Tag: Reliance Industries

  • ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಿಂದ ಹೊರಗುಳಿದ ಮುಕೇಶ್ ಅಂಬಾನಿ

    ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಿಂದ ಹೊರಗುಳಿದ ಮುಕೇಶ್ ಅಂಬಾನಿ

    ನವದೆಹಲಿ: ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಪ್ರಮುಖ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಟಾಪ್-10 ಸ್ಥಾನದಿಂದ ಹೊರಗುಳಿದಿದ್ದಾರೆ. ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2025ರ ಪ್ರಕಾರ ಅಂಬಾನಿ ಅವರು ಈ ವರ್ಷ 11ನೇ ಸ್ಥಾನಕ್ಕೆ ತಲುಪಿದ್ದಾರೆ.

    ಮುಕೇಶ್ ಅಂಬಾನಿ ಅವರ ಸಂಪತ್ತಿನ ಮೌಲ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಸ್ವಲ್ಪ ಕಡಿಮೆಯಾಗಿದೆ. ಆದಾಗ್ಯೂ, ಅವರ ಒಟ್ಟಾರೆ ಸಂಪತ್ತು ಇನ್ನೂ ಅಪಾರವಾಗಿದ್ದು, ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ತಮ್ಮ ಪ್ರಾಬಲ್ಯ ಕಾಯ್ದುಕೊಂಡಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನ ವ್ಯಾಪಾರ ಕಾರ್ಯತಂತ್ರಗಳು, ತೈಲ ಮತ್ತು ರಾಸಾಯನಿಕ ಉದ್ಯಮದ ಜೊತೆಗೆ ಟೆಲಿಕಾಂ (ರಿಲಯನ್ಸ್ ಜಿಯೋ) ಮತ್ತು ರಿಟೇಲ್ ಕ್ಷೇತ್ರದಲ್ಲಿ ಮಾಡಿದ ಗಣನೀಯ ಹೂಡಿಕೆಗಳು ಅವರ ಸಂಪತ್ತಿನ ಮೇಲೆ ಪ್ರಭಾವ ಬೀರಿವೆ.

    ಈ ವರ್ಷದ ಹುರುನ್ ಗ್ಲೋಬಲ್ ರಿಚ್ ಲಿಸ್ಟ್‌ನಲ್ಲಿ ಅಮೆರಿಕ ಮತ್ತು ಚೀನಾದ ಉದ್ಯಮಿಗಳು ಟಾಪ್-10 ಸ್ಥಾನಗಳಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಎಲಾನ್ ಮಸ್ಕ್ (ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಮುಖ್ಯಸ್ಥ), ಜೆಫ್ ಬೆಜೋಸ್ (ಅಮೆಜಾನ್ ಸಂಸ್ಥಾಪಕ), ಮತ್ತು ಮಾರ್ಕ್ ಝುಕರ್‌ಬರ್ಗ್ (ಮೆಟಾ ಸಿಇಒ) ರಂತಹ ದಿಗ್ಗಜರು ಮೊದಲ ಕೆಲವು ಸ್ಥಾನಗಳನ್ನು ಆಕ್ರಮಿಸಿದ್ದಾರೆ.

    ತಂತ್ರಜ್ಞಾನ ಕ್ಷೇತ್ರದಲ್ಲಿ ಈ ಉದ್ಯಮಿಗಳ ಸಂಪತ್ತು ಗಗನಕ್ಕೇರಿರುವುದು ಈ ಪಟ್ಟಿಯಲ್ಲಿ ಅವರ ಪ್ರಾಬಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ, ಚೀನಾದ ಕೆಲವು ಉದ್ಯಮಿಗಳು ತಮ್ಮ ತಂತ್ರಜ್ಞಾನ ಮತ್ತು ಉತ್ಪಾದನಾ ಕಂಪನಿಗಳ ಮೂಲಕ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ. ಮುಕೇಶ್ ಅಂಬಾನಿ ಟಾಪ್-10 ರಿಂದ ಹೊರಗುಳಿದರೂ, ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಅವರು ಉನ್ನತ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

  • 20 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ಮೌಲ್ಯ ತಲುಪಿದ ಭಾರತದ ಮೊದಲ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್

    20 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ಮೌಲ್ಯ ತಲುಪಿದ ಭಾರತದ ಮೊದಲ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್

    – ಕಂಪನಿಯ ಏಕೀಕೃತ ಆದಾಯ 10 ಲಕ್ಷ ಕೋಟಿ
    – ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ಸುಮಾರು 3 ಲಕ್ಷ ಕೋಟಿ ಮೌಲ್ಯದ ರಫ್ತು
    – ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅಡಿ 1,592 ಕೋಟಿ ಖರ್ಚು
    – ರಿಲಯನ್ಸ್ ಇಂಡಸ್ಟ್ರೀಸ್‌ನಿಂದ 1,86,000 ಕೋಟಿ ರೂ. ಹೆಚ್ಚು ತೆರಿಗೆ ಪಾವತಿ

    ನವದೆಹಲಿ: ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ (Mukesh Ambani) ಅವರ ನೇತೃತ್ವದ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) 2023-24ನೇ ಸಾಲಿನ ಹಣಕಾಸು ವರ್ಷದಲ್ಲಿ ಸರ್ಕಾರಕ್ಕೆ ಒಟ್ಟು 1,86,440 ಕೋಟಿ (1.86 ಲಕ್ಷ ಕೋಟಿ) ರೂಪಾಯಿಯನ್ನು ತೆರಿಗೆಯಾಗಿ ಠೇವಣಿ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ 9 ಸಾವಿರ ಕೋಟಿ ರೂಪಾಯಿ ಅಧಿಕವಾಗಿದೆ ಎಂಬುದು ಕಂಪನಿಯ ವಾರ್ಷಿಕ ವರದಿಯಲ್ಲಿ ತಿಳಿದುಬಂದಿದೆ.

    ದೇಶದ ಆರ್ಥಿಕತೆಗೆ ರಿಲಯನ್ಸ್ ಕೊಡುಗೆ ಮಹತ್ವದ್ದಾಗಿದೆ. 2023-24ರ ಹಣಕಾಸು ವರ್ಷದಲ್ಲಿ 20 ಲಕ್ಷ ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ದಾಟಿದ ಭಾರತದ ಮೊದಲ ಕಂಪನಿ ಎಂದೆನಿಸಿಕೊಂಡಿದೆ ರಿಲಯನ್ಸ್. ಈ ಅಂಕಿ-ಅಂಶವನ್ನು ಇಲ್ಲಿಯವರೆಗೆ ಯಾವುದೇ ಕಂಪನಿ ತಲುಪುವುದಕ್ಕೆ ಸಾಧ್ಯವಾಗಿಲ್ಲ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಇದು ಶೇ.27ರಷ್ಟು ಜಿಗಿತ ಕಂಡಿದೆ. ಮಾರುಕಟ್ಟೆ ಬಂಡವಾಳ ಮೌಲ್ಯದ ವಿಚಾರಕ್ಕೆ ಬಂದಲ್ಲಿ ರಿಲಯನ್ಸ್ ವಿಶ್ವದ 48ನೇ ಕಂಪನಿಯಾಗಿದ್ದು, ಕಂಪನಿಯ ಏಕೀಕೃತ ಆದಾಯ 10 ಲಕ್ಷ ಕೋಟಿ ರೂ. ಗಡಿ ದಾಟಿದೆ. ಇದನ್ನೂ ಓದಿ: ರಾಹುಲ್‌ ಸೇರಿದಂತೆ 7 ಸಂಸದರಿಗೆ ಮಾವಿನ ಹಣ್ಣುಗಳನ್ನು ಕಳುಹಿಸಿದ ಪಾಕ್‌ ಹೈಕಮಿಷನ್‌

