ಮುಂಬೈ: ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಆರಂಭಿಸಿದ ಹೊಸ ಕೃತಕ ಬುದ್ದಿಮತ್ತೆ (Artificial Intelligence) ಕಂಪನಿ ರಿಲಯನ್ಸ್ ಎಂಟರ್‌ಪ್ರೈಸ್ ಇಂಟೆಲಿಜೆನ್ಸ್ ಲಿಮಿಟೆಡ್‌ನಲ್ಲಿ (REIL) ಫೇಸ್‌ಬುಕ್ (Facebook) ಮಾತೃಸಂಸ್ಥೆ ಮೆಟಾ ಶೇ.30 ರಷ್ಟು ಪಾಲನ್ನು ಪಡೆದುಕೊಂಡಿದೆ.
REIL ಉದ್ಯಮವು AI ಸೇವೆಗಳನ್ನು ಅಭಿವೃದ್ಧಿಪಡಿಸುತ್ತದೆ, ಮಾರುಕಟ್ಟೆ ಮಾಡುತ್ತದೆ ಮತ್ತು ವಿತರಿಸಲಿದೆ. ಜಂಟಿ ಉದ್ಯಮದ ಒಪ್ಪಂದ ಪ್ರಕಾರ ರಿಲಯನ್ಸ್ ಇಂಟೆಲಿಜೆನ್ಸ್ REIL ನಲ್ಲಿ ಶೇ.70 ರಷ್ಟು ಮತ್ತು ಮೆಟಾ (META) ಉಳಿದ ಶೇ.30 ರಷ್ಟು ಪಾಲನ್ನು ಹೊಂದಿರುತ್ತದೆ ಎಂದು ಅದು ಹೇಳಿದೆ.
ಭಾರತದಾದ್ಯಂತ ಎಂಟರ್‌ಪ್ರೈಸ್ AI ಸೇವೆಗಳನ್ನು ಅಭಿವೃದ್ಧಿಪಡಿಸುವುದು, ಮಾರಾಟ ಮಾಡುವುದು ಮತ್ತು ವಿತರಿಸುವುದರ ಮೇಲೆ ಕೇಂದ್ರೀಕರಿಸುವ REIL ನಲ್ಲಿ ಎರಡೂ ಕಂಪನಿಗಳು 855 ಕೋಟಿ ರೂ.ಗಳ ಆರಂಭಿಕ ಸಂಯೋಜಿತ ಹೂಡಿಕೆಯನ್ನು ಮಾಡಿವೆ. ಇದನ್ನೂ ಓದಿ: ನೀವು ಬೆಂಗಳೂರಿಗೆ ಹೋದರೆ, ಕನ್ನಡ ಕಲಿಯಿರಿ: ಝೋಹೊ ಸಂಸ್ಥಾಪಕ ಶ್ರೀಧರ್ ವೆಂಬು
ಆಗಸ್ಟ್ 2025 ರಲ್ಲಿ RIL ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಂಟಿ ಉದ್ಯಮದ ಬಗ್ಗೆ ಘೋಷಣೆಯಾಗಿತ್ತು. ಮೇಟಾದ ಓಪನ್‌ಸೋರ್ಸ್ ಲಾಮಾ ಆಧಾರಿತ ಮಾದರಿಗಳನ್ನು ನಿರ್ಮಿಸುವಲ್ಲಿ ತಾಂತ್ರಿಕ ಪರಿಣತಿಯನ್ನು ಒದಗಿಸುತ್ತದೆ.
ರಿಲಯನ್ಸ್ ಮತ್ತು ಫೇಸ್‌ಬುಕ್ ಜೊತೆಯಾಗುವುದು ಇದೇ ಮೊದಲಲ್ಲ. ಏಪ್ರಿಲ್ 2020 ರಲ್ಲಿ ಫೇಸ್‌ಬುಕ್ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ 5.7 ಬಿಲಿಯನ್ ಡಾಲರ್ (43,574 ಕೋಟಿ ರೂ.) ಹೂಡಿಕೆ ಮಾಡಿತ್ತು ಜೂನ್ 2020 ರಲ್ಲಿ ಭಾರತದ ಸ್ಪರ್ಧಾ ಆಯೋಗವು ಆ ಹೂಡಿಕೆಯನ್ನು ಅನುಮೋದಿಸಿದ್ದು ಈಗ ಜಿಯೋ (Jio) ಪ್ಲಾಟ್‌ಫಾರ್ಮ್‌ಗಳಲ್ಲಿ 9.99% ಪಾಲನ್ನು ಫೇಸ್‌ಬುಕ್ ಹೊಂದಿದೆ.
ಗಾಂಧಿನಗರ: ವನ್‍ತಾರಾ (Vantara) ಪ್ರಾಣಿ ಸಂರಕ್ಷಣಾ ಕೇಂದ್ರದ ಕುರಿತು ಎಸ್‍ಐಟಿ (SIT) ತನಿಖೆಗೆ ಸುಪ್ರೀಂ ಕೋರ್ಟ್ (Supreme Court) ಆದೇಶ ಮಾಡಿದೆ.
ರಿಲಯನ್ಸ್ ಫೌಂಡೇಶನ್ ನಡೆಸುತ್ತಿರುವ ಗುಜರಾತ್‍ನ ಜಾಮ್‍ನಗರದಲ್ಲಿರುವ ವಂತಾರಾ ಪ್ರಾಣಿಗಳ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರದ ವ್ಯವಹಾರಗಳ ಕುರಿತ ತನಿಖೆಗೆ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಚೆಲಮೇಶ್ವರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಆದೇಶಿಸಿದೆ. ಸಿಆರ್ ಜಯಾ ಸುಕಿನ್ ಎಂಬ ವಕೀಲರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಂಕಜ್ ಮಿಥಲ್ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ನೇತೃತ್ವದ ಸುಪ್ರೀಂ ಕೋರ್ಟ್‍ನ ದ್ವಿಸದಸ್ಯ ಪೀಠ ಈ ಆದೇಶವನ್ನು ಹೊರಡಿಸಿದೆ. ಇದನ್ನೂ ಓದಿ: ಮೋದಿ ಪದವಿಯ ವಿವರ ಬಹಿರಂಗಪಡಿಸುವ ಅಗತ್ಯವಿಲ್ಲ: ದೆಹಲಿ ಹೈಕೋರ್ಟ್
ಸೆಪ್ಟೆಂಬರ್ 12ರೊಳಗೆ ವರದಿ ಸಲ್ಲಿಸುವಂತೆ ಎಸ್‍ಐಟಿ ತಂಡಕ್ಕೆ ಕೋರ್ಟ್ ಸೂಚನೆ ನೀಡಿದೆ. ಭಾರತ ಮತ್ತು ವಿದೇಶಗಳಿಂದ ಪ್ರಾಣಿಗಳನ್ನು, ವಿಶೇಷವಾಗಿ ಆನೆಗಳನ್ನು ತರಿಸುವ ವೇಳೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಇತರ ಸಂಬಂಧಿತ ಕಾನೂನುಗಳ ನಿಬಂಧನೆಗಳ ಅನುಸರಣೆ ಬಗ್ಗೆ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.
