Tag: Released

  • ‘ಓ ಏ ಲಡ್ಕಿ’ ಆಲ್ಬಮ್ ಸಾಂಗ್ ರಿಲೀಸ್ ಮಾಡಿದ ನಟಿ ರಾಗಿಣಿ

    ‘ಓ ಏ ಲಡ್ಕಿ’ ಆಲ್ಬಮ್ ಸಾಂಗ್ ರಿಲೀಸ್ ಮಾಡಿದ ನಟಿ ರಾಗಿಣಿ

    ತ್ತೀಚಿನ ದಿನಗಳಲ್ಲಿ ಆಲ್ಬಂ ಸಾಂಗ್ ಹೆಚ್ಚು ಜನಪ್ರಿಯವಾಗುತ್ತಿದೆ. ಅಧೀರ ಸಂತು  ಅವರು ಬಾಲಿವುಡ್  ಸ್ಟೈಲ್ ನಲ್ಲಿ  ಕನ್ನಡ ಆಲ್ಬಂ ಸಾಂಗ್ ಮಾಡಿದ್ದಾರೆ. ಅದರ ಹೆಸರು ಕೂಡ ವಿಭಿನ್ನವಾಗಿದೆ. ತುಂಬಾ ಸ್ಟೈಲಿಶ್ ಆಗಿ ಮೂಡಿಬಂದಿರುವ ‘ಓ ಏ ಲಡ್ಕಿ’ (OY YEAH LADK) ಎಂಬ ಕ್ಯಾಚಿ ಟೈಟಲ್ ಹೊಂದಿರೋ  ಈ ಹಾಡನ್ನು ನಟಿ ರಾಗಿಣಿ ದ್ವಿವೇದಿ (Ragani) ಅವರು  ಬಿಡುಗಡೆ ಮಾಡಿದರು.  ವಿಶೇಷವಾಗಿ ಈ ಹಾಡಲ್ಲಿ ಉಗ್ರಂ ರವಿ ಖಳನಾಯಕನಾಗಿ ನಟಿಸಿದ್ದಾರೆ. ಎನ್ನಾರೈ ಯುವತಿಯಾಗಿ ಅಮೃತ, ಡಿಲವರಿ ಬಾಯ್ ಆಗಿ  ಸಮೀರ್ ನಗರದ್ ಅಭಿನಯಿಸಿದ್ದಾರೆ. ಈ ಹಾಡಿನ ಜೊತೆಗೆ  ಇದರ ಲಿರಿಕಲ್ ವಿಡಿಯೋ ಹಾಗೂ ರೀಮಿಕ್ಸ್ ವರ್ಷನ್ ಪ್ರದರ್ಶಿಸಲಾಯಿತು. ನಿರ್ದೇಶಕ ಅಧೀರ ಸಂತು ಅವರೇ ಈ ಹಾಡಿನ ಸಾಹಿತ್ಯ ರಚಿಸಿ, ತಾವೇ ನಂತರ ಹಾಡಿದ್ದಾರೆ. ಆಕಾಶ್ ಆಡಿಯೋ ಮೂಲಕ ‘ಓ ಏ ಲಡ್ಕಿ’ ಹಾಡು ಬಿಡುಗಡೆಯಾಗಿದೆ.

    ಈ ಹಾಡಲ್ಲಿ ಸಾಮಾನ್ಯ  ಡೆಲಿವರಿ ಬಾಯ್ ಒಬ್ಬ ತನ್ನ ನೃತ್ಯ ಪ್ರತಿಭೆಯ ಮೂಲಕ  ಎನ್.ಆರ್.ಐ. ಹುಡುಗಿಯನ್ನು ಹೇಗೆ  ಪಟಾಯಿಸಿದ  ಎಂಬುದನ್ನು ಹೇಳಲಾಗಿದೆ.  ಆ ಡೆಲಿವರಿ ಬಾಯ್ ಒಮ್ಮೆ ಖಳನಾಯಕನಿಗೆ ಡೆಲಿವರಿ ಕೊಡಲು ಬಂದು, ವಾಪಸ್ ಹೋಗುವಾಗ ಖಳನಾಯಕನ ಕಾ‌ರಿನಲ್ಲಿ ಕುಳಿತ ಓರ್ವ ಸುಂದರ NRI ಯುವತಿಯನ್ನ ನೋಡುತ್ತಾ ಮೈಮರೆಯುತ್ತಾನೆ. ಅದನ್ನ ಕಂಡ ಖಳನಾಯಕ ಆತನನ್ನ ಗದರಿ ಅವನ ಬಗ್ಗೆ ಕೀಳಾಗಿ ಮಾತಾಡುತ್ತಾನೆ. ಇದನ್ನೇ ಸವಾಲಾಗಿ ಸ್ವೀಕರಿಸಿದ ನಾಯಕ, 5 ನಿಮಿಷದಲ್ಲಿ ಆ  ಯುವತಿ ತನ್ನತ್ತ ಓಡಿ ಬರೋಹಾಗೆ ಮಾಡ್ತಿನಿ ಅಂತ ಸವಾಲ್ ಹಾಕಿ, ತನ್ನ ಆಪದ್ಬಾಂಧವನಿಗೆ (ನಿರ್ದೇಶಕ) ಕರೆ ಮಾಡಿ ಸಹಾಯ ಕೋರುತ್ತಾನೆ. ರಾಕ್‌ಸ್ಟಾರ್ ಆಗಿಬಂದ ಡೆಲಿವರಿ ಬಾಯ್‌, ಕನ್ನಡ ನೆಲ, ಭಾಷೆಯ ತಾಕತ್ತನ್ನ ಹಾಡಿನ ಮೂಲಕ ಹೇಳಿ ಆ ಯುವತಿಯ  ಮನಸನ್ನು ಗೆಲ್ಲುತ್ತಾನೆ. ಎಂಎಸ್. ತ್ಯಾಗರಾಜ್ ಈ ಹಾಡಿಗೆ ಮ್ಯೂಸಿಕ್ ಮಾಡಿದ್ದು, ಎಸ್. ಹಾಲೇಶ್ ಇದನ್ನು ಸೆರೆ ಹಿಡಿದಿದ್ದಾರೆ.