    ರಫ್ತಿನಲ್ಲೂ ರಿಲಯನ್ಸ್ ದೇಶದ ಸಾಮರ್ಥ್ಯಕ್ಕೆ ಬಲ ತುಂಬಿದೆ. ಕಳೆದ ಹಣಕಾಸು ವರ್ಷದಲ್ಲಿ ರಿಲಯನ್ಸ್ ಸುಮಾರು 3 ಲಕ್ಷ ಕೋಟಿ ರೂಪಾಯಿ ಮೌಲ್ಯದಷ್ಟು ರಫ್ತು ಮಾಡಿದೆ. ಅಷ್ಟೇ ಅಲ್ಲ, ಕಂಪನಿಯು ದೇಶದಲ್ಲಿ ಬಂಡವಾಳ ಆಸ್ತಿಗಳ ಸೃಷ್ಟಿಯಲ್ಲಿಯೂ ಖಾಸಗಿ ವಲಯದ ಅತಿದೊಡ್ಡ ಕೊಡುಗೆದಾರರಲ್ಲಿ ಒಂದಾಗಿದೆ. ವಾರ್ಷಿಕ ವರದಿಯ ಪ್ರಕಾರ, 2023-24ರ ಹಣಕಾಸು ವರ್ಷದಲ್ಲಿ ರಿಲಯನ್ಸ್ 1,35,000 ಕೋಟಿ ರೂಪಾಯಿ ಕೊಡುಗೆ ನೀಡಿದೆ.

    ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರು ವಾರ್ಷಿಕ ವರದಿ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿ, ಕಳೆದ ದಶಕದಲ್ಲಿ ಜಾಗತಿಕ ಆರ್ಥಿಕ ಸನ್ನಿವೇಶದಲ್ಲಿ ಭಾರತದ ಪ್ರಾಮುಖ್ಯತೆ ಹಲವು ಪಟ್ಟು ಹೆಚ್ಚಾಗಿದೆ. ಅಸ್ಥಿರತೆ ಮತ್ತು ಅನಿಶ್ಚಿತತೆಯ ಈ ಜಗತ್ತಿನಲ್ಲಿ ಭಾರತವು ಸ್ಥಿರತೆ ಮತ್ತು ಸಮೃದ್ಧಿಯ ಸಂಕೇತವಾಗಿ ಕಾಣುತ್ತಿದೆ. 140 ಕೋಟಿ ಭಾರತೀಯರ ಸಾಮೂಹಿಕ ಪ್ರಯತ್ನದ ಫಲವಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಬಲವಾದ ಬೆಳವಣಿಗೆ ಆಗಿದೆ. ಭಾರತ ಮತ್ತು ಭಾರತೀಯತೆಯ ಈ ಚೈತನ್ಯವೇ ರಿಲಯನ್ಸ್ ಅನ್ನು ನಿರಂತರವಾಗಿ ಹೊಸತನ್ನು ಕಂಡುಕೊಳ್ಳಲು ಮತ್ತು ಪ್ರತಿ ಪ್ರಯತ್ನದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಪ್ರೇರೇಪಿಸುತ್ತದೆ. ರಿಲಯನ್ಸ್ ಕುಟುಂಬವು ಭಾರತದ ಬೆಳವಣಿಗೆಯ ಯಶೋಗಾಥೆ ಭಾಗವಾಗುವುದು ಮತ್ತು ಅದರ ಅದ್ಭುತ ಬೆಳವಣಿಗೆಗೆ ಕೊಡುಗೆ ನೀಡುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್: ವಿನೇಶ್‌ಗೆ ಸಮಾಧಾನ ಹೇಳಿದ ಮೋದಿ

    ಕಂಪನಿಯು ಸಾಮಾಜಿಕ ಜವಾಬ್ದಾರಿಗಾಗಿ (ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ) ಒಟ್ಟು 1,592 ಕೋಟಿ ರೂ. ವೆಚ್ಚ ಮಾಡಿದೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ 300 ಕೋಟಿ ರೂಪಾಯಿ ಹೆಚ್ಚಾಗಿದೆ. ಲಾಭ ಗಳಿಸುವಲ್ಲಿಯೂ ಕಂಪನಿ ಮೊದಲ ಸ್ಥಾನದಲ್ಲಿದ್ದು, 2023-24ನೇ ಹಣಕಾಸು ವರ್ಷದಲ್ಲಿ ತೆರಿಗೆ ನಂತರದ ಲಾಭ 79 ಸಾವಿರ ಕೋಟಿ ರೂಪಾಯಿ ಗಳಿಸಿದೆ. ಇದು ಕಳೆದ ಹಣಕಾಸು ವರ್ಷದಲ್ಲಿ ಗಳಿಸಿದ್ದ 73 ಸಾವಿರದ 670 ಕೋಟಿ ರೂಪಾಯಿಗಿಂತ ಶೇ.7.3ರಷ್ಟು ಹೆಚ್ಚಾಗಿದೆ.

  • ಮತ ಚಲಾಯಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ – ಹಕ್ಕು ಚಲಾಯಿಸಿದ ಮುಕೇಶ್‌ ಅಂಬಾನಿ ಕುಟುಂಬ!

    ಮತ ಚಲಾಯಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ – ಹಕ್ಕು ಚಲಾಯಿಸಿದ ಮುಕೇಶ್‌ ಅಂಬಾನಿ ಕುಟುಂಬ!

    ಜೈಪುರ: ರಿಲಯನ್ಸ್‌ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಅವರಿಂದು ಕುಟುಂಬಸ್ಥರೊಂದಿಗೆ ಮತಚಲಾಯಿಸಿದರು. ಮುಂಬೈನ ಮಲಬಾರ್ ಹಿಲ್ ಮತಗಟ್ಟೆಯಲ್ಲಿ ಪತ್ನಿ ನೀತಾ ಅಂಬಾನಿ, ಪುತ್ರ ಆಕಾಶ್‌ ಅಂಬಾನಿಯೊಂದಿಗೆ (Akash Ambani) ಬಂದು ಹಕ್ಕು ಚಲಾಯಿಸಿದರು.

    ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮುಕೇಶ್‌ ಅಂಬಾನಿ, ಭಾರತೀಯ ಪ್ರಜೆಯಾಗಿ ಮತದಾನ ಮಾಡಬೇಕಾದದ್ದು ನಮ್ಮ ಕರ್ತವ್ಯ. ಇದು ಪ್ರಜಾಪ್ರಭುತ್ವ ದೇಶ, ಪ್ರತಿಯೊಬ್ಬ ಭಾರತೀಯನೂ ವೋಟ್‌ (Vote) ಮಾಡಬೇಕು ಎಂಬುದು ನನ್ನ ಮನವಿ ಎಂದು ನುಡಿದರು. ಇದೇ ವೇಳೆ, ಭಾರತೀಯ ಪ್ರಜೆಯಾಗಿ ಮತದಾನ ಮಾಡುವುದು ಮುಖ್ಯ. ಏಕೆಂದರೆ ಇದು ನಮ್ಮ ಹಕ್ಕು ಮತ್ತು ಕರ್ತವ್ಯ ಎಂದು ಪತ್ನಿ ನೀತಾ ಅಂಬಾನಿ (Nita Ambani) ಮತದಾನಕ್ಕೆ ಕರೆ ಕೊಟ್ಟರು.

    ಲೋಕಸಭಾ ಚುನಾವಣೆಯ 5ನೇ ಹಂತದ ಮತದಾನ ಇಂದು (ಸೋಮವಾರ) ನಡೆದಿದೆ. 6 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 49 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೂ ಮತದಾನ ನಡೆದಿದೆ. ಇನ್ನೂ 2 ಹಂತದ ಚುನಾವಣೆ ಬಾಕಿಯಿದ್ದು, ಮೇ 25 ರಂದು 6ನೇ ಹಂತ ಹಾಗೂ ಜೂನ್‌ 1ರಂದು 7ನೇ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. ಜೂನ್‌ 4ರಂದು 7 ಹಂತಗಳ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.