– ಕರ್ನಾಟಕದಲ್ಲಿ Jioಗೆ ಏಪ್ರಿಲ್‌ನಲ್ಲಿ 1.2 ಲಕ್ಷ ಹೊಸ ಚಂದಾದಾರರು ಸೇರ್ಪಡೆ
– ರಾಜ್ಯದಲ್ಲಿ ಸಕ್ರಿಯ ಜಿಯೋ ಏರ್‌ಫೈಬರ್ ಬಳಕೆದಾರರ ಸಂಖ್ಯೆ 3,61,122ಕ್ಕೆ ಹೆಚ್ಚಳ; ಜಿಯೋ ನಂ.1
– ಭಾರತದಲ್ಲಿ ರಿಲಯನ್ಸ್ ಜಿಯೋ ಮೊಬೈಲ್ ಬಳಕೆದಾರರ ಒಟ್ಟು ಸಂಖ್ಯೆ 47.24 ಕೋಟಿ
ಬೆಂಗಳೂರು: ರಿಲಯನ್ಸ್ ಜಿಯೋ (Reliance Jio) ಕರ್ನಾಟಕದಲ್ಲಿ ತನ್ನ ಬಲವಾದ ಪ್ರಾಬಲ್ಯವನ್ನ ಮುಂದುವರಿಸಿದೆ. 2025ರ ಏಪ್ರಿಲ್ ನಲ್ಲಿ 1.2 ಲಕ್ಷ ಹೊಸ ಮೊಬೈಲ್ ಚಂದಾದಾರರನ್ನ ಜಿಯೋ ಸೇರ್ಪಡೆ ಮಾಡಿಕೊಂಡಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ಇತ್ತೀಚಿನ ಮಾಹಿತಿಯ ಪ್ರಕಾರ, ರಾಜ್ಯದ ಎಲ್ಲ ಟೆಲಿಕಾಂ ಆಪರೇಟರ್‌ಗಳ ಪೈಕಿ ಈ ಸಂಖ್ಯೆ ಅತ್ಯಧಿಕ ಎನಿಸಿಕೊಂಡಿದೆ.
ಕರ್ನಾಟಕದಲ್ಲಿ ಜಿಯೋ ಸ್ಥಿರ ವೈರ್‌ಲೆಸ್ ಸಂಪರ್ಕದಲ್ಲಿ (FWA) ತನ್ನ ನಾಯಕತ್ವ ಸ್ಥಾನವನ್ನು ಬಲಪಡಿಸುತ್ತಿದ್ದು, ಜಿಯೋ ಏರ್‌ಫೈಬರ್ ಸೇವೆಯು ಸ್ಪಷ್ಟವಾಗಿ ಮಾರುಕಟ್ಟೆ ನಾಯಕನಾಗಿ ಹೊರಹೊಮ್ಮುತ್ತಿದೆ. ಕರ್ನಾಟಕದಲ್ಲಿ ಸಕ್ರಿಯ ಜಿಯೋ ಏರ್‌ಫೈಬರ್ (Jio Airfiber) ಬಳಕೆದಾರರ ಸಂಖ್ಯೆ ಏಪ್ರಿಲ್ ತಿಂಗಳಿನಲ್ಲಿ 3,61,122 (3.61 ಲಕ್ಷ)ಕ್ಕೆ ಏರಿಕೆಯಾಗಿದೆ. ಇದು 2025ರ ಮಾರ್ಚ್ ತಿಂಗಳಿನಲ್ಲಿ 3,38,177 (3.38 ಲಕ್ಷ) ರಷ್ಟಿತ್ತು. ಇನ್ನು ಜಿಯೋದ ಸಂಖ್ಯೆಗೆ ಹೋಲಿಸಿದರೆ ಏರ್‌ಟೆಲ್ 1,23,393 ಸ್ಥಿರ ವೈರ್‌ಲೆಸ್ ಸಂಪರ್ಕದ ಚಂದಾದಾರರನ್ನ ಹೊಂದಿದೆ.
ಏಪ್ರಿಲ್ ತಿಂಗಳಿನಲ್ಲಿ ದೇಶಾದ್ಯಂತ ಸಕಾರಾತ್ಮಕವಾದ ಸಕ್ರಿಯ ಚಂದಾದಾರರ ಸೇರ್ಪಡೆ ಹೊಂದಿದ ಏಕೈಕ ಟೆಲಿಕಾಂ ಆಪರೇಟರ್ ಕೂಡ ಜಿಯೋ ಆಗಿದೆ. 55 ಲಕ್ಷಕ್ಕಿಂತ ಹೆಚ್ಚು ಸಕ್ರಿಯ ಬಳಕೆದಾರರ ಸೇರ್ಪಡೆಗಳನ್ನ ಹೊಂದಿದ್ದು, ಇದು ಸತತ 2ನೇ ತಿಂಗಳು 50 ಲಕ್ಷಕ್ಕಿಂತಲೂ ಹೆಚ್ಚು ವಿಎಲ್ಆರ್ (ವಿಸಿಟರ್ ಲೊಕೇಶನ್ ರಿಜಿಸ್ಟರ್) ಸೇರಿಸಿದೆ. ಇದೇ ವೇಳೆ ವಿಐ (Vi) ಮತ್ತು ಬಿಎಸ್ಎನ್ಎಲ್ (BSNL) ಸೇರಿ ಇತರ ಟೆಲಿಕಾಂ ಆಪರೇಟರ್‌ಗಳು ನಿವ್ವಳ ಚಂದಾದಾರರ ಸಂಖ್ಯೆಯಲ್ಲಿ ಕುಸಿತವನ್ನು ಕಂಡಿವೆ.
ರಾಷ್ಟ್ರೀಯ ಮಟ್ಟದಲ್ಲಿ, ಜಿಯೋ ಶೇ 82ರಷ್ಟು ಪಾಲು ಮತ್ತು 61.4 ಲಕ್ಷ ಚಂದಾದಾರರೊಂದಿಗೆ ಸ್ಥಿರ ವೈರ್‌ಲೆಸ್ ಸಂಪರ್ಕದಲ್ಲಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ.
2025ರ ಏಪ್ರಿಲ್ ತಿಂಗಳಲ್ಲಿ ಒಟ್ಟಾರೆ ಸ್ಥಿರ ಬ್ರಾಡ್‌ಬ್ಯಾಂಡ್ ಬೆಳವಣಿಗೆಗೆ ದಾಖಲೆಯ ತಿಂಗಳಾಗಿದ್ದು, ಜಿಯೋದ ವೈರ್‌ಲೈನ್ ಮತ್ತು ಸ್ಥಿರ ವೈರ್‌ಲೆಸ್ ಸಂಪರ್ಕ ಸೇವೆಗಳಲ್ಲಿ ಸುಮಾರು 9.10 ಲಕ್ಷ ಹೊಸ ಗ್ರಾಹಕರನ್ನು ಸೇರಿಸಲಾಗಿದೆ. ಕೇವಲ 2.30 ಲಕ್ಷ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿರುವ ಏರ್‌ಟೆಲ್‌ಗಿಂತ ಜಿಯೋದ ಈ ಅಂಕಿ- ಅಂಶವು ಸುಮಾರು 4 ಪಟ್ಟು ಹೆಚ್ಚಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ, ಜಿಯೋ ಏಪ್ರಿಲ್ ನಲ್ಲಿ 26.44 ಲಕ್ಷ ಒಟ್ಟು ಚಂದಾದಾರರನ್ನು ಸೇರ್ಪಡೆ ಮಾಡಿಕೊಂಡಿದ್ದು, ಒಟ್ಟು ಬಳಕೆದಾರರ ಸಂಖ್ಯೆಯನ್ನು 47.24 ಕೋಟಿಗೆ ಹೆಚ್ಚಿಸಿದೆ ಮತ್ತು ಮೊಬೈಲ್ ವಿಭಾಗದಲ್ಲಿ ಶೇ 40.76ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಏರ್‌ಟೆಲ್ ಶೇ 33.65ರಷ್ಟು (ಸುಮಾರು 39 ಕೋಟಿ ಬಳಕೆದಾರರು) ಇದ್ದರೆ, ವೊಡಾಫೋನ್ ಐಡಿಯಾ ಶೇ 17.66ರಷ್ಟು (20.47 ಕೋಟಿ ಬಳಕೆದಾರರು) ಹೊಂದಿದೆ. ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಒಟ್ಟಾಗಿ ಶೇ 7.84ರಷ್ಟು ಪಾಲನ್ನು ಹೊಂದಿವೆ.