    ಈ ವಿಶೇಷ ಹಾಡಿನ  ಕುರಿತಂತೆ  ಮಾತನಾಡಿದ ನಿರ್ಮಾಪಕ, ನಿರ್ದೇಶಕ  ಅಧೀರ ಸಂತು, ನಾನು ಇಂಡಸ್ಟ್ರಿಗೆ ಹೊಸಬನೇನಲ್ಲ, ಉಪ್ಪಿ ಅವರ ಐವತ್ತನೇ ಚಿತ್ರವನ್ನು ನಾನೇ ಮಾಡಬೇಕಿತ್ತು. ಅವರು ಕಥೆ ಕೇಳಿ ಒಪ್ಪಿ ಡೇಟ್ಸ್ ಕೂಡ ಕೊಟ್ಟಿದ್ದರು. ಕಾರಣಾಂತರಗಳಿಂದ ಆ ಸಿನಿಮಾ ಡ್ರಾಪ್ ಆಯ್ತು. ಸ್ನೇಹಿತರ ಸಹಕಾರದಿಂದ ಈ ಸಾಂಗ್ ನಿರ್ದೇಶನ ಮಾಡಿದ್ದೇನೆ. ನಟಿ ರಾಗಿಣಿ ಅವರನ್ನೇ ಇನ್‌ಸ್ಪೈರ್ ಆಗಿ ತೆಗೆದುಕೊಂಡು ಮಾಡಿದ ಹಾಡಿದು. ಅವರು ಬ್ಯುಸಿ ಇದ್ದದ್ದರಿಂದ ಬೇರೆಯವರ ಕೈಲಿ ಮಾಡಿಸಬೇಕಾಯ್ತು. ಮುಂದೆ ಅವರನ್ನು ಇಟ್ಟುಕೊಂಡು ಇಂಟರ್ ನ್ಯಾಷನಲ್ ಲೆವೆಲ್ ಸಾಂಗ್ ಮಾಡುವ ಯೋಜನೆಯಿದೆ ಎಂದು ಹೇಳಿದರು.

     

    ನಟಿ ರಾಗಿಣಿ ಮಾತನಾಡುತ್ತ, ಸಂತು ನನಗೆ ಬಹಳ ದಿನಗಳಿಂದ ಪರಿಚಯ. ಹಾಡು ತುಂಬಾ ಚೆನ್ನಾಗಿ ಬಂದಿದೆ. ಸಂತು ಅವರ ವಿಜನ್ ತೆರೆಯ ಮೇಲೆ ಕಾಣುತ್ತಿದೆ. ಒಳ್ಳೊಳ್ಳೆ ಲೊಕೇಶನ್ ಗಳಲ್ಲಿ ಹಾಡನ್ನು ಶೂಟ್ ಮಾಡಿದ್ದಾರೆ. ನನಗೂ ಅವರ ಜೊತೆ ಕೆಲಸ ಮಾಡಬೇಕೆಂದು ತುಂಬಾ ಆಸಕ್ತಿಯಿದೆ ಎಂದು ಹೇಳಿದರು. ನಂತರ ಉಗ್ರಂ ರವಿ ಮಾತನಾಡಿ ವಿಲನ್ ಆಗಿದ್ದ ನಾನು ಮೊದಲಬಾರಿಗೆ ಇಂಥ ಹಾಡಲ್ಲಿ ಕಾಣಿಸಿಕೊಂಡಿದ್ದೇನೆ. ಇದರ ಕಾನ್ಸೆಪ್ಟ್ ತುಂಬಾ ಚೆನ್ನಾಗಿದೆ. ಸಂತುಗೆ ಮುಂದೆ ಒಳ್ಳೇ ಫ್ಯೂಚರ್ ಇದೆ ಎಂದು ಹೇಳಿದರು. ಮತ್ತೊಬ್ಬ ಅತಿಥಿಯಾಗಿ ಸುನಿಲ್ ಕಂಬಾರ್ ವೇದಿಕೆಯಲ್ಲಿದ್ದರು. ನಾಯಕ ಸಮೀರ್, ನಾಯಕಿ ಅಮೃತ ಕೂಡ ತಮ್ಮ ಪರಿಚಯ ಮಾಡಿಕೊಂಡರು.

  • ‘ಚೌ ಚೌ ಬಾತ್’: ಡಿಜಿಟಲ್ ಥಿಯೇಟರಿನಲ್ಲಿ ರಿಲೀಸ್

    ‘ಚೌ ಚೌ ಬಾತ್’: ಡಿಜಿಟಲ್ ಥಿಯೇಟರಿನಲ್ಲಿ ರಿಲೀಸ್

    ಕೇಂಜ ಚೇತನ್ ಕುಮಾರ್ (Kenj Chetan)  ನಿರ್ದೇಶನದ `ಚೌ ಚೌ ಬಾತ್’ (Chow Chow Bath) ಈ ವರ್ಷ ಬಿಡುಗಡೆಗೊಂಡಿರುವ ಚೆಂದದ ಚಿತ್ರಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ಒಂದಷ್ಟು ಪ್ರಯೋಗಾತ್ಮಕ ಅಂಶಗಳು, ಪ್ರೇಕ್ಷಕರನ್ನೇ ತನ್ನೊಳಗಿಳಿಸಿಕೊಂಡು ಕರೆದೊಯ್ಯುವ ಗುಣದ ದೃಷ್ಯದಿಂದ ಕಳೆಗಟ್ಟಿಕೊಂಡಿದ್ದ ಚಿತ್ರ `ಚೌ ಚೌ ಬಾತ್’. ಅತ್ಯತ್ತಮ ವಿಮರ್ಶೆ ಪಡೆದಿದ್ದ ಈ ಸಿನಿಮಾವನ್ನು ನೋಡಿದ ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಪ್ರದರ್ಶನಗೊಂಡಿದ್ದ ಚೌ ಚೌ ಬಾತ್ ಇದೀಗ ಸಿನಿ ಬಜಾರ್ ಎಂಬ ಡಿಜಿಟಲ್ ಥಿಯೇಟರಿನಲ್ಲಿ ಬಿಡುಗಡೆಗೊಂಡಿದೆ.

    ಸಿನಿ ಬಜಾರ್ ನಲ್ಲಿ ಬಿಡುಗಡೆಗೊಂಡ ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಪಡೆದುಕೊಂಡಿದೆ. ಇನ್ನು ಐವತ್ತು ದಿನಗಳ ಕಾಲ ಈ ಸಿನಿಮಾ ಸಿನಿ ಬಜಾರಿನಲ್ಲಿ ಪ್ರದರ್ಶನ ಕಾಣಲಿದೆ. ಆರಂಭದಿಂದಲೂ ಚೌ ಚೌ ಬಾತ್ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಕೊಂಡಿತ್ತು. ಈ ಕಾರಣದಿಂದಲೇ ಈ ಸಿನಿಮಾ ಯಶ ಕಂಡಿದ್ದೀಗ ಇತಿಹಾಸ. ನಿರ್ದೇಶಕ ಕೇಂಜ ಚೇತನ್ ಕುಮಾರ್ ಅಂಥಾದ್ದೊಂದು ಸಮ್ಮೋಹಕ ಶೈಲಿಯಲ್ಲಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಪ್ರೇಕ್ಷಕರಿಂದಲೇ ಈ ಚಿತ್ರ ಮೆಚ್ಚುಗೆ ಗಳಿಸಿಕೊಂಡಿತ್ತು. ಇಂಥಾ ಸದಭಿಪ್ರಾಯ ಕೇಳಿ ಸಿನಿಮಾ ಮಂದಿರಗಳಲ್ಲಿ ನೋಡಬೇಕಂದುಕೊಂಡು ಸಾಧ್ಯವಾಗದವರು, ಸಿನಿ ಬಜಾರ್ ಡಾಟ್ ಕಾಮ್ ನಲ್ಲಿ ಚೌ ಚೌ ಬಾತ್ ನ ಅಸಲೀ ಸವಿಯನ್ನು ಆಸ್ವಾದಿಸುವ ಅವಕಾಶವೀಗ ಒದಗಿ ಬಂದಿದೆ.