    ಮತದಾನ ನಡೆದ ಪ್ರಮುಖ ಕ್ಷೇತ್ರಗಳು:
    ಲಕ್ನೋ, ರಾಯ್ ಬರೇಲಿ, ಅಮೇಥಿ, ಫತೇಪುರ್, ಫೈಜಾಬಾದ್, ಕೈಸರ್‌ಗಂಜ್, ನಾಸಿಕ್, ಪಾಲ್ಘರ್, ಕಲ್ಯಾಣ್, ಥಾಣೆ, ಮುಂಬೈ ಉತ್ತರ ಮತ್ತು ಮಹಾರಾಷ್ಟ್ರದ ಮುಂಬೈ ದಕ್ಷಿಣ, ಬಂಗಾವ್, ಬ್ಯಾರಕ್‌ಪೋರ್, ಹೌರಾ ಮತ್ತು ಪಶ್ಚಿಮ ಬಂಗಾಳದ ಹೂಗ್ಲಿ, ಬಿಹಾರದ ಮುಜಾಫರ್‌ಪುರ, ಸರನ್ ಮತ್ತು ಹಾಜಿಪುರ, ಸುಂದರ್‌ಗಢ, ಒಡಿಶಾದ ಬೋಲಂಗೀರ್ ಮತ್ತು ಕಂಧಮಾಲ್, ಜಾರ್ಖಂಡ್‌ನ ಕೋಡರ್ಮಾ ಮತ್ತು ಹಜಾರಿಬಾಗ್, ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ.

    ಚುನಾವಣಾ ಕಣದಲ್ಲಿದ್ದವರು:
    ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವ ಪಿಯೂಷ್ ಗೋಯಲ್, ರಾಹುಲ್ ಗಾಂಧಿ, ಸ್ಮೃತಿ ಇರಾನಿ, ಒಮರ್ ಅಬ್ದುಲ್ಲಾ, ಸಜ್ಜದ್ ಗನಿ ಲೋನ್, ಸಾಧ್ವಿ ನಿರಂಜನ್ ಜ್ಯೋತಿ, ಲಲ್ಲು ಸಿಂಗ್, ಕರಣ್ ಭೂಷಣ್ ಸಿಂಗ್, ಕೀರ್ತಿ ವರ್ಧನ್ ಸಿಂಗ್, ತನುಜ್ ಪೂಧನ್ ಸಿಂಗ್, ನರೇಶ್ ಉತ್ತಮ್ ಪಟೇಲ್, ಉಜ್ವಲ್ ನಿಕಮ್, ರಾಹುಲ್ ಶೆವಾಲೆ, ಅನಿಲ್ ದೇಸಾಯಿ, ವರ್ಷ ಗಾಯಕ್ವಾಡ್, ಸಂಜಯ್ ದಿನ ಪಾಟೀಲ್, ರವೀಂದ್ರ ವೈಕರ್, ಶ್ರೀಕಾಂತ್ ಶಿಂಧೆ, ಹೇಮಂತ್ ಗೋಡ್ಸೆ, ಭಾರತಿ ಪವಾರ್, ಕಪಿಲ್ ಮೊರೇಶ್ವರ್ ಪಾಟೀಲ್, ಸುಭಾಷ್ ರಾಮರಾವ್ ಭಮ್ರೆ, ಶಾಂತನು ಠಾಕೂರ್, ಅರ್ಜುನ್ ಸಿಂಗ್, ಪ್ರಸೂನೆಟ್ ಚಟರ್ಜಿ, ಕಲ್ಯಾಣ್ ಬ್ಯಾನರ್ಜಿ, ದೇವೇಶ್ ಚಂದ್ರ ಠಾಕೂರ್, ಅಲಿ ಅಶ್ರಫ್ ಫಾತ್ಮಿ, ಅಜಯ್ ನಿಶಾದ್, ರಾಜೀವ್ ಪ್ರತಾಪ್ ರೂಡಿ, ರೋಹಿಣಿ ಆಚಾರ್ಯ, ಚಿರಾಗ್ ಪಾಸ್ವಾನ್, ಜುಯಲ್ ಓರಮ್, ದಿಲೀಪ್ ಟಿರ್ಕಿ, ಅಚ್ಯುತ ಸಮಂತಾ, ಸಂಗೀತಾ ಕುಮಾರಿ ಸಿಂಗ್ ಡಿಯೋ, ಅನ್ನಪೂರ್ಣ ದೇವಿ ಮತ್ತು ಜೈ ಪ್ರಕಾಶ್ ಭಾಯಿ ಪಟೇಲ್ ಸೇರಿದಂತೆ ಹಲವಾರು ಪ್ರಮುಖ ಅಭ್ಯರ್ಥಿಗಳು ಕಣದಲ್ಲಿದ್ದರು.

  • ಬೇಸಿಗೆಯ ದಾಹ ತಣಿಸಲು ಬಂದಿದೆ ಕ್ಯಾಂಪಾ- ಕೋಲಾದ ಹೊಸ ಪ್ರಚಾರ ಆರಂಭಿಸಿದ ರಿಲಯನ್ಸ್

    ಬೇಸಿಗೆಯ ದಾಹ ತಣಿಸಲು ಬಂದಿದೆ ಕ್ಯಾಂಪಾ- ಕೋಲಾದ ಹೊಸ ಪ್ರಚಾರ ಆರಂಭಿಸಿದ ರಿಲಯನ್ಸ್

    ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್‌ನ (Reliance Industries) ಎಫ್ಎಂಸಿಜಿ ಅಂಗ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಸಂಪೂರ್ಣ ಒಡೆತನದ ಅಂಗಸಂಸ್ಥೆಯಾದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ನಿಂದ ಕ್ಯಾಂಪಾ ಕೋಲಾ (Campa Cola) ಪರವಾಗಿ ಹೊಸದಾಗಿ ಬ್ರ್ಯಾಂಡ್ ಅಭಿಯಾನವನ್ನು ಆರಂಭಿಸಲಾಗಿದೆ. ಕ್ಯಾಂಪಾ ಕೋಲಾ ಎಂಬುದು ಖ್ಯಾತ ಭಾರತೀಯ ಪಾನೀಯ ಬ್ರ್ಯಾಂಡ್ ಆಗಿದೆ.

    ಈ ಅಭಿಯಾನವು ವಿಭಿನ್ನ ವಿಧಾನದ ಭರವಸೆಯನ್ನು ನೀಡುತ್ತದೆ. ಇದರ ಜತೆಗೆ ನೈಜ ಭಾರತೀಯರನ್ನು ಪ್ರತಿಬಿಂಬಿಸುತ್ತದೆ ಮತ್ತು ಅವರ ಪಾರಮ್ಯ ಹಾಗೂ ಸಂಕಲ್ಪ ಸ್ಫೂರ್ತಿಯನ್ನು ಸಂಭ್ರಮಿಸುತ್ತದೆ. ನಿರಂತರವಾಗಿ ಹೊಸ ದಿಗಂತವನ್ನು ಬೆನ್ನಟ್ಟುವ ಯುವ ಭಾರತದ ಧೈರ್ಯಶಾಲಿ ಮನೋಭಾವಕ್ಕೆ ಗೌರವ ಸಮರ್ಪಣೆ ಮಾಡುತ್ತದೆ. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಕೇಸ್‌ಗೆ ಈಗ ಮಕ್ಕಳ ಆಯೋಗ ಎಂಟ್ರಿ

    “ಕಠಿಣ ಕೆಲಸಗಳನ್ನು ಮಾಡುವಂಥ ಭಾರತೀಯರಿಗೆ, ತಮ್ಮ ಉನ್ನತ ಆಕಾಂಕ್ಷೆಗಳನ್ನು ಈಡೇರಿಸುವುದಕ್ಕೆ ನಮ್ಮ ಸಂವಹನವಾಗಿದ್ದು, ಕೈಗೆಟುಕುವ ಬೆಲೆಗೆ ಜಾಗತಿಕ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವುದಕ್ಕೆ ಇದು ನಮ್ಮ ಪಾಲಿಗೆ ಪಯಣದ ಆರಂಭವಾಗಿದೆ,” ಎಂದು ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಸಿಒಒ ಕೇತನ್ ಮೋದಿ ಹೇಳಿದ್ದಾರೆ. ಇದನ್ನೂ ಓದಿ: ಕುಡಿಯುವ ನೀರಿನ ನೆಪದಲ್ಲಿ ನೀರು ಬಿಡುಗಡೆಗೆ ನಿರಾಕರಿಸಬಾರದು – ತಮಿಳುನಾಡು ಕ್ಯಾತೆ