ಜಿಯೋದ ಬಹಳ ವೇಗವಾದ ನೆಟ್‌ವರ್ಕ್ ವಿಸ್ತರಣೆ, ಕೈಗೆಟುಕುವ ಬೆಲೆಯ ಪ್ಲಾನ್ ಗಳು ಮತ್ತು ಸಂಯೋಜಿತ ಡಿಜಿಟಲ್ ಸೇವೆಗಳು ಕರ್ನಾಟಕ ಮತ್ತು ಭಾರತದ ಉಳಿದ ಭಾಗಗಳಲ್ಲಿ ಮನೆ ಮತ್ತು ಬಿಜಿನೆಸ್ ಸಂಪರ್ಕವನ್ನು ಮರುರೂಪಿಸುತ್ತಾ ಇವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವೇಗದ ಇಂಟರ್ ನೆಟ್ ಬೇಡಿಕೆ ಹೆಚ್ಚುತ್ತಿರುವುದರಿಂದ ಡಿಜಿಟಲ್ ವಿಭಜನೆಯನ್ನು ನಿವಾರಣೆ ಮಾಡುವಲ್ಲಿ ಜಿಯೋ ಪ್ರಮುಖ ಪಾತ್ರ ವಹಿಸುತ್ತಿದೆ.
ನವದೆಹಲಿ: ಪಾಕ್ ಉಗ್ರರನ್ನು ಸಂಹಾರ ಮಾಡಲು ಭಾರತ (India) ಆಪರೇಷನ್ ಸಿಂಧೂರ್ (Operation Sindoor) ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ʼಆಪರೇಷನ್ ಸಿಂಧೂರ್ʼ ಹೆಸರಿಗಾಗಿ ಹಲವು ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಭಾರತ ಆಪರೇಷನ್ ಸಿಂಧೂರ್ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಟ್ರೇಡ್‌ಮಾರ್ಕ್ ಪಡೆಯಲು ಮೊದಲ ಅರ್ಜಿ ಸಲ್ಲಿಸಿದೆ. ನಂತರ ಮನರಂಜನೆ, ಶಿಕ್ಷಣ, ಸಾಂಸ್ಕೃತಿಕ ಮತ್ತು ಮಾಧ್ಯಮ ಸೇವೆಗಳನ್ನು ಒಳಗೊಂಡಿರುವ ವರ್ಗ 41 ರ ಅಡಿಯಲ್ಲಿ ವಿಶೇಷ ಹಕ್ಕುಗಳನ್ನು ಬಯಸುವ ಇನ್ನೂ ಮೂವರು ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಫೇಲ್ ಬಗ್ಗೆ ಸುಳ್ಳು ಹೇಳಿ ಜಗತ್ತಿನ ಮುಂದೆ ಮತ್ತೆ ಬೆತ್ತಲಾದ ಪಾಕಿಸ್ತಾನ!
ರಿಲಯನ್ಸ್ ಇಂಡಸ್ಟ್ರೀಸ್ ಬುಧವಾರ ಬೆಳಗ್ಗೆ 10:42ಕ್ಕೆ ಅರ್ಜಿ ಸಲ್ಲಿಸಿದರೆ ಮುಕೇಶ್ ಚೇತನ್ ಅಗರ್‌ವಾಲ್ ಬೆಳಗ್ಗೆ 11:25, ನಿವೃತ್ತ ಭಾರತೀಯ ವಾಯುಪಡೆಯ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಮಲ್ ಸಿಂಗ್ ಮಧ್ಯಾಹ್ನ 12.16, ದೆಹಲಿ ಮೂಲದ ವಕೀಲ ಅಲೋಕ್ ಕೊಠಾರಿ ಸಂಜೆ 6:27ಕ್ಕೆ ಅರ್ಜಿ ಹಾಕಿದ್ದಾರೆ.
ನಾಲ್ವರು ಅರ್ಜಿದಾರರು ನೈಸ್ ವರ್ಗೀಕರಣದ 41ನೇ ತರಗತಿಯ ಅಡಿಯಲ್ಲಿ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ವರ್ಗವನ್ನು OTT ಪ್ಲಾಟ್‌ಫಾರ್ಮ್‌ಗಳು, ನಿರ್ಮಾಣ ಸಂಸ್ಥೆಗಳು, ಪ್ರಸಾರಕರು ಮತ್ತು ಈವೆಂಟ್ ಕಂಪನಿಗಳು ಹೆಚ್ಚಾಗಿ ಬಳಸುತ್ತವೆ. ಆಪರೇಷನ್ ಸಿಂಧೂರ್ ಶೀಘ್ರದಲ್ಲೇ ಚಲನಚಿತ್ರ ಶೀರ್ಷಿಕೆ, ವೆಬ್ ಸರಣಿಯಾಗುವ ಸಾಧ್ಯತೆಯಿದೆ.
ಮೊದಲು ಬಂದವರಿಗೆ ಮೊದಲ ಆದ್ಯತೆಯಾದರೆ ಆಪರೇಷನ್ ಸಿಂಧೂರ್ ಟ್ರೇಡ್‌ಮಾರ್ಕ್‌ನ ರಿಲಯನ್ಸ್ ಕಂಪನಿಯ ಪಾಲಾಗಲಿದೆ.
ಭಾರತದಲ್ಲಿ ಆಪರೇಷನ್ ಸಿಂಧೂರ್‌ನಂತಹ ಮಿಲಿಟರಿ ಕಾರ್ಯಾಚರಣೆಯ ಹೆಸರುಗಳ ಪೇಟೆಂಟ್ ತನಗೆ ಬೇಕೆಂದು ರಕ್ಷಣಾ ಸಚಿವಾಲಯ ಸಾಮಾನ್ಯವಾಗಿ ಅರ್ಜಿ ಸಲ್ಲಿಸುವುದಿಲ್ಲ. ಸರ್ಕಾರ ಮಧ್ಯಪ್ರವೇಶ ಮಾಡದೇ ಇದ್ದರೆ ಈ ಹೆಸರು ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಟ್ರೇಡ್‌ಮಾರ್ಕ್ ಹಕ್ಕುಗಳಿಗೆ ಮುಕ್ತವಾಗಿರುತ್ತವೆ.
ಮುಂಬೈ: JioHotstar ಡೊಮೈನ್ ಒಡೆತನ ನಮ್ಮದು ಎಂದು ದುಬೈನ (Dubai) ಇಬ್ಬರು ಮಕ್ಕಳು ಹೇಳಿಕೊಂಡಿದ್ದಾರೆ.
ಹೌದು, ಈ ಮೊದಲು ಈ ಡೊಬೈನ್ (Domain) ಮಾಲೀಕತ್ವವನ್ನು ನಾನು ಹೊಂದಿದ್ದೇನೆ ಎಂದು ದೆಹಲಿಯ ಟೆಕ್ಕಿಯೊಬ್ಬರು ಹೇಳಿದ್ದರು. ಈಗ ದುಬೈನಲ್ಲಿ ನೆಲೆಸಿರುವ ಭಾರತ ಮೂಲದ ಜೈನಮ್ ಮತ್ತು ಜೀವಿಕಾ ಜೈನ್ ಈ ಡೊಮೈನ್ ನಮ್ಮದು ಎಂದಿದ್ದಾರೆ.
ವೆಬ್‌ಸೈಟ್‌ನ ಲ್ಯಾಂಡಿಂಗ್ ಪುಟದಲ್ಲಿ ಮಕ್ಕಳ ಕಿರು ಪರಿಚಯವನ್ನು ಬರೆಯಲಾಗಿದ್ದು ಕೊನೆಗೆ ದೆಹಲಿಯಿಂದ ಯುವ ಸಾಫ್ಟ್‌ವೇರ್ ಡೆವಲಪರ್ ಅನ್ನು ಬೆಂಬಲಿಸಲು ಈ ಡೊಮೈನ್ ಖರೀದಿಸಿ ಮಾರಾಟಕ್ಕೆ ಇಟ್ಟಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೀಪಾವಳಿ ಕೊಡುಗೆ – 699 ರೂ.ಗೆ ಸಿಗಲಿದೆ ಜಿಯೋಭಾರತ್ 4ಜಿ ಫೋನ್
ಡೊಮೈನ್ ಹೆಸರು ಸುದ್ದಿಯಾಗುತ್ತಿರೋದು ಯಾಕೆ?
