Tag: Reliance Foundation

  • ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿ ವೇತನಕ್ಕೆ ಕರ್ನಾಟಕದ 590 ವಿದ್ಯಾರ್ಥಿಗಳು ಆಯ್ಕೆ

    ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿ ವೇತನಕ್ಕೆ ಕರ್ನಾಟಕದ 590 ವಿದ್ಯಾರ್ಥಿಗಳು ಆಯ್ಕೆ

    ಮುಂಬೈ: ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದವರ ಪಟ್ಟಿಯನ್ನು ರಿಲಯನ್ಸ್ ಫೌಂಡೇಷನ್‌ (Reliance Foundation) ಘೋಷಣೆ ಮಾಡಿದೆ.

    2024-25ನೇ ಸಾಲಿನ, ಭಾರತದಾದ್ಯಂತ ಐದು ಸಾವಿರ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಭಾರತದ ಭವಿಷ್ಯವನ್ನು ರೂಪಿಸುವುದಕ್ಕೆ ಸಬಲಗೊಳಿಸಬೇಕು, ಯುವ ಪ್ರತಿಭಾವಂತರನ್ನು ಉತ್ತೇಜಿಸಬೇಕು ಎಂಬ ಉದ್ದೇಶದಿಂದ ರಿಲಯನ್ಸ್ ಫೌಂಡೇಷನ್ ಇಂಥದ್ದೊಂದು ಕಾರ್ಯಕ್ರಮವನ್ನು ರೂಪಿಸಿದೆ. ಈ ವಿದ್ಯಾರ್ಥಿ ವೇತನಕ್ಕಾಗಿ ಭಾರತದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ, ವಿವಿಧ ಹಿನ್ನೆಲೆಯ ಒಂದು ಲಕ್ಷ ಸಂಖ್ಯೆಯ ಪ್ರಥಮ ವರ್ಷದ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ಬೆಂಗಳೂರಿನ 1ಎಂಜಿ ಮಾಲ್‌ನಲ್ಲಿ ರಿಲಯನ್ಸ್‌ನ ಫ್ರೆಶ್‌ಪಿಕ್ ಮಳಿಗೆ

    ಆಯ್ಕೆಯಾದ ವಿದ್ಯಾರ್ಥಿಗಳು ವಿವಿಧ ಹಿನ್ನೆಲೆಯ ಹಾಗೂ ಶೈಕ್ಷಣಿಕ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳು ಹಣಕಾಸಿನ ನೆರವು, ಮಾರ್ಗದರ್ಶನ ಮತ್ತು ಸರ್ವತೋಮುಖ ಬೆಳವಣಿಗೆಯ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಇದರಲ್ಲಿ ಉಲ್ಲೇಖಿಸಲೇ ಬೇಕಾದ ಸಂಗತಿ ಏನೆಂದರೆ, 1300ರಲ್ಲಿ 670 ಸಂಸ್ಥೆಗಳು ಹಾಗೂ 5000 ವಿದ್ಯಾರ್ಥಿಗಳ ಪೈಕಿ 590 ಮಂದಿ ಕರ್ನಾಟಕಕ್ಕೆ ಸೇರಿರುವುದು. ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿ ವೇತನದ ಸಿಂಹಪಾಲು ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಇನ್ನು ಒಟ್ಟಾರೆಯಾಗಿ ನೋಡಿದರೆ, ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುವುದರಲ್ಲಿ ಶೇಕಡಾ 70ರಷ್ಟು ಕುಟುಂಬಗಳ ವಾರ್ಷಿಕ ಆದಾಯವು 2.50 ಲಕ್ಷ ರೂಪಾಯಿಗಿಂತ ಕಡಿಮೆ ಇದೆ.