    ಆರ್ ಸಿಪಿಎಲ್ ಪೂರೈಕೆ ಸರಪಳಿಯನ್ನು ಬಲಪಡಿಸುತ್ತಿದ್ದು, ವಿತರಣೆಯನ್ನು ವಿಸ್ತರಣೆ ಮಾಡುವ ಮೂಲಕ ಕಾರ್ಯಾಚರಣೆಯನ್ನು ದೇಶದ ವಿವಿಧ ಭಾಗಗಳಲ್ಲಿ ವ್ಯಾಪಿಸುತ್ತಿದೆ. ಈ ಬ್ರ್ಯಾಂಡ್ ಫಿಲ್ಮ್ ಅನ್ನು ಪರಿಕಲ್ಪನೆ ಮಾಡಿಕೊಂಡಿರುವುದು ಆಡ್ ಗುರು ಪ್ರಸೂನ್ ಜೋಶಿ. ಇದನ್ನು ಟೀವಿ, ಡಿಜಿಟಲ್, ಹೊರಾಂಗಣ ಮತ್ತು ಮುದ್ರಣ ಮಾಧ್ಯಮ ಹೀಗೆ ಎಲ್ಲೆಡೆ ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ.

    “ಈ ಹೊಸ ಸೃಜನಶೀಲತೆಯೊಂದಿಗೆ ಕ್ಯಾಂಪಾ ಬ್ರ್ಯಾಂಡ್ ಹೊಸ ಉದಯೋನ್ಮುಖ ಭಾರತದೊಂದಿಗೆ ಹಿಮ್ಮೇಳವನ್ನು ಹೊರಡಿಸುವಂತೆ ಕಾಣುತ್ತಿದೆ. ಇದರಲ್ಲಿ ಸ್ವಯಂ-ನಂಬಿಕೆಯನ್ನು ಹೊಂದಿದೆ ಮತ್ತು ಹೊಸ ದಿಗಂತಗಳನ್ನು ಅನ್ವೇಷಿಸಲು ಉತ್ಸುಕವಾಗಿದೆ. ಇದು ಸ್ಥಳೀಯದರ ಬಗ್ಗೆ ಹೆಮ್ಮೆ ಮತ್ತು ಪ್ರತಿಭೆ ಹಾಗೂ ಸಂಕಲ್ಪವನ್ನು ಎತ್ತರಕ್ಕೆ ಒಯ್ಯುತ್ತದೆ. ಈ ಹೊಸ ಭಾರತವು ದಾಹ ಹೊಂದಿದ್ದು, ಅದನ್ನು ತಣಿಸಲು ಏನಾದರೂ ವಿಶೇಷವಾದ ಅಗತ್ಯವಿದೆ,” ಎಂದು ಮೆಕ್‌ಕನ್ ವರ್ಲ್ಡ್‌ಗ್ರೂಪ್‌ನ ಬರಹಗಾರ ಮತ್ತು ಮುಖ್ಯ ಸೃಜನಶೀಲ ಅಧಿಕಾರಿ ಪ್ರಸೂನ್ ಜೋಶಿ ಹೇಳಿದ್ದಾರೆ.

     ಚಿತ್ರನಿರ್ಮಾತೃ ಅರುಣ್ ಗೋಪಾಲನ್ ಮತ್ತು ಗಾಯಕ, ಸಂಯೋಜಕ ಶಂಕರ್ ಮಹಾದೇವನ್ ಅವರು  ಈ ಅಭಿಯಾನದ ಫಿಲ್ಮ್ ಅನ್ನು ತಯಾರಿಸಿದ್ದಾರೆ.

  • ಚೆನ್ನೈ ರಿಲಯನ್ಸ್‌ ಕ್ಯಾಂಪಸ್‌ನಲ್ಲಿ ಫೇಸ್‌ಬುಕ್‌ ಡೇಟಾ ಸೆಂಟರ್‌!

    ಚೆನ್ನೈ ರಿಲಯನ್ಸ್‌ ಕ್ಯಾಂಪಸ್‌ನಲ್ಲಿ ಫೇಸ್‌ಬುಕ್‌ ಡೇಟಾ ಸೆಂಟರ್‌!

    ಚೆನ್ನೈ: ಫೇಸ್‌ಬುಕ್‌ (Facebook) ಕಂಪನಿಯ ಮಾತೃ ಸಂಸ್ಥೆ ಮೆಟಾ (META) ಭಾರತದಲ್ಲಿ ತನ್ನ ಮೊದಲ ಡೇಟಾ ಸೆಂಟರ್ (Data Center) ಅನ್ನು ಚೆನ್ನೈನ ರಿಲಯನ್ಸ್ ಇಂಡಸ್ಟ್ರೀಸ್ ಕ್ಯಾಂಪಸ್‌ನಲ್ಲಿ ಸ್ಥಾಪನೆ ಮಾಡಲಿದೆ.

    ಮಾರ್ಚ್ ಆರಂಭದಲ್ಲಿ ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮದಲ್ಲಿ ನಡೆದ ಚರ್ಚೆಯ ಬಳಿಕ ಮಾರ್ಕ್ ಜುಕರ್‌ಬರ್ಗ್ (Mark Zuckerberg) ನೇತೃತ್ವದ ಕಂಪನಿಯು ರಿಲಯನ್ಸ್‌ (Reliance Industries) ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ.

    ಅಂಬತ್ತೂರ್ ಇಂಡಸ್ಟ್ರಿಯಲ್ ಎಸ್ಟೇಟ್‌ 10-ಎಕರೆ ಕ್ಯಾಂಪಸ್ ಹೊಂದಿದೆ. ಬ್ರೂಕ್‌ಫೀಲ್ಡ್ ಅಸೆಟ್‌ ಮ್ಯಾನೇಜ್‌ಮೆಂಟ್‌, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಡಿಜಿಟಲ್ ರಿಯಾಲ್ಟಿ ಜಂಟಿಯಾಗಿ ಈ ಕ್ಯಾಂಪಸ್‌ನಲ್ಲಿ ಹೂಡಿಕೆ ಮಾಡಿದೆ.

    ಭಾರತದಲ್ಲಿ ಫೇಸ್‌ಬುಕ್ 31.46 ಕೋಟಿ, ಇನ್‌ಸ್ಟಾಗ್ರಾಮ್ 35 ಕೋಟಿ, ವಾಟ್ಸಪ್‌ಗೆ 48 ಕೋಟಿ ಬಳಕೆದಾರರಿದ್ದಾರೆ. ಅಮೆರಿಕಕ್ಕೆ ಹೋಲಿಸಿದರೆ ಭಾರತದಲ್ಲಿ ಬಳಕೆದಾರರ ಸಂಖ್ಯೆ ದುಪ್ಪಟ್ಟು ಇರುವುದರಿಂದ ಈಗ ಇಲ್ಲೇ ಡೇಟಾ ಸೆಂಟರ್‌ ತೆರೆಯಲು ಮೆಟಾ ಮುಂದಾಗಿದೆ. ಇದನ್ನೂ ಓದಿ: Taiwan Earthquake – 7.4 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

    ಗೂಗಲ್ ದೇಶದಲ್ಲಿ ತನ್ನ ಮೊದಲ ಡೇಟಾ ಸೆಂಟರ್ ಸ್ಥಾಪಿಸಲು ಮುಂದಾಗಿದೆ. ನವಿ ಮುಂಬೈನಲ್ಲಿ 22.5 ಎಕರೆ ಭೂಮಿಯನ್ನು ಖರೀದಿ ಸಬಂಧ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

     

  • ಪ.ಬಂಗಾಳದಲ್ಲಿ ರಿಲಯನ್ಸ್‌ನಿಂದ 20 ಸಾವಿರ ಕೋಟಿ ರೂ. ಹೂಡಿಕೆ: ಅಂಬಾನಿ ಘೋಷಣೆ

    ಪ.ಬಂಗಾಳದಲ್ಲಿ ರಿಲಯನ್ಸ್‌ನಿಂದ 20 ಸಾವಿರ ಕೋಟಿ ರೂ. ಹೂಡಿಕೆ: ಅಂಬಾನಿ ಘೋಷಣೆ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (WestBengal) 20 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಮಂಗಳವಾರ ಘೋಷಣೆ ಮಾಡಿದ್ದಾರೆ.