ಡಿಸ್ನಿ-ರಿಲಯನ್ಸ್ (Disney Reliance Joint Venture) ವಿಲೀನ ಪ್ರಕ್ರಿಯೆ ಸುದ್ದಿ ಬರುತ್ತಿದ್ದಂತೆ JioHotstar ಡೊಮೈನ್ ಸುದ್ದಿಯಾಗತೊಡಗಿತ್ತು. ಈ ಸಂದರ್ಭದಲ್ಲಿ ದೆಹಲಿಯ ಟೆಕ್ಕಿಯೊಬ್ಬರು ನಾನು 2023 ರಲ್ಲಿ ಈ ಡೊಮೈನ್ ಖರೀದಿಸಿದ್ದೇನೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಓದಲು ನನಗೆ 1 ಕೋಟಿ ರೂ. ನೀಡಿದರೆ ನಾನು ಕೊಡುತ್ತೇನೆ ಎಂದಿದ್ದರು. ಆದರೆ ಜಿಯೋ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರಿಂದ ಅವರು ಸುಮ್ಮನಾಗಿದ್ದರು. ಆದರೆ ಈಗ ಈ ಡೊಮೈನ್ ಅನ್ನು ಇಬ್ಬರು ಮಕ್ಕಳು ಖರೀದಿಸಿದ್ದು ಮತ್ತೆ ಟ್ವಿಸ್ಟ್ ಪಡೆದುಕೊಂಡಿದೆ.
ಬೆಂಗಳೂರು: ರಿಲಯನ್ಸ್ (Reliance) ರೀಟೇಲ್‌ನ ಪ್ರಮುಖ ದಿನಸಿ ಮಳಿಗೆಯ ಬ್ರ‍್ಯಾಂಡ್ ಫ್ರೆಶ್‌ಪಿಕ್ ಬೆಂಗಳೂರಿನಲ್ಲಿ ತನ್ನ ಮೊದಲ ಮಳಿಗೆ ಪ್ರಾರಂಭಿಸುತ್ತಿದೆ. ಟ್ರಿನಿಟಿ ವೃತ್ತದ 1ಎಂಜಿ ಮಾಲ್‌ನ 4ನೇ ಮಹಡಿಯಲ್ಲಿ ಹೊಸ ಮಳಿಗೆ ಸಜ್ಜಾಗಿದೆ.
ಫ್ರೆಶ್‌ಪಿಕ್(Freshpik) ಬ್ರ‍್ಯಾಂಡ್ ಭಾರತದಲ್ಲಿ ತೆರೆಯುತ್ತಿರುವ ಎರಡನೇ ಮಳಿಗೆ ಇದಾಗಿದೆ. ಮುಂಬೈನಲ್ಲಿ (Mumbai) ಮೊದಲ ಮಳಿಗೆಯು ಅಭೂತಪೂರ್ವ ಯಶಸ್ಸು ಕಂಡ ಬಳಿಕ ಬೆಂಗಳೂರಿನಲ್ಲಿ (Bengaluru) ಎರಡನೇ ಮಳಿಗೆ ತೆರೆಯಲಾಗುತ್ತಿದೆ. 1ಎಂಜಿ ಮಾಲ್‌ನಲ್ಲಿ ಇರುವ ಹೊಸ ಮಳಿಗೆಯು 14 ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಸಾಟಿಯಿಲ್ಲದ ಉತ್ತಮ ಶಾಪಿಂಗ್ ಅನುಭವವನ್ನು ಈ ಮಳಿಗೆ ನೀಡುತ್ತದೆ. ಆಹಾರ ಪ್ರಿಯರು ಮತ್ತು ಆರೋಗ್ಯ ಪ್ರಜ್ಞೆಯುಳ್ಳ ಗ್ರಾಹಕರ ಪರಿಷ್ಕೃತ ರುಚಿಯನ್ನು ಪೂರೈಸುವ ನಿಟ್ಟಿನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನೂ ಓದಿ: 1982-2024: ಇಸ್ರೇಲ್ vs ಹಿಜ್ಬುಲ್ಲಾ ನಡುವೆ ನಿಲ್ಲದ ಸಂಘರ್ಷ – 42 ವರ್ಷಗಳ ರಕ್ತಸಿಕ್ತ ಚರಿತ್ರೆ ಬಗ್ಗೆ ನಿಮಗೆಷ್ಟು ಗೊತ್ತು?
ಹೊಸ ಫ್ರೆಶ್‌ಪಿಕ್ ಸ್ಟೋರ್ ಪ್ರಮುಖ ದಿನಸಿ ತಾಣವಾಗಲು ಸಜ್ಜಾಗಿದೆ. ಗ್ರಾಹಕರು ಅದ್ಭುತವಾದ ‘ಶಾಪಿಂಗ್ ಥಿಯೇಟರ್’ ಅನುಭವಗಳನ್ನು ಕಾಣಬಹುದು. ಇದು ವ್ಯಾಪಕ ಶ್ರೇಣಿಯ ಲೈವ್ ಫುಡ್ ಸ್ಟೇಷನ್‌ಗಳನ್ನು ನೀಡುವ ನವೀನ ಪರಿಕಲ್ಪನೆಯಾಗಿದೆ. ಕ್ಯುರೇಟೆಡ್ ಪಾಕಶಾಲೆಯ ಅನುಭವಗಳ ಅನನ್ಯ ಸಮ್ಮಿಳನವನ್ನು ಸೃಷ್ಟಿಸುತ್ತದೆ. ಗ್ರಾಹಕರು ತಾಜಾ ವಿಶೇಷವಾದ ಹಣ್ಣುಗಳ ಮೂಲಕ ತಮ್ಮ ಖರೀದಿ ಅನುಭವ ಆರಂಭಿಸಬಹುದು. ಇದನ್ನೂ ಓದಿ: ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ವಾಯು ದಾಳಿ – ಉಗ್ರರ ಮುಖ್ಯಸ್ಥನೇ ಇಸ್ರೇಲ್ ಗುರಿ
ಚೀಸ್ ಮತ್ತು ಅತ್ಯುತ್ತಮ ಬ್ರೆಡ್‌ಗಳು, ಸಿಹಿತಿಂಡಿಗಳು, ಶೂನ್ಯ ತ್ಯಾಜ್ಯ ಸಾವಯವ ವಲಯ, ಕಾಫಿ, ಟರ್ಕಿಶ್ ಡಿಲೈಟ್ಸ್, ಪ್ಯಾಟಿಸ್ಸೆರಿ, ಪ್ರೀಮಿಯಂ ಡ್ರೈ ಫ್ರೂಟ್ಸ್, ನೈಸರ್ಗಿಕ ಐಸ್ ಕ್ರೀಮ್ ಪಾರ್ಲರ್, ದೈನಂದಿನ ತಾಜಾ ಪಾಸ್ತಾ, ಚಾಕೊಲೇಟ್‌ಗಳು, ಕೋಲ್ಡ್ ಪ್ರೆಸ್ಡ್ ಜ್ಯೂಸ್‌ಗಳು ಮತ್ತು ಇನ್ನೂ ಹೆಚ್ಚಿನವು ಲಭ್ಯವಿದೆ. ಹೆಚ್ಚುವರಿಯಾಗಿ ಆರೋಗ್ಯ ಪ್ರಜ್ಞೆ ಹೊಂದಿರುವ ಗ್ರಾಹಕರಿಗೆ ಗ್ಲುಟೆನ್ ಮುಕ್ತ, ಸಕ್ಕರೆ ಮುಕ್ತ ಮತ್ತು ಸಸ್ಯಾಹಾರಿ ಆಯ್ಕೆಗಳ ವೈವಿಧ್ಯಮಯ ವಿಂಗಡಣೆಯನ್ನು ಸಹ ಇಲ್ಲಿ ನೀಡಲಾಗಿದೆ. ಇದನ್ನೂ ಓದಿ: ಭಯೋತ್ಪಾದಕ ದಾಳಿ ಎಚ್ಚರಿಕೆ – ಮುಂಬೈನಾದ್ಯಂತ ಪೊಲೀಸರು ಹೈಅಲರ್ಟ್
ಬೆಂಗಳೂರಿನ ಈ ಫ್ರೆಶ್‌ಪಿಕ್ ಸ್ಟೋರ್‌ನ ಒಂದು ವಿಶಿಷ್ಟ ಲಕ್ಷಣವೆಂದರೆ ಅದರೊಳಗಿರುವ ಕೆಫೆ. ಗ್ರಾಹಕರು ಶಾಪಿಂಗ್ ಮಾಡುವಾಗ ಪ್ರೀಮಿಯಂ ಪಾನೀಯಗಳು ಮತ್ತು ತಿಂಡಿಗಳೊಂದಿಗೆ ವಿಶ್ರಾಂತಿ ಪಡೆಯಲು ಅನುಕೂಲಕರ ಸ್ಥಳವನ್ನು ಈ ಕೆಫೆ ನೀಡುತ್ತದೆ. ಮೀಸಲಾದ ಉಡುಗೊರೆ ವಿಭಾಗವನ್ನು ಸಹ ಸ್ಟೋರ್ ಒಳಗೊಂಡಿದೆ.