    ಈ ಸ್ಕಾಲರ್‌ಷಿಪ್ ವಿದ್ಯಾರ್ಥಿಯ ಬೋಧನಾ ಶುಲ್ಕ (ಟ್ಯೂಷನ್ ಫೀ), ಹಾಸ್ಟೆಲ್ ವೆಚ್ಚ ಮತ್ತು ಇತರ ಶೈಕ್ಷಣಿಕ ಶುಲ್ಕವನ್ನು ಭರಿಸುತ್ತದೆ. ಆ ಮೂಲಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕವಾದ ಸಮಸ್ಯೆಗಳ ಕಡೆಗೆ ಆಲೋಚನೆ ಮಾಡುವ ಅಗತ್ಯವಿಲ್ಲದೆ ಓದಿನ ಕಡೆಗೆ ಗಮನ ಕೊಡಬಹುದಾಗಿರುತ್ತದೆ. ಹಣಕಾಸಿನ ನೆರವು ಮಾತ್ರವಲ್ಲದೆ, ಈ ವಿದ್ಯಾರ್ಥಿಗಳಿಗೆ ಸಮಗ್ರವಾದ ಬೆಂಬಲ, ಮಾರ್ಗದರ್ಶನ, ವೃತ್ತಿಪರವಾದ ಬೆಳವಣಿಗೆಗೆ ಅವಕಾಶಗಳನ್ನು ಒದಗಿಸಿಕೊಡಲಾಗುವುದು. ಇದನ್ನೂ ಓದಿ: ಡೇಟಾ ಟ್ರಾಫಿಕ್‌- ಚೀನಾ ಕಂಪನಿ ಹಿಂದಿಕ್ಕಿದ ರಿಲಯನ್ಸ್‌

    ರಿಲಯನ್ಸ್ ವಕ್ತಾರರು ಈ ಕಾರ್ಯಕ್ರಮದ ಬಗ್ಗೆ ಮಾತನಾಡಿ, ಈ ಅಸಾಧಾರಣ ಯುವ ಮನಸ್ಸುಗಳನ್ನು ಗುರುತಿಸಲು ಮತ್ತು ಬೆಂಬಲಿಸಲು ನಾವು ಸಂತೋಷಪಡುತ್ತೇವೆ. ಪ್ರತಿಷ್ಠಿತ ರಿಲಯನ್ಸ್ ಫೌಂಡೇಷನ್ ಪದವಿ ಹಂತದ ಸ್ಕಾಲರ್‌ಷಿಪ್‌ಗಳ ಮೂಲಕವಾಗಿ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸುವುದಕ್ಕೆ ಮತ್ತು ಭಾರತದ ಬೆಳವಣಿಗೆಗೆ ಗಮನಾರ್ಹ ಕೊಡುಗೆಗಳನ್ನು ನೀಡಲು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ.ಈ ವರ್ಷ ನಾವು ಸುಮಾರು ಒಂದು ಲಕ್ಷ ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಆಯ್ಕೆಯಾದವರು ದೇಶದ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಶಿಕ್ಷಣವು ಅವಕಾಶಗಳನ್ನು ತೆರೆಯುವಂಥ ಕೀಲಿಯಾಗಿದೆ. ಈ ವಿದ್ಯಾರ್ಥಿಗಳ ಪರಿವರ್ತನೆಯ ಪ್ರಯಾಣದ ಭಾಗವಾಗಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿದ್ದಾರೆ.

    ಫಲಿತಾಂಶ ಪರಿಶೀಲಿಸುವುದು ಹೇಗೆ?
    ಸ್ಕಾಲಶಿಪ್‌ಗಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು https://reliancefoundation.org/ug-scholarships-2024-25-results ವೆಬ್‌ಸೈಗೆ ಭೇಟಿ ನೀಡಬೇಕು. ಅದರಲ್ಲಿ 2024-25ನೇ ಸಾಲಿನ ವಿದ್ಯಾರ್ಥಿವೇತನಕ್ಕಾಗಿ https://scholarships.reliancefoundation.org/UGScholarship_ApplicationStatus.aspx ಮೀಸಲಾದ ಪುಟಕ್ಕೆ ತೆರಳಿ, 17 ಅಂಕಿಯ ಅರ್ಜಿ ಸಂಖ್ಯೆಯನ್ನು ಅಥವಾ ನೋಂದಾಯಿತ ಇ-ಮೇಲ್ ಐಡಿ ನಮೂದಿಸಬೇಕು. ಆ ನಂತರ ಸಲ್ಲಿಸು (ಸಬ್ ಮಿಟ್) ಎಂಬ ಆಯ್ಕೆ ಇರುವ ಬಟನ್ ಒತ್ತುವ ಮೂಲಕವಾಗಿ ಫಲಿತಾಂಶವನ್ನು ನೋಡಬಹುದು. ಅರ್ಜಿಯ ಸ್ಥಿತಿಯು ‘Shortlisted’, ‘Waitlisted’ ಮತ್ತು ‘Not Shortlisted’ ಹೀಗೆ ಮೂರು ವಿಭಾಗಗಳಲ್ಲಿ ಇರುತ್ತದೆ. ಇದನ್ನೂ ಓದಿ: ಚೆನ್ನೈ ರಿಲಯನ್ಸ್‌ ಕ್ಯಾಂಪಸ್‌ನಲ್ಲಿ ಫೇಸ್‌ಬುಕ್‌ ಡೇಟಾ ಸೆಂಟರ್‌!