     

    ಇದು ಹೈಪರ್ ಲಿಂಕ್ ರೊಮ್ಯಾಂಟಿಕ್ ಜಾನರಿನ ಚಿತ್ರ. ಕನ್ನಡದ ಮಟ್ಟಿಗಿದು ಅಪರೂಪದ ಜಾನರ್. ಮೂರು ವಿಭಿನ್ನ ಪ್ರೇಮ ಕಥನಗಳನ್ನು ತೆರೆದಿಡುವ ಚೌ ಚೌ ಬಾತ್ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯುವಂತಿದೆ. ಹೀಗೊಂದು ಅಭಿಪ್ರಾಯ ನೋಡಿದವರಿಂದಲೇ ಮೂಡಿಕೊಂಡಿದೆ. ಸನಾತನಯ್ ಪಿಕ್ಚರ್ಸ್ ಮತ್ತು ಕಾಮನಧೇನು ಫಿಲಂಸ್ ಅರ್ಪಿಸುವ ಈ ಚಿತ್ರ ಹಾರಿಜಾನ್ ಮೂವೀಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿದೆ. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ, ರುದ್ರಮುನಿ ಬೆಳಗೆರೆ ಛಾಯಾಗ್ರಹಣ, ಪ್ರಮೋದ್ ಮರವಂತೆ ಗೀತ ಸಾಹಿತ್ಯವಿದೆ. ಸಾಗರ್ ಗೌಡ, ಸಂಕಲ್ಪ್ ಶರ್ಮಾ, ಸುಶ್ಮಿತಾ ಭಟ್, ಅರುಣಾ ಬಾಲರಾಜ್, ಧನುಶ್ ಬೈಕಂಪಾಡಿ, ಗೀತಾ ಬಂಗೇರ, ಪ್ರಕರ್ಷ ಶಾಸ್ತ್ರಿ ಮುಂತಾದವರ ತಾರಾಗಣವನ್ನು ಈ ಸಿನಿಮಾ ಒಳಗೊಂಡಿದೆ. ಸತೀಶ್ ಎಸ್.ಬಿ, ಸಂಕಲ್ಪ್ ಶರ್ಮಾ, ಪೂರ್ಣಚಂದ್ರ, ದ ಜೋಯ್ಸ್ ಪ್ರಾಜೆಕ್ಟ್, ಅಶೋಕ್ ಡಿ ಶೆಟ್ಟಿ, ಓಂ ಸ್ಟುಡಿಯೋ ಸಹ ನಿರ್ಮಾಣದೊಂದಿಗೆ `ಚೌ ಚೌ ಬಾತ್’ ಚಿತ್ರ ಮೂಡಿ ಬಂದಿದೆ.

  • ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ತಂಡದಿಂದ ಮಹತ್ವದ ವಿಷಯ ಘೋಷಣೆ

    ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ತಂಡದಿಂದ ಮಹತ್ವದ ವಿಷಯ ಘೋಷಣೆ

    ಳಪತಿ ವಿಜಯ್ ನಟನೆಯ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (The greatest of all time) ಸಿನಿಮಾ ಟೀಮ್ ನಿಂದ ಮಹತ್ವದ ವಿಷಯವೊಂದು ಆಚೆ ಬಂದಿದೆ. ಈ ಸಿನಿಮಾವನ್ನು ಸೆಪ್ಟೆಂಬರ್ 5ರಂದು ಬಿಡುಗಡೆ ಮಾಡುವುದಾಗಿ ತಿಳಿದು ಬಂದಿದೆ. ಎಲ್ಲ ಸಿನಿಮಾಗಳನ್ನು ಮುಗಿಸಿ, ತಮಿಳು ನಾಡು ಚುನಾವಣೆ ವಿಜಯ್ ಸಿದ್ಧರಾಗಬೇಕಾಗಿದ್ದರಿಂದ ಸಿನಿಮಾ ಸಂಬಂಧಿ ಬಹುತೇಕ ಕೆಲಸವನ್ನು ಮುಗಿಸುತ್ತಿದ್ದಾರಂತೆ ನಟ.

    ಈ ಸಿನಿಮಾದ ಶೂಟಿಂಗ್ ಗಾಗಿ ಮೊನ್ನೆಯಷ್ಟೇ ವಿಜಯ್ ಕೇರಳಕ್ಕೆ ಬಂದಿದ್ದು, ತಮಿಳಿಗಿಂತಲೂ ಕೇರಳದಲ್ಲಿ ವಿಜಯ್ ಅವರಿಗೆ ಹೆಚ್ಚು ಅಭಿಮಾನಿಗಳು ಇದ್ದಾರೆ. ವಿಜಯ್ ಸಿನಿಮಾ ರಿಲೀಸ್ ಆದಾಗೆಲ್ಲ ಕೇರಳಾದ್ಯಂತ ವಿಜಯ್ ಅಭಿಮಾನಿಗಳು ಸಂಭ್ರಮಿಸುತ್ತಾರೆ. ಆದರೂ, 14 ವರ್ಷಗಳ ಕಾಲ ಅವರು ಕೇರಳಕ್ಕೆ ಕಾಲಿಟ್ಟಿರಲಿಲ್ಲ. ಈ ಸಿನಿಮಾದ ಚಿತ್ರೀಕರಣಕ್ಕಾಗಿ ಅವರು ಬಂದಿದ್ದರು.

    ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್  ಚಿತ್ರಕ್ಕೆ ವೆಂಕಟ್ ಪ್ರಭು (Venkat Prabhu) ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ದಸರಾ ಹಬ್ಬದ (ಅ.24) ಶುಭ ಸಂದರ್ಭದಲ್ಲಿ ಅದ್ದೂರಿಯಾಗಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತ್ತು. ಚಿತ್ರದ ದೊಡ್ಡ ತಾರಾ ಬಳಗ ಈ ಸಮಾರಂಭದಲ್ಲಿ ಭಾಗಿಯಾಗಿತ್ತು.