ಫ್ರೆಶ್‌ಪಿಕ್ ಬಗ್ಗೆ ಮಾತನಾಡಿದ ರಿಲಯನ್ಸ್ ರೀಟೇಲ್‌ನ ಗ್ರೋಸರಿ ರಿಟೇಲ್ ವಿಭಾಗದ ಸಿಇಒ ದಾಮೋದರ್ ಮಾಲ್, ‘ನೀವು ಉತ್ತಮ ಆಹಾರವನ್ನು ಪ್ರೀತಿಸುತ್ತಿದ್ದರೆ, 1 ಎಂಜಿ ಮಾಲ್‌ನಲ್ಲಿ ಫ್ರೆಶ್‌ಪಿಕ್ ನಿಮ್ಮ ಆಯ್ಕೆಯ ಡಿಸ್ನಿಲ್ಯಾಂಡ್’ ಎಂದು ಹೇಳಿದರು. ಇದನ್ನೂ ಓದಿ: ಅಮೆರಿಕದಲ್ಲಿ ಹೆಲೆನ್ ಚಂಡಮಾರುತದ ಆರ್ಭಟ – 33 ಮಂದಿ ಸಾವು
ಮುಂಬೈ: ಉಚಿತ ಡೇಟಾ (Free Data Pack) ನೀಡಿ ಭಾರತದಲ್ಲಿ ಡೇಟಾ ಕ್ರಾಂತಿ ಮಾಡಿದ್ದ ಜಿಯೋ ಈಗ ಕ್ಲೌಡ್ ಸ್ಟೋರೇಜ್‌ನಲ್ಲೂ (Cloud Storage) ಕ್ರಾಂತಿ ಮಾಡುತ್ತಾ ಎಂಬ ಪ್ರಶ್ನೆ ಎದ್ದಿದೆ.
ರಿಲಯನ್ಸ್ ಇಂಡಸ್ಟ್ರೀಸ್ 47ನೇ ವಾರ್ಷಿಕ ಸಭೆಯಲ್ಲಿ ಮುಖ್ಯಸ್ಥ ಮುಖೇಶ್ ಅಂಬಾನಿ ಜಿಯೋ ಬಳಕೆದಾರರಿಗೆ ಉಚಿತವಾಗಿ 100 ಜಿಬಿ ಕ್ಲೌಡ್ ಸ್ಟೋರೇಜ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಜಿಯೋ ಎಐ ಕ್ಲೌಡ್ ವೆಲಕಂ ಆಫರ್ ಈ ವರ್ಷದ ದೀಪಾವಳಿಗೆ ಬಿಡುಗಡೆ ಮಾಡುತ್ತೇವೆ. ಜಿಯೋ ಬಳಕೆದಾರರು 100 ಜಿಬಿವರೆಗೆ ಡೇಟಾವನ್ನು ಸ್ಟೋರ್ ಮಾಡಬಹುದು. ಎಲ್ಲಾ ಫೋಟೋ, ವಿಡಿಯೋ, ಡಾಕ್ಯುಮೆಂಟ್, ಡಿಜಿಟಲ್ ಕಂಟೆಟ್‌ಗಳನ್ನು ಸುರಕ್ಷಿತವಾಗಿ ಸ್ಟೋರ್ ಮಾಡಬಹುದು ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಇದನ್ನೂ ಓದಿ: ಪ್ರಿಯಕರನೊಂದಿಗೆ ಪತ್ನಿಯ ಖಾಸಗಿ ಕ್ಷಣ ವೀಡಿಯೋ ಮಾಡಿ ಹಂಚಿಕೊಂಡ ಪತಿ!
ಕ್ಲೌಡ್‌ನಲ್ಲಿ ದರ ಸಮರ:
ಸದ್ಯ ಗೂಗಲ್ ಒನ್‌ನಲ್ಲಿ (Google One) ಉಚಿತವಾಗಿ 15 ಜಿಬಿ ಡೇಟಾವನ್ನು ಸ್ಟೋರ್ ಮಾಡಬಹುದು. ಇನ್ನು ಹೆಚ್ಚಿನ ಡೇಟಾವನ್ನು ಸಂಗ್ರಹ ಮಾಡಬೇಕಾದರೆ ಹೆಚ್ಚಿನ ಹಣವನ್ನು ಪಾವತಿಸಬೇಕು. 100 ಜಿಬಿ ಡೇಟಾಗೆ ತಿಂಗಳಿಗೆ 130 ರೂ. ಇದ್ದರೆ 200 ಜಿಬಿ ಡೇಟಾಗೆ ತಿಂಗಳಿಗೆ 210 ರೂ. ದರ ನಿಗದಿಯಾಗಿದೆ.
ಆಪಲ್ ಐಕ್ಲೌಡ್‌ನಲ್ಲಿ (Apple iCloud) 50 ಜಿಬಿ ಡೇಟಾಗೆ ತಿಂಗಳಿಗೆ 75 ರೂ. ಇದ್ದರೆ 200 ಜಿಬಿ ಡೇಡಾಗೆ 219 ರೂ. ದರ ನಿಗದಿ ಮಾಡಿದೆ. ತನ್ನ ಎಲ್ಲಾ ಬಳಕೆದಾರಿಗೆ ಜಿಯೋ 100 ಜಿಬಿ ವರೆಗೆ ಉಚಿತವಾಗಿ ಫ್ರೀ ಸ್ಟೋರೇಜ್ ನೀಡಿದ್ದರಿಂದ ಮುಂದಿನ ದಿನಗಳಲ್ಲಿ ಕ್ಲೌಡ್‌ನಲ್ಲೂ ದರ ಸಮರ ಆರಂಭವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಬಿಜೆಪಿಗೆ ಕೋವಿಡ್ ಉರುಳು | ಔಷಧ, ವೈದ್ಯಕೀಯ ಉಪಕರಣ ಹಗರಣ – ಇಂದು ಸಿಎಂಗೆ ವರದಿ ಸಲ್ಲಿಕೆ
ಜಿಯೋ ಸೇವೆ ಆರಂಭವಾಗುವ ಮೊದಲು ಭಾರತದಲ್ಲಿ 1 ಜಿಬಿ ಮೊಬೈಲ್ ಇಂಟರ್‌ನೆಟ್ ಡೇಟಾಗೆ 250 ರೂ. ದರ ನಿಗದಿಯಾಗಿತ್ತು. ಆದರೆ ಜಿಯೋ ಉಚಿತವಾಗಿ ಡೇಟಾ ನೀಡಿದ್ದರಿಂದ ಡೇಟಾ ಸಮರ ಆರಂಭವಾಗಿತ್ತು. ಪರಿಣಾಮ ಎಲ್ಲಾ ಟೆಲಿಕಾಂ ಕಂಪನಿಗಳು ಡೇಟಾ ದರವನ್ನು ಇಳಿಕೆ ಮಾಡಿದ್ದವು. ಪರಿಣಾಮ ವಿಶ್ವದಲ್ಲೇ ಭಾರತದಲ್ಲಿ ಕಡಿಮೆ ದರದಲ್ಲಿ (1 ಜಿಬಿಗೆ 14 ರೂ.) ಇಂಟರ್‌ನೆಟ್ ಸೇವೆ ಲಭ್ಯವಿದೆ.