    ಕೋಲ್ಕತ್ತಾದಲ್ಲಿನ 7ನೇ ಬೆಂಗಾಲ್ ಜಾಗತಿಕ ಉದ್ಯಮ ಸಮಾವೇಶದಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ರಿಲಯನ್ಸ್ ಇದುವರೆಗೆ ಸುಮಾರು 45,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಹಾಗೆಯೇ ಮುಂದಿನ ಮೂರು ವರ್ಷಗಳಲ್ಲಿ ನಾವು 20 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹೂಡಿಕೆ ಮಾಡುವುದಾಗಿ ಘೋಷಿಸಿದರು.

    ದೂರಸಂಪರ್ಕ, ರೀಟೇಲ್ ಮತ್ತು ಜೈವಿಕ ಇಂಧನ ಕ್ಷೇತ್ರಗಳಲ್ಲಿ ಈ 20 ಸಾವಿರ ಕೋಟಿ ಹೂಡಿಕೆ ಮಾಡಲಾಗುವುದು. ನಾವು 5ಜಿ ತಂತ್ರಜ್ಞಾನವನ್ನು ರಾಜ್ಯದ ಮೂಲೆ ಮೂಲೆಗೆ ಒಯ್ಯುತ್ತಿದ್ದೇವೆ. ವಿಶೇಷವಾಗಿ ಗ್ರಾಮೀಣ ಭಾಗದ ಬಂಗಾಳವನ್ನು ಸಂಪರ್ಕಿಸಲಾಗುತ್ತಿದೆ. ನಾವು ಬಂಗಾಳದ ಬಹುತೇಕ ಭಾಗಗಳನ್ನು ಆವರಿಸಿದ್ದೇವೆ. ಜಿಯೋ ನೆಟ್‍ವರ್ಕ್ ರಾಜ್ಯದ ಜನಸಂಖ್ಯೆಯ 98.8%ರಷ್ಟು ಮತ್ತು ಕೋಲ್ಕತ್ತಾ ಟೆಲಿಕಾಂ ವಲಯದಲ್ಲಿ 100%ರಷ್ಟು ಜನಸಂಖ್ಯೆಯನ್ನು ತಲುಪಿದೆ. ಜಿಯೋದ ಪ್ರಬಲ ನೆಟ್‍ವರ್ಕ್ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗದ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ಕೃಷಿಯನ್ನು ಉತ್ತೇಜಿಸುತ್ತದೆ ಎಂದರು.

    ರಿಲಯನ್ಸ್ ರೀಟೇಲ್ ಮುಂದಿನ ಎರಡು ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಸುಮಾರು 200 ಹೊಸ ಮಳಿಗೆಗಳನ್ನು ತೆರೆಯಲು ಯೋಜಿಸುತ್ತಿದೆ. ಸದ್ಯಕ್ಕೆ ಬಂಗಾಳದಲ್ಲಿ ಸುಮಾರು 1000 ರಿಲಯನ್ಸ್ ಸ್ಟೋರ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಅದು 1200ಕ್ಕೆ ಹೆಚ್ಚಾಗುತ್ತದೆ. ನೂರಾರು ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಮತ್ತು ಬಂಗಾಳದ ಸುಮಾರು 5.5 ಲಕ್ಷ ಕಿರಾಣಿ ಅಂಗಡಿಯವರು ನಮ್ಮ ರೀಟೇಲ್ ವ್ಯಾಪಾರದೊಂದಿಗೆ ಕೈ ಜೋಡಿಸಿದ್ದಾರೆ. ಹೊಸ ಮಳಿಗೆಗಳನ್ನು ತೆರೆಯುವುದರಿಂದ ಅವರಿಗೆ ಲಾಭವಾಗಲಿದೆ. ಪ್ರಭುಜಿ, ಮುಖ್ರೋಚಕ್, ಸಿಟಿ ಗೋಲ್ಡ್, ಬಿಸ್ಕ್ ಫಾರ್ಮ್‍ನಂತಹ ಬಂಗಾಳದ ಹಲವು ಪ್ರಾದೇಶಿಕ ಬ್ರ್ಯಾಂಡ್‍ಗಳನ್ನು ಉಲ್ಲೇಖಿಸಿದ ಅವರು, ರಿಲಯನ್ಸ್ ರೀಟೇಲ್ ಮೂಲಕ ನಾವು ಈ ಬ್ರ್ಯಾಂಡ್‍ಗಳನ್ನು ಇಡೀ ದೇಶದಾದ್ಯಂತ ಕೊಂಡೊಯ್ಯುತ್ತಿದ್ದೇವೆ ಎಂದು ಹೇಳಿದರು.

    ಭಾರತದ ಅತಿದೊಡ್ಡ ಜೈವಿಕ ಇಂಧನ ಉತ್ಪಾದಕ ರಿಲಯನ್ಸ್ ಮುಂದಿನ ಮೂರು ವರ್ಷಗಳಲ್ಲಿ 100 ಕಂಪ್ರೆಸ್ ಜೈವಿಕ ಅನಿಲ ಘಟಕಗಳನ್ನು ಸ್ಥಾಪಿಸಲಿದೆ. ಈ ಘಟಕಗಳು 5.5 ಮಿಲಿಯನ್ ಟನ್ ಕೃಷಿ ಅವಶೇಷಗಳು ಮತ್ತು ಸಾವಯವ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತವೆ. ಇದು ಸುಮಾರು 2 ಮಿಲಿಯನ್ ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ವಾರ್ಷಿಕವಾಗಿ 2.5 ಮಿಲಿಯನ್ ಟನ್ ಸಾವಯವ ಗೊಬ್ಬರವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ರೈತರಿಗೆ ದೊಡ್ಡ ಪ್ರಮಾಣದಲ್ಲಿ ಇಂಧನ ಪಾರ್ಕ್ ಗಳನ್ನು ಸ್ಥಾಪಿಸಲು ನಾವು ಸಹಾಯ ಮಾಡುತ್ತೇವೆ. ಇದರೊಂದಿಗೆ, ಅವರು ಆಹಾರ ಪೂರೈಕೆದಾರರೊಂದಿಗೆ ಇಂಧನ ಪೂರೈಕೆದಾರರಾಗಲು ಸಾಧ್ಯವಾಗುತ್ತದೆ ಮತ್ತು ಅವರ ಆದಾಯವೂ ಹೆಚ್ಚಾಗುತ್ತದೆ ಎಂದು ಅಂಬಾನಿ (Mukesh Ambani) ತಿಳಿಸಿದರು.  ಇದನ್ನೂ ಓದಿ: ಕಡಿಮೆ ಬೆಲೆಗೆ ಕ್ಲೌಡ್‌ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲು ಮುಂದಾದ ಜಿಯೋ

