೇಲ್‌ ವ್ಯವಹಾರದತ್ತ ಅಂಬಾನಿ ಕಣ್ಣು ಹಾಕಿದ್ದಾರೆ. ಈಗಾಗಲೇ ಜಿಯೋದಲ್ಲಿ ಫೇಸ್‌ಬುಕ್‌ 43,573.62 ಕೋಟಿ ರೂ.(ಶೇ.9.99) ಹೂಡಿಕೆ ಮಾಡಿದೆ. ವ್ಯವಹಾರದ ಮುಂದಿನ ಭಾಗವಾಗಿ ಮುಕೇಶ್‌ ಅಂಬಾನಿ ಫ್ಯೂಚರ್‌ ಗ್ರೂಪ್‌ ಕಂಪನಿಗಳನ್ನು ಖರೀದಿ ಮಾಡಿದ್ದಾರೆ.

  • ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ವಿಶ್ವದ ನಂ.2 ಇಂಧನ ಕಂಪನಿ

    ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ವಿಶ್ವದ ನಂ.2 ಇಂಧನ ಕಂಪನಿ

    – ಅಮೆರಿಕದ ಕಂಪನಿಯನ್ನು ಹಿಂದಿಕ್ಕಿದ ರಿಲಯನ್ಸ್‌

    ಮುಂಬೈ: ವಿಶ್ವದ 5ನೇ ಶ್ರೀಮಂತ ಉದ್ಯಮಿ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಈಗ ಜಗತ್ತಿನ  ಎರಡನೇ ಅತಿ ದೊಡ್ಡ ಇಂಧನ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಮಾರುಕಟ್ಟೆ ಮೌಲ್ಯದಲ್ಲಿ ಅಮೆರಿಕದ ಎಕ್ಸೋನ್‌ಮೊಬಿಲ್‌ ಕಾರ್ಪೊರೇಷನ್‌ ಕಂಪನಿಯನ್ನು ಹಿಂದಿಕ್ಕಿ ರಿಲಯನ್ಸ್‌ ಈ ಸಾಧನೆ ನಿರ್ಮಿಸಿದೆ. ಈಗ ಸೌದಿ ಅರೇಬಿಯಾದ ಅರಾಮ್ಕೋ ಬಳಿಕ ವಿಶ್ವದ ಎರಡನೇ ಅತಿ ದೊಡ್ಡ ಕಂಪನಿಯಾಗಿ ರಿಲಯನ್ಸ್‌ ಇಂಡಸ್ಟ್ರೀಸ್‌ ಹೊರ ಹೊಮ್ಮಿದೆ.

    ಅತಿದೊಡ್ಡ ತೈಲ ಸಂಸ್ಕರಣಾ ಸಂಕೀರ್ಣವನ್ನು ನಿರ್ವಹಿಸುತ್ತಿರುವ ರಿಲಯನ್ಸ್‌ ಮಾರುಕಟ್ಟೆ ಮೌಲ್ಯ ಶುಕ್ರವಾರ ಶೇ.4.3ರಷ್ಟುಏರಿಕೆ ಆಗಿತ್ತು. ಇದರಿಂದ ಸಂಸ್ಥೆಗೆ 8 ಶತಕೋಟಿ ಡಾಲರ್‌ ಸೇರ್ಪಡೆಯಾಗಿ ರಿಲಯನ್ಸ್‌ನ ಮಾರುಕಟ್ಟೆಮೌಲ್ಯ 189 ಶತಕೋಟಿ ಡಾಲರ್‌ಗೆ ಏರಿಕೆ ಆಗುವುದರೊಂದಿಗೆ ನಂ.2 ಪಟ್ಟವನ್ನು ಅಲಂಕರಿಸಿದೆ.

    ಎಕ್ಸೋನ್‌ಮೊಬಿಲ್‌ ಷೇರುಗಳು ಶೇ.39ರಷ್ಟು ಇಳಿಕೆಯಾಗಿದ್ದು, 1 ಶತಕೋಟಿ ಡಾಲರ್‌ ಮಾರುಕಟ್ಟೆ ಮೌಲ್ಯ ಕಳೆದುಕೊಂಡಿದೆ. ಕೋವಿಡ್‌ 19 ನಿಂದಾಗಿ ತೈಲ ಬೇಡಿಕೆ ಕಡಿಮೆಯಾಗುತ್ತಿರುವ ಕಾರಣ ಎಕ್ಸೋನ್‌ಮೊಬಿಲ್‌ ಮಾರುಕಟ್ಟೆ ಮೌಲ್ಯ ಇಳಿಕೆಯಾಗಿದೆ. ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ರಿಲಯನ್ಸ್ – ಒಂದು ಒಪ್ಪಂದ, ಒಂದು ಹೇಳಿಕೆಯಿಂದ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ.ಗೆ ಏರಿಕೆ