ಬೆಂಗಳೂರು: ಆಸ್ಟರಿಯಾ ಏರೋಸ್ಪೇಸ್ (Asteria Aerospace) ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ನೆರವಾಗುವ ಸ್ಕೈಡೆಕ್ ಪ್ಲಾಟ್ ಫಾರ್ಮ್ ( SkyDeck Platform) ಪರಿಚಯಿಸಿದೆ.
ಆಸ್ಟರಿಯಾ ಏರೋಸ್ಪೇಸ್ ಎಂಬುದು ಸಂಪೂರ್ಣವಾಗಿ ಎಲ್ಲವನ್ನೂ ದೇಶೀಯವಾಗಿ ಸಿದ್ಧಪಡಿಸಿ, ಉತ್ಪಾದನೆ ಮಾಡುತ್ತಿರುವ ಡ್ರೋನ್ (Drone) ತಂತ್ರಜ್ಞಾನ ಕಂಪನಿ. ಅದು ಅತ್ಯಾಧುನಿಕ ನವೀನ ಬಗೆಯ ಕ್ಲೌಡ್ ಪ್ಲಾಟ್ ಫಾರ್ಮ್ ಅನ್ನು ಪರಿಚಯಿಸುತ್ತಿದ್ದು, ಆ ಪ್ಲಾಟ್ ಫಾರ್ಮ್ ಹೆಸರು ಸ್ಕೈಡೆಕ್. ಇದೀಗ ಅದನ್ನು ಸೆಲ್ಫ್ ಸರ್ವೀಸ್ SaaS ಸಲ್ಯೂಷನ್ ಆಗಿ ನೀಡುತ್ತಿದೆ. ಉದ್ಯಮಗಳಿಗೆ ಡ್ರೋನ್ ದತ್ತಾಂಶ ನಿರ್ವಹಣೆಯನ್ನು ಸುವ್ಯವಸ್ಥಿತ ಮಾಡುವುದಕ್ಕೆ ಸ್ಕೈಡೆಕ್ ಪ್ಲಾಟ್ ಫಾರ್ಮ್ ಬಲ ತುಂಬುತ್ತದೆ. ಡ್ರೋನ್ ಡೇಟಾದ ಬಳಕೆದಾರರು ಹಾಗೂ ಸೇವಾ ಪೂರೈಕೆದಾರರು ಇಬ್ಬರಿಗೂ ಇದು ಸಮಗ್ರ ಸಾಫ್ಟ್ ವೇರ್ ಪ್ಲಾಟ್ ಫಾರ್ಮ್ ರೀತಿಯಲ್ಲಿ ಸೇವೆ ಒದಗಿಸುತ್ತದೆ. ಇದನ್ನೂ ಓದಿ: ಶಕ್ತಿ ಯೋಜನೆ ಅಡಿ ಸರ್ಕಾರದಿಂದ ಸಾರಿಗೆ ಇಲಾಖೆಗೆ 1,413 ಕೋಟಿ ರೂ. ಬಾಕಿ – ರಾಮಲಿಂಗಾರೆಡ್ಡಿ
ಜಿಐಎಸ್ ನಂಥ ಉದ್ಯಮಗಳು ನಿರ್ಮಾಣ, ತೈಲ ಹಾಗೂ ಅನಿಲ, ಕೃಷಿ ಕ್ಷೇತ್ರಗಳಲ್ಲಿ ತೊಡಗಿಕೊಂಡಿವೆ. ಸ್ಕೈಡೆಕ್ ಇಂಥವುಗಳಿಗೆ ತಂತ್ರಜ್ಞಾನದ ದೃಷ್ಟಿಯಿಂದ ಆಧುನಿಕವಾದ ಸಲಕರಣೆಗಳು ಮತ್ತು ವಿಶ್ಲೇಷಣೆಗಳನ್ನು ಒದಗಿಸುತ್ತದೆ. ಅದರೊಂದಿಗೆ ಡ್ರೋನ್ ಡೇಟಾವನ್ನು ಬಳಸಿಕೊಂಡು, ಸೈಟ್ ಗಳು ಮತ್ತು ತಮ್ಮ ನಿರ್ಣಾಯಕ ಸ್ವತ್ತುಗಳನ್ನು ಡಿಜಿಟಲ್ ಆಗಿ ರೂಪಾಂತರ ಮಾಡಿಕೊಳ್ಳಬಹುದಾಗಿರುತ್ತದೆ. ಈ ಕ್ಲೌಡ್ ಪ್ಲಾಟ್ ಫಾರ್ಮ್ ಸುರಕ್ಷಿತವಾದ, ಕೇಂದ್ರೀಕೃತ ಡ್ರೋನ್ ನಿರ್ವಹಣೆ ಒದಗಿಸುವುದರ ಜೊತೆಗೆ ತತ್ ಕ್ಷಣಕ್ಕೆ ದೃಶ್ಯವನ್ನು ಸಹ ತಂದುಕೊಳ್ಳುತ್ತದೆ, ಸಹಯೋಗ ಹಾಗೂ ವರದಿ ಮಾಡುವ ಸಾಧನಗಳೊಂದಿಗೆ ಸುವ್ಯವಸ್ಥಿತ ಸೈಟ್ ಮೇಲ್ವಿಚಾರಣೆ ಮತ್ತು ನಿಗಾ ವಹಿಸಲು ಅನುಕೂಲ ಮಾಡಿಕೊಡುತ್ತದೆ. ಸ್ಕೈಡೆಕ್ ಎಷ್ಟು ವಿಶಿಷ್ಟ ಅಂದರೆ ಅದರ ಪೂರ್ವ- ನಿರ್ಮಿತ, ಉದ್ಯಮಕ್ಕೆ ನಿರ್ದಿಷ್ಟ ಕೃತಕ ಬುದ್ಧಿಮತ್ತೆ (ಎಐ- ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮಾದರಿಗಳಿಂದಾಗಿ ಅದು ವೈಮಾನಿಕ ದತ್ತಾಂಶಗಳನ್ನು ಶೀಘ್ರವಾಗಿ ವಿಶ್ಲೇಷಣೆ ಮಾಡುತ್ತದೆ. ಪೂರ್ವಭಾವಿಯಾಗಿ ನಿರ್ಧಾರ ಒದಗಿಸುತ್ತದೆ ಮತ್ತು ಉದ್ಯಮದ ಉತ್ಕೃಷ್ಟತೆಯನ್ನು ಸಾಧಿಸುತ್ತದೆ.
ಯೋಜನಾ ನಿರ್ವಹಣೆ, ಹಾರಾಟದ ಯೋಜನೆ, ಮತ್ತು ಅನುಷ್ಠಾನ ಇವೆಲ್ಲವನ್ನೂ ಸಂಯೋಜನೆ ಮಾಡುವ ಮೂಲಕವಾಗಿ ಡ್ರೋನ್ ಸೇವಾ ಪೂರೈಕೆದಾರರಿಗೆ ಕೆಲಸದ ಹರಿವು (ವರ್ಕ್ ಫ್ಲೋ) ಸರಾಗ ಮಾಡಿಕೊಡುತ್ತದೆ ಸ್ಕೈಡೆಕ್. ಆಟೋಮೆಟೆಡ್ ಡ್ರೋನ್ ದತ್ತಾಂಶದ ಸಂಸ್ಕರಣೆಗೆ ಇದು ವೆಚ್ಚದ ದೃಷ್ಟಿಯಿಂದ ಪರಿಣಾಮಕಾರಿ, ಕ್ಲೌಡ್ ಆಧಾರಿತವಾದ ಸಲ್ಯೂಷನ್ ಆಗಿದ್ದು, ಉದ್ಯಮದ ಅಗತ್ಯಗಳಿಗೆ ವ್ಯಾಪಕವಾಗಿ ನೆರವಾಗುತ್ತದೆ. ಇದರ ಜೊತೆಗೆ ಸ್ಕೈಡೆಕ್ ಏಕೀಕೃತವಾದ ರೆಪಾಸಿಟರಿ ಡ್ರೋನ್ ದತ್ತಾಂಶವನ್ನು ಒದಗಿಸುತ್ತದೆ. ವಿಶ್ಲೇಷಣೆಯನ್ನು ಸರಳಗೊಳಿಸುತ್ತದೆ ಮತ್ತು ಬಳಕೆದಾರರೊಂದಿಗೆ ಡೇಟಾ ಹಂಚಿಕೊಳ್ಳುತ್ತದೆ.