    ಆಯ್ಕೆಯಾದ ವಿದ್ಯಾರ್ಥಿಗಳಿಗೆ ಎರಡು ಲಕ್ಷ ರೂಪಾಯಿ ತನಕ ವಿದ್ಯಾರ್ಥಿ ವೇತನ ದೊರೆಯುತ್ತದೆ. 1996ನೇ ಇಸವಿಯಲ್ಲಿ ಆರಂಭವಾದ ಈ ಕಾರ್ಯಕ್ರಮವು 2020ರ ಹೊತ್ತಿಗೆ ಭಾರತದಾದ್ಯಂತ 28,000 ವಿದ್ಯಾರ್ಥಿಗಳನ್ನು ತಲುಪಿತ್ತು. 2022ರ ಡಿಸೆಂಬರ್‌ನಲ್ಲಿ ರಿಲಯನ್ಸ್ ಸ್ಥಾಪಕರಾದ ಧೀರೂಭಾಯಿ ಅಂಬಾನಿ ಅವರ ತೊಂಬತ್ತನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ, ‘ಮುಂದಿನ ಹತ್ತು ವರ್ಷಗಳಲ್ಲಿ ಇನ್ನೂ ಐವತ್ತು ಸಾವಿರ ಸ್ಕಾಲರ್‌ಶಿಪ್‌ಗಳನ್ನು ನೀಡುತ್ತೇವೆ ಎಂದು ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಹಾಗೂ ಮುಖ್ಯಸ್ಥೆಯಾದ ನೀತಾ ಅಂಬಾನಿ ಘೋಷಣೆ ಮಾಡಿದರು. ಆ ನಂತರದಲ್ಲಿ ಪ್ರತಿ ವರ್ಷ 5,100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

  • ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿಗೆ ‘ಸಿಟಿಜನ್ ಆಫ್ ಮುಂಬೈ’ ಪ್ರಶಸ್ತಿ

    ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಅಂಬಾನಿಗೆ ‘ಸಿಟಿಜನ್ ಆಫ್ ಮುಂಬೈ’ ಪ್ರಶಸ್ತಿ

    ಮುಂಬೈ: ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ (Nita Ambani) ಅವರಿಗೆ ರೋಟರಿ ಕ್ಲಬ್ ಆಫ್ ಬಾಂಬೆ (Rotary Club Bombay) ಪ್ರತಿಷ್ಠಿತ ‘ಸಿಟಿಜನ್ ಆಫ್ ಮುಂಬೈ 2023-24’ (Citizen of Mumbai 2023-24) ಪ್ರಶಸ್ತಿ ನೀಡಿ ಗೌರವಿಸಿದೆ.

    ರಿಲಯನ್ಸ್ ಫೌಂಡೇಶನ್ (Reliance Foundation) ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿಯನ್ನು ಹಂಚಿಕೊಂಡಿದೆ. ಆರೋಗ್ಯ, ಶಿಕ್ಷಣ, ಕ್ರೀಡೆ, ಕಲೆ, ಸಂಸ್ಕೃತಿ ಕ್ಷೇತ್ರಗಳಲ್ಲಿ ಪರಿವರ್ತನಾಶೀಲ ಸಂಸ್ಥೆಗಳನ್ನು ರಚಿಸಿ, ನಿರಂತರ ಕೊಡುಗೆಗಳನ್ನು ನೀಡಿದ ನೀತಾ ಅಂಬಾನಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.