    1.75 ಟ್ರಿಲಿಯನ್‌ ಡಾಲರ್‌ ಮಾರುಕಟ್ಟೆ ಮೌಲ್ಯ ಹೊಂದಿರುವ ಅರಾಮ್ಕೋ ವಿಶ್ವದ ನಂ.1 ಇಂಧನ ಕಂಪನಿಯಾಗಿದೆ. ಮಾರ್ಚ್‌ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನಲ್ಲಿ ಶೇ.80ರಷ್ಟು ಆದಾಯ ಇಂಧನ ಉದ್ಯಮದಿಂದಲೇ ಹರಿದುಬಂದಿದೆ. ಇದನ್ನೂ ಓದಿ: ಗೂಗಲ್‌ ಜೊತೆ ಸೇರಿ ಕಡಿಮೆ ಬೆಲೆಗೆ ಜಿಯೋ ಫೋನ್‌ – ಕಡಿಮೆ ಬೆಲೆಗೆ ಫೋನ್‌ ನಿರ್ಮಾಣ ಹೇಗೆ?

    2019ರ ಅಗಸ್ಟ್ ತಿಂಗಳಿನಲ್ಲಿ ನಡೆದ ಕಂಪನಿಯ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ, ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋ ಜೊತೆ ರಿಲಯನ್ಸ್ ಆಯಿಲ್ ಟು ಕೆಮಿಕಲ್ಸ್(ಒಟಿಸಿ) ಕಂಪನಿ ತನ್ನ ಶೇ.20 ರಷ್ಟು ಪಾಲನ್ನು ಮಾರಾಟ ಮಾಡಲು ಸಮ್ಮತಿ ಸೂಚಿಸಿದೆ. ಒಟ್ಟು 75 ಶತಕೋಟಿ ಡಾಲರ್(5.3 ಲಕ್ಷ ಕೋಟಿ ರೂ.) ಒಪ್ಪಂದಕ್ಕೆ ರಿಲಯನ್ಸ್ ಸಹಿ ಹಾಕಲಿದೆ. ಸೌದಿ ಅರಾಮ್ಕೊ ಕಂಪನಿಗೆ ರಿಲಯನ್ಸ್ ಷೇರುಗಳನ್ನು ಮಾರಾಟ ಮಾಡುವ ಮೂಲಕ 18 ತಿಂಗಳಲ್ಲಿ ಸಂಸ್ಥೆಯನ್ನು ಸಾಲಮುಕ್ತಗೊಳಿಸುವುದಾಗಿ ಘೋಷಿಸಿದ್ದರು.

    ಈ ಒಪ್ಪಂದದ ಅನ್ವಯ ಸೌದಿ ಅರಾಮ್ಕೋ ಕಂಪನಿ ಜಾಮ್ ನಗರದಲ್ಲಿರುವ ರಿಲಾಯನ್ಸ್ ರಿಫೈನಿಂಗ್ ಘಟಕಕ್ಕೆ ಪ್ರತಿದಿನ 5 ಲಕ್ಷ ಬ್ಯಾರಲ್ ಕಚ್ಚಾ ತೈಲವನ್ನು ಪೂರೈಸಲಿದೆ. ಸೌದಿ ಅರಾಮ್ಕೋ ಸೌದಿ ಅರೇಬಿಯಾದ ರಾಷ್ಟ್ರೀಯ ಪೆಟ್ರೋಲ್ ಮತ್ತು ನೈಸರ್ಗಿಕ ಗ್ಯಾಸ್ ಕಂಪನಿಯಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಮತ್ತು ವಿಶ್ವದಲ್ಲೇ ಅತಿ ಹೆಚ್ಚು ಲಾಭಗಳಿಸುವ ತೈಲ ಕಂಪನಿಯಾಗಿ ಹೊರಹೊಮ್ಮಿದೆ.

    ಜಾಮ್ ನಗರದಲ್ಲಿರುವ ಘಟಕ ಸದ್ಯ ಪ್ರತಿ ದಿನ 14 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದ್ದು 2030ರ ವೇಳೆಗೆ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ ಎಂದು ಕೇಂದ್ರ ಸರ್ಕಾರಕ್ಕೆ ಕಂಪನಿ ತಿಳಿಸಿದೆ.