ಆಸ್ಟರಿಯಾ ಏರೋಸ್ಪೇಸ್ ಸಹ ಸಂಸ್ಥಾಪಕರಾದ ನೀಲ್ ಮೆಹ್ತಾ ಮಾತನಾಡಿ, ಸುರಕ್ಷಿತ ಮತ್ತು ವ್ಯಾಪಕವಾದ ಡ್ರೋನ್ ಕಾರ್ಯಾಚರಣೆಗಳು ಮತ್ತು ಡೇಟಾ ನಿರ್ವಹಣೆ ಸಲ್ಯೂಷನ್ ಗಳನ್ನು ಬಯಸುವ ಉದ್ಯಮಗಳು ಮತ್ತು ವೃತ್ತಿಪರರಿಗೆ ಸ್ಕೈಡೆಕ್ ಅನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಹೇಳಿದ್ದಾರೆ. ಸ್ಕೈಡೆಕ್ ಕಠಿಣವಾದ ಸವಾಲಿನ ಅಂಶಗಳನ್ನು ಸರಿಪಡಿಸುತ್ತದೆ. ದತ್ತಾಂಶವನ್ನು ದಾಖಲಿಸುವುದರಿಂದ ಹಿಡಿದು ಕಾರ್ಯಸಾಧುವಾಗುವಂಥ ಒಳನೋಟಗಳ ತನಕ ಎಲ್ಲ ಉದ್ಯಮಗಳಿಗೂ ಡ್ರೋನ್ ಆಧಾರಿತವಾದ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಕೆಲಸದ ಹರಿವನ್ನು ಸುವ್ಯವಸ್ಥಿತಗೊಳಿಸುತ್ತದೆ. ನಮ್ಮಲ್ಲಿನ ಹೊಂದಿಕೊಳ್ಳುವ ಬೆಲೆಯು ಎಲ್ಲ ಗಾತ್ರದ ಉದ್ಯಮಗಳಿಗೂ – ವ್ಯವಹಾರಗಳಿಗೂ ತಮ್ಮ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವುದನ್ನು ಸ್ಕೈಡೆಕ್ ಸಾಮರ್ಥ್ಯ ಖಾತ್ರಿ ಮಾಡುತ್ತದೆ ಎಂದು ತಿಳಿಸಿದರು.
ಉಚಿತವಾಗಿ ಸ್ಕೈಡೆಕ್ ಪ್ರಯೋಗಾರ್ಥವನ್ನು ಆರಂಭಿಸುವುದಕ್ಕೆ ಮತ್ತು ಸ್ಕೈಡೆಕ್ ನ ರೂಪಾಂತರ ಸಾಮರ್ಥ್ಯವನ್ನು ಅನುಭವ ಪಡೆಯುವುದಕ್ಕೆ www.asteria.co.in/skydeckಗೆ ಭೇಟಿ ನೀಡಿ ಅಥವಾ ಸ್ಕ್ಯಾನ್ ಮಾಡಬಹುದು.
ಆಸ್ಟರಿಯಾ ಏರೋಸ್ಪೇಸ್ ಲಿಮಿಟೆಡ್ ಬಗ್ಗೆ
ಆಸ್ಟರಿಯಾ ಏರೋಸ್ಪೇಸ್ ಲಿಮಿಟೆಡ್ ಎಂಬುದು ವೈಮಾನಿಕ ದತ್ತಾಂಶದಿಂದ ಕ್ರಿಯಾಶೀಲ ಬುದ್ಧಿಮತ್ತೆಯನ್ನು ಒದಗಿಸುವ ಪೂರ್ಣ-ಪ್ರಮಾಣದ ಡ್ರೋನ್ ತಂತ್ರಜ್ಞಾನ ಕಂಪನಿಯಾಗಿದೆ. ಆಸ್ಟರಿಯಾ ತನ್ನ ಆಂತರಿಕ ಹಾರ್ಡ್‌ವೇರ್ ವಿನ್ಯಾಸ, ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಬಳಸಿಕೊಂಡು ಸರ್ಕಾರ ಹಾಗೂ ಉದ್ಯಮ ಗ್ರಾಹಕರಿಗೆ ಅವರಿಗೆ ಬೇಕಾದಂಥ ರೀತಿಯಲ್ಲಿ ರೂಪಿಸಿದ ಗ್ರಾಹಕ ನಿರ್ದಿಷ್ಟ ಡ್ರೋನ್ ಸಲ್ಯೂಷನ್ ಗಳನ್ನು ಅಭಿವೃದ್ಧಿಪಡಿಸುತ್ತದೆ. ದೀರ್ಘಾವಧಿಯ, ಗುಣಮಟ್ಟ-ಕೇಂದ್ರಿತ ಮತ್ತು ವಿಶ್ವಾಸಾರ್ಹ ಉತ್ಪನ್ನಗಳು ಮತ್ತು ಸೇವೆಗಳನ್ನು ರಕ್ಷಣೆ ಮತ್ತು ಹೋಮ್‌ಲ್ಯಾಂಡ್ ಭದ್ರತೆ, ಕೃಷಿ, ತೈಲ ಮತ್ತು ಅನಿಲ, ಇಂಧನ ಮತ್ತು ಯುಟಿಲಿಟಿ, ದೂರಸಂಪರ್ಕ, ಗಣಿಗಾರಿಕೆ ಮತ್ತು ನಿರ್ಮಾಣ ಕ್ಷೇತ್ರಗಳಿಗೆ ಒದಗಿಸಲು ಆಸ್ಟರಿಯಾವು ವಿಶ್ವಾಸಾರ್ಹ ಪಾಲುದಾರ ಆಗಿದೆ. ಆಸ್ಟರಿಯಾ ಏರೋಸ್ಪೇಸ್ ಲಿಮಿಟೆಡ್ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ. ಇದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಬಹುಪಾಲು ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ:www.asteria.co.in
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್‌ನ (Reliance Industries) ಎಫ್ಎಂಸಿಜಿ ಅಂಗ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಸಂಪೂರ್ಣ ಒಡೆತನದ ಅಂಗಸಂಸ್ಥೆಯಾದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ನಿಂದ ಕ್ಯಾಂಪಾ ಕೋಲಾ (Campa Cola) ಪರವಾಗಿ ಹೊಸದಾಗಿ ಬ್ರ್ಯಾಂಡ್ ಅಭಿಯಾನವನ್ನು ಆರಂಭಿಸಲಾಗಿದೆ. ಕ್ಯಾಂಪಾ ಕೋಲಾ ಎಂಬುದು ಖ್ಯಾತ ಭಾರತೀಯ ಪಾನೀಯ ಬ್ರ್ಯಾಂಡ್ ಆಗಿದೆ.