    ರೋಟರಿಯೊಂದಿಗೆ ನನ್ನ ಕುಟುಂಬದ ಒಡನಾಟ ದಶಕಗಳಷ್ಟು ಹಳೆಯದು. 1969ರಲ್ಲಿ ನನ್ನ ಮಾವ ಧೀರೂಭಾಯಿ ಅಂಬಾನಿ ರೋಟರಿಯನ್ ಆಗಿದ್ದರು. ನಂತರ 2003ರಲ್ಲಿ ಮುಖೇಶ್ ಆದರು. ರೋಟರಿಯನ್ ಆಗಿ ಇದು ನನ್ನ 25ನೇ ವರ್ಷ. ನಾನು ಈ ಪ್ರಯಾಣವನ್ನು ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದೇನೆ ಎಂದು ನೀತಾ ಅಂಬಾನಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: Asian Games 2023- ಮಹಿಳಾ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ

    ಸಿಟಿಜನ್ ಆಫ್ ಮುಂಬೈ ಪ್ರಶಸ್ತಿ ರೋಟರಿ ಕ್ಲಬ್ ಆಫ್ ಬಾಂಬೆ ನೀಡುವ ಪ್ರತಿಷ್ಠಿತ ಗೌರವ. ಇದನ್ನು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹಕೊಡುಗೆ ನೀಡಿದವರಿಗೆ ಪ್ರತಿ ವರ್ಷ ನೀಡಲಾಗುತ್ತದೆ. ಇದನ್ನೂ ಓದಿ: ಕಾವೇರಿಗಾಗಿ ಶುಕ್ರವಾರ ಕರ್ನಾಟಕ ಬಂದ್- 100ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಿಲಯನ್ಸ್ ಫೌಂಡೇಶನ್ ನಿಂದ 5,000 ಪದವಿ ವಿದ್ಯಾರ್ಥಿಗಳಿಗೆ ತಲಾ 2 ಲಕ್ಷ ವಿದ್ಯಾರ್ಥಿವೇತನ!

    ರಿಲಯನ್ಸ್ ಫೌಂಡೇಶನ್ ನಿಂದ 5,000 ಪದವಿ ವಿದ್ಯಾರ್ಥಿಗಳಿಗೆ ತಲಾ 2 ಲಕ್ಷ ವಿದ್ಯಾರ್ಥಿವೇತನ!

    • 4,984 ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ 40,000 ವಿದ್ಯಾರ್ಥಿಗಳಿಂದ ಅರ್ಜಿ ಸ್ವೀಕಾರ.
    • ಮೆರಿಟ್-ಕಮ್-ಮೀನ್ಸ್ ಆಧಾರದ ಮೇಲೆ ವಿವಿಧ ವಿಭಾಗಗಳ ಮತ್ತು ವೈವಿಧ್ಯಮಯ 27 ರಾಜ್ಯಗಳ ಹುಡುಗಿಯರು ಮತ್ತು ಹುಡುಗರು ಸಮಾನ ಸಂಖ್ಯೆಯಲ್ಲಿ ಆಯ್ಕೆ.
    • ಆಯ್ಕೆಯಾದ ಮೊದಲ ವರ್ಷದ ಪದವಿ ವಿದ್ಯಾರ್ಥಿಗಳು 2 ಲಕ್ಷ ರೂ. ವರೆಗಿನ ಅನುದಾನ ಪಡೆಯುತ್ತಾರೆ. ಅಲ್ಲದೇ ಅಧ್ಯಯನದ ಅವಧಿಯಲ್ಲಿ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮದ ಅಡಿಯಲ್ಲಿ ಹಳೆಯ ವಿದ್ಯಾರ್ಥಿಗಳ ನೆಟ್‌ವರ್ಕ್‌ನ ಭಾಗವಾಗಲಿದ್ದಾರೆ.
    • ರಿಲಯನ್ಸ್ ಫೌಂಡೇಶನ್ 10 ವರ್ಷಗಳಲ್ಲಿ 50,000 ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನ ನೀಡಲು ಬದ್ಧವಾಗಿದೆ.