    ಫೌಂಡೇಶನ್ ನಡೆಸುವ ಕೆಲಸಗಳು: ಕೋಲ್ಕತ್ತಾದ ಪ್ರಸಿದ್ಧ ಕಾಳಿಘಾಟ್ ದೇವಾಲಯದ ನವೀಕರಣ ಮತ್ತು ಜೀರ್ಣೋದ್ಧಾರ ಹಾಗೂ ಶತಮಾನಗಳಷ್ಟು ಹಳೆಯದಾದ ಈ ದೇವಾಲಯದ ದುರಸ್ತಿ ಮತ್ತು ಸೌಂದರ್ಯ ಹೆಚ್ಚಿಸುವ ಕಾರ್ಯವನ್ನು ರಿಲಯನ್ಸ್ ಫೌಂಡೇಷನ್ ಮಾಡುತ್ತಿದೆ. ಫೌಂಡೇಷನ್‍ನ ‘ಸ್ವದೇಶ್’ ಉಪಕ್ರಮದ ಅಡಿಯಲ್ಲಿ ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಪ್ರದಾಯಿಕ ಕಲೆ ಮತ್ತು ಕರಕುಶಲಗಳನ್ನು ಭಾರತದಲ್ಲಿ ಮತ್ತು ಜಾಗತಿಕವಾಗಿ ಪ್ರಚಾರ ಮಾಡಲಾಗುತ್ತಿದೆ. ರಿಲಯನ್ಸ್ ಫೌಂಡೇಷನ್ ಬಂಗಾಳದ ಯುವ ಪೀಳಿಗೆಯ ಕುಶಲಕರ್ಮಿಗಳಿಗೆ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸುತ್ತದೆ. ಅಲ್ಲದೆ ನೇಕಾರರು, ಕುಶಲಕರ್ಮಿಗಳು ಮತ್ತು ಕರಕುಶಲಕರ್ಮಿಗಳ ಉತ್ಪನ್ನಗಳನ್ನು ರಿಲಯನ್ಸ್ ನ ರೀಟೇಲ್ ನ ಔಟ್‍ಲೆಟ್‍ಗಳ ಮೂಲಕ ಮಾರಾಟ ಮಾಡಲು ‘ಬಿಸ್ವಾ ಬಾಂಗ್ಲಾ ಕಾರ್ಪೊರೇಷನ್’ ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದರು.

  • ಮುಕೇಶ್‌ ಅಂಬಾನಿಗೆ 3ನೇ ಬಾರಿಗೆ ಕೊಲೆ ಬೆದರಿಕೆ – ಬೇಡಿಕೆ ಮೊತ್ತ 400 ಕೋಟಿಗೆ ಏರಿಕೆ

    ಮುಕೇಶ್‌ ಅಂಬಾನಿಗೆ 3ನೇ ಬಾರಿಗೆ ಕೊಲೆ ಬೆದರಿಕೆ – ಬೇಡಿಕೆ ಮೊತ್ತ 400 ಕೋಟಿಗೆ ಏರಿಕೆ

    ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ (Mukesh Ambani) ಅವರಿಗೆ 3ನೇ ಬಾರಿಗೆ ಕೊಲೆ ಬೆದರಿಕೆ ಬಂದಿದೆ. ಇಮೇಲ್‌ನಲ್ಲಿ ಮತ್ತೊಂದು ಬೆದರಿಕೆ ಪತ್ರ ಬಂದಿದ್ದು, ಬೇಡಿಕೆ ಮೊತ್ತವನ್ನು 200 ಕೋಟಿ ರೂ.ನಿಂದ 400 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.

    ಇದೇ ಅಕ್ಟೋಬರ್‌ 27 ರಂದು 200 ಕೋಟಿ ರೂ.ಗಳಿಗೆ ಬೇಡಿಕೆಯಿಟ್ಟು ಬೆದರಿಕೆ ಇಮೇಲ್‌ ಪತ್ರ (Email Death Threat Letter) ಕಳುಹಿಸಿದ್ದ ಅದೇ ಇಮೇಲ್‌ನಿಂದ ಮತ್ತೊಂದು ಬೆದರಿಕೆ ಪತ್ರ ಬಂದಿದೆ. ಈ ಬಾರಿ ಬೇಡಿಕೆ ಮೊತ್ತವನ್ನು 400 ಕೋಟಿಗೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಫೇಸ್‍ಬುಕ್ ಗೆಳೆಯನಿಗಾಗಿ ಪಾಕ್‍ಗೆ ತೆರಳಿದ್ದಾಕೆಗೆ ಈಗ ಮಕ್ಕಳನ್ನು ನೋಡುವ ಬಯಕೆ!

    ನಿಮಗೆ ಎಷ್ಟೇ ಉತ್ತಮ ಭದ್ರತೆ ಇದ್ದರೂ, ನಮ್ಮ ಒಬ್ಬನೇ ಒಬ್ಬ ಸ್ನೈಪರ್‌ ನಿಮ್ಮನ್ನು ಕೊಲ್ಲುತ್ತಾನೆ. ಈ ಬಾರಿ ನಮ್ಮಮ್ಮ ಪತ್ತೆ ಮಾಡುವುದಕ್ಕಾಗಲಿ ಅಥವಾ ಬಂಧಿಸುವುದಕ್ಕಾಗಲಿ ಸಾಧ್ಯವಿಲ್ಲ ಎಂದೂ ಇಮೇಲ್‌ನಲ್ಲಿ ಅಪರಿಚಿತ ವ್ಯಕ್ತಿ ಎಚ್ಚರಿಕೆ ನೀಡಿದ್ದಾನೆ. 3ನೇ ಬಾರಿಗೆ ಕೊಲೆ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು (Mumbai Police) ದಕ್ಷಿಣ ಮುಂಬೈನಲ್ಲಿರುವ ಅಂಬಾನಿ ನಿವಾಸಕ್ಕೆ ಭದ್ರತೆ ಹೆಚ್ಚಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ನೌಕಾಪಡೆಯಿಂದ 37 ಭಾರತೀಯ ಮೀನುಗಾರರ ಬಂಧನ – 5 ದೋಣಿಗಳು ವಶ

    ಇದೇ ತಿಂಗಳ ಅಕ್ಟೋಬರ್‌ 27 ರಂದು ಮೊದಲ ಇಮೇಲ್‌ ಬೆದರಿಕೆ ಪತ್ರ ಬಂದಿತ್ತು. ಅದರಲ್ಲಿ 20 ಕೋಟಿ ರೂ.ಗಳನ್ನು ತಪ್ಪದೇ ಕೊಡಬೇಕು. ನಮ್ಮ ಬಳಿ ಶಾರ್ಪ್ ಶೂಟರ್‌ಗಳಿದ್ದು, ಹಣ ನೀಡುವಲ್ಲಿ ವಿಫಲರಾದರೆ ಗುಂಡು ಹಾರಿಸಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು. ಅಕ್ಟೋಬರ್‌ 28 ರಂದು ಅದೇ ಇಮೇಲ್‌ನಿಂದ ಅಪರಿಚಿತ ವ್ಯಕ್ತಿಯೊಬ್ಬ ಮತ್ತೊಂದು ಬೆದರಿಕೆ ಪತ್ರ ಕಳುಹಿಸಿದ್ದ. ಹಿಂದಿನ ಇ-ಮೇಲ್‌ಗೆ ಪ್ರತಿಕ್ರಿಯೆ ನೀಡದ ಕಾರಣ ಹಣದ ಬೇಡಿಕೆಯನ್ನು 200 ಕೋಟಿ ರೂ.ಗೆ ಹೆಚ್ಚಿಸಿರುವುದಾಗಿ ಎಚ್ಚರಿಕೆ ನೀಡಿದ್ದ.