     

    ದಳಪತಿ ವಿಜಯ್ ಜೊತೆ ಬಹುಭಾಷಾ ನಟ ಕನ್ನಡಿಗ ಪ್ರಭುದೇವ (Prabhudeva), ಸ್ನೇಹಾ, ಲೈಲಾ, ಮೀನಾಕ್ಷಿ ಚೌಧರಿ, ಜಯರಾಮ್, ಯೋಗಿ ಬಾಬು (Yogi Babu) ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಮುಹೂರ್ತ ಕಾರ್ಯಕ್ರಮದಲ್ಲಿಯೂ ಅವರೆಲ್ಲ ಭಾಗಿಯಾಗಿದ್ದರು.

  • ಸೋನುಗೆ ಜಾಮೀನು: ಇಂದು ಜೈಲಿನಿಂದ ಬಿಡುಗಡೆ

    ಸೋನುಗೆ ಜಾಮೀನು: ಇಂದು ಜೈಲಿನಿಂದ ಬಿಡುಗಡೆ

    ರೀಲ್ಸ್ ರಾಣಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡಗೆ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಜಾಮೀನು ಮಂಜೂರಾಗಿತ್ತು. ಪಿಡಿಜೆ ಕೋರ್ಟ್ ನಿಂದ ಇಬ್ಬರು ಶ್ಯೂರಿಟಿ ಹಾಗೂ ಒಂದು ಲಕ್ಷ ರೂಪಾಯಿ ಬಾಂಡ್ ನೀಡಲು ಸೂಚಿಸಿ, ಷರತ್ತು ಬದ್ಧ ಜಾಮೀನು ನೀಡಿತ್ತು. ಹಾಗಾಗಿ ಜೈಲಿನಿಂದ ಇಂದು ಸೋನು ಬಿಡುಗಡೆ  (Released)ಆಗಲಿದ್ದಾರೆ.

    ಅಕ್ರಮವಾಗಿ ಮಗುವನ್ನು ಮನೆಯಲ್ಲಿಟ್ಟುಕೊಂಡಿರುವ ಆರೋಪದ ಮೇಲೆ ಬಂಧನವಾಗಿದ್ದ (Arrest) ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಪೊಲೀಸ್ ಠಾಣೆಯಲ್ಲಿ ಗೋಳಾಡಿದ್ದರು. ಮಗುವನ್ನು ಕರೆದುಕೊಂಡು ಬಂದಿರುವ ವಿಷಯದಲ್ಲಿ ನನ್ನಿಂದ ಯಾವುದೇ ತಪ್ಪು ಆಗಿಲ್ಲವೆಂದು ಹೇಳಿಕೊಂಡಿದ್ದರು.

    ಮಗುವನ್ನು ಅಕ್ರಮವಾಗಿ ಮನೆಯಲ್ಲಿಟ್ಟುಕೊಂಡಿರುವ ವಿಚಾರವಾಗಿ ದೂರು ದಾಖಲಿಸಿಕೊಂಡಿದ್ದ ಬ್ಯಾಡರಹಳ್ಳಿ ಪೊಲೀಸರು ಮಾರ್ಚ್ 22ರಂದು ಬಂಧಿಸಿದ್ದರು. ಪೊಲೀಸರು ಹಾಗೂ CWC ಅಧಿಕಾರಿಗಳಿಂದ ಸೋನು ವಿಚಾರಣೆ ನಡೆದಿತ್ತು.

     

    ನಾನು ಮಗು ಕರೆದುಕೊಂಡು ಬಂದು  15 ದಿನ ಆಗಿದೆ. ಹಾಗೆ ಕರೆದುಕೊಂಡು ಬಂದಿರುವುದು ತಪ್ಪಾಗಿರುತ್ತೆ ಅಂತ ನನಗೆ ಗೊತ್ತಿಲ್ಲ. ಗೊತ್ತಿದ್ದರೆ, ನಾನು ಪ್ರೊಸಿಜರ್ ಮೂಲಕವೇ ದತ್ತು ಮಾಡಿಸಿಕೊಳ್ಳುತ್ತಿದ್ದೆ. ನಾನು ತಪ್ಪು ಮಾಡದಿದ್ರೂ ನನ್ನನ್ನ ಕರೆದುಕೊಂಡು ಬಂದಿದ್ದಾರೆ ಎಂದು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದರು ಸೋನು. ಕೊನೆಗೆ ಅವರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದರು. ನಂತರ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.

  • ಏಪ್ರಿಲ್ 6ಕ್ಕೆ ತೆಲುಗಿನಲ್ಲಿ ರಿಲೀಸ್ ಆಗಲಿದೆ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ

    ಏಪ್ರಿಲ್ 6ಕ್ಕೆ ತೆಲುಗಿನಲ್ಲಿ ರಿಲೀಸ್ ಆಗಲಿದೆ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ

    ಲಯಾಳಂ ಸೂಪರ್ ಹಿಟ್ ಸಿನಿಮಾ ಮಂಜುಮ್ಮೇಲ್ ಬಾಯ್ಸ್ (Manjummel Boys) ಏಪ್ರಿಲ್ 6ರಂದು ತೆಲುಗಿನಲ್ಲಿ (Telugu) ಬಿಡುಗಡೆ ಆಗುತ್ತಿದೆ. ಬಾಕ್ಸ್ ಆಫೀಸಿನಲ್ಲಿ ನೂರಾರು ಕೋಟಿಗಳನ್ನು ಬಾಚಿರುವ ಈ ಚಿತ್ರ ತೆಲುಗಿನಲ್ಲಿ ಹೇಗೆ ಮೋಡಿ ಮಾಡಬಹುದು ಎನ್ನುವ ಕುತೂಹಲ ಮೂಡಿದೆ. ತೆಲುಗಿಗೆ ಡಬ್ಬಿಂಗ್ ರೈಟ್ಸ್ ತಗೆದುಕೊಂಡಾಗಲೇ ಭಾರೀ ಸದ್ದು ಮಾಡಿತ್ತು. ಇದೀಗ ಅಷ್ಟೇ ಉತ್ಸಾಹದಿಂದಲೇ ತೆಲುಗಿನಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

    ಮೊನ್ನೆಯಷ್ಟೇ ಈ ಸಿನಿಮಾವನ್ನು ವೀಕ್ಷಿಸಿದ್ದ ರಜನಿಕಾಂತ್ ಚಿತ್ರತಂಡವನ್ನು ಮನೆಗೆ ಕರೆಸಿ ಸತ್ಕರಿಸಿದ್ದರು. ಪ್ರತಿಯೊಬ್ಬ ಸದಸ್ಯನ ಶ್ರಮಕ್ಕೆ ತಲೈವಾ ಭೇಷ್ ಎಂದಿದ್ದರು. ಇಂತಹ ಸಿನಿಮಾಗಳನ್ನು ಎಲ್ಲರೂ ಮೆಚ್ಚಬೇಕು ಎಂದು ಕರೆ ನೀಡಿದ್ದರು.

    ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಕಮಲ್ ಹಾಸನ್ ನಂತರ ರಜನಿಕಾಂತ್ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಚೆನ್ನೈನಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿ ಚಿತ್ರತಂಡವನ್ನು ರಜನಿಕಾಂತ್ ಸತ್ಕರಿಸಿದ್ದಾರೆ. ನಟರಾದ ಗಣಪತಿ, ಚಂದು ಸಲೀಂಕುಮಾರ್, ದೀಪಕ್ ಪರಂಬೋಲ್, ನಟ ಅರುಣ್ ಜೊತೆ ಡೈರೆಕ್ಟರ್ ಚಿದಂಬರಂ ಅವರು ರಜನಿಕಾಂತ್‌ರನ್ನು ಭೇಟಿಯಾಗಿ ಸಂಭ್ರಮಿಸಿದ್ದಾರೆ.

     

    ರಜನಿಕಾಂತ್ (Rajanikanth) ಅವರಿಗೆ ಯಾವುದೇ ಸಿನಿಮಾ ಅವರಿಗೆ ಇಷ್ಟವಾದಲ್ಲಿ ಆ ಚಿತ್ರತಂಡವನ್ನು ಮನೆಗೆ ಕರೆಸಿ ಉಪಚರಿಸುತ್ತಾರೆ. ಚಿತ್ರತಂಡಕ್ಕೆ ಮೆಚ್ಚುಗೆ ತಿಳಿಸುತ್ತಾರೆ. ಈ ಹಿಂದೆ ಕೂಡ ‘ಕಾಂತಾರ’ (Kantara) ಚಿತ್ರದ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರನ್ನು ಸತ್ಕರಿಸಿದ್ದರು. ‘ಕಾಂತಾರ’ ಚಿತ್ರವನ್ನು ತಲೈವಾ ಹಾಡಿ ಹೊಗಳಿದ್ದರು. ಅದಷ್ಟೇ ಅಲ್ಲ, ಚಿನ್ನದ ಚೈನ್ ಅನ್ನು ಉಡುಗೊರೆಯಾಗಿ ನೀಡಿದ್ದರು.

  • ತೆಲುಗು, ತಮಿಳಿನಲ್ಲಿ ಮಾತ್ರ ‘ಫ್ಯಾಮಿಲಿ ಸ್ಟಾರ್’ ರಿಲೀಸ್

    ತೆಲುಗು, ತಮಿಳಿನಲ್ಲಿ ಮಾತ್ರ ‘ಫ್ಯಾಮಿಲಿ ಸ್ಟಾರ್’ ರಿಲೀಸ್

    ವಿಜಯ್ ದೇವರಕೊಂಡ ನಟನೆಯ ಫ್ಯಾಮಿಲಿ ಸ್ಟಾರ್ ಸಿನಿಮಾ ಈ ವಾರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ನಾಲ್ಕೈದು ಭಾಷೆಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಈ ಹಿಂದೆ ಘೋಷಣೆ ಆಗಿತ್ತು. ಆದರೆ, ನಿರ್ಮಾಪಕ ದಿಲ್ ರಾಜು ಕೊಟ್ಟಿರುವ ಮಾಹಿತಿ ಪ್ರಕಾರ ತೆಲುಗು ಮತ್ತು ತಮಿಳಿನಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ಎರಡು ವಾರಗಳ ನಂತರ ಹಿಂದಿ ಮತ್ತು ಮಲಯಾಳಂನಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಮಾಡಿದ್ದಾರಂತೆ.

    ಈ ಮಧ್ಯೆ ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ವಿಶೇಷ ರೀತಿಯಲ್ಲಿ ಚಿತ್ರಕ್ಕೆ ಮತ್ತು ವಿಜಯ್ ದೇವರಕೊಂಡಾಗ ಶುಭ ಹಾರೈಸಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವಿನ ಸ್ನೇಹದ ಬಗ್ಗೆ ಯಾರೂ ಅಲ್ಲಗಳೆಯುವಂತಿಲ್ಲ. ಈ ಜೋಡಿಯ ನಡುವಿನ ಸಂಬಂಧವನ್ನು ನಾನಾ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇಬ್ಬರೂ ಅನುಮಾನ ಬರುವಂತೆ ನಡೆದುಕೊಳ್ಳುತ್ತಲೇ ಇರುತ್ತಾರೆ. ಈ ಬಾರಿಯೂ ಅದೇ ಆಗಿದೆ.

    ವಿಜಯ್ ದೇವರಕೊಂಡ ನಟನೆಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಶುಭಾಶಯ ಕೋರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಐ ವಿಶ್ ಮೈ ಡಾರ್ಲಿಂಗ್ಸ್ ಎಂದು ಬರೆದುಕೊಂಡಿದ್ದಾರೆ. ಇದು ಮತ್ತಷ್ಟು ಚರ್ಚಗೆ ಕಾರಣವಾಗಿದೆ.

     

    ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುವುದರ ಬದಲು ಅತಿಥಿ ಪಾತ್ರವನ್ನು ಮಾಡಲಿದ್ದಾರೆ ಎನ್ನುವ ಮಾಹಿತಿ ಇದೆ. ವಿಜಯ್ ದೇವರಕೊಂಡ (Vijay Devarakonda) ಹಾಗೂ ಮೃಣಾಲ್ (Mrunal) ಕಾಂಬಿನೇಷನ್ ನ ಫ್ಯಾಮಿಲಿ ಸ್ಟಾರ್  (Family Star) ಸಿನಿಮಾದಲ್ಲಿ ರಶ್ಮಿಕಾ ಅತಿಥಿ ಪಾತ್ರ ಮಾಡಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

  • ರಾಜ್ಯಾದ್ಯಂತ ‘ಯುವ’ ಚಿತ್ರ ರಿಲೀಸ್: ಸ್ವಾಗತಿಸಿದ ಅಪ್ಪು ಫ್ಯಾನ್ಸ್

    ರಾಜ್ಯಾದ್ಯಂತ ‘ಯುವ’ ಚಿತ್ರ ರಿಲೀಸ್: ಸ್ವಾಗತಿಸಿದ ಅಪ್ಪು ಫ್ಯಾನ್ಸ್

    ಇಂದಿನಿಂದ ರಾಜ್ಯಾದ್ಯಂತ ಯುವ (Yuva) ಸಿನಿಮಾ ರಿಲೀಸ್ (Released) ಆಗಿದೆ. ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯುವ ಬಿಡುಗಡೆಯಾಗಿದ್ದು, ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಚಿತ್ರವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ ಯುವ ರಾಜ್ ಕುಮಾರ್ (Yuvaraj Kumar) ಜೊತೆಗೆ ಅಪ್ಪು (Appu) ಕಟೌಟ್ ಕೂಡ ಚಿತ್ರಮಂದಿರದ ಮುಂದೆ ನಿಲ್ಲಿಸಿದ್ದಾರೆ.