    ಮುಂಬೈ: 27 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 5 ಸಾವಿರ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ (Graduate students) 2022-23ನೇ ಸಾಲಿನ ರಿಲಯನ್ಸ್ ಫೌಂಡೇಶನ್ (Reliance Foundation) ಪದವಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಆಯ್ಕೆಯಾದ ವಿದ್ಯಾರ್ಥಿಗಳು 2 ಲಕ್ಷ ರೂ. ವರೆಗೆ ವಿದ್ಯಾರ್ಥಿವೇತನ (Student Scholarships) ಪಡೆಯುತ್ತಾರೆ. ಜೊತೆಗೆ ಈಗಾಗಲೇ ಸಕ್ರೀಯವಾಗಿರುವ ಹಳೆಯ ವಿದ್ಯಾರ್ಥಿಗಳ ನೆಟ್‌ವರ್ಕ್‌ನ ಭಾಗವಾಗುವ ಅವಕಾಶ ಪಡೆಯಲಿದ್ದಾರೆ.

    ಈ ಕುರಿತು ಮಾತನಾಡಿರುವ ರಿಲಯನ್ಸ್ ಫೌಂಡೇಶನ್ ಸಿಇಒ ಜಗನ್ನಾಥ ಕುಮಾರ್ (Jagannath Kumar), ಉತ್ತಮ ಶಿಕ್ಷಣ ಪಡೆಯುವ ಯುವ ಜನರ ಕನಸಿಗೆ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನವು ರೆಕ್ಕೆಗಳನ್ನು ನೀಡಲಿದೆ ಎಂದು ಆಶಿಸುತ್ತೇವೆ. ರಿಲಯನ್ಸ್‌ ಫೌಂಡೇಶನ್‌ ವೈವಿಧ್ಯಮಯ ವಿದ್ಯಾರ್ಥಿಗಳ ಗುಂಪನ್ನು ಹೊಂದಿದೆ. ಭಾರತದ ಬಹುತೇಕ ಎಲ್ಲಾ ರಾಜ್ಯಗಳಿಂದ ಆಯ್ಕೆಯಾಗಿದ್ದಾರೆ. ಹುಡುಗ, ಹುಡುಗಿಯರು ಸಮಾವಾಗಿ ಪ್ರತಿನಿಧಿಸುತ್ತಿದ್ದಾರೆ. ಆಯ್ಕೆಯಾದ ಪ್ರತಿಯೊಬ್ಬರನ್ನೂ ನಾವು ಅಭಿನಂದಿಸುತ್ತೇವೆ ಎಂದು ಹೇಳಿದ್ದಾರೆ.

    ರಿಲಯನ್ಸ್ ಫೌಂಡೇಶನ್ ಪದವಿ ವಿದ್ಯಾರ್ಥಿವೇತನವನ್ನು ಯಾವುದೇ ಅಧ್ಯಯನದ ಸ್ಟ್ರೀಮ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಮೆರಿಟ್-ಕಮ್-ಮೀನ್ಸ್ ಆಧಾರದ ಮೇಲೆ ನೀಡಲಾಗುತ್ತದೆ. ಈ ವರ್ಷಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಎಂಜಿನಿಯರಿಂಗ್/ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ, ವಾಣಿಜ್ಯ, ಕಲೆ, ವ್ಯಾಪಾರ/ನಿರ್ವಹಣೆ, ಕಂಪ್ಯೂಟರ್ ಅಪ್ಲಿಕೇಶನ್‌ಗಳು, ಕಾನೂನು, ಶಿಕ್ಷಣ, ಆತಿಥ್ಯ, ವಾಸ್ತುಶಿಲ್ಪ ಮತ್ತು ಇತರ ವೃತ್ತಿಪರ ಪದವಿಗಳಿಂದ ಬಂದಿದ್ದಾರೆ. 2022-23ನೇ ಸಾಲಿನಲ್ಲಿ 4,984ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಸುಮಾರು 40,000 ವಿದ್ಯಾರ್ಥಿಗಳ ಅರ್ಜಿಗಳಲ್ಲಿ 5,000 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಶೇ.51 ಹುಡುಗಿಯರನ್ನು ಆಯ್ಕೆ ಮಾಡಲಾಗಿದೆ.