    ಕೊಲೆ ಬೆದರಿಕೆ ಸಂಬಂಧ ಮುಕೇಶ್‌ ಅಂಬಾನಿ ಅವರ ಅವರ ಭದ್ರತಾ ಸಿಬ್ಬಂದಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಮುಂಬೈನ ಗಾಮ್‌ದೇವಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 387 ಮತ್ತು 506 (2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಅದೇ ಇಮೇಲ್‌ನಿಂದ ಅಪರಿಚಿತ ವ್ಯಕ್ತಿಯೊಬ್ಬ 3ನೇ ಇಮೇಲ್‌ ಬೆದರಿಕೆ ಪತ್ರ ಕಳುಹಿಸಿದ್ದು, ಮುಂಬೈ ಪೊಲೀಸರಿಗೆ ತಲೆನೋವು ತಂದಿದೆ. ಇದನ್ನೂ ಓದಿ: ಕತಾರ್‌ನಲ್ಲಿ ಬಂಧಿತರಾಗಿದ್ದ 8 ಮಾಜಿ ನೌಕಾಪಡೆ ಸಿಬ್ಬಂದಿಗೆ ಮರಣದಂಡನೆ! – ಭಾರತಕ್ಕೆ ಆಘಾತ

    ಅಂಬಾನಿಗೆ ಕೊಲೆ ಬೆದರಿಕೆ ಬರುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಮುಕೇಶ್‌ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರಿಗೆ ಕೊಲೆ ಬೆದರಿಕೆ ಕರೆಗಳನ್ನು ಮಾಡಿದ್ದಕ್ಕಾಗಿ ಬಿಹಾರದ ದರ್ಭಾಂಗ್‌ನ ವ್ಯಕ್ತಿಯನ್ನು ಮುಂಬಯಿ ಪೊಲೀಸರು ಬಂಧಿಸಿದ್ದರು. ಮುಂಬಯಿಲ್ಲಿನ ಸರ್‌ ಎಚ್‌.ಎನ್‌. ರಿಲಯನ್ಸ್ ಫೌಂಡೇಶನ್‌ ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಆರೋಪಿಗಳು ಬೆದರಿಕೆ ಬಂದಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಿಲಯನ್ಸ್‌ ಹಿಂದಿಕ್ಕಿ ಲಾಭಾಂಶದಲ್ಲಿ ದೇಶದಲ್ಲಿ ನಂ.1 ಕಂಪನಿಯಾಗಿ ಹೊರಹೊಮ್ಮಿದ ಎಸ್‌ಬಿಐ

    ರಿಲಯನ್ಸ್‌ ಹಿಂದಿಕ್ಕಿ ಲಾಭಾಂಶದಲ್ಲಿ ದೇಶದಲ್ಲಿ ನಂ.1 ಕಂಪನಿಯಾಗಿ ಹೊರಹೊಮ್ಮಿದ ಎಸ್‌ಬಿಐ

    ಮುಂಬೈ: ಸರ್ಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ಲಾಭಾಂಶದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ (Reliance Industries) ಕಂಪನಿಯನ್ನು ಹಿಂದಿಕ್ಕಿ ದೇಶದಲ್ಲೇ ಅತಿ ಹೆಚ್ಚು ಲಾಭಾಂಶ ದಾಖಲಿಸಿದ ಕಂಪನಿಯಾಗಿ (India’s Most Profitable Firm) ಹೊರಹೊಮ್ಮಿದೆ.

    2023-24ರ ಹಣಕಾಸು ವರ್ಷದ ಏಪ್ರಿಲ್‌ ಜೂನ್‌ ಅವಧಿಯ ಮೊದಲ ತ್ರೈಮಾಸಿಕದಲ್ಲಿ ಎಸ್‌ಬಿಐ 18,537 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಈ ಅವಧಿಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ 16,011 ಕೋಟಿ ರೂ. ಲಾಭ ದಾಖಲಿಸಿದೆ. ಇದನ್ನೂ ಓದಿ: ತಿಲಕ್ ವರ್ಮಾ ಫಿಫ್ಟಿ ತಪ್ಪಿಸಿ ಹಿಗ್ಗಾಮುಗ್ಗ ಟ್ರೋಲ್‌ಗೆ ಗುರಿಯಾದ ಪಾಂಡ್ಯ – ಅಭಿಮಾನಿಗಳು ಕೆಂಡ

    ಭಾರತದಲ್ಲಿ ದಶಕದಿಂದಲೂ ರಿಲಯನ್ಸ್‌ ಇಂಡಸ್ಟ್ರೀಸ್‌ ಅತಿ ಹೆಚ್ಚು ಲಾಭ ದಾಖಲಿಸುವ ಕಂಪನಿಯಾಗಿ ಹೊರ ಹೊಮ್ಮುತ್ತಿದೆ. ರಿಲಯನ್ಸ್‌ ಇಂಡಸ್ಟೀಸ್‌ ಅನ್ನು ಎಸ್‌ಬಿಐ ಲಾಭದಲ್ಲಿ ಹಿಂದಿಕ್ಕುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ 2011-12ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 18,810 ಕೋಟಿ ರೂ. ಎಸ್‌ಬಿಐ ನಿವ್ವಳ ಲಾಭ ದಾಖಲಿಸಿದರೆ ರಿಲಯನ್ಸ್‌ 18,588 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು.

    ಈ ಹಿಂದೆ 2012-13ರ ಅವಧಿಯ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಇಂಡಿಯನ್‌ ಆಯಿಲ್‌ ಕಂಪನಿ ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯನ್ನು ಹಿಂದಿಕ್ಕಿತ್ತು. 2012 ಹಣಕಾಸು ವರ್ಷದ ಅಕ್ಟೋಬರ್‌ ಡಿಸೆಂಬರ್‌ ಅವಧಿಯ ಲಾಭಾಂಶದಲ್ಲಿ ಒಎನ್‌ಜಿಸಿ ರಿಲಯನ್ಸ್‌ ಹಿಂದಿಕ್ಕಿ ಮೊದಲ ಸ್ಥಾನ ಪಡೆದಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊಬೈಲ್ ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟ Hotstar – ವಿಶ್ವಕಪ್, ಏಷ್ಯಾಕಪ್ ಟೂರ್ನಿ ವೀಕ್ಷಣೆ ಫ್ರೀ

    ಮೊಬೈಲ್ ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್ ಕೊಟ್ಟ Hotstar – ವಿಶ್ವಕಪ್, ಏಷ್ಯಾಕಪ್ ಟೂರ್ನಿ ವೀಕ್ಷಣೆ ಫ್ರೀ

    ಮುಂಬೈ: ಮೊಬೈಲಿನಲ್ಲಿ ಕ್ರಿಕೆಟ್ ವೀಕ್ಷಿಸುವ ಬಳಕೆದಾರರಿಗೆ ಡಿಸ್ನಿ ಹಾಟ್‌ಸ್ಟಾರ್ (Disney Hotstar) ಸಿಹಿ ಸುದ್ದಿ ಕೊಟ್ಟಿದೆ. ಪ್ರಸಕ್ತ ವರ್ಷದಲ್ಲೇ ನಡೆಯಲಿರುವ ಏಕದಿನ ಏಷ್ಯಾಕಪ್ (Asia Cup 2023) ಹಾಗೂ ಏಕದಿನ ವಿಶ್ವಕಪ್ ಟೂರ್ನಿಗಳನ್ನ (ICC Cricket World Cup) ಮೊಬೈಲ್ ಆ್ಯಪ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.

    2023ರಲ್ಲಿ ನಡೆದ 16ನೇ ಐಪಿಎಲ್ ಆವೃತ್ತಿಯಲ್ಲಿ ಜಿಯೋಸಿನಿಮಾ (JioCinema) ಆ್ಯಪ್ ಕ್ರಿಕೆಟ್ ಅಭಿಮಾನಿಗಳಿಗೆ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟು ಸಕ್ಸಸ್ ಕಂಡಿತು. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯವನ್ನ 3.2 ಕೋಟಿ ಜನ ಏಕಕಾಲಕ್ಕೆ ವೀಕ್ಷಣೆ ಮಾಡಿದ್ದರು. ಇದು ಈ ಹಿಂದಿನ ಎಲ್ಲಾ ದಾಖಲೆಗಳನ್ನ ಉಡೀಸ್ ಮಾಡಿತು. ಹಾಗಾಗಿ ಪ್ರತಿಸ್ಪರ್ಧಿ ಡಿಸ್ನಿ ಹಾಟ್‌ಸ್ಟಾರ್ 2023ರಲ್ಲಿ ನಡೆಯಲಿರುವ ಏಕದಿನ ಏಷ್ಯಾಕಪ್ ಹಾಗೂ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಉಚಿತವಾಗಿ ವೀಕ್ಷಿಸಲು ಬಳಕೆದಾರರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಹೇಳಿದೆ.