    ಅದರಲ್ಲೂ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಅರಮನೆ ರೀತಿಯ ಸೆಟ್, ಡಾ.ರಾಜ್ ಕುಟುಂಬದ ಕಟೌಟ್, ಯುವ ಕಟೌಟ್, ಪುನೀತ್ ರಾಜ್ ಕುಮಾರ್ ಕಟೌಟ್ ಹೀಗೆ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಅಭಿಮಾನ ತೋರಿಸಿದ್ದಾರೆ. ಮುಖ್ಯ ಚಿತ್ರಮಂದಿರ ಮೆಜೆಸ್ಟಿಕ್ ನ ಸಂತೋಷ್ ಥಿಯೇಟರ್ ನಲ್ಲಿ ಕಳೆಗಟ್ಟಿದೆ ಸಂಭ್ರಮ.

     

    ಪಟಾಕಿ ಸಿಡಿಸಿ, ಟಪ್ಪಾಂಗುಚ್ಚಿ ಹೆಜ್ಜೆಹಾಕಿ ದೊಡ್ಮನೆ ನಯಾ‌ ಕುಡಿ ಬರಮಾಡಿಕೊಳ್ಳುತ್ತಿದ್ದಾರೆ ಅಭಿಮಾನಿಗಳು. ಬೆಳ್ಳಂಬೆಳಗ್ಗೆ ಅನೇಕ ಸ್ಕ್ರೀನ್‌ಗಳಲ್ಲಿ ತೆರೆಕಂಡಿರುವ ಯುವ ಸಿನಿಮಾವನ್ನು ನೋಡುತ್ತಾ, ಅಪ್ಪುವನ್ನು ಕಳೆದುಕೊಂಡು ಮಿಸ್ ಮಾಡಿಕೊಳ್ತಿರುವ ಅಭಿಮಾನಿಗಳಿಗೆ ಯುವರಾಜ್ ಕುಮಾರ್ ರನ್ನು ಬರಮಾಡಿಕೊಳ್ಳುವ  ಸಂಭ್ರಮ ಎಲ್ಲೆಲ್ಲೂ ಕಾಣುತ್ತಿದೆ.

  • ಗೆಲುವಿನ ನಿರೀಕ್ಷೆಯೊಂದಿಗೆ ‘ಕೆರೆಬೇಟೆ’ಗಿಳಿದ ಗೌರಿಶಂಕರ್

    ಗೆಲುವಿನ ನಿರೀಕ್ಷೆಯೊಂದಿಗೆ ‘ಕೆರೆಬೇಟೆ’ಗಿಳಿದ ಗೌರಿಶಂಕರ್

    ರಾಜ್ ಗುರು ನಿರ್ದೇಶನದ ಕೆರೆಬೇಟೆ ಚಿತ್ರ ಬಿಡುಗಡೆಗೊಳ್ಳಲು ಕೆಲ ಸಿನಿಗಳು ಮಾತ್ರವೇ ಬಾಕಿ ಉಳಿದುಕೊಂಡಿವೆ. ಒಂದೊಳ್ಳೆ ಕಥೆ, ಒಡಲಲ್ಲಿರಬಹುದಾದ ವಿಶೇಷತೆಗಳ ಮೂಲಕ ಕೆರೆಬೇಟೆಯೀಗ (Kerebete) ಬಹುನಿರೀಕ್ಷಿತ ಚಿತ್ರವಾಗಿ ದಾಖಲಾಗಿದೆ. ಇದರೊಂದಿಗೆ ಒಂದಷ್ಟು ವರ್ಷಗಳ ಅಂತರದ ನಂತರ ಗೌರಿಶಂಕರ್ ಎಸ್ ಆರ್ ಜಿ ಮತ್ತೆ ನಾಯಕನಾಗಿ, ವಿಶಿಷ್ಟ ಗೆಟಪ್ಪಿನಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಗೌರಿಶಂಕರ್ (Gowrishankar) ಪಾಲಿಗಿದು ನಿಜಕ್ಕೂ ನಿರ್ಣಾಯಕ ಚಿತ್ರ. ಒಂದೆಡೆ ನಿರ್ದೇಶನ ವಿಭಾಗದಲ್ಲಿಯೂ ಕಾರ್ಯನಿರ್ವಹಿಸಿ, ಮತ್ತೊಂದೆಡೆಯಲ್ಲಿ ನಿರ್ಮಾಣದ ಜವಾಬ್ದಾರಿಯನ್ನೂ ಹಂಚಿಕೊಂಡು ನಾಯಕನಾಗಿ ನಟಿಸಿರುವ ಗೌರಿಶಂಕರ್ ಪುಷ್ಕಳ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

    ಪಿಯುಸಿ ಮುಗಿಸಿಕೊಂಡಾಕ್ಷಣವೇ ಸಿನಿಮಾ ಕನಸು ಹೊತ್ತು ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದವರು ಗೌರಿಶಂಕರ್. ನಟನಾಗುವ ಕನಸಿಟ್ಟುಕೊಂಡೇ, ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಲಾರಂಭಿಸಿದ ಅವರು ಅರಸು ಮುಂತಾದ ಹಿಟ್ ಸಿನಿಮಾಗಳ ಭಾಗವಾಗಿ ಕೆಲಸ ಮಾಡಿದ್ದಾರೆ. ಹೀಗೆ ನಿರ್ದೇಶನ ವಿಭಾಗದಲ್ಲಿದ್ದುಕೊಂಡು ಆ ಕಷ್ಟ ಕೋಟಲೆಗಳನ್ನು ಅನುಭವಿಸಿದ್ದ ಗೌರಿಶಂಕರ್ ನಂತರ ನಾಲಕ್ಕು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ನಂತರ ಅಣಜಿ ನಾಗರಾಜ್ ನಿರ್ಮಾಣದ ಜೋಕಾಲಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಆ ಚಿತ್ರ ಭಾರೀ ಮೆಚ್ಚುಗೆ ಗಳಿಸಿಕೊಂಡಿತ್ತು. ಆ ಬಳಿಕ ಒಂದಷ್ಟು ಗ್ಯಾಪಿನ ನಂತರ ರಾಜಹಂಸ ಚಿತ್ರದಲ್ಲಿಯೂ ನಾಯಕನಾಗಿ ನಟಿಸಿದ್ದ ಗೌರಿಶಂಕರ್ ಅವರಿಗೆ ಮೆಚ್ಚುಗೆಯಷ್ಟೇ ಸಿಕ್ಕಿತ್ತು. ಸಿನಿಮಾ ಚೆನ್ನಾಗಿದ್ದರೂ ನಿರೀಕ್ಷಿತ ಫಲ ಸಿಕ್ಕಿರಲಿಲ್ಲ.