    ಈ ಆಯ್ಕೆ ಪ್ರಕ್ರಿಯೆಯಲ್ಲಿ ಸಾಮರ್ಥ್ಯ ಪರೀಕ್ಷೆ, 12ನೇ ತರಗತಿ ಅಂಕಗಳು ಮತ್ತು ಇತರ ಅರ್ಹತಾ ಮಾನದಂಡಗಳು ಒಳಗೊಂಡಿದೆ. ಕಾರ್ಯಕ್ರಮಕ್ಕೆ ಅಂತರ್ಗತವಾಗಿರುವ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಈ ಸುತ್ತಿನಲ್ಲಿ 99 ವಿಕಲಚೇತನ ವಿದ್ಯಾರ್ಥಿಗಳನ್ನ ವಿದ್ಯಾರ್ಥಿವೇತನಕ್ಕಾಗಿ ಆಯ್ಕೆ ಮಾಡಲಾಗಿದೆ.

    ಕಳೆದ ಡಿಸೆಂಬರ್‌ನಲ್ಲಿ ತನ್ನ ಬದ್ಧತೆಯನ್ನು ಬಲಪಡಿಸುವ ಮೂಲಕ ರಿಲಯನ್ಸ್ ಫೌಂಡೇಶನ್ ಮುಂದಿನ 10 ವರ್ಷಗಳಲ್ಲಿ 50,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವುದಾಗಿ ಘೋಷಿಸಿತ್ತು. ಈ ವಿದ್ಯಾರ್ಥಿವೇತನ ಎಲ್ಲರಿಗೂ ಶಿಕ್ಷಣದ ಪ್ರವೇಶ ಸುಲಭಗೊಳಿಸುವ ಮತ್ತು ಭಾರತದ ಭವಿಷ್ಯ ನಿರ್ಮಿಸುವ ನಿಟ್ಟಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ರಿಲಯನ್ಸ್‌ನ ಪರಂಪರೆಯನ್ನ ಮುಂದುವರಿಸುತ್ತದೆ. 1996 ರಿಂದ ಧೀರೂಭಾಯಿ ಅಂಬಾನಿ ವಿದ್ಯಾರ್ಥಿವೇತನವನ್ನ ಮೆರಿಟ್-ಕಮ್-ಮೀನ್ಸ್ ಆಧಾರದ ಮೇಲೆ ಸುಮಾರು 13,000 ಪದವಿ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಅದರಲ್ಲಿ 2,720 ವಿದ್ಯಾರ್ಥಿಗಳು ವಿಶೇಷಚೇತನರು.

    ಆಯ್ದ ವಿದ್ಯಾರ್ಥಿಗಳು ತಮ್ಮ ಆಯ್ಕೆ ಮತ್ತು ಹೆಚ್ಚಿನ ವಿವರಗಳ ಬಗ್ಗೆ ನೇರವಾಗಿ ಸಂವಹನ ಸ್ವೀಕರಿಸುತ್ತಾರೆ. ಅರ್ಜಿದಾರರು ತಮ್ಮ ಅರ್ಜಿಗಳ ಫಲಿತಾಂಶವನ್ನು ತಿಳಿಯಲು www.reliancefoundation.org ಗೆ ಭೇಟಿ ನೀಡಬಹುದು.

    2022-23ಕ್ಕೆ ಆಯ್ಕೆಯಾದ ರಿಲಯನ್ಸ್ ಫೌಂಡೇಶನ್ ಸ್ನಾತಕ್ಕೋತ್ತರ ವಿದ್ಯಾರ್ಥಿವೇತನ ಪ್ರಕಟಣೆ ಜುಲೈನಲ್ಲಿ ಹೊರಬರಲಿದೆ. ರಿಲಯನ್ಸ್ ಫೌಂಡೇಶನ್ ಪದವಿ ವಿದ್ಯಾರ್ಥಿವೇತನದ (2023-24) ಮುಂದಿನ ಸುತ್ತಿನ ಅರ್ಜಿಗಳನ್ನು ಮುಂಬರುವ ತಿಂಗಳಲ್ಲಿ ನೀಡಲಾಗುವುದು.