    ಅಕ್ಟೋಬರ್ 5 ರಿಂದ ನವೆಂಬರ್ 19ರ ವರೆಗೆ ಏಕದಿನ ವಿಶ್ವಕಪ್ ನಡೆಯಲಿದೆ. ಸೆಪ್ಟಂಬರ್ 2 ರಿಂದ ಸೆಪ್ಟಂಬರ್ 17ರ ವರೆಗೆ ಏಕದಿನ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಏಕದಿನ ಏಷ್ಯಾಕಪ್ ಶ್ರೀಲಂಕಾದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಈ ಟೂರ್ನಿಗಳನ್ನ ಹಾಟ್‌ಸ್ಟಾರ್ ಮೊಬೈಲ್ ಆ್ಯಪ್ ಬಳಕೆದಾರರು ಚಂದಾದಾರರಾಗದೆಯೂ ಉಚಿತವಾಗಿ ವೀಕ್ಷಿಸಬಹುದಾಗಿದೆ. ಇದನ್ನೂ ಓದಿ:  Record… Record… Record: ಫೈನಲ್‌ ಮ್ಯಾಚ್‌ನಲ್ಲಿ ಎಲ್ಲಾ ದಾಖಲೆ ಉಡೀಸ್‌ – ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 3.2 ಕೋಟಿ ಜನ ವೀಕ್ಷಣೆ

    2023ರ ಐಪಿಎಲ್ ಟೂರ್ನಿ ವೇಳೆ ಜಿಯೋಸಿನಿಮಾ ಮೊದಲ 5 ವಾರಗಳಲ್ಲೇ ದಾಖಲೆಯ 13 ಕೋಟಿ ಡಿಜಿಟಲ್ ವೀಕ್ಷಣೆ ಕಂಡಿತ್ತು. ಪ್ರತಿ ವೀಕ್ಷಕರು ಪ್ರತಿ ಪಂದ್ಯವನ್ನು ಕನಿಷ್ಠ 1 ಗಂಟೆ ವೀಕ್ಷಣೆ ಮಾಡಿದ್ದರು. 2023ರ ಐಪಿಎಲ್ ಹಕ್ಕು ಕಳೆದುಕೊಂಡ ನಂತರ ಹಾಟ್‌ಸ್ಟಾರ್ ಆ್ಯಪ್ ತನ್ನ 50 ಲಕ್ಷ ಮೂಲ ಬಳಕೆದಾರರನ್ನ ಕಳೆದುಕೊಂಡಿದೆ ಎಂದು ಸಿಎಲ್‌ಎಸ್‌ಎ ಸಂಶೋಧನಾ ಸಂಸ್ಥೆ ಅಂದಾಜಿಸಿದೆ. ಈ ಹಿನ್ನೆಲೆಯಲ್ಲಿ ಡಿಸ್ನಿ ಹಾಟ್‌ಸ್ಟಾರ್ ಸಹ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ಟೂರ್ನಿಗಳನ್ನ ಮೊಬೈಲ್ ಆ್ಯಪ್ ಬಳಕೆದಾರಿಗೆ ಉಚಿತ ಸ್ಟ್ರೀಮಿಂಗ್ ನೀಡಲು ನಿರ್ಧರಿಸಿದೆ. ಇದನ್ನೂ ಓದಿ: ಆಸೀಸ್‌ ಮಾರಕ ಬೌಲಿಂಗ್‌ಗೆ ಟಾಪ್‌ ಬ್ಯಾಟರ್‌ಗಳು ಪಲ್ಟಿ – 318 ರನ್‌ಗಳ ಹಿನ್ನಡೆಯಲ್ಲಿ ಭಾರತ

    ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ಲೇಷಕ ಕರಣ್ ತೌರಾನಿ, ಉಚಿತ ಕೊಡುಗೆಗಳು ದೀರ್ಘಾವಧಿಯಾಗಿ ಮುಂದುವರಿದರೇ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ಗಳಿಗೆ ನಷ್ಟ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.

  • ಉತ್ತರ ಪ್ರದೇಶದಲ್ಲಿ 75 ಸಾವಿರ ಕೋಟಿ ಹೂಡಿಕೆ, 1 ಲಕ್ಷ ಉದ್ಯೋಗ : ಮುಖೇಶ್ ಅಂಬಾನಿ

    ಉತ್ತರ ಪ್ರದೇಶದಲ್ಲಿ 75 ಸಾವಿರ ಕೋಟಿ ಹೂಡಿಕೆ, 1 ಲಕ್ಷ ಉದ್ಯೋಗ : ಮುಖೇಶ್ ಅಂಬಾನಿ

    ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) 75 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಮುಖ್ಯಸ್ಥ ಮುಖೇಶ್ ಅಂಬಾನಿ (Mukesh Ambani) ಘೋಷಿಸಿದ್ದಾರೆ.

    ದೂರಸಂಪರ್ಕ ಕ್ಷೇತ್ರದಲ್ಲಿ 5ಜಿ ಸೇವೆಯನ್ನು ಉನ್ನತೀಕರಿಸುವ ವಿಷಯವೂ ಸೇರಿದಂತೆ, ಚಿಲ್ಲರೆ ವಹಿವಾಟು ಹಾಗೂ ಇಂಧನದ ಉತ್ಪಾದನ ಕ್ಷೇತ್ರದ ಮೇಲೆ ಮುಂದಿನ ನಾಲ್ಕು ವರ್ಷಗಳಲ್ಲಿ 75000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುವುದು. ಇದರಿಂದ 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.

    ಉತ್ತರ ಪ್ರದೇಶ ಆಯೋಜಿಸಿದ ಜಾಗತಿಕ ಹೂಡಿಕೆದಾರರ ಸಭೆಯಲ್ಲಿ (Global Investors Summit) ಮಾತನಾಡಿದ ಅವರು ಈ ವರ್ಷದ ಕೊನೆಯೊಳಗೆ 5ಜಿ ಸೇವೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.

    ಜಿಯೋ (Jio) ಸೇವೆಯ ಉನ್ನತೀಕರಣದಿಂದ ವ್ಯವಹಾರ ಹಾಗೂ ಕೈಗಾರಿಕೆ, ಕೃಷಿ, ಸಾಮಾಜಿಕ ಮತ್ತು ಸರ್ಕಾರಿ ಕ್ಷೇತ್ರಗಳಲ್ಲಿ ಅನುಕೂಲವಾಗಲಿದೆ. 5ಜಿ ಸೇವೆಯನ್ನು ದೇಶದ ಉದ್ದಗಲಕ್ಕೂ ವಿಸ್ತರಿಸುವ ಕುರಿತು ಸರ್ಕಾರದೊಂದಿಗೆ ಚರ್ಚಿಸಲಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ದೇಶದಲ್ಲೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಲಿಥಿಯಮ್ ನಿಕ್ಷೇಪ ಪತ್ತೆ

    ರಿಲಯನ್ಸ್ ಹೂಡಿಕೆ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದು ಸಾವಿರಾರು ಕಿರಾಣಿ ಅಂಗಡಿಗಳು ಹಾಗೂ ಸಣ್ಣ ವ್ಯಾಪಾರಸ್ಥರಿಗೆ ಹೆಚ್ಚು ಲಾಭಗಳಿಸಲು ಸಾಧ್ಯವಾಗಲಿದೆ. ಕೃಷಿ ಹಾಗೂ ಕೃಷಿಯೇತರ ತ್ಯಾಜ್ಯಗಳನ್ನು ಬಳಸಿ ಜೈವಿಕ ಇಂಧನ ಘಟಕ ಹಾಗೂ ಹತ್ತು ಸಾವಿರ ಮೆಗಾವ್ಯಾಟ್‍ನಷ್ಟು ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ ಎಂದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k