    ಇಂಥಾ ಹಲವಾರು ನಿರಾಸೆಗಳನ್ನು ಕಂಡೂ ಸಿನಿಮಾ ವ್ಯಾಮೋಹಕ್ಕೆ ಅಂಟಿಕೊಂಡಿರುವ ಗೌರಿಶಂಕರ್, ಅತ್ಯಂತ ಶ್ರದ್ಧೆಯಿಂದ ಪೊರೆದಿರುವ ಚಿತ್ರ ಕೆರೆಬೇಟೆ. ರಾಜ್ ಗುರು ಆರಂಭಿಕವಾಗಿ ಒಂದೆಳೆ ಕಥೆ ಹೇಳಿದಾಗಲೇ ಅದು ಗೌರಿಶಂಕರ್ ಅವರಿಗೆ ಹಿಡಿಸಿತ್ತಂತೆ. ಅದು ಮಲೆನಾಡು ಸೀಮೆಯ ಕಥೆಯಾದ್ದರಿಂದ ಸಂಭಾಷಣೆ ಬರೆಯುವ ಜವಾಬ್ದಾರಿಯನ್ನು ಖುದ್ದು ಅವರೇ ವಹಿಸಿಕೊಂಡಿದ್ದರು. ವರ್ಷಗಟ್ಟಲೆ ಶ್ರಮ ವಹಿಸಿ ಒಟ್ಟಿಗೆ ಕೂತು ಸ್ಕ್ರೀನ್ ಪ್ಲೇ ಸಿದ್ಧಪಡಿಸಿದ್ದರು. ಕಡೆಗೂ ಚಿತ್ರೀಕರಣದ ಅಖಾಡಕ್ಕಿಳಿದು ಅಂದುಕೊಂಡಂತೆಯೇ ಮಾಡಿ ಮುಗಿಸಿದ್ದಾರೆ. ಆ ನಂತರದಲ್ಲಿ ಹಾಡು, ಟ್ರೈಲರ್ ಗಳ ಮೂಲಕ, ಕಥೆಯ ಆತ್ಮಕ್ಕೆ ತಕ್ಕುದಾದ ಪ್ರಚಾರದ ಪಟ್ಟುಗಳ ಮೂಲಕ ಕೆರೆಬೇಟೆಯನ್ನು ಪ್ರೇಕ್ಷಕರ ಆಸಕ್ತಿ ಕೇಂದ್ರಕ್ಕೆ ತಂದುಬಿಟ್ಟಿದ್ದಾರೆ.

    ಯಾವುದರಲ್ಲಿಯೂ ರಾಜಿಯಾಗದಂತೆ ರಿಚ್ ಆಗಿ ಈ ಚಿತ್ರ ಮೂಡಿಬಂದಿರುವ ಖುಷಿ ಗೌರಿಶಂಕರ್ ಅವರಿಗಿದೆ. ಕಿಚ್ಚಾ ಸುದೀಪ್, ಅಶ್ವಿನಿ ಪುನೀತ್ ರಾಜ್ ಕುಮಾರ್, ದಿನಕರ್ ತೂಗುದೀಪ, ಡಾಲಿ ಧನಂಜಯ್, ಜಯಣ್ಣರಂಥವರೆಲ್ಲರ ತುಂಬು ಸಹಕಾರ ಸಿಕ್ಕಿರೋದರಿಂದ ಗೌರಿಶಂಕರ್ ನಿರಾಳವಾಗಿದ್ದಾರೆ. ಸದ್ಯದ ಮಟ್ಟಿಗಂತೂ ಪ್ರೇಕ್ಷಕರೆಲ್ಲರ ಈ ವಾರದ ಪ್ರಧಾನ ಆಕರ್ಷಣೆಯಾಗಿ ಕೆರೆಬೇಟೆ ಚಿತ್ರ ಕಂಗೊಳಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿರುವ ಗ್ರಾಮೀಣ ಭಾಗದ ಕಥೆ ಹೊಂದಿರುವ ಚಿತ್ರ ಕೆರೆಬೇಟೆ. ಇದು ಪ್ರತೀ ವರ್ಗದ ಪ್ರೇಕ್ಷಕರಿಗೂ ಬೇರೆಯದ್ದೇ ಅನುಭೂತಿ ತುಂಬಲಿದೆ. ನಿರೀಕ್ಷೆಯಿಟ್ಟು ಬಂದ ಪ್ರತೀ ಪ್ರೇಕ್ಷಕರನ್ನೂ ಸಂತೃಪ್ತಗೊಳಿಸಲಿದೆ ಎಂಬ ನಂಬಿಕೆ ಗೌರಿಶಂಕರ್ ಅವರಲ್ಲಿದೆ.

     

    ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

  • ಅಕ್ಟೋಬರ್ ನಲ್ಲಿ ಥಿಯೇಟರ್ ಖಾಲಿ ಇಟ್ಕೊಳ್ಳಿ: ದರ್ಶನ್ ಗುಡ್ ನ್ಯೂಸ್

    ಅಕ್ಟೋಬರ್ ನಲ್ಲಿ ಥಿಯೇಟರ್ ಖಾಲಿ ಇಟ್ಕೊಳ್ಳಿ: ದರ್ಶನ್ ಗುಡ್ ನ್ಯೂಸ್

    ನಿರ್ಮಾಪಕ ಉಮಾಪತಿ ಮತ್ತು ದರ್ಶನ್ ವಿವಾದದ ನಡುವೆಯೂ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ದಾಸ ದರ್ಶನ್. ಅಕ್ಟೋಬರ್ (October)ನಲ್ಲಿ ಥಿಯೇಟರ್ ಖಾಲಿ ಇಟ್ಕೊಳ್ಳಿ ಡೆವಿಲ್ ಸಮೇತ ಮತ್ತೆ ಬರುವೆ ಎಂದು ಹೇಳಿದ್ದಾರೆ. ಈ ಮೂಲಕ ಡೆವಿಲ್ ಸಿನಿಮಾ ಅಕ್ಟೋಬರ್ ನಲ್ಲಿ ರಿಲೀಸ್ ಆಗುವ ಕುರಿತು ಮಾತನಾಡಿದ್ದಾರೆ. ಕಾಟೇರ 50ನೇ ದಿನದ ಸಮಾರಂಭದಲ್ಲಿ ಈ ವಿಷಯ ತಿಳೀಸಿದ್ದಾರೆ.