    ರಿಲಯನ್ಸ್ ಫೌಂಡೇಶನ್ ಬಗ್ಗೆ ನಿಮಗೆಷ್ಟು ಗೊತ್ತು?
    ರಿಲಯನ್ಸ್ ಫೌಂಡೇಶನ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಲೋಕೋಪಕಾರಿ ಸಂಸ್ಥೆಯಾಗಿದ್ದು, ನವೀನ ಮತ್ತು ಸುಸ್ಥಿರ ಪರಿಹಾರಗಳ ಮೂಲಕ ಭಾರತದ ಅಭಿವೃದ್ಧಿ ಸವಾಲುಗಳನ್ನ ಎದುರಿಸುವಲ್ಲಿ ವೇಗವರ್ಧಕ ಪಾತ್ರವನ್ನು ವಹಿಸುವ ಗುರಿ ಹೊಂದಿದೆ. ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ನೀತಾ ಅಂಬಾನಿ (Nita Ambani) ಅವರ ನೇತೃತ್ವದಲ್ಲಿ ಸಾಮಾನ್ಯ ಜನರ ಯೋಗಕ್ಷೇಮ ಮತ್ತು ಉತ್ತಮ ಗುಣಮಟ್ಟದ ಜೀವನಕ್ಕಾಗಿ ಪರಿವರ್ತಕ ಬದಲಾವಣೆಗಳನ್ನ ಸುಲಭಗೊಳಿಸಲು ಪಟ್ಟುಬಿಡದೆ ಕೆಲಸ ಮಾಡುತ್ತಿದೆ. ರಿಲಯನ್ಸ್ ಫೌಂಡೇಶನ್ ಗ್ರಾಮೀಣ ಪರಿವರ್ತನೆ, ಶಿಕ್ಷಣ, ಆರೋಗ್ಯ, ಅಭಿವೃದ್ಧಿಗಾಗಿ ಕ್ರೀಡೆ, ಮಹಿಳಾ ಸಬಲೀಕರಣ, ವಿಪತ್ತು ನಿರ್ವಹಣೆ, ನಗರ ನವೀಕರಣ ಮತ್ತು ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಜೊತೆಗೆ ದೇಶಾದ್ಯಂತ 54,200ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮತ್ತು ಹಲವು ನಗರಗಳಲ್ಲಿ ಸುಮಾರು 69.5 ಮಿಲಿಯನ್ ಜನರ ಜೀವನ ತಲುಪಿದೆ. ಹೆಚ್ಚಿನ ಮಾಹಿತಿಗಾಗಿ https://www.reliancefoundation.org/ ಭೇಟಿ ನೀಡಬಹುದು.

  • ಬೀದರ್ ನಲ್ಲಿ 150 ಕಡುಬಡವರಿಗೆ ಸಿಕ್ಕಿತು ಎಮ್ಮೆ ಭಾಗ್ಯ

    ಬೀದರ್ ನಲ್ಲಿ 150 ಕಡುಬಡವರಿಗೆ ಸಿಕ್ಕಿತು ಎಮ್ಮೆ ಭಾಗ್ಯ

    ಬೀದರ್: ಕಡು ಬಡವರ ಜೀವನದಲ್ಲಿ ಆಶಾಕಿರಣ ಮೂಡಿಸಲು ಸಲುವಾಗಿ ರಿಲ್ಯಾನ್ಸ್ ಪೌಂಡೇಶನ್ ಸಹಯೋಗದಲ್ಲಿ ಸುಮಾರು 150 ಬಡವರಿಗೆ ಎಮ್ಮೆ ಭಾಗ್ಯ ಸಿಕ್ಕಿದೆ.

    ಜಿಲ್ಲೆಯ ಔರಾದ್ ತಾಲೂಕಿನ ನಾಗೂರು ಎಂ ಗ್ರಾಮದಲ್ಲಿ ರಿಲಾಯನ್ಸ್ ಪೌಂಡೇಶನ್ ಸಹಯೋಗದಲ್ಲಿ `ಬಸವೇಶ್ವರ ರೈತ ಸಂಘ’ ಗ್ರಾಮದ ಜನರ ಒಳಿತಿಗಾಗಿ ದುಡಿಯತ್ತಿದೆ. ರೈತ ಸಂಘದಿಂದ 16 ಗ್ರಾಮಗಳಲ್ಲಿ ಈ ವರ್ಷ 150 ಜನರನ್ನು ಕಡು ಬಡವರೆಂದು ಗುರುತು ಮಾಡಿದ್ದು, ಅವರಿಗೆ ಎಮ್ಮೆ ನೀಡಿ ಜೀವನ ರೂಪಿಸಲು ಸಹಕಾರಿಯಾಗಿದೆ.