ಈ ಅಭಿಯಾನವು ವಿಭಿನ್ನ ವಿಧಾನದ ಭರವಸೆಯನ್ನು ನೀಡುತ್ತದೆ. ಇದರ ಜತೆಗೆ ನೈಜ ಭಾರತೀಯರನ್ನು ಪ್ರತಿಬಿಂಬಿಸುತ್ತದೆ ಮತ್ತು ಅವರ ಪಾರಮ್ಯ ಹಾಗೂ ಸಂಕಲ್ಪ ಸ್ಫೂರ್ತಿಯನ್ನು ಸಂಭ್ರಮಿಸುತ್ತದೆ. ನಿರಂತರವಾಗಿ ಹೊಸ ದಿಗಂತವನ್ನು ಬೆನ್ನಟ್ಟುವ ಯುವ ಭಾರತದ ಧೈರ್ಯಶಾಲಿ ಮನೋಭಾವಕ್ಕೆ ಗೌರವ ಸಮರ್ಪಣೆ ಮಾಡುತ್ತದೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕೇಸ್‌ಗೆ ಈಗ ಮಕ್ಕಳ ಆಯೋಗ ಎಂಟ್ರಿ
“ಕಠಿಣ ಕೆಲಸಗಳನ್ನು ಮಾಡುವಂಥ ಭಾರತೀಯರಿಗೆ, ತಮ್ಮ ಉನ್ನತ ಆಕಾಂಕ್ಷೆಗಳನ್ನು ಈಡೇರಿಸುವುದಕ್ಕೆ ನಮ್ಮ ಸಂವಹನವಾಗಿದ್ದು, ಕೈಗೆಟುಕುವ ಬೆಲೆಗೆ ಜಾಗತಿಕ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವುದಕ್ಕೆ ಇದು ನಮ್ಮ ಪಾಲಿಗೆ ಪಯಣದ ಆರಂಭವಾಗಿದೆ,” ಎಂದು ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಸಿಒಒ ಕೇತನ್ ಮೋದಿ ಹೇಳಿದ್ದಾರೆ. ಇದನ್ನೂ ಓದಿ: ಕುಡಿಯುವ ನೀರಿನ ನೆಪದಲ್ಲಿ ನೀರು ಬಿಡುಗಡೆಗೆ ನಿರಾಕರಿಸಬಾರದು – ತಮಿಳುನಾಡು ಕ್ಯಾತೆ
ಆರ್ ಸಿಪಿಎಲ್ ಪೂರೈಕೆ ಸರಪಳಿಯನ್ನು ಬಲಪಡಿಸುತ್ತಿದ್ದು, ವಿತರಣೆಯನ್ನು ವಿಸ್ತರಣೆ ಮಾಡುವ ಮೂಲಕ ಕಾರ್ಯಾಚರಣೆಯನ್ನು ದೇಶದ ವಿವಿಧ ಭಾಗಗಳಲ್ಲಿ ವ್ಯಾಪಿಸುತ್ತಿದೆ. ಈ ಬ್ರ್ಯಾಂಡ್ ಫಿಲ್ಮ್ ಅನ್ನು ಪರಿಕಲ್ಪನೆ ಮಾಡಿಕೊಂಡಿರುವುದು ಆಡ್ ಗುರು ಪ್ರಸೂನ್ ಜೋಶಿ. ಇದನ್ನು ಟೀವಿ, ಡಿಜಿಟಲ್, ಹೊರಾಂಗಣ ಮತ್ತು ಮುದ್ರಣ ಮಾಧ್ಯಮ ಹೀಗೆ ಎಲ್ಲೆಡೆ ಮಾಧ್ಯಮಗಳಲ್ಲಿ ಪ್ರಚಾರ ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ.
“ಈ ಹೊಸ ಸೃಜನಶೀಲತೆಯೊಂದಿಗೆ ಕ್ಯಾಂಪಾ ಬ್ರ್ಯಾಂಡ್ ಹೊಸ ಉದಯೋನ್ಮುಖ ಭಾರತದೊಂದಿಗೆ ಹಿಮ್ಮೇಳವನ್ನು ಹೊರಡಿಸುವಂತೆ ಕಾಣುತ್ತಿದೆ. ಇದರಲ್ಲಿ ಸ್ವಯಂ-ನಂಬಿಕೆಯನ್ನು ಹೊಂದಿದೆ ಮತ್ತು ಹೊಸ ದಿಗಂತಗಳನ್ನು ಅನ್ವೇಷಿಸಲು ಉತ್ಸುಕವಾಗಿದೆ. ಇದು ಸ್ಥಳೀಯದರ ಬಗ್ಗೆ ಹೆಮ್ಮೆ ಮತ್ತು ಪ್ರತಿಭೆ ಹಾಗೂ ಸಂಕಲ್ಪವನ್ನು ಎತ್ತರಕ್ಕೆ ಒಯ್ಯುತ್ತದೆ. ಈ ಹೊಸ ಭಾರತವು ದಾಹ ಹೊಂದಿದ್ದು, ಅದನ್ನು ತಣಿಸಲು ಏನಾದರೂ ವಿಶೇಷವಾದ ಅಗತ್ಯವಿದೆ,” ಎಂದು ಮೆಕ್‌ಕನ್ ವರ್ಲ್ಡ್‌ಗ್ರೂಪ್‌ನ ಬರಹಗಾರ ಮತ್ತು ಮುಖ್ಯ ಸೃಜನಶೀಲ ಅಧಿಕಾರಿ ಪ್ರಸೂನ್ ಜೋಶಿ ಹೇಳಿದ್ದಾರೆ.
ಚಿತ್ರನಿರ್ಮಾತೃ ಅರುಣ್ ಗೋಪಾಲನ್ ಮತ್ತು ಗಾಯಕ, ಸಂಯೋಜಕ ಶಂಕರ್ ಮಹಾದೇವನ್ ಅವರು ಈ ಅಭಿಯಾನದ ಫಿಲ್ಮ್ ಅನ್ನು ತಯಾರಿಸಿದ್ದಾರೆ.
ಗಾಂಧಿನಗರ: ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿಯವರ (Mukesh Ambani) ಪುತ್ರ ಅನಂತ್ ಅಂಬಾನಿಯವರು (Ananth Ambani) ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ತಮಗೆ ಕಾಡಿದ್ದ ಅನಾರೋಗ್ಯದ ಬಗ್ಗೆ ಮಾತಾಡಿದ್ದು, ಈ ವೇಳೆ ಮುಖೇಶ್ ಅಂಬಾನಿ ಭಾವುಕರಾಗಿದ್ದಾರೆ.
ಗುಜರಾತ್‍ನ ಜಾಮ್‍ನಗರದಲ್ಲಿ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ (Pre Wedding Festivities) ಅನಂತ್ ಅಂಬಾನಿ ಮಾತಾಡಿದ್ದಾರೆ. ಈ ವೇಳೆ ನನ್ನ ಕುಟುಂಬ ನನಗೆ ವಿಶೇಷ ಒಲವನ್ನು ನೀಡಿದೆ. ನನ್ನ ಜೀವನವು ಸಂಪೂರ್ಣವಾಗಿ ಗುಲಾಬಿ ಹೂಗಳ ಹಾಸಿಗೆಯಾಗಿರಲಿಲ್ಲ. ನಾನು ಮುಳ್ಳಿನ ನೋವನ್ನೂ ಅನುಭವಿಸಿದ್ದೇನೆ. ನಾನು ಬಾಲ್ಯದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದು, ನನ್ನ ತಂದೆ ಮತ್ತು ತಾಯಿ ಬಹಳ ಕಾಳಜಿಯಿಂದ ನೋಡಿಕೊಂಡಿದ್ದಾರೆ. ಈ ಮೂಲಕ ಅನಾರೋಗ್ಯದ ಭಾವನೆ ಕಾಡದಂತೆ ನನ್ನನ್ನು ನೋಡಿಕೊಂಡಿದ್ದಾರೆ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ತಮನ್ನಾ ಭಾಟಿಯಾ ಸಿನಿಮಾದಲ್ಲಿ ವಸಿಷ್ಠ ಸಿಂಹ
ಮಗನ ಮಾತನ್ನು ಕೇಳುತ್ತಿದ್ದಂತೆ ಮುಖೇಶ್ ಅಂಬಾನಿ ಭಾವುಕರಾಗಿ, ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಸಮಾರಂಭದಲ್ಲಿ ವಿಶ್ವದ ಕೆಲವು ಶ್ರೀಮಂತರು ಸೇರಿದಂತೆ 1,000 ಕ್ಕೂ ಹೆಚ್ಚು ಅತಿಥಿಗಳು ಭಾಗಿಯಾಗಿದ್ದರು. ವಿಶೇಷ ಆಹ್ವಾನಿತರಲ್ಲಿ ಬಿಲ್ ಗೇಟ್ಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಆಮೀರ್ ಖಾನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೇರಿದಂತೆ ಅನೇಕರು ಹಾಜರಿದ್ದರು.