    ರ್ಶನ್ (Darshan) ಅಭಿನಯಿಸುತ್ತಿರೋ ಮುಂದಿನ ಚಿತ್ರ ‘ಡೆವಿಲ್’ ಫಸ್ಟ್ ಲುಕ್ ಈಗಾಗಲೇ ರಿಲೀಸ್ ಆಗಿ ಭರ್ಜರಿ ಸೌಂಡ್ ಮಾಡ್ತಿದೆ. ದಚ್ಚು ಹುಟ್ಟುಹಬ್ಬದ ದಿನ ಫ್ಯಾನ್ಸ್‌ಗೆ ಇದೊಂದು ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ದರ್ಶನ್ ‘ಡೆವಿಲ್’ನಲ್ಲಿ (Devil Film) ವಿಭಿನ್ನ ಲುಕ್‌ನಲ್ಲಿ ಕಾಣಿಸ್ಕೊಂಡಿದ್ದಾರೆ.

    ದರ್ಶನ್ ಹುಟ್ಟುಹಬ್ಬದ ದಿನವೇ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಯ್ತು. ಅಬ್ಬರಿಸುವ ಡೈಲಾಗ್ ಮೂಲಕ ದಚ್ಚು ಎಂಟ್ರಿ ಬಹಳ ಕುತೂಹಲಕಾರಿಯಾಗಿತ್ತು. ‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು’ ಎಂಬ ವಿಭಿನ್ನ ಡೈಲಾಗ್ ಹೇಳುವ ಮೂಲಕ ದರ್ಶನ್ ಉಗ್ರವಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ನಿರೀಕ್ಷೆ ದುಪ್ಪಟ್ಟಾಗಿದೆ.

     

    ಮಿಲನ ಪ್ರಕಾಶ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ, ವೈಷ್ಣೋ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.

  • ಜ್ಯೂನಿಯರ್ ಎನ್.ಟಿ.ಆರ್ ನಟನೆಯ ‘ದೇವರ’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

    ಜ್ಯೂನಿಯರ್ ಎನ್.ಟಿ.ಆರ್ ನಟನೆಯ ‘ದೇವರ’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

    ತೆಲುಗಿನ ಖ್ಯಾತ ನಟ ಜ್ಯೂನಿಯರ್ ಎನ್.ಟಿ.ಆರ್ ನಟನೆಯ ದೇವರ ಸಿನಿಮಾ 2024ರ ಏಪ್ರಿಲ್ 06ಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗಿತ್ತು. ಇದೀಗ ಆ ದಿನಾಂಕ ಬದಲಾಗಿದೆ. ಅಕ್ಟೋಬರ್ 10 ರಂದು ದೇವರ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಈ ಮೂಲಕ ಜ್ಯೂನಿಯರ್ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದೆ.

    ದೇವರ (Devara) ಸಿನಿಮಾ ಟೀಮ್ ನಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದ್ದು, ಈ ಸಿನಿಮಾವನ್ನು ಕನ್ನಡಕ್ಕೂ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ತಮ್ಮ ಪಾತ್ರಕ್ಕೆ ಕನ್ನಡದಲ್ಲಿ ಜ್ಯೂನಿಯರ್ ಅವರೇ ಡಬ್ ಮಾಡುವ ಸಾಧ್ಯತೆ ಇದೆ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ.

    ಆರ್ ಆರ್ ಆರ್ ಚಿತ್ರದ ನಂತರ ಎನ್ಟಿಆರ್ (Jr NTR) ಅವರು ಕೊರಟಾಲ ಶಿವ (Koratala Shiva) ನಿರ್ದೇಶನದ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜ್ಯೂನಿಯ್ ಹುಟ್ಟು ಹಬ್ಬಕ್ಕೆ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಆ ಪೋಸ್ಟರ್ನಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಕಪ್ಪು ಬಣ್ಣದ ಲುಂಗಿ ಮತ್ತು ಶರ್ಟ್ ತೊಟ್ಟು,  ಸಮುದ್ರದ ಬಂಡೆಗಳ ಮೇಲೆ ಕೊಡಲಿ ಹಿಡಿದು ನಿಂತು ತೀಕ್ಷ್ಣವಾಗಿ ನೋಡುತ್ತಿದ್ದಾರೆ. ಕಳೆಗೆ ಹೆಣಗಳ ರಾಶಿ ಇದೆ. ಪಕ್ಕದಲ್ಲಿ ಮುರಿದು ಬಿದ್ದ ದೋಣಿಯೊಂದನ್ನೂ ಕಾಣಬಹುದು. ಈ ಪೋಸ್ಟರ್ ಈಗಾಗಲೇ ಜ್ಯೂನಿಯರ್ ಎನ್.ಟಿ.ಆರ್ ಅವರ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ತೀವ್ರ ಕುತೂಹಲ ಮೂಡಿಸಿದ್ದು, ಅವರ ಮಾಸ್ ಲುಕ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು.

     

    ‘ದೇವರ ಚಿತ್ರದ ಮೂಲಕ ಶ್ರೀದೇವಿ ಮಗಳು ಜಾಹ್ನವಿ ಕಪೂರ್ (Jahnavi Kapoor) ಇದೇ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಜೊತೆಗೆ ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿ ಖಾನ್ ಸಹ ಖಳನಟನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಪ್ರಕಾಶ್ ರೈ, ಶ್ರೀಕಾಂತ್ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಈ ಚಿತ್ರದಲ್ಲಿದೆ. ಯುವಸುಧಾ ಆರ್ಟ್ಸ್ ಮತ್ತು ಎನ್ಟಿಆರ್ ಆರ್ಟ್ಸ್ನಡಿ ಮಿಕ್ಕಿಲಿನೇನಿ ಸುಧಾಕರ್ ಮತ್ತು ಹರಿಕೃಷ್ಣ ನಿರ್ಮಿಸುತ್ತಿರುವ ಈ ಚಿತ್ರವನ್ನು ಖ್ಯಾತ ನಟ ನಂದಮೂರಿ ಕಲ್ಯಾಣರಾಮ್ ನಿರ್ಮಿಸುತ್ತಿದ್ದಾರೆ.