    ನಾಗೂರು ಎಂ, ನಾಗೂರು ಎನ್, ಕಾಶೆಂಪೂರು, ಕಪ್ಪೆಕೇರಿ, ನವಲಾಸಪೂರು, ವಿಲಾಸಪೂರು, ಜೈನಾಪೂರು, ಸಿದ್ದಿಪೂರು, ದದ್ದಿಪೂರು, ಪತ್ತೆಪೂರು, ಕಾಜಾಪೂರು ಹೀಗೇ 16 ಗ್ರಾಮಗಳ ಕಡು ಬಡವರಿಗೆ ಈ ಯೋಜನೆಯನ್ನು ನೀಡಿದ್ದಾರೆ. ಗ್ರಾಮದ ಎಲ್ಲಾ ಜನರು ಸಮಾನರಾಗಿರಬೇಕು ಎಂಬ ದೃಷ್ಟಿಯಿಂದ ಕಡು ಬಡವರು ಆರ್ಥಿಕ ಸಮತೋಲನವನ್ನು ಕಾಣಲಿ ಎಂಬ ಉದ್ದೇಶದಿಂದ ಈ ಎಮ್ಮೆ ಭಾಗ್ಯವನ್ನು ನೀಡಿದ್ದಾರೆ ಎನ್ನುವುದು ಸ್ಥಳೀಯರ ಮಾತಾಗಿದೆ.

    ಜನರಿಗೆ ಎಮ್ಮೆ ಭಾಗ್ಯ ಅಷ್ಟೇ ಅಲ್ಲದೇ ಕೋಳಿ ಭಾಗ್ಯ, ಕುರಿಭಾಗ್ಯ, ಮೇಕೆಭಾಗ್ಯ, ಕತ್ತೆಭಾಗ್ಯ ಹೀಗೆ ಹತ್ತು ಹಲವಾರು ಭಾಗ್ಯಗಳನ್ನು ರಿಲ್ಯಾನ್ಸ್ ಪೌಂಡೇಶನ್ ಕಡು ಬಡವರಿಗೆ ನೀಡಲು ಸಿದ್ಧವಾಗಿದೆ. ಬಡವರ ಸಂಪತ್ತನ್ನು ಕಿತ್ತುಕೊಂಡು ತಿನ್ನುತ್ತಿರುವ ಈ ದಿನಗಳಲ್ಲಿ ರೈತ ಸಂಘಟನೆ ಗಡಿ ಭಾಗದಲ್ಲಿರುವ ಕಡು ಬಡವರಿಗಾಗಿ ಈ ರೀತಿ ಯೋಜನೆಗಳನ್ನು ನಿರೂಪಿಸಿದ್ದು ಮಾತ್ರ ಸಂತೋಷದ ಸಂಗತಿಯಾಗಿದೆ.

    ಹೀಗಾಗಲೇ 16 ಗ್ರಾಮಗಳಲ್ಲಿ 150 ಜನಕ್ಕೆ ಈ ಯೋಜನೆಯ ಲಾಭ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಇನ್ನು ಹತ್ತಾರು ಗ್ರಾಮಗಳಿಗೆ ಅನುಷ್ಠಾನ ಮಾಡುವ ಉದ್ದೇಶವಿದೆ. ಬಜೆಟ್‍ನಲ್ಲಿ ಮೈತ್ರಿ ಸರ್ಕಾರ ಸಾಲ ಮನ್ನಾ ಮಾಡಿದ್ದು, ರೈತರು ಕೊಂಚ ನೀರಾಳವಾಗಿದ್ದಾರೆ. ಈ ರೀತಿ ವಿಭಿನ್ನ ಯೋಜನೆ ಹಾಕಿಕೊಂಡರೆ ರೈತರ ಬೆಳವಣೆಗೆಯಾಗುತ್ತದೆ. ರಿಲ್ಯಾನ್ಸ್ ಪೌಂಡೇಶನ್ ವತಿಯಿಂದಾಗಿ ಬಸವೇಶ್ವರ ರೈತ ಸಂಘ ನಮಗೂ ಎಮ್ಮೆಯನ್ನು ನೀಡಿದ್ದು, ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಫಲಾನುಭವಿಗಳು ಹೇಳುತ್ತಿದ್ದಾರೆ.